Tuesday, February 23, 2021

ಭಾಗಿನ ಅರ್ಪಣೆಯ ಸಮಯದಲ್ಲಿ ಅವ್ಯವಸ್ಥೆ


ಮುದ್ದೇಬಿಹಾಳ:
ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದಲ್ಲಿ ಪ್ರಗತಿಪರ ರೈತರ ಜಮಿನಿಗೆ ಭೇಟಿ ನೀಡಿದ ನಂತರ ಜಲಪುರ ಗ್ರಾಮದ ಕೆರೆಗೆ ಭಾಗಿನ ಅರ್ಪಿಸಲು ಬಂದ ಸಚಿವರಿಗೆ ಭಾಗಿನ ಅರ್ಪಿಸಲು ಸರಿಯಾದ ವ್ಯವಸ್ಥೆ ಮಾಡಿರದ ಕಾರಣ ಸಂಕಷ್ಟ ಎದುರಾಯಿತು.
ಸೋಮವಾರದಿಂದಲೇ ಜಲಪುರ ಗ್ರಾಮದ ಕೆರೆ ಸುತ್ತಲೂ ಸ್ವಚ್ಛತೆ ಮಾಡುತ್ತಾ ಬಂದಿದ್ದರೂ ಸಚಿವರು ಭಾಗಿನ ಅರ್ಪಣೆಯ ಸಮಯದಲ್ಲಿ ಅವ್ಯವಸ್ಥೆ ಎದುರಾಯಿತು.
ಸೋಮವಾರದಿಂದಲೇ ಜಲಪುರ ಗ್ರಾಮದ ಕೆರೆ ಸುತ್ತಲೂ ಸ್ವಚ್ಛತೆ ಮಾಡುತ್ತಾ ಬಂದಿದ್ದರೂ ಸಚಿವರು ಭಾಗಿನ ಅರ್ಪಣೆಯ ಸಮಯದಲ್ಲಿ ಅವ್ಯವಸ್ಥೆ ಎದುರಾಯಿತು.
ಸಚಿವ ಬಿ.ಸಿ. ಪಾಟೀಲ ಕೆರೆಯ ಮೇಲಿನಿಂದಲೇ ಓರ್ವ ವ್ಯಕ್ತಿಯಿಂದ ಭಾಗಿನವನ್ನು ನೀಡಿ ಕೆರೆಗೆ ಅರ್ಪಿಸಲು ತಿಳಿಸಿ ಭಾಗಿನ ಅರ್ಪಣಾ ಕಾರ್ಯಕ್ರಮವನ್ನು ಮುಗಿಸಿದರು.
ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಶಾಸಕ ಹಾಗೂ ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ಅಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಸೇರಿದಂತೆ ಇತರರಿದ್ದರು.

No comments:

Post a Comment