Saturday, March 27, 2021

ಯುಜಿಸಿ-ನೆಟ್/ಕೆ-ಸೆಟ್-2021 ಪರೀಕ್ಷೆಗೆ ಸಿದ್ಧತೆ

 ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ಕೋಚಿಂಗ್ ಅಕಾಡೆಮಿಯು ಯುಜಿಸಿ-ನೆಟ್/ಕೆ-ಸೆಟ್-2021 ಪರೀಕ್ಷೆಗೆ ಸಿದ್ಧತೆ ಮಾಡುತ್ತಿರುವ ರಾಜ್ಯದ ಎಲ್ಲಾ ಅಭ್ಯರ್ಥಿಗಳಿಗಾಗಿ ಸಾಮಾನ್ಯ ಪತ್ರಿಕೆ-1 ವಿಷಯಕ್ಕೆ ಸಂಬಂಧಿಸಿದಂತೆ ಮಾ.29ರಿಂದ ಏ.9 ರವರೆಗೆ ಉಚಿತ ಆನ್‍ಲೈನ್ ಲೈವ್ ತರಗತಿಗಳನ್ನು ನಡೆಸಲು ಆಯೋಜಿಸಿದೆ. 

ಪ್ರತಿದಿನ ಬೆಳಿಗ್ಗೆ 8ರಿಂದ 10ಗಂಟೆಯವರೆಗೆ ಹಾಗೂ ಸಾಯಂಕಾಲ 6ರಿಂದ 8ಗಂಟೆಯವರೆಗೆ ಪ್ರತಿದಿನ ಒಟ್ಟು ಎರಡು ತರಗತಿಗಳು ನಡೆಯಲಿದ್ದು, ರಾಜ್ಯದ ಎಲ್ಲ ಅಭ್ಯರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು. ತರಗತಿಗಳನ್ನು ಪ್ರತಿದಿನ ಯುಟ್ಯೂಬ್/ ಫೇಸ್‍ಬುಕ್ ಲೈವ್‍ನಿಂದ ನಡೆಸಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಈ ಗೂಗಲ್ ಫಾರಂ ಲಿಂಕ್: https://forms.gle/ix594hL7N4seu3rw5 ಮೂಲಕ ತರಗತಿಗಳಿಗೆ ನೊಂದಾಯಿಸಿಕೊಳ್ಳಬಹುದು ಎಂದು ಸ್ಪರ್ಧಾತ್ಮಕ ಪರೀಕ್ಷಾ ಕೋಚಿಂಗ್ ಅಕಾಡೆಮಿ ಸಂಯೋಜಕ ಡಾ. ಪ್ರಕಾಶ.ಕೆ.ಬಡಿಗೇರ ಈ ಮೂಲಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Friday, March 26, 2021

ಜಿಲ್ಲೆಯ ಬ್ಯಾಂಕ್ ಗಳ ವಾರ್ಷಿಕ ಸಾಲ ಯೋಜನೆ ಬಿಡುಗಡೆ



ವಿಜಯಪುರ: 2021-22ನೇ ಸಾಲಿನ ರೂ .8040.27 ಕೋಟಿ ರೂ ಹಣಕಾಸಿನ ವಿನಿಯೋಗ ಹೊಂದಿರುವ ಎಲ್ಲಾ ಬ್ಯಾಂಕರ್‍ಗಳಿಗೆ ವಾರ್ಷಿಕ ಸಾಲ ಯೋಜನೆ (ಎಸ್‍ಸಿಪಿ) ಅನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ್ ರೆಡ್ಡಿ ಬಿಡುಗಡೆಗೊಳಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ  ಡಿಎಲ್‍ಸಿಸಿ ಸಭೆಯಲ್ಲಿ  ಬಿಡುಗಡೆ ಮಾಡಿದ ಸಾಲ ಯೋಜನೆಯಡಿ 5932.72 ಕೋಟಿ ರೂ(73.79%) ಕೃಷಿ, 865.85 ಕೋಟಿ ರೂ   (10.77%) ಎಂಎಸ್‍ಎಂಇ ಮತ್ತು ಇತರ ಆದ್ಯತೆಯ ವಲಯಕ್ಕೆ ರೂ .418.50 ಕೋಟಿ ರೂ (5.20%). ಸಮಗ್ರ ಕೃಷಿ , ಸಂಬಂಧಿತ ಚಟುವಟಿಕೆಗಳಾದ ಡೈರಿ, ಕೋಳಿ, ಕುರಿ / ಮೇಕೆ, ಕೃಷಿ ಚಟುವಟಿಕೆಯ ಜೊತೆಗೆ ಕೃಷಿ ಚಟುವಟಿಕೆ, ತೋಟಗಾರಿಕೆ ಬೆಳೆಗಳಾದ ಲಿಂಬೆ, ದ್ರಾಕ್ಷಿ, ದಾಳಿಂಬೆ, ಪಿಎಂಎಫ್‍ಎಂಇ, ಎಐಎಫ್ ಅಡಿಯಲ್ಲಿ ಹಣಕಾಸು. ಆತ್ಮನಿರ್ಭರ ಭಾರತ್ ಅಡಿಯಲ್ಲಿ ಮುದ್ರಾ  ಸಾಲಗಳು, ವಸತಿ ಸಾಲಗಳು ಇತ್ಯಾದಿಗಳು ಅನುದಾನ ಮೀಸಲಿಡಲಾಗಿದೆ ಎಂದರು.
ಎಲ್ಲ ಸರ್ಕಾರಿ ಪ್ರಾಯೋಜಿತ ಯೋಜನೆಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಲು ಮತ್ತು  ಜಿಲ್ಲಾ  ಆಡಳಿತಕ್ಕೆ   ಎಸ್ ಸಿ. ಎಸ್. ಟಿ ವಿದ್ಯಾರ್ಥಿಗಳ ಬಾಕಿ ಇರುವ ಆಧಾರ್ ಮ್ಯಾಪಿಂಗನ್ನು ಕಡಿಮೆ ಮಾಡಲು  ಸಹಾಯ ಮಾಡುವಂತೆ ಬ್ಯಾಂಕ್‍ರುಗಳಿಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸೂಚಿಸಿದರು.
ಈ ಸಂದರ್ಭ ಲೀಡ್ ಬ್ಯಾಂಕ್ ಮ್ಯಾನೇಜರ್ ಸೋಮನಗೌಡ ಐನಾಪುರ, ಕೆನರಾ ಬ್ಯಾಂಕ್  ಪ್ರಾದೇಶಿಕ ವ್ಯವಸ್ಥಾಪಕ, ವೀರಪ್ಪ ಪತ್ರಾದ್, ವಿದ್ಯಾ ಗಣೇಶ್, ಡಿಡಿಎಂ, ನಬಾರ್ಡ್ ಮತ್ತು ವಿವಿಧ ಬ್ಯಾಂಕುಗಳ ಹಿರಿಯ ಅಧಿಕಾರಿಗಳು, ಕೈಗಾರಿಕಾ ಸಂಘಗಳ ಪ್ರತಿನಿಧಿಗಳು ಎಸ್ ವಿ ಪಾಟೀಲ್, ಗುಡ್ಡೋದಗಿ, ವಿಭಿನ್ನ ಇಲಾಖೆಗಳ ಅಧಿಕಾರಿಗಳು ಇದ್ದರು.