ರೋಗಿಯ ಪಾಲಿನ ದೇವನಿವನು
ಮನುಜನ ಶರೀರಕೆ ಪ್ರೇರಣೆಯ ನೀಡುವನು
ದೀರ್ಘ ಆಯುಷ್ಯ ಕರುಣಿಸಿ
ಮರುಜನ್ಮ ನೀಡಿ ಬದುಕುಳಿಸುವ ವೈದ್ಯನಾರಾಯಣನಿವನೇ ನೋಡಾ!
"ಜಯಶಾಂತಲಿಂಗೇಶ್ವರ"
ಈ ವಚನದಂತೆ ವೈದ್ಯ ನಾರಾಯಣೋ ಹರಿ ಎಂದು ಹೇಳುತ್ತಾರೆ. ಆದರೆ ವೈದ್ಯರನ್ನು ಸಾಕ್ಷಾತ್ ನಾರಾಯಣ ನೆಂದು, ರಕ್ಷಕರೆಂದು, ದೇವರ ಸಮಾನವೆಂದು ಅರ್ಥ. ವೈದ್ಯನು ಮಾನಸಿಕ ಶಾರೀರಿಕ ಕಾಯಿಲೆಗಳಿಂದ ಕಾಪಾಡುತ್ತಾನೆ ಆದ್ದರಿಂದ ಅವರಿಗೆ ದೇವರ ಸ್ಥಾನ ಕೊಡಲಾಗಿದೆ.
ನಮ್ಮ ಸಾಮಾನ್ಯ ಜನರ ಮಾನಸಿಕ ಶಾರೀರಿಕ ಕಾಯಿಲೆಗಳಿಂದ ಉಪಶಮನವನ್ನು ನೀಡಬೇಕಾದರೆ ಒಬ್ಬ ವೈದ್ಯ ತಾಯಿ ತಂದೆ ಗುರುವಿನ ಪಾತ್ರವನ್ನು ವಹಿಸಿ ಚಿಕಿತ್ಸೆ ನೀಡಬೇಕಾಗುತ್ತದೆ.
ಒಬ್ಬ ರೋಗಿ ತನ್ನ ಸಮಸ್ಯೆಯನ್ನು ಒಬ್ಬ ವೈದ್ಯನಿಗೆ ಹೇಳಿಕೊಳ್ಳಬೇಕಾದರೆ ಮುಂಚಿತವಾಗಿ ವೈದ್ಯನ ವ್ಯಕ್ತಿತ್ವ ಮಹೊನ್ನತವಾಗಿರಬೇಕು. ಹಾಗೆ ಇದ್ದಾಗಲೇ ರೋಗಿಗೆ ವೈದ್ಯನ ಮೇಲೆ ವಿಶ್ವಾಸ ರೂಪಗೊಂಡು ಆಗ ತನ್ನ ಸಮಸ್ಯೆಗಳನ್ನು ವಿವರಿಸುತ್ತಾರೆ.
ಹೀಗಿದ್ದ ಮೇಲೆ ವೈದ್ಯನಾದವನು ನಮಗೆ ದೇವದೂತನಾಗಿರಲು ಯೋಗ್ಯವಾಗಿರುವನು.
ರೋಗಿಯ ರೋಗ ಅರಿತು ಸಾಂತ್ವನದಿಂದ ಚಿಕಿತ್ಸೆ ನೀಡಿದರೆ ಆ ರೋಗಿಯ ರೋಗದಿಂದ ವಿಮುಕ್ತನಾಗಿ ಬೇಗನೆ ಗುಣಮುಖನಾಗುವ ಚೇತರಿಕೆ ಕಂಡುಕೋಳ್ಳುವನು.
ನಿಜಕ್ಕೂ ವೈದ್ಯರ ಸಾಹಸಕ್ಕೆ ಮೆಚ್ಚಲೇ ಬೇಕು ಎಷ್ಟೋ ಜನ ಬಂಜೆತನದ ಅಪಮಾನ ಹೊತ್ತು ದುಃಖ ಪಡುತ್ತಿದ್ದ ಮಹಿಳೆಯರಿಗೆ ಅವರ ಬಂಜೆತನದ ನಿವಾರಣೆ ಮಾಡಿ ತಾಯಿಯಾಗುವ ಸದ್ಭಾಗ್ಯವ ಕರುಣಿಸಿ ಬಂಜೆತನಕೆ ಮುಕ್ತಿನೀಡಿದ ವೈದ್ಯರಿಗೆ ದೊಡ್ಡ ಸಲಾಂ ಸಲ್ಲಿಸಲೇಬೇಕು. ನಿಜಕ್ಕೂ ದೇವರ ಸಮಾನರೇ ಈ ನಮ್ಮ ವೈದ್ಯರ ತಂಡವು. ಜೀವನವೇ ಬರಡಾಯಿತು ಎಂದು ತಲೆ ಮೇಲೆ ಕೈ ಹೊತ್ತು ಚಿಂತೆಗೀಡಾದ ರೋಗಿಗಳಿಗೆ ಚಿಂತೆಯ ಬಯ ದೂರ ಮಾಡಿ ದೈರ್ಯ ತುಂಬಿ ಹೊಸ ಬದುಕು ಕಟ್ಟಿಕೊಡುವವನೇ ಈ ನಮ್ಮ ಡಾಕ್ಟರ್.
ನಯ ವಿನಯ ನಾಜೂಕಿನಿಂದ ರೋಗಿಯ ಸಮಸ್ಯೆ ತಿಳಿದು ತಾಯಿಯಂತೆ ಮಮತೆ ತೋರಿ ಗುರುವಿನಂತೆ ಬುದ್ಧಿ ತಿಳಿ ಹೇಳಿ ರೋಗಿಯ ರೋಗವನ್ನು ವಿಮುಕ್ತಿ ಗೊಳಿಸುವುದೇ ಈ ವೈದ್ಯನು. ಈ ವೈದ್ಯನ ವೃತ್ತಿ ಇದು ಮಹಾನ್ ಪವಿತ್ರವಾದ ವೃತ್ತಿ .
ಮನುಜ ಕುಲಕ್ಕೆ ಸಂಜೀವಿನಿಯು ಈ ವೈದ್ಯರುಗಳು.
ಇವರ ದಿನವನ್ನು ಆಚರಿಸುವುದು ನಮ್ಮ ಕರ್ತವ್ಯವೆಂದೇ ಭಾವಿಸೋಣ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಅದ್ಧೂರಿಯಾಗಿ ಸಂಭ್ರಮದಿ ಆಚರಿಸುತ್ತಾ ಗೌರವಿಸಲೇಬೇಕು.
ಭಗವಂತನ ಇನ್ನೊಂದು ರೂಪವೀ ವೈದ್ಯ
ಬೇಗನೆ ಯಮನ ಬಳಿ ಬಿಡದೆ ನಮ್ಮ ಕಾಪಾಡುವ
ಮಹಾನ್ ವೈದ್ಯ ನಾರಾಯಣನೇ ಇತ
ಈ ವೈದ್ಯರ ದಿನಾಚರಣೆಯನ್ನು ಹೇಗೆ ಆಚರಿಸಲಾಯಿತು ಎಂಬುದು ಸ್ವಲ್ಪ ಹಿನ್ನೆಲೆ ಮಾಹಿತಿ ತಿಳಿಯೋಣವೇ*
ಹಿರಿಯ ವೈದ್ಯ ಮತ್ತು ಪಶ್ಚಿಮ ಬಂಗಾಳದ 2 ನೇ ಮುಖ್ಯಮಂತ್ರಿಯಾದ
ಡಾ॥ ಬಿಧಾನ್ ಚಂದ್ರ ರಾಯ್ ಅವರ ಜನ್ಮ ಮತ್ತು ಮರಣ ವಾರ್ಷಿಕೋತ್ಸವವು ಒಂದೇ ದಿನದಲ್ಲಿ ನಡೆಯುತ್ತದೆ. ಜುಲೈ 1 1882 ರಂದು ಜನನ,ಅದೆ ದಿನಾಂಕದಂದು 1962 ರಲ್ಲಿ ಮರಣ ಹೊಂದಿದರು ಅದಕ್ಕಾಗಿ ಅವರ ಸ್ಮರಣಾರ್ಥವಾಗಿ ಹಾಗೂ ಗೌರವಿಸಲು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ.
ಈ ದಿನ ಇಡೀ ವೈದ್ಯಕೀಯ ವೃತ್ತಿಗೆ ಗೌರವ ಸೂಚಿಸುವಂತ ದಿನವಾಗಿದೆ. 1991 ರಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನು ಕೇಂದ್ರ ಸರ್ಕಾರದ ಮಾನ್ಯತೆ ಮತ್ತು ಪ್ರತಿ ವರ್ಷ ಜುಲೈ 1 ರಂದು ಆಚರಿಸಲಾಗುತ್ತದೆ.
ಬನ್ನಿ ನಾಡಿನ ಜನರೇ ಇಂದು ವೈದ್ಯಕೀಯ ವೃತ್ತಿಗೆ ಮತ್ತು ವೈದ್ಯರಿಗೆ ಗೌರವ ಸೂಚಿಸಿ ನಮ್ಮ ಬದುಕಿನ ಮೌಲ್ಯ ಆಧಾರಗಳೇ ಇವರೆಂದು ಅರಿತು ಇವರ ದಿನ ಅತ್ಯಂತ ಭವ್ಯತೆಯಲ್ಲಿ ಆಚರಿಸೋಣ.
ಮಮತಾ ಗುಮಶೆಟ್ಟಿ
ವಿಜಯಪುರ