Saturday, July 4, 2020

ಗುರು ಕೃಪೆ



ಕತ್ತಲೆಯ ಗೆದ್ದು ನಿಲ್ಲುವಂತ
ಸಾಮರ್ಥ್ಯವ ಒದಗಿಸಿದವನಾತ
ಜ್ಞಾನಿಯಾಗಿ ಮುನ್ನಡೆಸುವನು
ಈ ಮನುಜಕುಲಕೆ ಎಂದೆಂದು।

 ಮನುಜ ಬಾಳಿನ ಪ್ರತಿ ಹೆಜ್ಜೆಗೂ ಸ್ಪೂರ್ತಿದಾಯಕನಿತ
ಗೆದ್ದೆಗೆಲ್ಲುವೆ ನೀ ಎಂದು ಹರಸಿದವನಿತ
ಅಚಲ ನಂಭಿಕೆಯನು ತುಂಬಿದಾತ।

ಗುರುವಿನ ಗುಲಾಮನಾಗುವ ತನಕ
ದೊರೆಯದಣ್ಣ ಮುಕುತಿ
 ಎಂಬ ಈ ಮಾತು 
ಅರಿತು ನಡೆದವರು ಖ್ಯಾತಿಯಾಗಿ ಮೆರೆದರಣ್ಣ।

ನಿಶ್ಕಲ್ಮಷ ಭಾವದಿ ಭೋಧಿಸುವನಾತ
ಶಿಷ್ಯನ ಮನಕೆ ನಾಟುವಂತೆ
ಬೆಳಕಿನ ಹಾದಿಯ ತೋರುವನಿತ।

ಬಿಳಿಹಾಳೆಯಾಗಿದ್ದ ಮನಕೆ 
ಸುಂದರ ಚಿತ್ರವನು ಬಿಡಿಸಿ
ಉನ್ನತ ವ್ಯಕ್ತಿತ್ವದೆಡೆಗೆ
ಕೊಂಡೊಯ್ಯುವನೇ ಈ ಗುರು।

ಬಾಳಿನ ಸಮಸ್ಯೆಗಳ ಗಂಟನು 
ಬಿಚ್ಚುತ ಭವ್ಯ ಬದುಕಿನ 
ಸುಂದರ ನೋಟವ ಕಾಣುವಂತೆ
ಕೃಪೆಯ ತೋರಿ ಸಲಹುವನಿತ।

ನಾ ಪಡೆದ ಜ್ಞಾನವು
ಗುರು ಕೊಟ್ಟ ಭಿಕ್ಷೆಯು
ನಂಬಿ ನಡೆವೆ ನಾ 
ಸದಾ ಗುರುವು ತೋರಿದ ಹಾದಿಯನಿಡಿದು।

ಕೈ ಬಿಡದೆ ಕಾಪಾಡುತ
ಶಿಷ್ಯನ ಏಳ್ಗೆಯ ನೋಡುತ
ಸಂತಸ ಪಡುವನೆ ನನ್ನ ಗುರು
ಈ ಉಸಿರು ನಿಲ್ಲುವ ತನಕ ಬಿಡೆನು ಗುರುವಿನಾ ಸ್ಮರಣೆಯು।

ನಮ್ಮ ಬಾಳ ಜ್ಯೋತಿ ಬೆಳಗಿದಾ ಗುರುವಿಗೆ 
ವಂದಿಸುವೆ ನಾ
ಶಿರಸಾಸ್ಟಾಂಗದಿ
ಗುರುಪೌರ್ಣಿಮೆಯ ದಿನದಂದು॥

ಮಮತಾ ಗುಮಶೆಟ್ಟಿ
*ವಿಜಯಪುರ

No comments:

Post a Comment