ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಬೆನಕನಹಳ್ಳಿ ಗ್ರಾಮದ ಪೊಲೀಸ್ ಇಲಾಖೆ ಸಿಪಿಐ ಅಧಿಕಾರಿ, ಜಾನಪದ ಹಿರಿಯ ಸಾಹಿತಿ ಜ್ಯೋತಿರ್ಲಿಂಗ ಚಂದ್ರಾಮಪ್ಪ ಹೊನಕಟ್ಟಿಯವರಿಗೆ ‘ವಿಶ್ವ ಮಾನ್ಯ ಪ್ರಶಸ್ತಿ’ ಲಭಿಸಿದೆ.
ಕನ್ನಡ ಸಂಘ ಮಸ್ಕಟ್ ಮತ್ತು ಹೃದಯವಾಹಿನಿ- ಕರ್ನಾಟಕ ಆಶ್ರಯದಲ್ಲಿ 16ನೇ ವಿಶ್ವ ಕನ್ನಡ ಸಮ್ಮೇಳನ 2022 ಒಮಾನ್ ನ. 18 ಮತ್ತು 19 ರಂದು ಅಲ್ ಫಲಾಝ್ ಸಭಾಂಗಣ ಮಸ್ಕತ್ ಸುಲ್ತಾನೆಟ್ ಆಪ್ ಒಮಾನ ಹೋರ ದೇಶದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಜ್ಯೋತಿರ್ಲಿಂಗ ಚಂದ್ರಾಮಪ್ಪ ಹೊನಕಟ್ಟಿಯವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
16ನೇ ವಿಶ್ವ ಕನ್ನಡ ಸಮ್ಮೇಳನದಲ್ಲಿ ಸಾಹಿತ್ಯಕ್ಕೆ ಸಂಬದಪಟ್ಟ0ತೆ ಕವಿಗೋಷ್ಠಿ, ಹಾಸ್ಯ ಗೋಷ್ಠಿ. ಮಾದ್ಯಮಗೋಷ್ಠಿ ಹಾಗೂ ಅನಿವಾಸಿ ಕನ್ನಡಿಗರ ಗೋಷ್ಠಿ ಗೋಷ್ಠಿ ಜರಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭರತ ನಾಟ್ಯ ಜಾನಪದ ನೃತ್ಯ ರೂಪ ಯಕ್ಷಗಗಾನ ಹಾಗೂ ಮುಂತಾದ ಕಲೆಗಳು ಪ್ರದರ್ಶನಗೊಳ್ಳೂವವು ಕರ್ನಾಟಕ ಕಲೆ ಮತ್ತು ಸಂಸ್ಕೃತಿ ವಿದೇಶಿ ನೆಲವಾದ ಒಮಾನ ಪ್ರತಿ ಬಿಂಬಿಸಲಿದೆ.
ಜ್ಯೋತಿರ್ಲಿ0ಗ ಹೊನಕಟ್ಟಿಯವರು ಖ್ಯಾತ ಜಾನಪದ ಗಾಯಕರು ಹಾಗೂ ಬರಹಗಾರರು ತಾವು ಕನ್ನಡ ಮತ್ತು ಸಂಸ್ಕೃತಿ ಪ್ರೋತ್ಸಾಹಕರ ತಾವು ಕರುನಾಡಿನ ಕಲೆಗಳ ಮೆರಗು ಹೆಚ್ಚಿಸಲು ಶ್ರಮಿಸುತ್ತಿದ್ದಾರೆ. ಜಾನಪದ ಕ್ಷೇತ್ರದಲ್ಲಿ ತಮ್ಮ ಅನುಪಮ ಕೊಡುಗೆಯನ್ನು ಪರಿಗಣಿಸಿ ಜಾನಪದ ಹಾಡು ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗಿದೆ ಎಂದು ವಿಶ್ವ ಕನ್ನಡ ಸಮ್ಮೇಳನ ಸಮಿತಿಯ ಅಧ್ಯಕ್ಷ ಕೆ.ಪಿ.ಮಂಜುನಾಥ ಸಾಗರ್, ಎಸ್‌ಡಿಟಿ ಪ್ರಸಾದ್. ಡಾ.ಕದಂ ರಮೇಶ ಬೆಂಗಳೂರು. ರಾಜು ಅಡಕಳ್ಳಿ ಸಿರ್ಶಿ, ಪ್ರೊ.ಎಂ.ಕುದರಿ ಗೋಕಾಕ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
No comments:
Post a Comment