ಈ ದಿವಸ ವಾರ್ತೆ
ವಿಜಯಪುರ: ಮಾನವನ ಸೇವೆ ನಿಜವಾದ ದೇವರ ಸೇವೆ ಎಂದು ಪೀಟರ್ ಅಲೆಕ್ಸಾಂಡರ್ ಹೇಳಿದರು. ನಗರದಲ್ಲಿ ಹಮ್ಮಿಕೊಂಡ 8 ನೇ ವಾರ್ಷಿಕ ಸಮ್ಮೇಳನದಲ್ಲಿ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಪಾಟೀಲ ಫೌಂಡೇಶನ್ ಸೇವೆ ನಿತಂತರವಾಗಿರಲಿ ನಾವು ಎಂದೆಂದು ನಿಮ್ಮೊಂದಿಗೆ ಇರುತ್ತೇವೆ. ನಿಮ್ಮ ಸೇವೆ ಸಾಮಾನ್ಯ ಸೇವೆ ಅಲ್ಲ. ಅದು ದೇವರ ಸೇವೆಯಾಗಿದೆ. ಇಂದಿನ ಯುವಕರಿಗೆ ಸೇವೆ ಮಾಡುವ ಮನೋಭಾವ ಇಲ್ಲ. ಮುಂದಿನ ದಿನಗಳಲ್ಲಿ ಪಾಟೀಲ ಫೌಂಡೇಶನ್ ಇತಿಹಾಸ ನಿರ್ಮಿಸಲಿ. ೭ ನದಿ ಇದ್ದರು ವಿಜಯಪುರ ಜಿಲ್ಲೆ ಬರಗಾಲ ಪೀಡಿತವಾಗಿದೆ. ಪಂಚಭೂತಗಳನ್ನು ನಾವು ಸಂರಕ್ಷಿಸಬೇಕಾಗಿದೆ. ಅದು ನಮ್ಮ ಕರ್ತವ್ಯವಾಗಿದೆ. ಎಲ್ಲರೂ ಪರಿಸರ ಸಂರಕ್ಷಣೆ ಮಾಡಬೇಕಿದೆ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಅಪರಾಧ ನಿಯಂತ್ರಣ ಮಂಡಳಿ ರಾಜ್ಯಾಧ್ಯಕ್ಷ ಮುರಳಿಧರ ಕೆ ಎಸ್ ಮಾತನಾಡಿ, ವಿಜಯಪುರ ಜಿಲ್ಲೆ ಎಲ್ಲ ಜಿಲ್ಲೆಗಳಿಗೆ ಮಾದರಿಯಾಗಲಿ ಪಾಟೀಲ ಫೌಂಡೇಶನ್ ನೊಂದಿಗೆ ಸದಾ ಇರುವೆ ಎಂದರು. ಈ ಸಂದರ್ಭದಲ್ಲಿ ಬಿ.ಎಂ.ಪಾಟೀಲ ಅಧ್ಯಕ್ಷತೆವಹಿಸಿ ಮಾತನಾಡಿ, ಮಕ್ಕಳಿಗೆ ಸಂಸ್ಕೃತಿ ಕಲ್ಪಿಸಿ ಒಳ್ಳೆಯ ಸಂದೇಶಗಳನ್ನು ನೀಡುತ್ತಿದ್ದಾರೆ. ಹಗಲಿರುಳು ಶ್ರಮಿಸುತ್ತಿದ್ದಾರೆ. ಸೃಷ್ಠಿ ಕಷ್ಟ ನಾಶ ಸುಲಭ. ಮಾಡಬೇಕು ಮಾಡದಂತಿರಬೇಕು.
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದದೆ ಎಂದರು.ಯುವಕರು ಮುಂದೆ ಬರಬೇಕು. ಅತಿ ಬಡತನದಲ್ಲಿ ಹಿಂದುಳಿದ ಮಕ್ಕಳನ್ನು ಮೇಲೆತ್ತಯವ ಕೆಲಸ ಮಾಡಬೇಕು. ಯುವಕರು ಜಾಗೃತರಾಗಬೇಕು ಎಂದರು. ಜಗತ್ತಿನಲ್ಲಿ ಹುಟ್ಟು ವಾಗ ಯಾರು ಜ್ಞಾನವಂತರಿರುವುದಿಲ್ಲ. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು. ಮನುಷ್ಯನಿಗೆ ಸಾಧನೆಗೆ ಛಲ ಬೇಕು..ಛಲ ವಿದ್ದಾಗ ಯಶಸ್ಸು ಸಿಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಪೂಜಾ ಟೆಲಿವ್ಹೀಜನ್ ಮಾಲಿಕರಾದ ವಿಜಯಕುಮಾರ ಚವ್ಹಾಣ, ಮಹಿಳಾ ಹೋರಾಟಗಾರ್ತಿ ಸುರೇಖಾ ರಜಪುತ, ಅನುಜಾ ತಾಳಿಕೋಟೆ, ಬಿ.ಡಿ.ಎ ಮಾಜಿ ಅಧ್ಯಕ್ಷರಾದ ಚಂದ್ರಕಾಂತ ಶೆಟ್ಟಿ ವೇದಿಕೆಯ ಮೇಲಿದ್ದರು.
ಈ ಸಂದರ್ಭದಲ್ಲಿ ನೂತನ ಮಹಾನಗರ ಪಾಲಿಕೆ ಸದಸ್ಯರಾದ ಕುಮಾರಿ ಆರತಿ ಶಾಹಾಪೂರ ದಿನೇಶ್ ಹಳ್ಳಿ ಹಾಗೂ ಸಮಾಜಸೇವಕರಾದ ಮಿಲಿಂದ್ ಚಂಚಲಕರ, ಡಾ:ರಮೇಶ ಸೂನಕಾಂಬಳೆ, ತಿಪ್ಪಣ್ಣ ದೊಡ್ಡಮನಿ. ಮಹ್ಮದಹಮ್ಮೀದ ಇನಾಮದಾರ, ಪಾಟೀಲ ಫೌಂಡೇಷನ್ ಅಧ್ಯಕ್ಷ ಪ್ರವೀಣಗೌಡ ಪಾಟೀಲ, ಉಪಾಧ್ಯಕ್ಷ ಶ್ರೇಯಸ್ಸ ಶೆಟ್ಟಿ, ನಿರ್ದೇಶಕ ಶ್ರೀಧರ ಇಳಗೇರ, ವಿಠ್ಠಲ ಚವ್ಹಾಣ, ಸಂದೇಶ ತಡಲಗಿ , ಮಾಹಂತೇಶ ಪಾಟೀಲ, ತಿಲಕ್ ಬೂದಿಹಳ, ವೀರೇಶ್ ಬಡಿಗೇರ, ಮಲ್ಲಿಕಾರ್ಜುನ ಪಾಟೀಲ, ಅಕ್ಷಯ ವಜ್ರದ್, ಶಂಕರ್ ಅಮರಣ್ಣನವರ, ಸಚಿನ ಸಜ್ಜನ, ಸಂಗಮೇಶ ಮನಗೂಳಿ, ಪೂರ್ಣಿಮಾ ಬರಿಮನಿ, ಶಿವು ಹಳ್ಳಿ, ಜೀವಿತಾ, ದಿವ್ಯಶ್ರೀ ಕುಲಕರ್ಣಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾಕ್ಷಿ ಜಾನಕಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಸ್ .ಸಿ.ಮ್ಯಾಗೇರಿ, ಲೆಕ್ಕ ಪರೀಶೋಧಕ ಕಮಲಾಕರ ಕದಮ್, ಕುಮಾರಿ ಪೂಜಾ ರಾಯಕರ್ ಹಾಗೂ ಪಾಟೀಲ ಫೌಂಡೇಶನ್ ೨೧ ಜಿಲ್ಲೆಯ ಕಾರ್ಯಕರ್ತರು ಮತ್ತು ಸಂಸ್ಥೆಯ ಧಾನಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸ್ವಾಗತ ಮತ್ತು ಪ್ರಸ್ಥಾವಿಕವಾಗಿ ಪ್ರಭುಗೌಡ ಪಾಟೀಲ ಮಾತನಾಡಿದರು, ಯಶೋಧ ಜೋಶಿ ಕಾರ್ಯಕ್ರಮ ನಿರೂಪಿಸಿದರು.
ಇದೆ ಸಂದರ್ಭದಲ್ಲಿ ಸಂಸ್ಥೆಯ ಮೂಲಕ ಗಣ್ಯರಿಗೆ, ಸ್ವಯಂ ಸೇವಕರಿಗೆ ಗೌರವ ಸನ್ಮಾನ, ನೆನಪಿನ ಕಾಣಿಕೆಗಳನ್ನು ನೀಡಿ ಸತ್ಕರಿಸಲಾಯಿತು.
ಪ್ರಸನ್ನ ಕರ್ಪೂರ, ಪತ್ರಕರ್ತರು ಇವರು ಬರೆದ "ಕಾಡ ಕಸ್ತೂರಿ" ಪುಸ್ತಕವನ್ನು ಎಲ್ಲಾ ಅತಿಥಿಗಳಿಗೆ ನೀಡಲಾಯಿತು.
No comments:
Post a Comment