Wednesday, February 23, 2022
ಕೆಪಿಸಿ ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿಯಾಗಿ ಗೀತಾಂಜಲಿ ಪಾಟೀಲ್ ನೇಮಕ
ಗೀತಾಂಜಲಿ ಪಾಟೀಲ
ಈ ದಿವಸ ವಾರ್ತೆ
ವಿಜಯಪುರ: ತಿಕೋಟಾ ತಾಲೂಕಿನ ಜಾಲಗೇರಿ ಗ್ರಾಮದ ಗೀತಾಂಜಲಿ ಪಾಟೀಲ ಅವರನ್ನು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ನ ಅಧ್ಯಕ್ಷರಾದ ಡಾ. ಬಿ. ಪುಷ್ಪ ಅಮರನಾಥ್ ಅವರು ಆದೇಶ ಹೊರಡಿಸಿದ್ದಾರೆ.ಈ ಕೂಡಲೇ ಗೀತಾಂಜಲಿ ಪಾಟೀಲ ಅವರು ಮಹಿಳೆಯರನ್ನು ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ದೇಶದ ಆಡಳಿತದ ಮುಖ್ಯವಾಹಿನಿಗೆ ತರಲು ಹಾಗೂ ಪಕ್ಷದ ಸಂಘಟನೆ ಮತ್ತುಬಲವರ್ಧನೆಗಾಗಿ ಶ್ರಮಿಸಲು ಆದೇಶ ಪತ್ರದಲ್ಲಿ ತಿಳಿಸಲಾಗಿದೆ.
ಕಾನಿಪ ಜಿಲ್ಲಾ ಕಾಯ೯ದಶಿ೯ಯಾಗಿ ಅವಿನಾಶ ಬಿದರಿ ಅವಿರೋಧ ಆಯ್ಕೆ
ಈ ದಿವಸ ವಾರ್ತೆ
ವಿಜಯಪುರ:- ವಿಜಯಪುರ ಜಿಲ್ಲಾ ಕಾಯ೯ನಿರತ ಪತ್ರಕತ೯ರ ಸಂಘದ ಕಾಯ೯ದಶಿ೯ಯಾಗಿ ವಿಜಯಪುರ ನಗರದ ಅವಿನಾಶ ಬಿದರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಟಿ.ಕೆ.ಮಲಗೊಂಡ ತಿಳಿಸಿದ್ದಾರೆ.
ಅವಿರೋಧ ಆಯ್ಕೆಯಾದ ಹಿನ್ನೆಲೆ ಹಿರಿಯ ಪತ್ರಕರ್ತರಾದ ಕೆ.ಕೆ ಕುಲಕರ್ಣಿ, ಸಿ.ಸಿ.ಕುಲಕರ್ಣಿ, ಮೋಹನ ಕುಲಕರ್ಣಿ, ಶರಣು ಮಸಳಿ, ವಿನೋದ ಸಾರವಾಡ, ಕಲ್ಲಪ್ಪ ಶಿವಶರಣ ಸೇರಿದಂತೆ ವಿಜಯಪುರ ಜಿಲ್ಲೆಯ ಕಾನಿಪ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.
Tuesday, February 22, 2022
Monday, February 21, 2022
Sunday, February 20, 2022
Saturday, February 19, 2022
Subscribe to:
Posts (Atom)