Saturday, July 25, 2020

ಪಂಚಮಿ

 

ಆಸೆಯ  ಮನದಲಿ 
ಜೀಕುತಾ  ಜೋಕಾಲಿ
ಪಂಚಮಿ ಬಂದಿತು ನಾಗರಠೇವಲಿ 
ಸಡಗರ ಸಂಭ್ರಮತಂದಿತು ಊರಲ್ಲಿ

ನಾಡಿನ ಹಿರಿಮೆಯ ಸಿರಿಗೆ
ಶ್ರಾವಣ ಮಾಸದ ಸೊಗಡಿಗೆ
ಪಂಚಮಿ ನಿಂತಿದೆ ಚೆಲುವಾಗಿ
ಹರುಷದಿತೂಗಿದೆ ಉಯ್ಯಾಲೆಯಾಗಿ

ತಂಗಿಯ ತ್ಯಾಗವ ಹೇಳುತ
ಅಣ್ಣನ ಪ್ರೀತಿಯ ಸಾರುತ
ಸರ್ಪಯಜ್ಞವ ನೆನಪಿಸುತ 
ಹಾಲುಹರಿಯುತ್ತಿದೆ ಸಂಸ್ಕಾರ ತೋರುತ

ಊರಿಗೆ ಬರಲು ಹಾದಿಯಾಗಿ 
ಹೆಣ್ಣಿಗೆ ಆಸೆಯ ತವರಾಗಿ 
ಸಂಸ್ಕೃತಿ ಸಾರಲು ನೆಪವಾಗಿ 
ಪಂಚಮಿ ಬಂದಿದೆ ಬಂಧುವಾಗಿ

ಬಳೆಗಳತೊಟ್ಟು ಸೀರೆಯನ್ನುಟ್ಟು
ಆಡುತ ಹಾಡುತ ಗೆಳತಿಯರೊಟ್ಟು 
ಸಂಭ್ರಮಿಸುವ ಹೆಣ್ಣಿನ ಗುಟ್ಟು
ಪಂಚಮಿಯಾಗಿದೆ ಹಬ್ಬದ ತಿನಿಸುಗಳೊಟ್ಟು

ಅಂಬರೀಷ್ ಎಸ್. ಪೂಜಾರಿ. 

No comments:

Post a Comment