Friday, September 3, 2021

ರಾಜ್ಯಮಟ್ಟದ ಸಾಹಿತ್ಯ ಶ್ರೀ ಪ್ರಶಸ್ತಿಗೆ ಡಾ.ಪೂರ್ಣಿಮಾ ಧಾಮಣ್ಣವರ ಭಾಜನ





 ಈ ದಿವಸ ವಾರ್ತೆ:

ವಿಜಯಪುರ: ರಾಜ್ಯ ಮಟ್ಟದ ಸಾಹಿತ್ಯ ಶ್ರೀ ಪ್ರಶಸ್ತಿಗೆ ಡಾ. ಪೂರ್ಣಿಮಾ ಧಾಮಣ್ಣವರ ಭಾಜನರಾಗಿದ್ದಾರೆ. ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಸನಾದಿ ಅಪ್ಪಣ್ಣ ಕಲಾಕಾರರ ಸಂಘ ರಾಜ್ಯ ಶಾಖೆ ಬೀಳಗಿ ಇವರ ಸಂಯುಕ್ತ ಆಶ್ರಯದಲ್ಲಿ ಸ್ವರ ಸಾಮ್ರಾಟ ಸನಾದಿ ಅಪ್ಪಣ್ಣ ಅವರ ೧೪೬ ನೇ ಜಯಂತಿ ಹಾಗೂ ೭೫ನೇ ಸ್ವಾತಂತ್ರö್ಯದ ಅಮೃತ ಮಹೋತ್ಸವ ಸಂಘದ ಬೆಳ್ಳಿ ಹಬ್ಬ  ಸಂಸ್ಕೃತಿಕ ಉತ್ಸವ ಸೆ.೯ ರಂದು ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಜ್ಯ / ರಾಷ್ಟç ಮಟ್ಟದ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಡಾ. ಪೂರ್ಣಿಮಾ ಧಾಮಣ್ಣವರ ಅವರಿಗೆ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments:

Post a Comment