Wednesday, July 1, 2020

ಸುದ್ದಿಯ ಬಿತ್ತರಿಸುತ್ತ ನಮ್ಮ ಮನಕೀ ಮುದ ನೀಡುತ್ತಾ.. ದುಡಿಯುವ ವೀರರೆ ನಿಮಗೊಂದು ಸಲಾಮು...

ಎಲ್ಲೆಲ್ಲೋ ಚದುರಿರುವ ಮಾಹಿತಿಗಳ  ಹೆಕ್ಕಿ.. 
ತಿದ್ದಿ ತೀಡಿ ಸುದ್ಧಿಯನ್ನಾಗಿಸಿ ನಮ್ಮೆದುರಲಿ ಬಿತ್ತರಿಸಿ.. 
ನಮ್ಮೂರ ಪರವೂರ ಸುದ್ಧಿಯ ಜೊತೆಯಲಿ... 
ಮನರಂಜನೆಗೊಂದು, ಜ್ಞಾನದ ಹಸಿವಿಗೊಂದು ಅಂಕಣ.. 
ನೊಂದವರ ಕಣ್ಣೊರೆಸುವ ಕಾಯಕವಾ ಮಾಡುತ...
ತಪ್ಪು ಮಾಡಿದವರ ತಪ್ಪ ಅರ್ಥ ಮಾಡಿಸುತ್ತಾ... 
ಆರೋಗ್ಯಕರ ಸಮಾಜದ ನಿರ್ಮಾಣಕ್ಕಾಗಿ ಹೋರಾಡುತ್ತಾ.. 

ಸುದ್ಧಿಯ ಬಿತ್ತರಿಸಲು ಮುನ್ನುಗ್ಗುವರು  ಅಡೆತಡೆಯ ತೊಡೆದು ಧೀರತನದಲಿ.. 
ಮಳೆಯಿರಲಿ, ಚಂಡಮಾರುತ ಬರಲಿ, ಸುನಾಮಿ ಆರ್ಭಟಿಸಲಿ..
ಯುದ್ಧವೇ ಇರಲಿ, ಕರ್ಪ್ಯೂ ಹೇರಲಿ,  ಸಾಂಕ್ರಾಮಿಕ ರೋಗಗಳ ಹರಡುವಿಕೆ ಇರಲಿ.. 
ಸುದ್ದಿಯ ಸಂಗ್ರಹ ಸಾಗುವುದು ನಿರಂತರವೂ, ವಾರದ ರಜೆಯಲ್ಲೂ  ಕಾಯಕವೇ ಕೈಲಾಸ ಎನ್ನುತ್ತಾ...
ಸುದ್ದಿಯ ಬಿತ್ತರಿಸುತ್ತ ನಮ್ಮ ಮನಕೀ ಮುದ ನೀಡುತ್ತಾ.. 
ದುಡಿಯುವ ವೀರರೆ ನಿಮಗೊಂದು ಸಲಾಮು...

ಸಮಿತ ಶೆಟ್ಟಿ 
ಸಿದ್ಧಕಟ್ಟೆ

No comments:

Post a Comment