Thursday, May 11, 2023

ಜಿಲ್ಲೆಯಲ್ಲಿ ಸುಸೂತ್ರ ಮತದಾನ : ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳ ಇವಿಎಂ ಮತಯಂತ್ರ ಭದ್ರತಾ ಕೊಠಡಿಯಲ್ಲಿ ಸುರಕ್ಷಿತ


ಈ ದಿವಸ ವಾರ್ತೆ

ವಿಜಯಪುರ: ವಿಧಾನಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ಮೇ.10ರಂದು  ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಸುಸೂತ್ರವಾಗಿ ಮತದಾನ  ನಡೆದಿದ್ದು, ಜಿಲ್ಲೆಯಾದ್ಯಂತ ಒಟ್ಟು ಶೇ 71.34 ರಷ್ಟು ಮತದಾನವಾಗಿದೆ. 

ಇವಿಎಂ ಮತಯಂತ್ರಗಳು ಭದ್ರತಾ ಕೊಠಡಿಯಲ್ಲಿ ಸುರಕ್ಷಿತ : ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳ ಮತಯಂತ್ರಗಳನ್ನು ವಿಜಯಪುರ ನಗರದ ಸೈನಿಕ ಶಾಲೆಯಲ್ಲಿ ಸ್ಥಾಪಿಸಲಾದ ಭದ್ರತಾ ಕೊಠಡಿಯಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ. ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ನೇತೃತ್ವದಲ್ಲಿ ಎಲ್ಲ ಮತಕ್ಷೇತ್ರಗಳಿಂದ ಬಂದ ಇವಿಎಂ ಮತಯಂತ್ರಗಳನ್ನು  ಸುರಕ್ಷಿತವಾಗಿ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದ್ದು, ಭದ್ರತಾ ಕೊಠಡಿಗೆ ಬಿಗಿ ಪೋಲಿಸ್ ಬಂದೋಬಸ್ತ್ ಒದಗಿಸಲಾಗಿದೆ. 

ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಶೇಕಡಾವಾರು ಮತದಾನದ ವಿವರದಂತೆ 26-ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಲ್ಲಿ ಶೇ 70.91 ರಷ್ಟು ಮತದಾನವಾಗಿದೆ. 27-ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದಲ್ಲಿ           ಶೇ.68.65 ರಷ್ಟು ಮತದಾನವಾಗಿದೆ. 28-ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರದಲ್ಲಿ  ಶೇ. 75.18 ರಷ್ಟು ಮತದಾನವಾಗಿದೆ. 29-ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಶೇ 81.79 ರಷ್ಟು ಮತದಾನವಾಗಿದೆ.        

30-ಬಿಜಾಪೂರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಶೇ. 64.59 ರಷ್ಟು ಮತದಾನವಾಗಿದೆ. 31-ನಾಗಠಾಣ (ಎಸ್ಸಿ) ಮೀಸಲು  ವಿಧಾನಸಭಾ ಕ್ಷೇತ್ರದಲ್ಲಿ ಶೇ 66.48  ರಷ್ಟು ಮತದಾನವಾಗಿದೆ. 32-ಇಂಡಿ ವಿಧಾನಸಭಾ ಕ್ಷೇತ್ರದಲ್ಲಿ ಶೇ 73.62 ರಷ್ಟು ಮತದಾನವಾಗಿದೆ. 33-ಸಿಂದಗಿ  ವಿಧಾನಸಭಾ ಕ್ಷೇತ್ರದಲ್ಲಿ ಶೇ 72.46 ರಷ್ಟು ಮತದಾನವಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಾದ್ಯಂತ ಶೇ 71.34ರಷ್ಟು ಮತದಾನವಾಗಿದೆ.  

ಜಿಲ್ಲೆಯಲ್ಲಿ 9,66,535 ಪುರುಷ ಮತದಾರರು, 9,26,096 ಮಹಿಳಾ ಮತದಾರರು ಹಾಗೂ 221 ಇತರೆ ಮತದಾರರು ಸೇರಿದಂತೆ ಒಟ್ಟು 18,92,852 ಮತದಾರರಿದ್ದಾರೆ. ಈ ಪೈಕಿ ಮೇ.10ರಂದು ನಡೆದ ಮತದಾನದಲ್ಲಿ  6,99,701 ಪುರುಷರು, 650643 ಮಹಿಳೆಯರು, 26 ಇತರೆ ಮತದಾರರು ಸೇರಿದಂತೆ ಒಟ್ಟು 13,50,370 ಮತದಾರರು ಮತ ಚಲಾಯಿಸಿದ್ದಾರೆ. 

ವಿಧಾನಸಭಾ ಕ್ಷೇತ್ರವಾರು ವಿವರದಂತೆ 26-ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಲ್ಲಿ 1,53,887 ಮತದಾರರು ಮತ ಚಲಾಯಿಸಿದ್ದಾರೆ. 27-ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದಲ್ಲಿ  150442 ಮತದಾರರು ಮತ ಚಲಾಯಿಸಿದ್ದಾರೆ.  28-ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರದಲ್ಲಿ 157728 ಮತದಾರರು ಮತ ಚಲಾಯಿಸಿದ್ದಾರೆ.                         29-ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ 177601 ಮತದಾರರು ಮತ ಚಲಾಯಿಸಿದ್ದಾರೆ. 30-ಬಿಜಾಪೂರ ನಗರ ವಿಧಾನಸಭಾ ಕ್ಷೇತ್ರದಲ್ಲಿ 181911 ಮತದಾರರು ಮತ ಚಲಾಯಿಸಿದ್ದಾರೆ.31-ನಾಗಠಾಣ  ವಿಧಾನಸಭಾ ಕ್ಷೇತ್ರದಲ್ಲಿ 178915 ಮತದಾರರು ಮತ ಚಲಾಯಿಸಿದ್ದಾರೆ. 32-ಇಂಡಿ ವಿಧಾನಸಭಾ ಕ್ಷೇತ್ರದಲ್ಲಿ 178511 ಮತದಾರರು ಮತ ಚಲಾಯಿಸಿದ್ದಾರೆ. 33-ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ 171375 ಮತದಾರರು ಸೇರಿದಂತೆ ಒಟ್ಟು 13,50,370 ಮತದಾರರು ಮತ ಚಲಾಯಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ತಿಳಿಸಿದ್ದಾರೆ.

Tuesday, May 9, 2023

ಸರದಿ ಸಾಲಿನಲ್ಲಿ ನಿಂತು ಪತ್ನಿಯೊಂದಿಗೆ ಮತದಾನ ಮಾಡಿದ ಸರಳ, ಪ್ರಾಮಾಣಿಕ ಅಧಿಕಾರಿ ರಾಹುಲ್ ಶಿಂಧೆ

 


ಈ ದಿವಸ ವಾರ್ತೆ

ವಿಜಯಪುರ: ಡಾ.ಬಿ.ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿನ ಕ್ರೀಡಾ ಇಲಾಖೆ ಕಚೇರಿಯಲ್ಲಿ ಸ್ಥಾಪಿಸಲಾದ ಮತಗಟ್ಟೆಯಲ್ಲಿ ಸರದಿ ಸಾಲಿನಲ್ಲಿ ನಿಂತು ಸರಳ, ಪ್ರಾಮಾಣಿಕ ಜಿಲ್ಲಾ ಪಂಚಾಯತಿಯ  ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು  ಪತ್ನಿಯೊಂದಿಗೆ ಮತದಾನ ಮಾಡಿದರು.



ಕುಟುಂಬ ಸಮೇತ ಮತ ಚಲಾಯಿಸಿದ ದಕ್ಷ ಜಿಲ್ಲಾಧಿಕಾರಿ ದಾನಮ್ಮನವರ

ಈ ದಿವಸ ವಾರ್ತೆ

ವಿಜಯಪುರ : ವಿಜಯಪುರ ಜಿಲ್ಲೆಯ ದಕ್ಷ  ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಬಿಜಾಪೂರ ನಗರ ವಿಧಾನ ಸಭಾ ಮತಕ್ಷೇತ್ರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿನ ಯುವ ಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ಕಚೇರಿಯಲ್ಲಿ ಸ್ಥಾಪಿಸಲಾದ ಮತಗಟ್ಟೆ  ಸಂಖ್ಯೆ 50ರಲ್ಲಿ ಪತ್ನಿ ಶ್ವೇತಾ ದಾನಮ್ಮನವರು ಕುಟುಂಬ ಸಮೇತ  ಮತದಾನ ಮಾಡಿದರು.

ಕುಟುಂಬ ಸಮೇತ ಮತ ಚಲಾಯಿಸಿದ ಯತ್ನಾಳ

 


ಈ ದಿವಸ ವಾರ್ತೆ

ವಿಜಯಪುರ: ನಗರ ವಿಧಾನಸಭಾ ಮತಕ್ಷೇತ್ರದ ಅಭ್ಯರ್ಥಿ ಹಾಗೂ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು, ನಗರ ಎಸ್.ಎಸ್.ಹೈಸ್ಕೂಲ್ ದಲ್ಲಿನ ಮತ ಕೇಂದ್ರ 61 ರಲ್ಲಿ ಕುಟುಂಬ ಸಮೇತ ತೆರಳಿ ಮತದಾನ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು,   ತಪ್ಪದೆ ತಮ್ಮ ಹತ್ತಿರದ ಮತ ಕೇಂದ್ರಕ್ಕೆ ತೆರಳಿ, ಮತಯಾಚನೆ ಮಾಡುವ ಮೂಲಕ ಉತ್ತಮ ಸರ್ಕಾರ ರಚನೆಗೆ ಸಹಕರಿಸಲು ವಿನಂತಿಸಿಕೊಂಡರು.

ಚುನಾವಣಾ ಆಯೋಗ ನಿಗದಿಪಡಿಸಿದ ಯಾವುದಾದರೊಂದು ದಾಖಲೆ ತೋರಿಸಿ ಮತದಾನ ಮಾಡಿ

ಈ ದಿವಸ ವಾರ್ತೆ

ವಿಜಯಪುರ: ಪ್ರಜಾಪ್ರಭುತ್ವ ಬಲಪಡಿಸಲು ಅತಿಮುಖ್ಯವಾದ ಮತದಾನದ ಹಬ್ಬದಲ್ಲಿ 18 ವರ್ಷ ಪೂರೈಸಿದ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿರುವ ಪ್ರತಿಯೊಬ್ಬ ಅರ್ಹ ಮತದಾರರು ಮೇ.10ರಂದು ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಸಂಬಂಧಿಸಿದ ಮತಗಟ್ಟೆಗೆ ಹೋಗಿ ಮತದಾನ ಮಾಡುವಂತೆ ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ಅವರು ಕರೆ ನೀಡಿದ್ದಾರೆ. 

ಪ್ರತಿ 5 ವರ್ಷಗಳಿಗೊಮ್ಮೆ ಬರುವ ಪ್ರಜಾಪ್ರಭುತ್ವ ಹಬ್ಬದಲ್ಲಿ ಪ್ರತಿಯೊಬ್ಬರು ಉತ್ಸಾಹದಿಂದ ಭಾಗವಹಿಸಬೇಕು. ಅಂದಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಸಾಧ್ಯವಾಗುತ್ತದೆ. ಈ ಸಲದ ಚುನಾವಣೆಯಲ್ಲಿ ಯಾವೊಬ್ಬ ಮತದಾರನು ಮತದಾನದಿಂದ ವಂಚಿತನಾಗದೇ ಪ್ರತಿಯೊಬ್ಬರು ಮೇ.10ರ ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಯುವ ಮತದಾನದಲ್ಲಿ ಭಾಗವಹಿಸಿ, ಮತದಾನ ಮಾಡುವುದರ ಮೂಲಕ ಪ್ರಜಾಪ್ರಭುತ್ವ ಬಲಪಡಿಸಲು ಕೈ ಜೋಡಿಸುವಂತೆ ಅವರು ಕರೆ ನೀಡಿದ್ದಾರೆ. 

ಭಾವಚಿತ್ರ ಇರುವ ಪರ್ಯಾಯ ದಾಖಲೆ*: ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಂಡ ಮತದಾರರು ಮತಗಟ್ಟೆಗೆ ತೆರಳಿ ಚುನಾವಣಾ ಆಯೋಗ ಗುರುತಿಸಿ ಈ ಕೆಳಕಾಣಿಸಿದ ದಾಖಲೆಗಳಲ್ಲಿ ಯಾವುದಾದರೊಂದು ದಾಖಲೆಯನ್ನು ಮತಗಟ್ಟೆ ಅಧಿಕಾರಿಗೆ ತೋರಿಸಿ ಮತದಾನ ಮಾಡಬಹುದುದಾಗಿದೆ. 

ಎಪಿಕ್ ಕಾರ್ಡ್, ಆಧಾರ ಕಾರ್ಡ್, ಎಂಜಿಎನ್‍ಆರ್‍ಇಜಿಎ ಜಾಬ್ ಕಾರ್ಡ್, ಬ್ಯಾಂಕ್-ಅಂಚೆ ಕಚೇರಿಯ ಭಾವಚಿತ್ರವಿರುವ ಪಾಸ್ ಪುಸ್ತಕ, ಕಾರ್ಮಿಕ ಸಚಿವಾಲಯದ ಯೋಜನೆಯಡಿ ನೀಡಿರುವ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್, ಪ್ಯಾನ್ ಕಾರ್ಡ್, ಸರ್ಕಾರಿ, ಸಾರ್ವಜನಿಕ ಕಂಪನಿಗಳ ಗುರುತಿನ ಚೀಟಿ, ಚಾಲನಾ ಪರವಾನಿಗೆ, ಎಂಓಎಲ್ ಮತ್ತು ಇ ಅನ್ವಯ ನೀಡಲಾಗಿರುವ ಸ್ಮಾರ್ಟ್ ಕಾರ್ಡ್, ಪಾಸ್‍ಪೋರ್ಟ್, ಭಾವಚಿತ್ರವಿರುವ ಪಿಂಚಣಿ ದಾಖಲೆ ಪತ್ರ, ಎಂಎಲ್‍ಎ, ಎಂಪಿ. ಅಧಿಕೃತ ಗುರುತಿನ ಚೀಟಿ, ವಿಶೇಷಚೇತನ ಗುರುತಿನ ಚೀಟಿಯಲ್ಲಿ ಯಾವುದಾದರೊಂದು ದಾಖಲೆಯನ್ನು ಮತಗಟ್ಟೆ ಅಧಿಕಾರಿಗಳಿಗೆ ತೋರಿಸಿ ಮತದಾನ ಮಾಡಬಹುದಾಗಿದೆ.

10-05-2023 EE DIVASA KANNADA DAILY NEWS PAPER