ಸೂರ್ಯಂಗೂ ನನಗೂ
ಅದುಏನೇನೋ ನಂಟು
ನಾಮಲಗಿದ್ದರೊಳ ಬಂದು
ನನ್ನ ಎಬ್ಬಿಸುವುದುಂಟು
ಕಿಟಕಿ ಬಾಗಿಲುಗಳೊಳಗವ
ಇಣುಕೀ ಬರುವುದು
ಉಂಟೂ.
ಬಂದರ ಹೋಗದೆ ನನ್ನ ಜೊತೆಗೇ
ದಿನವೂಇರುವುದೂ ಉಂಟೂ..
ನನ್ನಮೈಗವನಕಿರಣದೊಳು ಬಂದು
ಅಪ್ಪಿಮುದ್ದಾಡುವುದುಂಟು
ಅವನಬಿಸಿಯುಸಿರಿಗೆ ನಾ ಸೋತೂ
ಕರಗೀ ಹೋಗುವುದುಂಟು
ಅವನ ಜೊತೆ ಸೇರಲು ನಾನಿಲ್ಲೀ
ನನ್ನೇ ನಾಕಳೆಯುವುದುಂಟು
ನನ್ನೊಳಗೇ ನಾಬೆವೆತು ನಿಂತಲ್ಲೇ ನಿಲ್ಲಲಾರದೇ
ನಾನಾಗವನಾಗುವುದುಂಟು
ರಚನೆ: ಶಾಂತಾ ಕುಂಟಿನಿ ಶಕುಂತಲಾ
No comments:
Post a Comment