Thursday, December 31, 2020
Tuesday, December 29, 2020
Sunday, December 27, 2020
Saturday, December 26, 2020
Friday, December 25, 2020
Thursday, December 24, 2020
Wednesday, December 23, 2020
Tuesday, December 22, 2020
Monday, December 21, 2020
Saturday, December 19, 2020
Friday, December 18, 2020
Thursday, December 17, 2020
Wednesday, December 16, 2020
Monday, December 14, 2020
Sunday, December 13, 2020
Saturday, December 12, 2020
Friday, December 11, 2020
Thursday, December 10, 2020
Wednesday, December 9, 2020
Tuesday, December 8, 2020
Monday, December 7, 2020
Saturday, December 5, 2020
Friday, December 4, 2020
Thursday, December 3, 2020
Wednesday, December 2, 2020
Tuesday, December 1, 2020
Monday, November 30, 2020
Saturday, November 28, 2020
Friday, November 27, 2020
Thursday, November 26, 2020
Tuesday, November 24, 2020
Monday, November 23, 2020
Sunday, November 22, 2020
Saturday, November 21, 2020
Friday, November 20, 2020
Thursday, November 19, 2020
Wednesday, November 18, 2020
Tuesday, November 17, 2020
Sunday, November 15, 2020
Saturday, November 14, 2020
Friday, November 13, 2020
Thursday, November 12, 2020
Wednesday, November 11, 2020
Tuesday, November 10, 2020
Monday, November 9, 2020
Sunday, November 8, 2020
Saturday, November 7, 2020
Friday, November 6, 2020
Thursday, November 5, 2020
Wednesday, November 4, 2020
Tuesday, November 3, 2020
Monday, November 2, 2020
Sunday, November 1, 2020
Saturday, October 31, 2020
Friday, October 30, 2020
Tuesday, October 27, 2020
Monday, October 26, 2020
Saturday, October 24, 2020
Friday, October 23, 2020
Tuesday, October 20, 2020
Saturday, October 17, 2020
Friday, October 16, 2020
Thursday, October 15, 2020
Wednesday, October 14, 2020
Tuesday, October 13, 2020
Monday, October 12, 2020
Saturday, October 10, 2020
Friday, October 9, 2020
Thursday, October 8, 2020
Wednesday, October 7, 2020
Tuesday, October 6, 2020
Monday, October 5, 2020
Friday, October 2, 2020
Tuesday, September 29, 2020
Monday, September 28, 2020
Sunday, September 27, 2020
Saturday, September 26, 2020
Thursday, September 24, 2020
Wednesday, September 23, 2020
Tuesday, September 22, 2020
Sunday, September 20, 2020
Friday, September 18, 2020
Thursday, September 17, 2020
Wednesday, September 16, 2020
Monday, September 14, 2020
Sunday, September 13, 2020
Thursday, September 10, 2020
Tuesday, September 8, 2020
Monday, September 7, 2020
Saturday, September 5, 2020
Friday, September 4, 2020
Thursday, September 3, 2020
Wednesday, September 2, 2020
Tuesday, September 1, 2020
Saturday, August 29, 2020
Friday, August 28, 2020
Thursday, August 27, 2020
Wednesday, August 26, 2020
Tuesday, August 25, 2020
Monday, August 24, 2020
Friday, August 21, 2020
Thursday, August 20, 2020
Wednesday, August 19, 2020
Tuesday, August 18, 2020
Monday, August 17, 2020
Sunday, August 16, 2020
Saturday, August 15, 2020
Friday, August 14, 2020
Thursday, August 13, 2020
Tuesday, August 11, 2020
Monday, August 10, 2020
Sunday, August 9, 2020
Saturday, August 8, 2020
Thursday, August 6, 2020
Wednesday, August 5, 2020
Tuesday, August 4, 2020
Monday, August 3, 2020
Sunday, August 2, 2020
ರಕ್ಷಾಬಂಧನದ ಬೆಸುಗೆ
ಅಣ್ಣನ ಶ್ರೀರಕ್ಷೆ
ತಂಗಿಯ ಮೇಲಿರಲೆಂದು
ತಂಗಿಯ ಬಂಧನವ ಎಂದಿಗೂ
ಅಣ್ಣ ತೊರೆಯ ಬಾರದೆಂದು
ರಕ್ಷಾ ಬಂಧನಕೆ
ನಾಂದಿಯಾಯಿತು ನೋಡಿ ಇಂದು
ಅತ್ಯಂತ ಅಗಾಧ ಪ್ರೀತಿಯ ಬಂಧನವಿದು, ಈ ಅಣ್ಣ ತಂಗಿಯ ಸಂಬಂಧವು. ಒಡಹುಟ್ಟಿದವರಾಗಿ ಹೆತ್ತವರ ಖುಷಿಯ ಕಡಲಿವರು.
ಈ ಭವ್ಯ ಬಂಧನವು ಇಡಿ ದೇಶದಾದ್ಯಂತ ಆಚರಿಸಲ್ಪಡುವ ಮಹತ್ವದ ಹಬ್ಬವೆಂದೆ ಪರಿಗಣಿಸಲಾಗಿದೆ.
ಈ ಆಚರಣೆಯು ಹಿಂದು ಧರ್ಮಗಳಲ್ಲಿ ಒಂದಾಗಿದ್ದರು ಸಹ, ಎಲ್ಲ ಧರ್ಮಿಯರು ಅತೀವ ಸಂಭ್ರಮದಿಂದ ಆಚರಿಸುತ್ತಾರೆ.
ಹಾಗಾದರೆ ಈ ರಕ್ಷಾಬಂದನ ಎಂದರೆ ಏನು? ಎಂಬುವುದು ತಿಳಿಯಲೇಬೇಕಾದದ್ದು
*ರಕ್ಷಾ-ರಕ್ಷಣೆ* *ಬಂಧನ-ಬಂಧ* ಅಂದರೆ ರಕ್ಷಣೆಯ ಬಂಧನದ ಬೆಸುಗೆ ಎಂತಲೆ ಹೇಳಬಹುದು. ಅಣ್ಣನಾದವನು ತಂಗಿಯ ರಕ್ಷಾ ಕವಚವಿದ್ದಂತೆ. ತಂಗಿಯ ಕಷ್ಟಕೆ ಓ ಗೊಡುವ ಮೊದಲ ದೇವರೆ ಈ ಅಣ್ಣನು.
*ತಂಗಿಯ ಬೆನ್ನ ಹಿಂದೆ ಸದಾ ಅಣ್ಣನ ದೈರ್ಯವಿದ್ದು ಅವಳ ಮೇಲೆ ಅಪಾರ ಪ್ರೀತಿ ಇದ್ದೊಡೆ ಅಲ್ಲಿ ಯಾವ ಬಯದ ಅಂಕುಶವು ಸುಳಿಯದು ತಂಗಿಯ ಬಾಳಿನೊಲು* ತಂಗಿಯ ಜೀವನವು ಭವ್ಯತೆಯ ಹಾದಿಯಲಿ ಮುನ್ನುಗ್ಗುವದೆಂಬ ಆತ್ಮವಿಶ್ವಾಸ ಸದೃಡಗೊಳ್ಳುವುದೆಂದರೆ ನಿಜಕ್ಕೂ ತಪ್ಪಾಗಲಾರದು. ಅಣ್ಣನ ಪ್ರೀತಿ ತಂಗಿಯ ಮೇಲೆ ಸದಾ ಹಚ್ಚಹಸಿರಂತಿದ್ದರೆ ಅವಳ ಬಾಳು ಎಂದೆಂದಿಗೂ ಸುಂದರವು.
ಒಂದೇ ಒಡಲಿನ ಹೂ ಬಳ್ಳಿಗಳು
ಈ ಅಣ್ಣ-ತಂಗಿಯು
ಒಂದೇ ರಕ್ತದ ಮಾದರಿಯ
ಮುದ್ದು ಕೂಸುಮರಿಗಳಿವರು
ಅಣ್ಣನ ದೀರ್ಘಾಯುಶ್ಯದಿ ಬಾಳೆಂದು ಹಾರೈಸಿ ಕಟ್ಟುವಳು ತಂಗಿ
ಅಣ್ಣನ ಕೈಗೆ ರಾಖಿಯು
ಅತೀವ ಸಂಭ್ರಮದಿ ತೆಲಾಡುತ
ಅಣ್ಣ ತಂಗಿಗೆ ನೀಡುವನು
ಸವಿನೆನಪಿನ ಉಡುಗೊರೆಯು
ಸಹೋದರ ಸಹೋದರಿಯರ ಪ್ರೀತಿ ಹಂಚಿಕೊಳ್ಳುವ ಸಡಗರದ ಸುದಿನವಾಗಿದೆ ಈ ರಕ್ಷಾ ಬಂಧನ ದಿನವೂ. ಈ ಬಂಧನದ ಆಚರಣೆಯು ಅನೇಕ ಪೌರಾಣಿಕ ಕಥೆಗಳಿಂದ ತಿಳಿಯಬಹುದಾಗಿದೆ.
ಒಂದು ಸಲ ಬಲಿ ರಾಕ್ಷಸನು ತನ್ನೊಂದಿಗೇ ಇರಬೇಕು ಎಂದು ವಿಷ್ಣು ವಿನೊಂದಿಗೆ ಮಾತು ಪಡೆಯುತ್ತಾನೆ ವಿಷ್ಣು ದೀರ್ಘ ಕಾಲ ವೈಕುಂಠಕ್ಕೆ ಬರದೇ ಇದ್ದಾಗ ಲಕ್ಷ್ಮೀದೇವಿ ಚಿಂತಿತಳಾಗುತ್ತಾಳೆ ಆಗ ಲಕ್ಷ್ಮಿ ದೇವಿಗೆ ಈ ವಿಚಾರ ತಿಳಿದಾಗ ಲಕ್ಷ್ಮಿಯು ಬಲಿರಾಕ್ಷಸನ ಕೈಗೆ ರಾಖಿಯನ್ನು ಕಟ್ಟಿ ಸಹೋದರನ್ನಾಗಿ ಮಾಡಿಕೊಂಡು, ತನಗೆ ಉಡುಗೊರೆಯಾಗಿ ವಿಷ್ಣುವನ್ನು ಕೊಡಬೇಕು ಎಂದು ಕೇಳಿಕೊಳ್ಳುತ್ತಾಳೆ. ಆಗ ಬಲಿ ರಾಕ್ಷಸನು ಅವಳ ಮಾತಿನಂತೆ ವಿಷ್ಣುವನ್ನು ವೈಕುಂಠಕ್ಕೆ ಕಳಿಸುತ್ತಾನೆ. ಇದೆ ಅಣ್ಣ ತಂಗಿಯ ಸಂಬಂಧವು.
ಹಾಗೇ ಇನ್ನೊಂದು ಪೌರಾಣಿಕ ಕಥೆ ಉಂಟು ವೃತ್ರಅರಸು ನಿಂದ ಸೋಲಿಸಲ್ಪಟ್ಟಂತ ಇಂದ್ರನಿಗೆ ತನ್ನ ಶತ್ರುಗಳಿಂದ ರಕ್ಷಣೆ ಪಡೆಯಬೇಕಾದರೆ ತನ್ನ ಕೈಗೆ ರಾಖಿ ಕಟ್ಟಿಕೊಳ್ಳಬೇಕು ಎಂದು ಗುರು ಬ್ರಹಸ್ಮತಿ ಹೇಳುತ್ತಾರೆ. ಆಗ ಇಂದ್ರನ ಒಡನಾಡಿ ಸಚ್ಚಿದಾ ದೇವಿಯು ಇಂದ್ರನಿಗೆ ತಿಲಕವನಿಟ್ಟು ರಾಖಿ ಕಟ್ಟುವುದು ಎಂದು ಭವಿಷ್ಯ ಪುರಾಣದಲ್ಲಿ ತಿಳಿಯಲಾಗಿದೆ.
ಹೀಗೆ ಅನೇಕ ಪೌರಾಣಿಕ ಕಥೆಗಳು ಉಂಟು ಈ ರಕ್ಷಾ ಬಂಧನದ ಆಚರಣೆಗೆ.
ಒಟ್ಟಾರೆಯಾಗಿ ಈ ರಕ್ಷಾ ಬಂಧನವು ಅಣ್ಣ ತಂಗಿಯರ ಸ್ನೇಹ ಬಂಧನದ ಸಂಕೇತವಾಗಿದೆ.ತಂಗಿ ಅಣ್ಣನ ಹಣೆಗೆ ತಿಲಕವನ್ನಿಟ್ಟು ಅವನ ಕೈಗೆ ಈ ರಕ್ಷಾ ಬಂಧನದ ರಾಖಿಯನ್ನು ಕಟ್ಟಿ ಅಣ್ಣನ ಸಕಲ ಜಯಾ ಜಯಗಳು ದೊರೆಯಲಿ, ಸುದೀರ್ಘದಿ ಬಾಳಲೆಂದು ಹಾರೈಸುತ ಕಳಸವನ್ನು ಬೆಳಗಿ ತಂಗಿ ತನ್ನ ಆಸೆಯನ್ನು ಪೂರೈಸಿಕೊಳ್ಳುವ ಸುದಿನವೆಂದೆ ಹೇಳಬಹುದು.
ಇದುವೆ ರಕ್ಷಾ ಬಂಧನದ ವಿಶೇಷತೆ.
ಸಹೋದರರಿಗೆ ರಾಖಿ ಕಟ್ಟಿ ರಕ್ಷಾ ಬಂಧನವ ಆಚರಿಸುವ ಬನ್ನಿ..
ಮಮತಾ ಗುಮಶೆಟ್ಟಿ
ವಿಜಯಪುರ
Saturday, August 1, 2020
ಆರ್.ಟಿ.ಪಿ.ಸಿ.ಆರ್ ಲ್ಯಾಬ್ನಲ್ಲಿ ಗಂಟಲುದ್ರವ ಮಾದರಿ ಪರೀಕ್ಷೆಯನ್ನು ಮೂರು ಶಿಫ್ಟ್ ಗಳಲ್ಲಿ ಕೈಗೊಳ್ಳಿ : ಜಿಲ್ಲಾಧಿಕಾರಿ ಪಿ. ಸುನೀಲಕುಮಾರ
ಈ ದಿವಸ ವಾರ್ತೆ
ವಿಜಯಪುರ : ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಕಾಗಿ ಪರಿಣಾಮಕಾರಿ ಕ್ರಮವಾಗಿ ಹೊಸದಾಗಿ ಪ್ರಾರಂಭಿಸಲಾಗಿರುವ ಆರ್.ಟಿ.ಪಿ.ಸಿ.ಆರ್ (ವೈರಾಣು ಸಂಶೋಧನಾ ಮತ್ತು ರೋಗ ನಿರ್ಣಯ ಪ್ರಯೋಗಾಲಯ) ಲ್ಯಾಬ್ನಲ್ಲಿ ಗಂಟಲುದ್ರವ ಮಾದರಿ ಪರೀಕ್ಷೆಯನ್ನು ಮೂರು ಶಿಫ್ಟ್ಗಳಲ್ಲಿ ಮಾಡಬೇಕು. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗಂಟಲುದ್ರವ ಮಾದರಿಯನ್ನು ಪರೀಕ್ಷಿಸಲು ಸಾಧ್ಯವಾಗುತಯ್ತದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಪಂಚಾಯತ ಕಾರ್ಯಾಲಯ ಸಭಾಂಗಣದಲ್ಲಿಂದು ನಡೆದ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳ ಕುರಿತ ಸಭೆಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಪ್ರಾರಂಭವಾಗಿರುವ ಆರ್.ಟಿ.ಪಿ.ಸಿ.ಆರ್ ಲ್ಯಾಬ್ನಲ್ಲಿ ಎರಡು ಶಿಪ್ಟಗಳಲ್ಲಿ ಗಂಟಲುದ್ರವ ಮಾದರಿಯನ್ನು ಪರೀಕ್ಷಿಸಲಾಗುತ್ತಿದ್ದು, ಮುಂದಿನ ಶುಕ್ರವಾರದಿಂದ ಮೂರು ಶಿಪ್ಟಗಳಲ್ಲಿ ಗಂಟಲುದ್ರವ ಮಾದರಿ ಪರೀಕ್ಷೆಗಳನ್ನು ಕೈಗೊಳ್ಳಬೇಕು. ಸಿಬ್ಬಂದಿಗಳ ಕೊರತೆ ಇದ್ದಲ್ಲಿ ಅವರನ್ನು ನೇಮಿಸಿಕೊಂಡು ತರಬೇತಿಯನ್ನು ನೀಡಬೇಕು. ಒಂದು ಶಿಪ್ಟನಲ್ಲಿ ಸೂಮಾರು 91 ಗಂಟಲು ದ್ರವ ಮಾದರಿಗಳನ್ನು ಪರೀಕ್ಷೆ ಮಾಡಿಕೊಳ್ಳಬಹುದಾಗಿದ್ದು. ಜಿಲ್ಲೆಯಲ್ಲಿ 2 ಶಿಪ್ಟಗಳಲ್ಲಿ ಕಾರ್ಯಾರಂಭವಾಗಿದ್ದು. ಮುಂದಿನ ಶುಕ್ರವಾರದಿಂದ ಮೂರು ಶಿಪ್ಟಗಳಲ್ಲಿ ಪರೀಕ್ಷೆಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.
ಆರ್.ಟಿ.ಪಿ.ಸಿ.ಆರ್ ಲ್ಯಾಬ್ನಲ್ಲಿ ಸಿಬ್ಬಂದಿಗಳನ್ನು ಹೆಚ್ಚಿಸಿಕೊಂಡು ಅವರಿಗೆ ಸೂಕ್ತ ತರಬೇತಿಯನ್ನು ನೀಡಬೇಕು. ನೇಮಕಗೊಂಡವರಿಗೆ ತರಬೇತಿ ನೀಡಿದ ನಂತರ ಇಗಾಗಲೇ ಕಾರ್ಯ ನಿರ್ವಹಿಸುತ್ತಿರುವ ತಂಡಗಳ ಜೊತೆಯಲ್ಲಿ ಸೆರ್ಪಡೆಗೊಳಿಸಿ ಮೂರು ತಂಡಗಳನ್ನು ರಚಿಸಿಕೊಂದು ಕಾರ್ಯಾರಂಭ ಮಾಡಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಒಟ್ಟು 61 ಸ್ವ್ಯಾಬ್ ಕಲೆಕ್ಷನ್ ಸೆಂಟರ್ಗಳಿದ್ದು, ಎಲ್ಲ ಸೆಂಟರ್ಗಳಲ್ಲಿ ಗಂಟಲು ದ್ರವ ಮಾದರಿಯನ್ನು ಪಡೆದುಕೊಳ್ಳಲಾಗುತ್ತಿದ್ದು. ಗಂಟಲು ದ್ರವ ಮಾದರಿಯನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ಅವರ ಮೋಬೈಲ್ ಸಂಖ್ಯೆಯನ್ನು ಪಡೆದುಕೊಂಡು ಒ.ಟಿ.ಪಿ ಯನ್ನು ಈಗಾಗಲೆ ಪಡೆದುಕೊಳ್ಳಲಾಗುತ್ತದೆ ಇದರ ಜೊತೆಗೆ ಅವರ ಆಧಾರಕಾರ್ಡ್ನಲ್ಲಿರುವ ವಿಳಾಸವನ್ನು ಪಡೆಯಬೇಕು ಎಂದು ಸೂಚಿಸಿದರು.
ಗಂಟಲು ದ್ರವ ಮಾದರಿಯನ್ನು ಪಡೆದಕೊಂಡ ನಂತರ ವ್ಯಕ್ತಿಗೆ ನೆಗೆಟಿವ್ ಬಂದಲ್ಲಿ ನಂತರದ ಕೆಲವು ದಿನಗಳ ಕಾಲ ನಿಗಾ ಇಡಬೇಕು. ಕ್ವಾರಂಟೈನ್ ವಾಚ್ ಆಪ್ ಮೂಲಕ ಪ್ರತಿ ದಿನದ ಮಾಹಿತಿಯನ್ನು ತಿಳಿಸಬೇಕು. ಜೊತೆಗೆ ಆರೋಗ್ಯದ ಬಗ್ಗೆ ಸ್ಥಳಿಯ ಆರೋಗ್ಯ ಅಧಿಕಾರಿಗಳು ಹಾಗೂ ಟಿ.ಎಚ್.ಓ ಗಳು ಮುನ್ನೆಚ್ಚರಿಕೆಯನ್ನು ವಹಿಸಬೇಕು. ಹೋಮ್ ಕ್ವಾರಂಟೈನ್ ಸಂದರ್ಭದಲ್ಲಿ ಪ್ರಾಥಮಿಕ ಸಂಪರ್ಕ ಹೊಂದಿರುವ ವ್ಯಕ್ತಿಯಲ್ಲಿ ಕೋವಿಡ್ಗೆ ಸಂಬಂಧಿಸಿದ ಲಕ್ಷಣಗಳು ಕಂಡು ಬಂದಲ್ಲಿ ಅವರ ಗಂಟಲು ದ್ರವ ಮಾದರಿಯನ್ನು ಪಡೆದು ಪರೀಕ್ಷೆಗೆ ಕಳುಹಿಸಬೇಕು ಎಂದರು.
ಕೋವಿಡ್ ರೋಗಿಗಳ ಪ್ರಾಥಮಿಕ ಸಂಪರ್ಕ ಹಾಗೂ ದ್ವಿತಿಯ ಸಂಪರ್ಕ ಹೊಂದಿದವರ ಮೇಲೆ ಹೆಚ್ಚಿನ ನಿಗಾ ಇಡಬೇಕು. ಕ್ವಾರಂಟೈನ್ ವಾಚ್ ಆಪ್, ಆರೋಗ್ಯ ಸೇತು ಆಪ್ ಗಳನ್ನು ಸರಿಯಾದ ರೀತಿಯಲ್ಲಿ ಬಳಕೆಯಾಗುವಂತೆ ನೋಡಿಕೊಳ್ಳಬೇಕು. ಪ್ರಾಥಮಿಕ ಸಂಪರ್ಕ ಹೊಂದಿರುವ ವ್ಯಕ್ತಿಗಳ ಗಂಟಲು ದ್ರವ ಮಾದರಿ ಪರೀಕ್ಷೆ ವ್ಯವಸ್ಥಿತ ರೀತಿಯಲಿ ಕೈಗೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಒಟ್ಟು 15 ಆಂಬುಲೆನ್ಸ್ಗಳು ಕೋವಿಡ್ಗಾಗಿಯೇ ಮೀಸಲು ಇಡಲಾಗಿದ್ದು. ಪ್ರತ್ಯೇಕವಾಗಿ ಪ್ರತಿ ತಾಲೂಕಿಗೆ ಒಂದರಂತೆ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಇನ್ನು ಒಂದೊಂದು ಆಂಬುಲೆನ್ಸ್ಗಳನ್ನು ಪ್ರತಿ ತಾಲೂಕಾವಾರು ನೀಡಬೇಕು. ರೋಗಿಗಳಿಗೆ ಸರಿಯಾದ ಸಮಯದಲ್ಲಿ ನಿಗದಿತ ಆಸ್ಪತ್ರೆಗೆ ಕರೆದೊಯ್ಯುವಲ್ಲಿ ಯಾವುದೆ ತೊಂದರೆಗಳ ಆಗದಂತರೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಪ್ರತಿ ತಾಲೂಕಾ ಆಸ್ಪತ್ರೆಗಳಲ್ಲಿ ಶೇ50 ಬೆಡ್ಗಳನ್ನು ಕೋವಿಡ್ಗಳಿಗಾಗಿ ಮೀಸಲಿಡಬೇಕು, ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ತಾಲೂಕಿನಲ್ಲಿ ವ್ಯವಸ್ಥಿತ ರೀತಿಯಲ್ಲಿ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ಶೇ 50 ರಷ್ಟು ಹೊರ ರೋಗಿಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳ ಬೆಡ್ಗಳ ವ್ಯವಸ್ಥೆಯ ಜೊತೆಗೆ ಶೇ 50ರಷ್ಟು ಕೋವಿಡ್ ರೋಗಿಗಳಿಗೆ ಮೀಸಲಿಡ ಬೇಕಾಗಿರುವುದರಿಂದ. ಯಾವುದೇ ರೀತಿಯಿಂದ ತೊಂದರೆಗಳಾಗದಂತೆ ನೋಡಿಕೊಳ್ಳಬೇಕು ಜೊತೆಗೆ ಈಗಾಗಲೆ ಇರುವ ಸೌಲಭ್ಯಗಳನ್ನು ಬಳಸಿಕೊಂಡು ಕೋವಿಡ್ ಚಿಕಿತ್ಸೆಗಳನ್ನು ಕೈಗೊಳ್ಳಬೇಕು. ಕೆಲವು ತಾಲೂಕುಗಳಲ್ಲಿ ಪ್ರಾರಂಭವಾಗಿದ್ದು, ಇನ್ನೂ ಕೆಲವು ತಾಲೂಕುಗಳಲ್ಲಿ ವ್ಯವಸ್ಥೆಗಳನ್ನು ಮಾಡಿಕೊಳ್ಳುವುದರ ಮೂಲಕ ಪ್ರಾರಂಭಿಸಬೇಕು ಎಂದು ಸೂಚಿಸಿದರು.
ಕೋವಿಡ್ ಪಾಸಿಟಿವ್ ಬಂದಿರುವ ರೋಗಿಗಳನ್ನು ಕೋವಿಡ್ ಸೆಂಟರ್ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಅವರಿಗೆ ಯಾವುದೇ ರೀತಿಯಲ್ಲಿ ಚಿಕಿತ್ಸೆ ಹಾಗೂ ಊಟದಲ್ಲಿ ತೊಂದರೆಗಳಾಗಬಾರದು. ಮೂಲಭೂತ ಸೌಕರ್ಯದ ಜೊತೆಗೆ ಪ್ರತಿದಿನದ ಚಿಕಿತ್ಸೆಯನ್ನು ವ್ಯವಸ್ಥಿತ ರೀತಿಯಲ್ಲಿ ಕೈಗೊಳ್ಳುವಂತೆ ಅವರು ಸೂಚಿಸಿದರು.
ಜಿಲ್ಲೆಯಲ್ಲಿ ಸಾರಿ ಮತ್ತು ಐ.ಎಲ್ಐ ರೋಗಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಹಚ್ಚಬೇಕು. ಜಿಲ್ಲೆಯಲ್ಲಿ ನೆಗಡಿ.ಕೆಮ್ಮು ಜ್ವರ ಹಾಗೂ ತೀವ್ರ ಉಸಿರಾಟ ತೊಂದರೆ ಇರುವ ಲಕ್ಷಣಗಳು ಕಂಡು ಬಂದಲ್ಲಿ ಸಾರ್ವಜನಿಕರು ಸಹಾಯವಾಣಿ ಸಂಖ್ಯೆ 1077ಗೆ ಕರೆ ಮಾಡುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ, ಇಂಡಿ ಎ,ಸಿ ಸ್ನೇಹಲ್ ಲೋಖಂಡೆ, ವಿಜಯಪುರ ಉಪವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ, ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಹೇಂದ್ರ ಕಾಪ್ಸೆ, ಜಿಲ್ಲಾ ಸವೇಕ್ಷಣಾಧಿಕಾರಿ ಡಾ. ಬಿರಾದಾರ, ಡಬ್ಲೂ.ಎಚ್.ಓ ಅಧಿಕಾರಿ ಡಾ. ಮುಕುಂದ ಗಲಗಲಿ, ಡಾ. ಲಕ್ಕಣ್ಣವರ, ಡಾ.ಕಟ್ಟಿ, ಡಾ. ಧಾರವಾಡಕರ ಸೇರಿದಂತೆ ಇತರರಿದ್ದರು.
Friday, July 31, 2020
Saturday, July 25, 2020
ಪಂಚಮಿ
ಆಸೆಯ ಮನದಲಿ
ಜೀಕುತಾ ಜೋಕಾಲಿ
ಪಂಚಮಿ ಬಂದಿತು ನಾಗರಠೇವಲಿ
ಸಡಗರ ಸಂಭ್ರಮತಂದಿತು ಊರಲ್ಲಿ
ನಾಡಿನ ಹಿರಿಮೆಯ ಸಿರಿಗೆ
ಶ್ರಾವಣ ಮಾಸದ ಸೊಗಡಿಗೆ
ಪಂಚಮಿ ನಿಂತಿದೆ ಚೆಲುವಾಗಿ
ಹರುಷದಿತೂಗಿದೆ ಉಯ್ಯಾಲೆಯಾಗಿ
ತಂಗಿಯ ತ್ಯಾಗವ ಹೇಳುತ
ಅಣ್ಣನ ಪ್ರೀತಿಯ ಸಾರುತ
ಸರ್ಪಯಜ್ಞವ ನೆನಪಿಸುತ
ಹಾಲುಹರಿಯುತ್ತಿದೆ ಸಂಸ್ಕಾರ ತೋರುತ
ಊರಿಗೆ ಬರಲು ಹಾದಿಯಾಗಿ
ಹೆಣ್ಣಿಗೆ ಆಸೆಯ ತವರಾಗಿ
ಸಂಸ್ಕೃತಿ ಸಾರಲು ನೆಪವಾಗಿ
ಪಂಚಮಿ ಬಂದಿದೆ ಬಂಧುವಾಗಿ
ಬಳೆಗಳತೊಟ್ಟು ಸೀರೆಯನ್ನುಟ್ಟು
ಆಡುತ ಹಾಡುತ ಗೆಳತಿಯರೊಟ್ಟು
ಸಂಭ್ರಮಿಸುವ ಹೆಣ್ಣಿನ ಗುಟ್ಟು
ಪಂಚಮಿಯಾಗಿದೆ ಹಬ್ಬದ ತಿನಿಸುಗಳೊಟ್ಟು
ಅಂಬರೀಷ್ ಎಸ್. ಪೂಜಾರಿ.
ಪಂಚಮಿ ಹಬ್ಬಕೆ ಕರಿತಾನ ಅಣ್ಣಯ್ಯ
ಅಣ್ಣ ಕರಿಯೋ ನೀ ಬಂದು
ತಂಗಿಯ ತವರಿಗೆ ಬಾ ಎಂದು
ಕಾದು ಕೂತಿಹಳು ನಿನ್ನ ಕೂಗಿಗಾಗಿ
ನಾಗರ ಪಂಚಮಿ ಹಬ್ಬಕ ಬರಲೆಂದು।
ದೇವರ ಪಾಲು
ದಿಂಡಿರ ಪಾಲು
ಗುರುವಿನ ಪಾಲೆಂದು
ಹಾಲೆರೆಯುವಳು ತಂಗಿ
ನಾಗರ ಹುತ್ತಕ।
ನಾಗಪ್ಪಗೆ ಕೈ ಮುಗಿದು ಬೇಡುವಳು
ಅಣ್ಣನ ಬಾಳ ಸಿರಿಯು
ಕರಗದಿರಲಿ ಎಂದೆಂದು ಎನ್ನುತ
ಮೊರೆಹೋಗುವಳು ತಂಗಿ ನಾಗದೇವನಲ್ಲಿ।
ತೂಗುಯ್ಯಾಲೆಯಲಿ ಕೂರಿಸಿ
ತೂಗುವನು ಅಣ್ಣಯ್ಯ ತಂಗಿಯನು
ಹರಸುವನು ತಂಗಿ ಬದುಕಿನ ಸುಖವು
ಸಂತಸದ ಹೊನಲಲಿ ಜೀಕುತಿರಲೆಂದು।
ಏಳೇಳು ಜನುಮಕು
ನೀನೆನ್ನ ಒಡಹುಟ್ಟಿದವಳಾಗಿ ಇರು ಎಂದು
ಕೋರಿಕೊಳ್ಳುವನಣ್ಣ ತಂಗಿಯ
ಬಾಯಿಗೆ ಸಿಹಿ ಉಂಡೆಯ ತಿನಿಸಿ।
ಹಬ್ಬದ ಮೇರಗು ನೀನಮ್ಮ
ನೀ ಹುಟ್ಟಿ ಬೆಳೆದ ಮನೆಯು
ನಿನ್ನ ತವರಮ್ಮ
ಸದಾ ಈ ಮನೆಯ ಮನಗಳು
ನಿನ್ನ ಒಲವಿಗಾಗಿ ಇರುವವಮ್ಮ
ನಿನ್ನ ಬರುವಿಕೆಗಾಗಿ ಸದಾ
ತೆರೆದಿರುವದು ನೋಡು
ನಿನ್ನ ತವರಿನ ಬಾಗಿಲಿಗಳಮ್ಮ॥
ಮಮತಾ ಗುಮಶೆಟ್ಟಿ
ವಿಜಯಪುರ
Friday, July 24, 2020
Thursday, July 23, 2020
Wednesday, July 22, 2020
Tuesday, July 21, 2020
Monday, July 20, 2020
ಬಲು ಎಚ್ಚರದಿಂದಿರು ಮನುಜ
ಓ ಮನುಜ
ನೀ ಇರು ಬಲು ಎಚ್ಚರದಿಂದ
ತುಸು ನೀ ಎಚ್ಚರ ತಪ್ಪಿದರ
ಹೋಗತಿ ನೀ
ಯಾರ ಕೈಗೂ ಸಿಗದಂಗ।
ಮಹಾಮಾರಿ ಕೊರೋನಾ
ವಕ್ರಸೈತಿ ನೋಡು ಈ ಜಗದ ತುಂಬ
ಹಬ್ಬಿ ನಿಂತೈತಿ ನಮ್ಮನ ಬಿಡದಂಗ
ಬೆನ್ನಿಗಿ ಬಿದ್ದ ಬೇತಾಳದಂಗ।
ನೀ ಸಿಕ್ಕರ ಕೊರೋನಾ ಕೈಗಿ
ಹೇಳದಂಗ ಹೊಗತಿ ನೀ ದೂಳಿಪಟದಂಗ
ದುಷ್ಟ ಕೊರೋನಾ ಕಣ್ಣಿಗೆ ಬಿದ್ದರ
ಆಗತಿ ನೀ ಅನಾಥ ಶವದಂಗ।
ಎಷ್ಟಿದ್ದರ ಏನು ಬಂಧುಬಳಗ
ಆಗ ಬರುದಿಲ್ಲ ನೋಡ
ಯಾರು ನಿನ್ನ ನೋಡಾಕ
ನೀ ಸೇರತಿ ನೋಡ ಮಣ್ಣಾಗ
ಶವಸಂಸ್ಕಾರದ ಯಾವ ಆಚಾರ ವಿಚಾರ ಸಂಪ್ರದಾಯವಿಲ್ಲದಂಗ ।
ಅದಕ ಹೇಳುದು ನೋಡು
ಬರಬ್ಯಾಡ ನೀ ಮನಿ ಬಿಟ್ಟು ಹೋರಗ
ನೀ ಬಂದರ ಹೊರಗ
ಕಾದು ಕುತದ ಅನಿಷ್ಠ
ಈ ಕೊರೋನಾ ಎಂಬ ಜಡ್ಡ
ಎಚ್ಚರದಿಂದ ಇರು ನೀನು
ಜರ ತಪ್ಪಿದರ ನೀ ಎಚ್ಚರ
ಹೇಗಲೇರಿ ಕುರುತದ ನೋಡು
ಈ ದರಿದ್ರ ಕೊರೋನಾ ರೋಗ
ಬಿಡುದಿಲ್ಲ ನೋಡು ನಿನ್ನ
ನೀ ವಿನಾಶವಾಗುವತನಕ॥
ಮಮತಾ ಗುಮಶೆಟ್ಟಿ
ವಿಜಯಪುರ
Sunday, July 19, 2020
Saturday, July 18, 2020
ನಡೆದಾಡುವ ದೇವರು
ಗೊಮ್ಮಟಕ್ಕೂ ಎತ್ತರದ
ತತ್ವಜ್ಞಾನದ ಮೇರುಶಿಖರ.
ಕೃಷ್ಣೆಗೂ ಮಿಗಿಲಾದ
ಜ್ಞಾನದ ಸಾಗರ.
ಸ್ವಚ್ಛ ಬಿಳುಪಿನೊಳಗೆ
ಶಾಂತಮೂರ್ತಿ.
ಶುಭ್ರ ಹೊಳಪಿನೊಳಗೆ
ಸಹಜಕೀರ್ತಿ.
ಅರಸಿ ಬಂದ ಪದ್ಮವ
ತ್ಯಾಗ ಮಾಡಿದ ತ್ಯಾಗಿ.
ಹರಸಿಬಂದ ಆಸೆಗಳೆಲ್ಲವ
ದೂರ ಮಾಡಿದ ಯೋಗಿ
ಬಂಧನದ ಭವದೊಳಗೆ
ಮುಕ್ತಿಯ ಓಂಕಾರ.
ಆಡಂಬರದ ಜಗದೊಳಗೆ
ಸರಳತೆಯ ಜೇಂಕಾರ.
ಹೇಳುತಿರೆ ಮೃದು ಸ್ವರದಿ
ಅನುಭವ'ದ ಅನುಭಾವ.
ಹೊಳೆಯುವುದು ಮನದಿ
ಅನಂತತೆಯ ಅನುಭವ.
ನುಡಿ-ನುಡಿಗೂ ಹೂವೆಂದ
ಹೂವಂತ ಮನದವರು.
ನಡೆ-ನುಡಿ ಸಮವೆಂದ
ನಡೆದಾಡುವ ದೇವರು.
ಅಂಬರೀಷ ಎಸ್. ಪೂಜಾರಿ.
Friday, July 17, 2020
ಕೋರೋನಾವನ್ನು ತಡೆಗಟ್ಟಲು ವಿದ್ಯಾರ್ಥಿಗಳು ವಾರಿಯರ್ಸ್ ಮಾದರಿಯಲ್ಲಿ ಶ್ರಮಿಸಬೇಕಿದೆ ಕೆ.ಎನ್. ರಮೇಶ
ಈ ದಿವಸ ವಾರ್ತೆ
ವಿಜಯಪುರ: ಜಗತ್ತನೆ ಕಾಡುತ್ತಿರುವ ಕೊರೋನ ನಮ್ಮ ದೇಶದಲ್ಲಿ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದ್ದು ಇದನ್ನು ತಗ್ಗಿಸಲು ವಿದ್ಯಾರ್ಥಿಗಳು ವಾರಿಯರ್ಸ್ ಮಾದರಿಯಲ್ಲಿ ಶ್ರಮಿಸಬೇಕಿದೆ ಎಂದು ವಿಜಯಪುರ ಜಿಲ್ಲೆಯ ವಿಜಯವಾಣಿ, ಕನ್ನಡ ದಿನಪತ್ರಿಕೆಯ ಸ್ಥಾನಿಕ ಸಂಪಾದಕರು, ರಮೇಶ ಕೆ ಎನ್ ಹೇಳಿದರು.
ಭಾರತ ಸರಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, ವಿಜಯಪುರ ಮತ್ತು ವಿದ್ಯಾವರ್ಧಕ ಸಂಘದ ಕಲಾ, ವಾಣಿಜ್ಯ ಮತ್ತು ಬಿಸಿಎ (ದರಬಾರ) ಮಹಾವಿದ್ಯಾಲಯ, ವಿಜಯಪುರ, ಇವರ ಸಹಯೋಗದಲ್ಲಿ ಕೋವಿಡ್ 19 ನಿಯಂತ್ರಣದಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತು ಅಂತರ್ಜಾಲ ಸಂವಾದ ಕರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಅವರು ಮಾತನಾಡಿದರು.
ರಾಜ್ಯದಲ್ಲಿ ಇತನಕ ಸರಿಸುಮಾರಿ ಸಾವಿರಕ್ಕೂ ಹೆಚ್ಚು ಮಂದಿ ಕೊರೋನಾಗಿ ಬಲಿಯಾಗಿದ್ದಾರೆ.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಅಧ್ಯಯನದ ಪ್ರಕಾರ ದೇಶದಲ್ಲಿ ಸೆಪ್ಟೆಂಬರ್ ವೇಳೆಗೆ 35 ಲಕ್ಷಕ್ಕೂ ಅಧಿಕ ಮತ್ತು ರಾಜ್ಯದಲ್ಲಿ 2 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಕರೋನಾ ವೈರಸ್ ನಿಯಂತ್ರಣಕ್ಕೆ ಸರಕಾರಗಳು, ವೈದ್ಯರ ಜೊತೆಗೆ ಸಮಾಜದ ಸಹಕಾರ ಅತ್ಯಗತ್ಯವಾಗಿ ಬೇಕಾಗಿದೆ. ಇಂದಿನ ಯುವ ಪೀಳಿಗೆ ಅದರಲ್ಲೂ ವಿದ್ಯಾರ್ಥಿಗಳೂ ಈ ನಿಟ್ಟಿನಲ್ಲಿ ಚಿಂತನೆ ಮಾಡುವ ಅವಶ್ಯಕತೆ ಅಧಿಕವಾಗಿದೆ. ಮೊದಲನೆಯದಾಗಿ ಯಾರಿಗೂ ಕರೋನಾ ವೈರಸ್ ಹರಡದಂತೆ ಎಚ್ಚರಕೆ ವಹಿಸುವ ಅವಶ್ಯಕತೆ ಹೆಚ್ಚಿದೆ. ಸ್ವಚ್ಛತೆ, ಮುಖಗವಸು ಬಳಸುವುದು, ಕಣ್ಣು, ಬಾಯಿ, ಮೂಗನ್ನು ಮುಟ್ಟಿಕೊಳ್ಳುವ ಸಂದರ್ಭ ಬಂದಾಗ ಕೈಯನ್ನು ಸೋಪಿನಿಂದ ಕೈಯನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ಬಿಸಿ ನೀರು ಸೇವನೆ, ಸಮಾಜಿಕ ಅಂತರ ಪಾಲನೆ ಹಲವು ವಿಷಯಗಳ ಬಗ್ಗೆ ಇತರರಿಗೆ ಸಾಧ್ಯವಾದಷ್ಟು ಮಾರ್ಗದರ್ಶನ ಮಾಡಬೇಕು ಎಂದು ತಿಳಿಸಿದರು.
ಕುಮಾರಿ ಸುಶ್ಮಾ ನಾಯಕ, ಸಂಶೋಧನಾ ವಿದ್ಯಾರ್ಥಿ, ವಿಜಯಪುರ ಇವರು ಸಹ ಮಾತಾನಾಡಿದರು.
ವಿದ್ಯಾವರ್ಧಕ ಸಂಘದ ಕಲಾ, ವಾಣಿಜ್ಯ ಮತ್ತು ಬಿಸಿಎ ಮಹಾವಿದ್ಯಾಲಯ, ವಿಜಯಪುರದ ಪ್ರಾಚಾರ್ಯರಾದ ಗಿರೀಶ್ ಎಂ ಮಣ್ಣೂರ, ಅಧ್ಯಕ್ಷೀಯ ಭಾಷಣ ಮಾಡಿದರು.
ಉಪನ್ಯಾಸಕರಾದ ಮಂಜುನಾಥ ಜನಗೊಂಡ, ಅರುಣ್ ಕುಮಾರ್ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ವೆಬಿನಾರ್ನಲ್ಲಿ ಭಾಗವಹಿಸಿದ್ದರು. ಕ್ಷೇತ್ರ ಪ್ರಚಾರ ಅಧಿಕಾರಿಗಳಾದ ಜಿ ತುಕಾರಾಮಗೌಡ ಪ್ರಾಸ್ತಾವಕವಾಗಿ ಮಾತನಾಡಿದರು.
ಸಿ ಕೆ ಸುರೇಶ್ ಸ್ವಾಗತಿಸಿ ವಂದಿಸಿದರು.
Wednesday, July 15, 2020
ಜನಸಂಖ್ಯೆ ಹೆಚ್ಚಳವನ್ನು ನಿಯಂತ್ರಿಸಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ
ಈ ದಿವಸ ವಾರ್ತೆ
ವಿಜಯಪುರ : ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಯಿಂದಾಗಿ ಅನೇಕ ಸಮಸ್ಯೆಗಳು ಉದ್ಭಣಗೊಳ್ಳುತ್ತಿರುವುದಕ್ಕೆ ಕಾರಣವಾಗುತ್ತಿದೆ. ಈ ಕಾಣದಿಂದಾಗಿ ಜನಸಂಖ್ಯೆ ಹೆಚ್ಚಳವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಜಿಲ್ಲಾ ಆರೋಗ್ಯ ಇಲಾಖೆ ಮುಂದಾಗಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ರಾಜೇಶ್ವರಿ ಗೋಲಗೆರಿ ಅವರು ತಿಳಿಸಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಭಾಂಗಣದಲ್ಲಿಂದು ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ನಡೆದ ಜನಸಂಖ್ಯಾ ಸ್ಥಿತಿಗತಿ ಹಾಗೂ ಕುಟುಂಬ ಕಲ್ಯಾಣ ಸೇವೆಗಳ ಕುರಿತು ನಡೆದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ಜನಸಂಖ್ಯೆ ಹೆಚ್ಚಳದ ಪರಿಣಾಮ ನಾವು ಹಾಗೂ ನಮ್ಮ ಮುಂದಿನ ತಲೆಮಾರುಗಳು ಹೆಚ್ಚಿನ ತೊಂದರೆಗಳನ್ನು ಅನುಭವಿಸುವಂತಾಗಿದೆ. ನಗರ ಪ್ರದೇಶಗಳಲ್ಲಿ ಜನಸಂಖ್ಯೆ ಹೆಚ್ಚಳದಿಂದ ಕೊಳಚೆ ಪ್ರದೇಶಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅಪೌಷ್ಠಿಕೆ, ಸಾಂಕ್ರಾಮಿಕ ರೋಗಗಳು ಹೆಚಳಕ್ಕೆ ಕಾರಣವಾಗಿದೆ. ಬಡತನ ಹೆಚ್ಚಳ, ನಿರುದ್ಯೋಗ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಜನಸಂಖ್ಯೆ ಕಾರಣವಾಗಿದೆ ಎಂದು ತಿಳಿಸಿದರು.
ಜಿಲ್ಲಾ ರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜನಸಂಖ್ಯೆ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಅನೇಕ ರೀತಿಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು. ವಿವಾಹಿತರು, ಮಹಿಳೆಯರು, ಯುವಕ/ಯುವತಿಯರಿಗೆ ಜನಸಂಖ್ಯೆ ಹೆಚ್ಚಳದಿಂದಾಗುವ ಪರಿಣಾಮಗಳನ್ನು ತಿಳಿಸಲಾಗುತ್ತಿದೆ. ವಿವಾಹಿತರು ಜನನ ಅಂತರವನ್ನು ಕಾಪಾಡಿ, ಜನನ ಅಂತರವನ್ನು ಕನಿಷ್ಠ ಒಂದು ಮಗುವಿನಿಂದ ಮತ್ತೊಂದು ಮಗುವಿಗೆ 4 ವರ್ಷ ಅಂತರವಿರಬೇಕು, ಎರಡು ಮಕ್ಕಳಾದ ಮೇಲೆ ಸ್ವಪ್ರೇರಿತವಾಗಿ ಬರುವ ಪುರುಷರಿಗೆ ಎನ್ಎಸ್ವಿ(ಪುರುಷರ ಸಂತಾನ ಹರಣ ಚಿಕಿತ್ಸೆ) ಮಾಡಿಸಿಕೊಳ್ಳಲು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಅನೇಕ ಕಾನೂನುಗಳನ್ನು ಜಾರಿಗೆ ತಂದಿದೆ. ಚಿಕ ್ಕಕುಟುಂಬ ಚೊಕ್ಕ ಕುಟುಂಬ ಎನ್ನುವ ಘೋಷವಾಖ್ಯದೊಂದಿಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ಜಿಲ್ಲೆಯಲ್ಲೂ ವಿವಿಧ ರೀತಿಯಲ್ಲಿ ಗ್ರಾಮಿಣ ಭಾಗದಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸುರೇಶ ಹೊಸಮನಿ ಅವರು ಮಾತನಾಡಿ ಜನಸಂಖ್ಯೆ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಅನೇಕ ಕುಟುಂಬ ಕಲ್ಯಾಣ ಯೊಜನೆಗಳನ್ನು ಜಾರಿಗೆ ತಂದಿದ್ದು ಇದರಿಂದ ನವ ವಿವಾಹಿತರು ಈ ವಿಧಾನಗಳನ್ನು ಅಳವಡಿಸುವುದರಿಂದ ಮೊದಲ ಮಗುವನ್ನು 2 ವರ್ಷಗಳ ನಂತರ ಪಡೆಯಬಹುದು. ಮಕ್ಕಳ ಮಧ್ಯೆ ಮೂರರಿಂದ ನಾಲ್ಕು ವರ್ಷಗಳ ಅಂತರವನ್ನು ಕಾಯ್ದುಕೊಳ್ಳಬಹುದು, ತಾಯಿ ಮರಣ ಮತ್ತು ಶಿಶು ಮರಣ ಪ್ರಮಾಣವನ್ನು ತಗ್ಗಿಸಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಜೈಬುನಿಸಾ ಬೀಳಗಿ, ಟಿ.ಎಚ್.ಇ.ಓ ಬಾಗವಾನ, ಕುಂಬಾರ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
Tuesday, July 14, 2020
ಜಿಲ್ಲೆಯಲ್ಲಿ ಇಂದು ಚಿಕಿತ್ಸೆ ಫಲಕಾರಿಯಾಗದೆ 3 ಕೋವಿಡ್ ಸೋಂಕಿತರ ನಿಧನ : ಶಿಷ್ಟಾಚಾರದಂತೆ ಅಂತ್ಯಕ್ರಿಯೆ
ವಿಜಯಪುರ : ಜಿಲ್ಲೆಯಲ್ಲಿ ಇಂದಿನ ವೈದ್ಯಕೀಯ ವರದಿಯನ್ವಯ ಮೂವ್ವರು ಕೋವಿಡ್-೧೯ ಪಾಸಿಟಿವ್ ರೋಗಿಗಳು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.
ಅದರಂತೆ ವಿಜಯಪುರ ನಗರದ ಶಾಪೇಟಿ, ಸ್ಟೇಶನ್ ಹಿಂದಿನ ರಸ್ತೆಯ ನಿವಾಸಿಯಾದ ೫೫ ವರ್ಷದ ಪುರುಷ (ರೋಗಿ ಸಂಖ್ಯೆ – ೨೪೭೭೩) ಕೋವಿಡ್ ಪಾಸಿಟಿವ್ ವ್ಯಕ್ತಿಯು ದಿನಾಂಕ ೦೫-೦೭-೨೦೨೦ ರಂದು ನಿಮೋನಿಯಾ, ಜ್ವರ, ತೀವ್ರ ಉಸಿರಾಟ ತೊಂದರೆ ಲಕ್ಷಣಗಳಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಕೋವಿಡ್ ಪಾಸಿಟಿವ್ ಎಂದು ದೃಢಪಟ್ಟು ದಿನಾಂಕ ೧೧-೭-೨೦೨೦ ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ವಿಜಯಪುರ ನಗರದ ಮುರಾಣಕೇರಿ ಕಾಲನಿಯ ನಿವಾಸಿಯಾದ ೫೦ ವರ್ಷದ ಪುರುಷ (ರೋಗಿ ಸಂಖ್ಯೆ – ೩೧೮೮೦) ಕೋವಿಡ್ ಪಾಸಿಟಿವ್ ವ್ಯಕ್ತಿಯು ದಿನಾಂಕ ೧೦-೦೭-೨೦೨೦ ರಂದು ೧೨.೪೨ ಗಂಟೆಗೆ ಜ್ವರ, ತೀವ್ರ ಉಸಿರಾಟ ತೊಂದರೆ ಲಕ್ಷಣಗಳಿಂದ ಮತ್ತು ನಾಲ್ಕು ವರ್ಷಗಳಿಂದ ಸಕ್ಕರೆ ಕಾಯಿಲೆ, ರಕ್ತದೊತ್ತಡ, ೨ ವರ್ಷಗಳಿಂದ ಹೃದಯ ಸಂಬAಧಿ ಕಾಯಿಲೆಗಳಿಂದ ಬಳಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಕೋವಿಡ್ ಪಾಸಿಟಿವ್ ಎಂದು ದೃಢಪಟ್ಟು ದಿನಾಂಕ ೧೦-೭-೨೦೨೦ ರಂದು ೯.೦೦ ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಅದೇ ರೀತಿ ವಿಜಯಪುರ ನಗರದ ಕಾಳಿಕಾ ನಗರ, ಆಶ್ರಮದ ನಿವಾಸಿಯಾದ ೬೮ ವರ್ಷದ ಪುರುಷ (ರೋಗಿ ಸಂಖ್ಯೆ – ೩೫೨೧೬) ಕೋವಿಡ್ ಪಾಸಿಟಿವ್ ವ್ಯಕ್ತಿಯು ದಿನಾಂಕ ೦೭-೦೭-೨೦೨೦ ರಂದು ಕೆಮ್ಮು, ತೀವ್ರ ಉಸಿರಾಟ ತೊಂದರೆ ಲಕ್ಷಣಗಳಿಂದ ಮತ್ತು ಏಳು ವರ್ಷಗಳಿಂದ ಸಕ್ಕರೆ ಕಾಯಿಲೆಯಿಂದ ಬಳಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಕೋವಿಡ್ ಪಾಸಿಟಿವ್ ಎಂದು ದೃಢಪಟ್ಟು ದಿನಾಂಕ ೧೩-೭-೨೦೨೦ ರಂದು ೯.೦೦ ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಮೃತರ ಅಂತ್ಯಕ್ರಿಯೆಯನ್ನು ಶಿಷ್ಟಾಚಾರದಂತೆ ನೆರವೇರಿಸಲಾಗಿದೆ ಅವರು ತಿಳಿಸಿದ್ದಾರೆ.
Monday, July 13, 2020
ಸೇವೆಯ ಮಾಡುವ ಭಾಗ್ಯವಿದು...
ಎಲ್ಲೆಲ್ಲೂ ಕೊರೊನ ಅವಾಂತರ....
ಕಾಪಾಡಲೇ ಬೇಕು ಸಾಮಾಜಿಕ ಅಂತರ..
ಕೊರೊನ ಅವಾಂತರದಲಿ ಬಡವನ ಪಾಡ ಕೇಳೋರು ಯಾರು??
ಸೀಲ್ ಡೌನ್ ಲೊಕ್ಡೌನ್ ನಡುವಿನ ಜೀವನದ ಬೇಗೆಯ ಅನುಭವಿಸೋರಾ ಪಾಡ ಗಮನಿಸೋರು ಯಾರು??
ತುತ್ತಿನ ಚೀಲವ ತುಂಬಿಸೋ ಕೈಗಳ ಕಟ್ಟಿ ಹಾಕಿ ಅವರದಲ್ಲದ ತಪ್ಪಿಗೆ ಪರಿತಪಿಸೋ ಜೀವಕೆ ಆಧಾರ ಆಗೋರು ಯಾರು??
ಒಂದು ಹೊತ್ತಿನ ತುತ್ತಿಗೆ ದುಡಿಯೋ ಜೀವಕೆ ಮರುಜೀವವ ಕೊಡಲು ಸಂಜೀವಿನಿಯ ಕೊಡೋರು ಯಾರು??
ಸಂಕಷ್ಟ ಕಾಲದಲ್ಲೂ ಅಳಿದವರ ಹೆಸರ ಉಳಿಸಲು ಕಟ್ಟಿಸೋ ಸ್ಮಾರಕಗಳ ಹೆಸರಲಿ ನೋಟುಗಳ ಸುರಿಯುವಿರಿ...
ಬದುಕಿರುವವರ ಉಸಿರ ಉಳಿಸುವ ಕಾರ್ಯಕ್ಕಾಗಿ ನೋಟುಗಳ ಸುರಿಯಿರಿ...
ಉಸಿರ ಉಳಿಸಿದರೆ ನಿಮ್ಮ ಹೆಸರು ಅಮರವಾಗೋದು.
ರಾಜನಂತೆ ಮೆರೆಯೋ ರಾಜಕಾರಣಿಗಳೇ...
ಬೇಡವಾದನೆ ನಿಮ್ಮ ಮತಭಾಂದವ ನಿಮಗೀಗಾ..
ಅಧಿಕಾರದ ಗದ್ದುಗೆ ಏರಲು ಕಂತೆ ಕಂತೆ ನೋಟುಗಳ ಸುರಿದಿರಲ್ಲ ಅಭಿಮತಗಳಿಗಾಗಿ...
ಜನಪ್ರತಿನಿಧಿ ಎಂಬ ಬಿರುದು ಹೊತ್ತ ನಿಮಗೀಗಾ..
ಬಿರುದು ಕೊಟ್ಟೋರಾ ಹಿತ ಕಾಯುವ ಸಮಯವೀಗಾ..
ಸುರಿಯಿರಿ ಕಂತೆ ಕಂತೆ ನೋಟುಗಳ ಇದೀಗಾ..
ಬಡವರ ಜೀವವ ಉಳಿಸಿಕೊಡುವ ಪುಣ್ಯದ ಕಾರ್ಯಕ್ಕಾಗಿ
ತುತ್ತಿನ ಚೀಲವ ತುಂಬಿಸಿ ಕೊಡುವ ಸಲುವಾಗಿ..
ಬಡವನ ಆರೋಗ್ಯವ ಕಾಪಾಡುವುದಾಕ್ಕಾಗಿ...
ಗದ್ದುಗೆ ಏರಿರುವ ನಿಮಗೀಗಾ..
ಮತದಾರನ ಸೇವೆಯ ಮಾಡುವ ಭಾಗ್ಯ ದೊರಕಿರುವಾಗ..
ನಿಮ್ಮಯ ನೋಟುಗಳ ಸುರಿಯಿರಿ ಬಡವನ ಜೀವನಕ್ಕಾಗಿ
ಕಂತೆ ಕಂತೆ ನೋಟುಗಳ ಸುರಿಯಿರಿ ಬಡವನ ಆರೋಗ್ಯಕ್ಕಾಗಿ..
ಮತದಾನದ ವೇಳೆಯಲಿ ಅಮೂಲ್ಯ ಮತವೆಂದು ಬಣ್ಣಿಸುವ ನೀವುಗಳೇ..
ಅಮೂಲ್ಯ ಜೀವಕೆ ಬೆಲೆ ಕೊಡುವುದಾ ನೋಡಿದರೆ ಮುಂದಿನ ಚುನಾವಣೆಯಲಿ ನಿಮ್ಮ ಮತಬೇಟೆಯ ಕಾರ್ಯದ ಚಿಂತೆ ನಿಮಗಿಲ್ಲ..
ನಿಮ್ಮ ಮತದಾರರ ಕ್ಷೇತ್ರವ ದತ್ತುಪಡೆಯುವ ಮನಸ ಮಾಡಿ...
ಕೊರೊನ ಮುಕ್ತ ಕ್ಷೇತ್ರಕ್ಕಾಗಿ ನಿಮ್ಮ ಅಧಿಕಾರವ ಮುಡಿಪಾಗಿಡಿ..
ಜನತಾ ಸೇವೆಯೇ ಜನಾರ್ಧನ ಸೇವೆಯೇ ಎಂಬುದ ತಿಳಿಯಿರಿ..
ಸಂಕಷ್ಟ ಕಾಲದಲಿ ತೋರಿಸಿ ನಿಮ್ಮ ಪೌರುಷವ..
ದ್ವೇಷದ ರಾಜಕಾರಣವ ಬಿಟ್ಟು, ಪಕ್ಷಭೇದವ ತೊರೆದು ಜನರಿಗಾಗಿ ಹೋರಾಡಿ
ಜೀವನ ಪರ್ಯಂತ ಹಣವ ಸುರಿಯದೆ ಗದ್ದುಗೆಯಲಿ ಮೆರೆದಾಡುವಿರಿ..
ಸಮಿತ ಶೆಟ್ಟಿ
ಸಿದ್ಧಕಟ್ಟೆ
Sunday, July 12, 2020
Saturday, July 11, 2020
Friday, July 10, 2020
ಜಿಲ್ಲೆಯಲ್ಲಿ ಇಂದು ಮತ್ತೆ ೮೯ ಜನರಿಗೆ ಕೋವಿಡ್ ಪಾಸಿಟಿವ್ ದೃಢ
ಈ ದಿವಸ ವಾರ್ತೆ
ವಿಜಯಪುರ : ಜಿಲ್ಲೆಯಲ್ಲಿ ಇಂದಿನ ವೈದ್ಯಕೀಯ ವರದಿಯನ್ವಯ ಮತ್ತೆ ಒಟ್ಟು ೮೯ ಜನರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.
ಇದರಲ್ಲಿ ನಾಲ್ವರು ಮಹಾನಗರ ಪಾಲಿಕೆಯ ಮೂವ್ವರು ಪೌರಕಾರ್ಮಿಕರು, ಓರ್ವ ಪೌರಕಾರ್ಮಿಕ ಮೇಲ್ವಿಚಾರಕರು , ಒಬ್ಬರು ಪೊಲೀಸ್ ಹಾಗೂ ನಾಲ್ವರು ಆರೋಗ್ಯ ಆರೈಕೆ ಕಾರ್ಯಕರ್ತರಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಅವರು ತಿಳಿಸಿದ್ದಾರೆ.
ಅದರಂತೆ ಜಿಲ್ಲೆಯಲ್ಲಿ ಈವರೆಗೆ ಒಟ್ಟು ೭೧೦ ಕೋವಿಡ್ ೧೯ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ೪೬೩ ಗುಣಮುಖರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಆಸ್ಪತ್ರೆಯಲ್ಲಿ ಸದ್ಯ ೨೩೪ ಕೋವಿಡ್ -೧೯ ಪಾಸಿಟಿವ್ ಸಕ್ರಿಯ ರೋಗಿಗಳಿದ್ದು, ಸೂಕ್ತ ಚಿಕಿತ್ಸೆ ಒದಗಿಸಲಾಗುತ್ತಿದೆ. ಇಲ್ಲಿಯವರೆಗೆ ಒಟ್ಟು ೧೩ ಜನ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ವಿಮಾನ ನಿಲ್ದಾಣ ನಿರ್ಮಾಣ ಯೋಜನೆ ಕಾಮಗಾರಿಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಸಿಕ್ಕಿದ್ದು ಸಂತಸದ ವಿಷಯ
ಈ ದಿವಸ ವಾರ್ತೆ
ವಿಜಯಪುರ: ಜಿಲ್ಲೆಯ ಬಹುದಿನದ ಕನಸಾಗಿದ್ದ ವಿಜಯಪುರ ವಿಮಾನ ನಿಲ್ದಾಣ ನಿರ್ಮಾಣ ಯೋಜನೆ ಕಾಮಗಾರಿಗೆ ನೆನ್ನೆ ನಡೆದ ಸಚಿವ ಸಂಪುಟದಲ್ಲಿ ಒಪ್ಪಿಗೆ ಸಿಕ್ಕಿದ್ದು ಸಂತಸದ ವಿಷಯವಾಗಿದೆ ಎಂದು ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷರಾದ ಶಂಕರಗೌಡ ಎಸ್ ಬಿರಾದಾರ್ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ವಿಶ್ವವಿಖ್ಯಾತ ಗೋಳಗುಮ್ಮಟ ವಿಶ್ವಗುರು ಅಣ್ಣ ಬಸವಣ್ಣನವರು ಜನ್ಮಸ್ಥಳ ಆಲಮಟ್ಟಿ ಜಲಾಶಯ ಸೇರಿದಂತೆ ಪಾರಂಪರಿಕ ಸ್ಮಾರಕಗಳನ್ನು ಒಳಗೊಂಡಿರುವ ಹಾಗೂ ದ್ರಾಕ್ಷಿ ಒಣದ್ರಾಕ್ಷಿ ದಾಳಿಂಬೆ ಲಿಂಬೆ ಸೇರಿದಂತೆ ಅನೇಕ ತೋಟಗಾರಿಕೆ ಬೆಳೆಗಳ ರಫ್ತಿಗೆ ಹೆಸರಾಗಿರುವ ವಿಜಯಪುರ ಜಿಲ್ಲೆಗೆ ವಿಮಾನ ನಿಲ್ದಾಣ ಕಾಮಗಾರಿ ಪ್ರಾರಂಭಕ್ಕೆ ಸಚಿವ ಸಂಪುಟ ಸಭೆಯಲ್ಲಿ ಚಾಲನೆ ಸಿಕ್ಕಿತು ಬಹಳ ಸಂತೋಷವಾಗಿದೆ ಈ ಮಹಾನ್ ಕಾರ್ಯಕ್ಕೆ ಶ್ರಮಿಸಿದ ರಾಜ್ಯದ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರು ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆ ಅವರಿಗೆ ಅಭಿನಂದನೆಗಳು ತಿಳಿಸಿದ್ದಾರೆ.
ಅಮೃತ ಯೋಜನೆಯಡಿ ಶೇ 100 ರಷ್ಟು ಕಾಮಗಾರಿ ಅನುಷ್ಠಾನಕ್ಕೆ ಕಟ್ಟುನಿಟ್ಟಿನ ಸೂಚನೆ
ಈ ದಿವಸ ವಾರ್ತೆ
ವಿಜಯಪುರ : ಕೇಂದ್ರ ಪುರಸ್ಕøತ ಅಮೃತ ಯೋಜನೆಯಡಿ ನಗರದಲ್ಲಿ ಜಾರಿಯಿರುವ ಕುಡಿಯುವ ನೀರು ಸರಬರಾಜು ಯೋಜನೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೂಳಿಸಲು ಸಕಲ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಅಮೃತ ಯೋಜನೆಯಡಿ ಸಾಧಿಸಿದ ಪ್ರಗತಿ ಕುರಿತು ಪರಿಶೀಲನಾ ಸಭೆ ನಡೆಸಿದ ಅವರು 177 ಕೋಟಿ ರೂ. ವೆಚ್ಚದ ಈ ಯೋಜನೆಯಡಿ ಈವರೆಗೆ 6 ವಲಯಗಳಲ್ಲಿ ಮಾತ್ರ ಶೇ100 ರಷ್ಟು ಪ್ರಗತಿ ಸಾಧಿಸಿದ್ದು, ಇನ್ನುಳಿದ ವಲಯಗಳಲ್ಲಿ ಆರ್ಥಿಕ ಗುರಿಗೆ ತಕ್ಕಂತೆ ಭೌತಿಕ ಸಾಧನೆ ಮಾಡದೆ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಇನ್ನುಳಿದ 9 ವಲಯಗಳಲ್ಲಿ ಶೇ100 ರಷ್ಟು ಪ್ರಗತಿ ಸಾಧಿಸಿ ಜನರಿಗೆ ಕುಡಿಯುವ ನೀರಿನ ಸೌಲಭ್ಯ ದೊರೆಯುವಂತೆ ನೋಡಿಕೊಳ್ಳಲು ಸೂಚಿಸಿದರು.
ಈ ಯೋಜನೆಯಡಿ 53,453 ಕುಡಿಯುವ ನೀರು ಸಂಪರ್ಕ ಸ್ಥಳಗಳನ್ನು ಜೋಡಿಸುವ ಗುರಿ ಇದ್ದು, ಆರ್ಥಿಕ ಸಾಧನೆಗೆ ತಕ್ಕಂತೆ ಭೌತಿಕ ಪ್ರಗತಿ ಸಾಧಿಸಿಲ್ಲ. ಅಧಿಕಾರಿಗಳು ಯಾವುದೇ ರೀತಿಯ ಸಬೂಬು ನೀಡದೆ ಮುಂದಿನ ಅಕ್ಟೋಬರ್ ಅಂತ್ಯದೊಳಗೆ ಯೋಜನೆ ಪೂರ್ಣಗೊಳಿಸಿ ನಾಗರಿಕರಿಗೆ ನೆರವಾಗುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಅದರಂತೆ ಈ ಯೋಜನೆಯ ಅನುಷ್ಠಾನ ಜವಾಬ್ದಾರಿ ಹೊಂದಿರುವ ಜೈನ್ಸಂಸ್ಥೆ ಮಂದಗತಿ ಕಾಮಗಾರಿ ಕುರಿತಂತೆ ಸಂಬಂಧಪಟ್ಟ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಮಾಹಿತಿ ರವಾನಿಸುವುದರ ಮೂಲಕ ಸರ್ಕಾರದ ಗಮನಕ್ಕೆ ತರಲಾಗುವುದು. ಅದರಂತೆ ಸಂಬಂಧಿಸಿದ ನೀರು ಸರಬರಾಜು ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರರು ಕೂಡಾ ಈ ಯೋಜನೆಯಡಿ ಸಾಧಿಸಿದ ಆರ್ಥಿಕ ಮತ್ತು ಭೌತಿಕ ಸೇರಿದಂತೆ ಸಮಗ್ರ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.
ನಗರದಲ್ಲಿ ಒಟ್ಟು 15 ವಲಯಗಳ ಪೈಕಿ 6 ವಲಯಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಜುಲೈ ಅಂತ್ಯಕ್ಕೆ ಇನ್ನು ಮೂರು ವಲಯಗಳಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದ್ದು, ಅಕ್ಟೋಬರ್ ಅಂತ್ಯಕ್ಕೆ ಎಲ್ಲ 15 ವಲಯಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಈ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಕಾರ್ಯ
ನಿರ್ವಾಹಕ ಅಭಿಯಂತರ ಪಟ್ಟಣಶೆಟ್ಟಿ ಅವರು ಸಭೆಗೆ ತಿಳಿಸಿದರು. ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ ಸೇರಿದಂತೆ ವಾಟರ್ಬೋರ್ಡ್ ಅಧಿಕಾರಿಗಳು ಉಪಸ್ಥಿತರಿದ್ದರು.
Tuesday, July 7, 2020
ಜಿಲ್ಲೆಯಲ್ಲಿ ಕೋವಿಡ್ ಗೆ ಮತ್ತೊಂದು ಬಲಿ
ಈ ದಿವಸ ವಾರ್ತೆ
ವಿಜಯಪುರ : ಜಿಲ್ಲೆಯಲ್ಲಿ ಇಂದಿನ ವೈದ್ಯಕೀಯ ವರದಿಯನ್ವಯ ೩೫ ವರ್ಷದ ಕೋವಿಡ್-೧೯ ಪಾಸಿಟಿವ್ ರೋಗಿ(ರೋಗಿ ಸಂಖ್ಯೆ 16985)ಯು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.
ವಿಜಯಪುರ ನಗರದ ಬಸವ ನಗರ ನಿವಾಸಿಯಾದ ೩೫ ವರ್ಷದ ಈ ಕೋವಿಡ್ ಪಾಸಿಟಿವ್ ವ್ಯಕ್ತಿಯು ದಿನಾಂಕ ೨೩-೦೬-೨೦೨೦ ರಂದು ಜ್ವರ, ನೆಗಡಿ, ಕೆಮ್ಮು ಲಕ್ಷಣಗಳಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಕೋವಿಡ್ ಪಾಸಿಟಿವ್ ಎಂದು ದೃಢಪಟ್ಟು ದಿನಾಂಕ ೬-೭-೨೦೨೦ ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇವರು ತೀವ್ರ ಉಸಿರಾಟ ತೊಂದರೆ, ತೀವ್ರ ರಕ್ತದೊತ್ತಡ ಕಾಯಿಲೆಗಳಿಂದ ಬಳಲುತ್ತಿದ್ದರು. ಮೃತರ ಅಂತ್ಯಕ್ರಿಯೆಯನ್ನು ಶಿಷ್ಟಾಚಾರದಂತೆ ನೆರವೇರಿಸಲಾಗಿದೆ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಇಂದು ಮತ್ತೆ ೨೨ ಜನರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ಒಟ್ಟು ೬೧೬ ಕೋವಿಡ್ ೧೯ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ೪೪೨ ಗುಣಮುಖರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಆಸ್ಪತ್ರೆಯಲ್ಲಿ ಸದ್ಯ ೧೬೩ ಕೋವಿಡ್ -೧೯ ಪಾಸಿಟಿವ್ ಸಕ್ರಿಯ ರೋಗಿಗಳಿದ್ದು, ಸೂಕ್ತ ಚಿಕಿತ್ಸೆ ಒದಗಿಸಲಾಗುತ್ತಿದೆ. ಇಲ್ಲಿಯವರೆಗೆ ಒಟ್ಟು ೧೧ ಜನ ಮೃತಪಟ್ಟಿದ್ದಾರೆ.ಇಂದಿನ ಮೃತ ವ್ಯಕ್ತಿಯ ಕುರಿತು ರಾಜ್ಯ ಬುಲೆಟಿನ್ ದಲ್ಲಿ ಸೇರ್ಪಡೆಯಾಗಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.
Saturday, July 4, 2020
ಅನಕ್ಷರಸ್ಥ ಅಭಿಜಾತ ಕಾಮೇಗೌಡ
ಕುರಿಗಳು ಮಾರಿ ಕಟ್ಟೆ ಕಟ್ಟಿಸಿದ
ಕರುನಾಡಿನ ಭಗೀರಥ
ಪ್ರಕೃತಿ ರಕ್ಷಣೆಗೆಂದೆ ಪಣತೊಟ್ಟ
ಕಾಮೇಗೌಡ ಅನಿಕೇತ
ಅಕ್ಷರ ಕಲಿಯದ ಓದು ಬಾರದ
ಅನಕ್ಷರಸ್ಥ ಈ ತಾತಾ
ಮೂಕ ಜೀವಿಗಳ ನರಳಾಟವ
ಅರಿತ ಅಭಿಜಾತ
ಪ್ರಾಣಿ, ಪಕ್ಷಿಗಳ ಉಳಿವಿಗಾಗಿ
ತನ್ನ ಮನದ ಇಂಗಿತ
ಸಮಾಜಕ್ಕೆ ತಿಳಿಸಿ, ಜನರಿಂದ
ಎನಿಸಿಕೊಂಡ ಉನ್ಮತ
ಅವಮಾನ ಸಹಿಸಿ, ಪರಿಸರ
ಸಂರಕ್ಷಣೆಗಾಗಿ ನಿರತ
ಕೂಡಿಟ್ಟ ಹಣದಿ ಕೆರೆ, ಕಟ್ಟೆ
ನಿರ್ಮಿಸಿದ ಪಂಡಿತ
ಕಾಮೇಗೌಡರ ನಿಸ್ವಾರ್ಥತೆ
ಕಾಡು ಇಂದು ಚೈತ್ರರಥ
ಪ್ರಾಣಿ ಸಂಕುಲ ವರ್ಷವೀಡಿ
ಇಲ್ಲಿವೇ ನಲಿಯುತ
ಅಜ್ಜನ ಈ ಅದ್ಭುತ ಕಾರ್ಯಕ್ಕೆ
ಪ್ರಶಂಸೆಗಳ ಅನವರತ
ಇತಿಹಾಸದಲ್ಲಿ ಹಸಿರಾಯಿತು
ಇವರ ಉಸಿರು ಅಮೃತ.
ಮೌಲಾಲಿ ಕೆ ಆಲಗೂರ (ಬೋರಗಿ)
ಸಾ.ಸಿಂದಗಿ ಜಿ.ವಿಜಯಪುರ
ಗುರು ಕೃಪೆ
ಕತ್ತಲೆಯ ಗೆದ್ದು ನಿಲ್ಲುವಂತ
ಸಾಮರ್ಥ್ಯವ ಒದಗಿಸಿದವನಾತ
ಜ್ಞಾನಿಯಾಗಿ ಮುನ್ನಡೆಸುವನು
ಈ ಮನುಜಕುಲಕೆ ಎಂದೆಂದು।
ಮನುಜ ಬಾಳಿನ ಪ್ರತಿ ಹೆಜ್ಜೆಗೂ ಸ್ಪೂರ್ತಿದಾಯಕನಿತ
ಗೆದ್ದೆಗೆಲ್ಲುವೆ ನೀ ಎಂದು ಹರಸಿದವನಿತ
ಅಚಲ ನಂಭಿಕೆಯನು ತುಂಬಿದಾತ।
ಗುರುವಿನ ಗುಲಾಮನಾಗುವ ತನಕ
ದೊರೆಯದಣ್ಣ ಮುಕುತಿ
ಎಂಬ ಈ ಮಾತು
ಅರಿತು ನಡೆದವರು ಖ್ಯಾತಿಯಾಗಿ ಮೆರೆದರಣ್ಣ।
ನಿಶ್ಕಲ್ಮಷ ಭಾವದಿ ಭೋಧಿಸುವನಾತ
ಶಿಷ್ಯನ ಮನಕೆ ನಾಟುವಂತೆ
ಬೆಳಕಿನ ಹಾದಿಯ ತೋರುವನಿತ।
ಬಿಳಿಹಾಳೆಯಾಗಿದ್ದ ಮನಕೆ
ಸುಂದರ ಚಿತ್ರವನು ಬಿಡಿಸಿ
ಉನ್ನತ ವ್ಯಕ್ತಿತ್ವದೆಡೆಗೆ
ಕೊಂಡೊಯ್ಯುವನೇ ಈ ಗುರು।
ಬಾಳಿನ ಸಮಸ್ಯೆಗಳ ಗಂಟನು
ಬಿಚ್ಚುತ ಭವ್ಯ ಬದುಕಿನ
ಸುಂದರ ನೋಟವ ಕಾಣುವಂತೆ
ಕೃಪೆಯ ತೋರಿ ಸಲಹುವನಿತ।
ನಾ ಪಡೆದ ಜ್ಞಾನವು
ಗುರು ಕೊಟ್ಟ ಭಿಕ್ಷೆಯು
ನಂಬಿ ನಡೆವೆ ನಾ
ಸದಾ ಗುರುವು ತೋರಿದ ಹಾದಿಯನಿಡಿದು।
ಕೈ ಬಿಡದೆ ಕಾಪಾಡುತ
ಶಿಷ್ಯನ ಏಳ್ಗೆಯ ನೋಡುತ
ಸಂತಸ ಪಡುವನೆ ನನ್ನ ಗುರು
ಈ ಉಸಿರು ನಿಲ್ಲುವ ತನಕ ಬಿಡೆನು ಗುರುವಿನಾ ಸ್ಮರಣೆಯು।
ನಮ್ಮ ಬಾಳ ಜ್ಯೋತಿ ಬೆಳಗಿದಾ ಗುರುವಿಗೆ
ವಂದಿಸುವೆ ನಾ
ಶಿರಸಾಸ್ಟಾಂಗದಿ
ಗುರುಪೌರ್ಣಿಮೆಯ ದಿನದಂದು॥
ಮಮತಾ ಗುಮಶೆಟ್ಟಿ
*ವಿಜಯಪುರ
ಅಪ್ಪನ ಅಂಗಿ ಮತ್ತು ನಾನು
ಅಪ್ಪ ಬೆಳಗಾದರೆ ಎದ್ದು ಸ್ನಾನ ಮುಗಿಸಿ ಹಣಿಗೆ ಮೂರು ಬೆರಳು ವಿಭೂತಿ ಬಳಿದು ಶಾಂತ ಚಿತ್ತನಾಗಿ ಧ್ಯಾನ ಮಾಡಿ ಎದ್ದು, ಚಹಾ ಕುಡಿದು ಸ್ವಲ್ಪ ಹೊತ್ತು ವಿಶ್ರಮಿಸಿ. ಆಸ್ಪತ್ರೆ ಕಡೆ ದಾಪು ಗಾಲು ಹಾಕಿ ಓಡುತ್ತಿದ್ದ. ಅವ್ವ ಅಪ್ಪನ ಹಿಂದೆ ಮುಂದೆ ಸುತ್ತೊದು, ಹೊರಟರೆಂದರೆ 'ಬೇಗ ಬಾ 'ಎಂದು ಹೇಳುವುದು. ಸಾಯಂಕಾಲವಾದರೆ ಅವ್ವನಿಗೆ ವಾಚಮನ ಡ್ಯೂಟಿ . ಐದುವರೆ ಆದರೆ ಸಾಕು ಗೇಟ ಹತ್ತಿರ ಹಾಜರಿ ಹಾಕಲು ಬಂದು ನಿಲ್ಲುತ್ತಿದ್ದಳು. ಸಾಯಂಕಾಲದ ಹೊತ್ತಲ್ಲಿ ಅಪ್ಪನ ಕೈಯಲ್ಲಿ ಲಕ್ಕುಂಡಿಯ ದುಂಡುಮಲ್ಲಿಗೆ , ಗದಗಿನ ತೊಂಟದಾರ್ಯ ಮಠದ ಮುಂದಿನ ತರಾವರಿ ಬಜಿ , ಹಾಗೆ ಬೆಳಗ್ಗಿನಿಂದ ಸಾಯಂಕಾಲ ಊಟ, ಟಿಫನ ಚಹಾ ಏನೇ ತಿಂದ ನಂತರ ಮೆಲುಕು ಹಾಕಲು ಎಲೆ ಅಡಿಕೆ, ಒಂದಿಷ್ಟು ಹೊಗೆಸೂಪ್ಪು , ಒಂದು ಚೀಲ ಹಿಡಿದುಕೊಂಡು ಅಪ್ಪಾ ಬರುವದನ್ನು ಕಂಡ ಅವ್ವನ ಕಣ್ಣುಗಳು ಮೊಗ್ಗು ಅರಳಿದಂತೆ ಅರಳುತ್ತಿತ್ತು. ಅದನ್ನು ನೊಡಿನ ನಾನು ಕೂಡಾ ಎದ್ದು ಓಡಿ ಹೋಗಿ ಅಪ್ಪನ ಎದುರುಗೊಂಡು , ಕೈಯಲ್ಲಿಯ ಚೀಲವನ್ನು ತಂದು ಅವ್ವನ ಕೈಗಿರಿಸಿ ಮತ್ತೇ ಅಪ್ಪನ ಹತ್ತಿರ ಓಡುತ್ತಿದ್ದೆ. ಎಷ್ಟೆ ದಣಿವಾದರೂ ಒಂದು ದಿನವೂ ತೊರಗಡದ ಸದಾ ಹಸನ್ಮುಖಿಯಾಗಿರುತ್ತಿದ್ದ. ಮುಖ ತೊಳೆದು ಚಹಾ ಕುಡಿದು ಆರಾಮ ಚೇರ ಮೇಲೆ ಅಪ್ಪ ಕುಳಿತು ಕೊಳ್ಳುವದನ್ನೇ ಕಾಯುತ್ತಿದ್ದ ನಾನು ಓಡಿಹೊಗಿ ಅವನನ್ನು ಬಾಚಿ ತಬ್ಬಿ ಅವನ ಎದೆಗೆ ತಲೆಕೊಟ್ಡು ಅಪ್ಪನ ಮೇಲೆ ಮಲಗಿ ಮಾತು ಪ್ರಾರಂಭಿಸುತ್ತಿದ್ದೆ. ನಗುತ್ತಲೇ ಅಪ್ಪ ಎಲ್ಲ ಮಾತು ಕೇಳುತ್ತ ಹುಂ ಗುಡುತ್ತಿದ್ದ.ನಿಧಾನಕ್ಕೆ ಎದ್ದು ಅಪ್ಪ ಹಾಕಿಕೊಂಡು ಬಿಚ್ಚಿಟ್ಟ ಶಟ್೯ ಮತ್ತು ಪ್ಯಾಂಟ ಹಾಕಿಕೊಂಡು ಬಂದು ಅವನ ಎದುರಿಗೆ ನಿಂತು 'ಹೇಗಿದೆ ನೊಡು' ಎಂದು ಕೇಳುತ್ತಿದ್ದೆ.ಅಪ್ಪನಿಗೊ ಎಲ್ಲಿಲ್ಲದ ಸಂಭ್ರಮ .ಎಷ್ಟ ದೊಡ್ಡವಳು ಆಗಿ ಬಿಟ್ಟಳು ನಮ್ಮ ಅವ್ವಿ ಎಂದು , ಹಾಕಿಕೊಂಡ ಬಟ್ಟೆಯನ್ನು ನಿಟಾಗಿ ತಿಡಿ ತಮ್ಮ ಪ್ಯಾಂಟಿನ ಬೆಲ್ಟನ್ನು ತಗೆದು ನನ್ನ ಸೊಂಟಕ್ಕೆ ಜೊರಾಗಿ ಬಿಗಿದು, ಈಗ ಪ್ಯಾಂಟ ಬಿಚ್ಚಲ್ಲ ಹೊಗು ಆಟ ಆಡು ಎಂದು ಹೇಳಿ ಕಳಿಸುತ್ತಿದ್ದ. ಖುಷಿಯಿಂದ ಜಿಗಿಯುತ್ತಲೇ ಹೊರ ಓಡುತ್ತಿದ್ದೆ. ಒಂದು ದಿನ ಹೀಗೆ ಅಪ್ಪ ಬರುವ ಹೊತ್ತಲ್ಲಿ ಮುಖ ಊದಿಸಿಕೊಂಡು ಹೊಸ್ತಲ ಮೆಲೆ ಕುಳಿತು ಬಿಟ್ಟಿದ್ದೆ " ಯಾಕೊ ಹಿಂಗ ಕುಂತಿ, ಎ ಏನಾಯಿತು ಅವ್ವಿ ಯಾಕ ಹಿಂಗ ಕುಂತಾಳ ಎಂದು ಕೇಳುತ್ತಲೇ, ಓಡಿ ಹೊಗಿ 'ಕೈ ಎಲ್ಲಾ ನೋವು ಬಾಬಾ. ನನಗೆ ಇವತ್ತು ಕಸ ಗುಡಿಸಲು ಅವ್ವ ಹೇಳದ್ದಳು ಎನ್ನುತ್ತಲೆ ಕೈ ತೊರಿಸುತ್ತ ಅಳತೊಡಗಿದೆ. ಅಯ್ಯೊ ಇದೆನು ಯಾವತ್ತು ಇಲ್ಲದೆ ಇವತ್ತೊಂದು ದಿನ ಕಸ ಗುಡಿಸಿದ್ದಕ್ಕೆ ಅಳೊದಾ ,ಕೈ ನೊಯತಾ ಎಂದು ಪಕ್ಕದ ಮನೆಯ ಆಂಟಿ ಕಿಟಲೆ ಶುರು ಹಚ್ಚಗೊಂಡರು. ಅಪ್ಪನಿಗೆ ತುಂಬಾ ಕೊಪ ಬಂದಿತ್ತು . ಅವ್ವನಿಗೆ " ಕರೆದು ನಿನಗೆ ಆದರೆ ಕೆಲಸ ಮಾಡು ಇಲ್ಲ ಅಂದ್ರೆ ಬಿಡು , ಅವಳಿಗೆ ಹೇಳಬೇಡಾ ಎಂದು ಗದರಿದರು, ಅವ್ವ ಮಾತನಾಡದೆ ನಗುತ್ತಲೇ " ಅಪ್ಪಾ ಮಗಳು ಚಲೊ" ಇದಿರಿ ಎಂದು ಹೊರನಡೆದಳು. ಮುಗಿತು ನೊಡಿ ಅಲ್ಲಿಗೆ ಮೊದಲ ದಿನದ ಕೆಲದ ಕೊನೆ ದಿನವಾಯಿತು. ಅಪ್ಪ ಸುಮ್ಮೆನೆ ಕುಳಿತ ಎಂದರೆ ಸಾಕು ಅವನೊಟ್ಟಿಗೆ ಮನೆಯ ಎಲ್ಲರೂ ಸೇರಿ ಆಟವಾಡುತ್ತಿದ್ದೆವು. ಆಗ ನನಗೆ ಕ್ರಿಕೇಟಿನ ಹುಚ್ಚು ಅಪ್ಪನಿಗೊ ನ್ಯೂಜ ನೊಡುವ ಕಾತರ, ಹಾಗೂ ಹೀಗೂ ಒಬ್ಬರಿಂದ ಒಬ್ಬರನ್ನು ಕ್ರಿಕೇಟ ಆಟಗಾರರನ್ನು ತೊರಿಸುತ್ತ ಕ್ರಿಕೇಟಿನ ಹುಚ್ಚು ಹಿಡಿಸಿಯೇ ಬಿಟ್ಟೆ .ನಾ ನೊಡದಿದ್ದರು ಅಪ್ಪ ನನ್ನನ್ನು ಕರೆದು ತಾವು ಕುಳಿತು ನೋಡುತ್ತಿದ್ದರು. ಈಗಲೂ ಮರೆಯಲು ಸಾಧ್ಯವಾಗದ ದಿನಗಳವು. ಎಷ್ಟು ಸಲುಗೆ ಇತ್ತೊ ಅಷ್ಟೇ ಕೋಪ ಕೂಡಾ ಇತ್ತು. ಒಂದು ದಿನ ಶಾಲೆಗೆ ಬಂಕ ಮಾಡಿ ಸಿನಿಮಾ ನೋಡಲು ಹೋಗಿದ್ದೆ, ಬರುವಷ್ಟರಲ್ಲಿ ವೇದಿಕೆ ಸಿದ್ದವಾಗಿತ್ತು, ಕಿಟಕಿಯಲ್ಲಿ ಇಣುಕುತ್ತಲೇ ನೋಡಿದೆ, ಅವ್ವ ಹಣಿಗೆ ಕೈ ಹಚ್ಚಿ ಕುಂತಿದ್ದಳು, ಅಪ್ಪ ಚೇರ ಮೇಲೆ ಕುಳಿತು ವಜ್ರಮುನಿಯ ಹಾಗೆ ಬುಸುಗುಟ್ಟುತ್ತಿದ್ದ ನೊಡಿದ ಕೂಡಲೇ ಕಾಲು ಕಿತ್ತೆ, ಅದನ್ನು ನೊಡಿದ ಅಪ್ಪ 'ಬಾ ಒಳಗೆ ಓಡ ಬೇಡಾ' ಎಂದು ಗದರಿದರು . ಹುಂ ಎಂದು ಅಳುತ್ತಲೇ ಒಳನಡೆದೆ, " ಎಲ್ಲಿಗೆ ಹೋಗಿದ್ದೆ ಎಂದು ಕೇಳಿದ ಅಪ್ಪ, ನಿಧಾನಕ್ಕೆ ಬಿಕ್ಕಳಿಸುತ್ತ, ಸೀ...ನಿಮಾ ಕ್ಕ ಎಂದು ಹೇಳಿದೆ, ಸೀನಿಮಾಕ್ಕ ಹೇಳದ ಹೊಗಿದ್ದಿ, ಅಂದಾ ಗದರುತ್ತಲೇ ಕೆಂಪು ಕಣ್ಣುಗಳು ನನ್ನನ್ನೆ ತಿನ್ನುವ ಹಾಗೆ ಇತ್ತು . ನನ್ನ ಅಳು ಇನ್ನೂ ಜೊರಾಯಿತು. ಕೈಯಲ್ಲಿದ್ದ ಒಡಗಟೆಗೆ ಇಂದ ಎರಡು ದೊಡ್ಡ ಎಟು ಬಿತ್ತು ".ಸತ್ತನೊ ,ಇನ್ನೊಮ್ಮೆ ಹಿಂಗ ಹೇಳದ ಹೊಗಂಗಿಲ್ಲ ಬಾಬಾ "ಎಂದು ಮತ್ತೊಂದು ಕೊಣಿಯಿಂದ ಓಡಿ ಹೊದೆ. ಅಪ್ಪ ಓಣಿಯಲ್ಲಾ ತಿರುಗಾಡಿ ಬಂದರು ನಾನು ಸಿಗಲೇ ಇಲ್ಲ . ಮರುದಿನ ಬೆಳಿಗ್ಗೆ 'ಅವ್ವಿ ಬಾ ಇಲ್ಲಿ ಎಂದು ಕರೆದರು ಮೆತ್ತಗೆ ಮುಖ ಕುವುಚುತ್ತಲೇ ಹೊದೆ , ಅಪ್ಪ ನನ್ನನ್ನು ತಬ್ಬಿ ಅಳ ತೊಡಗಿದ ಅಪ್ಪನೊಟ್ಟಿಗೆ ನಾನು ಮತ್ತು ಅವ್ವ ಅಳತೊಡಗಿದೆವು. ಬೆಳೆದು ಅಷ್ಟು ದೊಡ್ಡವಳಾದರು ಅಪ್ಪ ಅವ್ಬ ಒಂದು ದಿನವಾದರೂ ಹೊಡೆದದ್ದು ಗೊತ್ತೇ ಇಲ್ಲ . ಅವತ್ತು ಹೊಡೆದದ್ದಕ್ಕೆ ಅಪ್ಪನಿಗೆ ಅದು ಎಲ್ಲಿತ್ತೊ "ಅಳು" ಹೇಳದೆ ಕೇಳದೆ ಆಚೆ ಬಂದಿತ್ತು. ಅಪ್ಪನ್ನು ಅಳಿಸಿದ್ದಕ್ಕೆ ನಾನು ಅತ್ತಿದ್ದೆ. ನಮ್ಮಿಬ್ನರನ್ನು ನೊಡಿ ಅವ್ವ ಅತ್ತಿತ್ತು. ಸಮಾಧಾನಿಸುತ್ತಲೆ ತಿಳಿ ಹೇಳಿ 'ಹೊಗುವಾಗ ಹೇಳಿ ಹೊಗು' ಎಂದು ಹೇಳಿ, ಶಾಲೆಗೆ ಚಕ್ಕರ ಹಾಕಿದರೆ ಮುಂದೆ ಇದೆ ತರಹ ಶಿಕ್ಷೆಯೆಂದು ಹೇಳಿ ನಗ ತೊಡಗಿದ ಅಪ್ಪ. ಆವತ್ತಿನಿಂದ ಶಾಲೆಗೆ ಚಕ್ಕರ ಹೊಡೆದದ್ದೆ ಇಲ್ಲ. ಅಪ್ಪ ಶಿಸ್ತನ್ನು ಕಲಿಸಿದ ನನ್ನ ಮೊದಲ ಗುರುವಾದ . ದಿನ ಬೆಳಗಾದರೆ ಅಪ್ಪ ಒಂದು ಪೇಜ ನಾನು ಒಂದು ಪೇಜ ಪೇಪರ ಓದುತ್ತಿದ್ದೇವು. ತಮ್ಮನಿಗೆ ಬೈಗುಳ ತಪ್ಪುತ್ತಿರಲಿಲ್ಲ. ಮನೆಯಲ್ಲಿ ಬಿದ್ದ ಪೇಪರ ಮೇಲೆ ಎಂದಾದರೂ ನಿನ್ನ ಕಣ್ಣು ಹೊಗಿದೆಯೆ ಎಂದು ಓದುವಂತೆ ಬೈಯ್ಯುತ್ತಿದ್ದ. ತಮ್ಮ ತಲೆಗೆ ಹಚ್ಚಿಕೊಳ್ಳುತ್ತಿರಲಿಲ್ಲ. ಅಪ್ಪನ ಅಂಗಿಯ ವಾಸನೆ ಇನ್ನು ಮನದಲ್ಲಿ ಹಸಿ ಹಸಿಯಾಗಿದೆ. ನೆನಪಾದಾಗ ಅವನ ಕೊಟಿನ, ಅಂಗಿಯ ತೊಳನು ಏರಿಸಿದಾಗ ಅದೇ ಖುಷಿ ಇಮ್ಮಡಿಯಾಗುತ್ತೆ ಅಪ್ಪನ ಮುಗುಳು ನಗೆ ಕಣ್ಣಮುಂದೆ ಬಂದು ಹೊಗುತ್ತೆ. ಇವತ್ತು ಅಪ್ಪ ನನ್ನೊಂದಿಗಿಲ್ಲ ನಾನು ಮಾಡುವ ಪ್ರತಿ ಕೆಲಸದಲ್ಲಿ ಅವನ ಶಿಸ್ತು , ಸಂಯಮ ನನ್ನನ್ನು ಸದಾ ಎಚ್ಚರಿಸುತ್ತಲೇ ಇರುತ್ತೆ.ಮಿಸ್ ಯು ಅಪ್ಪಾ
ಡಾ.ಸುಜಾತಾ.ಸಿ
Friday, July 3, 2020
Thursday, July 2, 2020
Wednesday, July 1, 2020
ಭಾವ ಮಿಲನ
ಸೂರ್ಯಂಗೂ ನನಗೂ
ಅದುಏನೇನೋ ನಂಟು
ನಾಮಲಗಿದ್ದರೊಳ ಬಂದು
ನನ್ನ ಎಬ್ಬಿಸುವುದುಂಟು
ಕಿಟಕಿ ಬಾಗಿಲುಗಳೊಳಗವ
ಇಣುಕೀ ಬರುವುದು
ಉಂಟೂ.
ಬಂದರ ಹೋಗದೆ ನನ್ನ ಜೊತೆಗೇ
ದಿನವೂಇರುವುದೂ ಉಂಟೂ..
ನನ್ನಮೈಗವನಕಿರಣದೊಳು ಬಂದು
ಅಪ್ಪಿಮುದ್ದಾಡುವುದುಂಟು
ಅವನಬಿಸಿಯುಸಿರಿಗೆ ನಾ ಸೋತೂ
ಕರಗೀ ಹೋಗುವುದುಂಟು
ಅವನ ಜೊತೆ ಸೇರಲು ನಾನಿಲ್ಲೀ
ನನ್ನೇ ನಾಕಳೆಯುವುದುಂಟು
ನನ್ನೊಳಗೇ ನಾಬೆವೆತು ನಿಂತಲ್ಲೇ ನಿಲ್ಲಲಾರದೇ
ನಾನಾಗವನಾಗುವುದುಂಟು
ರಚನೆ: ಶಾಂತಾ ಕುಂಟಿನಿ ಶಕುಂತಲಾ
ಸುದ್ದಿಯ ಬಿತ್ತರಿಸುತ್ತ ನಮ್ಮ ಮನಕೀ ಮುದ ನೀಡುತ್ತಾ.. ದುಡಿಯುವ ವೀರರೆ ನಿಮಗೊಂದು ಸಲಾಮು...
ಎಲ್ಲೆಲ್ಲೋ ಚದುರಿರುವ ಮಾಹಿತಿಗಳ ಹೆಕ್ಕಿ..
ತಿದ್ದಿ ತೀಡಿ ಸುದ್ಧಿಯನ್ನಾಗಿಸಿ ನಮ್ಮೆದುರಲಿ ಬಿತ್ತರಿಸಿ..
ನಮ್ಮೂರ ಪರವೂರ ಸುದ್ಧಿಯ ಜೊತೆಯಲಿ...
ಮನರಂಜನೆಗೊಂದು, ಜ್ಞಾನದ ಹಸಿವಿಗೊಂದು ಅಂಕಣ..
ನೊಂದವರ ಕಣ್ಣೊರೆಸುವ ಕಾಯಕವಾ ಮಾಡುತ...
ತಪ್ಪು ಮಾಡಿದವರ ತಪ್ಪ ಅರ್ಥ ಮಾಡಿಸುತ್ತಾ...
ಆರೋಗ್ಯಕರ ಸಮಾಜದ ನಿರ್ಮಾಣಕ್ಕಾಗಿ ಹೋರಾಡುತ್ತಾ..
ಸುದ್ಧಿಯ ಬಿತ್ತರಿಸಲು ಮುನ್ನುಗ್ಗುವರು ಅಡೆತಡೆಯ ತೊಡೆದು ಧೀರತನದಲಿ..
ಮಳೆಯಿರಲಿ, ಚಂಡಮಾರುತ ಬರಲಿ, ಸುನಾಮಿ ಆರ್ಭಟಿಸಲಿ..
ಯುದ್ಧವೇ ಇರಲಿ, ಕರ್ಪ್ಯೂ ಹೇರಲಿ, ಸಾಂಕ್ರಾಮಿಕ ರೋಗಗಳ ಹರಡುವಿಕೆ ಇರಲಿ..
ಸುದ್ದಿಯ ಸಂಗ್ರಹ ಸಾಗುವುದು ನಿರಂತರವೂ, ವಾರದ ರಜೆಯಲ್ಲೂ ಕಾಯಕವೇ ಕೈಲಾಸ ಎನ್ನುತ್ತಾ...
ಸುದ್ದಿಯ ಬಿತ್ತರಿಸುತ್ತ ನಮ್ಮ ಮನಕೀ ಮುದ ನೀಡುತ್ತಾ..
ದುಡಿಯುವ ವೀರರೆ ನಿಮಗೊಂದು ಸಲಾಮು...
ಸಮಿತ ಶೆಟ್ಟಿ
ಸಿದ್ಧಕಟ್ಟೆ
Tuesday, June 30, 2020
ಕಣ್ಣಿಗೆ ಕಾಣುವ ಪರಮಾತ್ಮನೇ ವೈದ್ಯ
ರೋಗಿಯ ಪಾಲಿನ ದೇವನಿವನು
ಮನುಜನ ಶರೀರಕೆ ಪ್ರೇರಣೆಯ ನೀಡುವನು
ದೀರ್ಘ ಆಯುಷ್ಯ ಕರುಣಿಸಿ
ಮರುಜನ್ಮ ನೀಡಿ ಬದುಕುಳಿಸುವ ವೈದ್ಯನಾರಾಯಣನಿವನೇ ನೋಡಾ!
"ಜಯಶಾಂತಲಿಂಗೇಶ್ವರ"
ಈ ವಚನದಂತೆ ವೈದ್ಯ ನಾರಾಯಣೋ ಹರಿ ಎಂದು ಹೇಳುತ್ತಾರೆ. ಆದರೆ ವೈದ್ಯರನ್ನು ಸಾಕ್ಷಾತ್ ನಾರಾಯಣ ನೆಂದು, ರಕ್ಷಕರೆಂದು, ದೇವರ ಸಮಾನವೆಂದು ಅರ್ಥ. ವೈದ್ಯನು ಮಾನಸಿಕ ಶಾರೀರಿಕ ಕಾಯಿಲೆಗಳಿಂದ ಕಾಪಾಡುತ್ತಾನೆ ಆದ್ದರಿಂದ ಅವರಿಗೆ ದೇವರ ಸ್ಥಾನ ಕೊಡಲಾಗಿದೆ.
ನಮ್ಮ ಸಾಮಾನ್ಯ ಜನರ ಮಾನಸಿಕ ಶಾರೀರಿಕ ಕಾಯಿಲೆಗಳಿಂದ ಉಪಶಮನವನ್ನು ನೀಡಬೇಕಾದರೆ ಒಬ್ಬ ವೈದ್ಯ ತಾಯಿ ತಂದೆ ಗುರುವಿನ ಪಾತ್ರವನ್ನು ವಹಿಸಿ ಚಿಕಿತ್ಸೆ ನೀಡಬೇಕಾಗುತ್ತದೆ.
ಒಬ್ಬ ರೋಗಿ ತನ್ನ ಸಮಸ್ಯೆಯನ್ನು ಒಬ್ಬ ವೈದ್ಯನಿಗೆ ಹೇಳಿಕೊಳ್ಳಬೇಕಾದರೆ ಮುಂಚಿತವಾಗಿ ವೈದ್ಯನ ವ್ಯಕ್ತಿತ್ವ ಮಹೊನ್ನತವಾಗಿರಬೇಕು. ಹಾಗೆ ಇದ್ದಾಗಲೇ ರೋಗಿಗೆ ವೈದ್ಯನ ಮೇಲೆ ವಿಶ್ವಾಸ ರೂಪಗೊಂಡು ಆಗ ತನ್ನ ಸಮಸ್ಯೆಗಳನ್ನು ವಿವರಿಸುತ್ತಾರೆ.
ಹೀಗಿದ್ದ ಮೇಲೆ ವೈದ್ಯನಾದವನು ನಮಗೆ ದೇವದೂತನಾಗಿರಲು ಯೋಗ್ಯವಾಗಿರುವನು.
ರೋಗಿಯ ರೋಗ ಅರಿತು ಸಾಂತ್ವನದಿಂದ ಚಿಕಿತ್ಸೆ ನೀಡಿದರೆ ಆ ರೋಗಿಯ ರೋಗದಿಂದ ವಿಮುಕ್ತನಾಗಿ ಬೇಗನೆ ಗುಣಮುಖನಾಗುವ ಚೇತರಿಕೆ ಕಂಡುಕೋಳ್ಳುವನು.
ನಿಜಕ್ಕೂ ವೈದ್ಯರ ಸಾಹಸಕ್ಕೆ ಮೆಚ್ಚಲೇ ಬೇಕು ಎಷ್ಟೋ ಜನ ಬಂಜೆತನದ ಅಪಮಾನ ಹೊತ್ತು ದುಃಖ ಪಡುತ್ತಿದ್ದ ಮಹಿಳೆಯರಿಗೆ ಅವರ ಬಂಜೆತನದ ನಿವಾರಣೆ ಮಾಡಿ ತಾಯಿಯಾಗುವ ಸದ್ಭಾಗ್ಯವ ಕರುಣಿಸಿ ಬಂಜೆತನಕೆ ಮುಕ್ತಿನೀಡಿದ ವೈದ್ಯರಿಗೆ ದೊಡ್ಡ ಸಲಾಂ ಸಲ್ಲಿಸಲೇಬೇಕು. ನಿಜಕ್ಕೂ ದೇವರ ಸಮಾನರೇ ಈ ನಮ್ಮ ವೈದ್ಯರ ತಂಡವು. ಜೀವನವೇ ಬರಡಾಯಿತು ಎಂದು ತಲೆ ಮೇಲೆ ಕೈ ಹೊತ್ತು ಚಿಂತೆಗೀಡಾದ ರೋಗಿಗಳಿಗೆ ಚಿಂತೆಯ ಬಯ ದೂರ ಮಾಡಿ ದೈರ್ಯ ತುಂಬಿ ಹೊಸ ಬದುಕು ಕಟ್ಟಿಕೊಡುವವನೇ ಈ ನಮ್ಮ ಡಾಕ್ಟರ್.
ನಯ ವಿನಯ ನಾಜೂಕಿನಿಂದ ರೋಗಿಯ ಸಮಸ್ಯೆ ತಿಳಿದು ತಾಯಿಯಂತೆ ಮಮತೆ ತೋರಿ ಗುರುವಿನಂತೆ ಬುದ್ಧಿ ತಿಳಿ ಹೇಳಿ ರೋಗಿಯ ರೋಗವನ್ನು ವಿಮುಕ್ತಿ ಗೊಳಿಸುವುದೇ ಈ ವೈದ್ಯನು. ಈ ವೈದ್ಯನ ವೃತ್ತಿ ಇದು ಮಹಾನ್ ಪವಿತ್ರವಾದ ವೃತ್ತಿ .
ಮನುಜ ಕುಲಕ್ಕೆ ಸಂಜೀವಿನಿಯು ಈ ವೈದ್ಯರುಗಳು.
ಇವರ ದಿನವನ್ನು ಆಚರಿಸುವುದು ನಮ್ಮ ಕರ್ತವ್ಯವೆಂದೇ ಭಾವಿಸೋಣ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಅದ್ಧೂರಿಯಾಗಿ ಸಂಭ್ರಮದಿ ಆಚರಿಸುತ್ತಾ ಗೌರವಿಸಲೇಬೇಕು.
ಭಗವಂತನ ಇನ್ನೊಂದು ರೂಪವೀ ವೈದ್ಯ
ಬೇಗನೆ ಯಮನ ಬಳಿ ಬಿಡದೆ ನಮ್ಮ ಕಾಪಾಡುವ
ಮಹಾನ್ ವೈದ್ಯ ನಾರಾಯಣನೇ ಇತ
ಈ ವೈದ್ಯರ ದಿನಾಚರಣೆಯನ್ನು ಹೇಗೆ ಆಚರಿಸಲಾಯಿತು ಎಂಬುದು ಸ್ವಲ್ಪ ಹಿನ್ನೆಲೆ ಮಾಹಿತಿ ತಿಳಿಯೋಣವೇ*
ಹಿರಿಯ ವೈದ್ಯ ಮತ್ತು ಪಶ್ಚಿಮ ಬಂಗಾಳದ 2 ನೇ ಮುಖ್ಯಮಂತ್ರಿಯಾದ
ಡಾ॥ ಬಿಧಾನ್ ಚಂದ್ರ ರಾಯ್ ಅವರ ಜನ್ಮ ಮತ್ತು ಮರಣ ವಾರ್ಷಿಕೋತ್ಸವವು ಒಂದೇ ದಿನದಲ್ಲಿ ನಡೆಯುತ್ತದೆ. ಜುಲೈ 1 1882 ರಂದು ಜನನ,ಅದೆ ದಿನಾಂಕದಂದು 1962 ರಲ್ಲಿ ಮರಣ ಹೊಂದಿದರು ಅದಕ್ಕಾಗಿ ಅವರ ಸ್ಮರಣಾರ್ಥವಾಗಿ ಹಾಗೂ ಗೌರವಿಸಲು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ.
ಈ ದಿನ ಇಡೀ ವೈದ್ಯಕೀಯ ವೃತ್ತಿಗೆ ಗೌರವ ಸೂಚಿಸುವಂತ ದಿನವಾಗಿದೆ. 1991 ರಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನು ಕೇಂದ್ರ ಸರ್ಕಾರದ ಮಾನ್ಯತೆ ಮತ್ತು ಪ್ರತಿ ವರ್ಷ ಜುಲೈ 1 ರಂದು ಆಚರಿಸಲಾಗುತ್ತದೆ.
ಬನ್ನಿ ನಾಡಿನ ಜನರೇ ಇಂದು ವೈದ್ಯಕೀಯ ವೃತ್ತಿಗೆ ಮತ್ತು ವೈದ್ಯರಿಗೆ ಗೌರವ ಸೂಚಿಸಿ ನಮ್ಮ ಬದುಕಿನ ಮೌಲ್ಯ ಆಧಾರಗಳೇ ಇವರೆಂದು ಅರಿತು ಇವರ ದಿನ ಅತ್ಯಂತ ಭವ್ಯತೆಯಲ್ಲಿ ಆಚರಿಸೋಣ.
ಮಮತಾ ಗುಮಶೆಟ್ಟಿ
ವಿಜಯಪುರ
ಪತ್ರಿಕೆ ಎಂಬುದು ಒಂದು ನಾಡಿನ ಸಾಕ್ಷಿ ಪ್ರಜ್ಞೆ
ವಿಶ್ವಾದ್ಯಂತದ ಮಾಹಿತಿ ಕಲೆ ಹಾಕಿ
ಸಮಾಜದ ಹಿತ ದೃಷ್ಟಿಯ ಬಯಸಿ
ದಿನ ಬೆಳಗಾದರೆ ಸಾಕು
ನಮ್ಮ ಮನೆಯ ಅಂಗಳದಲ್ಲಿಹುದು
ದಿನದಸುದ್ದಿ ತಿಳಿಸುವ ಅತಿಥಿಯಾಗಿ
ಈ ದಿನ ಪತ್ರಿಕೆಯು
ಆಚರಿಸುವ ಬನ್ನಿ ಪತ್ರಿಕೆಯ ದಿನಾಚರಣೆ ನಾವೆಲ್ಲರೂ ಸೇರಿ ಇಂದು
ಪತ್ರಿಕೆ ಎಂಬುದು ಒಂದು ನಾಡಿನ ಸಾಕ್ಷಿ ಪ್ರಜ್ಞೆ ,ದೇಶದ ಅಭಿವೃದ್ಧಿ ಏಕತೆ ಸಮಾಜದಲ್ಲಿ ಸಾಮರಸ್ಯ ಕಾಪಾಡುವಲ್ಲಿ ಪತ್ರಿಕೆಗಳ ಪಾತ್ರ ಅತ್ಯಂತ ಪ್ರಮುಖವಾದದ್ದು ಬಂಡವಾಳ ಶಾಹಿಗಳ ಕಪಿ ಮುಷ್ಟಿಗೆ ಒಳಗಾಗದೆ ಸತ್ಯವನ್ನು ಸಮಾಜಕ್ಕೆ ತೋರಿಸುವಂತದ್ದು. ಪತ್ರಕರ್ತರು ಪ್ರಾಮಾಣಿಕ ನಿಷ್ಠೆ ವರದಿಗೆ ಹೆಚ್ಚಿನ ಮಹತ್ವ ನೀಡುವುದರ ಜೊತೆಗೆ ಸಮಾಜದಲ್ಲಿ ನೊಂದವರ ಬಡವರ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ಪತ್ರಕರ್ತರಿಗೆ ನಮ್ಮದೊಂದು ಹೃದಯಪೂರ್ವಕ ಧನ್ಯವಾದಗಳನ್ನು & ಅಭಿನಂದನೆಗಳನ್ನು ಅರ್ಪಿಸಲೇಬೇಕು.
ಹೃದಯಗಳ ಪಿಸು ಮಾತಿಗೂ ಹಾಗೂ ದೌರ್ಜನ್ಯದ ವಿರುದ್ಧ ಧ್ವನಿ ಒಗ್ಗೂಡಿಸಲು ಮತ್ತು ದಾಖಲಿಸಲು ಇರುವ ವೇದಿಕೆಯೇ ಈ ಪತ್ರಿಕೆಯು.
ಸಾಮಾನ್ಯ ಆಸಕ್ತಿಯ ಪತ್ರಿಕೆಗಳು ವಿಶಿಷ್ಟವಾಗಿ ಸುದ್ದಿ ಲೇಖನಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳು ಹಾಗೂ ಸ್ಥಳೀಯ ಸುದ್ದಿ ಪ್ರಕರಣಗಳು ರಾಜಕೀಯ ಘಟನೆಗಳು ವ್ಯಾಪಾರ ಮತ್ತು ಹಣಕಾಸು ಅಪರಾಧ ತೀವ್ರ ಹವಾಮಾನ ಮತ್ತು ನೈಸರ್ಗಿಕ ವಿಪತ್ತುಗಳು ಒಳಗೊಂಡಂತೆ ಆರೋಗ್ಯ ಔಷಧ ವಿಜ್ಞಾನ ಮತ್ತು ತಂತ್ರಜ್ಞಾನ ಕ್ರೀಡೆ ಮತ್ತು ಮನರಂಜನೆ ಸಮಾಜ ಆಹಾರ ಮತ್ತು ಅಡುಗೆ ಬಟ್ಟೆ ಮತ್ತು ಮನೆ ಸಾಮಾನ್ಯವಾಗಿ ಕಾಗದದ ಆ ಪ್ರಮುಖ ಗುಂಪುಗಳನ್ನು ಪ್ರತಿಯೊಂದು ಭಾಗಗಳಾಗಿ ವಿಂಗಡಿಸಿ ಪ್ರಕಟಿಸುವುದೇ ಈ ಪತ್ರಿಕೆಯು.
1843 ನೇ ಜುಲೈ 1 ರಂದು ಪ್ರಾರಂಭವಾದ *ಮಂಗಳೂರು ಸಮಾಚಾರ* ವೆಂಬ ಪತ್ರಿಕೆಯ ಕರ್ನಾಟಕದ ಪ್ರಥಮ ಪತ್ರಿಕೆ ಎಂದು ಪರಿಗಣಿಸಲಾಗಿದೆ. ಕನ್ನಡದಲ್ಲಿ ಪತ್ರಿಕೋದ್ಯಮ ಪ್ರಾರಂಭವಾದದ್ದು ಪಾಶ್ಚಾತ್ಯರ ಸಂಪರ್ಕವಾದ ಮೇಲೆ ಅವರು ಮುದ್ರಣ ಯಂತ್ರವನ್ನು ಕರ್ನಾಟಕದಲ್ಲೂ ಬಳಕೆಗೆ ತಂದರು ನಂತರ ಅವರಿಂದಲೇ ಪತ್ರಿಕೆಗಳು ಪ್ರಾರಂಭವಾದವು.
ಸಮೃದ್ಧ ಪತ್ರಿಕೆಗಳು ಆ ನಾಡಿನ ಸಂಸ್ಕೃತಿ ಹಾಗೂ ಸಾಹಿತ್ಯ ಸಮೃದ್ಧಿಯ ಪತ್ರಿಕೆ ಒಂದು ನಾಡಿನ ಸಮೃದ್ಧತೆ ಕೇವಲ ಭೌತಿಕ ವಸ್ತುಗಳಲ್ಲಿರುವುದಿಲ್ಲ ಅದು ನಾಡಿನ ಸಮೃದ್ಧತೆಯನ್ನು ಒಳಗೊಂಡಿರುತ್ತದೆ ಪತ್ರಿಕೆಗಳು ಒಂದು ವೇಳೆ ನಿಂತು ಹೋದರೆ ನಿಜಕ್ಕೂ ಸಾಂಸ್ಕೃತಿಕದ ಆತ್ಮಹತ್ಯೆ ಆಗುವುದು.
ಇತ್ತೀಚಿನ ದಿನಮಾನಗಳಲ್ಲಿ ಪತ್ರಿಕೆಗಳ ಓದುಗರೂ ಹೆಚ್ಚು ಪತ್ರಿಕೆಗಳು ಹೆಚ್ಚಾಗಿರುವುದನ್ನು ಕಾಣುವೆವು.ಪತ್ರಿಕೆಯಲ್ಲಿ ಸುದ್ದಿಯನ್ನು ಹರಿಸಬೇಕಾದರೆ ಪತ್ರಕರ್ತರ ಶ್ರಮ ಬಹಳಷ್ಟು ಇರುವುದು ಗಮನಿಸಬೇಕಾಗುತ್ತದೆ. ಏಕೆಂದರೆ ಪತ್ರಿಕೆಯಲ್ಲಿ ಪ್ರಕಟವಾಗುವ ವಿಷಯ ನಿಶ್ಚಿತವಾಗಿ ನೇರವಾಗಿ ಇರುವಂತಹ ವಿಷಯಗಳಾಗಿರುತ್ತವೆ ಹಾಗಾಗಿ ಸುಳ್ಳು ಕಲ್ಲುಗಳ ಸುದ್ದಿ ಪ್ರಕಟಿಸಲಾಗಿದೆ ಅಂತಹ ಪತ್ರಿಕೆಗಳು ಜನಮನ್ನಣೆ ಪಡೆಯಲಾಗದು. ಜನಮನ್ನಣೆಗೆ ಪಾತ್ರವಾಗಬೇಕಾದರೆ ಆ ಪತ್ರಿಕೆಯಲ್ಲಿ ತುಂಬಾ ಅಗತ್ಯ ಮತ್ತು ಮುಖ್ಯ ಸುದ್ದಿಗಳನ್ನು ಪ್ರಕಟಿಸಬೇಕು. ವಿಶ್ವಾದ್ಯಂತದ ಸುದ್ದಿಗಳನ್ನು ಒಗ್ಗೂಡಿಸಿ ಸತ್ಯನಿಷ್ಠೆ ಆದ ವಿಷಯವನ್ನು ಪ್ರಕಟಣೆ ಮಾಡಿ ಓದುಗರಿಗೆ ಜ್ಞಾನ ತುಂಬುವ ಕಾರ್ಯ ಪತ್ರಕರ್ತರದ್ದಾಗಿದೆ. ಒಂದು ವಿಷಯವನ್ನು ಸಂಗ್ರಹಣೆ ಮಾಡಬೇಕಾದರೆ ಅದಕ್ಕೆ ಅಲೆದಾಟ ಓಡಾಟ ತುಂಬಾ ಶ್ರಮದ ಕಾರ್ಯವಾಗಿರುವುದು. ದಿನ ಬೆಳಗಾದರೆ ಜನರಿಗೆ ಸುದ್ದಿ ಮುಟ್ಟಿಸುವ ಕಾರ್ಯ ಪತ್ರಿಕೆಯದ್ದಾಗಿದೆ.ಪತ್ರಿಕೆಯ ಮಹತ್ವ ಅಪಾರವಾದದ್ದು ಎಂಬುದು ಜನರಿಗೆ ಈಗಾಗಲೇ ಅರಿವಾಗಿದೆ. ಸಮಾಜದ ಒಡಕು ತೊಡಕುಗಳ ನಿರ್ಮೂಲನೆಗೆ ಧ್ವನಿ ಎತ್ತಿ ನಿಲ್ಲುವುದೇ ಈ ಪತ್ರಿಕೆ. ಅದರಲ್ಲೂ ಜನರ ಕಷ್ಟಗಳಿಗೆ ಅವರ ಭಾವಮಿಡಿತಕ್ಕೆ ಅವರ ಸ್ಪಂದನೆಗೆ ಮೊದಲು ಓ ಗೊಡುವ ಕಾರ್ಯ ಈ ಪತ್ರಿಕೆಯದ್ದೆ. ಹಾಗಾಗಿ ಈ ಪತ್ರಿಕೆಯ ಪತ್ರಕರ್ತರಿಗೆ ನಾವು ಬಹು ದೊಡ್ಡ ಸಲಾಂ ನ್ನು ಹೇಳಲೇಬೇಕು. ತಮ್ಮ ಮನೆಯ ಚಿಂತೆಯನ್ನು ಬದಿಗೊತ್ತಿ ಸಮಾಜದ ಚಿಂತೆಯನ್ನು ಮಾಡುವ ಪತ್ರಕರ್ತರಿಗೆ ಧನ್ಯವಾದಗಳು ತಿಳಿಸುತ್ತಾ .
ಹಲವಾರು ಪತ್ರಿಕೋದ್ಯಮಿಗಳಿಗೆ ಪತ್ರಿಕೆಗಳಿಗೆ ಜುಲೈ 1 ಪತ್ರಿಕಾ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲೇಬೇಕು ನಾವೆಲ್ಲ ಒಗ್ಗೂಡಿ.
ಮಮತಾ ಗುಮಶೆಟ್ಟಿ
ವಿಜಯಪುರ
ವಿಜಯಪುರ ಜಿಲ್ಲಾ ಪಂಚಾಯತ ನೂತನ ಅಧ್ಯಕ್ಷರಾಗಿ ಕಾಂಗ್ರೇಸ್ ಪಕ್ಷದ ಶ್ರೀಮತಿ ಸುಜಾತಾ ಕಳ್ಳಿಮನಿ ಆಯ್ಕೆ
ಈ ದಿವಸ ವಾರ್ತೆ
ವಿಜಯಪುರ : ವಿಜಯಪುರ ಜಿಲ್ಲಾ ಪಂಚಾಯತನ ನೂತನ ಅಧ್ಯಕ್ಷರಾಗಿ ಕಾಂಗ್ರೇಸ್ ಅಭ್ಯರ್ಥಿ ಶ್ರೀಮತಿ ಸುಜಾತಾ ಸೋಮನಾಥ ಕಳ್ಳಿಮನಿ ಅವರು ಚುನಾಯಿತರಾಗಿದ್ದಾರೆ.
ಇಂದು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿ.ಪಂ ಅಧ್ಯಕ್ಷರ ಆಯ್ಕೆಗೆ ನಡೆದ ಚುನಾವಣಾ ಸಭೆಯಲ್ಲಿ ಒಟ್ಟು 22 ಸದಸ್ಯರು ಶ್ರೀಮತಿ ಸುಜಾತಾ ಸೋಮನಾಥ ಕಳ್ಳಿಮನಿ ಅವರ ಪರವಾಗಿ ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿ ಚುನಾಯಿತಗೊಳಿಸಿದರು. ಇವರ ವಿರುದ್ಧವಾಗಿ ಯಾವುದೇ ಮತಗಳು ಚಲಾಯಿಸಲ್ಪಡಲಿಲ್ಲ.
ಇವರ ಸಮೀಪದ ಪ್ರತಿಸ್ಫರ್ಧಿ ಬಿಜೆಪಿ ಪಕ್ಷದ ಶ್ರೀ ಭೀಮಾಶಂಕರ ಮಹಾದೇವಪ್ಪ ಬಿರಾದಾರ ಅವರ ಪರವಾಗಿ ಒಟ್ಟು 20 ಮತಗಳು ಮಾತ್ರ ಚಲಾವಣೆಗೊಂಡು ವಿರುದ್ಧವಾಗಿ 22 ಮತಗಳು ಚಲಾವಣೆಗೊಂಡಿದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಇವರು ಪರಭಾವಗೊಂಡರು.
ಚುನಾವಣಾ ಪ್ರಕ್ರಿಯೆಯನ್ನು ಪ್ರಾದೇಶಿಕ ಆಯುಕ್ತರಾದ ಆದಿತ್ಯ ಆಮ್ಲನ್ ಬಿಸ್ವಾಸ್ ಅವರ ನೇತೃತ್ವದಲ್ಲಿ ನಡೆಸಲಾಯಿತು. ಇಂದು ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 1.00 ಗಂಟೆಯವರೆಗೆ ಈ ಇಬ್ಬರು ಮಾತ್ರ ಚುನಾವಣೆಗೆ ನಾಮಪತ್ರವನ್ನು ಸಲ್ಲಿಸಿದ್ದರು. ಶ್ರೀ ಭೀಮಾಶಂಕರ ಬಿರಾದಾರ ಅವರ ಎರಡು ನಾಮಪತ್ರಗಳು ಮತ್ತು ಸುಜಾತಾ ಕಳ್ಳಿಮನಿ ಅವರ ಒಂದು ನಾಮಪತ್ರ ಸಿಂಧುವಾಗಿದ್ದವು. ಒಟ್ಟು 42 ಸದಸ್ಯ ಬಲದ ಜಿಲ್ಲಾ ಪಂಚಾಯತನ ಚುಕ್ಕಾಣಿಯೂ ಕಾಂಗ್ರೇಸ್ ಕೈಗೆ ದಕ್ಕಿದ್ದು, ಬಿಜೆಪಿ ಅಭ್ಯರ್ಥಿ ಪರಾಭವಗೊಂಡಿದ್ದಾರೆ.
ಚುನಾವಣಾ ಸಭೆ ನಡೆಯುವ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀ ಭೀಮಾಶಂಕರ ಪರವಾಗಿ ಮತ ಚಲಾವಣೆ ಸಂದರ್ಭದಲ್ಲಿ ಸ್ವಲ್ಪ ಸಮಯ ಗೊಂದಲವಾಗಿದ್ದರೂ ಪ್ರಾದೇಶಿಕ ಆಯುಕ್ತರ ಎಚ್ಚರಿಕೆ ಅನ್ವಯ ಚುನಾವಣಾ ಪ್ರಕ್ರಿಯೆ ಮುಂದುವೆರಸಲಾಯಿತು. ಇದೇ ಸಂದರ್ಭದಲ್ಲಿ ಪ್ರಥಮ ಅಭ್ಯರ್ಥಿ ಭೀಮಾಶಂಕರ ಬಿರಾದಾರ ಅವರ ಪರವಾಗಿ ಮತ ಚಲಾವಣೆ ನಂತರ ಪರವಾಗಿದ್ದ ಅಭ್ಯರ್ಥಿಗಳು ಹೊರ ನಡೆದರು.
ಚುನಾವಣಾ ಸಮಯ ನಿಗದಿಪಡಿಸಿದ್ದ ಹಿನ್ನೆಲೆಯಲ್ಲಿ ಮತ್ತು ಮತದಾನಕ್ಕೆ ಅವಧಿ ನಿಗದಿ ಪಡಿಸಿದ್ದರ ಹಿನ್ನೆಲೆಯಲ್ಲಿ ಮತದಾನ ಪ್ರಕ್ರಿಯೆ ನಿಲ್ಲಿಸಲು ಅಸಾಧ್ಯ ಎಂದು ಪರಿಗಣಿಸಿ ಪ್ರಾದೇಶಿಕ ಆಯುಕ್ತರು ಮತ್ತು ಅಧ್ಯಕ್ಷಾಧಿಕಾರಿಗಳು ನಂತರದ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚನೆ ನೀಡಿದರು. ನಂತರ ನಡೆದ ಮತದಾನದಲ್ಲಿ ಸಾರವಾಡದ ಜಿಲ್ಲಾ ಪಂಚಾಯತ ಸದಸ್ಯರು ಆಗಿರುವ ಕಾಂಗ್ರೇಸ್ ಪಕ್ಷದ ಶ್ರೀಮತಿ ಸುಜಾತಾ ಸೋಮನಾಥ ಕಳ್ಳಿಮನಿ ಅವರು 22 ಮತಗಳನ್ನು ಪಡೆಯುವ ಮೂಲಕ ವಿಜಯಭವಿಯಾದರು.
ಜಿಲ್ಲಾ ಪಂಚಾಯತ ಅಧ್ಯಕ್ಷರ ಸ್ಥಾನವನ್ನು “ಹಿಂದುಳಿದ ವರ್ಗ – ಅ” ಗೆ ಮೀಸಲಿಡಲಾಗಿತ್ತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ, ಜಿ.ಪಂ ಸಿಇಒ ಗೋವಿಂದ ರೆಡ್ಡಿ, ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಅವರು ಉಪಸ್ಥಿತರಿದ್ದರು.
Monday, June 29, 2020
Sunday, June 28, 2020
Saturday, June 27, 2020
Friday, June 26, 2020
ಜಿಲ್ಲಾದ್ಯಂತ 40 ಚಾಲ್ತಿಯಲ್ಲಿರುವ ಕಂಟೇನ್ಮೆಂಟ್ ವಲಯಗಳು : ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್
ಈ ದಿವಸ ವಾರ್ತೆ
ವಿಜಯಪುರ : ಸಾಂಕ್ರಾಮಿಕವಾಗಿ ಹರಡುತ್ತಿರುವ ಕೋವಿಡ್-19 ಕುರಿತಂತೆ ಅವಶ್ಯಕ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಕಂಟೇನ್ಮೆಂಟ್ ವಲಯಗಳಲ್ಲಿ ಕೈಗೊಳ್ಳಲಾಗುತ್ತಿರುವ ಕ್ರಮಗಳ ಕುರಿತು ತಹಶಿಲ್ದಾರರು ಮತ್ತು ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಸಾಂಕ್ರಾಮಿಕವಾಗಿ ಹರಡುತ್ತಿರುವ ಕೋವಿಡ್-19 ಕುರಿತು ಅವಶ್ಯಕ ಮುನ್ನೆಚ್ಚರಿಕೆ ಕೈಗೊಳ್ಳಬೇಕು. 60ಕ್ಕಿಂತ ಮೇಲ್ಪಟ್ಟ ವಯೋಮಾನದ ವಯೋವೃದ್ಧರು, 10 ವರ್ಷದೊಳಗಿನ ಮಕ್ಕಳು ಯಾವುದೇ ಪರಿಸ್ಥಿತಿಯಲ್ಲಿ ಹೊರಗೆ ಬರದಂತೆ ಮುನ್ನೆಚ್ಚರಿಕೆ ವಹಿಸಲು ಅವರು ಮನವಿ ಮಾಡಿದ್ದಾರೆ.
ಸಾರ್ವಜನಿಕರಿಗೆ ಯಾವುದೇ ರೀತಿಯ ಪ್ರಾಥಮಿಕ ಲಕ್ಷಣಗಳು ಕಂಡುಬಂದ ತಕ್ಷಣ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಆಸ್ಪತ್ರೆಗಳಿಗೆ ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು. ಲಕ್ಷಣ ಕಂಡುಬಂದಲ್ಲಿ ಯಾವುದೇ ರೀತಿಯ ಸ್ವಯಂ ಧ್ಯಾನಕ್ಕೆ ಒಳಗಾಗದೆ ಸೂಕ್ತ ಚಿಕಿತ್ಸೆಗೆ ಒಳಪಡಬೇಕು. ಮಳೆಗಾಲ ಇರುವುದರಿಂದ ನೆಗಡಿ, ಕೆಮ್ಮು, ಜ್ವರ ಮತ್ತು ಉಸಿರಾಟ ತೊಂದರೆಗಳು ಕಂಡುಬಂದಲ್ಲಿ ಆಸ್ಪತ್ರೆಗೆ ದಾಖಲಾಗಬೇಕು. ತೀವ್ರ ಉಸಿರಾಟ ತೊಂದರೆ ಆಗುವವರೆಗೆ ವಿಳಂಬ ಮಾಡದೇ ತಕ್ಷಣ ಸಮೀಪದ ಆಸ್ಪತ್ರೆಗಳಿಗೆ ಸಂಪರ್ಕಿಸುವಂತೆ ಈ ಸಂದರ್ಭದಲ್ಲಿ ಅವರು ತಿಳಿಸಿದ್ದಾರೆ.
ಅತಿಹೆಚ್ಚು ಜನಸಂದಣಿ, ಕೊಳಗೇರಿ ಪ್ರದೇಶಗಳಲ್ಲಿ ಸಾರ್ವಜನಿಕರೆಲ್ಲರು ಎಚ್ಚರಿಕೆ ಇಂದ ಇದ್ದು ಸೂಕ್ತ ಮುಂಜಾಗೃತೆ ವಹಿಸಿಕೊಳ್ಳಬೇಕು. ಜಿಲ್ಲಾದ್ಯಂತ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಳ್ಳುವಂತೆ ತಿಳಿಸಿರುವ ಅವರು ತೀರಾ ಅವಶ್ಯಕ ಕಾರ್ಯಗಳಿದ್ದಾಗ ಮಾತ್ರ ಮನೆಯಿಂದ ಹೊರ ಬರುವಂತೆ ಮತ್ತು ಎಚ್ಚರಿಕೆ ವಹಿಸುವಂತೆ ಅವರು ತಿಳಿಸಿದ್ದಾರೆ.
ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದವರು ತಕ್ಷಣ ಆಯಾ ಪಟ್ಟಣಗಳ ನಗರ ಸ್ಥಳಿಯ ಸಂಸ್ಥೆಗಳ ಅಧಿಕಾರಿಗಳಿಗೆ ಮತ್ತು ಸ್ಥಳಿಯ ಆಡಳಿತ ವರ್ಗಕ್ಕೆ ಹಾಗೂ ಆಯಾ ಗ್ರಾಮಗಳಲ್ಲಿ ಗ್ರಾಮ ಪಂಚಾಯತಿಗೆ ಮಾಹಿತಿ ಒದಗಿಸಬೇಕು. ಕಡ್ಡಾಯವಾಗಿ 14 ದಿನಗಳ ಕಾಲ ಹೋಮ್ಕ್ವಾರಂಟೈನ್ಗೆ ಒಳಪಡುವಂತೆಯೂ ಅವರು ತಿಳಿಸಿದ್ದು, ಇಂತಹ ವ್ಯಕ್ತಿಗಳು ಬಂದ ತಕ್ಷಣ ಸಹಾಯವಾಣಿ 1077 ಗೂ ಮಾಹಿತಿ ನೀಡುವಂತೆ ಅವರು ತಿಳಿಸಿದ್ದಾರೆ.
ಜಿಲ್ಲಾದ್ಯಂತ ಕೋವಿಡ್-19 ಮುನ್ನೆಚ್ಚರಿಕೆಯಾಗಿ ಕಂಟೇನ್ಮೆಂಟ್ ವಲಯಗಳಲ್ಲಿ ತೀವ್ರ ಕಟ್ಟೆಚ್ಚರ ಒಹಿಸುವಂತೆ ಜಿಲ್ಲಾಧಿಕಾರಿಗಳು ಸಂಬಂಧಪಟ್ಟಅಧಿಕಾರಿಗಳಿಗೆ ಮತ್ತು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ. ಜಿಲ್ಲೆಯಾದ್ಯಂತ ಈವರೆಗೆ ಒಟ್ಟು 85 ಕಂಟೇನ್ಮೆಂಟ್ ವಲಯಗಳನ್ನು ಗೊತ್ತುಪಡಿಸಿದ್ದು, ಚಾಲ್ತಿಯಲ್ಲಿರುವ 40 ಕಂಟೇನ್ಮೆಂಟ್ ಝೋನ್ಗಳಿವೆ. ಈವರೆಗೆ ಒಟ್ಟು 45 ಕಂಟೇನ್ಮೆಂಟ್ ವಲಯಗಳನ್ನು ಡಿ ನೋಟಿಫಿಕೇಶನ್ ಮಾಡಲಾಗಿದೆ. ವಿಜಯಪುರ ನಗರದಲ್ಲಿ 20, ವಿಜಯಪುರ ಗ್ರಾಮಾಂತರದಲ್ಲಿ 2, ಬಬಲೇಶ್ವರದಲ್ಲಿ 1, ತಿಕೋಟಾದಲ್ಲಿ 1, ಬ,ಬಾಗೇವಾಡಿಯಲ್ಲಿ ಯಾವುದೇ ಕಂಟೇನ್ಮೆಂಟ್ ವಲಯಗಳಿಲ್ಲ, ನಿಡಗುಂದಿಯಲ್ಲಿ 2, ಕೋಲ್ಹಾರ-ಇಲ್ಲ, ಇಂಡಿ-7, ಚಡಚಣ-1, ಮುದ್ದೇಬಿಹಾಳ-4, ತಾಳಿಕೋಟೆ-ಇಲ್ಲ, ಸಿಂದಗಿ-2, ದೇವರ ಹಿಪ್ಪರಗಿ-ಇಲ್ಲ ಹೀಗೆ ಒಟ್ಟು 40 ಕಂಟೇನ್ಮೆಂಟ್ ವಲಯಗಳು ಚಾಲ್ತಿಯಲ್ಲಿವೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲಾದ್ಯಂತ ಇರುವ ಕಂಟೇನ್ಮೆಂಟ್ ವಲಯಗಳ ವಿವರ ಈ ರೀತಿಯಾಗಿದೆ. ವಿಜಯಪುರ ನಗರದ ಅಲ್ಲಾಪುರ ಬೇಸ್, ಗ್ಯಾಂಗ್ ಬಾವಡಿ, ತಾಜ್ ಬಾವಡಿ, ರಾಜಾಜಿನಗರ, ಮೇಹಬೂಬ್ನಗರ(ಕೆ.ಎಚ್.ಬಿ), ಹರಣಶಿಕಾರ ಗಲ್ಲಿ, ಗೋಳಗುಮ್ಮಟ ಎದರು, ಆದರ್ಶನಗರ, ಗಿಸಾಡಿ ಓಣಿ(ಇಂಡಿ ರಸ್ತೆ), ಮಿಷನ್ ಕಂಪೌಂಡ್, ರೈಲ್ವೆ ನಿಲ್ದಾಣ, ಅಪ್ಸರಾ ಥೇಟರ್, ಸಕಾಫ್ ರೋಜಾ, ಹಬೀಬನಗರ(ಅಥಣಿ ರಸ್ತೆ), ನವಬಾಗ, ನಾಗರಬೌಡಿ, ಜುಮ್ಮಾ ಮಸಿದಿ ಹಿಂಬಾಗ, ಎಸ್.ಪಿ ಕಾಲೋನಿ, ಶಿಕಾರಖಾನೆ, ಅಕ್ಕಿ ಕಾಲೋನಿ, ವಿಜಯಪುರ ಗ್ರಾಮಾಂತರದಲ್ಲಿ ಹೆಗಡಿಹಾಳ ತಾಂಡಾ, ಅದರಂತೆ ಬಬಲೇಶ್ವರ ತಾಲೂಕಿನ ತೋನಶಾಳ, ತಿಕೋಟಾ ತಾಲೂಕಿನ ಇಟ್ಟಂಗಿಹಾಳ, ನಿಡಗುಂದಿ ತಾಲೂಕಿನ ಬಳಬಟ್ಟಿ, ವಡವಡಗಿ ತಾಂಡಾ, ಇಂಡಿ ತಾಲೂಕಿನ ಅಥರ್ಗಾ, ಮಿರಗಿ, ಸಾಲೋಟಗಿ ರಸ್ತೆ ಇಂಡಿ, ಹಿರೆದೇವಣೂರ, ಕೋರ್ಟ ಹತ್ತಿರ ಇಂಡಿ, ಹಿಂಗಣಿ, ಹಿಂಗಣಿ(ತೋಟ), ಚಡಚಣ ತಾಲೂಕಿನ ಹಲಸಂಗಿ, ಮುದ್ದೇಬಿಹಾಳ ತಾಲೂಕಿನ ಮುದ್ದೇಬಿಹಾಳ ನಗರ, ಗಣೇಶ ನಗರ, ಮುದ್ದೇಬಿಹಾಳ, ದೋಟೆಗಲ್ಲಿ, ಮುದ್ದೇಬಿಹಾಳ, ಎರಗಲ್, ಸಿಂದಗಿ ತಾಲೂಕಿನ ಆಲಮೇಲ್, ಮತ್ತು ವಾರ್ಡ್ ನಂಬರ 07 ಹಾಗೂ ಸಿಂದಗಿಗಳಲ್ಲಿ ಕಂಟೇನ್ಮೆಂಟ್ ವಲಯಗಳನ್ನು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಅದರಂತೆ ವಿಜಯಪುರ ನಗರದ 5, ಬಬಲೇಶ್ವರದ 2, ತಿಕೋಟಾದ 3, ಬ.ಬಾಗೇವಾಡಿಯ 6, ನಿಡಗುಂದಿಯ 1, ಇಂಡಿಯ 3, ಚಡಚಣದ 3, ಮುದ್ದೇಬಿಹಾಳದ 3, ತಾಳಿಕೊಟೆಯ 7, ಸಿಂದಗಿಯ 6, ದೇವರ ಹಿಪ್ಪರಗಿಯ 6 ಕಂಟೇಂನ್ಮೆಂಟ್ ವಲಯಗಳು ಸೇರಿದಂತೆ ಒಟ್ಟು 45 ವಲಯಗಳನ್ನು ಡಿ ನೋಟಿಫಿಕೇಶನ್ ಮಾಡಲಾಗಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
Thursday, June 25, 2020
Tuesday, June 23, 2020
Monday, June 22, 2020
ಜಿಲ್ಲೆಯಲ್ಲಿ ಸೋಮವಾರ ಮತ್ತೆ 15 ಕೋವಿಡ್-19 ಪಾಸಿಟಿವ್ : ತ್ರಿಶತಕ ದಾಟಿದ ಕೋರೋನಾ
ಈ ದಿವಸ ವಾರ್ತೆ
ವಿಜಯಪುರ : ಜಿಲ್ಲೆಯಲ್ಲಿ ಈವರೆಗೆ ಒಟ್ಟು 301 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಜಿಲ್ಲಾಸ್ಪತ್ರೆಯಲ್ಲಿ 74 ರೋಗಿಗಳು ಕೋವಿಡ್-19 ಪಾಸಿಟಿವ್ ಸಕ್ರಿಯ ರೋಗಿಗಳಾಗಿದ್ದಾರೆ. ಇಂದು ಮತ್ತೆ 15 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.
ಜಿಲ್ಲೆಯ ಸೋಂಕಿತರಲ್ಲಿ ರೋಗಿ ಸಂಖ್ಯೆ 9170 (60 ವರ್ಷದ ಹೆಣ್ಣು) ರೋಗಿ ಸಂಖ್ಯೆ 9171 (20 ವರ್ಷದ ಹೆಣ್ಣು) ರೋಗಿ ಸಂಖ್ಯೆ 9172 (32 ವರ್ಷದ ಹೆಣ್ಣು) ರೋಗಿ ಸಂಖ್ಯೆ 9173 (28 ವರ್ಷದ ಹೆಣ್ಣು) ರೋಗಿ ಸಂಖ್ಯೆ 9175 (20 ವರ್ಷದ ಹೆಣ್ಣು) ರೋಗಿ ಸಂಖ್ಯೆ 9176 (70 ವರ್ಷದ ಗಂಡು) ಇವರಿಗೆ ರೋಗಿ ಸಂಖ್ಯೆ 6246 ದಿಂದ ಸೋಂಕು ತಗುಲಿರುವುದು ದೃಢಪಟ್ಟಿದೆ.
ರೋಗಿ ಸಂಖ್ಯೆ 9168 (20 ವರ್ಷದ ಹೆಣ್ಣು) ರೋಗಿ ಸಂಖ್ಯೆ 9169 (20 ವರ್ಷದ ಹೆಣ್ಣು) ರೋಗಿ ಸಂಖ್ಯೆ 9177 (30 ವರ್ಷದ ಗಂಡು) ರೋಗಿ ಸಂಖ್ಯೆ 9178 (20 ವರ್ಷದ ಗಂಡು) ರೋಗಿ ಸಂಖ್ಯೆ 9179 (52 ವರ್ಷದ ಹೆಣ್ಣು) ರೋಗಿ ಸಂಖ್ಯೆ 9182 (50 ವರ್ಷದ ಗಂಡು) ಇವರಿಗೆ ಐಎಲ್ಐ ಸೋಂಕು ತಗುಲಿರುವುದು ದೃಢಪಟ್ಟಿದೆ.
ರೋಗಿ ಸಂಖ್ಯೆ 9174 (68 ವರ್ಷದ ಹೆಣ್ಣು) ರೋಗಿ ಸಂಖ್ಯೆ 9181 (56 ವರ್ಷದ ಗಂಡು) ಇವರಿಗೆ ತೀವ್ರ ಉಸಿರಾಟದ ತೊಂದರೆ - ಸಾರಿ ಹಾಗೂ ರೋಗಿ ಸಂಖ್ಯೆ 9180 (33 ವರ್ಷದ ಗಂಡು) ಇವರಿಗೆ ರೋಗಿ ಸಂಖ್ಯೆ 6588 ದಿಂದ ಸೋಂಕು ತಗುಲಿರುವುದು ದೃಢಪಟ್ಟಿದೆ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ವಿದೇಶ ಸೇರಿದಂತೆ ಇತರ ಪ್ರದೇಶಗಳಿಂದ 34132 ಜನರು ಬಂದ ಬಗ್ಗೆ ವರದಿಯಾಗಿದ್ದು, ಇವರ ಮೇಲೆ ತೀವ್ರ ನಿಗಾ ಇಡಲಾಗಿದೆ. ಇಲ್ಲಿಯವರೆಗೆ ಒಟ್ಟು 301 ಕೋವಿಡ್ -19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದಾರೆ. 12808 ಜನರು 28 ದಿನಗಳ ಐಸೋಲೇಶನ್ ಅವಧಿ ಪೂರ್ಣಗೊಳಿಸಿದ್ದಾರೆ. 21097 ಜನರು (1 ರಿಂದ 28 ದಿನಗಳ) ರಿಪೋರ್ಟಿಂಗ್ ಅವಧಿಯಲ್ಲಿದ್ದು, ಈವರೆಗೆ ಒಟ್ಟು 7 ಜನ ಕೋವಿಡ್-19 ರೋಗಿಗಳು ಮೃತಪಟ್ಟಿದ್ದಾರೆ. 220 ಜನರು ಕೋವಿಡ್-19 ರೋಗದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, 76 ಜನರು ಆಸ್ಪತ್ರೆಯಲ್ಲಿರುವ ಕೋವಿಡ್-19 ಸಕ್ರಿಯ ರೋಗಿಗಳಾಗಿದ್ದಾರೆ. ಈವರೆಗೆ 26989 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿದ್ದು, 26612 ಜನರ ನೆಗೆಟಿವ್ ವರದಿ ಬಂದಿದೆ. ಇನ್ನೂ 76 ಜನರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರಬೇಕಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
Sunday, June 21, 2020
ಸೂರ್ಯಗ್ರಹಣವಂತೆ!
ಭೂಮಿ -ಭಾನು ಸಹಜ ಪಥದಲ್ಲಿ
ಚಲಿಸುತ್ತಿರಲು ಸರಳ ಚಲನೆಯಲ್ಲಿ
ಚಂದ್ರ ಬರಲು ಮಧ್ಯದಲ್ಲಿ
ಸೂರ್ಯಗ್ರಹಣವಂತೆ! ಧರಣಿಯಲಿ
ಬೆಳಕಿಗೆ ನೆರಳು ನೆರಳಾಗುವ ನೋಟ,
ನೆರಳು- ಬೆಳಕಿನಾಟ.
ಬಾನಬೆರಗು 'ಅವನಿ'ಗೆ ಬೆರಗಿನ ನೋಟ,
ಶಶಿ -ಭಾಸ್ಕರರಾಟ.
ಹಗಲೊಳಗೆ ಕತ್ತಲಾಗುವ
ಗಗನದ ಅದ್ಭುತ.
ಮನದೊಳಗೆ ದಿಗಿಲಾಗುವ
ಕೌತುಕದ ದಿಗಂತ.
ಮುಗಿಲ ಮೇಲಣ ಚೆಲುವು,
ಕಣ್ತುಂಬುವ ಬದಲು.
ಹೇಳುವರು ಗೊಂದಲ ಹಲವು,
ವಿವೇಕತೆಯೇ ಅದಲು-ಬದಲು.
ನೀರು ಕುಡಿಯದ ನಿರಾಹಾರ,
ಉಪವಾಸವಂತೆ.
ಭವಿಷ್ಯವೇ ಗೊತ್ತಿರದವರ
ರಾಶಿಫಲವಂತೆ.
ಬೆಡಗಿನಲ್ಲಿ ಭಾನುತೋರುವ
ಬಾನಾಟ,
ಕತ್ತಲೆ -ಬೆಳಕಿನಾಟ.
ಮುಗಿಲ ಮೇಲೆ ತೋರುವ.
ಮಿಗಿಲಾಟ,
ಅಂಧತೆಯೇ ಮೇಲಾಟ.
ಅಂಬರೀಷ ಎಸ್. ಪೂಜಾರಿ.
ಭೂಮಿ -ಭಾನು ಸಹಜ ಪಥದಲ್ಲಿ
ಚಲಿಸುತ್ತಿರಲು ಸರಳ ಚಲನೆಯಲ್ಲಿ
ಚಂದ್ರ ಬರಲು ಮಧ್ಯದಲ್ಲಿ
ಸೂರ್ಯಗ್ರಹಣವಂತೆ! ಧರಣಿಯಲಿ
ಬೆಳಕಿಗೆ ನೆರಳು ನೆರಳಾಗುವ ನೋಟ,
ನೆರಳು- ಬೆಳಕಿನಾಟ.
ಬಾನಬೆರಗು 'ಅವನಿ'ಗೆ ಬೆರಗಿನ ನೋಟ,
ಶಶಿ -ಭಾಸ್ಕರರಾಟ.
ಹಗಲೊಳಗೆ ಕತ್ತಲಾಗುವ
ಗಗನದ ಅದ್ಭುತ.
ಮನದೊಳಗೆ ದಿಗಿಲಾಗುವ
ಕೌತುಕದ ದಿಗಂತ.
ಮುಗಿಲ ಮೇಲಣ ಚೆಲುವು,
ಕಣ್ತುಂಬುವ ಬದಲು.
ಹೇಳುವರು ಗೊಂದಲ ಹಲವು,
ವಿವೇಕತೆಯೇ ಅದಲು-ಬದಲು.
ನೀರು ಕುಡಿಯದ ನಿರಾಹಾರ,
ಉಪವಾಸವಂತೆ.
ಭವಿಷ್ಯವೇ ಗೊತ್ತಿರದವರ
ರಾಶಿಫಲವಂತೆ.
ಬೆಡಗಿನಲ್ಲಿ ಭಾನುತೋರುವ
ಬಾನಾಟ,
ಕತ್ತಲೆ -ಬೆಳಕಿನಾಟ.
ಮುಗಿಲ ಮೇಲೆ ತೋರುವ.
ಮಿಗಿಲಾಟ,
ಅಂಧತೆಯೇ ಮೇಲಾಟ.
ಅಂಬರೀಷ ಎಸ್. ಪೂಜಾರಿ.
Saturday, June 20, 2020
ಒಬ್ಬ ಮಾದರಿ ವ್ಯಕ್ತಿ ನನ್ನ ತಂದೆ
“ಒಬ್ಬ ತಂದೆಯ ಮನಸ್ಸು ನಿಸರ್ಗದ ಮೇರುಕೃತಿಯಿದ್ದಂತೆ”
ಹಾಗೆ ನನ್ನ ತಂದೆ ನನ್ನ ಜೀವನದ ಒಬ್ಬ ಮಾದರಿ ವ್ಯಕ್ತಿಯಾಗಿದ್ದರು. ಅದೇ ತರಹ ಒಬ್ಬ ನಾಯಕನೂ ಮತ್ತು ಸ್ನೇಹಿತನೂ ಕೂಡ. ಅವರ ಆ ಒಂದು ಹೆಸರೇ ನನ್ನ ಜೀವನದ ಸ್ಪೂರ್ಥಿಯ ಚಿಲುಮೆ.
ನನ್ನ ತಂದೆಯ ಹೆಸರು ಬಾಬು ತಾಳಿಕೋಟಿ. ನಾನು ಯಾವಾಗಲು ಅವರನ್ನು ಅಪ್ಪಾಜಿ ಅಂತಾನೆ ಕರೆಯೋದು. ಅವರು ಒಬ್ಬ ಯಶಶ್ವಿ ಉದ್ಯಮಿಯಾಗಿದ್ದರು. ಅವರ ಸಮಯಪ್ರಜ್ಞೆ, ಪ್ರಾಮಾಣಿಕತೆ, ಕರುಣಾಮಯೀ ಹೃದಯ, ಅವರನ್ನು ಸಮಾಜದಲ್ಲಿ ಮತ್ತು ಕುಟುಂಬದಲ್ಲಿ ಒಬ್ಬ ಅತ್ಯುನ್ನತ ಗೌರವಯುತ ವ್ಯಕ್ತಿಯನ್ನಾಗಿಸಿದ್ದವು. ಅವರು ನನ್ನ ಜೀವನದ ಬಹು ವಿಶೇಷ ವ್ಯಕ್ತಿಯಾಗಿದ್ದರು. ಈಗ ಅವರು ನನ್ನೊಂದಿಗೆ ಇಲ್ಲದಿದ್ದರೂ ಅವರು ನೆನಪುಗಳು ಹಾಗೆ ನಮ್ಮೊಂದಿಗಿವೆ.
ಅವರು ಜೀವನದಲ್ಲಿ ಏನೂ ಹೇಳದೆ ಹೋದರು ಒಬ್ಬ ಒಳ್ಳೆಯ ಮನುಷ್ಯನಾಗಿ ಹೇಗೆ ಬದುಕಬೇಕೆಂಬುದ್ದನ್ನು ಕಲಿಸಿ ಹೋದರು. ಅದೇ ತರಹ ನನ್ನ ಶಿಕ್ಷಣದ ಅಭಿರುಚಿಯಲ್ಲಿ ಯಾವುದೇ ತರಹ ವಿರೋಧ ತೋರದೆ ನನ್ನ ಶೈಕ್ಷಣಿಕ ಜೀವನ ನಾನೇ ಆಯ್ಕೆ ಮಾಡಿಕೊಳ್ಳುವಲ್ಲಿ ಸಹಾಯ ಮಾಡಿದರು. ಅವರೊಂದಿಗಿನ ಆ ನನ್ನ ಅನುಭನದ ಯಾವಾಗಲೂ ಮರೆಯಲಾಗದು. ಇಂತಹ ತಂದೆಯನ್ನು ಕೊಟ್ಟ ಆ ದೇವರಿಗೆ ನಾನು ಯಾವಾಗಲೂ ಕೃತಜ್ಞಳಾಗಿದ್ದೇನೆ.
ಅವರು ನನಗೆ ತುಂಬಾ ಸಲುಗೆ ಕೊಟ್ಟಿರುವ ಕಾರಣ ನಾನು ಅವರಿಗೆ ಯಾವದೆ ಸತ್ಯ ಹೇಳಲು ಹೆದರುತ್ತಿರಲಿಲ್ಲ. ಅವರು ಯಾಕೆ ಇಷ್ಟೊಂದು ಒಡನಾಡಿಯಾಗಿದ್ದರು ಎಂಬುದು ನಮಗೆ ಇವಾಗ ಅರ್ಥವಾಗುತ್ತಿದೆ. ಅವರಷ್ಟು ನನಗೆ ಅರ್ಥ ಮಾಡಿಕೊಂಡವರು ಭಹುಷ: ಯಾರು ಇಲ್ಲ ಎನ್ನಬಹುದು. ತಪ್ಪು ಮಾಡಿದಾಗ ತಿಳಿಸಿ ಹೇಳಿದರು. ನನ್ನ ಜೀವನದ ಗುರಿಯ ಕಡೆ ನಾನು ಯಾವಾಗಲು ಲಕ್ಷ್ಯವಿರಿಸಲು ಅವರ ಪಾತ್ರ ಬಹು ಮುಖ್ಯವಾದದ್ದು. ಆದ್ದರಿಂದ ಅವ್ರು ನನ್ನ ಜೀವನದ ಒಬ್ಬ ಶಿಕ್ಷಕನೂ ಕೂಡ ಆಗಿದ್ದರು.
ಅವರ ಬಗ್ಗೆ ಹೇಳಲು ಇಷ್ಟು ಪದಗಳು ಬಹಳ ಕಡಿಮೆ. ಸಮಾಜದಲ್ಲಿ ನಾಲ್ಕು ಜನ ನೋಡಿ ಕಲಿಯುವಂತೆ ನೈತಿಕವಾಗಿ ಬದುಕಿ ತೋರಿಸಿದವರು. ಅವರು ನನ್ನೊಂದಿಗೆ ಇಲ್ಲ ಎಂದರೂ ಅವರು ಕಳಿಸಿದ ಪಾಠ, ನೈತಿಕತೆ, ಜೀವನದ ಉದ್ದೇಶಗಳು ಎಲ್ಲವನ್ನೂ ಅನುಸರಿಸುತ್ತಿದ್ದೇನೆ. ಒಬ್ಬ ಮಗಳು ಒಬ್ಬ ತಂದೆಯ ಹೆಸರು ಎತ್ತಿ ಹಿಡಿಯಲು ಏನು ಅವಶ್ಯವೋ ಎಲ್ಲವನ್ನು ಮಾಡುತ್ತಿದ್ದೇನೆ. ಅಂತಹ ತಂದೆಯ ಹಸಿ ನೆನಪುಗಳು ನನಗೆ ತುಂಬಾ ಸಂತೋಷ ಮತ್ತು ಭಾವುಕ ಮೂಕವಿಸ್ಮಯನನ್ನಾಗಿಸವೆ.
“ಅಪ್ಪನ ಕೈಗಳು ಶ್ರಮಪಟ್ಟಾಗಲೇ
ಮಕ್ಕಳ ಕೈಗಳು ಸುಂದರವಾಗಿ ಕಾಣುತ್ತವೆ."
ಸ್ಮೀ ತಾ ತಾಳಿಕೋಟಿ,
ವಿಜಯಪುರ
ಫಾದರ್ ಡೇ ಸೆಲೆಬ್ರೇಶನ್ ಫೋಟೋ ವಿತ್ ಅಪ್ಪ
💐💐💐💐💐💐💐💐💐💐💐💐💐💐💐
ತಂದೆ ಶರಣಬಸಪ್ಪಾ ಕೋಲಾರ ಜೊತೆ ಮಗಳು ವರ್ಷಾ ಕೋಲಾರ, ಕಲ್ಯಾಣ ನಗರ
💐💐💐💐💐💐💐💐💐💐💐💐💐💐
ತಂದೆ ಮಲ್ಲಿಕಾರ್ಜುನ ಕಾಳ ಶೆಟ್ಟಿ ಯೊಂದಿಗೆ ಮಗ ವಿಜುಗೌಡ
💐💐💐💐💐💐💐💐💐💐💐💐💐💐💐
ಮಿಸ್ತಿ ವಿತ್ ಅಪ್ಪ ಸಂದೀಪ ಅವರೊಂದಿಗೆ ಮುಂಬೈ
ತಂದೆ ಯೊಂದಿಗೆ ಮಂದಾಕಿನಿ ಬಿರಾದರ್, ವಿಜಯಪುರ
💐💐💐💐💐💐💐💐💐💐💐💐💐💐💐💐ತಂದೆಯೊಂದಿಗೆ ಮಕ್ಕಳಾದ ಪಲ್ಲವಿ ಮತ್ತು ಸ್ವಾತಿ
💐💐💐💐💐💐💐💐💐💐💐💐💐💐💐💐
ತಂದೆ ಬಸನಗೌಡ ಅ. ಪಾಟೀಲ ಜೊತೆ ಮಗ ಅಪ್ಪುಗೌಡ ಪಾಟೀಲ ಯತ್ನಾಳ,ವಿಜಯಪುರ
ತಂದೆ ಚಂದ್ರಕಾಂತ ಬ ಶೆಟ್ಟಿ ಯೊಂದಿಗೆ ಮಗ ಶ್ರೇಯಸ್ ಶೆಟ್ಟಿ
💐💐💐💐💐💐💐💐💐💐💐💐💐💐💐💐💐
💐💐💐💐💐💐💐💐💐💐💐💐💐
ತಂದೆ ಸೋಮನಗೌಡ ಪಾಟೀಲ ಜೊತೆ ಮಗ ಸೌರಭಗೌಡ ಪಾಟೀಲ, ಐಶ್ವರ್ಯ ನಗರ
💐💐💐💐💐💐💐💐💐💐💐💐💐
ತಂದೆ ಡಾ|| ದಯಾನಂದ ಜುಗತಿ ಜೊತೆ ಮಗ ರೋಹಿತ ಜುಗತಿ, ವಿಜಯಪುರ
💐💐💐💐💐💐💐💐💐💐💐💐💐
ತಂದೆ ಗುಂಡೂರಾವ್ ಅವರೊಂದಿಗೆ ಮಗಳು ಭಾಗ್ಯ
💐💐💐💐💐💐💐💐💐💐💐💐💐💐💐
ತಂದೆ ಪ್ರಭುಗೌಡ ಪಾಟೀಲ ಜೊತೆ ಮಗ ಪ್ರವೀಣಗೌಡ ಪಾಟೀಲ, ಆನಂದ ನಗರ ವಿಜಯಪುರ
💐💐💐💐💐💐💐💐💐💐💐💐💐💐💐
ಅಪ್ಪನೊಂದಿಗೆ ಮಗ ಶಶಿ ಗೆಣ್ಣೂರ
ತಂದೆ ಶಂಕರ್ ಬೋಲಕೋಟಾಗಿ ಜೊತೆ ಮಗ ಶಾಂತು ಬೋಲಕೋಟಾಗಿ, ಕಲ್ಯಾಣ ನಗರ
💐💐💐💐💐💐💐💐💐💐💐💐💐
ಮಕ್ಕಳೊಂದಿಗೆ ಅಪ್ಪ ಪಂಜೇಸಾಬ್ ಜಾತಗಾರ
💐💐💐💐💐💐💐💐💐💐💐💐💐💐💐💐💐
💐💐💐💐💐💐💐💐💐💐💐💐💐💐💐
💐💐💐💐💐💐💐💐💐💐💐💐💐
💐💐💐💐💐💐💐💐💐💐💐💐💐💐
ತಂದೆ ಭೀಮಸಿಂಗ್ ರಾಠೋಡ ಜೊತೆ ಮಗ ನವನೀತ ರಾಠೋಡ, ಆನಂದ ನಗರ ವಿಜಯಪುರ
💐💐💐💐💐💐💐💐💐💐💐💐💐💐
ತಂದೆ ಅಶೋಕ ಬಣ್ಣದ ಜೊತೆ ಮಗ ವಿನೂತ ಬಣ್ಣದ, ಸಜ್ಜನ ಬಡಾವಣೆ
💐💐💐💐💐💐💐💐💐💐💐💐💐💐💐
ಅಪ್ಪನೊಂದಿಗೆ ಕಳೆದ ಕೆಲ ಕ್ಷಣಗಳು ಮಾತ್ರ ನೆನಪಾಗಿ ಉಳಿದಿವಿ, ಮಿಸ್ ಯು ಅಪ್ಪ: ಅಕ್ಷತಾ
💐💐💐💐💐💐💐💐💐💐💐💐💐💐
ತಂದೆ ಡಾ|| ಎಂ ಬಿ ಪಾಟೀಲ ಜೊತೆ ಮಗ ಬಸನಗೌಡ ಪಾಟೀಲ
💐💐💐💐💐💐💐💐💐💐💐💐💐
ತಂದೆ ರಾಜು ಹಿರೇಮಠ ಜೊತೆ ಮಕ್ಕಳಾದ ವಿನಯ, ವಿಜಯ, ರೋಹನ ಹಿರೇಮಠ
💐💐💐💐💐💐💐💐💐💐💐💐💐💐💐
ತಂದೆ ಧೋಂಡಿಬಾ ಕ್ಷೀರಸಾಗರ, ಚಿಕ್ಕಪ್ಪಾ ಕಶಿನಾಥ ಹಾಗೂ ತಾಯಿ ಶೋಭಾ ಜೊತೆ ಮಗಳು ರೊಪಾ ಮಗ ಸಂತೋಷ್ ಕ್ಷೀರಸಾಗರ ಮೊಮ್ಮಗಳು ಖುಷಿ.
ಶ್ವೆತಾ.,ಶಿಲ್ಪಾ.ತಂದೆ ಭರತೇಶ.ಕಲಗೊಂಡ. ವಿಜಯಪುರ
💐💐💐💐💐💐💐💐💐💐💐💐💐
💐💐💐💐💐💐💐🙏💐💐💐💐💐💐💐
ಮುದ್ದಿ ನ ಮಗನೊಂದಿಗೆ ಶ್ರೀಕಾಂತ ನಾಟಿ ಕಾರ
💐💐💐💐💐💐💐💐💐💐💐💐💐💐
ಕಲ್ಯಾಣಶೆಟ್ಟಿ, ಕಲ್ಯಾಣಶೆಟ್ಟಿ ಚೌಕ, ವಿಜಯಪುರ
💐💐💐💐💐💐💐💐💐💐💐💐💐💐💐
ಆಕಾಶ ಬಸವರಾಜ ಕಿರಣಗಿ
💐💐💐💐💐💐💐💐💐💐💐💐💐💐💐
ನೀವು ನನ್ನ ಜೀವನದ ಪ್ರಮುಖ ವ್ಯಕ್ತಿ. ನೀವು ರಕ್ಷಣೆ ಮತ್ತು ಕಾಳಜಿಯನ್ನು ಒದಗಿಸಿದ್ದೀರಿ ಮತ್ತು ನನ್ನ ಜೀವನಕ್ಕೆ ಸ್ಥಿರತೆಯನ್ನು ತಂದಿದ್ದೀರಿ. ವಿಶ್ವದ ಅತ್ಯುತ್ತಮ ತಂದೆಗೆ ತಂದೆಯ ದಿನಾಚರಣೆಯ ಶುಭಾಶಯಗಳು..From Akshata
💐💐💐💐💐💐💐💐💐💐💐💐💐💐💐
ಮಹಾಂತೇಶ ದ್ಯಾಮಣ್ಣವರ
ಅವರ ಮಕ್ಕಳೊಂದಿಗೆ
💐💐💐💐💐💐💐💐💐💐💐💐💐💐💐
ತಂದೆ ಡಾ|| ಎಂ ಬಿ ಪಾಟೀಲ ಜೊತೆ ಮಗ ದ್ರುವ ಪಾಟೀಲ
💐💐💐💐💐💐💐💐💐💐💐💐💐💐
ತಂದೆಯೊಂದಿಗೆ ಮಮತಾ ಗುಮಶೆಟ್ಟಿ
💐💐💐💐💐💐💐💐💐💐💐💐💐💐💐
Subscribe to:
Posts (Atom)