ಈ ದಿವಸ ವಾರ್ತೆ
ವಿಜಯಪುರ: ಅಖಿಲಭಾರತ ಶರಣ ಸಾಹಿತ್ಯ ಪರಿಷತ್ತುˌ ˌಮೈಸೂರು ಹಾಗೂ ಬೆಂಗಳೂರಿನ ರಮಣಶ್ರೀ ಪ್ರತಿಷ್ಠಾನದ ಸಹಯೋಗದಲ್ಲಿ ಕೊಡಮಾಡುವ ೨೦೨೨ನೆಯ ಸಾಲಿನ "ರಮಣಶ್ರೀ ಶರಣ ಹಿರಿಯ ಶ್ರೇಣಿ ಆಧುನಿಕ ವಚನರಚನೆ ಪ್ರಶಸ್ತಿ "ಯನ್ನು ಆಧುನಿಕ ವಚಕಾರ ˌಶರಣ ಸಾಹಿತಿ ಪ.ಗು.ಸಿದ್ದಾಪುರವರಿಗೆ ಇದೇ ೧೭ ರಂದು ಬೆಂಗಳೂರಿನ " ರಮಣಶ್ರೀ ಹೊಟೇಲ ಸಭಾಂಗಣ "ದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿಯವರು ಪ್ರದಾನಮಾಡಲಿದ್ದಾರೆ.ಪ್ರಶಸ್ತಿಯು ೪೦ಸಾವಿರ ಗೌರವಧನದೊಂದಿಗೆ ಪ್ರಶಸ್ತಿ ಫಲಕವನ್ನೊಳಗೊಂಡಿದೆ.ಸಮಾರಂಭದ ಅಧ್ಯಕ್ಷತೆಯನ್ನು ಮಾನ್ಯ ಸಚಿವರಾದ ಶ್ರೀ ವಿ.ಸೋಮಣ್ಣ ವಹಿಸಲಿದ್ದಾರೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಾವಿರಾರು ಆಧುನಿಕ ವಚನಗಳನ್ನು ರಚಿಸಿ ಓದುಗರ ಮನಸೂರೆಗೊಳಿಸಿದ ಪ.ಗು.ಸಿದ್ದಾಪುರವರು ಅನುಭವದೀಪ್ತಿ ˌಮಕರಂದ ˌಹಣತೆ ಹಚ್ಚಿದವರು ಹಾಗೂ ಬಸವ ಬೆಳಗು ಕೃತಿಗಳನ್ನು ಸಾರಸ್ವತ ಲೋಕಕ್ಕೆ ನೀಡುವುದರೊಂದಿಗೆ ಶರಣ ಸಾಹಿತ್ಯ ಕೃಷಿಗಾಗಿ ಕೊಡಮಾಡುವ ಇಳಕಲ್ ಚಿತ್ತರಗಿ ಮಹಾಂತಸ್ವಾಮಿ ಸಂಸ್ಥಾನಮಠದ "ಬಸವಗುರುಕಾರುಣ್ಯ "ಪ್ರಶಸ್ತಿಯೊಂದಿಗೆ ಮಂಡ್ಯದ ಅಡ್ವೆೃಸರ್ ಪತ್ರಿಕೆಯ "ಅಡ್ವೈಸರ್ ೨೦೨೨ನ್ನೂ ತಮ್ಮ ಮುಡಿಗೇರಿಸಿಕೊಂಡದ್ದನ್ನಿಲ್ಲಿ ಸ್ಮರಿಸಬಹುದು.
No comments:
Post a Comment