Wednesday, November 23, 2022
Friday, November 18, 2022
Thursday, November 17, 2022
Wednesday, November 16, 2022
Tuesday, November 15, 2022
ಸಿದ್ದಾಪುರವರಿಗೆ " ರಮಣಶ್ರೀ ಪ್ರಶಸ್ತಿ" ಪ್ರದಾನ
ಈ ದಿವಸ ವಾರ್ತೆ
ವಿಜಯಪುರ: ಅಖಿಲಭಾರತ ಶರಣ ಸಾಹಿತ್ಯ ಪರಿಷತ್ತುˌ ˌಮೈಸೂರು ಹಾಗೂ ಬೆಂಗಳೂರಿನ ರಮಣಶ್ರೀ ಪ್ರತಿಷ್ಠಾನದ ಸಹಯೋಗದಲ್ಲಿ ಕೊಡಮಾಡುವ ೨೦೨೨ನೆಯ ಸಾಲಿನ "ರಮಣಶ್ರೀ ಶರಣ ಹಿರಿಯ ಶ್ರೇಣಿ ಆಧುನಿಕ ವಚನರಚನೆ ಪ್ರಶಸ್ತಿ "ಯನ್ನು ಆಧುನಿಕ ವಚಕಾರ ˌಶರಣ ಸಾಹಿತಿ ಪ.ಗು.ಸಿದ್ದಾಪುರವರಿಗೆ ಇದೇ ೧೭ ರಂದು ಬೆಂಗಳೂರಿನ " ರಮಣಶ್ರೀ ಹೊಟೇಲ ಸಭಾಂಗಣ "ದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿಯವರು ಪ್ರದಾನಮಾಡಲಿದ್ದಾರೆ.ಪ್ರಶಸ್ತಿಯು ೪೦ಸಾವಿರ ಗೌರವಧನದೊಂದಿಗೆ ಪ್ರಶಸ್ತಿ ಫಲಕವನ್ನೊಳಗೊಂಡಿದೆ.ಸಮಾರಂಭದ ಅಧ್ಯಕ್ಷತೆಯನ್ನು ಮಾನ್ಯ ಸಚಿವರಾದ ಶ್ರೀ ವಿ.ಸೋಮಣ್ಣ ವಹಿಸಲಿದ್ದಾರೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಾವಿರಾರು ಆಧುನಿಕ ವಚನಗಳನ್ನು ರಚಿಸಿ ಓದುಗರ ಮನಸೂರೆಗೊಳಿಸಿದ ಪ.ಗು.ಸಿದ್ದಾಪುರವರು ಅನುಭವದೀಪ್ತಿ ˌಮಕರಂದ ˌಹಣತೆ ಹಚ್ಚಿದವರು ಹಾಗೂ ಬಸವ ಬೆಳಗು ಕೃತಿಗಳನ್ನು ಸಾರಸ್ವತ ಲೋಕಕ್ಕೆ ನೀಡುವುದರೊಂದಿಗೆ ಶರಣ ಸಾಹಿತ್ಯ ಕೃಷಿಗಾಗಿ ಕೊಡಮಾಡುವ ಇಳಕಲ್ ಚಿತ್ತರಗಿ ಮಹಾಂತಸ್ವಾಮಿ ಸಂಸ್ಥಾನಮಠದ "ಬಸವಗುರುಕಾರುಣ್ಯ "ಪ್ರಶಸ್ತಿಯೊಂದಿಗೆ ಮಂಡ್ಯದ ಅಡ್ವೆೃಸರ್ ಪತ್ರಿಕೆಯ "ಅಡ್ವೈಸರ್ ೨೦೨೨ನ್ನೂ ತಮ್ಮ ಮುಡಿಗೇರಿಸಿಕೊಂಡದ್ದನ್ನಿಲ್ಲಿ ಸ್ಮರಿಸಬಹುದು.
ಜ್ಯೋತಿರ್ಲಿಂಗ ಹೊನಕಟ್ಟಿಗೆ ವಿಶ್ವ ಮಾನ್ಯ ಪ್ರಶಸ್ತಿ
ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಬೆನಕನಹಳ್ಳಿ ಗ್ರಾಮದ ಪೊಲೀಸ್ ಇಲಾಖೆ ಸಿಪಿಐ ಅಧಿಕಾರಿ, ಜಾನಪದ ಹಿರಿಯ ಸಾಹಿತಿ ಜ್ಯೋತಿರ್ಲಿಂಗ ಚಂದ್ರಾಮಪ್ಪ ಹೊನಕಟ್ಟಿಯವರಿಗೆ ‘ವಿಶ್ವ ಮಾನ್ಯ ಪ್ರಶಸ್ತಿ’ ಲಭಿಸಿದೆ.
ಕನ್ನಡ ಸಂಘ ಮಸ್ಕಟ್ ಮತ್ತು ಹೃದಯವಾಹಿನಿ- ಕರ್ನಾಟಕ ಆಶ್ರಯದಲ್ಲಿ 16ನೇ ವಿಶ್ವ ಕನ್ನಡ ಸಮ್ಮೇಳನ 2022 ಒಮಾನ್ ನ. 18 ಮತ್ತು 19 ರಂದು ಅಲ್ ಫಲಾಝ್ ಸಭಾಂಗಣ ಮಸ್ಕತ್ ಸುಲ್ತಾನೆಟ್ ಆಪ್ ಒಮಾನ ಹೋರ ದೇಶದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಜ್ಯೋತಿರ್ಲಿಂಗ ಚಂದ್ರಾಮಪ್ಪ ಹೊನಕಟ್ಟಿಯವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
16ನೇ ವಿಶ್ವ ಕನ್ನಡ ಸಮ್ಮೇಳನದಲ್ಲಿ ಸಾಹಿತ್ಯಕ್ಕೆ ಸಂಬದಪಟ್ಟ0ತೆ ಕವಿಗೋಷ್ಠಿ, ಹಾಸ್ಯ ಗೋಷ್ಠಿ. ಮಾದ್ಯಮಗೋಷ್ಠಿ ಹಾಗೂ ಅನಿವಾಸಿ ಕನ್ನಡಿಗರ ಗೋಷ್ಠಿ ಗೋಷ್ಠಿ ಜರಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭರತ ನಾಟ್ಯ ಜಾನಪದ ನೃತ್ಯ ರೂಪ ಯಕ್ಷಗಗಾನ ಹಾಗೂ ಮುಂತಾದ ಕಲೆಗಳು ಪ್ರದರ್ಶನಗೊಳ್ಳೂವವು ಕರ್ನಾಟಕ ಕಲೆ ಮತ್ತು ಸಂಸ್ಕೃತಿ ವಿದೇಶಿ ನೆಲವಾದ ಒಮಾನ ಪ್ರತಿ ಬಿಂಬಿಸಲಿದೆ.
ಜ್ಯೋತಿರ್ಲಿ0ಗ ಹೊನಕಟ್ಟಿಯವರು ಖ್ಯಾತ ಜಾನಪದ ಗಾಯಕರು ಹಾಗೂ ಬರಹಗಾರರು ತಾವು ಕನ್ನಡ ಮತ್ತು ಸಂಸ್ಕೃತಿ ಪ್ರೋತ್ಸಾಹಕರ ತಾವು ಕರುನಾಡಿನ ಕಲೆಗಳ ಮೆರಗು ಹೆಚ್ಚಿಸಲು ಶ್ರಮಿಸುತ್ತಿದ್ದಾರೆ. ಜಾನಪದ ಕ್ಷೇತ್ರದಲ್ಲಿ ತಮ್ಮ ಅನುಪಮ ಕೊಡುಗೆಯನ್ನು ಪರಿಗಣಿಸಿ ಜಾನಪದ ಹಾಡು ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗಿದೆ ಎಂದು ವಿಶ್ವ ಕನ್ನಡ ಸಮ್ಮೇಳನ ಸಮಿತಿಯ ಅಧ್ಯಕ್ಷ ಕೆ.ಪಿ.ಮಂಜುನಾಥ ಸಾಗರ್, ಎಸ್ಡಿಟಿ ಪ್ರಸಾದ್. ಡಾ.ಕದಂ ರಮೇಶ ಬೆಂಗಳೂರು. ರಾಜು ಅಡಕಳ್ಳಿ ಸಿರ್ಶಿ, ಪ್ರೊ.ಎಂ.ಕುದರಿ ಗೋಕಾಕ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಂಪ್ಯೂಟರ್ ಸಾಕ್ಷರತೆ ಕಾರ್ಯಾಗಾರ ಇದೇ ದಿ.17 ರಂದು
ಈ ದಿವಸ ವಾರ್ತೆ
ವಿಜಯಪುರ : ಕರ್ನಾಟಕ ಸಿವಿಲ್ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು 2012ರ ನಿಯಮ 1(3) ರಲ್ಲಿ ನಿರ್ದಿಷ್ಟಪಡಿಸಿದ ಹುದ್ದೆಗಳನ್ನು ಹೊರತುಪಡಿಸಿ ಇನ್ನಿತರ ಎಲ್ಲಾ ಅಭ್ಯರ್ಥಿಗಳು ದಿನಾಂಕ 31-12 -2022 ರೊಳಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗ ಬೇಕಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಪ್ರೌಢಶಾಲಾ ಶಿಕ್ಷಕರಿಗೆ ಇದೇ ದಿ.17 ರಂದು ವಿಜಯಪುರದ ಸರ್ಕಾರಿ ಬಾಲಕರ ಪದವಿಪೂರ್ವ ಪ್ರೌಢಶಾಲೆಯಲ್ಲಿರುವ ಶ್ರೀ ವಿಶ್ವೇಶ್ವರಯ್ಯ ಸಭಾಭವನದಲ್ಲಿ ಕಂಪ್ಯೂಟರ್ ಸಾಕ್ಷರತೆ ಕುರಿತಾದ ಕಾರ್ಯಾಗಾರ ಆಯೋಜಿಸಲಾಗಿದೆ. ಶಿಕ್ಷಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಈ ಕಾರ್ಯಾಗಾರ ಸಂಘಟಿಸಲಾಗಿದೆ, ಭಾಗವಹಿಸುವ ಶಿಕ್ಷಕರಿಗೆ ಓಓಡಿ ಸೌಲಭ್ಯವಿದೆ. ಶಿಕ್ಷಕರು ಕಾರ್ಯಾಗಾರದಲ್ಲಿ ಪಾಲ್ಗೊಳ್ಳಬೇಕು. ಮುಖ್ಯ ಉಪಾಧ್ಯರಾಗಿ ಭಡ್ತಿ ಹೊಂದಿದ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಸಹ ನೆರವೇರಿಸಲಾಗುವುದು ಎಂದು ಸಂಘದ ಜಿಲ್ಲಾಧ್ಯಕ್ಷ ಶಿವರಾಜ್ ಬಿರಾದಾರ ತಿಳಿಸಿದ್ದಾರೆ.
ಪಾಟೀಲ ಫೌಂಡೇಷನ್ ಸಂಸ್ಥೆಯ 8ನೇ ವಾರ್ಷಿಕೋತ್ಸವ
ಈ ದಿವಸ ವಾರ್ತೆ
ವಿಜಯಪುರ: ಮಾನವನ ಸೇವೆ ನಿಜವಾದ ದೇವರ ಸೇವೆ ಎಂದು ಪೀಟರ್ ಅಲೆಕ್ಸಾಂಡರ್ ಹೇಳಿದರು. ನಗರದಲ್ಲಿ ಹಮ್ಮಿಕೊಂಡ 8 ನೇ ವಾರ್ಷಿಕ ಸಮ್ಮೇಳನದಲ್ಲಿ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಪಾಟೀಲ ಫೌಂಡೇಶನ್ ಸೇವೆ ನಿತಂತರವಾಗಿರಲಿ ನಾವು ಎಂದೆಂದು ನಿಮ್ಮೊಂದಿಗೆ ಇರುತ್ತೇವೆ. ನಿಮ್ಮ ಸೇವೆ ಸಾಮಾನ್ಯ ಸೇವೆ ಅಲ್ಲ. ಅದು ದೇವರ ಸೇವೆಯಾಗಿದೆ. ಇಂದಿನ ಯುವಕರಿಗೆ ಸೇವೆ ಮಾಡುವ ಮನೋಭಾವ ಇಲ್ಲ. ಮುಂದಿನ ದಿನಗಳಲ್ಲಿ ಪಾಟೀಲ ಫೌಂಡೇಶನ್ ಇತಿಹಾಸ ನಿರ್ಮಿಸಲಿ. ೭ ನದಿ ಇದ್ದರು ವಿಜಯಪುರ ಜಿಲ್ಲೆ ಬರಗಾಲ ಪೀಡಿತವಾಗಿದೆ. ಪಂಚಭೂತಗಳನ್ನು ನಾವು ಸಂರಕ್ಷಿಸಬೇಕಾಗಿದೆ. ಅದು ನಮ್ಮ ಕರ್ತವ್ಯವಾಗಿದೆ. ಎಲ್ಲರೂ ಪರಿಸರ ಸಂರಕ್ಷಣೆ ಮಾಡಬೇಕಿದೆ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಅಪರಾಧ ನಿಯಂತ್ರಣ ಮಂಡಳಿ ರಾಜ್ಯಾಧ್ಯಕ್ಷ ಮುರಳಿಧರ ಕೆ ಎಸ್ ಮಾತನಾಡಿ, ವಿಜಯಪುರ ಜಿಲ್ಲೆ ಎಲ್ಲ ಜಿಲ್ಲೆಗಳಿಗೆ ಮಾದರಿಯಾಗಲಿ ಪಾಟೀಲ ಫೌಂಡೇಶನ್ ನೊಂದಿಗೆ ಸದಾ ಇರುವೆ ಎಂದರು. ಈ ಸಂದರ್ಭದಲ್ಲಿ ಬಿ.ಎಂ.ಪಾಟೀಲ ಅಧ್ಯಕ್ಷತೆವಹಿಸಿ ಮಾತನಾಡಿ, ಮಕ್ಕಳಿಗೆ ಸಂಸ್ಕೃತಿ ಕಲ್ಪಿಸಿ ಒಳ್ಳೆಯ ಸಂದೇಶಗಳನ್ನು ನೀಡುತ್ತಿದ್ದಾರೆ. ಹಗಲಿರುಳು ಶ್ರಮಿಸುತ್ತಿದ್ದಾರೆ. ಸೃಷ್ಠಿ ಕಷ್ಟ ನಾಶ ಸುಲಭ. ಮಾಡಬೇಕು ಮಾಡದಂತಿರಬೇಕು.
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದದೆ ಎಂದರು.ಯುವಕರು ಮುಂದೆ ಬರಬೇಕು. ಅತಿ ಬಡತನದಲ್ಲಿ ಹಿಂದುಳಿದ ಮಕ್ಕಳನ್ನು ಮೇಲೆತ್ತಯವ ಕೆಲಸ ಮಾಡಬೇಕು. ಯುವಕರು ಜಾಗೃತರಾಗಬೇಕು ಎಂದರು. ಜಗತ್ತಿನಲ್ಲಿ ಹುಟ್ಟು ವಾಗ ಯಾರು ಜ್ಞಾನವಂತರಿರುವುದಿಲ್ಲ. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು. ಮನುಷ್ಯನಿಗೆ ಸಾಧನೆಗೆ ಛಲ ಬೇಕು..ಛಲ ವಿದ್ದಾಗ ಯಶಸ್ಸು ಸಿಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಪೂಜಾ ಟೆಲಿವ್ಹೀಜನ್ ಮಾಲಿಕರಾದ ವಿಜಯಕುಮಾರ ಚವ್ಹಾಣ, ಮಹಿಳಾ ಹೋರಾಟಗಾರ್ತಿ ಸುರೇಖಾ ರಜಪುತ, ಅನುಜಾ ತಾಳಿಕೋಟೆ, ಬಿ.ಡಿ.ಎ ಮಾಜಿ ಅಧ್ಯಕ್ಷರಾದ ಚಂದ್ರಕಾಂತ ಶೆಟ್ಟಿ ವೇದಿಕೆಯ ಮೇಲಿದ್ದರು.
ಈ ಸಂದರ್ಭದಲ್ಲಿ ನೂತನ ಮಹಾನಗರ ಪಾಲಿಕೆ ಸದಸ್ಯರಾದ ಕುಮಾರಿ ಆರತಿ ಶಾಹಾಪೂರ ದಿನೇಶ್ ಹಳ್ಳಿ ಹಾಗೂ ಸಮಾಜಸೇವಕರಾದ ಮಿಲಿಂದ್ ಚಂಚಲಕರ, ಡಾ:ರಮೇಶ ಸೂನಕಾಂಬಳೆ, ತಿಪ್ಪಣ್ಣ ದೊಡ್ಡಮನಿ. ಮಹ್ಮದಹಮ್ಮೀದ ಇನಾಮದಾರ, ಪಾಟೀಲ ಫೌಂಡೇಷನ್ ಅಧ್ಯಕ್ಷ ಪ್ರವೀಣಗೌಡ ಪಾಟೀಲ, ಉಪಾಧ್ಯಕ್ಷ ಶ್ರೇಯಸ್ಸ ಶೆಟ್ಟಿ, ನಿರ್ದೇಶಕ ಶ್ರೀಧರ ಇಳಗೇರ, ವಿಠ್ಠಲ ಚವ್ಹಾಣ, ಸಂದೇಶ ತಡಲಗಿ , ಮಾಹಂತೇಶ ಪಾಟೀಲ, ತಿಲಕ್ ಬೂದಿಹಳ, ವೀರೇಶ್ ಬಡಿಗೇರ, ಮಲ್ಲಿಕಾರ್ಜುನ ಪಾಟೀಲ, ಅಕ್ಷಯ ವಜ್ರದ್, ಶಂಕರ್ ಅಮರಣ್ಣನವರ, ಸಚಿನ ಸಜ್ಜನ, ಸಂಗಮೇಶ ಮನಗೂಳಿ, ಪೂರ್ಣಿಮಾ ಬರಿಮನಿ, ಶಿವು ಹಳ್ಳಿ, ಜೀವಿತಾ, ದಿವ್ಯಶ್ರೀ ಕುಲಕರ್ಣಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾಕ್ಷಿ ಜಾನಕಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಸ್ .ಸಿ.ಮ್ಯಾಗೇರಿ, ಲೆಕ್ಕ ಪರೀಶೋಧಕ ಕಮಲಾಕರ ಕದಮ್, ಕುಮಾರಿ ಪೂಜಾ ರಾಯಕರ್ ಹಾಗೂ ಪಾಟೀಲ ಫೌಂಡೇಶನ್ ೨೧ ಜಿಲ್ಲೆಯ ಕಾರ್ಯಕರ್ತರು ಮತ್ತು ಸಂಸ್ಥೆಯ ಧಾನಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸ್ವಾಗತ ಮತ್ತು ಪ್ರಸ್ಥಾವಿಕವಾಗಿ ಪ್ರಭುಗೌಡ ಪಾಟೀಲ ಮಾತನಾಡಿದರು, ಯಶೋಧ ಜೋಶಿ ಕಾರ್ಯಕ್ರಮ ನಿರೂಪಿಸಿದರು.
ಇದೆ ಸಂದರ್ಭದಲ್ಲಿ ಸಂಸ್ಥೆಯ ಮೂಲಕ ಗಣ್ಯರಿಗೆ, ಸ್ವಯಂ ಸೇವಕರಿಗೆ ಗೌರವ ಸನ್ಮಾನ, ನೆನಪಿನ ಕಾಣಿಕೆಗಳನ್ನು ನೀಡಿ ಸತ್ಕರಿಸಲಾಯಿತು.
ಪ್ರಸನ್ನ ಕರ್ಪೂರ, ಪತ್ರಕರ್ತರು ಇವರು ಬರೆದ "ಕಾಡ ಕಸ್ತೂರಿ" ಪುಸ್ತಕವನ್ನು ಎಲ್ಲಾ ಅತಿಥಿಗಳಿಗೆ ನೀಡಲಾಯಿತು.
Monday, November 14, 2022
Saturday, November 12, 2022
Thursday, November 10, 2022
Wednesday, November 9, 2022
Tuesday, November 8, 2022
Monday, November 7, 2022
Sunday, November 6, 2022
Saturday, November 5, 2022
Friday, November 4, 2022
Thursday, November 3, 2022
Wednesday, November 2, 2022
ಶೀಘ್ರ ಮನೆ ಮನೆಗೆ ಸಮಪ೯ಕ ಕುಡಿಯುವ ನೀರಿನ ಸೌಲಭ್ಶ: ಶಾಸಕ ಭೂಸನೂರ
ಸಿಂದಗಿ ತಾಲೂಕಿನ ಬ್ರಹ್ಮದೇವನಮಡು ಗ್ರಾಮದಲ್ಲಿ 66.42 ಲಕ್ಷ ರೂ.ವೆಚ್ಚದ ಜಲ ಜೀವನ ಮಿಷನ್ ಯೋಜನೆಯ ಕಾಮಗಾರಿಗೆ ಭೂಮಿಪೂಜೆಯನ್ನು ನೆರವೇರಿಸಿ ಶಾಸಕ ರಮೇಶ ಭೂಸನೂರ ಮಾತನಾಡಿದರು.ಸಂತೋಷಗೌಡ ಪಾಟೀಲ,ಸಿದ್ದು ಬುಳ್ಳಾ ಇತರರಿದ್ದರು.
ಈ ದಿವಸ ವಾರ್ತೆ
ಬ್ರಹ್ಮದೇವನಮಡು : ಗ್ರಾಮೀಣ ಪ್ರದೇಶದ ಜನರಿಗೆ ಸಮಪ೯ಕ ಕುಡಿಯುವ ನೀರಿನ ಪೂರೈಸುವ ಮಹತ್ತರದ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಜಾರಿಗೊಳಿಸಿದ್ದು,ಪ್ರತಿಯೊಬ್ಬರೂ ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಸಕ ರಮೇಶ ಭೂಸನೂರ ಹೇಳಿದರು.
ಸಿಂದಗಿ ತಾಲೂಕಿನ ಬ್ರಹ್ಮದೇವನಮಡು ಗ್ರಾಮದಲ್ಲಿ 66.42 ಲಕ್ಷ ರೂ.ವೆಚ್ಚದ ಜಲ ಜೀವನ ಮಿಷನ್ ಯೋಜನೆ ಕಾಮಗಾರಿಗೆ ಮಂಗಳವಾರ ಸಂಜೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಯೋಜನೆಯ ಮೂಲಕ ಗ್ರಾಮೀಣ ಭಾಗದಲ್ಲಿನ ಪ್ರತಿಯೊಂದು ಮನೆ ಮನೆಗೂ ನೀರಿನ ಸೌಲಭ್ಶ ಕಲ್ಪಿಸಲಾಗುವುದು.2021-22ನೇ ಸಾಲಿನ ಕೇಂದ್ರ ಹಾಗೂ ರಾಜ್ಶ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲ ಜೀವನ ಮಿಷನ್ ಯೋಜನೆ ಅಡಿಯಲ್ಲಿ ಮನೆ ಮನೆಗೆ ನಳ ಸಂಪಕ೯ ಯೋಜನೆ ಪೂಣ೯ಗೊಂಡರೆ ನೀರಿನ ಸಮಸ್ಶೆ ದೂರವಾಗಲಿದೆ ಎಂದರು.ಈ ವೇಳೆ ಚನ್ನಮಲ್ಲಯ್ಶ ಹಿರೇಮಠ, ಪ್ರಮುಖರಾದ ಸಂತೋಷಗೌಡ ಪಾಟೀಲ ಡಂಬಳ,ಸಿದ್ದು ಬುಳ್ಳಾ,ದೇವಿಂದ್ರ ತೋನಶ್ಶಾಳ,ಸಿದ್ದಪ್ಪ ಮನಗೂಳಿ,ನಾಗಣ್ಣ ಪಡೇಕನೂರ,ದೇವಿಂದ್ರ ಮನಗೂಳಿ,ಗುರುಸಿದ್ದಪ್ಪ ಮನಗೂಳಿ,ಪತ್ರಕತ೯ ಮಲ್ಲು ಕೆಂಭಾವಿ,ನಾನಾಗೌಡ ಪಾಟೀಲ, ಡಾ.ಎನ್.ಪಿ.ನಾಯ್ಕೋಡಿ,ಸಂತೋಷ ಕರಿಕಲ್ಲ್,ಶರಣು ಮನಗೂಳಿ,ನಡಗೇರೆಪ್ಪ ತಳವಾರ,ಕೆ.ಡಿ.ಸೀತನೂರ,ನಾಗಪ್ಪ ಪೂಜಾರಿ,ಇಪಾ೯ನ ಚಂಡ್ರಕಿ,ಪ್ರವೀಣ ರಾಠೋಡ,ದೇವಿಂದ್ರ ರತ್ಶಾಳ ಸೇರಿದಂತೆ ಇತರರಿದ್ದರು.
ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷರಾಗಿ ಲೇಖಕಿ ಹೇಮಾ ವಸ್ತ್ರದ ಆಯ್ಕೆ
ಲೇಖಕಿ ಹೇಮಾ ವಸ್ತ್ರದ
ಈ ದಿವಸ ವಾರ್ತೆ
ವಿಜಯಪುರ: ಕರ್ನಾಟಕ ಲೇಖಕಿಯರ ಸಂಘದ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಲೇಖಕಿ ಹೇಮಾ ವಸ್ತ್ರದ ಅವರನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಮಾಡಲಾಗಿದೆ.
ಇದೇ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿಯ ರಚನೆ ಮಾಡಲಾಯಿತು. ಅಧ್ಯಕ್ಷರನ್ನಾಗಿ ಹೇಮಾ ವಸ್ತ್ರದ, ಉಪಾಧ್ಯಕ್ಷರಾಗಿ ವನಮಾಲಾ ರಾಠೋಡ, ಪ್ರಧಾನ ಕಾರ್ಯದರ್ಶಿ ಡಾ.ಸುಜಾತಾ ಚಲವಾದಿ, ಖಜಾಂಚಿಯಾಗಿ ದಾಕ್ಷಾಯಣಿ ಬಿರಾದಾರ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಲೇಖಕಿ ಡಾ. ಎಚ್ ಎಲ್ ಪುಷ್ಪಾ ಅವರು ಇದಕ್ಕೆ ಅನುಮೋದಿಸಿ ಆಯ್ಕೆಯಾದ ಎಲ್ಲ ಪದಾಧಿಕಾರಿಗಳಿಗೆ ಹಾರ್ದಿಕ ಅಭಿನಂದನೆಗಳನ್ನು ತಿಳಿಸಲಾಯಿತು.
ಇದೇ ಸಂದರ್ಭದಲ್ಲಿ ಪ್ರಭಾವತಿ ದೇಸಾಯಿ, ಭಾರತಿ ಪಾಟೀಲ, ಇಂದುಮತಿ ಲಮಾಣಿ, ಕೆ ಸುನಂದಾ, ಶೋಭಾ ಗುನ್ನಾಪುರ ಇತ್ಯಾದಿ ಹಿರಿಯ ಲೇಖಕಿಯರಾದಿಯಾಗಿ ಕಲೇಸಂ ನ ಸರ್ವ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.
ನಂ. 6 ರಂದು ಪ್ರಶಸ್ತಿ ಪ್ರದಾನ ಹಾಗೂ ಊರ್ಧ್ವ ರೇತ ಕಿರುಚಿತ್ರ ಬಿಡುಗಡೆ
ಡಾ. ಚನ್ನಪ್ಪ ಕಟ್ಟಿ |
ಈ ದಿವಸ ವಾರ್ತೆ ವಿಜಯಪುರ:
ನೆಲೆ ಪ್ರಕಾಶನ ಸಂಸ್ಥೆ, ಸಿಂದಗಿ (ರಿ) ಎಂ.ಎಂ. ಪಡಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಜಾನಪದ ವಿದ್ವಾಂಸರಾದ ಡಾ. ವೀರಣ್ಣ ದಂಡೆ ಅವರಿಗೆ 2022 ನೇ ಯ ಸಾಲಿನ ದೇಸಿ ಸನ್ಮಾನ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ನೆಲೆ ಸಿನಿ ಕ್ರಿಯೇಷನ್ ಅರ್ಪಿಸುವ 'ಊರ್ಧ್ವ ರೇತ' ಕಿರುಚಿತ್ರ ಬಿಡುಗಡೆ ಸಮಾರಂಭವು ನವೆಂಬರ್ 6 ರಂದು ಭಾನುವಾರ ಬೆಳಿಗ್ಗೆ 11 ಗಂಟೆಗೆ ಮಾಂಗಲ್ಯ ಭವನ ವಿಜಯಪುರ ರಸ್ತೆ ಸಿಂದಗಿಯಲ್ಲಿ ಜರುಗಲಿದೆ.
ಸಾನ್ನಿಧ್ಯ ಹಾಗೂ ಕಿರುಚಿತ್ರ ಬಿಡುಗಡೆಯನ್ನು ಸಾರಂಗಮಠದ ಪರಮಪೂಜ್ಯ ಶ್ರೀ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ನೆರವೇರಿಸಲಿದ್ದಾರೆ.
ಬಿ.ಎಲ್.ಡಿ. ಇ. ಸಂಸ್ಥೆ ಯ ನಿರ್ದೇಶಕರಾದ ಅಶೋಕ ವಾರದ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ವೀರಣ್ಣ ದಂಡೆ ಬದುಕು - ಬರಹ ಕೃತಿ ಬಿಡುಗಡೆ ಯನ್ನು ಅಸ್ಕಿಯ ಪ್ರಗತಿಪರ ರೈತರಾದ ಎಸ್.ಎಸ್.ಪಾಟೀಲ ಅವರ ನೆರವೇರಿಸಲಿದ್ದಾರೆ.
ಪತ್ರಕರ್ತರಾದ ಡಾ. ಶಿವರಂಜನ ಸಂತ್ಯಪೇಟೆ ಅವರು ಮಾತನಾಡಲಿದ್ದಾರೆ. ಕಾರ್ಯದರ್ಶಿ ಡಾ.ಎಂ.ಎಸ್. ಮದಭಾವಿ ಅಭಿನಂದನ ನುಡಿ ಹಾಗೂ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಇದೇ ಸಂದರ್ಭದಲ್ಲಿ ಹಿರಿಯ ಜಾನಪದ ವಿದ್ವಾಂಸರಾದ ಡಾ. ವೀರಣ್ಣ ದಂಡೆ, ಮುಖ್ಯ ಅತಿಥಿಗಳಾಗಿ ವಿಜಯಪುರ ಹಿರಿಯ ಚಿಂತಕರು ಡಾ. ಆರ್. ಕೆ. ಕುಲಕರ್ಣಿ, ಚಾಣಕ್ಯ ಕರಿಯರ್ ಅಕಾಡೆಮಿ ಸಂಸ್ಥಾಪಕರಾದ ಎನ್.ಎಂ.ಬಿರಾದಾರ, ಚಲನಚಿತ್ರ ನಿರ್ದೇಶಕರಾದ ಸುನೀಲಕುಮಾರ ಸುಧಾಕರ ಅವರು ಭಾಗವಹಿಸಲಿದ್ದಾರೆ ಎಂದು ಎಂ.ಎಂ.ಪಡಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನ ನೆಲೆ ಪ್ರಕಾಶನ ಸಂಸ್ಥೆಯ ಸಂಚಾಲಕರಾದ ಡಾ. ಚನ್ನಪ್ಪ ಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.