Saturday, December 25, 2021
Friday, December 24, 2021
Thursday, December 23, 2021
ತೊಗರಿ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮ
ಈ ದಿವಸ ವಾರ್ತೆ ವಿಜಯಪುರ: ಹಿಟ್ಟಿನಹಳ್ಳಿ ಗ್ರಾಮದಲ್ಲಿ ತೊಗರಿ ಬೆಳೆಯ ಕ್ಷೇತ್ರೋತ್ಸವದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಎನ್.ರಾಘವೇಂದ್ರ ಉಪ ಕೃಷಿ ನಿರ್ದೇಶಕರು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದರು.
ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ರತ್ನಾಬಾಯಿ ಬಿರಾದಾರ ಭಾಗವಹಿಸಿದ್ದರು. ಕೃಷಿ ಮಹಾವಿದ್ಯಾಲಯದ ಡೀನ್ರಾದ ಕಲಘಟಗಿ, ಸಹಾಯಕ ಕೃಷಿ ನಿರ್ದೇಶಕರಾದ ಎಸ್.ಬಿ. ದೊಡಮನಿ, ಕೃಷಿ ವಿಜ್ಞಾನಿಗಳಾದ ಗುರುರಾಜ ಯಡಹಳ್ಳಿ, ವಿದ್ಯಾವತಿ ಯಡಹಳ್ಳಿ, ಎಸ್.ಎಮ್.ವಸ್ತçದ, ಟಿ.ಎಚ್. ಶ್ರೀಮತಿ ಶ್ವೇತಾ,ಶ್ರಿಕಾಂತ ಚವ್ಹಾಣ, ಎಸ್.ಎಚ್. ಗೊಲ್ಯಾಳ, ಕೃಷಿ ಅಧಿಕಾರಿಗಳಾದ ಜಯಪ್ರದಾ ದಶವಂತ ಹಾಗೂ ಎಮ್. ಎನ್.ವಡ್ಡರ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕ್ ಅಧ್ಯಕ್ಷರಾದ ಶ್ರೀಕಾಂತ ಚೌಧರಿ, ಪ್ರಗತಿಪರ ರೈತರಾದ ಜ್ಯೋತಿಬಾ ಚವ್ಹಾಣ, ಗುರುರಾಜ ಯಡವಣ್ಣವರ, ಬಸವರಾಜ ಹೆರಲಗಿ, ಸಹಾಯಕ ಕೃಷಿ ಅಧಿಕಾರಿಗಳು ಬಿ.ಎಸ್. ಇಂಡಿ, ಸಿ.ಎಸ್.ಯಾಳವಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
Saturday, December 11, 2021
Friday, December 10, 2021
Sunday, December 5, 2021
Saturday, December 4, 2021
Friday, December 3, 2021
Thursday, December 2, 2021
Wednesday, December 1, 2021
Tuesday, November 30, 2021
Thursday, November 25, 2021
Wednesday, November 24, 2021
Tuesday, November 23, 2021
Monday, November 22, 2021
Sunday, November 21, 2021
Saturday, November 20, 2021
Friday, November 19, 2021
Thursday, November 18, 2021
Wednesday, November 17, 2021
Tuesday, November 16, 2021
Monday, November 15, 2021
Sunday, November 14, 2021
Saturday, November 13, 2021
Friday, November 12, 2021
Thursday, November 11, 2021
Wednesday, November 10, 2021
Tuesday, November 9, 2021
Monday, November 8, 2021
ಮಕ್ಕಳಿಗೆ ಉತ್ತಮ ಭವಿಷ್ಯವೇ ಭಾರತದ ಭವಿಷ್ಯ :ಅನಿಲ ಹಳ್ಳಿ
ಈ ದಿವಸ ವಾರ್ತೆ
ವಿಜಯಪುರ: ಜಿಲ್ಲಾಡಳಿತ , ಜಿಲ್ಲಾ ಪಂಚಾಯತಿ ವಿಜಯಪುರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಕೆ ವಿಜಯಪುರ ಶಿಶು ಅಭಿವೃದ್ಧಿ ಯೋಜನೆ ಚಡಚಣ ಅವರ ಸಂಯುಕ್ತಾಶ್ರಯದಲ್ಲಿ ಅಂಗನವಾಡಿ ಕೇಂದ್ರಗಳ ಪುನರ್ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಅನಿಲ ಹಳ್ಳಿಯವರು ಜ್ಯೋತಿ ಬೆಳಗಿಸಿ ಹಾಗೂ ಅಂಗನವಾಡಿ ಮಕ್ಕಳಿಗೆ ಪುಷ್ಪ ನೀಡುವುದರ ಮೂಲಕ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಉತ್ತಮ ಭವಿಷ್ಯವೇ ಭಾರತದ ಭವಿಷ್ಯ ಎಂಬ ದೂರದೃಷ್ಠಿಯ ಹಿನ್ನೆಲೆಯಲ್ಲಿ, ಇಲಾಖೆಯು ಮಕ್ಕಳ ಕಲ್ಯಾಣ ಮತ್ತು ಅಭಿವೃದ್ಧಿಗಾಗಿ ಜಾರಿಯಲ್ಲಿರುವ ನೀತಿ ಮತ್ತು ಕಾರ್ಯಕ್ರಮಗಳ ಅನುಷ್ಠಾನಕ್ಕೆ ಹೆಚ್ಚು ಒತ್ತು ನೀಡಿ ಶ್ರಮಿಸುತ್ತಿದೆ. ಈ ಶ್ರಮವು ದೇಶದ ಮುಂದಿನ ಸಾಮಾಜಿಕ, ಆರ್ಥಿಕ ಬೆಳವಣಿಗೆಗೆ ಹೂಡುತ್ತಿರುವ ಬಂಡವಾಳವಾಗಿರುತ್ತದೆ.
ಕರ್ನಾಟಕ ರಾಜ್ಯದಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು ಪ್ರಾಯೋಗಿಕವಾಗಿ 2ನೇ ಅಕ್ಟೋಬರ್ 1975 ರಂದು ಮೈಸೂರು ಜಿಲ್ಲೆಯ, ಟಿ. ನರಸೀಪುರ ತಾಲ್ಲೂಕಿನಲ್ಲಿ 100 ಅಂಗನವಾಡಿ ಕೇಂದ್ರಗಳೊಂದಿಗೆ ಪ್ರಾರಂಭಿಸಲಾಯಿತು.
ಈಗ ರಾಜ್ಯದ ಎಲ್ಲಾ ತಾಲ್ಲೂಕುಗಳಿಗೆ ವಿಸ್ತರಿಸಲಾಗಿದೆ. ಗರ್ಭಿಣಿ, ಬಾಣಂತಿ, ಕಿಶೋರಿಯರು ಮತ್ತು 6 ವರ್ಷ ಒಳಗಿನ ಮಕ್ಕಳ ಕಲ್ಯಾಣವು ಈ ಯೋಜನೆಯ ಮುಖ್ಯ ಗುರಿಯಾಗಿರುತ್ತದೆ ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಅರ್ಚನಾ ಬಸವರಾಜ ಬಿರಾದಾರ ಹಾಗೂ ಗ್ರಾಮ ಪಂಚಾಯತಿ ಸದಸ್ಯರು, ದೇವರ ನಿಂಬರಗಿ ವಲಯದ ಮೇಲ್ವಿಚಾರಕಿಯರಾದ ತೃಪ್ತಿ ಸಿ. ತಿಳಗುಳ, ಪ್ರತಿಭಾ ಅಂಗಡಿಮಠ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು.
ದೇವರ ನಿಂಬರಗಿ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕಾರ್ಯಕರ್ತೆಯರಾದ ಜ್ಯೋತಿ ಸಿಂಗೆ,, ಸಂಗೀತಾ ಕಾ. ಹೋಕಳೆ, ಎಸ್.ಬಿ. ಬಿರಾದಾರ, ಸುನಂದಾ ಗಾಡಗೆ, ಸಂಗೀತಾ ಚಲವಾದಿ ಸೇರಿದಂತೆ ಸಹಾಯಕಿಯರು ಹಾಗೂ ಮಕ್ಕಳ ಪಾಲಕರು ಉಪಸ್ಥಿತರಿದ್ದರು.
Saturday, November 6, 2021
Thursday, November 4, 2021
Tuesday, November 2, 2021
Monday, November 1, 2021
Sunday, October 31, 2021
Tuesday, October 26, 2021
Monday, October 25, 2021
Sunday, October 24, 2021
Saturday, October 23, 2021
Friday, October 22, 2021
Thursday, October 21, 2021
Wednesday, October 20, 2021
Tuesday, October 19, 2021
Monday, October 18, 2021
ನಾಜೀಯಾ ಶಕೀಲ ಅಂಗಡಿ ಯವರು ಗೆಲವು ನಿಶ್ಚಿತ
ಈ ದಿವಸ ವಾರ್ತೆ
ವಿಜಯಪುರ : ನಗರದಲ್ಲಿರುವ ಜೆಡಿಎಸ್ ಕೇಂದ್ರ ಕಛೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಮುಖಂಡರ ಸಭೆಯಲ್ಲಿ ಮಾತನಾಡಿದ ಹೆಚ್ ಡಿ ದೇವೇಗೌಡರು ಮಾಜಿ ಪ್ರಧಾನಿಗಳು ಸಿಂದಗಿ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಾಜೀಯಾ ಶಕೀಲ ಅಂಗಡಿ ಯವರು ಗೆಲವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅದಕ್ಕಾಗಿ ಜಿಲ್ಲೆಯ ಹಾಗೂ ತಾಲ್ಲೂಕಿನ ಕಾರ್ಯಕರ್ತರೆಲ್ಲರು ಅಭ್ಯರ್ಥಿಯ ಗೆಲವಿಗಾಗಿ ಅಹರ್ನಿಶಿಯಾಗಿ ದುಡಿಯುವದಲ್ಲದೆ ಸಿಂದಗಿಕ್ಷೇತ್ರದ ಮನೆಮನೆಗೆ ಪಕ್ಷದ ಕೊಡುಗೆಗಳನು ತಲುಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಅತ್ಯಂತ ಒಗ್ಗಟ್ಟು ಪ್ರದರ್ಶನ ಮಾಡುವ ಮೂಲಕ ನಮ್ಮ ಗೆಲುವಿನ ಪತಾಕೆ ಹಾರಿಸುವರೊಂದಿಗೆ ಮುಂದಿನ 2023 ಚುನಾವಣೆಗೆ ಪ್ರೇರಣೆ ಯಾಗಲಿದೆ. ಎಂದು ಹೇಳಿದರು. ಸಭೆಯಲ್ಲಿ ಸಂಸದರಾ ಪ್ರಜ್ವಲ್ ರೇವಣ್ಣ ಮಾತನಾಡಿ,ಯುವಕರೆಲ್ಲರು ಪಕ್ಷದ ಸಿದ್ಧಾಂತ ಮೇಲೆ ದುಡಿಯಲು ನಾನು ಬೆನ್ನೆಲುಬಾಗಿ ನಿಲ್ಲುವೆ ಎಂದು ಕರೆ ನೀಡಿದರು.
ಮಲ್ಲಿಕಾರ್ಜುನ ಯಂಡಿಗೇರಿ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ನಾಗಠಾಣ ಶಾಸಕ ಡಾ. ದೇವಾನಂದ ಎಫ್ ಚವ್ಹಾಣ , ಡಾ. ಸುನೀತಾ ದೇವಾನಂದ ಚವ್ಹಾಣ, ಬಿ ಜಿ ಪಾಟೀಲ, ರಾಜಗೌಡ ಪಾಟೀಲ, ರಿಯಾಜ ಫಾರೂಕಿ, ಯಾಕೂಬ ಕೂಪರ, ಕೌಸರ ಶೇಖ, ಹುಸೇನ ಬಾಗಾಯತ, ಸುನಿಲ್ ರಾಠೋಡ, ಸಿದ್ದು ಕಾಮತ್, ಸ್ನೇಹಾ ಶೆಟ್ಟಿ, ಡಾ. ಶಮಶರಅಲಿ ಮುಲ್ಲಾ, ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
Sunday, October 17, 2021
ಕೆಆರ್ ಎಸ್ ಪರ ಮತ ಯಾಚನೆ
ಈ ದಿವಸ ವಾರ್ತೆ
ವಿಜಯಪುರ: ಸಿಂದಗಿ ವಿಧಾನಸಭಾ ವ್ಯಾಪ್ತಿಯ ಮಲಘಾಣ, ಸೋಮಜಾಳ ಆಸಂಗಿಹಾಳ ದೇವರ ನಾವದಗಿ ಕುಮಸಿ ಗ್ರಾಮಗಳಲ್ಲಿ KRS ಪಕ್ಷದ ಕಾರ್ಯಕರ್ತರು ಅಭ್ಯರ್ಥಿ ಪರ ಮತಯಾಚಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಭಟ್ರಹಳ್ಳಿ, ಸೋಮಸುಂದರ, ಜಿಲ್ಲಾಧ್ಯಕ್ಷರಾದ ಅಪ್ಪನಗೌಡ ಕೆ ಪಾಟೀಲ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಶಿವಕುಮಾರ್ ಯಡಹಳ್ಳಿ ಭಾಗವಹಿಸಿದ್ದರು.
ಲಂಚ ಮುಕ್ತ ಸಮಾಜಕ್ಕೆ ಕೆಆರ್ ಎಸ್ ಬೆಂಬಲಿಸಿ: ಡಾ. ಸುನೀಲಕುಮಾರ ಹೆಬ್ಬಿ
ಈ ದಿವಸ ವಾರ್ತೆ
ವಿಜಯಪುರ: ಉತ್ತಮ ಹಾಗೂ ಲಂಚ ಮುಕ್ತ ಸಮಾಜ ನಿರ್ಮಾಣಕ್ಕಾಗಿ ತಮ್ಮ ಅಮೂಲ್ಯ ಮತವನ್ನು ತಮಗೆ ನೀಡುವಂತೆ ಸಿಂದಗಿ ಉಪ ಚುನಾವಣೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿ ಡಾ.ಸುನೀಲಕುಮಾರ ಹೆಬ್ಬ ಸಿಂದಗಿ ಪಟ್ಟಣದಲ್ಲಿ ಮತಯಾಚನೆ ಮಾಡಿದರು.
ಇಲ್ಲಿನ ಬಸವೇಶ್ವರ ವೃತ್ತದಿಂದ ಚುನಾವಣೆ ಪ್ರಚಾರ ಆರಂಭಿಸಿ, ಮೋರಟಗಿ, ಮನ್ನಾಪುರ, ಯಂಕಂಚಿ, ಕೈನೂರ, ಕುಲೇಕುಮಟಗಿ, ಹಿರೇಸಾವಳಗಿ ಭಾಗದಲ್ಲಿ ಕೆಆರ್ ಎಸ್ ಪಕ್ಷದ ವತಿಯಿಂದ ಪ್ರಚಾರ ನಡೆಸಿದರು.
ಈ ಸಂದರ್ಭ ಸೋಮಸುಂದರ, ಕೆಆರ್ ಎಸ್ ಜಿಲ್ಲಾಧ್ಯಕ್ಷ ಅಪ್ಪನಗೌಡ ಪಾಟೀಲ ಮತ್ತಿತರರು ಇದ್ದರು.
ವರದಿ: ಕಲ್ಲಪ್ಪ ಶಿವಶರಣ
ಮೊ: 7204279187
Saturday, October 16, 2021
Friday, October 15, 2021
Wednesday, October 13, 2021
Tuesday, October 12, 2021
Monday, October 11, 2021
Sunday, October 10, 2021
Saturday, October 9, 2021
Friday, October 8, 2021
Thursday, October 7, 2021
Wednesday, October 6, 2021
Tuesday, October 5, 2021
Monday, October 4, 2021
ಸಿಂದಗಿಯ ಉಪ ಚುನಾವಣೆ :ಪ್ರಚಾರ ಸಾಮಗ್ರಿ ಮುದ್ರಿಸಲು ಘೋಷಣಾ ಪತ್ರ ಸಲ್ಲಿಕೆ ಕಡ್ಡಾಯ
ಈ ದಿವಸ ವಾರ್ತೆ
ವಿಜಯಪುರ :ಸಿಂದಗಿ ವಿಧಾನಸಭಾ ಮತಕ್ಷೇತ್ರದ ಉಪಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಪ್ರಚಾರಕ್ಕಾಗಿ ಮುದ್ರಿಸುವ ಪಾಂಪ್ಲೆಟ್ ಮತ್ತು ಪೋಸ್ಟರಗಳ ಬಗ್ಗೆ ಕಡ್ಡಾಯವಾಗಿ ಡಿಕ್ಲರೇಷನ್(ಘೋಷಣಾ ಪತ್ರ) ಸಲ್ಲಿಸುವಂತೆ ಮುದ್ರಕರಿಗೆ ಜಿಲ್ಲಾಧಿಕಾರಿ ಪಿ ಸುನಿಲ್ ಕುಮಾರ್ ಅವರು ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ವಿಜಯಪುರ ನಗರದ ವಿವಿಧ ಮುದ್ರಣಾಲಯದ ಮುದ್ರಕರೊಂದಿಗೆ ಸಭೆ ನಡೆಸಿದ ಅವರು ಪ್ರಜಾಪ್ರತಿನಿಧಿ ಕಾಯ್ದೆ 1951 ರ 127(A) ರನ್ವಯ ಪ್ರಚಾರಕ್ಕಾಗಿ ಮುದ್ರಿಸುವ ಪಾಂಪ್ಲೆಟ್ ಮತ್ತು ಪೋಸ್ಟರ ಮುದ್ರಣ ಸಂದರ್ಭದಲ್ಲಿ ಕೆಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮುದ್ರಕರಿಗೆ ಅವರು ಸೂಚಿಸಿದ್ದಾರೆ.
ಚುನಾವಣಾ ಪ್ರಚಾರಕ್ಕಾಗಿ ಮುದ್ರಿಸುವ ಪಾಂಪ್ಲೆಟ್ ಪೋಸ್ಟರ್ ಗಳಿಗೆ ಕಡ್ಡಾಯವಾಗಿ ಮುದ್ರಕರ ಹೆಸರು,ವಿಳಾಸ ಹಾಗೂ ಪ್ರಕಟಿಸುವ ಪಾಂಪ್ಲೆಟ್ ಹಾಗೂ ಪೋಸ್ಟರ್ ಗಳ ಸಂಖ್ಯೆಯನ್ನು ನಮೂದಿಸಬೇಕು.
ಅದರಂತೆ ಮುದ್ರಕರಿಗೆ ಮುದ್ರಣ ಮಾಡಲು ನೀಡುವಂತಹ ಪಾಂಪ್ಲೆಟ್ ಮತ್ತು ಪೋಸ್ಟರ್ ಗಳಿಗೆ ಸಂಬಂಧಪಟ್ಟ ವ್ಯಕ್ತಿಯು ಕಡ್ಡಾಯವಾಗಿ ಇಬ್ಬರು ವ್ಯಕ್ತಿಗಳಿಂದ ದೃಢೀಕರಿಸಿ ಮುದ್ರಕರಿಗೆ ಸಲ್ಲಿಸಬೇಕು ಮುದ್ರಕರು ಸಹ ಈ ಕುರಿತು ಘೋಷಣಾ ಪತ್ರ ಸಲ್ಲಿಸಬೇಕು.
ಅದರಂತೆ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಹಾಗೂ ಘೋಷಣಾ ಪ್ರಮಾಣ ಪತ್ರವನ್ನು ಚುನಾವಣಾ ಅಧಿಕಾರಿಗಳ ಕಾರ್ಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿದರು.
ಸಿಂದಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮುದ್ರಕರು ಜಿಲ್ಲೆಯ ವಿವಿಧ ತಾಲೂಕುಗಳ ಮುದ್ರಕರು ಮತ್ತು ಜಿಲ್ಲೆಗೆ ಹೊಂದಿಕೊಂಡಿರುವ ಮುದ್ರಣಾಲಯದ ಮುದ್ರಕರು ಸಹ ಚುನಾವಣಾ ಆಯೋಗದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದ ಹೇಳಿದರು.
ವಿಜಯಪುರ ನಗರದ ಮುದ್ರಣಾಲಯ ಸಂಘದ ಅಧ್ಯಕ್ಷರು ಕೂಡ ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲ ಮುದ್ರಣಾಲಯಗಳ ಮುದ್ರಕರಿಗೆ ಪತ್ರದ ಮೂಲಕ ಚುನಾವಣಾ ಆಯೋಗದ ನಿರ್ದೇಶನದ ಮಾಹಿತಿಯನ್ನು ವಿನಿಮಯ ಮಾಡಿಕೊಂಡು ಅವಶ್ಯಕ ಕ್ರಮಕೈಗೊಳ್ಳಲು ಅವರು ಸೂಚನೆ ನೀಡಿ ಒಟ್ಟಾರೆ ನೀತಿ ಸಂಹಿತೆ ಉಲ್ ಲಂಘನೆಯಾಗದಂತೆ ನೋಡಿಕೊಳ್ಳಲು ಸೂಚಿಸಿದರು.
ಸಿಂದಗಿ ವಿಧಾನಸಭಾ ಚುನಾವಣೆ ಅಧಿಕಾರಿಗಳ ಮೂಲಕವೂ ಆ ಕ್ಷೇತ್ರದ ವ್ಯಾಪ್ತಿಯ ಮುದ್ರಣಾಲಯದ ಮುದ್ರಕರೊಂದಿಗೆ ಸಭೆ ನಡೆಸಿ ಈ ಕುರಿತು ಸೂಕ್ತ ನಿರ್ದೇಶನ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಸಭೆಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದರೆಡ್ಡಿ, ಅಪರ ಜಿಲ್ಲಾಧಿಕಾರಿ ರಮೇಶ್ ಕಳಸದ,ಡಾ ಔದ್ರಾಮ ಸೇರಿದಂತೆ ವಿವಿಧ ಮುದ್ರಣಾಲಯಗಳ ಮುದ್ರಕರು ಉಪಸ್ಥಿತರಿದ್ದರು.
Saturday, October 2, 2021
ಅಸ್ಪೃಶ್ಯತೆ ಪದ್ಧತಿ ಸಮಾಜಕ್ಕೆ ಅಂಟಿದ ಶಾಪ
ಈ ದಿವಸ ವಾರ್ತೆ
ವಿಜಯಪುರ: ಭಾರತರತ್ನ ಡಾ|| ಬಿ.ಆರ್.ಅಂಬೇಡ್ಕರ್ ರವರ ಮಹತ್ತರವಾದ ಕನಸಿನಂತೆ, “ಎಲ್ಲರೂ ಸಮಾನರು, ಎಲ್ಲರಿಗೂ ಸಮಾನ ಹಕ್ಕು” ಎನ್ನುವ ಭಾರತದ ಸಂವಿಧಾನದ ಆಶಯದಂತೆ, ಸಾಮಾಜಿಕ ಹಾಗೂ ಆರ್ಥಿಕ ಸಮಾನತೆಯ ಭದ್ರ ಭಾರತ ದೇಶ ಆಗಬೇಕಾದರೆ ಜಾತಿಭೇದ, ಜಾತಿವೈಷಮ್ಯ ಇಲ್ಲದಂತಾಗಬೇಕು. ಅಸ್ಪೃಶ್ಯತೆ ಎನ್ನುವುದು ನಮ್ಮ ಸಮಾಜಕ್ಕೆ ಅಂಟಿದ ಶಾಪ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಶ್ರೀ.ರಾಮನಗೌಡ ಕನ್ನೊಳಿ ಅವರು ಹೇಳಿದರು.
ನಗರದ ತೋರವಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಿಲ್ಲಾ ಪಂಚಾಯತ ವಿಜಯಪುರ, ತಾಲೂಕ ಪಂಚಾಯತ, ತಿಕೋಟಾ ಗ್ರಾಮ ಪಂಚಾಯತ ಕಾರ್ಯಾಲಯ, ತೊರವಿ,
ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಅಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ “ಸ್ವಚ್ಛತಾ ಹಿ ಸೇವಾ” ಕಾರ್ಯಕ್ರಮದಲ್ಲಿ ಮಾತನಾಡಿದರು
“ಮಾನವ ಕುಲಂ ತಾನೊಂದೆ ವಲಂ' ಎನ್ನುವ ಆದಿಕವಿ ಪಂಪನ ಸಂದೇಶವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ, ಸಮಾಜ ಕಲ್ಯಾಣ ಇಲಾಖೆಯು ಹಲವಾರು ಕಾರ್ಯಕ್ರಮಗಳನ್ನು ಕೊಟ್ಯಂತರ ಅನುದಾನ ಭರಿಸಿ ಅನುಷ್ಟಾನಗೊಳಿಸುತ್ತಿದೆ. ಜಾತಿ ವೈಷಮ್ಯದ ಹಿನ್ನೆಲೆಯಲ್ಲಿ ಇನ್ನೂ ನಮ್ಮ ಸಮಾಜದಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಅಸ್ಪೃಶ್ಯತೆ ಆಚರಣೆಯಲ್ಲಿರುವುದು ದುರಂತಮಯ. ಜಾತಿ-ಜಾತಿಗಳ ಮಧ್ಯೆ, ಮೇಲ್ವಾತಿ-ಕೆಳಜಾತಿ ಎನ್ನುವ ಹೆಸರಿನಲ್ಲಿ, ಆಚರಣೆಗಳ ನೆಪದಲ್ಲಿ, ಅಸ್ಪೃಶ್ಯತೆ ಪಾಲಿಸುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಭಾರತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರ ಈ ನಿಟ್ಟಿನಲ್ಲಿ ಹಲವಾರು ಕಾನೂನುಗಳನ್ನು ತಂದಿವೆ ಎಂದು ಹೇಳಿದರು.
ದೌರ್ಜನ್ಯ ಪ್ರತಿಬಂಧ ಅಧಿನಿಯಮ-1989, 2015, ನಾಗರಿಕ ಹಕ್ಕು ಸಂರಕ್ಷಣಾ ಅಧಿನಿಯಮ-1955, ಮ್ಯಾನ್ಯುವಲ್ ಸ್ಕ್ಯಾವೆಂಜರ್ಸ ನೇಮಕಾತಿ ನಿಷೇಧ ಅಧಿನಿಯಮ-2013, ಈ ಕಾನೂನುಗಳ ಪ್ರಕಾರ ಜಾತಿ ಭೇಧ ಮಾಡುವುದು ಶಿಕ್ಷಾರ್ಹ ಅಪರಾಧವಾಗುತ್ತದೆ. ಕಾನೂನು ಪ್ರಕಾರ ಇಂತಹ ಅನಿಷ್ಟ ಆಚರಣೆ ಮಾಡುವವರಿಗೆ, ಪ್ರೋತ್ಸಾಹ ನೀಡುವವರಿಗೆ ಜೈಲುಶಿಕ್ಷೆ ಹಾಗೂ ದಂಡ ವಿಧಿಸಬಹುದಾಗಿದೆ ಎಂದು ಅವರು ಹೇಳಿದರು.
ಜಾತಿ ನಿಂದನೆ ಮಾಡುವುದು, ಧಾರ್ಮಿಕ ಕ್ಷೇತ್ರ, ಪೂಜಾ ಸ್ಥಳಗಳಲ್ಲಿ ಪ್ರವೇಶ ತಡೆಯುವುದು, ಯಾವುದೇ ಧಾರ್ಮಿಕ ಸೇವೆ ಮಾಡುವುದು, ಯಾವುದೇ ಕೆರೆ, ಬಾವಿ, ಕೊಳವೆಬಾವಿ, ಬಳಕೆ ಮಾಡುವುದು ಹಾಗೂ ಈ ಜಾಗಗಳಲ್ಲಿ ಸ್ನಾನ ಮಾಡುವುದು ಹಾಗೂ ನೀರನ್ನು ಉಪಯೋಗಿಸುವುದಕ್ಕೆ ಅಡ್ಡಿಯುಂಟು ಮಾಡುವುದು. ತರವಲ್ಲದ ಕೆಲಸಕ್ಕೆ ಜಾತಿ ಆಧಾರದ ಮೇಲೆ ಒತ್ತಾಯ ಮಾಡಿದಲ್ಲಿ ಹಾಗೂ ಒತ್ತಾಯದ ಮೇರೆಗೆ ಯಾವುದೇ ಕೆಲಸಕ್ಕೆ ತೊಡಗಿಸಿದಲ್ಲಿ. * ಯಾವುದೇ ಅಂಗಡಿ, ಸಾರ್ವಜನಿಕ ಉಪಹಾರ ಗೃಹ, ಹೊಟೇಲ, ಸಾರ್ವಜನಿಕ ಮನೋರಂಜನಾ ಸ್ಥಳ, ಸಲೂನ್ (ಹೇರ್ಕಟಿಂಗ್) ಪ್ರವೇಶಕ್ಕೆ/ಬಳಕೆಗೆ ಅಡ್ಡಿ ಮಾಡಬಾರದು ಎಂದು ಅವರು ಹೇಳಿದರು.
ಯಾವುದೇ ವೃತ್ತಿ, ಉದ್ಯೋಗ, ವ್ಯಾಪಾರ, ವ್ಯವಹಾರ ನಡೆಸುವುದರ ಬಗ್ಗೆ ಅಡ್ಡಿಯುಂಟು ಮಾಡುವುದು ಸ್ಮಶಾನ ಅಥವಾ ಸುಡುಗಾಡಿನ, ಯಾವುದೇ ಸಾರ್ವಜನಿಕ ಶೌಚಾಲಯದ, ಯಾವುದೇ ರಸ್ತೆಗೆ ಸಾರ್ವಜನಿಕರು ಉಪಯೋಗಿಸಲು ಅಥವಾ ಪ್ರವೇಶಿಸಲು ಹಕ್ಕನ್ನು ಹೊಂದಿರುವ ಇತರೆ ಯಾವುದೆ ಸ್ಥಳದ ಉಪಯೋಗದ ಬಗ್ಗೆ ಅಡ್ಡಿಯುಂಟು ಮಾಡುವುದು. ಯಾವುದೇ ಸಾರ್ವಜನಿಕ ಅಥವಾ ಧಾರ್ಮಿಕ ರೂಢಿ, ಪದ್ದತಿ ಅಥವಾ ಉತ್ಸವದ ಆಚರಣೆಯ ಬಗ್ಗೆ ಅಥವಾ ಯಾವುದೇ ಧಾರ್ಮಿಕ, ಸಾಮಾಜಿಕ ಅಥವಾ ಸಾಂಸ್ಕೃತಿಕ ಮೆರವಣಿಗೆಯಲ್ಲಿ ಭಾಗವಹಿಸುವುದು ಅಡ್ಡಿಯುಂಟು ಮಾಡುವುದು. ಈ ಮೇಲಿನ ಕಾನೂನು ಬಾಹಿರ ಕೃತ್ಯಗಳನ್ನು ಎಸಗಿದವರ ಮೇಲೆ ಕಾನೂನು ಪ್ರಕಾರ 6 ತಿಂಗಳವರೆಗೆ ಜೈಲುಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶವಿರುತ್ತದೆ. ಬುದ್ಧ, ಬಸವ, ಅಂಬೇಡ್ಕರ್ ರವರ ಕನಸಿನ ಸಮ ಸಮಾಜವನ್ನು ಕಟ್ಟೋಣ; ಸರ್ಕಾರದ ಪ್ರಯತ್ನಗಳಿಗೆ ಕೈಜೋಡಿಸೋಣ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಗಾಂಧಿಜಿಯವರು ಅಸ್ಪೃಶ್ಯತೆ ನಿವಾರಣೆ ಬಗ್ಗೆ ತಿಳಿಸಿರುವ ಸಂದೇಶದ ಬಗ್ಗೆ ಕರಪತ್ರಗಳನ್ನು ಸಾರ್ವಜನಿಕರಿಗೆ ಹಂಚಿ ಅಸ್ಪೃಶ್ಯತೆ ಆಚರಣೆ ವಿರೋಧದ ಕಾನೂನಿನ ಅರಿವು ಮೂಡಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆಯ ಎಲ್ಲಾ ವಸತಿ ನಿಲಯಗಳು ಹಾಗೂ ಶಾಲೆಗಳಲ್ಲಿ ಸ್ವಚ್ಛತಾ ಶ್ರಮದಾನ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಸುರೇಶ್ ಕಳ್ಳಿಮನಿ, ದಲಿತ ಮುಖಂಡ ಅಡಿವೆಪ್ಪ ಸಾಲಗಲ್,ದಾದಾಸಾಬ ಬಾಗಾಯತ್,ಲಾಲಪ್ಪ ಗುಡಿಮನಿ, ಹನುಮಂತ ಪಟ್ಟೇದ, ಶಾಂತಿನಗರದ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಸುರೇಶಗೌಡ ಬಿರಾದಾರ, ಸಿದ್ಧಾರ್ಥ ಪರಣಾಕರ, ಸುರೇಶ್ ಗಚ್ಚಿನಮನಿ ಹಾಗೂ ಇತರರು ಉಪಸ್ಥಿತರಿದ್ದರು.
Friday, October 1, 2021
Thursday, September 30, 2021
Monday, September 27, 2021
ವಿಜಯಪುರ ರಫ್ತು ನಗರ ಮಾಡುವ ಗುರಿ: ಜಿಲ್ಲಾಧಿಕಾರಿ ಪಿ.ಸುನೀಲಕುಮಾರ
ಈ ದಿವಸ ವಾರ್ತೆ ವಿಜಯಪುರ: ವಿಜಯಪುರ ವನ್ನು ರಫ್ತು ನಗರವನ್ನಾಗಿಸುವ ಗುರಿ ಹೊಂದಲಾಗಿದ್ದು, ಇಲ್ಲಿನ ಉದ್ದಿಮೆಗಳು ಕೂಡ ಈ ನಿಟ್ಟಿನಲ್ಲಿ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಹೇಳಿದರು.
ನಗರದ ಜಿಲ್ಲಾ ಕೈಗಾರಿಕಾ ಕೇಂದ್ರ ಆವರಣದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕೆ ಕೇಂದ್ರ, ಬೆಂಗಳೂರಿನ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ ಆಶ್ರಯದಲ್ಲಿ ಆಝಾದಿ ಕಾ ಅಮೃತ ಮಹೋತ್ಸ ನಿಮಿತ್ತ ಸೋಮವಾರ ಹಮ್ಮಿಕೊಂಡ ವಾಣಿಜ್ಯ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಪಕ್ಕದ ಜಿಲ್ಲೆಗಳಾದ ಬೆಳಗಾವಿ, ಕಲಬುರಗಿ ಸೇರಿದಂತೆ ಗಡಿ ಭಾಗದ ಸೊಲ್ಲಾಪುರ ಕೂಡ ರಫ್ತು ಮಾಡುವಲ್ಲಿ ವಿಜಯಪುರಕ್ಕಿಂತಲೂ ಮುಂದಿನ ಹೆಜ್ಜೆಯಲ್ಲಿವೆ. ಆದರೆ ನಮ್ಮ ಜಿಲ್ಲೆಯಿಂದ ಮಾತ್ರ ಈ ಕಾರ್ಯ ಸಾಧನೆ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿಲ್ಲ ಎಂದರು.
ಸದ್ಯ ಒಣ ದ್ರಾಕ್ಷಿ, ದಾಳಿಂಬೆ, ಲಿಂಬೆ ಸೇರಿದಂತೆ ವಾಣಿಜ್ಯ ಬೆಳೆಗಳು ಮಾತ್ರ ರಫ್ತು ಮಾಡಲಾಗುತ್ತಿದ್ದು, ಕೈಗಾರಿಕೆಯ ವಸ್ತುಗಳು ಕೂಡ ರಫ್ತು ಮಾಡುವ ನಿಟ್ಟಿನಲ್ಲಿ, ಕೈಗಾರಿಕೋದ್ಯಮಿಗಳು ತಮ್ಮ ವಸ್ತುಗಳನ್ನು ಉತ್ತಮ ಗುಣಮಟ್ಟದಲ್ಲಿ ಉತ್ಪಾದಿಸಲು ಮುಂದಾಗಬೇಕು. ಇದಕ್ಕೆ ಕೈಗಾರಿಕೋದ್ಯಮಿಗಳ ಶ್ರಮ ಹೆಚ್ಚಿದೆ ಎಂದರು.
ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಇಂದು ವಿಪುಲ ಅವಕಾಶಗಳಿದ್ದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕು ಎಂದರು.
ಇಲ್ಲಿ ಮುಳವಾಡ ಹಾಗೂ ಸಿಂದಗಿಯಲ್ಲಿ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿ ಪಡೆಸಲಾಗುತ್ತಿದೆ. ಜಿಲ್ಲೆಯ ನವ ಉದ್ಯಮೆದಾರರಿಗೆ ಇಲ್ಲಿನ ಕೈಗಾರಿಕಾ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತಿದ್ದು, ಈ ಭಾಗದಲ್ಲಿ ಹೆಚ್ಚು ಹೆಚ್ಚು ಕೈಗಾರಿಕೆಗಳು ಸ್ಥಾಪನೆಗೊಂಡು, ಉದ್ಯೋಗ ಸೃಜನೆಗೊಂಡಲ್ಲಿ, ಜಿಲ್ಲೆಯ ನಿರುದ್ಯೋಗ ಸಮಸ್ಯೆ ನಿವಾರಣೆ ಆಗಲು ಸಾಧ್ಯೆ ಎಂದರು.
ಜಿಲ್ಲೆಯ ಕೃಷಿ ಉತ್ಪಾನ್ನ ಸೇರಿದಂತೆ ಕೈಗಾರಿಕಾ ವಸ್ತುಗಳ ರಫ್ತು ಮಾಡಲು, ಮುಂದಿನ ದಿನಗಳಲ್ಲಿ ವಿಮಾನ ನಿಲ್ದಾಣದಲ್ಲಿ ಏರ್ ಬಸ್, ಕಾರ್ಗೋ ಹಾರಾಟದ ವ್ಯವಸ್ಥೆಗೆ ಸರ್ಕಾರ ಮುಂದಿನ ಹೆಜ್ಜೆ ಇಡಲಿದೆ ಎಂದರು.
ಅಮೃತ ಯೋಜನೆ ನಿಮಿತ್ತ ವಿವಿಧ ಯೋಜನೆ ಹಮ್ಮಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಹಲವು ಇಲಾಖೆಗಳ ಆಶ್ರಯದಲ್ಲಿ ವಿಶಿಷ್ಟ ಕಾರ್ಯಕ್ರಮಗಳನ್ನು ಕೈಗೊಳಗಳಲಾಗುತ್ತಿದೆ ಎಂದರು.
ಇಲ್ಲಿನ ಜಿಲ್ಲಾ ಕೈಗಾರಿಕಾ ಕೇಂದ್ರದ ಅಧಿಕಾರಿ ಬಸವರಾಜ ಬಿರಾದಾರ ಕೈಗಾರಿಕೆಗಳ ನಿವೇಶನ ಹಂಚಿಕೆ ಹಾಗೂ ಕೈಗಾರಿಕೆ ಬೆಳವಣಿಗೆಯ ನಿಟ್ಟಿನಲ್ಲಿ ಪೂರಕವಾಗಿ ಶ್ರಮಿಸುತ್ತಿದ್ದಾರೆ ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಗೋವಿಂದ ರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ರಫ್ತು ಮಾಡುವ ಗುಣಮಟ್ಟದ ವಸ್ತುಗಳು ಹೆಚ್ಚಿದ್ದು, ಇನ್ನಷ್ಟು ಬೆಳವಣಿಗೆ ಆಗಬೇಕು ಎಂದರು.
ಅಲ್ಲದ ಕೈಗಾರಿಕೆ ಸ್ಥಾಪನೆಗಳಿಗೆ ಸರ್ಕಾರ ಸರಳಿಕೃತ ನೀತಿ ಜಾರಿಗೆ ತಂದಿದ್ದು, ಈ ಹಿಂದಿನ ಅಡೆ, ತಡೆಗಳನ್ನು ತಗೆದು ಹಾಕಿದೆ. ಹೀಗಾಗಿ ಇಂದು ಕೈಗಾರಿಕಾ ಸ್ಥಾಪನೆಗೆ ಉತ್ತಮ ಅವಕಾಶಗಳು ಇವೆ ಎಂದರು.
ಹಿರಿಯ ಉದ್ಯಮ, ಚೇಂಬರ್ ಆಫ್ ಕಾಮರ್ಸ್ ಇಂಡಿಸ್ಟ್ರೀ, ಅಗ್ರಿಕಲ್ಚರ್ ಅಧ್ಯಕ್ಷ ಡಿ.ಎಸ್. ಗುಡ್ಡೋಡಗಿ ಮಾತನಾಡಿದರು.
ಸಣ್ಣ ಉದ್ಯಮಿದಾರರ ಸಂಘದ ಅಧ್ಯಕ್ಷ ಗಂಗಾಧರ ಸಂಬಣ್ಣಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ವಿಲಿಯಮ್ಸ್, ತಮಣ್ಣ ಈಳಗೇರ, ಟಿ.ಸಿ. ವಿಜಯಬಾಸ್ಕರ್ ಮತ್ತಿತರರು ಇದ್ದರು.
ಸಿಡಾಕ್ ಜಂಟಿ ನಿರ್ದೇಶಕಿ ಎಸ್.ಬಿ. ಬಳ್ಳಾರಿ ಸ್ವಾಗತಿಸಿ, ನಿರೂಪಿಸಿದರು. ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಬಸವರಾಜ ಬಿರಾದಾರ ವಂದಿಸಿದರು.
Saturday, September 25, 2021
Friday, September 24, 2021
Thursday, September 23, 2021
Wednesday, September 22, 2021
Tuesday, September 21, 2021
Sunday, September 19, 2021
Friday, September 17, 2021
Thursday, September 16, 2021
Wednesday, September 15, 2021
Tuesday, September 14, 2021
Monday, September 13, 2021
Sunday, September 12, 2021
Saturday, September 11, 2021
Thursday, September 9, 2021
Wednesday, September 8, 2021
Tuesday, September 7, 2021
Monday, September 6, 2021
Sunday, September 5, 2021
ಭೂಕಂಪದ ಹಿನ್ನೆಲೆ ಸಾರ್ವಜನಿಕರು ಆತಂಕ ಪಡದಿರಲು ಜಿಲ್ಲಾಧಿಕಾರಿಗಳಿಂದ ಮನವಿ
ಈ ದಿವಸ ವಾರ್ತೆ
ವಿಜಯಪುರ ಜಿಲ್ಲೆಯು ಭೂಕಂಪನ ವಲಯ-2 ರಲ್ಲಿ ಬರುತ್ತಿದ್ದು, ಇದು ಕಡಿಮೆ ಅಪಾಯ ಇರುವ ವಲಯವಾಗಿರುತ್ತದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ತಿಳಿಸಿರುತ್ತಾರೆ ಹಾಗೂ ಸಾರ್ವಜನಿಕರು ಈ ಕುರಿತು ಯಾವುದೇ ಊಹಾಪೋಹಗಳಿಗೆ ಕಿವಿಗೊಡದಿರಲು ಮತ್ತು ಭಯಪಡದಿರಲು ಜಿಲ್ಲಾಧಿಕಾರಿ ಪಿ ಸುನೀಲಕುಮಾರ್ ಅವರು ತಿಳಿಸಿದ್ದಾರೆ.
ನಿನ್ನೆ ದಿನಾಂಕ:4-9-2021 ರ ರಾತ್ರಿ ಸಮಯ 11.47 ರಿಂದ 11.49 ರ ಅವಧಿಯಲ್ಲಿ ಪ್ರಮುಖವಾಗಿ ವಿಜಯಪುರ ಜಿಲ್ಲೆಯ ವಿಜಯಪುರ, ಬಬಲೇಶ್ವರ, ತಿಕೋಟಾ, ಬ.ಬಾಗೇವಾಡಿ ತಾಲೂಕು, ವಿಜಯಪುರ ನಗರ ಹಾಗೂ ಜಿಲ್ಲೆಯ ಇತರೆ ಭಾಗಗಳಲ್ಲಿ ಭೂಕಂಪನದ ಅನುಭವವಾಗಿರುವ ಬಗ್ಗೆ ಸಾರ್ವಜನಿಕರಿಂದ/ಮಾಧ್ಯಮಗಳಿಂದ ಹಾಗೂ ತಿಳಿದು ಬಂದಿರುತ್ತದೆ.
ಈ ಕುರಿತು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ (KSNDMC) ಬೆಂಗಳೂರು ಇವರಿಂದ ಮಾಹಿತಿಯನ್ನು ಪಡೆಯಲಾಗಿ ಜಿಲ್ಲೆಯ ಆಲಮಟ್ಟಿಯಲ್ಲಿರುವ ಭೂಕಂಪನ ಮಾಪಕ ಕೇಂದ್ರದಲ್ಲಿ 3.9 ರಷ್ಟು ತೀವ್ರತೆ ದಾಖಲಾಗಿರುವ ಬಗ್ಗೆ ತಿಳಿಸಿದ್ದು, ಭೂಕಂಪನದ ಕೇಂದ್ರವು (Epicentre) ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ ಇರುವುದಾಗಿ ತಿಳಿಸಿರುತ್ತಾರೆ.
ನಿನ್ನೆ ರಾತ್ರಿ ಭೂಕಂಪನದ ಅನುಭವದ ಮಾಹಿತಿಯು ಸಾರ್ವಜನಿಕರಿಂದ/ಮಾಧ್ಯಮಗಳಿಂದ ತಿಳಿದು ಬಂದ ಕೂಡಲೇ ಕಂದಾಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳು ಮಧ್ಯರಾತ್ರಿ ಭೂಕಂಪನ ಅನುಭವವಾದ ಪ್ರದೇಶಗಳಿಗೆ ಭೇಟಿ ನೀಡಿದ್ದು ಇರುತ್ತದೆ. ಈವರೆಗೆ ಜಿಲ್ಲೆಯಲ್ಲಿ ಯಾವುದೇ ಮಾನವ/ಜಾನುವಾರು ಜೀವಹಾನಿ ಮತ್ತು ಆಸ್ತಿ-ಪಾಸ್ತಿಗಳ ಹಾನಿಯಾದ ಬಗ್ಗೆ ವರದಿಯಾಗಿರುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
Saturday, September 4, 2021
ಸೆ.4 ರಿಂದ ಗಣಪತರಾವ ಮಹಾರಾಜರ ಶಾಂತಿ ಕುಟೀರದಲ್ಲಿ ಸಪ್ತಾಹ
ಈ ದಿವಸ ವಾರ್ತೆ ವಿಜಯಪುರ: ತಾಲೂಕಿನ ಸುಕ್ಷೇತ್ರ ಕನ್ನೂರದಲ್ಲಿರುವ ಗಣಪತರಾವ ಮಹಾರಾಜರ ಶಾಂತಿ ಕುಟೀರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸೆ.4 ರಿಂದ 10 ರವರೆಗೆ ಸಪ್ತಾಹ ನಡೆಯಲಿದೆ.
ಕೊವಿಡ್ ಹಿನ್ನೆಲೆಯಲ್ಲಿ ನಿಯಮಾವಳಿಗಳ ಪಾಲನೆಯೊಂದಿಗೆ ಈ ಬಾರಿ ಸಪ್ತಾಹವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತದೆ. ಕಳೆದ 50 ವರ್ಷಗಳಿಂದಲೂ ಆಶ್ರಮದಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಶ್ರಾವಣ ವದ್ಯ ತ್ರಯೋದಶಿಯಿಂದ ಭಾದ್ರಪದ ಶುದ್ಧ ಚತುರ್ಥಿಯವರೆಗೆ ಸಪ್ತಾಹ ಆಚರಿಸುವ ಸಂಪ್ರದಾಯ ನಡೆದುಬಂದಿದೆ. ಕೊರೋನಾ ಪ್ರಭಾವದಿಂದ ಕೊಂಚ ಭಿನ್ನ ಶೈಲಿಯಲ್ಲಿ ಅಂದರೆ ವರ್ಚುವಲ್ ಸಪ್ತಾಹವಾಗಿ ಜ್ಞಾನಯಜ್ಞ ರೂಪದಿಂದ ಆಚರಿಸಲಾಗುವುದು. ಈ ಸಪ್ತಾಹದಲ್ಲಿ ನಾಡಿನ ಹಾಗೂ ದೇಶದ ವಿವಿಧ ಪ್ರಾಂತಗಳಿAದ ಅನುಭಾವಿಗಳು ಸಂತರು ವಿದ್ವಾಂಸರು ಅನುಭಾವದ ರಸದೌತಣ ಉಣಬಡಿಸಲಿದ್ದಾರೆ. ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸರಸ್ವತಿ ಮಹಾಸ್ವಾಮಿಗಳು, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳು, ಚಿನ್ಮಯ ಮಿಷನ್ ಬೆಂಗಳೂರಿನ ಸ್ವಾಮಿ ಬ್ರಹ್ಮಾನಂದಜೀ, ವಿಜಯಪುರ ಷÀಣ್ಮುಖಾರೂಢ ಮಠದ ಅಭಿನವ ಸಿದ್ಧಾರೂಢ ಸ್ವಾಮಿಗಳು, ವಿದ್ವಾನ ಕೆ.ಎಸ್. ನಾರಾಯಣಾಚಾರ್, ಎಸ್. ಷಡಕ್ಷರಿ, ಡಾ. ಗುರುರಾಜ್ ಕರಜಗಿ, ಕನ್ನಡದ ಕಬೀರ ಪದ್ಮಶ್ರೀ ಇಬ್ರಾಹಿಂ ಸುತಾರ್, ಚಿಂತಕ ಚಕ್ರವರ್ತಿ ಸೂಲಿಬೆಲೆ, ಡಾ. ಆರತಿ ವ್ಹಿ.ಬಿ ಸೇರಿದಂತೆ ಇನ್ನೂ ಹಲವು ಸಂತ ಮಹಾಂತರು ಹಾಗೂ ಮರಾಠಿ ವಕ್ತಾರರು, ವಿದ್ವಾಂಸರಿAದ ಉಪನ್ಯಾಸ, ಪ್ರವಚನಗಳು ಮೂಡಿ ಬರಲಿವೆ.
ಗಣಪತರಾವ ಮಹಾರಾಜರು ದತ್ತಾವತಾರಿ ಎಂದೇ ಪ್ರಸಿದ್ಧರಾಗಿರುವರು. ಅವರ ಅಧ್ಯಾತ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿದ ಕ್ರಾಂತಿ ಇವತ್ತಿಗೂ ಪ್ರಸ್ತುತ. ಸಾದಾ ಜೀವನ ಉಚ್ಚ ವಿಚಾರವೇ ಅವರ ನಿಲುವು ಆಗಿತ್ತು. ತಾವು ಪಡೆದ ಆತ್ಮಾನಂದವನ್ನು ಎಲ್ಲರೂ ಪ್ರಾಪ್ತಮಾಡಿಕೊಳ್ಳಲಿ ಎಂಬುವುದೇ ಅವರ ಧ್ಯೇಯವಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ಚಿಂತನೆಗಳನ್ನು ಪ್ರಸ್ತುತಪಡಿಸಲು ಈ ಸಪ್ತಾಹ ಆಯೋಜಿಸಲಾಗುತ್ತಿದೆ ಎಂದು ಆಶ್ರಮದ ಅಧ್ಯಕ್ಷ ಗೋವಿಂದಲಾಲ ಬಾಹೇತಿ ಮಾಹಿತಿ ನೀಡಿದ್ದಾರೆ.
Friday, September 3, 2021
ರಾಜ್ಯಮಟ್ಟದ ಸಾಹಿತ್ಯ ಶ್ರೀ ಪ್ರಶಸ್ತಿಗೆ ಡಾ.ಪೂರ್ಣಿಮಾ ಧಾಮಣ್ಣವರ ಭಾಜನ
ಈ ದಿವಸ ವಾರ್ತೆ:
ವಿಜಯಪುರ: ರಾಜ್ಯ ಮಟ್ಟದ ಸಾಹಿತ್ಯ ಶ್ರೀ ಪ್ರಶಸ್ತಿಗೆ ಡಾ. ಪೂರ್ಣಿಮಾ ಧಾಮಣ್ಣವರ ಭಾಜನರಾಗಿದ್ದಾರೆ. ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಸನಾದಿ ಅಪ್ಪಣ್ಣ ಕಲಾಕಾರರ ಸಂಘ ರಾಜ್ಯ ಶಾಖೆ ಬೀಳಗಿ ಇವರ ಸಂಯುಕ್ತ ಆಶ್ರಯದಲ್ಲಿ ಸ್ವರ ಸಾಮ್ರಾಟ ಸನಾದಿ ಅಪ್ಪಣ್ಣ ಅವರ ೧೪೬ ನೇ ಜಯಂತಿ ಹಾಗೂ ೭೫ನೇ ಸ್ವಾತಂತ್ರö್ಯದ ಅಮೃತ ಮಹೋತ್ಸವ ಸಂಘದ ಬೆಳ್ಳಿ ಹಬ್ಬ ಸಂಸ್ಕೃತಿಕ ಉತ್ಸವ ಸೆ.೯ ರಂದು ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಜ್ಯ / ರಾಷ್ಟç ಮಟ್ಟದ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಡಾ. ಪೂರ್ಣಿಮಾ ಧಾಮಣ್ಣವರ ಅವರಿಗೆ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Thursday, September 2, 2021
Wednesday, September 1, 2021
Tuesday, August 31, 2021
Sunday, August 29, 2021
Wednesday, August 25, 2021
Tuesday, August 24, 2021
Monday, August 23, 2021
Sunday, August 22, 2021
Saturday, August 21, 2021
Thursday, August 19, 2021
Wednesday, August 18, 2021
Tuesday, August 17, 2021
Monday, August 16, 2021
Sunday, August 15, 2021
Friday, August 13, 2021
Thursday, August 12, 2021
Wednesday, August 11, 2021
Tuesday, August 10, 2021
Monday, August 9, 2021
Sunday, August 8, 2021
Saturday, August 7, 2021
Thursday, August 5, 2021
Wednesday, August 4, 2021
Tuesday, August 3, 2021
Monday, August 2, 2021
Thursday, July 29, 2021
Monday, July 26, 2021
Sunday, July 25, 2021
Saturday, July 24, 2021
Friday, July 23, 2021
Thursday, July 22, 2021
Wednesday, July 21, 2021
Tuesday, July 20, 2021
Monday, July 19, 2021
Sunday, July 18, 2021
Friday, July 16, 2021
Thursday, July 15, 2021
Wednesday, July 14, 2021
Tuesday, July 13, 2021
Monday, July 12, 2021
Sunday, July 11, 2021
Saturday, July 10, 2021
Friday, July 9, 2021
Thursday, July 8, 2021
Wednesday, July 7, 2021
Tuesday, July 6, 2021
Monday, July 5, 2021
Saturday, July 3, 2021
Friday, July 2, 2021
Thursday, July 1, 2021
Wednesday, June 30, 2021
Saturday, June 26, 2021
Friday, June 25, 2021
Thursday, June 24, 2021
Wednesday, June 23, 2021
Tuesday, June 22, 2021
Sunday, June 20, 2021
Friday, June 18, 2021
Thursday, June 17, 2021
Tuesday, June 15, 2021
Monday, June 14, 2021
Friday, June 11, 2021
Thursday, June 10, 2021
Wednesday, June 9, 2021
Tuesday, June 8, 2021
Monday, June 7, 2021
Sunday, June 6, 2021
Friday, June 4, 2021
Thursday, June 3, 2021
Monday, May 31, 2021
Tuesday, May 25, 2021
Saturday, May 22, 2021
Friday, May 21, 2021
Tuesday, May 4, 2021
Wednesday, April 28, 2021
Tuesday, April 27, 2021
Monday, April 26, 2021
Sunday, April 25, 2021
Saturday, April 24, 2021
Friday, April 23, 2021
Thursday, April 22, 2021
Wednesday, April 21, 2021
Tuesday, April 20, 2021
Monday, April 19, 2021
Sunday, April 18, 2021
Saturday, April 17, 2021
Thursday, April 15, 2021
Wednesday, April 14, 2021
Tuesday, April 13, 2021
Sunday, April 11, 2021
Friday, April 9, 2021
Thursday, April 8, 2021
Wednesday, April 7, 2021
Tuesday, April 6, 2021
Monday, April 5, 2021
Saturday, April 3, 2021
Thursday, April 1, 2021
Wednesday, March 31, 2021
Tuesday, March 30, 2021
Saturday, March 27, 2021
ಕಲೆಗೆ ಪುನರ್ಜನ್ಮ ದೊರೆಯಲಿ: ಜೋಶಿ
ವಿಜಯಪುರ : ಕಲೆಯು ಒಂದು ಅಭೂತಪೂರ್ವ ಸಿದ್ಧಿ, ರಂಗ ಕಲೆ ಒಂದು ಸಾಮಾಜಿಕ ಮಾಧ್ಯಮವಾಗಿದೆ ಎಂದು ರಂಗವೈಭವದ ಅಧ್ಯಕ್ಷ ಅಂಬಾದಾಸ ಜೋಶಿ ಹೇಳಿದರು.
ನಗರದ ವಿರೇಶ್ವರ ನಾಟ್ಯ ಸಂಘದ ರಂಗ ಮಂದಿರದಲ್ಲಿ ರಂಗವೈಭವ ಮತ್ತು ಕರ್ನಾಟಕ ಕಬ್ಲಿಕ್ ಪವರ್ ಸಂಘಟನೆಯ ಸಂಯುಕ್ತಾಶ್ರಯದಲ್ಲಿ ವಿಶ್ವ ರಂಗಭೂಮಿ ದಿನಾಚಾರಣೆ ನಿಮಿತ್ಯ ಹಾಸ್ಯ ಕಲಾವಿದ ಸಿದ್ದು ನಾಲವತವಾಡ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ವಿಶ್ವರಂಗಭೂಮಿ ದಿನಾಚಾರಣೆ ಬರಿ ದಿನಾಚರಣೆಯಾಗಬಾರದು, ಕಲಾವಿದರ ಬದುಕು ಇಂದಿನ ಅನಾರೋಗ್ಯ ವಾತವಾರಣದಲ್ಲಿ ಆತಂಕದ ಪರಿಸ್ಥಿತಿಯಲ್ಲಿದ್ದರೂ ಕೂಡ ಎದೆಗುಂದದೆ, ನಮ್ಮ ಕಲೆಯ ಮೇಲೆ ನಮ್ಮ ಪ್ರಯತ್ನದ ಮೇಲೆ ನಮ್ಮ ಮೇಲೆ ವಿಶ್ವಾಸ ಇನ್ನು ಗಟ್ಟಿಯಾಗುತ್ತಾ ಹೋಗಬೇಕು. ಎದೆ ಗುಂದಬಾರದು ಇದಕ್ಕೆ ನಮ ಕಲಾ ತಪಸ್ಸು ನಮ್ಮ ಪರಂಪರೆ, ನಮ್ಮ ಕಲಾ ಪ್ರಯತ್ನ ಹಾಗೂ ಜನ ಸಂಪರ್ಕ ಕಳೆದುಕೊಳ್ಳದೇ ವಿಸ್ವಾದದಿಂದ ಜೀವನ ಸಾಗಿಸುವಂತೆ ಈ ರಂಗಭೂಮಿ ಕಲಾವಿದರಿಗೆ ಭಗವಂತ ಅನುಗ್ರಹಿಸಲಿ ಎಂದರು.
ಈ ಸಂದರ್ಭ ಕೆಪಿಪಿ ಅಧ್ಯಕ್ಷ ಪ್ರಕಾಶ ಕುಂಬಾರ ಮಾತನಾಡಿ, ಅಂತರಜಾಲದ ಮೋಹದಲ್ಲಿ ಇಂದು ಇಂತಹ ಅಪರೂಪದ ಜಾನಪದ ಕಲೆ, ದೇಶಿಕ್ರೀಡೆ ಮತ್ತು ಗ್ರಾಮೀಣ ಭಾಗದ ಮನರಂಜನೆಯ ಅನೇಕ ಮಾಧ್ಯಮಗಳು ಮಾಯವಾಗಿ ಇಂದು ಎಲ್ಲರ ಕೈಯಲ್ಲಿ ಪ್ರಪಂಚವನ್ನೇ ತೋರುವ ಮೊಬೈಲ್ಗಳ ಹಾವಳಿ ಹೆಚ್ಚಾಗಿದೆ. ಇದರಿಂದ ರಂಗ ಮಾಧ್ಯಮ ಸೊರಗಿ ಹೋಗಿ ಇಂದು ರಂಗಭೂಮಿ ಕಲಾವಿದರು ಸಹ ಬೀದಿಗೆ ಬಿದ್ದಿದ್ದಾರೆ. ಹಲವಾರು ನಾಟ್ಯ ಸಂಘಗಳು ಬಾಗಿಲು ಮುಚ್ಚಿಕೊಂಡಿವೆ. ಚಲನ ಚಿತ್ರ ಮಾಧ್ಯಮವೇ ಇಂದು ನಮ್ಮಿಂದ ದೂರುವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಜಾತಿ ಸಮುದಾಯಗಳನ್ನು ಓಲೈಸುವ ಕೆಲಸದಲ್ಲಿ ತೊಡಗಿದ ಸರ್ಕಾರಗಳು ಸೊರಗಿ ಹಾಗೂ ನಶಿಸಿ ಹೋಗುತ್ತಿರುವ ಇಂತಹ ನಾಟ್ಯ ಸಂಘಗಳನ್ನ ಹಾಗೂ ರಂಗಭೂಮಿ ಕಲಾವಿದರನ್ನ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯ ಮಾಡಬೇಕಿದೆ.
ಕರವೇ ಮುಖಂಡ ರವಿ ಕಿತ್ತೂರ, ಫಯಾಜ್ ಕಲಾದಗಿ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಇರುವ 2 ರಂಗಮಂದಿರಗಳು ಇದ್ದು, ಅದರಲ್ಲಿ ವಿಜಯಪುರದ ಕಿತ್ತೂರು ಚೆನ್ನಮ್ಮ ನಾಟ್ಯಮಂದಿರ ಬಹಳಷ್ಟು ಕಲಾವಿದರ ಬದುಕಿಗೆ ಆಸರೆಯಾಗಿತ್ತು. ಅಲ್ಲದೇ ಈ ನಾಟ್ಯಮಂದಿರದಲ್ಲಿ ಅನೇಕ ಹೆಸರಾಂತ ಖ್ಯಾತ ಚಲನಚಿತ್ರ ನಟರು ಸಹ ಇಲ್ಲಿ ಅಭಿನಯಿಸಿ ತಮ್ಮ ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ. ಅದರಲ್ಲಿ ಕಲ್ಪನಾ, ಸುದೀರ, ಎನ್.ಬಸವರಾಜ, ದೀರೇಂದ್ರ ಗೋಪಾಲ, ಅಲ್ಲದೇ ಕರ್ನಾಟಕ ರಾಜ್ಯ ಸರ್ಕಾರದ ಮಾಜಿ ಸಚಿವೆ ಉಮಾಶ್ರೀ ಸಹಿತ ಹಲವಾರು ನಟರು ನಟಿಸಿದಂತಹ ಅಮೂಲ್ಯವಾದ ನಾಟ್ಯ ಮಂದಿರ ಸದ್ಯ ಸರ್ಕಾರ ಮತ್ತು ಜಿಲ್ಲಾಡಳತದ ದಿವ್ಯ ನಿರ್ಲಕ್ಷ್ಯದ ಪರಿಣಾಮ ಪೂರ್ಣ ನಿರ್ನಾಮವಾಗಿದೆ. ಇಂತಹ ರಂಗಭೂಮಿ ದಿನಾಚಾರಣೆಯನ್ನು ನೆಪಕ್ಕೆ ಆಚರಿಸಿದೆ ರಂಗ ಕಲಾವಿದರು, ರಂಗಾಸಕ್ತರು, ರಂಗಾಭಿಮಾನಿಗಳು ಸರ್ಕಾರವನ್ನು ಒತ್ತಾಯಿಸಿ ಈ ನಾಟ್ಯಮಂದಿರವನ್ನು ಉಳಿಸಬೇಕಿದೆ. ಕೂಡಲೇ ಜಿಲ್ಲಾಡಳಿತ ಇತ್ತ ಗಮನ ಹರಿಸಬೇಕೆಂದು ಈ ವೇದಿಕೆಯ ಮುಖಾಂತರ ಮನವಿ ಮಾಡಿದರು.
ಈ ಸಂದರ್ಭದ ಸುಭಾಸ ಕನ್ನೂರ, ಪರ್ತಕತ್ರ ಪರಶುರಾಮ ಶಿವಶರಣ, ಶಿವಾನಂದ ದುದ್ದಗಿ, ರಜಾಕ ಕಾಖಂಡಕಿ, ಕಲಾವಿದ ಅಮೋಘಸಿದ್ದ ಆಜೂರ ಇನ್ನಿತರರು ಇದ್ದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವ ನಾಳೆ
ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಕೋಶವು 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ “ಸ್ವಾತಂತ್ರ್ಯದ ಅಮೃತ ಮಹೋತ್ಸವ” ಎಂಬ ವಿಶೇಷ ಕಾರ್ಯಕ್ರಮವನ್ನು ಮಾ.28ರಂದು ಬೆಳಿಗ್ಗೆ 10 ಗಂಟೆಗೆ ವಿವಿಯ ಕನ್ನಡ ಸಭಾ ಭವನದಲ್ಲಿ ಹಮ್ಮಿಕೊಂಡಿದೆ.
ಈ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಮಹಿಳಾ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಉಪನ್ಯಾಸಕ ಹರ್ಷವರ್ಧನ್ ಶೀಲವಂತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಹಿಳಾ ವಿವಿಯ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮಹಿಳಾ ವಿವಿಯ ಕುಲಸಚಿವೆ ಪ್ರೊ.ಆರ್.ಸುನಂದಮ್ಮ, ರಾಷ್ಟ್ರೀಯ ಸೇವಾ ಯೋಜನೆ ಕೋಶದ ಸಂಯೋಜನಾ ಅಧಿಕಾರಿ ಪ್ರೊ.ನಾಮದೇವ್ ಗೌಡ, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಲರು, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಭಾಗವಹಿಸಲಿದ್ದಾರೆ.
ಯುಜಿಸಿ-ನೆಟ್/ಕೆ-ಸೆಟ್-2021 ಪರೀಕ್ಷೆಗೆ ಸಿದ್ಧತೆ
ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ಕೋಚಿಂಗ್ ಅಕಾಡೆಮಿಯು ಯುಜಿಸಿ-ನೆಟ್/ಕೆ-ಸೆಟ್-2021 ಪರೀಕ್ಷೆಗೆ ಸಿದ್ಧತೆ ಮಾಡುತ್ತಿರುವ ರಾಜ್ಯದ ಎಲ್ಲಾ ಅಭ್ಯರ್ಥಿಗಳಿಗಾಗಿ ಸಾಮಾನ್ಯ ಪತ್ರಿಕೆ-1 ವಿಷಯಕ್ಕೆ ಸಂಬಂಧಿಸಿದಂತೆ ಮಾ.29ರಿಂದ ಏ.9 ರವರೆಗೆ ಉಚಿತ ಆನ್ಲೈನ್ ಲೈವ್ ತರಗತಿಗಳನ್ನು ನಡೆಸಲು ಆಯೋಜಿಸಿದೆ.
ಪ್ರತಿದಿನ ಬೆಳಿಗ್ಗೆ 8ರಿಂದ 10ಗಂಟೆಯವರೆಗೆ ಹಾಗೂ ಸಾಯಂಕಾಲ 6ರಿಂದ 8ಗಂಟೆಯವರೆಗೆ ಪ್ರತಿದಿನ ಒಟ್ಟು ಎರಡು ತರಗತಿಗಳು ನಡೆಯಲಿದ್ದು, ರಾಜ್ಯದ ಎಲ್ಲ ಅಭ್ಯರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು. ತರಗತಿಗಳನ್ನು ಪ್ರತಿದಿನ ಯುಟ್ಯೂಬ್/ ಫೇಸ್ಬುಕ್ ಲೈವ್ನಿಂದ ನಡೆಸಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಈ ಗೂಗಲ್ ಫಾರಂ ಲಿಂಕ್: https://forms.gle/ix594hL7N4seu3rw5 ಮೂಲಕ ತರಗತಿಗಳಿಗೆ ನೊಂದಾಯಿಸಿಕೊಳ್ಳಬಹುದು ಎಂದು ಸ್ಪರ್ಧಾತ್ಮಕ ಪರೀಕ್ಷಾ ಕೋಚಿಂಗ್ ಅಕಾಡೆಮಿ ಸಂಯೋಜಕ ಡಾ. ಪ್ರಕಾಶ.ಕೆ.ಬಡಿಗೇರ ಈ ಮೂಲಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Friday, March 26, 2021
ಜಿಲ್ಲೆಯ ಬ್ಯಾಂಕ್ ಗಳ ವಾರ್ಷಿಕ ಸಾಲ ಯೋಜನೆ ಬಿಡುಗಡೆ
ವಿಜಯಪುರ: 2021-22ನೇ ಸಾಲಿನ ರೂ .8040.27 ಕೋಟಿ ರೂ ಹಣಕಾಸಿನ ವಿನಿಯೋಗ ಹೊಂದಿರುವ ಎಲ್ಲಾ ಬ್ಯಾಂಕರ್ಗಳಿಗೆ ವಾರ್ಷಿಕ ಸಾಲ ಯೋಜನೆ (ಎಸ್ಸಿಪಿ) ಅನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ್ ರೆಡ್ಡಿ ಬಿಡುಗಡೆಗೊಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಡಿಎಲ್ಸಿಸಿ ಸಭೆಯಲ್ಲಿ ಬಿಡುಗಡೆ ಮಾಡಿದ ಸಾಲ ಯೋಜನೆಯಡಿ 5932.72 ಕೋಟಿ ರೂ(73.79%) ಕೃಷಿ, 865.85 ಕೋಟಿ ರೂ (10.77%) ಎಂಎಸ್ಎಂಇ ಮತ್ತು ಇತರ ಆದ್ಯತೆಯ ವಲಯಕ್ಕೆ ರೂ .418.50 ಕೋಟಿ ರೂ (5.20%). ಸಮಗ್ರ ಕೃಷಿ , ಸಂಬಂಧಿತ ಚಟುವಟಿಕೆಗಳಾದ ಡೈರಿ, ಕೋಳಿ, ಕುರಿ / ಮೇಕೆ, ಕೃಷಿ ಚಟುವಟಿಕೆಯ ಜೊತೆಗೆ ಕೃಷಿ ಚಟುವಟಿಕೆ, ತೋಟಗಾರಿಕೆ ಬೆಳೆಗಳಾದ ಲಿಂಬೆ, ದ್ರಾಕ್ಷಿ, ದಾಳಿಂಬೆ, ಪಿಎಂಎಫ್ಎಂಇ, ಎಐಎಫ್ ಅಡಿಯಲ್ಲಿ ಹಣಕಾಸು. ಆತ್ಮನಿರ್ಭರ ಭಾರತ್ ಅಡಿಯಲ್ಲಿ ಮುದ್ರಾ ಸಾಲಗಳು, ವಸತಿ ಸಾಲಗಳು ಇತ್ಯಾದಿಗಳು ಅನುದಾನ ಮೀಸಲಿಡಲಾಗಿದೆ ಎಂದರು.ಎಲ್ಲ ಸರ್ಕಾರಿ ಪ್ರಾಯೋಜಿತ ಯೋಜನೆಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಲು ಮತ್ತು ಜಿಲ್ಲಾ ಆಡಳಿತಕ್ಕೆ ಎಸ್ ಸಿ. ಎಸ್. ಟಿ ವಿದ್ಯಾರ್ಥಿಗಳ ಬಾಕಿ ಇರುವ ಆಧಾರ್ ಮ್ಯಾಪಿಂಗನ್ನು ಕಡಿಮೆ ಮಾಡಲು ಸಹಾಯ ಮಾಡುವಂತೆ ಬ್ಯಾಂಕ್ರುಗಳಿಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸೂಚಿಸಿದರು.
ಈ ಸಂದರ್ಭ ಲೀಡ್ ಬ್ಯಾಂಕ್ ಮ್ಯಾನೇಜರ್ ಸೋಮನಗೌಡ ಐನಾಪುರ, ಕೆನರಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ, ವೀರಪ್ಪ ಪತ್ರಾದ್, ವಿದ್ಯಾ ಗಣೇಶ್, ಡಿಡಿಎಂ, ನಬಾರ್ಡ್ ಮತ್ತು ವಿವಿಧ ಬ್ಯಾಂಕುಗಳ ಹಿರಿಯ ಅಧಿಕಾರಿಗಳು, ಕೈಗಾರಿಕಾ ಸಂಘಗಳ ಪ್ರತಿನಿಧಿಗಳು ಎಸ್ ವಿ ಪಾಟೀಲ್, ಗುಡ್ಡೋದಗಿ, ವಿಭಿನ್ನ ಇಲಾಖೆಗಳ ಅಧಿಕಾರಿಗಳು ಇದ್ದರು.