Monday, March 31, 2025
Sunday, March 30, 2025
ಮಾಮರವು ಚಿಗರೋಡೆದು ಮಾವು ನಗುತಿಹುದು, ಹೊಸ ವರುಷ ಬರುತಿಹುದು..
ಯುಗಾದಿ ಹಬ್ಬವು ಯುಗ ಯುಗ ಕಳೆದರು, ತನ್ನ ವೈಶಿಷ್ಟವನ್ನು ಬದಲಾವಣೆ ಮಾಡಿಕೊಳ್ಳದು. ತನ್ನದೇ ವಿಶೇಷ ಅನುಭವಗೊಳ್ಳನ್ನು ನೀಡುತ್ತಾ.. ಸಿಹಿ ಕಹಿ ಹುಳಿ ರುಚಿ ನೀಡುತ್ತಾ .. ನಿಸರ್ಗದ ಸೌಂದರ್ಯಕ್ಕೆ ಕಳೆದು ಹೋಗುವ ಅನುಭವ ಕೊಡುತ್ತದೆ. ಈ ಯುಗಾದಿ ಆಚರಣೆ ಒಂದ್ದೆಡೆ ಆದರೆ ನಿಸರ್ಗದ ಸೌಂದರ್ಯದ ಬದಲಾವಣೆಗೊಂಡು ಹಸಿರಾಗಿ ಕಂಗೊಳಿಸುವ ಕಾಲ. ಯುಗಾದಿ ಸಮಯ ಅದಲ್ಲದೆ ಮುಖ್ಯವಾಗಿ ಹಿಂದೂ ಧರ್ಮದ ಹೊಸ ವರ್ಷದ ವರ್ಷಚಾರಣೆ...
ಯುಗಾದಿ ಹಬ್ಬವು ತುಂಬಾ ವಿಶೇಷ ನಿಸರ್ಗ ಸೌಂದರ್ಯದ ಬದಲಾವಣೆ ಬಗ್ಗೆ ಹೇಳಿದರೆ.. ಬಾಡಿದ ಮರಗಳೆಲ್ಲಾ ಚಿಗುರೋಡೆದು ಕಿರುನಗೆ ಬೀರಲು ಹಚ್ಚು ಹಸಿರಾಗಿ ತಂಪಾದ ಗಾಳಿ ಬಿಸುತ್ತಾ ಹೊಸ ಸೊಬಗನ್ನು ಈ ಸೃಷ್ಟಿಯಲ್ಲಿ ಸೃಷ್ಟಿಸುತ್ತವೇ. ಮಾಮರದ ಮರದಲ್ಲಿ ಮಾವಿನ ಕಾಯಿಗಳು.ಹೂ ಕಾಯಿಗಳ ಗೊಂಚಲು ತೋರಣದಂತೆ ಮರಕ್ಕೆ ತೂಗು ಬೀಳುವ ದೃಶ್ಯ ಯುಗಾದಿಯಲ್ಲಿ ಕಾಣುತ್ತೆವೆ..ಮಾಮರದಲ್ಲಿ ಹಸಿರು ಮಾವಿನ ಕಾಯಿಗಳ ನೋಡಿದರೆ ಬಸರಿ ಬಯಕೆಯಂತೆ ಎಲ್ಲರಿಗೂ ಮಾವಿನ ಕಾಯಿಯ ರುಚಿ ನೋಡುವ ಆಸೆ.ಉಂಟಾಗುವುದು. ಹುಳಿ ಮಾವಿನ ಕಾಯಿಯನ್ನ ಕಚ್ಚಿ ತಿನ್ನುವ ಹುಚ್ಚು ಆಸೆ ಶುರು ಆಗುವುದು..
ಈ ಪ್ರಕೃತಿ ಸೊಬಗಿನ ಸೌಂದರ್ಯ
ವರ್ಣಿಸಲು ಯುಗಾದಿ ಹಬ್ಬವೇ ಸಾಕ್ಷಿಯಾಯಿತು..
ಒಣಗಿದ ಮರದಲ್ಲಿ ಹಸಿರು ಎಲೆಗಳು ನೋಡದಂತೆ ಬದಲಾಗುವ ಈ ದೃಶ್ಯಕ್ಕೆ ಈ ಯುಗಾದಿಯೇ ನೈಜ ಸಾಕ್ಷಿ ಮನುಷ್ಯನ ಜೀವನದಲ್ಲಿ ಸಹ ಕಷ್ಟ ಮತ್ತು ಸುಖಗಳ ಪುಟಗಳಂತೆ ಬಂದು ಹೋಗುವುವು.. ಇದಕ್ಕೆ ವರುಷದ ಅನುಭವ ಹಳೇದನ್ನು ಕಳೆದು.ಹೊಸತನದ ಚಿಗುರು ಕಾಣುಯುದು. ಮನುಷ್ಯ ಅಥವಾ ಜೀವಿಯಲ್ಲಿ ಕಷ್ಟ ಸುಖಗಳು ಪುಟಗಳ ಬರುವುವು ಅದರಂತೆ ಅವು ಸಮನಾಗಿ ಜೀವನದಲ್ಲಿ ಹಂಚಿಕೆ ಆಗದಿದ್ದರು.. ಎರಡು ತಿರುವು ನಾವು ಕಾಣೇ ಕಾಣುತ್ತೆವೆ ಅದೇ ಕಾರಣಕ್ಕೆ ಈ ಯುಗಾದಿ ಹಬ್ಬದ ದಿನದಂದು ಬೇವು ಬೆಲ್ಲ ತಿಂದು ಸಿಹಿ ಕಹಿಯ ಅನುಭವ ಪಡೆಯುತ್ತೇವೆ.
ಹಿಂದಿನ ನೆನಪು ಮುಂದಿನ ಕನಸು ಸಿಹಿ ಕಹಿಗೆ ಸಾಕ್ಷಿಯಾಗಿ ಬೇವು ಬೆಲ್ಲದ ರುಚಿ ಸವಿಯುತ್ತೇವೆ..ವರ್ಷದ ಚಾಲನೆ ಬೇಸಿಗೆಯ ಬಿಸಿಲು, ಮಳೆಯ ಬಿರುಗಾಳಿ,ಚಳಿಯ ನಡುಕ ತಡೆದುಕೊಂಡು ಪ್ರಕೃತಿಗೆ ಹೊಂದಿಕೊಂಡು ಹೋಗುವ ಈ ಮನುಷ್ಯರಿಗೆ ಈ ಯುಗಾದಿಯಯೇ ಅವರಿಗೆ ಉಡುಗೊರೆ.ಹೊಸ ವರ್ಷ ಬರುವಾಗಲೆ ಕಷ್ಟ ಸುಖದ ಭಾರಿ ಅನುಭವ ನೀಡುತ್ತದೆ.
ಪ್ರತೀಕ್ಷಾ ನಿಡೋಣಿ
ವಿಜಯಪುರ
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
Saturday, March 29, 2025
ಸಿಹಿ-ಕಹಿ ಬೆಸಗುವ ಹಬ್ಬ ಯುಗಾದಿ
ಹೂವುಗಳ ರಾಜ ಗುಲಾಬಿ, ಹಣ್ಣುಗಳ ರಾಜ ಮಾವು, ಪ್ರಾಣಿಗಳ ರಾಜ ಸಿಂಹ, ಪಕ್ಷಿಗಳ ರಾಜ ಜುಜುರಾಣ ಹಾಗೂ ಋತುಗಳ ರಾಜ ವಸಂತ ಋತು. ಈ ಋತುವೇ ನಮ್ಮ ದೇಶದ ಹೊಸ ವರ್ಷ. ಹೌದು ಪ್ರಂಪಚಾದ್ಯಂತ ಜನವರಿ 1ರಂದು ಹೊಸ ವರ್ಷಾಚರಣೆ ಮಾಡಿದರೇ ನಮ್ಮ ಭಾರತೀಯರ ಪಾಲಿಗೆ ಯುಗಾದಿಯೇ ಹೊಸ ವರ್ಷಾಚರಣೆ. ಯುಗ ಎಂದರೆ ಅವಧಿ, ಆದಿ ಅಂದರೆ ಆರಂಭ ಹೊಸ ಯುಗದ ಆರಂಭವೇ ಯುಗಾದಿ. ಚಳಿಗಾಲದ ತರುವಾಯ ವಸಂತ ಋತುವಿನ ಪ್ರಾರಂಭವು ಗಿಡ-ಮರಗಳಲ್ಲಿ ಹೊಸತನದ ಚಿಗುರನ್ನು ನೀಡುತ್ತದೆ. ಜೀವನದಲ್ಲಿ ಬರುವಂತಹ ಸಿಹಿ-ಕಹಿ ಘಟನೆಗಳನ್ನು ಸರಿ ಸಮಾನವಾಗಿ ಎದುರಿಸುವ ಸಂದೇಶ ಸಾರುವ ಆಚರಣೆ, ಹಳೆಯ ಕೆಟ್ಟ ಘಟನೆಗಳಿಂದ ಹೊಸತನದಲ್ಲಿ ಹೆಜ್ಜೆಯಿಡುವುದರ ಸಂಕೇತವಾಗಿ ಈ ಹಬ್ಬವನ್ನು ದಿನ ಬೇವು-ಬೆಲ್ಲ ಸೇವಿಸಲಾಗುವುದು.
ಪುರಾಣಗಳ ಪ್ರಕಾರ ಬ್ರಹ್ಮ ದೇವರು ಬ್ರಹ್ಮಾಂಡವನ್ನು ಸೃಷ್ಟಿಸಲು ಪ್ರಾರಂಭ ಮಾಡಿದ್ದು ಈ ಯುಗಾದಿ ದಿನ ದಿಂದ ಎಂದು ಹೇಳಲಾಗುತ್ತದೆ. ಆದ್ದರಿಂದ ಯುಗಾದಿಯ ದಿನವನ್ನು ಬ್ರಹ್ಮಾಂಡ ಸೃಷ್ಟಿಯ ಮೊದಲ ದಿನವೆಂದು ನಂಬಲಾಗಿದೆ.
ಹೊಸ ವರ್ಷಾಚರಣೆಯ ಒಂದು ಹಬ್ಬ ನಾಮ ಹಲವು: ಯುಗಾದಿ ಹಬ್ಬವನ್ನು ದೇಶಾದ್ಯಂತ ಹೊಸ ವರ್ಷಾಚರಣೆಯ ಸಂಕೇತವಾಗಿ ಆಚರಿಸಿದರೂ ಸಹ ಎಲ್ಲ ಕಡೆ ಆಚರಣೆ ಯುಗಾದಿ ಎಂಬ ನಾಮದ ಬದಲು ವಿಭಿನ್ನ ನಾಮಗಳಿಂದ ಆಚರಿಸಲಾಗುತ್ತದೆ. ಮಹಾರಾಷ್ಟ್ರ, ಮಧ್ಯಪ್ರದೇಶ ರಾಜ್ಯಗಳಲ್ಲಿ, ದಾದ್ರಾ ಮತ್ತು ನಗರ ಹವೇಲಿ ಮತ್ತು ದಿಯು ಮತ್ತು ದಮನ್ ಕೇಂದ್ರಾಡಳಿತ ಪ್ರದೇಶಗಳಲ್ಲಿ ‘ಗುಡಿ ಪಾಡ್ವಾ' ಎಂಬ ಹೆಸರಿನಿಂದ ಯುಗಾದಿ ಹಬ್ಬವನ್ನು ಆಚರಿಸಿದರೆ, ಪಂಜಾಬ್‍ನಲ್ಲಿ ‘ಬೈಸಾಖಿ', ತಮಿಳುನಾಡಿನಲ್ಲಿ ‘ಪುತಾಂಡು', ರಾಜಸ್ಥಾನದಲ್ಲಿ ‘ಥಾಪನಾ' ಮತ್ತು ಕರ್ನಾಟಕದಲ್ಲಿ ‘ಯುಗಾದಿ’ ಎಂಬ ಹೆಸರಿನಿಂದ ಈ ಹಬ್ಬವನು ಆಚರಿಸಲಾಗುತ್ತದೆ.
ವಸಂತ ಋತುವಿನಲ್ಲಿ ಗಿಡಮರಗಳ ಮೇಲೆ ಹಸಿರು ಹೊದಿಕೆ, ಹೂವು, ಹಣ್ಣು ಕಾಯಿಗಳ ಸಂಪತ್ತು, ಹೂದೋಟಗಳಲ್ಲಿ ಉದ್ಯಾನವನಗಳಲ್ಲಿ ಬೇರೆ ಬೇರೆ ಪ್ರದೇಶಗಳಿಂದ ಬರುವ ವಲಸೆ ಪಕ್ಷಿಗಳ ಕಲರವ ನೋಡುವುದೇ ಮನಸ್ಸಿಗೆ ಮುದ ನೀಡುತ್ತದೆ. ಪ್ರಕೃತಿ ಶೋಬೆಯನ್ನು ಇಮ್ಮಡಿಗೊಳಿಸುವ ಈ ಋತುವನ್ನು “ಋತುಗಳ ರಾಜ”ಎಂದು ಕರೆಯಲಾಗುತ್ತದೆ.
ಕವಿಗಳಾದ ಬಿ.ಎಂ.ಶ್ರೀಕಂಠಯ್ಯ ನವರು ತಮ್ಮ ಕವಿತೆಯೊಂದರಲ್ಲಿ 'ವಸಂತ ಬಂದ ಋತುಗಳ ರಾಜ ತಾ ಬಂದ....' ಉಲ್ಲೇಖಿಸಿದಂತೆ ಕವಿಗಳಿಗೆ ಕವಿತೆ ಬರೆಯಲು ಸ್ಫೂರ್ತಿದಾಯಕವಾದ ಋತು ಈ ವಸಂತ ಋತು ಎನ್ನುವುರಲ್ಲಿ ಎರಡು ಮಾತಿಲ್ಲ.
-ವಿದ್ಯಾಶ್ರೀ ಹೊಸಮನಿ
ಪ್ರಶಿಕ್ಷಣಾರ್ಥಿ, ವಾರ್ತಾ ಇಲಾಖೆ
ವಿಜಯಪುರ
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
ಬೇವು ಬೆಲ್ಲ ಎರಡರ ಸಮಾಗಮವೇ ಬದುಕು
ನಮ್ಮಉತ್ತರ ಕರ್ನಾಟಕದ ಸಂಸ್ಕೃತಿಯೇ ಹಾಗೆ, ಪ್ರತಿಯೊಂದು ಆಚರಣೆಯನ್ನು ನಾನಾವಿಧವಾದ ಪ್ರಯೋಜನಗಳ ದೃಷ್ಟಿಯಲ್ಲಿ ವಿಮರ್ಶಿಸಿ ವಿಧಿಸಿರುತ್ತದೆ. ಈ ಆಚರಣೆಗಳು ಏನೇನು, ಯಾಕೆ ಆಚರಿಸುತ್ತೇವೆ ಎನ್ನುವುದು ನಮಗೆ ಗೊತ್ತಿಲ್ಲದಿರಬಹುದು , ಆದರೆ ಅದರ ಉಪಯೋಗವಿಲ್ಲ ಎಂದೇನಿಲ್ಲ. ಉದಾಹರಣೆಗೆ ಯುಗಾದಿಯ ಎಳ್ಳು-ಬೆಲ್ಲ , ಏಕಾದಶಿಯ ಉಪವಾಸ, ಧನುರ್ಮಾಸದ ಹುಗ್ಗಿ (ಪೊಂಗಲ್) ಹೀಗೆ ಎಲ್ಲವೂ ಆರೋಗ್ಯದ ದೃಷ್ಟಿಯಿಂದ ಆಯಾ ಕಾಲಕ್ಕೆ ಅತ್ಯುತ್ತಮ ದೀಪಾವಳಿಯ ಗೋಪೂಜೆ, ನವರಾತ್ರಿಯ ಗಜಾಶ್ವಾದಿಗಳ ಪೂಜೆಗಳು ಮನುಷ್ಯ ಮತ್ತು ಪ್ರಾಣಿಗಳ ನಡುವೆ ಬಾಂಧವ್ಯವನ್ನು ಧೃಡಗೊಳಿಸಲು ಸಹಾಯಕ. ಹೀಗೆ ಎಲ್ಲ ಆಚರಣೆಗಳೂ ಒಂದು ವೈಶಿಷ್ಟ್ಯಪೂರ್ಣವಾದ ಗಂಭೀರವಾದ ಅರ್ಥವನ್ನು ಹೊಂದಿವೆ.
ಇದರಂತೆ ನಮ್ಮ ನವವರ್ಷವಾದ ಯುಗಾದಿಯೂ ಒಂದು ವಿಶಿಷ್ಟವಾದ ಆಚರಣೆ. ಜನವರಿ ಒಂದರಂದು ಹೊಸವರ್ಷವೆನ್ನಲು ಬದಲಾಗುವುದು ಕ್ಯಾಲೆಂಡರ್ ಒಂದೇ. ಆದರೆ ಯುಗಾದಿಯಂದು ಹಾಗಲ್ಲ. ಪೂರ್ಣಪ್ರಕೃತಿಯು ಮಾಗಿಯ ಚಳಿಗೆ ನಿರಾಭರಣೆಯಾಗಿ ನಂತರದ ವಸಂತಕ್ಕೆ ಹಸಿರ ಸಿರಿಯ ಹೊದ್ದು ಅಲಂಕೃತಳಾಗುವ ಸಮಯ. ಮಾವಿನ ಚಿಗುರಿನ ತೋರಣ, ಕೋಗಿಲೆಯ ಪಂಚಮದ ದನಿಯ ಸುಪ್ರಭಾತ ಒಂದು ಹೊಸಪ್ರಪಂಚವನ್ನೇ ಸ್ವಾಗತಿಸುತ್ತದೆ. ಅಂತಹ ಯುಗಾದಿಯ ಸಮಯವಲ್ಲವೇ ಹೊಸವರ್ಷ.
ನಿಜವಾಗಿಯೂ ನೈಸರ್ಗಿಕ ವಾತಾವರಣವನ್ನು ಅನುಭವಿಸುವವರು, ಆರಾಧಿಸುವವರು ಹೊಸ ಚೈತನ್ಯದೊಂದಿಗೆ ಈ ಯುಗಾದಿಯನ್ನೇ ಹೊಸವರ್ಷವೆಂದು ಸ್ವಾಗತಿಸಲು ಉತ್ಸುಕನಾಗಿರುತ್ತಾನೆ. ಒಂದು ಸಂವತ್ಸರ ಚಕ್ರವು ಮುಗಿದು ಹೊಸ ವರ್ಷಪ್ರಾರಂಭವಾಗುವ ಸಮಯವೇ ಯುಗಾದಿ. ಹಾಗಾಗಿ ಯುಗಾದಿ ಹಬ್ಬವು ಸಂವತ್ಸರಾರಂಭ, ನವವರ್ಷಪ್ರತಿಪದಾ ಎಂಬ ಬೇರೆ ಬೇರೆ ಹೆಸರಿನಿಂದ ಕರೆಯಲ್ಪಡುತ್ತದೆ.
ಪ್ರತಿ ಮನೆಯನ್ನೂ ತಳಿರು ತೋರಣಗಳಿಂದ ಅಲಂಕರಿಸುತ್ತಾರೆ. ಪ್ರತಿಯೊಬ್ಬರು ಅಭ್ಯಂಜನವನ್ನು ಮಾಡಿಕೊಳ್ಳಬೇಕು. ವಿಪ್ರರೊಡನೆ ಪೂಜೆಗಳನ್ನು ಉತ್ಸವಗಳನ್ಮು ಆಚರಿಸುತ್ತಾರೆ. ದೇವ- ಗುರುಗಳಿಗೆ ನೂತನ ವಸ್ತ್ರಾದಿಗಳನ್ನು ಸಮರ್ಪಿಸುವುದರ ಜೊತೆಗೆ ಸ್ತ್ರೀ-ಮಕ್ಕಳಾದಿಯಾಗಿ ಎಲ್ಲರೂ ಹೊಸ ವಸ್ತ್ರಗಳನ್ನು ಧರಿಸುತ್ತಾರೆ. ನಂತರ ತಿಥಿ ವಾರ ನಕ್ಷತ್ರ ಯೋಗ ಕರಣಗಳೆಂಬ ಪಂಚ ಅಂಶಗಳನ್ನೊಳಗೊಂಡ ಪಂಚಾಂಗವನ್ನು ಪೂಜಿಸಿ ವರ್ಷಫಲವನ್ನು ಶ್ರವಣ ಮಾಡಬೇಕು ಎನ್ನುವುದೇ ಇದರ ತಾತ್ಪರ್ಯ.
ಇದರ ಜೊತೆಗೆ ಬೇವುಬೆಲ್ಲದ ಸೇವನೆ ಎಲ್ಲರಿಗೂ ತಿಳಿದಿರುವ ಸಂಪ್ರದಾಯವೇ ಆಗಿದೆ. ಬೇವಿನ ಎಲೆಯು ನಮ್ಮ ದೇಹಕ್ಕೆ ಬಿಸಿಲಿನ ವೇಗವನ್ನು ತಡೆಯುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಬೆಲ್ಲವೂ ಆರೋಗ್ಯದಾಯಕ'. ಇಂತಹ ಅತ್ಯುತ್ತಮ ಬೇವು-ಬೆಲ್ಲ ನಮ್ಮ ಆರೋಗ್ಯದ ದೃಷ್ಟಿಯಿಂದಷ್ಟೇ ಅಲ್ಲದೆ ಮಾನಸಿಕವಾಗಿ ಸುಖದುಃಖಗಳನ್ನು ಸಮಾನವಾಗಿ ಸ್ವೀಕರಿಸಬೇಕೆಂದು ತಿಳಿಸುತ್ತದೆ. ಏರಿಳಿತದ ಜೀವನದಲ್ಲಿ "ಸುಖದುಃಖ" ಎಂಬ ಗೀತವಾಕ್ಯದಂತೆ ಬದುಕಬೇಕು ಎನ್ನುವುದರ ಮೂಲಕವೇ ಈ ಯುಗಾದಿ ಹಬ್ಬವನ್ನು ಆಚರಿಸುತ್ತೇವೆ, ಹಾಗೂ ನಿಮ್ಮ ಬದುಕು ಬೇವು ಬೆಲ್ಲದಂತೆ ಸುಖ-ದುಃಖಗಳ ಆಗರ ಸುಖ ಬಂದಾಗ ಹಿಗ್ಗದೆ, ದುಃಖ ಬಂದಾಗ ಕುಗ್ಗದೆ ಜೀವನ ನಡೆಸಿ ಈ ಯುಗಾದಿ ನಿಮ್ಮೆಲ್ಲಾ ಕಹಿ ನೋವುಗಳನೆಲ್ಲ ಮರೆಯಾಗಿಸಲಿ ಹೊಸವರ್ಷದ ಶುಭಾಶಯಗಳು.
ಶಿಲ್ಪಾ ಚವ್ಹಾಣ
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ವಿಜಯಪುರ
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
Thursday, March 27, 2025
Wednesday, March 26, 2025
ನಿತ್ಯ ನೂತನವಾಗಿರುವ ರಂಗಭೂಮಿಯ ಸೊಬಗು..!
ರಂಗಭೂಮಿ ಇಂದಿಗೂ ತನ್ನ ಗತÀ ವೈಭವವನ್ನು ಕಾಪಾಡಿಕೊಂಡು ಕಲೆ, ನೃತ್ಯ, ಸಾಹಿತ್ಯದ ಹೊನಲನ್ನು ಪ್ರತಿಬಿಂಬಿಸುತ್ತಿದೆ.
ಕಲಿಕೆ, ದುಡಿಮೆ, ಗಳಿಕೆ, ಕೆಲಸದ ಒತ್ತಡ, ಸಂಬಂಧಗಳ ಹಿತದ ಜವಾಬ್ದಾರಿ ಹೀಗೆ ಹತ್ತು ಹಲವು ದಿನ ನಿತ್ಯಗಳ ಜಂಜಾಟದಲ್ಲಿ ಮನರಂಜನೆ ಎಂಬ ಅಸ್ತ್ರ ಮನಸ್ಸು, ಮಸ್ತಕಕ್ಕೆ ವಿಶ್ರಾಂತಿ ನೀಡುತ್ತದೆ. ಹಾಡು ಆಲಿಸುವುದು, ಕಥೆ, ಕಾದಂಬರಿ ಓದುವುದು, ಆಟವಾಡುವುದು, ಪ್ರವಾಸ ಹೋಗುವುದು, ಸ್ಪೋಟ್ರ್ಸ್ರ, ಸಿನಿಮಾ, ರೀಲ್ಸ್ ವೀಕ್ಷಣೆಗಳಂತಹ ಮನರಂಜನೆಗಳು ಒತ್ತಡ ತಗ್ಗಿಸಿ ದಿನ ನಿತ್ಯ ಜಂಜಾಟದೊಂದಿಗೆ ಮನಸ್ಸಿಗೆ ಮದ ನೀಡಿ ಜೀವನದ ಬಂಡಿ ಮುನ್ನಡೆಸುವ ಅಡಿಪಾಯವಾಗಿವೆ.
ಸೋಟ್ರ್ಸ್, ರೀಲ್ಸ್, ಸಿನಿಮಾದಂತಹ ತಂತ್ರಜ್ಞಾನ ಮಾಧ್ಯಮಗಳು ಅವಿಷ್ಕಾರ ಗೊಳ್ಳುವ ಮುನ್ನ ಮನರಂಜನೆಗಾಗಿ ರಂಗಭೂಮಿ, ವೃತ್ತಿಗಾಗಿ ರಂಗಭೂಮಿ ಎಂದು ಈ ರಂಗ ಪರದೆಯೂ ಜನರನ್ನು ಸೆಳೆಯುತ್ತಿತ್ತು.
ರಾಮಾಯಣ, ಮಹಾಭಾರತ, ಸತ್ಯ ಹರಿಶ್ಚಂದ್ರ, ಸಮಾಜದಲ್ಲಿನ ದೌರ್ಜನ್ಯ, ತೊಡಕುಗಳಂತಹ ಸಾಂಸ್ಕøತಿ ಹಾಗೂ ಸಾಮಾಜಿಕ ನಾಟಕಗಳಲ್ಲಿ ಸಿದ್ದಿಸಾಧಿಸಿ ಕಲಾವಿದರು ರಂಗಭೂಮಿಯಲ್ಲಿ ಪ್ರದರ್ಶನ ನೀಡುತ್ತಾ ಮನುರಂಜನೆಯೊಂದಿಗೆ ಸಂದೇಶಗಳ ಬುತ್ತಿಯನ್ನು ತಲೆಯಲ್ಲಿ ಮೆತ್ತಿ ಜಾಗೃತಿ ಮೂಡಿಸುವ ಕಾರ್ಯ ನಡೆಸಲು ಸಹಕಾರಿಯಾಗುತ್ತಿದ್ದವು.
ರಂಗ ಪರದೆಯ ಮೇಲೆ ವೇಷ ತೊಟ್ಟು ನಟಿಸುವ ಕಲಾವಿದರ ಹಾವಭಾವ ನಟನೆ ಎದುರಿಗಿದ್ದ ವಿಕ್ಷಕರ ಗಮನ ಬೇರೆಲ್ಲೂ ಜಾರದೆ ಮಂತ್ರಮುಗ್ದರನ್ನಾಗಿ ಕೂರಿಸಿದರೇ ಅವರ ಉಡುಗೆ-ತೊಡುಗೆಗಳು, ಹಿನ್ನಲೇ ಧ್ವನಿ ಆ ನಾಟಕಕ್ಕೆ ಜೀವಕಳೆ ತುಂಬುತ್ತಿತ್ತು.
ನಟನೆಯ ಹವ್ಯಾಸದಿಂದಲೋ, ಬದುಕು ಕಟ್ಟಿಕೊಳ್ಳಲು ಇದನ್ನೇ ವೃತ್ತಿಯನ್ನಾಗಿ ಮಾಡಿಕೊಂಡು ರಂಗಭೂಮಿ ಪ್ರವೇಶಿಸಿದ್ದ ಅದೆμÉ್ಟೂೀ ಕಲಾವಿದರು ತಮ್ಮ ನಟನಾ ಚಾತುರ್ಯದಿಂದ /ಪ್ರತಿಭೆಯಿಂದ ಪ್ರಖ್ಯಾತಿ ಗಳಿಸಿ, ಸಾಧನೆಗೆ ಪ್ರತಿ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ.
ಸಿನಿಮಾ ಎಂಬ ಜಗಮಗಿಸುವ ಲೋಕಕ್ಕೆ ಕಾಲಿಟ್ಟಾಗ ರಂಗಭೂಮಿ ಕೊಂಡಿ ಕಳಚದೇ ಜನಮನದಲ್ಲಿ ತನ್ನದೇ ಒಂದು ಛಾಪು ಮೂಡಿಸಿ ಈಗಲ್ಲೂ ಪ್ರಸ್ತುತದಲ್ಲಿದೆ. ಇದಕ್ಕೆ ಕಾರಣ ನೋಡುಗರ ಹವ್ಯಾಸ ಮತ್ತು ಕಲಾವಿದರ ಆಸಕ್ತಿ ಇದರೊಂದಿಗೆ ಯುವ ಪೀಳಿಗೆಗೆ ರಂಗಭೂಮಿಯ ಬಗ್ಗೆ ಪರಿಚಯಿಸಲು ಪ್ರತಿ ವರ್ಷ ವಿಶ್ವಾದ್ಯಂತ ರಂಗಭೂಮಿ ದಿನ ಆಚರಿಸಲಾಗುತ್ತಿದೆ.
ಪ್ರತಿ ವರ್ಷ ಮಾರ್ಚ್ 27ರಂದು ವಿಶ್ವ ರಂಗಭೂಮಿ ದಿನಾಚರಣೆಯನ್ನು ವಿಶ್ವಾದ್ಯಂತ ಭಾಷೆ ಭೇದ, ಲಿಂಗ ಭೇದ ಆಚರಣೆ ಮಾಡುತ್ತಾ.. ರಂಗಭೂಮಮಿಯ ರಂಗು ಮಾಸದೇ ಜೀವಂತ ಉಳಿವಿಗೆ ಕಾರಣೀಕರ್ತವಾಗಿದೆ.
ಅμÉ್ಟೀ ಅಲ್ಲದೆ ಸಿನಿಮಾ ಎಂಟ್ರಿ ಕೊಡುವ ಮುನ್ನ ಅನೇಕ ನಟ-ನಟಿಯರು ನಟನೆಯ ಸೊಬಗನ್ನು ಹೊಂದಲು ರಂಗಭೂಮಿಯನ್ನು ಮೊದಲು ಆದ್ಯತೆ ನೀಡಿರುವುದನ್ನು ನಾವು ಗಮನಿಸಬಹುದು.
ಸಿನಿಮಾ ಕಲಾವಿದರೊಂದಿಗೆ ರಂಗಭೂಮಿ ನಂಟು: ಶಾರುಕ್ ಖಾನ್, ಗಿರೀಶ್ ಕಾರ್ನಾಡ್, ಓಂ ಪುರಿ, ಪ್ರಕಾಶ ರಾಜ್, ಬೊಮನ್ ಇರಾನಿ, ಡಾ.ರಾಜಕುಮಾರ, ಶಬಾನಾ ಆಜ್ಮಿ, ಶಂಕರ ನಾಗ್, ಗುಬ್ಬಿ ವೀರಣ್ಣ, ಮಂಡ್ಯ ರಮೇಶ ಸಂಚಾರಿ ವಿಜಯರಂತಹ ಘಟಾನುಘಟಿ ಧಿಗ್ಗಜರು ರಂಗಭೂಮಿಯಲ್ಲಿ ನಟಿಸಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದವರು.
ಹಿನ್ನಲೇ: ಅಂತರಾಷ್ಟ್ರೀಯ ರಂಗಭೂಮಿ ಸಂಸ್ಥೆಯೂ 1962ರಿಂದ ವಿಶ್ವ ರಂಗಭೂಮಿ ದಿನಾಚರಣೆಯನ್ನು ಮಾರ್ಚ್ 27ರಂದು ಆಚರಿಸಲು ಪ್ರಾರಂಭಿಸಿತು. ಇದರ ಬೆನ್ನಲೇ ಪ್ರತಿ ವರ್ಷ ರಂಗಭೂಮಿ ಮತ್ತು ಶಾಂತಿಯ ಸಂಸ್ಕøತಿ ಎಂಬ ಧ್ಯೇಯ ವಾಕ್ಯದೊಂದಿಗೆ ವಿಶ್ವ ರಂಗಭೂಮಿ ದಿನಾಚರಣೆಯನ್ನು ಆಚರಿಸಲಾಗುವುದು.
ಯಾವುದೇ ಕಟ್, ಎಡಿಟ್ ಇಲ್ಲದೇ ಒಂದೇ ಶಾಟ್ ನಲ್ಲಿ ಸ್ಕೀನ್ ಪ್ಲೆ ಮಾಡಿ ತಮ್ಮ ನಟನಾ ಕಲೆಯಿಂದ ವೀಕ್ಷಕರ ಮನಮುಟ್ಟುವಂತೆ ವಿಷಯ ಹೂರಣವನ್ನು ಉಣಬಡಿಸುವ ರಂಗಭೂಮಿ ಕಲಾವಿದರ ನಟನೆ ಯಾವ ಆಧುನಿಕ ತಂತ್ರಜ್ಞಾನ ಗಳಿಂದ ಮಾಸದೆ ನಿತ್ಯ ನೂತನವಾಗಿರಲಿ ಎಂಬುದೆ ನಮ್ಮ ಆಶಯ.
- ವಿದ್ಯಾಶ್ರೀ ಹೊಸಮನಿ
ಪ್ರಶಿಕ್ಷಣಾರ್ಥಿ , ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ
ವಿಜಯಪುರ
ಸಿದ್ಧಗಂಗಾ ಶ್ರೀ ರತ್ನ ಪ್ರಶಸ್ತಿಗೆ ಮಹೇಶ ಶಿವಶರಣ ಭಾಜನ
ವಿಜಯಪುರ : ವಿಜಯಪುರ ಜಿಲ್ಲೆಯ ನಗರ ನಿವಾಸಿ ಕಲಾವಿದ ಮಹೇಶ ಶಿವಶರಣ ಅವರು ಸಿದ್ಧಗಂಗಾ ಶ್ರೀ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮಹೇಶ ಶಿವಶರಣ ಅವರು ಕಲಾ ಕ್ಷೇತ್ರದಲ್ಲಿ ನಿಸ್ವಾರ್ಥ ಮತ್ತು ಪ್ರಾಮಾಣಿಕವಾಗಿ ಶಕ್ತಿಮೀರಿ ಸಲ್ಲಿಸಿದ ಸಾಧನೆಯನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿ ಅಭಿನಂದಿಸಿದೆ.
ಅನಾಥ, ನಿರ್ಗತಿಕ ಹಾಗೂ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಗಾಮೀಣಾಭಿವೃದ್ಧಿ ಸೇವಾ ಸಂಸ್ಥೆ (ರಿ) ಶ್ರೀ ಸಿದ್ಧಗಂಗಾ ಕಿರಿಯ ಪ್ರಾಥಮಿಕ ಶಾಲೆ ತುರಕನಗೇರಿ ತಾ| ತಾಳಿಕೋಟಿ ಜಿ| ವಿಜಯಪುರ ವತಿಯಿಂದ ತ್ರಿವಿದ ದಾಸೋಹಿ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ 118 ನೇ ಜಯಂತ್ಯೋತ್ಸವ ಹಾಗೂ ಸಿದ್ಧಗಂಗಾ ಕಿರಿಯ ಪ್ರಾಥಮಿಕ ಶಾಲೆಯ 7ನೇ ವಾರ್ಷಿಕ ಸ್ನೇಹ ಸಮ್ಮೇಳನ ನಿಮಿತ್ಯ “ಸಿದ್ಧಗಂಗಾ ಶ್ರೀ ರತ್ನ ಪ್ರಶಸ್ತಿ”ಯನ್ನು ಕಲಾವಿದ ಮಹೇಶ ಶಿವಶರಣ ಅವರಿಗೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶಂಶೂದ್ದೀನ ಇನಾಂದಾರ ಹಾಗೂ ಬಸವರಾಜ ಹೂಗಾರ ಸೇರಿದಂತೆ ರಜಾಕ ಇನಾಮದಾರ, ಅಲ್ತಾಪ ಇನಾಮದಾರ, ವಿರೇಶ ಹಿರೇಮಠ, ಅಮರೇಶ ಬಸವಪಟ್ಟಣ, ಮಂಜುನಾಥ ಮೋಪಗಾರ, ಪ್ರವೀಣ ಮೋಪಗಾರ ಸೇರಿದಂತೆ ಮುಂತಾದವರು ಇದ್ದರು.
ಮಹೇಶ ಶಿವಶರಣ ಸಿದ್ಧಗಂಗಾ ಶ್ರೀ ರತ್ನ ಪ್ರಶಸ್ತಿ ಪಡೆದ ಹಿನ್ನೆಲೆ ಸ್ನೇಹಿತರು, ಹಿತೈಷಿಗಳು, ಕಲಾಭಿಮಾನಿಗಳು, ಕುಟಂಬದ ಸದಸ್ಯರು ಸೇರಿದಂತೆ ಅಪಾರ ಬಂಧು-ಬಳಗದವರು ಶುಭಕೋರಿ ಹಾರೈಸಿದ್ದಾರೆ.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
ಮಹಿಳೆಯರನ್ನು ಗೌರವಿಸುವ ದೇಶ ನಮ್ಮದಾಗಿದೆ : ಜಿಲ್ಲಾಧಿಕಾರಿ ಟಿ.ಭೂಬಾಲನ್
ವಿಜಯಪುರ : ಮಹಿಳೆಯು ಶಕ್ತಿಯ ಪ್ರತಿಕ. ಮಹಿಳೆಯರನ್ನು ಗೌರವಿಸುವ ದೇಶ ನಮ್ಮದಾಗಿದೆ. ಮಹಿಳೆಯರು ಮುಂಚೂಣಿಯಲ್ಲಿರಬೇಕೆಂಬ ದೃಷ್ಟಿಯಿಂದ ಮಹಿಳೆಯರ ಅಭ್ಯುದಯಕ್ಕಾಗಿ ಜಿಲ್ಲೆಯಲ್ಲಿ ಹಲವು ಯೋಜನೆಗಳನ್ನು ಜಾರಿಗೊಳಿಸಿ ಆ ಮೂಲಕ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಹೇಳಿದರು.
ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸಮಗ್ರ ಶಿಶು ಅಭಿವೃದ್ಧಿ ಯೋಜನೆಗಳು, ವಿವಿಧ ಸ್ವಯಂ ಸೇವಾ ಸಂಸ್ಥೆಗಳು ಮತ್ತು ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಮಹಿಳೆಯರ ಮತ್ತು ಹೆಣ್ಣು ಮಕ್ಕಳ ಹಕ್ಕುಗಳು, ಸಮಾನತೆ ಹಾಗೂ ಸಬಲೀಕರಣಕ್ಕಾಗಿ-ತ್ವರಿತ ಕ್ರಮ ಎಂಬ ಧ್ಯೇಯದಡಿ ಅಂತರಾಷ್ಟ್ರೀಯ ಮಹಿಳಾ ದಿನಾಚಾರಣೆ-2025 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಹಿಂದೆ ಅನೇಕ ಮೌಢ್ಯ ಮತ್ತು ಕಂದಾಚಾರಗಳಿದ್ದವು, ಈಗ ಬಹಳಷ್ಟು ಸುಧಾರಣೆಯಾಗಿವೆ. ಸಾÀಮಾಜಿಕ ಸ್ತರದಲ್ಲಿ ಮಹಿಳೆ ಸ್ವಾವಲಂಬಿಯಾಗಿ ತನ್ನ ಕುಟುಂಬವನ್ನು ಸಮರ್ಥವಾಗಿ ನಿಭಾಯಿಸುವ ದೃಷ್ಟಿಯಿಂದ ಹಲವಾರು ಯೋಜನೆಯನ್ನು ಸರ್ಕಾರ ಅನುಷ್ಟಾನ ತಂದಿದ್ದು, ಸಾಮಾಜಿಕ ಸಮಸ್ಯೆಗಳ ನಿವಾರಣೆಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಇಂದು ಮಹಿಳೆ ಎಲ್ಲ ರಂಗಗಳಲ್ಲೂ ಮುಂದಿದ್ದು, ಅಭಿವೃದ್ಧಿಯ ಪಥದಲ್ಲಿ ಮಹಿಳೆಯರ ಪಾತ್ರ ಅಪಾರ. ಸಮಾಜವು ಮಹಿಳೆಯರನ್ನು ಗೌರವಿಸಬೇಕು. ಮಹಿಳಾÀ ಸಾಧಕರನ್ನು ಸ್ಪೂರ್ತಿಯಾಗಿಟ್ಟುಕೊಂಡು ಸಾಧನೆಯ ಹಾದಿಯಲ್ಲಿ ನಡೆದು ಈ ದೇಶಕ್ಕೆ ಕೊಡುಗೆ ನೀಡಬೇಕೆಂದು ಹೇಳಿದರು.
ಮಹಿಳೆ ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕøತಿಕವಾಗಿ ಪ್ರಗತಿ ಪಥದಲ್ಲಿ ಮುನ್ನಡೆಯಲೂ ಪ್ರಸಕ್ತ ಸರ್ಕಾರ ಮಹಿಳೆಯರಿಗಾಗಿ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಮಹಿಳೆ ಶಿಕ್ಷಣ ಪಡೆಯುವ ಮೂಲಕ ಸ್ವಾವಲಂಬನೆಯತ್ತ ದಿಟ್ಟ ಹೆಜ್ಜೆ ಇಡಬೇಕು ಎಂದು ಅವರು ಹೇಳಿದರು.
ಮಹಿಳೆಯರೊಂದಿಗೆ ನೇರ ಸಂಪರ್ಕದಲ್ಲಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮಹಿಳಾ ಸಹಾಯಕಿಯರ ಹುದ್ದೆ ಅತ್ಯಂತ ಜವಾಬ್ದಾರಿಯುತವಾಗಿದೆ. ಜಿಲ್ಲೆಯಲ್ಲಿ 1260 ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಹುದ್ದೆಗಳ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ತಿಳಿಸಿದ ಅವರು, ಮಹಿಳೆಯರು ಜಿಲ್ಲೆಯಲ್ಲಿ ಸ್ತ್ರೀ ಶಕ್ತಿ ಮತ್ತು ಸ್ವಸಹಾಯ ಸಂಘಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಅವರು ಹೇಳಿದರು.
ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರು ಮಾತನಾಡಿ, ಮಹಿಳೆ ಈ ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ತಾಯಿಯ ತ್ಯಾಗ ಜಗತ್ತಿನ ಎಲ್ಲ ಪ್ರಶಸ್ತಿಗಳಿಗೂ ಮಿಗಿಲಾಗಿದೆ ಮಹಿಳೆ ಸ್ವಾವಲಂಬಿ ಜೀವನ ನಡೆಸುವಂತಾಗಬೇಕು. ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳು ಶಿಕ್ಷಣ ಪಡೆಯುವುದು ಅತ್ಯವಶ್ಯಕವಾಗಿದ್ದು, ಅಂಗನವಾಡಿಗಳ ಮೂಲಕ ಮಕ್ಕಳಿಗೆ ಶಿಕ್ಷಣ ದೊರಕಿಸುವ ಇಲಾಖೆ ಕಾರ್ಯವಾಗಿದ್ದು, ನಾಡಿನ, ನಾಳಿನ ಭವಿಷ್ಯ ಮಕ್ಕಳ ಸೇವೆ ಮಾಡುವ ಅವಕಾಶ ದೊರಕಿದೆ. ಜಿಲ್ಲೆಯ ಎಲ್ಲ ಅಂಗನವಾಡಿಗಳ ಶ್ರೇಯೋಭಿವೃದ್ದಿಗಾಗಿ ಶ್ರಮಿಸಲಾಗುವುದು ಎಂದು ಅವರು ಹೇಳಿದರು.
ಉಪನ್ಯಾಸ ನೀಡಿದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಅಹಲ್ಯಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನದ ಮುಖ್ಯಸ್ಥರು ಹಾಗೂ ನಿರ್ದೇಶಕರಾದ ಪ್ರೊ. ಲಕ್ಷ್ಮೀದೇವಿ ವೈ. ಅವರು ಮಾತನಾಡಿ, ಮಹಿಳೆಯರನ್ನು ಜೀವ ಪರ ವ್ಯಕ್ತಿಯಾಗಿ ಪರಿಗಣಿಸಬೇಕು. ಆರ್ಥಿಕತೆಗೆ ಮಹಿಳೆಯರ ಕೊಡುಗೆ ಬಹಳಷ್ಟಿದೆ. ಕುಟುಂಬದಲ್ಲಿ ಮಹಿಳೆಯನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಕೆ.ಕೆ.ಚವ್ಹಾಣ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳೆಯ ಆರ್ಥಿಕ ಸಾಮಾಜಿಕ ಸಾಧನೆ ಕುರಿತು ನೆನಪಿಸುವುದಕ್ಕಾಗಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ. ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಕಾಯ್ದೆ, ಮಹಿಳಾ ದೌರ್ಜನ್ಯ ಕಾಯ್ದೆ, ಪೋಕ್ಸೊ ಕಾಯ್ದೆ, ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಉದ್ಯೋಗಿನಿ, ಸ್ತ್ರೀ ಶಕ್ತಿ, ಚೇತನಾ ಯೋಜನೆ, ಧನಶ್ರೀ ಯೋಜನೆ, ಮಾಜಿ ದೇವದಾಸಿಯರಿಗೆ ಮಾಸಿಕ ಪಿಂಚಣಿ ಯೋಜನೆ, ವಸತಿ ಯೋಜನೆ ಸಹ ಇಲಾಖೆಯಿಂದ ಕೊಡಮಾಡಲಾಗುತ್ತದೆ. ಮಹಿಳೆಯರಿಗೆ ಉಚಿತ ಕೌಶಲ್ಯ ತರಬೇತಿ ಯೋಜನೆ, ಮಹಿಳೆಯರ ಸುರಕ್ಷತೆಗಾಗಿ ಸಖಿ ಒನ್ ಸ್ಟಾಪ್ ಸೆಂಟರ್, ಮಹಿಳಾ ಸಹಾಯವಾಣಿ, ಮಹಿಳಾ ಸಾಂತ್ವಾನ ಕೇಂದ್ರಗಳು, ಮಹಿಳೆಯರ ಸಹಾಯವಾಣಿ, ಗರ್ಭಿಣಿ ಮಹಿಳೆಯರಿಗೆ ಬಾಣÀಂತಿಯರಿಗೆ ಹಾಗೂ ಮಕ್ಕಳಿಗೆ ಪೌಷ್ಟಿಕ ಆಹಾರ ಹಾಗೂ ಆರೋಗ್ಯ ತಪಾಸಣೆ ಸೇರಿದಂತೆ ಇಲಾಖೆಯಿಂದ ಹಲವಾರು ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲಾಗುತ್ತಿದೆ ಜಿಲ್ಲೆಯಲ್ಲಿ 4,850 ಸ್ವ-ಸಹಾಯ ಸಂಘಗಳನ್ನು ಸ್ಥಾಪಿಸಿ, 70 ಸಾವಿರ ಮಹಿಳೆಯರು ಈ ಸಂಘದಲ್ಲಿ ಸದಸ್ಯತ್ವ ಪಡೆದಿರುತ್ತಾರೆ. ಮಹಿಳೆಯರ ಆರ್ಥಿಕ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ರಿಷಿ ಆನಂದ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನ ಶಿಶು ಅಭಿವೃದ್ದಿ ಅಧಿಕಾರಿಗಳು, ಅಂಗನವಾಡಿ ಮೇಲ್ವಿಚಾರಕರು. ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದವರಿಗೆ ಸನ್ಮಾನಿಸಲಾಯಿತು. ವಿವಿಧ ಆಟೋಟ ಹಾಗೂ ಸಾಂಸ್ಕøತಿಕ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಲಾಯಿತು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಕಾಲಮಿತಿಯೊಳಗೆ ಇತ್ಯರ್ಥಕ್ಕೆ : ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ
ವಿಜಯಪುರ : ದೌಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಸಂತ್ರಸ್ತರ ಮನೆಗಳಿಗೆ ಭೇಟಿ ಮಾಡಿ, ಮಾಹಿತಿ ಕ್ರೋಡೀಕರಿಸಿ, ಕಾಲಮಿತಿಯೊಳಗೆ ಪ್ರಕರಣಗಳನ್ನು ಇತ್ಯರ್ಥಪಡಿಸಲು ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರತಿ ಪ್ರಕರಣಗಳನ್ನು ಅತ್ಯಂತ ಸೂಕ್ತ ರೀತಿಯಲ್ಲಿ ಪರಿಶೀಲನೆ ನಡೆಸಬೇಕು. ಅಧಿಕಾರಿಗಳು ದೌರ್ಜನ್ಯ ಪ್ರಕರಣಗಳನ್ನು ತ್ವರಿತ ಇತ್ಯರ್ಥಕ್ಕೆ ಆದ್ಯತೆ ನೀಡಬೇಕು. ದೌರ್ಜನ್ಯ ಪ್ರಕರಣಗಳ ಪರಿಹಾರ ಧನವನ್ನು ಆದ್ಯತೆ ಮೇಲೆ ಸಂತ್ರಸ್ತರಿಗೆ ಬಿಡುಗಡೆ ಮಾಡಲು ಕ್ರಮ ವಹಿಸಬೇಕು. ನಿಯಮಾನುಸಾರ ಹಾಗೂ ಪ್ರಕರಣಾನುಸಾರ ಕಾಲಮಿತಿಯೊಳಗೆ ಪರಿಹಾರ ಧನ ಒದಗಿಸಬೇಕು. ಯಾವುದೇ ಬಾಕಿ ಉಳಿಸಿಕೊಳ್ಳದಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯ ವಿವಿಧ ನಿಗಮಗಳು ಭೂ ಒಡೆತನ ಯೋಜನೆಯಡಿಯ ಫಲಾನುಭವಿಗಳ ಮಾಹಿತಿಯನ್ನು ಇಂದೀಕರಣ ಮಾಡಿ, ಆದ್ಯತೆಯ ಮೇಲೆ ಅನುಪಾಲನಾ ವರದಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಪರಿಶಿಷ್ಟ ಜಾತಿ ಕಾಲೋನಿ ಸೇರಿದಂತೆ ಎಲ್ಲ ಕಡೆ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜನಾಂಗದ ಆರ್ಥಿಕ ಮಟ್ಟ ಸುಧಾರಿಸಲು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಅಧಿಕಾರಿಗಳು ಇಚ್ಛಾಶಕ್ತಿಯಿಂದ ಕಾರ್ಯನಿರ್ವಹಿಸಿ ಈ ಜನಾಂಗದ ಶ್ರೇಯೋಭಿವೃದ್ದಿಗಾಗಿ ಜಾರಿಗೊಳಿಸಲಾದ ಯೋಜನೆಗಳ ಲಾಭ ದೊರಕಿಸಲು ಕ್ರಮ ವಹಿಸಬೇಕು. ಎಲ್ಲ ಇಲಾಖೆಗಳಲ್ಲಿ ಎಸ್‍ಸಿಪಿ-ಟಿಎಸ್‍ಪಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸುವ ಮೂಲಕ ಅರ್ಹರಿಗೆ ಲಾಭ ದೊರಕಿಸಲು ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ ಅವರು, ಬ್ಯಾಂಕಿನ ಮೂಲಕ ಸಾಲ-ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದಾಗ ಅರ್ಹರಿಗೆ ಸಾಲ-ಸೌಲಭ್ಯ ಒದಗಿಸಲು ಸೂಚನೆ ನೀಡಿದರು.
ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸುವ,ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ನಿರ್ಮಾಣಕ್ಕಾಗಿ ಜಾಗ ಒದಗಿಸುವ,ಸಮುದಾಯ ಭವನ ಕಾಮಗಾರಿ, ಎಸ್ ಸಿಪಿ ಹಾಗೂ ಟಿಎಸ್ಪಿ ಅನುದಾನ ಸಮರ್ಪಕ ಬಳಕೆಗೆ, ಪರಿಶಿಷ್ಟ ಜಾತಿ ಕಾಲೋನಿಗಳಲ್ಲಿ ಚರಂಡಿಗಳ ಸ್ವಚ್ಛತೆ, ಅಂಗನವಾಡಿಯಲ್ಲಿ ನೇಮಕಾತಿ, ರಸ್ತೆ ಅತಿಕ್ರಮಣ ತೆರವು, ಪರಿಶಿಷ್ಟ ಜಾತಿ, ಪಂಗಡದ ನೌಕರರ ಮುಂಬಡ್ತಿ, ಭೂ ಒಡೆತನ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರು ಸಭೆಯ ಗಮನಕ್ಕೆ ತಂದಾಗ ಈ ಕುರಿತು ಜಿಲ್ಲಾಧಿಕಾರಿಗಳು, ಈಗಾಗಲೇ ಸದಸ್ಯರು ಎತ್ತಿರುವ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲಾಗಿದ್ದು, ಬಾಕಿ ಇರುವ ಸಮಸ್ಯೆಗಳಿಗೆ ಅತ್ಯಂತ ತ್ವರಿತವಾಗಿ ಪರಿಹರಿಸಿ ಇತ್ಯರ್ಥಪಡಿಸಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.
ಎಸ್ಸಿ-ಎಸ್ಟಿ ಕಾಯ್ದೆ ಹಾಗೂ ಪೋಕ್ಸೊ (ಎಸ್ಸಿ-ಎಸ್ಟಿ) ಕಾಯ್ದೆಯಡಿ ಜಿಲ್ಲೆಯಲ್ಲಿ ಕಳೆದ 2024 ರಿಂದ ಫೆಬ್ರವರಿ-2025ರವರೆಗೆ ದಾಖಲಾದ 265 ಪ್ರಕರಣಗಳ ಪೈಕಿ 1 ಪ್ರಕರಣದಲ್ಲಿ ಶಿಕ್ಷೆಯಾಗಿದ್ದು, 34 ಪ್ರಕರಣಗಳನ್ನು ಬಿಡುಗಡೆಗೊಳಿಸಿದ್ದು, 37 ಪ್ರಕರಣಗಳು ವಿಲೇವಾರಿ ಮಾಡಲಾಗಿದೆ. ತಿಂಗಳ ಅಂತ್ಯದಲ್ಲಿ ಒಟ್ಟು 229 ಪ್ರಕರಣಗಳು ಬಾಕಿ ಉಳಿದಿವೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಲಕ್ಷ್ಮಣ ನಿಂಬರಗಿ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ವಿಜಂiÀÀುಕುಮಾರ ಅಜೂರ, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ಯೋಜನಾಧಿಕಾರಿಗಳಾದ ನಿಂಗಪ್ಪ ಗೋಠೆ, ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಅಶೋಕ ಘೋಣಸಗಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾ ಶ್ರೀಮತಿ ಎಲ್.ರೂಪಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕÀ ಪುಂಡಲಿಕ ಮಾನವರ, ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರುಗಳಾದ ಅಭಿμÉೀಕ ಚಕ್ರವರ್ತಿ, ಮದನಕುಮಾರ ನಾಗರದಿನ್ನಿ, ನಿರ್ಮಲಾ ಹೊಸಮನಿ, ಸಿದ್ದು ರಾಯಣ್ಣವರ, ಬಂದಗಿ ಸಿದ್ದಪ್ಪ ಗಸ್ತಿ, ಯಮನಪ್ಪ ಸಿದರಡ್ಡಿ, ಮಹಾಂತೇಶ ಸಾಸಬಾಳ, ಮಲ್ಲು ತಳವಾರ, ರಾಜಶೇಖರ ಚೌರ, ನಾನು ಸೋಮು ಲಮಾಣಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
Tuesday, March 25, 2025
Sunday, March 23, 2025
Saturday, March 22, 2025
ಕಾರ್ಮಿಕ ಮುಖಂಡ ಲಕ್ಷ್ಮಣ ಹಂದ್ರಾಳ ಅವರಿಗೆ ಮಾತೃ ವಿಯೋಗ
ಈ ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ
ಗ್ಯಾನಮ್ಮ ಉಂಡಿ ( ಹಂದ್ರಾಳ) ನಿಧನ
ವಿಜಯಪುರ : ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಬ್ಯಾಕೋಡ ಗ್ರಾಮದ ನಿವಾಸಿ ಗ್ಯಾನಮ್ಮ ಯಲ್ಲಪ್ಪ ಉಂಡಿ ( ಹಂದ್ರಾಳ) (83) ದಿನಾಂಕ : 22-03-2025 ರಂದು ಸಂಜೆ ನಿಧನರಾದರು.
ಪತಿ ಯಲ್ಲಪ್ಪ ಉಂಡಿ (ಹಂದ್ರಾಳ) ಸೇರಿದಂತೆ ಮಕ್ಕಳಾದ ರಾಮಣ್ಣ ಉಂಡಿ, ಲಕ್ಷ್ಮಣ ಹಂದ್ರಾಳ, ಶಿವಾನಂದ ಹಂದ್ರಾಳ ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳು, ಮರಿ ಮೊಮ್ಮಕಳನ್ನು ಸೇರಿದಂತೆ ಹಂದ್ರಾಳ (ಉಂಡಿ) ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.
ಮೃತರ ಅಂತ್ಯ ಕ್ರಿಯೇಯೂ ದಿನಾಂಕ :23-03-2025 ರಂದು
ಬಸವನ ಬಾಗೇವಾಡಿ ತಾಲೂಕಿನ ಬ್ಯಾಕೋಡ ಗ್ರಾಮದ ತೋಟದಲ್ಲಿ ರವಿವಾರ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
Friday, March 21, 2025
ಮಹಿಳೆಯರಿಗೆ ಸಮಾನ ಅವಕಾಶ ದೊರೆತರೆ ಭಾರತದ ಪ್ರಗತಿ ಜಿಲ್ಲಾಧಿಕಾರಿ ಟಿ.ಭೂಬಾಲನ್
ವಿಜಯಪುರ: ಸಮಾನ ಅವಕಾಶಗಳು ಹಾಗೂ ಸಮಾಜದ ಬೆಂಬಲ ದೊರೆತರೆ, ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಯಶಸ್ಸನ್ನು ಸಾಧಿಸಿ, ಭಾರತದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಬಹುದು ಎಂದು ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.
ನಗರದ ಕರ್ನಾಟಕ ರಾಜ್ಯ ಸರ್ಕಾರ ಎನ್‌ಎಸ್‌ಎಸ್ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಎನ್‌ಎಸ್‌ಎಸ್ ಪ್ರಾದೇಶಿಕ ನಿರ್ದೇಶನಾಲಯ, ಬೆಂಗಳೂರು ಭಾರತ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಶುಕ್ರವಾರ ಆಯೋಸಿದ್ದ ‘ರಾಷ್ಟಿçÃಯ ಭಾವೈಕ್ಯತಾ ಶಿಬಿರ-2025’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಸಮಾಜದಲ್ಲಿ ಮಹಿಳೆಯರಿಗೆ ರಾಜಕೀಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಅಪಾರ ಅವಕಾಶಗಳು ಲಭ್ಯವಾಗಿವೆ. ಇಂದಿನ ಮಹಿಳೆಯರು ತಮ್ಮ ಪ್ರತಿಭೆಯಿಂದ ಪ್ರತಿಯೊಂದು ವಲಯದಲ್ಲೂ ಹೊಸ ಇತಿಹಾಸವನ್ನು ಬರೆಯುತ್ತಿದ್ದಾರೆ. ಶಿಕ್ಷಣ, ತಂತ್ರಜ್ಞಾನ, ಉದ್ಯಮಶೀಲತೆ, ವಿಜ್ಞಾನ, ಕಲೆ-ಸಾಹಿತ್ಯ, ಕ್ರೀಡೆ, ಸಾಮಾಜಿಕ ಸೇವೆ ಹಾಗೂ ಆಡಳಿತ ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮ ಸಿದ್ಧತೆ ಮತ್ತು ಕಠಿಣ ಪರಿಶ್ರಮದಿಂದ ಮುಂಚೂಣಿಯಲ್ಲಿದ್ದಾರೆ. ರಾಜಕೀಯದಲ್ಲಿ ಮಹಿಳೆಯರು ಪ್ರಭಾವಶಾಲಿ ಸ್ಥಾನ ಗಳಿಸಿ, ಸಾಮಾಜಿಕ ಬದಲಾವಣೆಗಳನ್ನು ತರಲು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಎನ್‌ಎಸ್‌ಎಸ್ ಸಲಹಾ ಸಮಿತಿಯ ಸದಸ್ಯ ಡಾ. ಜಾವಿದ್ ಜಮಾದಾರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಮಾಜ ಸೇವಾ ಮನೋಭಾವನೆ ಮತ್ತು ರಾಷ್ಟç ಸೇವೆಯನ್ನು ಜಾಗೃತಗೊಳಿಸುವುದೇ ರಾಷ್ಟಿçÃಯ ಸೇವಾ ಯೋಜನೆಯ ಮೂಲ ಉದ್ದೇಶವಾಗಿದ್ದು, ಯುವಕರನ್ನು ಜವಾಬ್ದಾರಿಯುತ ನಾಗರಿಕರಾಗಿ ರೂಪಿಸುವ ಮಹತ್ವದ ಯೋಜನೆಯಾಗಿದೆ. ಯುವಕರ ಮೇಲೆ ದೊಡ್ಡ ಜವಾಬ್ದಾರಿ ಇದ್ದರೂ, ಅನೇಕರು ಜವಾಬ್ದಾರಿಯಿಂದ ವಿಮುಖವಾಗುತ್ತಿರುವುದು ಚಿಂತಾಜನಕ. ಅಪಘಾತಗಳ ಸಂದರ್ಭಗಳಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡುವ ಬದಲು ವಿಡಿಯೋ ರೆಕಾರ್ಡಿಂಗ್ ಮಾಡುವ ಮನೋಭಾವ ಹೆಚ್ಚುತ್ತಿದೆ, ಇದು ನೋವುಂಟುಮಾಡುವ ವಿಷಯ. ಯುವಕರು ಸಾಮಾಜಿಕ ಜಾಲತಾಣಗಳನ್ನು ಕೇವಲ ಮನರಂಜನೆಗಾಗಿ ಬಳಸುವುದಕ್ಕೆ ಬದಲು, ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸುವ ಸಾಧನವಾಗಿ ಬಳಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ. ಶಾಂತಾದೇವಿ ಟಿ ಮಾತನಾಡಿ, ಎನ್.ಎಸ್.ಎಸ್. ಚಟುವಟಿಕೆಗಳಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ವೃದ್ಧಿಯಾಗುತ್ತದೆ ಹಾಗೂ ಅವರ ವ್ಯಕ್ತಿತ್ವ ಅಭಿವೃದ್ಧಿಯಾಗಲು ಸಹಾಯಕವಾಗುತ್ತದೆ. ಸ್ವಯಂಸೇವಕರಿಗೆ ಉದ್ಯೋಗ ಕ್ಷೇತ್ರದಲ್ಲೂ ಮೀಸಲಾತಿಯ ಅವಕಾಶ ಲಭ್ಯವಿದ್ದು, ಎನ್.ಎಸ್.ಎಸ್. ರಾಷ್ಟç ಮತ್ತು ಸಮಾಜಕ್ಕಾಗಿ ಸೇವೆ ಸಲ್ಲಿಸುವ ಉತ್ತಮ ವೇದಿಕೆಯನ್ನು ಒದಗಿಸುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಕುಲಸಚಿವ ಶಂಕರಗೌಡ ಸೋಮನಾಳ ವಿದ್ಯಾರ್ಥಿನಿಯರರಿಗೆ ಸಾಮಾನ್ಯ ಜ್ಞಾನ ಆಧಾರಿತ ಪ್ರಶ್ನೆಗಳನ್ನು ಕೇಳಿದರು.
ಕಾರ್ಯಕ್ರಮದಲ್ಲಿ ಮಹಿಳಾ ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಮ್.ಚಂದ್ರಶೇಖರ, ಎನ್‌ಎಸ್‌ಎಸ್ ಕೋಶದ ಸಂಯೋಜನಾಧಿಕಾರಿ ಡಾ.ಅಶೋಕಕುಮಾರ ಸುರಪುರ, ಲಾಡಲಿ ಫೌಂಡೇಶನ್ ಜಿಲ್ಲಾ ವ್ಯವಸ್ಥಾಪಕ ಯೂಸುಫ್ ಕೊಟ್ಟಲ, ವಿವಿಧ ವಿಭಾಗಗಳ ವಿದ್ಯಾರ್ಥಿನಿಯರು, ಮುಖ್ಯಸ್ಥರು, ಬೋಧಕ ವರ್ಗದವರು ಉಪಸ್ಥಿತರಿದರು.
ಕಾರ್ಯಕ್ರಮವನ್ನು ಶಿಕ್ಷಣ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ವಿಷ್ಣು ಶಿಂದೆ ನಿರೂಪಿಸಿದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
Thursday, March 20, 2025
Wednesday, March 19, 2025
"ಸನಾತನವಾದಿ ಬೇರುಗಳಿಗೆ ಬೆಂಕಿ ಇಟ್ಟ ಚೌಡಾರ ಕೆರೆ ಪ್ರವೇಶ "
1987 ರ ಸುಮಾರಿಗೆ ಅಮೆರಿಕದಲ್ಲಿ ಒಂದು ಫುಟ್ಬಾಲ್ ಪಂದ್ಯ ನಡೆಯುತ್ತಿದ್ದಾಗ ಇಬ್ಬರು ಆಟಗಾರರು ಅಕಸ್ಮಾತಾಗಿ ಆಟ ನಿಲ್ಲಿಸಿ ವಾಂತಿ ಮಾಡಿಕೊಳ್ಳಲು ಆರಂಭಿಸಿದರು ಅದಕ್ಕೆ ಸ್ವಲ್ಪ ಮೊದಲು ವಿರಾಮ ಸಮಯದಲ್ಲಿ ಕುಡಿದ ಕೋಕೊ ಕೋಲಾದ ದುಷ್ಪರಿಣಾಮ ಎಂದು ಆರ್ಗನೈಸರ್ಗಳು ಭಾವಿಸಿದರು. ಮುಂಜಾಗ್ರತೆ ಕ್ರಮವಾಗಿ ಮೈಕಿನಲ್ಲಿ ದಯವಿಟ್ಟು ಪ್ರೇಕ್ಷಕರು ಯಾರೂ ಇಲ್ಲಿನ ಕೋಕೊಕೋಲಾ ಕುಡಿಯಬೇಡಿ, ಅದು ಬಹಳ ಹಳೆಯ ಸರಕಾಗಿರುತ್ತದೆ ಎಂದು ಪ್ರಕಟಿಸಿಬಿಟ್ಟರು ಅಷ್ಟೇ. ಮರುಕ್ಷಣ ಪ್ರೇಕ್ಷಕರಲ್ಲಿ ಗಲಿಬಿಲಿ ಆರಂಭವಾಯಿತು.ಆ ಪಾನಿಯ ಕುಡಿದವರೆಲ್ಲಾ ವಾಂತಿ ಮಾಡಲು ಶುರು ಮಾಡಿದರು..! ಕೆಲವರಂತೂ ತಲೆ ಸುತ್ತಿ ಗ್ಯಾಲರಿಯಿಂದ ಕೆಳಗೆ ಬಿದ್ದೆ ಹೋದರು ಅಲ್ಲಿನ ವಾತಾವರಣ ಎಲ್ಲಾ ಗಲಿಬಿಲಿ ಹಾಹಾಕಾರ,ಅಳುವುದು ಇತ್ಯಾದಿಗಳಿಂದ ತುಂಬಿಹೋಯಿತು. ಆಟವೇ ನಿಂತು ಹೋಯಿತು. ಆಂಬುಲೆನ್ಸ್ ಗಳು ಬಂದವು ಆಸ್ಪತ್ರೆಗಳು ತುಂಬಿ ಹೋದವು ಕೆಲವು ಪರಿಸ್ಥಿತಿ ವಿಷಮ ಸ್ಥಿತಿಗೆ ತಲುಪಿತು. ಇದೆಲ್ಲವೂ ಆದ ನಂತರ ತಿಳಿದ ರಹಸ್ಯವೇನೆಂದರೆ ಆ ಪಾನೀಯದಲ್ಲಿ ಯಾವುದೇ ವಿಧವಾದ ದೋಷವಿರಲಿಲ್ಲ ಆಟಗಾರರಿಬ್ಬರೂ ಬರುವ ಮುನ್ನ ಒಂದು ಹೋಟೆಲ್ನಲ್ಲಿ ಬಹಳ ಹುಳಿಯಾದ ಹಿಟ್ಟಿನಿಂದ ಮಾಡಿದ ಪಿಜ್ಜಾ ತಿಂದು ಬಂದಿದ್ದರು..!! ಸಹಜವಾಗಿ ನಾವು ಪಾಸಿಟಿವ್ ವಿಷಯಗಳು ತೆಗೆದುಕೊಳ್ಳುವಷ್ಟು ಸುಲಭವಾಗಿ ನೆಗೆಟಿವ್ ವಿಷಯಗಳನ್ನು ತೆಗೆದುಕೊಳ್ಳುವುದಿಲ್ಲ.ಆದ್ದರಿಂದ ನಾವು ಮಾತನಾಡುವಾಗ ಆದಷ್ಟುನೆಗಟಿವ್ಸಗಳನ್ನು ಕಡಿಮೆ ಮಾಡಿಕೊಳ್ಳಬೇಕು.
ಇಂತಹದೇ ಸುದ್ದಿಯನ್ನು ಸವರ್ಣ ಹಿಂದುಗಳು, ನಿಮ್ನ ವರ್ಗದವರು ಮಹಾಡ್ ಕೆರೆ ಪ್ರವೇಶಿಸಲಿದ್ದಾರೆ ಎಂದು ತಿಳಿದ ತಕ್ಷಣ.....
ಮಹಾಡ್ ನಗರದ ವೀರೇಶ್ವರ ಮಂದಿರವನ್ನು ಅಸ್ಪೃಶ್ಯರು ಪ್ರವೇಶಿಸಲಿದ್ದಾರೆ ಎಂಬ ಗಾಳಿ ಸುದ್ದಿಯನ್ನು ತೇಲಿ ಬಿಟ್ಟರು. ಅಂದುಕೊಂಡಂತೆಯೆ...ಇದು ಸವರ್ಣೀಯರನ್ನು ಕೆರಳಿಸಿತು ಅವರು ಏನೆಂದೂ ವಿಚಾರ ಮಾಡದೆ ಕೈಗೆ ಸಿಕ್ಕ ಬಡಿಗೆ, ಬಿದಿರು,ಚಾಕು, ಚೈನ್ ಹಿಡಿದು ಬೀದಿಗಿಳಿದರು. ಅಸ್ಪೃಶ್ಯರು ಮಂದಿರ ಪ್ರವೇಶಿಸಲಿದ್ದಾರೆ ಎಂಬ ಮಾತು ಅವರನ್ನು ಉದ್ರೇಕಗೊಳಿಸಿತ್ತು ಹಿಂದೂ ಧರ್ಮಕ್ಕೆ ಗಂಡಾಂತರ ಇರುವುದಾಗಿ ಬೊಬ್ಬೆ ಹಾಕಿದ ಆ ದುಷ್ಟರು ತಮ್ಮ ಆರಾಧ್ಯ ದೈವಕ್ಕೆ ಮೈಲಿಗೆಯಾಗುವುದನ್ನು ತಡೆಗಟ್ಟಲು ಪ್ರತಿಯೊಬ್ಬ ಹಿಂದು ಮುಂದಾಗಬೇಕೆಂದು ಕರೆ ನೀಡಿದರು. ಅಲ್ಲಿ ಒಂದು ರೀತಿಯ ಸಮೂಹ ಸನ್ನಿ ನಿರ್ಮಾಣವಾಗಿತ್ತು ಹಿಂದೂ ಸವರ್ಣಿಯರು ಸಮಚಿತ್ತದಿಂದ ವಿಚಾರ ಮಾಡಲು ಸಿದ್ದರಿರಲಿಲ್ಲ.ಮಂದಿರಕ್ಕೆ ಮೈಲಿಗೆ ಯಾಗಲಿದೆ ಎಂಬ ಭಯವನ್ನು ಬಹು ವ್ಯಾಪಕವಾಗಿ ಅವರು ಪ್ರಸಾರ ಮಾಡಿದರು.ಮೊದಲು ಅಂಬೇಡ್ಕರ್ ಕೆರೆಯ ನೀರು ಮುಟ್ಟಿ ಹೇಳಿದರು ಈ ಕೆರೆಯ ನೀರನ್ನು ಕುಡಿದರೆ ಮಾತ್ರ ನಾವು ಬದುಕುತ್ತೇವೆ ಅಂತ ಅಲ್ಲ ಆದರೆ ಈ ನೀರು ಕುಡಿಯುವ ಹಕ್ಕು ನಮಗೆಲ್ಲರಿಗೂ ಇದೆ. ತದನಂತರ ಸಾವಿರಾರು ಜನ ಮೆರವಣಿಗೆಕಾರರೂ ನೀರು ಮುಟ್ಟಿದರು.
ಸವರ್ಣ ಹಿಂದೂಗಳಿಗೆ
ಸತ್ಯಾಸತ್ಯತೆಯನ್ನು ಒರೆಗೆ ಹಚ್ಚುವ ತಾಳ್ಮೆ ಅವರಲ್ಲಿ ಉಳಿದಿರಲಿಲ್ಲ ಏಕೆಂದರೆ ಶಾಸನಸಭೆಯ ನಿರ್ಣಯ ಎರಡು ಬಾರಿ ಪಾಸ್ ಆಗಿ ಬಂದಾಗಲೂ ಅದನ್ನು ಹತ್ತಿಕ್ಕಿದ್ದರೂ ಅಸ್ಪೃಶ್ಯರು ಸಮಾವೇಶ ನಡೆಸಿ ಚೌಡರ ಕೆರೆ ನೀರು ಮುಟ್ಟಿದ್ದನ್ನು ಸಹಿಸಿಕೊಳ್ಳುವುದು ಹಿಂದೂಸ್ತಾನಿಯರಿಗೆ ಸಾಧ್ಯವಾಗಿರಲಿಲ್ಲ ಅಸ್ಪೃಶ್ಯರ ಸಮಾವೇಶ ಕೆರೆಯ ನೀರು ಮುಟ್ಟುವುದರೊಂದಿಗೆ ಮುಕ್ತಾಯಗೊಂಡಿದ್ದೇನೋ ನಿಜ ಆದರೆ ನಂತರದ ಬೆಳವಣಿಗೆಗಳು ಭಯಾನಕವಾಗಿದ್ದವು. ಮೆರವಣಿಗೆಯಲ್ಲಿ ಭಾಗವಹಿಸಿದ ಜನ ತಮ್ಮ ಊರ ದಾರಿ ಹಿಡಿಯುವಾಗ ವಿಶ್ರಾಂತಿಗಾಗಿ ವಿಶಾಲವಾದ ಮೈದಾನದಲ್ಲಿ ಕುಳಿತಿದ್ದರು ಇಂತಹ ಹೊತ್ತಿನಲ್ಲಿ ಹಿಂದೂ ಸವರ್ಣೀಯರ ನೂರಾರು ಗುಂಪುಗಳು ಮಾರಕಾಸ್ತ್ರಗಳನ್ನು ಹಿಡಿದು ಅಸ್ಪೃಶ್ಯರ ಮೇಲೆ ಹಲ್ಲೆ ನಡೆಸಿದರು.ಹಿಂದೂ ಸವರ್ಣೀಯರ ಗುಂಪು ಕಂಡ ಕಂಡವರನ್ನು ಹೊಡೆದು ಹಾಕಿತು, ತಲೆಗಳು ಒಡೆದವು!ಮಾಡಿದ್ದ ಅಡುಗೆಯನ್ನು ಮಣ್ಣಿಗೆ ಸೇರಿಸಲಾಯಿತು.! ಮಹಿಳೆಯರು, ಮಕ್ಕಳು,ವೃದ್ಧರು ಎನ್ನದೆ ಎಲ್ಲರನ್ನೂ ಹೊಡಿ,ಬಡಿ ಮಾಡಲಾಯಿತು.ಇದೆಲ್ಲವೂ ದಿಢೀರನೆ ನಡೆದು ಹೋಗಿತ್ತು ದಲಿತರು ಅನಿರೀಕ್ಷಿತ ದಾಳಿಯಿಂದ ತತ್ತರಿಸಿದ್ದರು. ಸಮಾವೇಶದ ಸ್ಥಳದಲ್ಲಿ ಸಂಪೂರ್ಣ ಗೊಂದಲ ಆವರಿಸಿತು . ದಿಕ್ಕಾಪಾಲಾಗಿ ಜನರು ಓಡತೊಡಗಿದಾಗ ತಿರುಗಿ ಬಿದ್ದು ಕೆಲ ನಿಮ್ನ ವರ್ಗದ ಯುವಕರು ಹಿಂದೂ ಸವರ್ಣೀಯರನ್ನೂ ತಳಿಸಿದರು.!
ಊರಿಗೆ ಹೋಗೋ ರಸ್ತೆಗಳಲ್ಲಿ, ಹೊಲಗದ್ದೆಗಳಲ್ಲಿ ಊರ ಹೊರಭಾಗಗಳಲ್ಲಿ, ಎಲ್ಲೆಂದರಲ್ಲಿ ಹೊಡೆದಾಟ ನಡೆಯಿತು.ಈ ಸಮಾವೇಶ ಮುಗಿದ ಬಳಿಕ ಬೆಂಬಲಿಗರೊಂದಿಗೆ ಅತಿಥಿಗಳ ಆರೈಕೆಗೆಂದು ಅಂಬೇಡ್ಕರ್ ಹೋದಾಗ ಈ ಸುದ್ದಿ ತಲುಪುತ್ತದೆ.ಅವರು ಕೂಡಲೇ ಮಹಾಡಿನ ಮಾಮಲೇದಾರ ಮತ್ತು ಪೊಲೀಸ್ ಇನ್ಸ್ಪೆಕ್ಟರ್ ಅವರನ್ನು ಭೇಟಿ ಮಾಡಲು ಮುಂದಾಗ್ತಾರೆ ರಸ್ತೆ ರಸ್ತೆಯಲ್ಲಿ ನಡೆದಿದ್ದ ಹಲ್ಲೆಗಳ ಮಧ್ಯೆ ಅವರು ತಮ್ಮ ಹತ್ತಾರು ಜನ ಅನುಯಾಯಿಗಳೊಂದಿಗೆ ಬೀದಿಯಲ್ಲಿ ಹೋಗುತ್ತಿದ್ದಾಗ ಈ ಇಬ್ಬರು ಅಧಿಕಾರಿಗಳು ಎದುರಿಗೆ ಬಂದು 'ನಿಮ್ಮ ಜನರನ್ನು ನೀವು ಹತೋಟಿಗೆ ತೆಗೆದುಕೊಳ್ಳಿ, ಇಲ್ಲದೆ ಹೋದರೆ ಇಲ್ಲಿ ಹಣಗಳ ರಾಶಿ ಬೀಳುತ್ತದೆ ' ಎಂದು ಗೋಗರೆಯುತ್ತಾರೆ.
ಮಹಾಡ್ ನಗರದ ಪ್ರತಿಯೊಂದು ರಸ್ತೆಯನ್ನು ಸುತ್ತಿ ಬಂದ ಅಂಬೇಡ್ಕರ್ ಅಸ್ಪೃಶ್ಯರಿಗೆ ಸಾಂತ್ವನ ಹೇಳುತ್ತಾ ಸಾಗಿದರು.'ವೀರೇಶ್ವರ ಮಂದಿರ ಪ್ರವೇಶಿಸುವ ವಿಚಾರವೇ ತಮಗಿಲ್ಲ 'ಎಂದು ಹಿಂದೂ ಸವಣೀಯರಿಗೆ ಸ್ಪಷ್ಟಪಡಿಸಿದರು. ಎಲ್ಲಾ ಕಡೆ ಗಲಭೆ ಕೊಂಚ ಇಳಿಮುಖವಾಯಿತು ಆ ಹೊತ್ತಿಗಾಗಲೇ 20 ರಿಂದ 25 ಜನ ದಲಿತರು ಹಲ್ಲೆಗೆ ಗುರಿಯಾಗಿದ್ದರು.
ಆ ರಾತ್ರಿ ಮತ್ತೆ ಗಲಭೆ
ಮರುಕಳಿಸುತ್ತದೆ. ಹಿಂದೂ ಸವರ್ಣೀಯರು,ಗುಂಪು ಕಟ್ಟಿಕೊಂಡು ಗೂಂಡಾಗಳಂತೆ ತಿರುಗಲು ಆರಂಭಿಸುತ್ತಾರೆ . ಪರಸ್ಥಳದವರೆಂದು ಕಂಡ ಕಂಡವರ ಮೇಲೆ ಎಲ್ಲಾ ಕಡೆಗೂ ಹಲ್ಲೆ ನಡೆಸುತ್ತಾರೆ. ಮಹಾಡ್ ನಗರದ ಕಾಲೋನಿಗಳ ಮೇಲೆಯೂ ಹಲ್ಲೆ ನಡೆಯುತ್ತದೆ ಸಮಾವೇಶದ ಸ್ಥಳದಲ್ಲಿ ಇನ್ನೂ ಕುಳಿತಿದ್ದ ಗುಂಪುಗಳನ್ನೂ ಸಹ ಥಳಿಸಲಾಗುತ್ತದೆ. ಆಗ ಪೊಲೀಸರು ಮೂಕ ಪ್ರೇಕ್ಷಕರಾಗುತ್ತಾರೆ.
ಹಿಂದೂ ಸವರ್ಣೀಯರು ಇಷ್ಟಕ್ಕೆ ಸುಮ್ಮನಾಗದೆ ಮಹಾಡ್ ಹಾಗೂ ಸುತ್ತಮುತ್ತಲ ಗ್ರಾಮಗಳಿಗೆ ಸುದ್ದಿಯನ್ನು ಕಳಿಸುತ್ತದೆ, ಆ ಸಮಾವೇಶಕ್ಕೆ ಬಂದಿದ್ದ ಅಸ್ಪೃಶ್ಯರಿಗೆ ಬಹಿಷ್ಕಾರ ಹಾಕಲು ಹೇಳುತ್ತದೆ,ಅವರಿಗೆ ಯಾವ ಕೆಲಸವನ್ನೂ ನೀಡದಿರಲು ಆದೇಶ ಮಾಡಿ ಕಳಿಸುತ್ತದೆ ಇದರಿಂದ ಗಲಭೆಗಳು ನಡೆಯುತ್ತವೆ. ಹಳ್ಳಿಯಿಂದ ನಗರದತ್ತ ಬರಬೇಕೆಂದು ಅಸ್ಪೃಶ್ಯರಿಗೆ ನಗರದಲ್ಲೂ ದಾಳಿ ನಡೆಯುತ್ತದೆ ಎಂಬುದನ್ನು ತಿಳಿದು ಗೊಂದಲಕ್ಕೆ ಒಳಗಾಗುತ್ತಾರೆ.
ಅಂಬೇಡ್ಕರ ಅತಿಥಿ ಗ್ರಹಕ್ಕೆ ಬಂದಾಗ ಅಲ್ಲಿ ನೂರಾರು ಜನ ಅಸ್ಪೃಶ್ಯರು ಕಣ್ಣು ಕೆಂಪಗೆ ಮಾಡಿಕೊಂಡು ನಿಂತಿದ್ದರು. ಅವರ ದನಿ ನಡುಗುತ್ತಿತ್ತು ಅವರ ಕೈಯಲ್ಲಿ ಬಡಿಗೆಗಳಿದ್ದು ಕಾಲುಗಳನ್ನು ನೆಲಕ್ಕೆ ಅಪ್ಪಳಿಸುತ್ತಿದ್ದರವರು ತಮ್ಮ ಜನರ ಮೇಲೆ ಹಲ್ಲೆ ಮಾಡಿದ ಹಿಂದೂ ಸವರ್ಣೀಯರನ್ನು ಬಲಿ ಪಡೆಯಲು ಸಜ್ಜಾಗಿ ನಿಂತಿದ್ದರು. ಅವರಿಗೆ ಅಂಬೇಡ್ಕರ್ ಅನುಮತಿ ಬೇಕಾಗಿತ್ತು ಅಷ್ಟೇ. ಆತ್ಮ ರಕ್ಷಣೆ ಮಾಡಿಕೊಳ್ಳದಿದ್ದರೆ ತಾವು ಸರ್ವನಾಶವಾಗುತ್ತೇವೆ ಎಂಬ ಆತಂಕ ಅವರಲ್ಲಿ ಮೂಡಿತ್ತು ಆದರೆ ಅಂಬೇಡ್ಕರರಿಂದ ಅವರಿಗೆ ಸಹನೆಯಿಂದ ಇರುವ ಸಲಹೆ ಸಿಕ್ಕಿತು..! ಶಿಸ್ತು ಮತ್ತು ಶಾಂತಿಯಿಂದ ವರ್ತಿಸುವ ಮೂಲಕ ದಮನವನ್ನು ಸಮರ್ಥವಾಗಿ ಎದುರಿಸಲು ಸಾಧ್ಯ ಎಂಬುದನ್ನು ಅವರು ತಮ್ಮ ಮಾತಿನ ಮೂಲಕ ತಿಳಿಸಿ ಹೇಳಿದ್ದರು. ನಮ್ಮ ತಾಳ್ಮೆಯನ್ನು ಹೇಡಿತನವೆಂದು ಪರಿಗಣಿಸಬಾರದು ಎಂದೂ ಎಚ್ಚರಿಸಿದ್ದರು.
ಈ ಮೊದಲು ಮಹಾಡ್ ದ ಚೌಡಾರ್ ಕೆರೆಗೆ ಪ್ರವೇಶ ದೊರಕದಿದ್ದುದಕ್ಕೆ ಕಾರಣ, ಸವರ್ಣ ಹಿಂದುಗಳ ಪ್ರಬಲ ಪ್ರತಿರೋಧವನ್ನೇ ಒಡ್ಡಿದ್ದರು. ಈ ಹಿನ್ನೆಲೆಯಲ್ಲಿ ಕೋಲಾಬ ಜಿಲ್ಲಾ ವರ್ಗಗಳ ಸಂಘವು ಮಹಾಡ್ ನಲ್ಲಿ ಮಾರ್ಚ್ 19- 20 -1927ರಂದು ಸಮಾವೇಶವೊಂದನ್ನು ನಡೆಸಲು ನಿರ್ಧರಿಸಿತು. ಡಾ// ಅಂಬೇಡ್ಕರರು ಈ ಸಮಾವೇಶದ ಮುಖ್ಯ ಅತಿಥಿಗಳಾಗಿದ್ದರು. ಸುರೇಂದ್ರನಾಥ ಟಿಪ್ಣಿಸ್,,ಸುಬೇದಾರ ಸಾವಡ್ಕರ್, ಆನಂತರಾವ್ ಚಿತ್ರೆ ಮುಂತಾದವರು ಸಮಾವೇಶದ ಸಕಲ ಸಿದ್ಧತೆಗಳನ್ನು ಅಚ್ಚುಕಟ್ಟಾಗಿ ಮಾಡಿದ್ದರು . ಒಟ್ಟಿನಲ್ಲಿ ಸಮಾವೇಶದ ಮಹತ್ವವನ್ನು ನಿಮ್ನ ವರ್ಗಗಳಿಗೆ ಮನಗಾಣಿಸಿ ಕೊಟ್ಟಿದ್ದಾರೆ ಮಹಾರಾಷ್ಟ್ರ ಗುಜರಾತ್ ಗಳಿಂದ ಬಂದ ನಿಮ್ನ ವರ್ಗಗಳ ಜನರ ಸಂಖ್ಯೆ 10,000 ರ ದಾಟಿತ್ತು ಸಮಾವೇಶವು ಯಶಸ್ವಿಯಾಗಿ ನಡೆಯಲು ಎಲ್ಲ ಸಿದ್ಧತೆಗಳನ್ನು ಮಾಡಲಾಗಿತ್ತು ಹಿಂದೂ ಸವರ್ಣಿಯರಿಂದ ನೀರು ಖರೀದಿಸಿಟ್ಟು ಸಮಾವೇಶದ ಪ್ರತಿನಿಧಿಗಳಿಗೆ ಒದಗಿಸಲಾಯಿತು ಏಕೆಂದರೆ ಸಮಾವೇಶದ ಸ್ಥಳದಲ್ಲಿ ನೀರಿನ ಕೊರತೆ ಇತ್ತು.ಅಂಬೇಡ್ಕರ್ ದನಿಯಲ್ಲಿ ಹೋರಾಟದ ಕಾವಿತ್ತು ಅವರ ಮಾತುಗಳು ಬೆಟ್ಟಗುಡ್ಡಗಳಲ್ಲಿ ಮಾರ್ದನಿಗೊಂಡವು. ಹಳ್ಳಿ ಪಟ್ಟಣ ಸೇರಿದವು. ನಿರ್ಬಂಧ ಹಾಕಿರುವುದನ್ನು ಪ್ರಸ್ತಾಪಿಸಿದ ಅವರು ಮಿಲಿಟರಿಯಲ್ಲಿ ಭರ್ತಿಯಾಗುವ ಮೂಲಕ ನಾವು ನಮ್ಮ ಜೀವನಮಟ್ಟವನ್ನು ಉತ್ತಮಪಡಿಸಿಕೊಂಡಿದ್ದೆವು. ನಮ್ಮ ಧೈರ್ಯ ಕ್ಕೆಚ್ಚು ಪ್ರತಿಭೆಗಳನ್ನು ಸಾಬೀತುಪಡಿಸಿದ್ದೆವು ನಮ್ಮವರು ಮಿಲಿಟರಿ ಶಾಲೆಗಳ ಮುಖ್ಯಸ್ಥರಾಗಿದ್ದರು . ಮಿಲಿಟರಿ ಕ್ಯಾಂಪಸ್ ಶಾಲೆಗಳಲ್ಲಿ ಅಸ್ಪೃಶ್ಯರ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕುತ್ತಿತ್ತು ಅಸ್ಪೃಶ್ಯರಿಗೆ ಸೇನೆ ಸೇರುವ ಅವಕಾಶವನ್ನು ನಿರಾಕರಿಸುವುದು ದ್ರೋಹವಲ್ಲದೆ ಮತ್ತೇನು?ಎಂದು ಪ್ರಶ್ನಿಸಿದ್ದರು. ನೆಪೋಲಿಯನ್ ಯುದ್ಧದಲ್ಲಿ ಫ್ರೆಂಚ್ ಸೇವೆಯನ್ನು ಎದುರಿಸುವಲ್ಲಿ ಬ್ರಿಟಿಷ್ ಸೇನೆ ನಿರತವಾಗಿದ್ದಾಗ ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯ ಉರುಳಿ ಬೀಳದಂತೆ ಕಾವಲಿದ್ದುದ್ದು ಅಸ್ಪೃಶ್ಯ ಸೈನಿಕರೇ ಎಂಬುದನ್ನು ಬ್ರಿಟಿಷ್ ಆಡಳಿತ ಮರೆಯಬಾರದು ಎಂದು ಗುಡುಗಿದರು.
ಮಹಾಡ್ ಸತ್ಯಾಗ್ರಹ ಮೆರವಣಿಗೆಯಲ್ಲಿ 500 ಜನ ಸ್ತ್ರೀಯರು ಪಾಲ್ಗೊಂಡಿದ್ದರು. ಕಾಲಾರಾಂ ದೇವಾಲಯ ಪ್ರವೇಶ ಸಂದರ್ಭದಲ್ಲಿ ಕೂಡ ಮಹಿಳೆಯರಿದ್ದರು 1927ರಲ್ಲಿ 3000 ಹಿಂದುಳಿದ ಮಹಿಳೆಯರನ್ನು ಉದ್ದೇಶಿಸಿ ಮಾತನಾಡುತ್ತಾ ನಿಮ್ಮ ಬಟ್ಟೆ ತೇಪೆಯಿಂದ ಕೂಡಿದರೆ ಏನಾಯಿತು? ಸ್ವಚ್ಛವಾಗಿರಿ ನಿಮ್ಮನ್ನು ನೀವೇ ಮುಟ್ಟಿಸಿಕೊಳ್ಳದವರೆಂದು ಭಾವಿಸಬೇಡಿ ನಿಮ್ಮ ಮಕ್ಕಳನ್ನು ಅದರಲ್ಲೂ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಿ ಮಕ್ಕಳ ಮನಸ್ಸಿನ ಕೀಳರಿಮೆ ತೆಗೆದುಹಾಕಿ ಅಂತ ಬಾಬಾಸಾಹೇಬರು ಹೇಳಿದ್ದರು. ಬಾಬಾ ಸಾಹೇಬರು ಕೊನೆಗೊಂದು ಮಾತು ಹೇಳುತ್ತಾರೆ ಕೆಲವು ಬ್ರಾಹ್ಮಣರು ಮತ್ತು ಕೆಲವು ಬ್ರಾಹ್ಮಣೇತರರು ತಮ್ಮ ಬೇಳೆಯನ್ನು ಭೇಯಿಸಿಕೊಳ್ಳಲು ಹಿಂದುಳಿದವರನ್ನು ನಿಮ್ನ ವರ್ಗಗಳವರನ್ನು ಮತ್ತು ಅಸ್ಪೃಶ್ಯರನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ. ಅಸ್ಪೃಶ್ಯರು ಯಾವುದೇ ವರ್ಗದ
ಕೈದಾಳಗಳಾಗಕೂಡದು ಮುಸ್ಲಿಮರ ಬಗ್ಗೆ ಹೊಂದಿರುವ ಭಯ ಮತ್ತು ಆತಂಕಗಳಿಂದಾಗಿ ಸವರ್ಣೀಯ ಹಿಂದುಗಳು ನಮ್ಮನ್ನು ಪ್ರೀತಿಸುವ ನಾಟಕವಾಡಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ , ಅಸ್ಪೃಶ್ಯರನ್ನು ತಮ್ಮ ಸರಿ ಸಮಾನರೆಂದು ಪರಿಗಣಿಸದ ಯಾರನ್ನೂ ನಂಬಬೇಡಿ ಎಂದು ಹೇಳಿದರು. ಹಿಂದೂ ಸವರ್ಣೀಯರ ಮೆದು ಮಾತುಗಳಿಗೆ ಮಾರುಹೋಗದೆ ನಿಮ್ಮ ವರ್ಗಗಳು ತಮ್ಮ ಹಕ್ಕುಗಳನ್ನು ನಿರ್ಭೀತಿಯಿಂದ ಚಲಾಯಿಸಲು ಮುಂದಾಗಬೇಕಾಗಿದೆ ಎನ್ನುವುದು ಬಾಬಾ ಸಾಹೇಬ್ ಅಂಬೇಡ್ಕರ್ ರು ಕರೆಕೊಟ್ಟರು.
ಲೇಖಕರು : ಬಸವರಾಜ ಜಾಲವಾದಿ, ವಿಜಯಪುರ
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
ನೀರಿನ ಸಮಸ್ಯೆಯನ್ನು ಪರಿಹರಿಸಲು ಒತ್ತಾಯ
ವಿಜಯಪುರ: ನೀರು ಸಮಸ್ಯೆಯನ್ನು ಪರಿಹರಿಸಬೇಕೆಂದು ಒತ್ತಾಯಿಸಿ ಕಾನ್ಫೆರೇಶನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ಸ್ ಆಫ್ ಇಂಡಿಯಾ (CREDAI), ವಿಜಯಪುರ ವತಿಯಿಂದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ವಿಜಯಪುರ ವಿಭಾಗದ ಕಾರ್ಯಪಾಲಕ ಅಭಿಯಂತರರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕ್ರೇಡೈ ಜಿಲ್ಲಾಧ್ಯಕ್ಷ ಮಹಾವೀರ ಪಾರೇಕ ಮಾತನಾಡಿ, ನಮ್ಮದು ರಿಯಲ್ ಎಸ್ಟೇಟ್ ಉದ್ಯಮದ ಭವಿಷ್ಯವನ್ನು ರೂಪಿಸಲು ಮೀಸಲಾಗಿರುವ ವೃತ್ತಿಪರರ ಕ್ರಿಯಾತ್ಮಕ ಜಾಲವಾಗಿದೆ. ವಿಜಯಪುರ ಜಿಲ್ಲಾ ಎಲ್ಲಾ ಲೇಔಟನಲ್ಲಿ ನೀರಿನ ವ್ಯವಸ್ಥೆ ಸರಿಯಾಗಿ ಮಾಡಿರುವುದಿಲ್ಲ. ಗುಂಟಾ ಪ್ಲಾಟಗಳಲ್ಲಿ ನೀರಿನ ಸೌಲಭ್ಯ ಒದಗಿಸಿದರೂ, ನಮ್ಮ ಎನ್.ಎ. ಪ್ಲಾಟ್ ಡೆವಲಪ್ಮೆಂಟ್ ವತಿಯಿಂದ ಸರ್ಕಾರಿ ಖರ್ಚು ವೆಚ್ಚಗಳನ್ನು ವೆಚ್ಚ ಭರಿಸಿದ್ದರೂ ಸಹ ನಮಗೆ ಸರಿಯಾಗಿ ನೀರು ನೀಡದಿರುವುದು ಸಮಸ್ಯೆಯಾಗಿದೆ. ಕೂಡಲೇ ನಮ್ಮ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ನಮಗೆ ನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಒತ್ತಾಯಿಸಿದರು.
ನಮ್ಮ ಸಂಸ್ಥೆಯು ಸಾರ್ವಜನಿಕರ ಕುಂದು ಕೊರತೆಗಳನ್ನು ಪರಿಹರಿಸಿ ಅವರ ಬೆಳವಣಿಗೆಗೆ ಮತ್ತು ಅವರ ಏಳ್ಗೆಯನ್ನು ಹೊಂದಲು ಕಾರ್ಯಕೈಗೊಳ್ಳಲಾಗುತ್ತಿದೆ. ನಮ್ಮ ಶ್ರೇಣಿಯಲ್ಲಿ ಸಹಯೋಗ, ನಾವೀನ್ಯತೆ ಮತ್ತು ಶ್ರೇಷ್ಠತೆಯನ್ನು ಬೆಳೆಸುವುದು ನಮ್ಮ ಧ್ಯೇಯವಾಗಿದೆ. ಆದ ಕಾರಣ ನೀರಿನ ಸಮಸ್ಯೆಯನ್ನು ತಕ್ಷಣ ಪೂರೈಸಬೇಕೆಂದು ಹೇಳಿದರು.
ಈ ಸಂದರ್ಭ ಕಾರ್ಯದರ್ಶಿ ಮುಖೇಶ ಮೆಹ್ತಾ, ವಿಮಲ ಶಹಾ, ಖಜಾಂಚಿ ವಿನಯ ರುಣವಾಲ್, ಶರದ್ ರೋಡಗಿ, ಅನುಪಮ ರುಣವಾಲ, ರಾಜೇಂದ್ರ ರುಣವಾಲ, ಸಲೀಂ ಪಠಾಣ, ಎಮ್.ಎಮ್. ಶಾರಪ್ಯಾದೆ, ಅಮೃತ ಪೋರವಾಲ, ಮೆಹಬೂಬ ಅಥಣಿ, ಮನಿಷ್ ಪಾರೇಕ, ದಿನೇಶ ತೋಸನಿವಾಲ, ಅನೀಲ ಅವಳೆ, ಸಚೀನ ಬೊಂಬಳೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
Tuesday, March 18, 2025
Monday, March 17, 2025
Sunday, March 16, 2025
ಮಹಾಲಕ್ಷ್ಮೀ ಸಹಕಾರಿ ಬ್ಯಾಂಕ್ ಕಾರ್ಯಾಲಯಕ್ಕೆ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ
ವಿಜಯಪುರ : ವಿಜಯಪುರದ ಸಹಕಾರ ವಲಯದ ಪ್ರತಿಷ್ಠಿತ ಸಹಕಾರಿ ಬ್ಯಾಂಕ ಆಗಿರುವ ಮಹಾಲಕ್ಷ್ಮೀ ಸಹಕಾರಿ ಬ್ಯಾಂಕ್ ಕಾರ್ಯಾಲಯಕ್ಕೆ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರು ಭೇಟಿ ನೀಡಿ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಅನುಗ್ರಹಪೂರ್ವಕ ಆಶೀರ್ವಾದ ಮಾಡಿದರು. ಬಡವರ ಕಲ್ಯಾಣಕ್ಕೆ ಈ ಬ್ಯಾಂಕು ಸದಾ ಶ್ರಮಿಸಲಿ, ಉತ್ತಮ ಆರ್ಥಿಕ ಸೇವೆ ನೀಡಿ ಬಡವರಿಗೆ ಆರ್ಥಿಕ ಚೈತನ್ಯ ತುಂಬಲಿ, ಹೀಗೆ ಬ್ಯಾಂಕು ಉತ್ತರೋತ್ತರವಾಗಿ ಬೆಳೆಯಲಿ ಎಂದು ಅನುಗ್ರಹ ಸಂದೇಶ ನೀಡಿದರು.
ಈ ವೇಳೆ ಮಹಾಲಕ್ಷ್ಮಿ ಬ್ಯಾಂಕ್ ಅಧ್ಯಕ್ಷ ಮುಕುಂದ ಕುಲಕರ್ಣಿ ವಿವರಣೆ ನೀಡಿ, ಮಹಾಲಕ್ಷ್ಮಿ ಸಹಕಾರ ಬ್ಯಾಂಕ್ ಕಳೆದ ಹಲವಾರು ದಶಕಗಳಿಂದ ಉತ್ತಮ ಸೇವೆ ಸಲ್ಲಿಸುತ್ತಿದ್ದು ದಿ.ಶ್ರೀನಿವಾಸರಾವ ಸ್ವಾಮೀರಾವ ದೇಶಪಾಂಡೆ ಅವರು ೧೯೩೦ ರಲ್ಲಿ ಈ ಬ್ಯಾಂಕ್ ಸ್ಥಾಪಿಸಿದ್ದು, ಶತಮಾನೋತ್ಸವದ ಹೊಸ್ತಿಲಲ್ಲಿದೆ ಎಂದು ಬ್ಯಾಂಕ ಗ್ರಾಹಕರಿಗೆ ಕಲ್ಪಿಸಿರುವ ಸೌಲಭ್ಯಗಳ ಬಗ್ಗೆ ವಿವರಿಸಿದರು.
ಉಪಾಧ್ಯಕ್ಷ ವಿಕಾಸ್ ಪದಕಿ, ನಿರ್ದೇಶಕರಾದ ವಿಜಯ ಜೋಶಿ, ಕೃಷ್ಣ ಗುನ್ನಾಳಕರ, ಗೋವಿಂದ ಜೋಶಿ, ಶಂಕರ್ ರಾವ್ ಕುಲಕರ್ಣಿ, ಸಚಿನ್ ಮದ್ದಿನಮಠ, ಪವನ್ ಕುಲಕರ್ಣಿ, ಬಸವರಾಜ್ ಪತ್ತಾರ್, ವೃತ್ತಿಪರ ನಿರ್ದೇಶಕ ಸಮೀರ್ ಕುಲಕರ್ಣಿ, ಬ್ಯಾಂಕ್ ವ್ಯವಸ್ಥಾಪಕರಾದ ಪದ್ಮಾವತಿ ಕುಲಕರ್ಣಿ ಕಲ್ಯಾಣಿ ಸಂಗಮ್ ಕೃಷ್ಣ ಜೋಶಿ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
ಬಡವರಿಗೆ ಸಂತೋಷ ಗೊಳಿಸುವುದೇ ನಿಜವಾದ ಹಬ್ಬ : ಚಂದ್ರಶೇಖರ ಬುರಾಣಪುರ
ವಿಜಯಪುರ : ನಿರ್ಗತಿಕ, ಬಡ ಕುಟುಂಬಗಳಿಗೆ ರಂಜಾನ್ ಹಬ್ಬದ ಪ್ರಯುಕ್ತ ಚಂದ್ರಶೇಖರ ಬುರಾಣಪುರ ಕುಟುಂಬದ ವತಿಯಿಂದ ಸುಮಾರು ೧೫೦ ಕುಟುಂಬಕ್ಕೆ ಆಹಾರ ಕಿಟ್ ನಗರದ ಮುಳಗಸಿಯಲ್ಲಿ ನೀಡಲಾಯಿತು.
ಜಿಲ್ಲಾ ಪಂಚಾಯತ್ ಸಾಂಕಿಕ ಅಧಿಕಾರಿ ರಾ ಬಹಾದ್ಧೂರ ಮಾತನಾಡಿ, ರಂಜಾನ್ ಹಬ್ಬವು ದಾನ ಧರ್ಮದ ಸಂಕೇತವಾಗಿದ್ದು, ಅದನ್ನು ಯಾವುದೇ ಜಾತಿ, ಧರ್ಮಕ್ಕೆ ಹೊಲಿಸದೇ ಮಾನವ ಧರ್ಮ ಒಂದೇ ಎಂಬ ಉದ್ದೇಶದಿಂದ ಎಲ್ಲ ಬಡ ಕುಟುಂಬಕ್ಕೆ ಆಹ್ವಾನ ಕೋರಿ ಆಹಾರ ಕಿಟ್ ವಿತರಣೆ ಮಾಡಿರುವುದು ಸಂತಸ ತಂದಿದೆ. ಇವರು ದೀಪಾವಳಿ, ರಮಜಾನ್ ಮುಂತಾದವ ಯಾವುದೇ ಹಬ್ಬವಿದ್ದರು ಬಡವರಿಗೆ ಆಹಾರ ಕಿಟ್ ನಿಡುವುದು, ನಿರಾಶ್ರಿತರಿಗೆ ಕೈಲಾದ ಸಹಾಯ ಮಾಡುವ ಮನೋಭಾವನೆಯೂ ನಿಜಕ್ಕೂ ಶ್ಲಾö್ಯಘನೀಯ ಚಂದ್ರಶೇಖರ ಬುರಾಣಪೂರ ಕುಟುಂಬವು ಬಡ ಬಲಿದರಿಗೆ ಇದೇ ರೀತಿಯಾಗಿ ಸಹಾಯ ಮಾಡುವಲ್ಲಿ ಮುಂದಾಗಲಿ ದೇವರು ಇವರ ಕುಟುಂಬಕ್ಕೆ ಇನಷ್ಟು ದಾನ ಮಾಡಲು ಶಕ್ತಿ ಕರುಣಿಸಲಿ ಎಂದರು.
ಇದೇ ಸಂದರ್ಭದಲ್ಲಿ ಪೂಜಾ ಬುರಾಣಪೂರ ಮಾತನಾಡಿ, ಪ್ರತಿ ವರ್ಷ ನಮ್ಮ ಕುಟುಂಬದಿAದ ನಮ್ಮ ತಂದೆ ತಾಯಿ ಸರ್ವಜನಾಂಗಕ್ಕೂ ಆಹಾರ ಕಿಟ್ ವಿತರಿಸುತ್ತಿರುವುದು ನನಗೆ ಹೆಮ್ಮೆಯಾಗುತ್ತಿದೆ. ಇಂತಹ ತಂದೆ ತಾಯಿಗೆ ಮಗಳಾಗಿರುವುದು ನಾನೇ ಪುಣ್ಯವಂತೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಲೆಕ್ಕಾಧಿಕಾರಿ ಅನ್ವರ ನದಾಫ್ ಮಾತನಾಡಿ, ಚಂದ್ರಶೇಖರ ಬುರಾಣಪೂರ ಇವರು ಜಾತಿ ಮತ ತೊರೆದು ಸರ್ವಜನಾಂಗದ ಕಷ್ಟಕ್ಕೇ ಮುಂದಾಗುವ ಕಾಳಜಿವುಳ್ಳ ವ್ಯಕ್ತಿಯಾಗಿದ್ದಾರೆ. ಪ್ರತಿ ಹಬ್ಬದಲ್ಲಿ ತಮ್ಮ ಸಂತೋಷವನ್ನು ಬಡವರಿಗೆ ಸಹಾಯ ಮಾಡುವುದರ ಮೂಲಕ ಹಬ್ಬ ಆಚರಿಸಿಕೊಳ್ಳುತ್ತಾರೆ ಆದ ಕಾರಣ ಇವರು ಕುಟುಂಬಕ್ಕೇ ಭಗವಂತ ನೆಮ್ಮದಿ ನೀಡಲೆಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಅಂಬಿಕಾ ಚಂದ್ರಶೇಖರ ಬುರಾಣಪೂರ, ಹಾಗೂ ಕುಟುಂಬದ ಸದಸ್ಯರು ಇದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
Saturday, March 15, 2025
Friday, March 14, 2025
Thursday, March 13, 2025
Wednesday, March 12, 2025
Tuesday, March 11, 2025
ಉದಯೋನ್ಮುಖ ಕೃಷಿ ಪಂಡಿತ ಪ್ರಶಸ್ತಿಗೆ ಕಾಶೀರಾಯ ನೀ. ಬಿರಾದಾರ ಭಾಜನ
ಈ ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ
ವಿಜಯಪುರ : 2023-24ನೇ ಸಾಲಿನ ಕರ್ನಾಟಕ ಸರ್ಕಾರ ಕೃಷಿ ಇಲಾಖೆವತಿಯಿಂದ ಕೊಡಮಾಡುವ ಜಿಲ್ಲಾಮಟ್ಟದ ಉದಯೋನ್ಮುಖ ಕೃಷಿ ಪಂಡಿತ ಪ್ರಶಸ್ತಿಗೆ ವಿಜಯಪುರ ಜಿಲ್ಲೆಯ ಹೆಗಡಿಹಾಳ ಗ್ರಾಮದ ಕಾಶೀರಾಯ ನೀಲನಗೌಡ ಬಿರಾದಾರ ಅವರು ಭಾಜನರಾಗಿದ್ದಾರೆ.
ಕಾಶೀರಾಯ ಬಿರಾದಾರ ಅವರ ಕೃಷಿಯಲ್ಲಿನ ಸೇವೆಯನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಶಸ್ತಿಗೆ ಭಾಜನರಾದ ಹಿನ್ನೆಲೆ ಕತಕನಹಳ್ಳಿ ಗ್ರಾಮದ ರೈತರಾದ ಬಸವರಾಜ ಸಂಗಪ್ಪ ಬಬಲೇಶ್ವರ, ನಿವೃತ್ತ ಕೃಷಿ ಅಧಿಕಾರಿಗಳಾದ ಬಸವರಾಜ ಶಿವಪ್ಪ ಇಂಡಿ ಸೇರಿದಂತೆ ವಿಜಯಪುರ ಜಿಲ್ಲೆಯ ಜನರು ಅಭಿನಂದಿಸಿ ಗೌರವಿಸಿದ್ದಾರೆ.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
Monday, March 10, 2025
Sunday, March 9, 2025
ಚಾಂಪಿಯನ್ ಟ್ರೋಫಿ ಗೆದ್ದ ಭಾರತ
2025ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದು ಭಾರತ ಸಂಭ್ರಮಿಸಿದೆ. ಈ ಮೂಲಕ ಸತತ 2 ಐಸಿಸಿ ಟ್ರೋಫಿ ಗೆದ್ದ ಸಾಧನೆ ಮಾಡಿದೆ.
ನ್ಯೂಜಿಲೆಂಡ್ ಕೊಟ್ಟ ಟಾರ್ಗೆಟ್ 252 ರನ್ ಬೆನ್ನತ್ತಿದ್ದ ಭಾರತಕ್ಕೆ ನಾಯಕ ರೋಹಿತ್ ಶರ್ಮಾ ಅಬ್ಬರಿಸಿ ಬ್ಯಾಟಿಂಗ್ ನಡೆಸಿದರು. ರೋಹಿತ್ ಹಾಗೂ ಶುಭಮನ್ ಗಿಲ್ ಜೊತೆಯಾಟ ಟೀಂ ಇಂಡಿಯಾ ಆತ್ಮವಿಶ್ವಾಸ ಹೆಚ್ಚಿಸಿತು. ಈ ಜೋಡಿ 100 ರನ್ ಜೊತೆಯಾಟ ನೀಡಿತು.
ಶುಭಮನ್ ಗಿಲ್ 31 ರನ್ ಸಿಡಿಸಿ ಔಟಾದರು. ಬಳಿಕ ಬಂದ ಕೊಹ್ಲಿ ಬಂದ ರಭಸದಲ್ಲಿ ವಿಕೆಟ್ ಕೈಚೆಲ್ಲಿದರು.ಈ ವೇಳೆ ಭಾರತ 106 ರನ್‌ಗೆ 2ನೇ ವಿಕೆಟ್ ಕಳೆದುಕೊಂಡಿತ್ತು.
ಕೋಹ್ಲಿ ವಿಕೆಟ್ ಪತನಗೊಂಡರೂ ಅಭಿಮಾನಿಗಳಿಗೆ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಕೊಂಚ ಸಮಾಧಾನ ತಂದಿತ್ತು. ಆದರೆ ರೋಹಿತ್ ಶರ್ಮಾ 76 ರನ್ ಸಿಡಿಸಿ ಔಟಾದರು.
ಬಳಿಕ ಶ್ರೇಯಸ್ ಅಯ್ಯರ್ ಹಾಗೂ ಅಕ್ಸರ್ ಪಟೇಲ್ ಹೋರಾಟ ನಿಧಾನವಾಗಿ ಭಾರತ ಚೇತರಿಸಿಕೊಳ್ಳಲು ಆರಂಭಿಸಿತು. ಅಯ್ಯರ್ 48 ರನ್ ಸಿಡಿಸಿ ಔಟಾದರು.ಅಕ್ಸರ್ ಪಟೇಲ್ ಕೂಡ 29 ರನ್ ಸಿಡಿಸಿ ಔಟಾದರು. ಅಂತಿಮ ಹಂತದಲ್ಲಿ ಕೆಎಲ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾ ಗೆಲುವು ಖಚಿತಪಡಿಸಿದರು. ಕೊನೆಯವರೆಗೂ ಕ್ರೀಸ್‌ನಲ್ಲೇ ನಿಂತು ಕೆ.ಎಲ್ ರಾಹುಲ್ ಭಾರತ ತಂಡವನ್ನು ಗೆಲ್ಲಿಸಿದರು. ರಾಹುಲ್ 1 ಸಿಕ್ಸರ್, 1 ಫೋರ್ ಸಮೇತ 34 ರನ್ ಸಿಡಿಸಿದರು. ಭಾರತ 49 ಓವರ್‌ನಲ್ಲಿ 254 ರನ್ ಗಳಿಸಿ ಗೆಲುವು ಸಾಧಿಸಿದೆ.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
Saturday, March 8, 2025
Friday, March 7, 2025
ಆಧುನಿಕ ಭಾರತದಲ್ಲಿ ಮಹಿಳೆ
ಮನೆ ಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಸ್ತ್ರೀ ಎಂದರೆ ಅಷ್ಟೇ ಸಾಕೆ
ಸ್ತ್ರೀ ಸ್ತ್ರೀ ಎಂದರೆ ಅಷ್ಟೇ ಸಾಕೆ..
ಕನ್ನಡದಖ್ಯಾತ ಸಾಹಿತಿಡಾ ಶಿವರುದ್ರಪ್ಪನವರ ಈ ಸಾಲು ಸಾರ್ಥಕನೆನ್ನಿಸುತ್ತದೆ. ಹೌದು ಸ್ತ್ರೀ ಕನಸು ಹೌದು, ವಾಸ್ತವವೂ ಹೌದು. ಸ್ತ್ರೀಗೂ ಪ್ರಕೃತಿಗೂ ಅವಿನಾಬವ ಸಂಬಂಧವಿದೆ. ಈಕೆ ಭೂಮಿಯಾಗಿ ಮಿಗಿಲಾಗಿ ಮೇರು ಪರ್ವತವಾಗಿ ಬೆಳೆದು ನಿಂತಿದ್ದಾಳೆ. ಹೀಗಾಗಿ ಸ್ತ್ರೀಯನ್ನು ಸಮೃದ್ಧಿಯ ಸಂಕೇತವೆಂದು ಪರಿಭಾವಿಸಲಾಗಿದೆ.
ನಡುರಾತ್ರಿಯಲ್ಲಿ ಮಹಿಳೆಯೊಬ್ಬಳು ನಿರ್ಭಯದಿಂದಏಕಾಂಗಿಯಾಗಿ ನಡೆದಾಗ ಮಾತ್ರ ಈ ದೇಶಕ್ಕೆ ನಿಜವಾದ ಸ್ವಾತಂತ್ರ ಬಂದಂತೆ ಎಂಬ ಮಾತು ಮಹಾತ್ಮಾಗಾಂಧೀಜಿಯವರ ಹೇಳಿಕೆ ಪ್ರಸ್ತುತವೆನ್ನಿಸುತ್ತದೆ.ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಪುರುಷರಷ್ಟೇ ಸಮಾನವಾಗಿ ಹಿಂದಿನ ಕಾಲಕ್ಕಿಂತಲೂ ಹೆಮ್ಮರವಾಗಿ ಬೆಳೆದು ನಿಂತಿದ್ದಾಳೆ. ಕೇವಲ ಭೋಗದ ವಸ್ತುವಾಗಿದ್ದ ಈ ಸ್ತ್ರೀ ಕ್ರಮೇಣಅಡುಗೆ ಮನೆಗೇ ಮೀಸಲಾಗಿ ತನ್ನ ಸರ್ವಸ್ವವನ್ನೇಲ್ಲ ನಾಲ್ಕು ಗೋಡೆಗಳ ಮಧ್ಯೆಯೇ ಜೀವಿಸುತ್ತಿದ್ದವಳು ಇಂದುಆಕಾಶದಲ್ಲಿ ಹಾರಾಡುತ್ತಿದ್ದಾಳೆ, ಗಡಿಯಲ್ಲಿ ಶತೃಗಳ ಜೊತೆ ಹೋರಾಡುತ್ತಾ ಯಾವ ಪುರುಷನಿಗೂ ಕಡಿಮೆಯಿಲ್ಲದಂತೆಜೀವನ ಸಾಗಿಸುತ್ತಿದ್ದಾಳೆ ಈ ಸ್ತ್ರೀ.
ಆದಿಯಿಂದಲೂ ಸೃಷ್ಟಿಯ ಮೂಲ ಸ್ತ್ರೀಯಾಗಿದ್ದಾಳೆ.ನಮ್ಮ ಭಾರತೀಯ ಸಂಸ್ಕøತಿಯಲ್ಲಿ ಸ್ರ್ತೀಗೆ ಅವಳದೇ ಆದಗೌರವ, ಸ್ಥಾನಮಾನಗಳಿರುವುದನ್ನು ಗುರುತಿಸಬಹು ದಾಗಿದೆ. ಸ್ತ್ರೀ ಅವಿನಾಶಿ, ಸಂಜೀವಿನಿ, ಹೆಣ್ಣು ವಿಶಿಷ್ಟ ಶಕ್ತಿಗಳ ಸಂಗಮ, ಮಮತೆ, ಕರುಣೆ, ವಾತ್ಸಲ್ಯ, ಅಕ್ಕರೆ ಮತ್ತು ಭೂಮಿತೂಕದ ತಾಳ್ಮೆಯುಳ್ಳ ಸ್ತ್ರೀ ಒಂದು ಪ್ರಬಲ ಶಕ್ತಿ ಎನ್ನುವುದರಲ್ಲಿಎರಡು ಮಾತಿಲ್ಲ. ಮಹಿಳೆಯರ ಜಾಯಮಾನ ಪುರುಷನ ಜಾಯಮಾನಕ್ಕಿಂತ ಭಿನ್ನವಾದದ್ದು. ಮಹಿಳೆಯರು ಹಿಂದಿನಿಂದಲೂ ಅಬಲೆಯಂದೇ ಕಡೆಗಣಿಸಲಾಗುತ್ತಿತ್ತು.
ಒಂದುಜೀವವನ್ನು ಸೃಷ್ಟಿ ಮಾಡುವ ಶಕ್ತಿ ಮಹಿಳೆಗೆ ಇದೆಎಂದಾದರೆಖಂಡಿತವಾಗಿ ಅವಳಲ್ಲಿ ಅಗಾದವಾದ ಶಕ್ತಿ ಇದೆಎಂದರ್ಥ. ಮಾತೃಶಕ್ತಿ ವಾತ್ಸಲ್ಯ, ಸಹನೆ, ಪ್ರೀತಿ, ತಾಳ್ಮೆ, ಆರೈಕೆ, ಸಾಂತ್ವಾನ ಗುಣಗಳು ಆಕೆ ಹುಟ್ಟಿನಿಂದಲೇ ಮೇಳೈಸಿಕೊಂಡು ಬಂದಿರುತ್ತದೆ. ನಮ್ಮದೇಶದಲ್ಲಿ ಕೌಟುಂಬಿಕ ಪದ್ದತಿ, ಸಂಸ್ಕøತಿ, ಸಂಸ್ಕಾರಗಳು ಕುಟುಂಬ ನಿರ್ವಹಣೆ, ಆರೈಕೆ ಮಾಡುವ ಜವಬ್ದಾರಿ ಅನಾದಿ ಕಾಲದಿಂದಲೂ ಬಂದಿರುವುದರಿಂದ ಸಣ್ಣ ವಯಸ್ಸಿನಿಂದಲೇ ಆಕೆಗೆ ಹಲವಾರು ನೀತಿ ನಿಯಮಗಳು ಕಟ್ಟುಪಾಡುಗಳು ಹಾಕಲಾಗುತ್ತದೆ. ಮಹಿಳೆಯನ್ನು ಮುಖ್ಯವಾಗಿ ಎರಡು ವರ್ಗವಾಗಿ ನೋಡಬೇಕಾಗುತ್ತದೆ. ಒಂದುಗ್ರಾಮೀಣ ಮಹಿಳೆ ಪಾತ್ರ ಮತ್ತು ಜವಾಬ್ದಾರಿಗಳ ನಿರ್ವಹಣೆಯಲ್ಲಿ ಇವರಿಬ್ಬರಲ್ಲಿ ವ್ಯತ್ಯಾಸಗಳಿವೆ. ಶಿಕ್ಷಣದ ಮಟ್ಟ ಮತ್ತು ಕುಟುಂಬದ ಪರಿಸರಅದಕ್ಕೆ ಅನುಸರಿಸಿ ಜೀವನವನ್ನು ನೋಡುವ ಮತ್ತುಅನುಭವಿಸಲು ಇಚ್ಛಿಸುವ ಮನೋಭಾವದಲ್ಲಿಇಬ್ಬರಿಗೂ ವ್ಯತ್ಯಾಸವಿದೆ.
ಮಹಿಳೆ ಇಂದು ಇಷ್ಟು ಯಶಸ್ವಿಯಾಗಲು ಮುಖ್ಯಕಾರಣ ಶಿಕ್ಷಣ.ಇಂದಿನ ಶಿಕ್ಷಣದಲ್ಲಿ ಮಹಿಳೆ ಕುರಿತುತನ್ನ ಸ್ವಂತ ಬಲದಿಂದ ಬದುಕು ವಂತವಳಾಗಿದ್ದಾಳೆ. ಭಾರತೀಯ ರಾಜಕಾರಣದಲ್ಲಿ ಹೆಸರು ಮಾಡಿರುವ ಮಹಿಳೆ ಇಂದಿರಾಗಾಂಧಿ. ಇವರೊಬ್ಬ ಯಶಸ್ವಿ ರಾಜಕಾರಣಿಯಾಗಿಇವರು ಹತ್ತು ವರ್ಷಗಳಿಗೂ ಹೆಚ್ಚು ಸುದೀರ್ಘ ಕಾಲ ರಾಷ್ಟ್ರವನ್ನು ಆಳಿದ್ದಾರೆ. ಸಂಸತ್ತಿನಲ್ಲಿರುವ ಏಕೈಕ ಮಹಿಳೆ ಎಂಬ ಹೆಗ್ಗಳಿಕೆಗೆ ಇಂದಿರಾ ಗಾಂಧಿ ಅವರಿಗಿದೆ. ಇಂದಿರಾಗಾಂಧಿ ಪಡೆದಿದ್ದ ಶಿಕ್ಷಣ ಮತ್ತುರಾಜಕೀಯ ಕುಟುಂಬದಲ್ಲಿ ಹುಟ್ಟಿ ಬೆಳೆದು ಅವರು ನಿಕಟವಾಗಿರಾಜಕೀಯದ ಒಳಹೊಗುಗಳನ್ನು ಬಲ್ಲವರಾಗಿದ್ದಿದು ಇದಕ್ಕೆಕಾರಣ.
ಉತ್ತರಪ್ರದೇಶದ ಮುಖ್ಯಮಂತಿ ್ರಯಾಗಿ ಮಾಯಾವತಿ ಯಶಸ್ವಿ ರಾಜಕಾರಣಿ.ಆದರೆಇದಕ್ಕೆಅವರಜಾತಿಅಥವಾ ಮೀಸಲಾತಿ ಮಾತ್ರಕಾರಣವಲ್ಲ. ಅವರು ಪಡೆದಿರುವಉತ್ತಮಶಿಕ್ಷಣವೂ ಕಾರಣ.ಐ. ಎ.ಎಸ್‍ಅಧಿಕಾರಿಯಾಗಬೇಕೆಂದು ಬಯಸಿದ್ದ ಅವರುರಾಜಕೀಯಕ್ಕೆ ಇಳಿದದ್ದೇ ಕಾಕ ತಾಳೀಯ. ಸುಶಿಕ್ಷಿತ ಮಹಿಳಾ ರಾಜಕರಣ Âಗಳು ಮತ್ತು ಇತರ ರಾಜಕಾರಣಿ ಗಳು ಕಾರ್ಯವೈಖರಿಯನ್ನು ಗಮನಿಸಿದಾಗ ಮೀಸಲಾತಿ ಬರಿಯ ಸ್ಥಾನವನ್ನುಗಿಟ್ಟಿಸಲು ಮಾತ್ರ ಸಹಾಯಕವಾಗುತ್ತದೆ ಎಂಬ ಅಂಶ ವೈಧ್ಯವಾಗುತ್ತದೆ.
ಶಿಕ್ಷಣ ಅಂಥ ಬಂದಾಗ ಮೊದಲು ನೆನಪಿಗೆ ಬರುವುದುಮಹಾತ್ಮಾಜ್ಯೋತಿಬಾ ಪುಲೆ ಮತ್ತುತಾಯಿ ಸಾವಿತ್ರಿಬಾಯಿ ಪುಲೆ. ಇವರು ಮಹಿಳೆಯರ ಹಕ್ಕುಗಳಿಗಾಗಿ ನಿರಂತರ ಚಳುವಳಿ ಸಂಘಟನೆಗಳನ್ನು ಸಂಘಟಿಸಿದರು. 1948ರಲ್ಲಿ ಪತಿಜ್ಯೋತಿಬಾ ಪುಲೆಯವರೊಂದಿಗೆ ಸಾವಿತ್ರಿಬಾಯಿ ಪುಲೆ ತಳ ಸಮುದಾಯದ ಹೆಣ್ಣುಮಕ್ಕಳಿಗಾಗಿ ಪುಣೆಯಲ್ಲಿ ಶಾಲೆಯನ್ನು ಪ್ರಾರಂಭಿಸಿದರು.ಸಾವಿತ್ರಿಬಾಯಿ ಪುಲೆ ಮೊತ್ತಮೊದಲ ಮಹಿಳಾ ಶಿಕ್ಷಕಿ. ವಿದ್ಯೆಕೊಟ್ಟ ಸರಸ್ವತಿ, ಮಹಿಳಾ ಶಿಕ್ಷಣದ ಬಗ್ಗೆ ಮೊತ್ತ ಮೊದಲಿಗೆರೂಢಿಗತ, ಸಂಪ್ರದಾಯಿಕ ಶಕ್ತಿಗಳನ್ನು ಎದುರು ಹಾಕಿಕೊಂಡು ಸ್ತ್ರೀಯರಿಗೆ ಶಾಲೆ ತೊರೆದು ಶಿಕ್ಷಣ ನೀಡಿದಷ್ಟೇಅಲ್ಲ, ವಿಧವಾ ವಿವಾಹವನ್ನುಎತ್ತಿ ಹಿಡಿಯುತ್ತಾ, ಬಹುಪತ್ನಿತ್ವದ ಬಗ್ಗೆ ಖಂಡಿಸುತ್ತ, ಸಾಮಾಜಿಕ ಅನಿಷ್ಠಗಳಿಗೆ ವೈಚಾರಿಕ ಪರ್ಯಾಯಗಳನ್ನು ವಾಸ್ತವ ದಲ್ಲಿತಂದ ಧೀಮಂತ ವ್ಯಕ್ತಿತ್ವಜ್ಯೋತಿಬಾ ಪುಲೆ ದಂಪಂತಿಅವರದು. ಮಹಿಳೆಯರ ಕುರಿತು ಸ್ವಾಂತಂತ್ರ ಪೂರ್ವದಲ್ಲಿರೂಢಿಯಲ್ಲಿದ್ದ ಮನುಸ್ಮøತಿಯಲ್ಲಿ ಅನಿಷ್ಟ ಪದ್ದತಿ, ವೈಚಾರಿಕತೆಯಕುರಿತು ಮನು ಎಂಬುವನು ಹೀಗೆ ಹೇಳುತ್ತಾನೆ. ‘ಮಾತ್ರಾಸ್ಪಸ್ತ್ರಾ ಮಹಿತ್ರಾವಾದ ವಿವಕ್ತಸನೋ ಭಧೇತೆ’ ‘ಬಲವಾನಿಂದ್ರಿಯಗ್ರಾಮೊವಿ ದಾಂಸಮಡಿ ಕರ್ಷತಿ’ ಮನುವಿನ ದೃಷ್ಟಿಯಲ್ಲಿ ಮಹಿಳೆ ಶಿಕ್ಷಣವನ್ನು ಕಲಿಯುವುದು ಬೇಡವಾಗಿತ್ತು. ಗುಲಾಮಳಾಗಿಯೇ ಇರಬೇಕು.ಅವಳು ಅಕ್ಷರ ಲೋಕ ಪ್ರವೇಶ ಮಾಡಿದರೆ ಅವಳು ತೃತೀಯಜಗತ್ತಿನಲ್ಲಿ ನಡೆಯುವ ಸಮಾಚಾರ ತಿಳಿದುಕೊಂಡು ಮುಂದುವರೆದರೆ ಸ್ವಂತ ವಿಚಾರ ಮಾಡುವುದನ್ನು ಕಲಿಯುತ್ತಾಳೆ. ಈ ಮಹಿಳಾ ಸಬಲೀಕರಣ ಮನುವಿಗೆ ಬೇಡವಾಗಿತ್ತು. ಡಾ. ಅಂಬೇಡ್ಕರವರು ಮಹಿಳಾ ಮೀಸಲಾತಿಯ ಪರವಾಗಿ ಅವಳ ಉಜ್ವಲ ಭವಿಷ್ಯವನ್ನುಕುರಿತು ಸಂವಿಧಾನಿP Àವಾಗಿ ಚಿಂತಿಸಿದರು. ಅವರಚು ನಾಯಿತ ಸದಸ್ಯರಾಗಿ ಪಾರ್ಲಿಮೆಂಟಿನಲ್ಲಿ ಹಿಂದೂಕೋಡ್ ಬಿಲ್‍ನ್ನು ಮಂಡಿಸುವುದರ ಮೂಲಕ ಸ್ವತಂತ್ರ ಭಾರತದ ನಾರಿಯ ಬಂಧನವನ್ನು ಮುಕ್ತ ಮಾಡಲು ಪ್ರಯತ್ನಿಸಿದರು. ಮಹಿಳಾ ಪರ ವಿಚಾರಗಳನ್ನು ಮಂಡಿಸುವುದಕ್ಕೆ ಡಾ. ಬಿ. ಆರ್‍ಅಂಬೇಡ್ಕರಅವರಿಗೆ ಬಲವಾದ ಆಧಾರಗಳಿದ್ದವು. ಮಹಿಳಾ ಮೀಸಲಾತಿಯ ಕುರಿತು ಆಕೆಯ ಹಕ್ಕಿನ ಕುರಿತುಗೌತಮ ಬುದ್ದರ, ಜ್ಯೋತಿಬಾ ಪುಲೆ ಮುಂತಾದ ಮಹತ್ಮರು ಸಂದರ್ಭಾನುಸಾರವಾಗಿ ಅವರ ವಿಚಾರಗಳ ಕುರಿತುಮಾತನಾಡಿದರು. ಅದರಜೊತೆಗೆ ಬೇರೆ ಬೇರೆ ದೇಶಗಳಲ್ಲಿಯ ಸಮಾಜ ಮುಖಿ ಮಹಿಳಾ ಮುಖಿ ಚಿಂತನೆಗಳನ್ನು ಅಧ್ಯಯನ ಮಾಡಿದಡಾ. ಬಿ. ಆರ್‍ಅಂಬೇಡ್ಕರವರು ಭಾರತದ ಮಹಿಳೆಯ ಹಕ್ಕು ಬಾಧ್ಯತೆಗಳ ಕುರಿತು ಮಹತ್ವ ಪೂರ್ಣ ವಿಚಾರವನ್ನು ವ್ಯಕ್ತಪಡಿಸಿದರು. ಅವರು ಸಂವಿಧಾನದಲ್ಲಿ ಬರೆದಿಟ್ಟ ಮಹಿಳಾಪರ ಚಿಂತನೆಗಳು ಪ್ರಸ್ತುತ ಸಂದರ್ಭದಲ್ಲಿಕ್ರಮೇಣ ಜಾರಿಗೆ ಬರುತ್ತಿರುವುದು ಭಾರತೀಯರು ಸಂವಿಧಾನಕ್ಕೆ ಕೊಟ್ಟಿರುವಗೌರವೇಂದೇ ತಿಳಿದಿಕೊಳ್ಳಬೇಕಾಗುತ್ತದೆ.
-ಯಶಸ್ವಿ ಮಹಿಳೆಯರು :
ಯಶಸ್ವಿ ಮಹಿಳೆಯರು ಅಂಥ ಬಂದಾಗಚಾರಿತ್ರಿಕಪುಟದಲ್ಲಿ ನೋಡಿದರೆ ಹಲವಾರು ಮಹಿಳೆಯರು ಯಶಸ್ಸು ಪಡೆದದ್ದು ತಿಳಿದು ಬರುತ್ತದೆ. ಕೆಳದಿ ಚನ್ನಮ್ಮ, ಕಿತ್ತೂರಚನ್ನಮ್ಮ, ಝಾನ್ಸಿರಾಣಿ ಲಕ್ಷ್ಮೀಬಾಯಿ ಮುಂತಾದವರನ್ನುಉದಾಹರಿಸಬಹುದು. ಇವರುಆಪತ್ಕಾಲದಲ್ಲಿಗದ್ದುಗೆ ಹಿಡಿದು ರಾಜ್ಯಾಡಳಿತ ಸೂತ್ರಗಳನ್ನು ಅರಿತು ಯಶಸ್ವಿಯಾಗಿ ಆಡಳಿತ ನಡಿಸಿ ಹೆಸರು ವಾಸಿಯಾಗಿದ್ದಾರೆ.
ಆಧುನಿಕಯುಗದಲ್ಲಿ ನೋಡುವುದಾದರೆ ಇಂದಿನ ಸಮಾಜದಲ್ಲಿರಾಜಕೀಯದಲ್ಲಿ, ಶೈಕ್ಷÂಕದಲ್ಲಿ, ಆರ್ಥಿಕವಾಗಿ ಹೆಚ್ಚು ಸಬಲರಾಗಿದ್ದಾರೆ. ರಾಜಕೀಯದಲ್ಲಿಇಂದಿರಾಗಾಂಧಿ ಪ್ರಥಮ ಮಹಿಳಾ ಪ್ರಧಾನ ಮಂತ್ರಿ ಎಂಬ ದಾಖಲೆಯೊಂದಿಗೆ ಹೆಣ್ಣು ಸಿಂಹದಂತೆ ಘರ್ಜಿಸಿ ಕೆಲವುಕಾಲ ಮಹಾರಾಣಿಯಾಗಿ ಮೆರೆದರು. ಪ್ರತಿಭಾ ಪಾಟೀಲ್ ಪ್ರಥಮ ಮಹಿಳಾ ಅಧ್ಯಕ್ಷರಾದರು.ಉತ್ತರ ಭಾರತದ ಉಕ್ಕಿನ ಮಹಿಳೆ ಎಂದೇ ಹೆಸರುವಾಸಿಯಾದ ಮಾಯಾವತಿಯವರು 3 ಬಾರಿಮಹಿಳಾ ಮುಖ್ಯಮಂತ್ರಿಯಾಗಿ ಸರ್ವಾಧಿಕಾರಿಯಾಗಿ ಆಡಳಿತ ನಡೆಸಿದರು.
ರಾಜಸ್ತಾನದಲ್ಲಿ ವಸುಂಧರ ರಾಜೇಯವರು ದಶಕಗಳಿಗಿಂತಲೂ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿದ್ದರು. 4,500 ಉದ್ಯೋಗಸ್ಥರಿಗೆಆಶ್ರಯದಾತೆಯಾಗಿರುವ ಬಯೋಕಾನ್‍ನ ಒಡತಿಕಿರಣ ಮಜುಮ್ದಾರ್ ಶಾ ಕೇವಲ 10,000 ರೂಪಾಯಿಯೊಂದಿಗೆ ಏಕಾಂಗಿಯಾಗಿ ಸ್ಥಾಪಿಸಿದ ಸಂಸ್ಥೆ ಇಂದುಜೈವಿಕತಂತ್ರಜ್ಞಾನದಲ್ಲಿ ವಿಶ್ವದಲ್ಲೇ 7ನೇ ಸ್ಥಾನದಲ್ಲಿದೆ.ಇದರ ವಾರ್ಷಿಕಆಧಾಯ 2,405 ಕೋಟಿ.ಬಟ್ಟೆ ತೊಳೆದು, ಅಡುಗೆ ಮಾಡಿಕೊಂಡು, ಮಕ್ಕಳ ಆರೈಕೆ ಮಾಡು ವವರೂ ಕೂಡಆಕಾಶÀದಲ್ಲಿ ಹಾರಾಡಬ ಹುದು ಎಂದು ತೋರಿಸಿಕೊಟ್ಟ ವರು ಕಲ್ಪನಾಚಾವ್ಲಾ, ದಕ್ಷಿಣಐರಣ್ ಲೇಡಿಎಂತಲೆ ಕರಿಸಿಕೊಂಡ ದಿ-ಜಯಲಲಿತಾ ತಮಿಳನಾಡಿನ ಅಮ್ಮನಾಗಿ ಸೂಸೂತ್ರವಾಗಿ ಆಡಳಿತ ನಡೆಸಿ ಸೈ ಎನಿಕೊಂಡರು.
ಮಾಹಿತಿತಂತ್ರಜ್ಞಾನದಲ್ಲಿ ಇನ್ಪೋಸಿಸ್ ಕಂಪನಿ ಬಹುದೊಡ್ಡ ಹೆಸರು. ದೇಶವಿದೇಶಗಳಲ್ಲಿ ತಮ್ಮ ಶಾಖೆಯನ್ನುತರೆದು ಲಕ್ಷಾಂತರಜನರಿಗೆಉದ್ಯೋಗವನ್ನು ನೀಡಿದಲ್ಲದೇ ನಮ್ಮ ಭಾರತದೇಶಕ್ಕೆಕೀರ್ತಿ ಯನ್ನುತಂದರು. ಇಂಥ ಸಂಸ್ಥೆಯನ್ನು ಸ್ಥಾಪಿಸಿದ ಸೂಧಾಮೂರ್ತಿಯವರು ದೇಶದಲ್ಲಿ ಪ್ರಖ್ಯಾತಿಯನ್ನು ಪಡೆದಿದ್ದಾರೆ. ಹೆಣ್ಣು ಮಕ್ಕಳು ಮನೆಬಿಟ್ಟು ಹೊರಗೆ ಬರಲು ಹೆದರುತ್ತಿದ್ದ ಕಾಲದಲ್ಲಿ ದೇಶದಅತ್ಯುನ್ನತ ಹುದ್ದೆ ಐ.ಪಿ.ಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಪ್ರಥಮ ಮಹಿಳಾ ಪೋಲಿಸ್ ಅಧಿಕಾರಿಯಾಗಿಕಿರಣ್ ಬೇಡಿಯವರು ಇಂದಿನ ಮಕ್ಕಳಿಗೆ ಮಾದರಿಯಾಗಿದ್ದಾರೆ.ಇತಿಹಾಸದ ಪುಟಗಳಲ್ಲಿ ಹಲವಾರು ಮಹಿಳೆಯರು ಸಾಧನೆ ನಮಗೆ ದೊರೆಯುತ್ತದೆ.
ಅದೇರೀತಿಬಲಿಷ್ಠ ಯಶಸ್ವಿ ಮತ್ತುಜಾಗತಿಕವಾಗಿ ಪ್ರಕಾಶಮಾನವಾಗಿ ಹೊಳೆಯುತ್ತಿರುವ ಭಾರತವನ್ನು ಹೆಮ್ಮೆಪಡುವಂತೆ ಮಾಡಿದ 10 ಜನ ಭಾರತೀಯ ಮಹಿಳೆಯರು ಕುರಿತು ನೋಡುವುದಾದರೆಈ ಕೆಳಗಿನ ಮಹಿಳೆಯರ ಸಾಧನೆಒಮ್ಮೆ ಮೆಲಕು ಹಕಿದಾಗ ಸಂಪೂರ್ಣ ಮಾಹಿತಿ ನಮಗೆ ದೊರೆಯುತ್ತದೆ.
1. ಅವನಿ ಚೆತುರ್ವೇದಿ :ಭಾರತೀಯ ವಾಯುಪಡೆಯಲ್ಲಿಯುದ್ದ ಪೈಲೆಟ್‍ಆದ ಮೊದಲ ಮಹಿಳೆಯರಲ್ಲಿ ಒಬ್ಬರು.
2. ಸ್ನೇಹಾದುಬೆ : ಪಾಕಿಸ್ತಾನಿ ಪ್ರಧಾನಿಯವರ ವಿಶ್ವಸಂಸ್ಥೆಯ ಭಾಷಣಕ್ಕೆ ನೀಡಿದತೀಕ್ಷ್ಣ ಪ್ರತಿಕ್ರಿಯೆ
ವೈರಲ್‍ಆದಾಗ ಸ್ನೇಹಾಖ್ಯಾತಿಆದವರು.
- ವಿದೇಶಾಂಗ ಸಚಿವಾಲಯದಲ್ಲಿಅಂಡರ್ ಸೆಕ್ರೆಟರಿಯಾಗಿ ಮತ್ತು ಮ್ಯಾಡ್ರಿಡ್ ನಲ್ಲಿರುವ ಭಾರತೀಯರಾಯಬಾg Àಕಛೇರಿಯಲ್ಲಿ 3ನೇ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ.
-ವಿಶ್ವಸಂಸ್ಥೆಯಲ್ಲಿ ಭಾರತದ ಮೊದಲ ಕಾರ್ಯದರ್ಶಿಯಾಗಿ ತಮ್ಮ ಪ್ರಸ್ತುತ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
3.ಕೃತಿಕಾರಂತ : ಪ್ರಸ್ತುತ ಬೆಂಗಳೂರಿನಲ್ಲಿ ವನ್ಯಜೀವಿ ಅಧ್ಯಯನಕೇಂದ್ರದಲ್ಲಿ ಮುಖ್ಯ ಸಂರಕ್ಷಣಾ ವಿಜ್ಞಾನಿ ಮತ್ತು ನಿರ್ದೇಶಕಿಯಾಗಿದ್ದಾರೆ.
-ಡ್ಯೂಕ್ ವಿಶ್ವವಿದ್ಯಾಲಯದ ಮತ್ತುರಾಷ್ಟ್ರೀಯಜೈವಿಕ ವಿಜ್ಞಾನಕೇಂದ್ರದಲ್ಲಿ ಸಹಾಯಕಅಧ್ಯಾಪಕರಾಗಿಕಾರ್ಯನಿರ್ವಹಿಸಿದ್ದಾರೆ.
4.ತುಳಸಿಗೌಡ : ಹಲವು ದಶಕಗಳಿಂದ ಪರಿಸರ ಸಂರಕ್ಷಣೆಗಾಗಿ ಕೆಲಸ ಮಾಡುತ್ತಿದ್ದು 2020ರಲ್ಲಿ ಮಾತ್ರದೇಶ ಮತ್ತುಜಗತ್ತು ತುಳಸಿಗೌಡ ಅವರನ್ನು ಗಮನಿಸುತ್ತಿದೆ.
-ಸಾಮಾನ್ಯವಾಗಿ ‘ಅರಣ್ಯ ವಿಶ್ವಕೋಸ’ ಎಂದುಕರೆಯಲ್ಪಡುವ ತುಳಸಿ 30000ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿದ್ದಾರೆ.
5. ಟೆಸ್ಸಿ ಥಾಮಸ್ : ದಿವಗಂತಡಾ ಎ ಪಿ ಜೆಅಬ್ದುಲ್ ಕಲಾಂ ಅವರುಇವರನ್ನು ಪ್ರಾಜೆಕ್ಟ್‍ಅಗ್ನಿಗಾಗಿ ನೇಮಿಸಿದರು.
- ನಂತರಅಗ್ನಿ 4 ಮತ್ತು 5ನೇ ಕಾರ್ಯಾಚರಣೆಯಲ್ಲಿಯೋಜನಾ ನಿರ್ದೇಶಕರಾದರು.
- 2018ರಲ್ಲಿ ಅವರು ಡಿ ಆರ್ ಡಿ ಓದಏರೋನಾಟಿಕಲ್ ಸಿಸ್ಟ್ಟ್ಟಮ್ಸ್‍ನ ಮಹಾ ನಿರ್ದೇಶರಾದರು.
6. ವಾಣಿ ಕೋಲಾ : ವ್ಯವಹಾರದಲ್ಲಿಅತ್ಯಂತ ಪ್ರಭಾವಶಾಲಿ ಮಹಿಳೆಯರಲ್ಲಿ ಒಬ್ಬಳು.
-ಸಿಲಿಕಾನ್ ವ್ಯಾಲಿಯಲ್ಲಿಉನ್ನತ ಸ್ಥಾನಕ್ಕೆ ಏರಿದವರು.
- ಇಂಡೋ- ಯುಎಸ್ ವೆಂಚರ್ ಪಾರ್ಟನಸ್ ಸ್ಥಾಪನೆ.
- ಕಲಾರಿಕ್ಯಾಪಿಟಲ್ ಸ್ಥಾಪಿಸಲು ದಾರಿ ಮಾಡಿಕೊಟ್ಟವರು.
7. ರಿಚಾಕರ್: ಕಳೆದ ಕೆಲವು ವರ್ಷಗಳಲ್ಲಿ ಝಿವಾಮೆ ಮಹಿಳೆಯರ ನಿಕಟ ಉಡುಪುಗಳು ಜಗತ್ತಿನಲ್ಲಿ
ಅತ್ಯಂತಜನಪ್ರಿಯ ಮತ್ತು ಬೇಡಿಕೆಯ ಬ್ರ್ಯಾಂಡ್‍ಗಳಲ್ಲಿ ಒಂದಾಗಿ ಹೊರಹೊಮ್ಮಿದೆ.
8.ಫಲ್ಗುಣಿ ನಾಂiÀiರ್ : ಫಲ್ಗುಣಿತಮ್ಮ ಬ್ರ್ಯಾಂಡ್ ನೈಕಾಗಿಂದಾಗಿ ಮನೆ ಮಾತಾಗಿದ್ದಾರೆ. -ಅವರುರಾತ್ರೋರಾತ್ರಿ ಸಂಚಲನ ಮೂಡಿಸಿದ ಮತ್ತುದೇಶದಅತ್ಯಂತ ಯಶಸ್ಚಿ ವ್ಯಾಪಾರ ಮಹಿಳೆಯರಲ್ಲಿ ಒಬ್ಬರಾದರು. 9. ಅರುಣಿಮಾ ಸಿನ್ಹಾ: ಪ್ರಬಲ ಮೌಂಟ್‍ಎವರೆಸ್ಟ್‍ಎರಿದ ಮೊದಲ ಅಂಗವಿಕಲ ಮಹಿಳೆ
-2015ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿಗೌರಿಸಲಾಯಿತು.
- ದೇಶಾದ್ಯಂತ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ. 10. ಗೀತಾ ಗೋಪಿನಾಥ : ಭಾರತೀಯ ಮೂಲದಅಮೆರಿಕನ್ ಗೋಪಿನಾಥ್ ವಿಶ್ವಪ್ರಸಿದ್ದ ಅರ್ಥಶಾಸ್ತ್ರಜ್ಞೆ - ಅಂತರಾಷ್ಟ್ರೀಯ ಹಣಕಾಸು ನಿಧಿಯ ಮೊದಲ ಉಪವ್ಯವಸ್ಥಾಪಕ ನಿರ್ದೇಶಕಿ ಹಾಗೂ ಐ ಎಂ ಏಫ್ ಮುಖ್ಯಅರ್ಥಶಾಸ್ತ್ರಜ್ಞೆ.
ಶಿಕ್ಷಣ ಮತ್ತು ಸಂಸ್ಕಾರಒಂದಿದ್ದರೆ ಮಹಿಳೆ ಏನ್ ಬೇಕಾದರೂ ಮಾಡಬಹುದುಅಂತ ತೋರಿಸಿ ಕೊಟ್ಟವರೆ ಈ ಮೇಲಿನ ಜನಪ್ರಿಯ ಮಹಿಳೆಯರು.ಇವರೆಲ್ಲರ ಸಾಧನೆ ನೋಡಿದ ಮೇಲೆ ನಾವು ಏನಾದರೂ ಈ ದೇಶಕ್ಕೆಅಥವಾ ನನ್ನ ನಾಡಿಗೆಕೊಡುಗೆ ನೀಡಲೇಬೇಕುಅಂತ ಮನೋಭಾವನೇ ಹುಟ್ಟಬೇಕುಅಂತನೇ ಈ ಲೇಖನವನ್ನು ಪ್ರಸ್ತುತ ಪಡಿಸಿದ್ದೇನೆ.
ಡಾ ಪೂರ್ಣಿಮಾ ಕೆ. ಧಾಮಣ್ಣವರ
ಅತಿಥಿ ಉಪನ್ಯಾಸಕರು
ಕನ್ನಡ ಅಧ್ಯಯನ ವಿಭಾಗ
ರಾಣಿಚನ್ನಮ್ಮ ವಿಶ್ವವಿದ್ಯಾಲಯ
ಡಾ. ಫ. ಗು ಹಳಕಟ್ಟಿ ಸ್ನಾತಕೋತ್ತರ
ಕೇಂದ್ರ ವಿಜಯಪುರ.
ಅಮ್ಮ
ಕರ್ನಾಟಕ ಸರ್ಕಾರ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ವತಿಯಿಂದ ಪ್ರಕಟಗೊಂಡ ಸಾಹಿತಿ ಹಾಗೂ ಪತ್ರಕರ್ತ ಕಲ್ಲಪ್ಪ ಶಿವಶರಣ ಅವರ ವಿರಚಿತ ‘ಕಲ್ಲು ಮನಸ್ಸು’ ಕವನ ಸಂಕಲನ ಕೃತಿಯಲ್ಲಿನ ಕವನ.
ಅಮ್ಮ ನನ್ನಮ್ಮ
ನನ್ನೀ ಜೀವಕೆ ಬೆಳಕಮ್ಮ
ನನ್ನುಸಿರಿಗೆ ಕಾರಣವೇ ನೀನಮ್ಮ
ನೀ ನಿಲ್ಲದ ಬಾಳು ನನಗೇಕಮ್ಮ...
ನಿನ್ನ ಸಹನೆಗೆ ನಾನು
ಮಾಡುವೆ ಪ್ರಣಾಮ...
ನಿನಗೆ ಯಾರಿಲ್ಲ ಸಮ ಸಮ
ನಾನಾದೆ ನಿನ್ನ ಮಡಿಲ ಗುಲಾಮ
ನನ್ನನ್ನು ಭೂಮಿಗೆ ತಂದಿರುವ
ನೀನು ದೇವರಗಿಂತ ಮಿಗಿಲಮ್ಮ
ನಿನ್ನ ಪಾದ ಸ್ಪರ್ಶಕ್ಕೆ
ಭೂಮಿಯೇ ಪಾವನವಮ್ಮ
ನಿಷ್ಕಲ್ಮಶ, ನಿಸ್ವಾರ್ಥ ತ್ಯಾಗ, ಮಮತೆಯ, ಪ್ರೀತಿಗೆ
ಇನ್ನೊಂದು ಹೆಸರೇ ನೀನಮ್ಮ.. ನನ್ನಮ್ಮ
ನೀ ಕೊಟ್ಟ ಜೀವ ಭಿಕ್ಷೆಗೆ
ನಾ ಏಳು ಜನ್ಮ ಹುಟ್ಟಿ ಬಂದರೂ
ನಿನ್ನ ಋಣ ತೀರಿಸಲಾಗದಮ್ಮ
ನೀ ಹಾಕಿಕೊಟ್ಟ ಮಾರ್ಗದಲ್ಲೆ
ನಡೆಯುತ್ತಿರುವೇನು ನಾನಮ್ಮ
ಹಿಗ್ಗದೆ, ಕುಗ್ಗದೆ, ಆತ್ಮ ವಿಶ್ವಾಸದಿ
ಸಾರ್ಥಿಗಳ ಲೋಕದಿ
ಮುಖವಾಡಗಳ ಮಧ್ಯೆ
ಜೀವಿಸಲು ಸಾಕಾಗಿದೆ ನನಗಮ್ಮ
ನೀನಿದ್ದ ಊರಿಗೆ ನನ್ನನ್ನು ಕರೆದುಕೋ ನನ್ನಮ್ಮ...
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
ಹೆಣ್ಣಿನ ವಿಷಯದಲ್ಲಿ ಬದಲಾಗಬೇಕಾಗಿರುವುದು ಕಾನೂನು ಅಲ್ಲ ಜನರ ವಿಕೃತ ಮನಸ್ಥಿತಿ
"ಯತ್ರ ನಾರ್ಯಸ್ತು ಪೂಜ್ಯಂತೆ
ತತ್ರ ರಮಂತೇ ದೇವತಾ"
ಎಲ್ಲಿ ಹೆಣ್ಣು ಗೌರವಿಸಲ್ಪಡುತ್ತಾಳೆ ಅಲ್ಲಿ ದೇವಾನು ದೇವತೆಗಳು ನೆಲೆಸಿರುತ್ತಾರೆ ಎಂದು ಅನಾದಿಕಾಲದಿಂದಲೂ ನಂಬಿರುವ ಸಂಸ್ಕೃತಿ ನಮ್ಮದು.
ಕಳೆದ ಕೆಲವು ಸಹಸ್ರಮಾನಗಳಲ್ಲಿ ಭಾರತದಲ್ಲಿ ಮಹಿಳೆಯರ ಸ್ಥಾನಮಾನವು ಅನೇಕ ಮಹತ್ತರ ಬದಲಾವಣೆಗಳನ್ನು ಕಂಡಿದೆ. ಹಿಂದೆ ಭಾರತದಲ್ಲಿ ಮಹಿಳೆಯರು ವರದಕ್ಷಿಣೆ, ಬಾಲ್ಯ ವಿವಾಹ,ಲಿಂಗ ಅಸಮಾನತೆ, ಲೈಂಗಿಕ ಕಿರುಕುಳ ಮುಂತಾದ ಅನೇಕ ಸವಾಲಿನ ಸಮಸ್ಯೆಗಳನ್ನು ಎದುರಿಸಿದ್ದರು. ಆದರೆ ಈಗ ಮಹಿಳೆಯರು ಪುರುಷರಷ್ಟೇ ಸಮಾನ ರೀತಿಯಲ್ಲಿ ಬದುಕುತ್ತಿದ್ದಾರೆ. ಉನ್ನತವಾದ ಶಿಕ್ಷಣವನ್ನು ಪಡೆದು, ಅಂತರಾಷ್ಟ್ರೀಯ, ಶೈಕ್ಷಣಿಕ ,ಭಾಷಾವಾರು, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ತಮ್ಮದೇಯಾದ ಛಾಪನ್ನು ಮೂಡಿಸಿದ್ದಾರೆ.
"ಹೆಣ್ಣು ಅಬಲೆ ಅಲ್ಲ ಸಬಲೆ"ಎಂದು ಇಡೀ ಜಗತ್ತಿಗೆ ತೋರಿಸುತ್ತಿದ್ದಾರೆ.
ಇದೆಲ್ಲ ಒಂದು ಕಡೆ ಆದರೆ, ನಮ್ಮ ಭಾರತ ದೇಶವು ಆರ್ಥಿಕತೆ ಮತ್ತು ವಿಜ್ಞಾನದಲ್ಲಿ ಮುಂದುವರೆದರು ಕೂಡ ಮಹಿಳೆಯರ ಸುರಕ್ಷತೆ ಕಾಪಾಡುವಲ್ಲಿ ವಿಶ್ವದ ಮುಂದೆ ಶೂನ್ಯವಾಗಿ ನಿಂತಿದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 77 ವರ್ಷಗಳಾದರೂ ಮಹಿಳೆಯರು ಮಾತ್ರ ಒಬ್ಬರೇ ನಿರ್ಭಯವಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ ಏಕೆಂದರೆ ಅವರ ಮೇಲೆ ಆಗುತ್ತಿರುವ ಅತ್ಯಾಚಾರವೇ ಇದಕ್ಕೆ ಕಾರಣ. ಗಾಂಧೀಜಿ ಅವರು ಹೇಳಿದ ಮಾತಿನಂತೆ ಒಂದು ಹೆಣ್ಣು ಮಧ್ಯರಾತ್ರಿಯಲ್ಲಿ ಒಬ್ಬಳೇ ಧೈರ್ಯದಿಂದ ತಿರುಗಾಡಿದಾಗ ಮಾತ್ರ ನಮ್ಮ ದೇಶ ಸ್ವಾತಂತ್ರ್ಯವಾಗುತ್ತದೆ ಎಂದಿದ್ದಾರೆ.
ಆದರೆ ಪ್ರಸ್ತುತ ದಿನಮಾನಗಳಲ್ಲಿ ಸರ್ಕಾರ ಮಹಿಳೆಯರಿಗಾಗಿ ಕಾನೂನುಗಳು, ವಿಶೇಷ ಸೌಲಭ್ಯಗಳನ್ನು ಒದಗಿಸಿದ್ದರು ಸಹ ಮಹಿಳೆಯರ ಮೇಲೆ ಆಗುತ್ತಿರುವ ಅತ್ಯಾಚಾರವನ್ನು ತಡೆಯಲು ಆಗುತ್ತಿಲ್ಲ
"ಹಗಲಿನಲ್ಲೋ ಇರುಳಿನಲ್ಲೋ
ಒಂಟಿಯಾಗಿ ನಡೆಯಲು
ಹೆಣ್ಣು ಎಂದು ಅರಿತ ಕಾಮಿ
ದೇಹ ಬಗೆದು ತಿಂದನು"
ಇಂತಹ ಕೃತ್ಯದಿಂದಾಗಿ ಅದೆಷ್ಟೋ ಅಸಂಖ್ಯಾತ ಮಹಿಳೆಯರು ಬಲಿಯಾಗಿದ್ದಾರೆ. ಅವರ ಭವಿಷ್ಯವೇ ನಾಶವಾಗಿ ಹೋಗಿದೆ ಇತ್ತೀಚಿಗೆ ಅಂತೂ ಒಂದು ಹೆಣ್ಣು ಮನೆಯಿಂದ ಹೊರ ಬಂದರೆ ಅವಳು ಸುರಕ್ಷಿತವಾಗಿ ಮತ್ತೆ ಮನೆಗೆ ಹೋಗುತ್ತಾಳೆ ಎಂಬ ನಂಬಿಕೆಯೇ ಹೊರಟು ಹೋಗಿ ಭಯದ ವಾತಾವರಣ ಕೂಡಿದೆ.
"ಹೆಣ್ಣು ದೇಶದ ಕಣ್ಣು"ಎನ್ನುವ ಈ ಸಮಾಜ ಹೆಣ್ಣಿನ ಮೇಲೆ ಆಗುತ್ತಿರುವ ದೌರ್ಜನವನ್ನು ನಿಲ್ಲಿಸುತ್ತಿಲ್ಲ ಜೊತೆಗೆ ಅನ್ಯಾಯಕ್ಕೆ ಒಳಗಾಗಿರುವ ಹೆಣ್ಣು ಮಕ್ಕಳಿಗೆ ನ್ಯಾಯವನ್ನು ದೊರಕುವಂತೆ ಮಾಡುತ್ತಿಲ್ಲ.
ಕಣ್ಣಲ್ಲವೇ ಹೆಣ್ಣು ಸಂಸಾರಕ್ಕೆ,
ಚಕ್ರವಲ್ಲವೇ ಹೆಣ್ಣು ಬಾಳ ಬಂಡಿಗೆ
ಒಲವಲ್ಲವೇ ಹೆಣ್ಣು ಪ್ರೀತಿ ಪ್ರೇಮಕೆ
ಆದರ್ಯಾಕವಳಿಗೆ ಅತ್ಯಾಚಾರದ ಶಿಕ್ಷೆ...?
ಇನ್ನೊಂದು ಮಾತೇನೆಂದರೆ ಈ ಅತ್ಯಾಚಾರದಂತಹ ದೌರ್ಜನ್ಯಗಳನ್ನು ತಡೆಗಟ್ಟಲು ಮನೆಯಿಂದ ಪ್ರಾರಂಭವಾಗುವ ನ್ಯಾಯವನ್ನು ಮಾಡಬೇಕಾಗಿದೆ. ಯಾಕೆಂದರೆ ಮನೆಯಲ್ಲಿ ಮಕ್ಕಳಿಗೆ ಸರಿಯಾದ ಸಂಸ್ಕಾರ, ಸಮಾಜದಲ್ಲಿ ಯಾವ ರೀತಿ ಬದುಕಬೇಕು, ಮಹಿಳೆಯರೊಂದಿಗೆ ಗೌರವದಿಂದ ನಡೆದುಕೊಳ್ಳಬೇಕು ಎಂಬುದನ್ನು ಪಾಲಕರು ಕಲಿಸಿಕೊಟ್ಟರೆ ಇಂತಹ ಕೃತ್ಯಗಳನ್ನು ಸ್ವಲ್ಪ ಮಟ್ಟಿಗಾದರು ನಿಲ್ಲಿಸಲು ಸಾಧ್ಯವಾಗುತ್ತದೆ.
ಮಹಿಳೆಯರನ್ನು ದೌರ್ಜನ್ಯ ಮತ್ತು ಕಿರುಕುಳದಿಂದ ರಕ್ಷಿಸುವ ಮೂಲಕ ಮಹಿಳೆಯರ ಉನ್ನತಿ ತಳಮಟ್ಟದಿಂದ ಪ್ರಾರಂಭವಾಗಬೇಕು.
ಇನ್ನಾದರೂ ನಮ್ಮ ದೇಶವು ಈ ಅತ್ಯಾಚಾರ, ವರದಕ್ಷಣೆ ಪಿಡುಗು, ಬಾಲ್ಯ ವಿವಾಹಗಳಂತಹ ದೌರ್ಜನ್ಯಗಳಿಂದ ಮಹಿಳೆಯರ ಮೇಲೆ ಆಗುತ್ತಿರುವ ಅನ್ಯಾಯವನ್ನು ತಡೆಗಟ್ಟಿ ಆರೋಪಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಂಡು ಬೇರೆ ದೇಶಗಳಲ್ಲಿರುವಂತಹ ಕೆಲವು ಕಾನೂನು ನಿಯಮಗಳನ್ನು ನಮ್ಮ ದೇಶದಲ್ಲಿ ಕೂಡ ಜಾರಿಗೆ ತರಬೇಕು. ಅಂದಾಗ ಮಾತ್ರ ಇಂತಹ ಬರ್ಬರ ಕೃತ್ಯಗಳು ನಡೆಯುವುದಿಲ್ಲ.
ಅತ್ಯಾಚಾರ ಹಿಂಸಾಚಾರ
ಎಲ್ಲಿ ತನಕ ನಿಲ್ಲದು
ಹೆಣ್ಣಿನ,
ಮೊಗದಲ್ಲಿ ನಗುವು
ಅಲ್ಲಿ ತನಕ ಕಾಣದು...!!
"ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು"
ಪ್ರೇಮಾ ಅಶೋಕ ಇಟ್ಟಗಿ
ಬಿ.ಎ(ಆರನೇ ಸೆಮಿಸ್ಟರ್) ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ವಿಜಯಪುರ
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
ಮಹಿಳಾ ದಿನಾಚರಣೆಯ ಇತಿಹಾಸ ಮತ್ತು ಮಹಿಳಾ ಸಬಲೀಕರಣ
ಪುಟ್ಟಣ್ಣ ಕಣಗಾಲ್ ನಿರ್ದೇಶನದ ಕೊನೆಯ ಚಿತ್ರ "ಮಸಣದ ಹೂವು" ಪ್ರಿಯಕರನಿಗಾಗಿ ಹುಡುಕಿ, ಹುಡುಕಿ ಕರಾವಳಿ ಪ್ರದೇಶದ ಹುಡುಗಿಯೊಬ್ಬಳು ವೇಶ್ಯಾವಾಟಿಕೆ ನಡೆಸುವ ಬಲೆಗೆ ಸಿಲುಕುತ್ತಾಳೆ. ತೀವ್ರ ಪ್ರತಿಭಟಿಸುತ್ತಾಳಾದರೂ ಮೂರು ದಿನ ಊಟ ತಿಂಡಿ ನೀರು ಕೊಡದ ಘರವಾಲಿ ನಾಲ್ಕನೇ ದಿನಕ್ಕೆಊಟದ ತಟ್ಟೆ ತಂದು ಮುಂದೆ ಇಟ್ಟಾಗ ಸಾರು ಇದೆಯೋ ಇಲ್ಲವೋ ಅಂತಾನೂ ನೋಡದೆ ನಾಯಕಿ ಗಬಗಬನೆ ತಿನ್ನುತ್ತಾಳೆ.! ಹಸಿವು ಎಂತಹ ಕೆಲಸವನ್ನಾದರೂ ಮಾಡಿಸುತ್ತದೆ ಅಂತಾಳೆ ಆ ಘರವಾಲಿ..!
ಪುರುಷ ಶಾರೀರಿಕವಾಗಿ ಬಲಶಾಲಿ ಮಾತೃತ್ವ ಶಕ್ತಿಯನ್ನು ಪಡೆದಂತಹ ಸ್ತ್ರೀ ವಿಶಿಷ್ಟ ಶಕ್ತಿ ಸ್ವರೂಪಿಣಿ ಇವೆರಡು ಭೇದ ಬಿಟ್ಟರೆ ಸ್ತ್ರೀ ಮತ್ತು ಪುರುಷರಲ್ಲಿ ಹೇಳಿಕೊಳ್ಳುವಂಥ ಭೇದಗಳು ಇಲ್ಲ ಆದರೆ,
ಗ್ರೀಕ್ ದಾರ್ಶನಿಕ ಪ್ಲೇಟೋ "ದೇವರು ನನ್ನನ್ನು ಗುಲಾಮನನ್ನಾಗಿ ಮಾಡದೆ ಸ್ವತಂತ್ರ ಪ್ರಜೆಯನ್ನಾಗಿ ಸೃಷ್ಟಿಸಿದ್ದಕ್ಕೆ ಮತ್ತು ಎರಡನೆಯದಾಗಿ ನನ್ನನ್ನು ಸ್ತ್ರೀಯನ್ನಾಗಿ ಮಾಡದೇ ಪುರುಷನನ್ನಾಗಿಮಾಡಿದ್ದಕ್ಕೆ ನಿನಗೆ ಕೃತಜ್ಞತೆ ಸಲ್ಲಿಸುವೆನು" ಎಂದಿದ್ದ. ಆದರೂ ಕೂಡ ಸ್ತ್ರೀಯರು ಸ್ತ್ರೀಯರಾಗಿರುವುದು ಕೇವಲ ಗುಣಗಳ ಕೊರತೆಯಿಂದಾಗಿ ಎಂದು ಹೇಳಿದ. ಅಲ್ಲದೆ ಸ್ತ್ರೀಯರು ಪ್ರಕೃತಿ ಸಹಜ ದೋಷ,ದುರ್ಬಲತೆಗೆ ಒಳಗಾದವರು ಎಂದು ತಿಳಿಸಿದ್ದ.
ಸ್ತ್ರೀಯರಿಗೆ ಉನ್ನತ ಮಟ್ಟದ ಅಥವಾ ಉತ್ತಮ ಸ್ಥಾನ ನೀಡಿರುವುದರ ಹೊರತಾಗಿಯೂ ಅವರನ್ನು ಪುರುಷರಿಗಿಂತ ಕೀಳಾಗಿ ಕಂಡಿರುವುದಕ್ಕೆ ನಮ್ಮ ಪವಿತ್ರ ಗ್ರಂಥಗಳಲ್ಲಿ ಸಾಕಷ್ಟು ಉಲ್ಲೇಖಗಳು ಇವೆ.
ಉದಾಹರಣೆಯಾಗಿ ನೋಡಬಹುದಾದರೆ ಧರ್ಮಕ್ಕೆ ಪೂರಕವಾಗಿದೆ ಅಥವಾ ವಿರುದ್ಧವಾಗಿದೆ ಎಂಬ ಗೊಡವೆಗೆ ಹೋಗದೆ ತನ್ನ ಗಂಡ ಹೇಳಿದಂತೆ ಪತ್ನಿಯಾದವಳು ನಡೆದುಕೊಳ್ಳಬೇಕು ಎಂಬ ಮಾಹಿತಿ ವೇದಗಳಲ್ಲಿದೆ. ಇನ್ನು ಸ್ತ್ರೀಯರು ಎಂದಿಗೂ ಸ್ನೇಹಿತರಲ್ಲ ಅಥವಾ ಶತ್ರುಗಳಲ್ಲ ಅವರು ಯಾವಾಗಲೂ ಹೊಸ ಪುರುಷರತ್ತಲೇ ಹೆಜ್ಜೆ ಇಟ್ಟಿರುತ್ತಾರೆ ಎಂಬ ಮಾತು ದೇವೀ ಭಾಗವತದಲ್ಲಿ ಬರುತ್ತೆ. ಒಳ್ಳೆಯ ಕುಟುಂಬದಿಂದ ಬಂದಿದ್ದು ಸುಂದರಿಯರಾಗಿದ್ದು ವಿವಾಹವಾಗಿದ್ದರೂ ಅವಕಾಶ ಸಿಕ್ಕಿದೆ ಎಂದರೆ ನೈತಿಕತೆಯನ್ನು ಉಲ್ಲಂಘಿಸಲು ಸ್ತ್ರೀಯರು ಹಿಂತೆಗೆಯುವವರಲ್ಲ ಎಂಬ ಉಲ್ಲೇಖ ಮಹಾಭಾರತದ ಅನುಶಾಷನ ಪರ್ವದಲ್ಲಿದೆ ಮತ್ತು ವೈಶಿಷ್ಟರು ಸ್ತ್ರೀಯರನ್ನು ಸುಳ್ಳಿನ ಪ್ರತಿ ಮೂರ್ತಿಗಳಿದ್ದಂತೆ ಎಂದು ಪರಿಗಣಿಸಿದ್ದರೆ ಶುಕ್ರ ಮತ್ತು ಚಾಣಕ್ಯರ ಪ್ರಕಾರ ಸ್ತ್ರೀಯರು ಯಾವುದೇ ಜವಾಬ್ದಾರಿಗಳನ್ನು ನಿಭಾಯಿಸಲು ಅರ್ಹರಲ್ಲ ಹಿಂದೂ ನೀತಿ ಸಂಹಿತೆಯ ಪ್ರವರ್ತಿ ಕರೆಸಿಕೊಂಡಿರುವ ಮಹರ್ಷಿ ಮನುವಿನ ಅಭಿಪ್ರಾಯದಂತೆ ಸ್ತ್ರೀಯರು ಸ್ವಾತಂತ್ರ್ಯಕ್ಕೆ ಅರ್ಹರಾದವರಲ್ಲ ಸ್ತ್ರೀಯರ ಅನರ್ಹತೆಗಳನ್ನು ಕುರಿತು ವ್ಯಕ್ತಪಡಿಸಲಾರದ ಅಭಿಪ್ರಾಯಗಳಿದ್ದು ಈ ಪಟ್ಟಿಯನ್ನು ಇನ್ನೂ ಉದ್ದವಾಗಿ ಬೆಳೆಸುವುದು ಸೂಕ್ತವಲ್ಲ ಎಂದೆನಿಸುತ್ತದೆ.! ಆದರೆ ಯಾವಾಗ ಸ್ವತಂತ್ರ ಭಾರತದ ಸಂವಿಧಾನವು 1950 ಜನವರಿ 26 ರಂದು ರಿಂದ ಜಾರಿಗೊಂಡಿತೋ ಆ ನಂತರ ಕಾನೂನಾತ್ಮಕವಾಗಿ ಸ್ತ್ರೀಯರು ಎಲ್ಲಾ ವಿಷಯಗಳಲ್ಲೂ ಪುರುಷರಿಗೆ ಸಮಾನರಾಗಿದ್ದಾರೆ ಸಂವಿಧಾನದ 14 ಮತ್ತು 15ನೇ ಕಲಂಗಳು ಸಮಾನತೆ ಹಕ್ಕನ್ನು ದೇಶದ ಎಲ್ಲಾ ಪ್ರಜೆಗಳಿಗೆ ಯಾವುದೇ ಬಗೆಯ ವರ್ಗಭೇದ, ಜಾತಿಭೇದ, ಮತಭೇದ, ಪಕ್ಷಭೇದ, ಲಿಂಗವೇದವಿಲ್ಲದಂತೆ ಸಮಾನವಾಗಿಯೇ ನೀಡುತ್ತದೆ. ಹಲವಾರು ಶತಮಾನಗಳ ಅವಧಿಯುದ್ಧಕ್ಕೂ ಸ್ತ್ರೀಯರನ್ನು ಶಾಸ್ತ್ರಗಳ, ಕಾನೂನಿನ ದೃಷ್ಟಿಯಿಂದ ಎರಡನೇ ಪ್ರಜೆಗಳನ್ನಾಗಿ ನೋಡುತ್ತಿದ್ದ ಆಚರಣೆಗೆ ಈಗ ಶಾಶ್ವತವಾದ ತೆರೆಯೊಂದನ್ನುದನ್ನು ಎಳೆದಂತಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.!
ಇದೇ ಮಾರ್ಚ್ 8ನೇ ತಾರೀಕು 1857ರಲ್ಲಿ ಅಮೆರಿಕಾದ ಸೇತು ಸಂಸ್ಥಾನದ ಬಟ್ಟೆ ಗಿರಣಿಯ ಮಹಿಳಾ ಕಾರ್ಮಿಕರು ದಿನದ ದುಡಿಮೆಯ ಅವಧಿಯನ್ನು 16 ಗಂಟೆಯಿಂದ ತಪ್ಪಿಸಬೇಕೆಂದು ಬೀದಿಯಲ್ಲಿ ಮೆರವಣಿಗೆ ಮಾಡಿ ಮಹಿಳಾ ಶೋಷಣೆ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮೊದಲ ಬಾರಿಗೆ ವ್ಯಕ್ತಪಡಿಸಿದ್ದನ್ನು ನೆನಪಿಸಿಕೊಂಡು ಮಾರ್ಚ್ 8 ರಂದು ಎಲ್ಲಡೆಯಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಇನ್ನು 1917ರ ಮಾರ್ಚ್ 8ರಂದು ರಷ್ಯಾದ ಮಹಿಳೆಯರು ಲೆನಿನ್ ನ ನೇತೃತ್ವದ ಕ್ರಾಂತಿಯಲ್ಲಿ ಭಾಗಿಗಳಾಗಲಿ ಬೀದಿಗಳಿದಿದ್ದರು 8.3 1943 ರಂದು ಇಟಲಿಯಲ್ಲಿ ಅಲ್ಲಿನ ಸರ್ವಾಧಿಕಾರಿ, ಮುಸಲೋನಿಯ ವಿರುದ್ಧ ಇಟಲಿಯ ಮಹಿಳೆಯರು ಭಾರತದ ಮಟ್ಟಿಗೆ ಹೇಳುವುದಿದ್ದರೆ 1917 ರಲ್ಲಿ ಹೋಂ ರೂಲ್ ಚಳುವಳಿಯ ಆದಿಸ್ ಮಾತ್ರೆ ಅನುವಿ ಸೆಂಟರ್ ಅನ್ನು ಬಂಧಿಸಿದಾಗ ಭಾರತೀಯ ಮಹಿಳೆಯರು ಮೊದಲ ಬಾರಿಗೆ ಬೀದಿಗಿಳಿದು ಹೋರಾಟ ಮಾಡಿ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ತೆರಳಿ ತಮ್ಮ ನಾಯಕಿಯ ಬಿಡುಗಡೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದರು.
1994 ರಲ್ಲಿ ಕೇಂದ್ರ ಗ್ರಹ ಖಾತೆಯ ಕ್ರೈಂ ರೆಕಾರ್ಡ್ ಬ್ಯೂರೋ ಸಂಸ್ಥೆಯು ಪ್ರಕಟಿಸಿದ ವರದಿಯ ಉಲ್ಲೇಖದಲ್ಲಿರುವಂತೆ
ಪ್ರತಿ 6 ನಿಮಿಷಕ್ಕೊಮ್ಮೆ ಸ್ತ್ರೀಯರ ಮೇಲೆ ದೌರ್ಜನ್ಯ ನಡೆಯುತ್ತಿದೆ.
ಪ್ರತಿ 44 ನಿಮಿಷಕ್ಕೆ ಸ್ತ್ರೀಯೋರ್ವಳ ಅಪಹರಣವಾಗುತ್ತಿದೆ.
ಪ್ರತಿ 47 ನಿಮಿಷಕ್ಕೆ ಸ್ತ್ರೀಯೋರ್ವಳ ಮಾನಭಂಗವಾಗುತ್ತಿದೆ.
ಪ್ರತಿದಿನ ಕನಿಷ್ಠ 17 ವರದಕ್ಷಿಣಾ ಸಾವುಗಳಾಗುತ್ತಿವೆ.
ಕಳೆದ ಹತ್ತು ವರ್ಷಗಳಲ್ಲಿ ಮಹಿಳೆಯರ ವಿರುದ್ಧದ ದೌರ್ಜನಗಳು ಎರಡು ಪಟ್ಟು ಹೆಚ್ಚಿವೆ
ಕಳೆದ ಎರಡು ದಶಕಗಳಲ್ಲಿ ಅತ್ಯಾಚಾರದ ಪ್ರಕಾರಗಳು ಶೇ 400 ರಷ್ಟು ಹೆಚ್ಚಿವೆ.
ಅಂದರೆ 1974 ರಲ್ಲಿ 2962 ರಷ್ಟಿದ್ದ ಪ್ರಕರಣಗಳು 1993ರಲ್ಲಿ 11,117 ಕ್ಕೆ ಹೆಚ್ಚಿದೆ.
ಸ್ತ್ರೀಯರ ಅಪಹರಣದ ಹಾಗೂ ಒತ್ತೆಯಿರಿಸಿಕೊಳ್ಳುವ ಪ್ರಕರಣಗಳು 1974- 93 ರ ನಡುವೆ ಶೇಕಡ 30ರಷ್ಟು ಹೆಚ್ಚಿವೆ ; ಅಂದರೆ 9,980 ರಿಂದ [1974 ]11759 ಕ್ಕೆ 11,759ಕ್ಕೆ [1994] ಏರಿದೆ ;
1993 ರ ಒಂದೇ ವರ್ಷ ಸ್ತ್ರೀಯರ ವಿರುದ್ಧದ ದೌರ್ಜನ್ಯಗಳು 82,818 ಪ್ರಕರಣಗಳು ದಾಖಲಾಗಿದ್ದವು.
ಮಹಾಭಾರತದ ಉಪಕಥೆಗಳಲ್ಲಿ ಬರುವ ಮಾಧವಿ ಎಂಬ ರಾಜಕುಮಾರಿಗೆ ಮುಳು ವಾಗಿದ್ದ ಅವಳ ಸೌಂದರ್ಯ ಅದರಿಂದಾಗಿಯೇ ಅವಳ ಒಂದು ನೂರು ಹಸುಗಳಿಂದ ಐದು ಸಾವಿರ ಹಸುಗಳಿಗಾಗಿ ಅನೇಕ ರಾಜ ಮಹಾರಾಜರುಗಳಿಗೆ ಮಾರಾಟವಾದ ಪ್ರಸಂಗದ ಉಲ್ಲೇಖವಿದೆ .!
ಜೂನ್ ಆಫ್ ಆರ್ಕೆ ಎಂಬ ಹುಡುಗಿಯನ್ನು 13ನೇ ಶತಮಾನದಲ್ಲಿ ಜೀವಂತ ಸುಟ್ಟು 800 ವರ್ಷಗಳ ನಂತರ ಅವಳನ್ನು ಸಂತಳು ಎಂದು ಚರ್ಚ್ ಘೋಷಿಸಿದನ್ನು ಆಂಗ್ಲ ನಾಟಕಕಾರ ಬರ್ನಾಡ್ ಶಾ ವಿಡಂಬಿಸಿದ್ದಾನೆ.!
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೇಳಿದಂತೆ ನಾವು ಮಾಡಬೇಕಾದದ್ದು ಏನೆಂದರೆ ನಾವು ಕೇವಲ ರಾಜಕೀಯ ಪ್ರಜಾಪ್ರಭುತ್ವದೊಂದಿಗೆ ತೃಪ್ತರಾಗಬಾರದು . ನಾವು ಗಳಿಸಿರುವ ರಾಜಕೀಯ ಪ್ರಜಾಪ್ರಭುತ್ವದ ಮೂಲಕ ಸಾಮಾಜಿಕ ಪ್ರಜಾಪ್ರಭುತ್ವವನ್ನು ಪಡೆಯಬೇಕು ರಾಜಕೀಯ ಪ್ರಜಾಪ್ರಭುತ್ವದ ತಳಹರಿಯಾಗಿ ಸಾಮಾಜಿಕ ಪ್ರಜಾಪ್ರಭುತ್ವವು ಇರದಿದ್ದಲ್ಲಿ ರಾಜಕೀಯ ಪ್ರಜಾಪ್ರಭುತ್ವವು ಹೆಚ್ಚು ಕಾಲ ಉಳಿಯುವುದಿಲ್ಲ ಸಾಮಾಜಿಕ ಪ್ರಜಾಪ್ರಭುತ್ವ ಎಂದರೆ ಸ್ವಾತಂತ್ರ್ಯ, ಸಮಾನತೆ ಸಹೋದರತೆಯನ್ನು ಜೀವನದ ನಿಯಮಗಳನ್ನಾಗಿ ಸ್ವೀಕರಿಸಿ ಪಾಲಿಸುವ ಜೀವನ ಮಾರ್ಗವೇ ಸಾಮಾಜಿಕ ಪ್ರಜಾಪ್ರಭುತ್ವವಾಗಿದೆ.
ಸ್ವತಂತ್ರ ಭಾರತದಲ್ಲಿ ಸ್ತ್ರೀಯರ ಸ್ಥಾನಮಾನ ಬಹಳಷ್ಟು ಸುಧಾರಿಸಿದೆ ಸ್ತ್ರೀಯರು ಇಂದು ಸಮಾನತೆಯತ್ರ ಸಾಗಿದ್ದಾರೆ.
ಲಿಂಗ ತಾರತಮ್ಯವಿಲ್ಲದೆ ನೀಡಲಾದ ಸಾಂವಿಧಾನಿಕ ಸಮಾನತೆ.
ನಮ್ಮ ಹೆಮ್ಮೆಯ ಸಂವಿಧಾನ ಯಾವ ಲಿಂಗ ತಾರತಮ್ಯವನ್ನು ಮಾಡದೆ ಸ್ತ್ರೀಯರಿಗೂ ಕೂಡ ಪುರುಷರಷ್ಟೇ ಸರಿ ಸಮಾನವಾದ ವೈಯಕ್ತಿಕ ಸ್ವಾತಂತ್ರ್ಯ ಮೂಲಭೂತ ಹಕ್ಕುಗಳು ವಿಚಾರ ಸ್ವಾತಂತ್ರ್ಯ ಅಭಿವ್ಯಕ್ತಿ ಸ್ವಾತಂತ್ರ್ಯ ಧಾರ್ಮಿಕ ವೈವಾಹಿಕ ರಾಜಕೀಯ ಸಾಂಸ್ಕೃತಿಕ ಶೈಕ್ಷಣಿಕ ಸ್ವಾತಂತ್ರ್ಯ ಹೀಗೆ ಎಲ್ಲಾ ಬಗೆ ಸ್ವಾತಂತ್ರ್ಯವನ್ನು ನೀಡುವುದು ಮಾತ್ರವಲ್ಲದೆ ಸಮಾನತೆ ಮತ್ತು ಸಮಾನ ಅವಕಾಶಗಳ ಹಕ್ಕು ಶೋಷಣೆ ವಿರುದ್ಧದ ಹಕ್ಕು ಮತ್ತು ಸಮಸ್ಯೆ ಸಂಕಷ್ಟಗಳಿಗೆ ಸಾಂವಿಧಾನಿಕ ಪರಿಹಾರಗಳನ್ನು ಕಂಡುಕೊಳ್ಳುವ ಹಕ್ಕುಗಳನ್ನು ಅದು ನೀಡುವುದು ವೈಸ್ಕ ಮತದಾನದ ಹಕ್ಕನ್ನು ಸ್ತ್ರೀಯರಿಗೂ ನೀಡಿದ್ದು ಅವರನ್ನು ಯಾವುದೇ ದೃಷ್ಟಿಯಿಂದ ದ್ವಿತೀಯ ದರ್ಜೆಯ ಪ್ರಜೆಗಳನ್ನಾಗಿ ಮಾಡಲಾಗಿಲ್ಲ.
ಸಾಮಾಜಿಕ ಶಾಸನಗಳು.[ Social Legislations ]
ಬ್ರಿಟಿಷರ ಕಾಲದಲ್ಲಿ ಸ್ತ್ರೀಯರ ಹಿತ ದೃಷ್ಟಿಯಿಂದ ಕೆಲವು ಸಾಮಾಜಿಕ ಶಾಸನಗಳನ್ನ ಕೈಗೊಳ್ಳಲಾಗಿದ್ದನ್ನು ತಿದ್ದುಪಡಿ ಮಾಡಿ ಜೊತೆಗೆ ಅದೇ ಉದ್ದೇಶದಿಂದ ಸ್ವಾತಂತ್ರ್ಯ ಬಂದ ಮೇಲೂ ಸಹ ಅನೇಕ ಹೊಸ ಶಾಸನಗಳನ್ನು ಕೈಗೊಳ್ಳಲಾಗಿದೆ ಅವುಗಳು ಈ ಕೆಳಗಿನಂತಿವೆ.
1] ವಿಶೇಷ ವಿವಾಹ ಕಾಯ್ದೆ [Special Marriage Act of 1954]
ಈ ಕಾಯ್ದೆಯು ವೈಭವಿಕ ವಿಚಾರಗಳಲ್ಲಿ ಪುರುಷರಿಗೆ ಸಮಾನವಾದ ಹಕ್ಕುಗಳನ್ನು ಸ್ತ್ರೀಯರಿಗೂ ಸಹಿತ ನೀಡಿದೆ ಅಂತರ ಜಾತಿಯ ವಿವಾಹ ಪ್ರೇಮ ವಿವಾಹ ಹಾಗೂ ವಿವಾಹದ ನೋಂದಣಿ ಇತ್ಯಾದಿಗಳಿಗೆ ಅವಕಾಶವೀಯುತ್ತದೆ.
2] ಹಿಂದೂ ವಿವಾಹ ಕಾಯ್ದೆ [The Hindu Marraiage Act of 1955] :
ಸ್ತ್ರೀ ಪುರುಷ ಸಮಾನತೆಗೆ ಈ ಶಾಸನವು ಪೂರಕವಾಗಿ ನಿಂತುಕೊಂಡಿದೆ ಬಹು ಪತಿತ್ವ ಬಹುಪತ್ನಿತ್ವ ದ್ವಿಪತ್ನಿತ್ವ ಮತ್ತು ಬಾಲ್ಯ ವಿವಾಹದ ಆಚರಣೆಗಳನ್ನು ಇದು ನಿಷೇಧಿಸುತ್ತದೆ ಹಾಗೂ ಸ್ತ್ರೀಯರಿಗೆ ವಿಚ್ಛೇದದ ಹಾಗೂ ಪುನರ್ವಿವಾಹದ ಹಕ್ಕನ್ನು ನೀಡುತ್ತದೆ.
3]ಹಿಂದೂ ದತ್ತು ಮತ್ತು ಜೀವನಾಂಶ ಕಾಯ್ದೆ.[ The Hindu Adoption and Maintenance Act of 1956]:
ಗಂಡನಿಂದ ನಿರಾಕರಣೆಗೊಂಡ, ಅಥವಾ ಪರಿತಕ್ಳಾದ ಹೆಂಡತಿಗೆ ಆತನಿಂದ ಜೀವನ ಅಂಶ ಪಡೆಯುವ ಹಕ್ಕನ್ನು ಹಾಗೂ ದತ್ತು ಮಕ್ಕಳನ್ನು ಪಡೆಯುವ ಹಕ್ಕನ್ನು ಈ ಕಾಯ್ದೆಯು ನೀಡುತ್ತದೆ.
4] ಹಿಂದೂ ಉತ್ತರಾಧಿಕಾರಿ ಕಾಯ್ದೆ [The Hindu Sussession Act 1956]:
ಈ ಕಾಯ್ದೆಯು ಪಿತ್ರಾರ್ಜಿತ ಆಸ್ತಿಯಲ್ಲಿ ಸ್ತ್ರೀಯರಿಗೂ ಸಹ ಉತ್ತರಾಧಿಕಾರದ ಹಕ್ಕನ್ನು ನೀಡುತ್ತದೆ.
5] ಕನ್ನೆಯರ ಮತ್ತು ಮಹಿಳೆಯರ ನೈತಿಕ ವ್ಯವಹಾರ ಪ್ರತಿಬಂದಕ ಕಾಯ್ದೆ [ The Supperession of Immoral Traffic of women and Girls' Avt of 1956] ಹೆಣ್ಣು ಮಕ್ಕಳ ಅಪಹರಣ ಮತ್ತು ವೇಶ್ಯಾವೃತ್ತಿಗೆ ಅವರನ್ನು ತಳ್ಳುವುದನ್ನು ತಡೆಗಟ್ಟಲು ಈ ಕಾನೂನಿನ ಮೂಲಕ ಕೈಗೊಳ್ಳಲಾಗಿದೆ.
6] ವರದಕ್ಷಿಣೆ ನಿಷೇಧ ಕಾಯ್ದೆ [The Dowry ಪ್ರೊಹಿಬಿಷನ್ Act of 1961] : ಸ್ತ್ರೀಯರ ಶೋಷಣೆಗೆ ಕಾರಣವಾದ ವರದಕ್ಷಿಣ ಕುಡುಕನ್ನು ಹತ್ತಿಕ್ಕಲು ಈ ಕಾಯ್ದೆಯಂತೆ ನಿಷೇಧಿಸಲಾಗಿದೆ.
*7] ವೈದ್ಯಕೀಯ ಗರ್ಭ ನಿವಾರಣಾ ಕಾಯ್ದೆ[ Medical Termination of Pergnance Act of 1971]
ಭ್ರೂಣ ಹತ್ಯೆಯನ್ನು ತಡೆಗಟ್ಟಲು ಈ ಕಾನೂನನ್ನು ಜಾರಿಗೆ ತರಲಾಗಿದೆ.
*8] ಕುಟುಂಬ ನ್ಯಾಯಾಲಯ ಕಾಯ್ದೆ [ The Family Court Act ಆ 1984 ]
*ಯಾವುದ ತೆರನಾದ ಕೌಟುಂಬಿಕ ವಿಚಾರಗಳಲ್ಲಿ, ವಿವಾದಗಳಲ್ಲಿಸ್ತ್ರೀಯರಿಗೆ ನ್ಯಾಯವೊದಗಿಸಲು ಈ ಕಾಯ್ದೆಯನ್ನು ಜಾರಿ ಮಾಡಲಾಗಿದೆ
9] ಸಮಾನ ವೇತನ ಕಾಯ್ದೆ[ The equal Remuneration Act ಆ 1976 ]:
ಗಂಡು-ಹೆಣ್ಣು ಯಾವ ಭೇದಭಾವವಿಲ್ಲದೆ ಸಮಾನ ಕೆಲಸಕ್ಕೆ ಸಮಾನ ವೇತನವೆಂಬ ತತ್ವವನ್ನು ಈ ಕಾಯ್ದೆಯಲ್ಲಿ ಅಳವಡಿಸಲಾಗಿದೆ.
10] ಪ್ರಸೂತಿ ಸೌಲಭ್ಯ ಕಾಯ್ದೆ [ The Meternity Benefit Act ಆ 1961 ]
ಹೆರಿಗೆ ಸಂಬಂಧವಾಗಿ ಸಂಬಳ ಸಹಿತ ರಜೆ ಪಡೆಯುವ ಸೌಲಭ್ಯವನ್ನು ದುಡಿಯುವ ವಿವಾಹಿತ ಮಹಿಳೆಯರಿಗೆ ಅನುಷ್ಠಾನಗೊಳಿಸಲಾಗಿದೆ.
11] ಕಾರ್ಖಾನೆ {ತಿದ್ದುಪಡಿ} ಕಾಯ್ದೆ [ The Factories {Amendment} Act of 1976]
ಹಲವಾರು ಅನುಕೂಲತೆಗಳ ಜೊತೆಗೆ ಔದ್ಯೋಗಿಕ ಕ್ಷೇತ್ರದಲ್ಲಿಯೂ ಸಹಿತ ಸ್ತ್ರೀಯರಿಗಾಗಿ ಪ್ರತ್ಯೇಕ ಶೌಚಗ್ರಹಗಳನ್ನು, ಕೊಠಡಿಗಳನ್ನು ನಿರ್ಮಿಸುವುದು ಸೇರಿದಂತೆ ತಾಯಂದಿರ ದುಡಿಮೆಯ ಅವಧಿಯಲ್ಲಿ {ಅವರ ಸಂಖ್ಯೆ 30 ನ್ನು ಮೀರಿದ್ದರೆ} ಅವರ ಮಕ್ಕಳ ಸಂರಕ್ಷಣೆಗೂ ವ್ಯವಸ್ಥೆ ಮಾಡಬೇಕೆಂದು ಈ ಕಾನೂನು ಹೇಳುತ್ತದೆ.
ಪ್ರೊ; ಬಸವರಾಜ ಜಾಲವಾದಿ ಸರಕಾರಿ ಕಾಲೇಜು, ಕೂಡಗಿ.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
Thursday, March 6, 2025
Wednesday, March 5, 2025
ವಿದ್ಯಾರ್ಥಿನಿಯರು ಮೊಬೈಲ್ ಗೀಳಿನಿಂದ ಹೊರಬರಲು ಡಾ. ಸೌಮ್ಯಶ್ರೀ ಕರೆ
ವಿಜಯಪುರ : ಕಾಲೇಜು ವಿದ್ಯಾರ್ಥಿನಿಯರು ಮೊಬೈಲ್ ಗೀಳಿನಿಂದ ಹೊರ ಬಂದು ತಮ್ಮ ಅಧ್ಯಯನಕ್ಕೆ ಪುಸ್ತಕಗಳನ್ನು ಹೆಚ್ಚಾಗಿ ಬಳಸಲು ಡಾ. ಸೌಮ್ಯಶ್ರೀ ಮಯೂರ ಕಾಕು ಖ್ಯಾತ ಮಕ್ಕಳ ಮತ್ತು ಹದಿಹರೆಯ ಮನೋರೋಗ ತಜ್ಞರು ಜೆ ಎಸ್ ಎಸ್ ಆಸ್ಪತ್ರೆ, ವಿಜಯಪುರ ಅವರು ಸಲಹೆ ನೀಡಿದರು.
ಕ.ರಾ.ಅ.ಮ.ವಿ.ವಿ. ವಿಜಯಪುರ ಸ್ನಾತಕ ಅಧ್ಯಯನ ವಿಭಾಗ (NEP) ದಲ್ಲಿ 2024-25 ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ವಿದ್ಯಾಥಿನಿಯರಿಗೆ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತಾನಾಡಿದರು.
ಸಾಮಾಜಿಕ ಜಾಲತಾಣ ಬಳಕೆಯಲ್ಲಿ ವಿದ್ಯಾರ್ಥಿನಿಯರು ತಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥಗೊಳಿಸುತ್ತಿದ್ದಾರೆ, ಬೌದ್ಧಿಕ ಬೆಳವಣಿಗೆಗೆ ಹಲವಾರು ಆ್ಯಪ್ ಮಾರಕವಾಗಿವೆ. ವಿದ್ಯಾರ್ಥಿನಿಯರು ಪುಸ್ತಕಗಳೊಂದಿಗೆ ಹೆಚ್ಚು ಸಮಯ ಕಳೆಯುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರುಗೊಳ್ಳಲು ಉಪಯುಕ್ತವಾಗುವಂತಹ ಜ್ಙಾನವನ್ನು ವಿದ್ಯಾರ್ಥಿನಿಯರು ಪಡೆಯಬೇಕು, ಈ ಜ್ಙಾನವು ಮೊಬೈಲ್ ಗಳಲ್ಲಿ ದೊರೆಯುವುದು ವಿರಳ. ಗ್ರಂಥಾಲಯದ ಪುಸ್ತಕಗಳನ್ನು ಅಧ್ಯಯನಕ್ಕೆ ಬಳಸಿಕೊಳ್ಳಬೇಕೆಂದು ಕರಾಅಮವಿವಿ ಕುಲಸಚಿವರಾದ ಶ್ರೀ ಶಂಕರಗೌಡಾ ಸೋಮನಾಳ ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಅವರು ವಿದ್ಯಾರ್ಥಿನಿಯರಿಗೆ ರಸಪ್ರಶ್ನೆ ಕೇಳುವುದರ ಮೂಲಕ ಕಾರ್ಯಕ್ರಮಕ್ಕೆ ಜ್ಙಾನಸ್ಪರ್ಶ ನೀಡಿದರು. ರಸಪ್ರಶ್ನೆ ವಿಜೇತರಿಗೆ ಬಹುಮಾನ ನೀಡಿ ಗೌರವಿಸಿದರು.
ಸ್ನಾತಕ ಆಧ್ಯಯನ ವಿಭಾಗದ ವಿಶೇಷಾಧಿಕಾರಿಗಳಾದ ಪ್ರೊ. ಸಕ್ಪಾಲ ಹೂವಣ್ಣ ಅವರು ಮಾತನಾಡಿ ವಿದ್ಯಾರ್ಥಿನಿಯರು ತಮ್ಮ ಉಜ್ವಲ ಭವಿಷ್ಯಕ್ಕಾಗಿ ಉನ್ನತ ಶಿಕ್ಷಣದ ಅಧ್ಯಯನದ ಸಮಯ ಸಂದರ್ಭವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ವಿಭಾಗದ ಸಂಯೋಜಕರಾದ ಡಾ. ಜಿ ಸೌಭಾಗ್ಯ, ಹಾಗೂ ಸಾಂಸ್ಕçತಿಕ ಕರ‍್ಯಕ್ರಮದ ಸಂಯೋಜಕರಾದ ಡಾ. ಮೆಹರಾಜಬೇಗಂ ಸೈಯ್ಯದ ಭಾಗವಹಿಸಿದ್ದರು. ಭವಾನಿ ಅಂಗಡಿ ಸ್ವಾಗತಿಸಿದರು ಚನ್ನಮ್ಮಾ ಕಂಬಾರ ನಿರೂಪಿಸಿದರು. ಶ್ವೇತಾ ನಿಂಬಾಳ ವಂದಿಸಿದರು. ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿನಿಯರು ಹಾಜರಿದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
ಬಾಲಭಾರತಿ ಶಾಲೆಯ ಶಿಕ್ಷಕಿ ಸುವರ್ಣ ಸಾರಂಗಮಠ ರವರಿಗೆ ಅಂತರರಾಷ್ಟ್ರೀಯ ಸಾವಿತ್ರಿಬಾಯಿ ಫುಲೆ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ
ಆಲಮೇಲ ; ಪಟ್ಟಣದ ಶ್ರೀ ವಿಶ್ವೇಶ್ವರ ಬಾಲಭಾರತಿ ಅನುದಾನಿತ ಪ್ರಾಥಮಿಕ ಶಾಲೆಯ ಶಿಕ್ಷಕಿ ಸುವರ್ಣ ಸಾರಂಗಮಠ ರವರಿಗೆ ಚೇತನ ಫೌಂಡೇಶನ್ ಧಾರವಾಡ ,ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ ( ರಿ.) ಹಾಗೂ ಕರ್ನಾಟಕ ಸೋಷಿಯಲ್ ಕ್ಲಬ್ ಬೆಂಗಳೂರು ವತಿಯಿಂದ ಹಮ್ಮಿಕೊಂಡಿರುವ ಅಂತರಾಷ್ಟ್ರೀಯ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಅಂತರರಾಷ್ಟ್ರೀಯ ಸಾವಿತ್ರಿಬಾಯಿ ಫುಲೆ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಪ್ರಶಸ್ತಿ ಸಮಾರಂಭವು ರವಿವಾರ ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಗಾಂಧಿ ಭವನದ ಬಾಪು ಸಭಾಂಗಣ ದಲ್ಲಿ ಜರುಗಲಿದೆ ಪ್ರಶಸ್ತಿ ಪ್ರಧಾನವನ್ನು ಬಹುಭಾಷಾ ಚಲನಚಿತ್ರ ಹಿನ್ನೆಲೆ ಗಾಯಕಿ ಹಾಗೂ ಸಂಶೋಧಕಿ ಡಾ.ಪ್ರೀಯದರ್ಶಿನಿ ರವರು ಮಾಡಲಿದ್ದಾರೆ ಎಂದು ಮುಖ್ಯ ಶಿಕ್ಷಕ ಲಕ್ಷ್ಮೀಪುತ್ರ ಕಿರನಳ್ಳಿ ತಿಳಿಸಿದ್ದಾರೆ.ಪ್ರಶಸ್ತಿಗೆ ಆಯ್ಕೆ ಆಗಿದಕ್ಕೆ ಸಂಸ್ಥೆಯ ಅಧ್ಯಕ್ಷರು ಎಸ್.ಆಯ್.ಜೋಗೂರ,ಕಾರ್ಯದರ್ಶಿಗಳು ಪ್ರಶಾಂತ ಬಡದಾಳ,ಕೋಶಾಧ್ಯಕ್ಷರು ಅರವಿಂದ ಕುಲಕರ್ಣಿ ,ಆಡಳಿತ ಮಂಡಳಿಯ ಸದಸ್ಯರು, ಶಾಲಾ ಶಿಕ್ಷಕವೃಂದ ಹಾಗೂ ಶಿಕ್ಷಕ ಪಂಡಿತ ಅವಜಿ ಹರ್ಷ ವ್ಯಕ್ತ ಪಡಿಸಿದ್ದಾರೆ.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
ಎಂ ಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ
ಚಡಚಣ: ಸಂಗಮೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಎಂ ಕಾಂ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಆಯೋಜಿಸಿದ್ದರು.
ಪ್ರಾಂಶುಪಾಲ ಡಾ. ಎಸ್.ಬಿ.ರಾಠೋಡರವರು ದೀಪ ಬೆಳಗಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ಕಾಲೇಜಿನ ಸಂಪ್ರದಾಯಗಳು, ಶೈಕ್ಷಣಿಕ ವ್ಯವಸ್ಥೆ , ಅಧ್ಯಾಪಕರ ಬದ್ಧತೆ, ಗುಣಮಟ್ಟದ ಮೂಲಸೌಕರ್ಯ, ಆಡಳಿತ ಮಂಡಳಿಯ ಬೆಂಬಲ, ವಿದ್ಯಾರ್ಥಿಗಳ ಮುಂದಿನ ಭವಿಷ್ಯದ ಕುರಿತು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿಂದಿ ಉಪನ್ಯಾಸಕರಾದ ಡಾ. ಎಸ.ಎಸ. ದೇಸಾಯಿ ಮಾತನಾಡಿ ವಿದ್ಯಾರ್ಥಿಗಳು
ತಮ್ಮ ವಿಷಯ ಜ್ಞಾನದ ಜೊತೆಗೆ ಕೌಶಲ್ಯಗಳನ್ನು ಪಡೆಯಬೇಕು . ತಮ್ಮ ಮುಂದಿನ ಭವಿಷ್ಯದ ಹೇಗೆ ನಿರ್ಮಿಸ ಬೇಕು ಎಂದು ಕೆಲವೊಂದು ನೈಜ ಸನ್ನಿವೇಶಗಳನ್ನು ಹೇಳುವುದರ ಮೂಲಕ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಮಾಹತೇಂಶ ಜನವಾಡ, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ರಶ್ಮೀ ಗಜಾಕೋಶ, ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಶಂಕರ ಕಡೂರು, ಎಂ .ಕಾಂ ವಿಭಾಗದ ಮುಖ್ಯಸ್ಥರಾದ ಪ್ರೊ. ಎ. ಎಸ್.ಪಾಟೀಲ ಮತ್ತು ಎಮ್. ಕಾಂ . ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಬಸವರಾಜ ನೀಲವಾಣಿ, ಪ್ರೊ. ಜ್ಞಾನೇಶ್ವರಿ ಲಚ್ಯಾಣ, ಪ್ರೊ.ಬಂಗಾರೆವ್ವ ದೈವಾಡಿ, ಪ್ರೊ. ಐಶ್ವರ್ಯ ಹಕ್ಕೆ, ಹಾಗೂ ಪ್ರಥಮ ಹಾಗೂ ದ್ವಿತೀಯ ಎಂ.ಕಾ. ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಎಮ.ಕಾಂ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾದ ತುಳಸಿ ಲೋಲಾ ಅವರು ಕಾರ್ಯಕ್ರಮ ನಿರೂಪಿಸಿದರೇ, ಅನ್ಯನಾ ಕುಲಕರ್ಣಿ ಪ್ರಾರ್ಥನಾ ಗೀತೆ ಹಾಡಿದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.





















.jpeg)