Monday, June 8, 2020

ರಾಷ್ಟ್ರೀಯ ಅಪರಾಧ ನಿಯಂತ್ರಣ ಮಂಡಳಿಗೇ ನೇಮಕ


ಈ ದಿವಸ ವಾರ್ತೆ
ವಿಜಯಪುರ:
ರಾಷ್ಟ್ರೀಯ ಅಪರಾಧ ನಿಯಂತ್ರಣ ಮಂಡಳಿಯ
ವಿಜಯಪುರ ಜಿಲ್ಲೆಯ  ನಿರ್ದೇಶಕರಾಗಿ ಪ್ರವೀಣಗೌಡ ಪಾಟೀಲ, ತಾಲೂಕು ನಿರ್ದೇಶಕರಾಗಿ  ಪ್ರಶಾಂತ ಬಡಿಗೇರ ಹಾಗೂ ಜಿಲ್ಲಾ ಜಂಟಿ ನಿರ್ದೇಶಕರನ್ನಾಗಿ ಮುಖೇಶ ದಂಡಿನ  ಅವರನ್ನು ನೇಮಕ ಮಾಡಲಾಗಿದೆ ಎಂದು ಬೆಂಗಳೂರಿನ  ರಾಷ್ಟ್ರೀಯ ಅಪರಾಧ ನಿಯಂತ್ರಣ ಮಂಡಳಿಯ ಸ್ಥಾಪಕ, ಮಹಾ ನಿರ್ದೇಶಕ ಮುರಳೀಧರ
 ಕೆ.ಎಸ್. ಅವರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪೊಲೀಸ್ ಇಲಾಖೆ ಅಧಿಕಾರಿ ಸಿಬ್ಬಂದಿಗಳಿಗೆ ಇಂದಿನಿಂದ ಜಿಲ್ಲಾ ಪ್ರಮಾಣಿತ ಕಾರ್ಯಾಚರಣೆ ವಿಧಾನ ಜಾರಿ -ಎಸ್.ಪಿ. ಅನುಪಮ್ ಅಗರವಾಲ್


ಈ ದಿವಸ ವಾರ್ತೆ
ವಿಜಯಪುರ: ಕೋವಿಡ್-19 ಸಾಂಕ್ರಾಮಿಕ ರೋಗದ ಸಂಕಷ್ಠದ ಪರಿಸ್ಥಿತಿಯಲ್ಲಿ ಸಾರ್ವಜನಿಕರೊಂದಿಗೆ ಬೆರೆಯುವುದರ ಜೊತೆಗೆ ರಕ್ಷಣೆಗೆ ಶ್ರಮಿಸುವ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದ್ಧಿಗಳಿಗೆ ಜಿಲ್ಲಾ ಪ್ರಮಾಣಿತ ಕಾರ್ಯಾಚರಣೆ ವಿಧಾನ ಇಂದಿನಿಂದ ಜಾರಿಗೆ ತಂದಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಅವರು ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಎಸ್.ಓ.ಪಿ ಬಿಡುಗಡೆ ಸಮಾರಂಭ ಅಂಗವಾಗಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೋವಿಡ್-19 ಸಾಂಕ್ರಮಿಕ ರೋಗದ ವಿರುದ್ದ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂಧಿಗಳು ಹಗಲು ರಾತ್ರಿ ಹೋರಾಡುತ್ತಿದ್ದು, ಜಿಲ್ಲಾ ಪ್ರಮಾಣಿತ ಕಾರ್ಯಾಚರಣೆ ವಿಧಾನ ಇಂದಿನಿಂದ ಜಾರಿಗೆ ತಂದ ಹಿನ್ನಲೆಯಲ್ಲಿ ಪೊಲೀಸ್ ಸಿಬ್ಬಂದ್ಧಿಗಳ ಕಾರ್ಯಾಚರಣೆ ವಿಭಿನ್ನವಾಗಲಿದೆ ಎಂದರು.
ಈ ಜಿಲ್ಲಾ ಪ್ರಮಾಣಿತ ಕಾರ್ಯಾಚರಣೆ ವಿಧಾನ ಅಂಗವಾಗಿ ಅಧಿಕಾರಿಗಳು ಹಾಗೂ ಸಿಬ್ಬಂಧಿಗಳು ವ್ಯವಸ್ಥಿತ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಸಹಕಾರಿಯಾಗಲಿದೆ. ಪೊಲೀಸ್ ಸಿಬ್ಬಂದಿಗಳು ಸಾರ್ವಜನಿಕರ ದೂರುಗಳಿಗೆ, ಕ್ರಿಮಿನಲ್ ಹಿನ್ನಲೆಯುಳ್ಳ ವ್ಯಕ್ತಿಗಳು ಸೇರಿದಂತೆ ಶಾಂತಿ ಸೂವ್ಯವಸ್ಥೆ ಕಾಪಾಡುವ ಸಂದರ್ಭದಲ್ಲಿ ತಮ್ಮ ಸುರಕ್ಷತೆಯು ಗಮನದಲ್ಲಿಡುವ ಅಗತ್ಯವಿದೆ. ಕಾರಣ ಈ ವಿಧಾನ ಕೋವಿಡ್ ಪರಿಸ್ಥಿತಿಯ ಈ ಸಂದರ್ಭದಲ್ಲಿ ಹೆಚ್ಚು ನೆರವಾಗಲಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಜಿಲ್ಲಾ ಪ್ರಮಾಣಿತ ಕಾರ್ಯಾಚರಣೆ ವಿಧಾನ ಇಂದಿನಿಂದ ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಎಸ್.ಓ.ಪಿ ರಾಜ್ಯಾದ್ಯಂತ ಪ್ರಾರಂಭವಾದ ನಂತರ ಮತ್ತಷ್ಟು ಮುತುವರ್ಜಿ ವಹಿಸಲಾಗುವುದು. ಈವರೆಗೆ ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಮಾಧ್ಯಮ ಸ್ನೆಹಿತರು ತೋರಿರುವ ಸಹಕಾರ ಅಮೋಘವಾಗಿದೆ. ಸಾರ್ವಜನಿಕರ ನೆಮ್ಮದಿಯ ಜೀವನಕ್ಕಾಗಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಮಾತನಾಡಿ ಕೋವಿಡ್-19 ಸಂಕಷ್ಠದ ಪರಿಸ್ಥಿತಿಯಲ್ಲಿ ಎಲ್ಲ ಇಲಾಖೆ ಅಧಿಕಾರಿ ಸಿಬ್ಬಂದಿಗಳು, ಪೊಲೀಸ್ ಸಿಬ್ಬಂದಿಗಳು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಸಾರ್ವಜನಿಕರು ಸಮಾಜದಲ್ಲಿ ನೆಮ್ಮದಿ ಬದುಕು ಸಾಗಿಸಲು ಎಲ್ಲರು ನೀಡುತ್ತಿರುವ ಸಹಕಾರಕ್ಕೆ ಅಭಿನಂದನೆ ಸಲ್ಲಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ್ ರೆಡ್ಡಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅವರು ಆಸ್ಪತ್ರೆಯಿಂದ ಚೇತರಿಕೆಯಾಗಿ ಇಂದು ಕಚೇರಿಗೆ ಹಾಜರಾದ ಹಿನ್ನಲೆಯಲ್ಲಿ ಸರಳ ಸಮಾರಂಭ ಏರ್ಪಡಿಸಿ ಅವರನ್ನು ಆತ್ಮಿಯವಾಗಿ ಸ್ವಾಗತಿಸಲಾಯಿತು. ಡಿ.ವೈ.ಎಸ್.ಪಿಗಳು, ಸಿ.ಪಿ.ಐ ಅಧಿಕಾರಿಗಳು, ಮತ್ತು ಇತರೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಮೈಕ್ರೋಪೈನಾನ್ಸ ಸಂಸ್ಥೆ ವತಿಯಿಂದ ಪೋಲಿಸ್ ಠಾಣೆಯ ಸಿಬ್ಬಂದಿಗಳಿಗೆ ಮಾಸ್ಕ ಮತ್ತು ಸ್ಯಾನಿಟೈಸರ್ ವಿತರಣೆ

  
 ಈ ದಿವಸ ವಾರ್ತೆ
ಬಸವನ ಬಾಗೇವಾಡಿ: ತಾಲೂಕಿನ ಗ್ರಾಮೀಣ ಕೂಟ ಮೈಕ್ರೋಪೈನಾನ್ಸ ಸಂಸ್ಥೆ ವತಿಯಿಂದ ಪೋಲಿಸ್ ಠಾಣೆಯ ಸಿಬ್ಬಂದಿಗಳಿಗೆ  ಮಾಸ್ಕ ಮತ್ತು ಸ್ಯಾನಿಟೈಸರ್ ನ್ನು ವಿತರಿಸಲಾಯಿತು. ಕೋರನಾ ವಿರುದ್ದ ತಮ್ಮ ಜೀವ ಪಣಕ್ಕೀಟು ಹಗಲು ರಾತ್ರಿ ಶ್ರಮಿಸುತ್ತಿರುವ ಪೋಲಿಸರಿಗೆ ಸಂಸ್ಥೆ ಯ ವತಿಯಿಂದ ಈ ಸೇವೆ ಸಲ್ಲಿಸಲಾಗಿದೆ ಎಂದು ವಲಯ ಮುಖ್ಯಸ್ಥರು ಆನಂದ ಲಮಾಣಿ ತಿಳಿಸಿದರು.ಪಿಸೈಐ ಚಂದ್ರಶೇಖರ ಹರಳೆಕರ ಶಾಖಾ ವ್ಯವಸ್ಥಾಪಕ ಅಜ್ಜುರುದ್ದಿನ,ಗಂಗಾಧರ ಕಲ್ಯಾಣಿ, ಖಾಜು ಪಡೆಕನೂರ,ವಿಜಯ,ಹೋನ್ನಪ್ಪ ಇತರರು ಇದ್ದರು.

Sunday, June 7, 2020

ಬಸವನಬಾಗೇವಾಡಿ ತಾಲೂಕಿಗೂ ಬಂತು ಕೊರೋನಾ


ಈ ದಿವಸ ವಾರ್ತೆ

ಬಸವನಬಾಗೇವಾಡಿ: ತಾಲೂಕಿನಲ್ಲಿ ಪಾಸಿಟಿವ್ ಪ್ರಕರಣಗಳು ಕಂಡು ಬಂದ ಪ್ರದೇಶಗಳನ್ನು ಕಂಟೇನ್ಮೆಂಟ್ ಝೋನ್ ಪ್ರದೇಶಗಳನ್ನಾಗಿ ನೋಟಿಪಿಕೇಶನ್ ಮಾಡಲಾಗಿದೆ ಇದರಿಂದಾಗಿ ಅಲ್ಲಿನ ಪ್ರದೇಶಗಳಿಗೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಪಟ್ಟಣದ ಪುರಸಭೆ ವ್ಯಾಪ್ತಿಯ ಜಾಲಿಹಾಳ ತಾಂಡಾ, ಬಳ್ಳಾವೂರ ತಾಂಡಾ, ತಾಲೂಕಿನ ಕರಭಂಟನಾಳ ತಾಂಡಾ, ಇಂಗಳೇಶ್ವರ ತಾಂಡಾ, ಬ್ಯಾಕೋಡ ಪ್ರದೇಶಗಳು  ಕಂಟೇನ್ಮೆಂಟ್ ಝೋನ್ ಪ್ರದೇಶಗಳಾಗಿವೆ

ಇದೂವರೆಗೂ ಇಂಗಳೇಶ್ವರವ ತಾಂಡಾದಲ್ಲಿ,7 ಬ್ಯಾಕೋಡದಲ್ಲಿ1, ಜಾಲಿಹಾಳ ತಾಂಡಾದಲ್ಲಿ 1, ಬೂದಿಹಾಳದಲ್ಲಿ 1, ಸಂಕನಾಳದಲ್ಲಿ 2, ಬಳ್ಳಾವೂರ ತಾಂಡಾದಲ್ಲಿ 4, ಉಪ್ಪಲದಿನ್ನಿಯಲ್ಲಿ 2, ನಾಗವಾಡದಲ್ಲಿ 1, ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ,  ಈಗಾಗಲೇ ಸಂಕನಾಳದಲ್ಲಿ 14 ದಿನ ಅವದಿ ಮುಗಿದ ಕಂಟೇನ್ಮೆಂಟ್ ಝೋನ್ ಪ್ರದೇಶಗಳಲ್ಲಿರುವ ಜನರ ಆರೋಗ್ಯದ ಮೇಲೆ ನಮ್ಮ ಸಿಬ್ಬಂದಿಗಳು ನಿಗಾ ವಹಿಸಿದ್ದಾರೆ,

ಸಣ್ಣ ಪುಟ್ಟ ಆರೋಗ್ಯ ಸಮಸ್ಯ ಕಂಡು ಬಂದರೆ ನಮ್ಮ ಸಿಬ್ಬಂದಿಗಳು ಅಲ್ಲಿಯೇ ಚಿಕಿತ್ಸೆ ನೀಡುತ್ತಾರೆ,14 ದಿನಗಳ ಕಾಲ ಪ್ರದೇಶಗಳಲ್ಲಿ ನಮ್ಮ ಸಿಬ್ಬಂದಿಗಳು ಜನರು ಆರೋಗ್ಯದ ಕುರಿತು ಸಮೀಕ್ಷೇ ಮಾಡುತ್ತಾರೆ,  ಇನ್ನೂ ಅಖಂಡ ತಾಲೂಕಿನಲ್ಲಿ 300-400 ಜನರ ಗಂಟಲು ದ್ರವ ಪರಿಕ್ಷೇ ವರದಿ ಬರಬೇಕಾಗಿದೆ ಎಂದು ತಾಲೂಕಾ ವೈದ್ಯಾಧಿಕಾರಿ ಡಾ, ಎಸ್ ಎಸ್ ಒತಗೇರಿ ತಿಳಿಸಿದರು.

ಕಂಟೇನ್ಮೆಂಟ್ ಝೋನ್ ಪ್ರದೇಶಗಳ ಸಂಪೂರ್ಣ ಲಾಕ್ ಡೌನ್ ಇರಲಿದೆ ಅಲ್ಲಿನ ಜನರು ತಮಗೆ ಅಗತ್ಯವಿರುವ ದಿನಸಿ ತರಕಾರಿ ಸೇರಿದಂತೆ ವಸ್ತುಗಳನ್ನು ಹಣ ನೀಡಿ ಪಂಚಾಯಿತಿ ಸಿಬ್ಬಂದಿಗಳಿಂದ ಪಡೆಯಬಹುದಾಗಿದೆ  ಜನರು ಯಾವುದೇ ಕಾರಣಕ್ಕೂ ಮನೆಯಿಂದ ಹೂರಬಾರದಂತೆ ಸೂಚಿಸಲಾಗಿದೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಅಲ್ಲಿನ ಜನರ ಆರೋಗ್ಯದ ಕುರಿತು ನಿಗಾ ವಹಿಸುವರು ಎಂದು ತಹಶೀಲ್ದಾರ ಎಂ,ಎನ್ ಬಳಗಾರ ತಿಳಿಸಿದರು.


ವಿಜಯಪುರ: ದ್ವಿಶತಕ ದಾಟಿ ದ ಕೊರೋನ

ಜಿಲ್ಲೆಯಲ್ಲಿ ಮತ್ತೆ ಇಂದು ೯ ಜನರಿಗೆ ಕೋವಿಡ್-೧೯ ಸೋಂಕು ದೃಢ : ೨೦೨ಕ್ಕೇರಿದ ಸೋಂಕಿತರ ಸಂಖ್ಯೆ


ಈ ದಿವಸ ವಾರ್ತೆ
ವಿಜಯಪುರ  : ಜಿಲ್ಲೆಯಲ್ಲಿ ಈವರೆಗೆ ಒಟ್ಟು ೨೦೨ ಕೋವಿಡ್-೧೯ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಜಿಲ್ಲಾಸ್ಪತ್ರೆಯಲ್ಲಿ ೧೨೮ ರೋಗಿಗಳು ಕೋವಿಡ್-೧೯ ಪಾಸಿಟಿವ್ ಸಕ್ರಿಯ ರೋಗಿಗಳಾಗಿದ್ದಾರೆ. ಇಂದು ೯ ಜನರಿಗೆ ಕೋವಿಡ್-೧೯ ಸೋಂಕು ತಗುಲಿದ್ದು, ೭ ಜನರಿಗೆ ಮಹಾರಾಷ್ಟçದ ಸಂಪರ್ಕದಿಂದ ಹಾಗೂ ಇಬ್ಬರಿಗೆ ರೋಗಿ ಸಂಖ್ಯೆ – ೫೦೧೩ ರ ಸಂಪರ್ಕದಿಕದ ಸೋಂಕು ತಗುಲಿರುವ ಬಗ್ಗೆ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.

ಅದರಂತೆ ರೋಗಿ ಸಂಖ್ಯೆ ೫೪೨೫ (೨೬ ವರ್ಷದ ಪುರುಷ), ರೋಗಿ ಸಂಖ್ಯೆ ೫೪೨೬ (೧೩ ವರ್ಷದ ಬಾಲಕ), ರೋಗಿ ಸಂಖ್ಯೆ ೫೪೨೭ (೮ ವರ್ಷದ ಬಾಲಕಿ) ರೋಗಿ ಸಂಖ್ಯೆ ೫೪೨೫ (೨೬ ವರ್ಷದ ಪುರುಷ), ರೋಗಿ ಸಂಖ್ಯೆ ೫೪೨೬ (೧೩ ವರ್ಷದ ಬಾಲಕ), ರೋಗಿ ಸಂಖ್ಯೆ ೫೪೨೭ (೮ ವರ್ಷದ ಬಾಲಕಿ) ರೋಗಿ ಸಂಖ್ಯೆ ೫೪೨೯ (೨೨ ವರ್ಷದ ಯುವತಿ) ರೋಗಿ ಸಂಖ್ಯೆ ೫೪೩೦ (೧೮ ವರ್ಷದ ಯುವಕ), ರೋಗಿ ಸಂಖ್ಯೆ ೫೪೩೧ (೩೦ ವರ್ಷದ ಯುವಕ) ರೋಗಿ ಸಂಖ್ಯೆ ೫೪೩೨ (೬ ವರ್ಷದ ಬಾಲಕಿ) ರೋಗಿ ಸಂಖ್ಯೆ ೫೪೩೩ (೩೦ ವರ್ಷದ ಯುವತಿ), ಇವರಿಗೆ ಮಹಾರಾಷ್ಟç ಸಂಪರ್ಕದಿಂದ ಹಾಗೂ ರೋಗಿ ಸಂಖ್ಯೆ ೫೪೨೭ (೮ ವರ್ಷದ ಬಾಲಕಿ) ರೋಗಿ ಸಂಖ್ಯೆ ೫೪೨೮ (೨೮ ವರ್ಷದ ಯುವತಿ), ಇವರಿಗೆ ರೋಗಿ ಸಂಖ್ಯೆ – ೫೦೧೩ ರ ಸಂಪರ್ಕದಿಂದ ಸೋಂಕು ತಗುಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ವಿದೇಶ ಸೇರಿದಂತೆ ಇತರ ಪ್ರದೇಶಗಳಿಂದ ೨೮೫೫೭ ಜನರು ಬಂದ ಬಗ್ಗೆ ವರದಿಯಾಗಿದ್ದು, ಇವರ ಮೇಲೆ ತೀವ್ರ ನಿಗಾ ಇಡಲಾಗಿದೆ. ಒಟ್ಟು ೨೦೨ ಕೋವಿಡ್ -೧೯ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದಾರೆ. ೮೨೮೩ ಜನರು ೨೮ ದಿನಗಳ ಐಸೋಲೇಶನ್ ಅವಧಿ ಪೂರ್ಣಗೊಳಿಸಿದ್ದಾರೆ. ೨೦೧೮೯ ಜನರು (೧ ರಿಂದ ೨೮ ದಿನಗಳ) ರಿಪೋರ್ಟಿಂಗ್ ಅವಧಿಯಲ್ಲಿದ್ದು, ಈವರೆಗೆ ಒಟ್ಟು ೬ ಜನ ಕೋವಿಡ್-೧೯ ರೋಗಿಗಳು ಮೃತಪಟ್ಟಿದ್ದಾರೆ. ೭೯ ಜನರು ಕೋವಿಡ್-೧೯ ರೋಗದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ೧೧೭ ಜನರು ಆಸ್ಪತ್ರೆಯಲ್ಲಿರುವ ಕೋವಿಡ್-೧೯ ಸಕ್ರಿಯ ರೋಗಿಗಳಾಗಿದ್ದಾರೆ. ಈವರೆಗೆ ೨೬೨೩೮ ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿದ್ದು, ೨೫೨೭೮ ಜನರ ನೆಗೆಟಿವ್ ವರದಿ ಬಂದಿದೆ. ಇನ್ನೂ ೭೫೮ ಜನರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

ಮೂವ ರು ಗುಣಮುಖ ರೋಗಿಗಳ ಬಿಡುಗಡೆ : ಜಿಲ್ಲೆಯಲ್ಲಿ ಇಂದು ೦೩ ರೋಗಿಗಳು ಗುಣಮುಖರಾಗಿದ್ದು ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ರೋಗಿ ಸಂಖ್ಯೆ ೨೮೪೧ (೨೮ ವರ್ಷದ ಯುವಕ), ರೋಗಿ ಸಂಖ್ಯೆ ೨೯೨೩ (೭೦ ವರ್ಷದ ಪುರುಷ), ರೋಗಿ ಸಂಖ್ಯೆ ೨೯೨೭ (೨೮ ವರ್ಷದ ಯುವತಿ) ಒಟ್ಟು ೩ ಜನ ಕೋವಿಡ್ ಪಾಸಿಟಿವ್ ರೋಗಿಗಳು ಗುಣಮುಖರಾಗಿ ಜಿಲ್ಲಾಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Saturday, June 6, 2020

ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ 1.4 ಕೋಟಿ ಚೆಕ್ ವಿತರಣೆ


ಈ ದಿವಸ ವಾರ್ತೆ
ವಿಜಯಪುರ:
ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗಾಗಿ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಒಂದು ಕೋಟಿ ರೂ. ಹಾಗೂ ರಾಜ್ಯದ ಇತರೆ ಸಹಕಾರ ಸಂಘಗಳ 40 ಲಕ್ಷ ರೂ.ಗಳು ಸೇರಿದಂತೆ ಸಲ್ಲಿಸಲಾದ ಒಟ್ಟು 1.4 ಕೋಟಿ ರೂ.ಗಳ ದೇಣಿಗೆಯ ಚೆಕ್ಕನ್ನು ಶ ನಿವಾರ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಅವರು ಸ್ವೀಕರಿಸಿರು.
ಈ ಸಂದರ್ಭದಲ್ಲಿ ಸಹಕಾರ ಸಚಿವ ಎಸ್ .ಟಿ .ಸೋಮಶೇಖರ್, ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಶಿವಾನಂದ ಪಾಟೀಲ್ ಉಪಸ್ಥಿತರಿದ್ದರು .

07-06-2020 EE DIVASA KANNADA DAILY NEWS PAPER