Tuesday, April 29, 2025

30-04-2025 EE DIVASA KANNADA DAILY NEWS PAPER

ಜನ್ಮಭೂಮಿಯಲ್ಲಿ ಕರ್ನಾಟಕದ ಸಾಂಸ್ಕøತಿಕ ನಾಯಕ ಬಸವೇಶ್ವರ ಜಯಂತಿ ಉತ್ಸವ ವಚನ ಚಿಂತನ ಕಾರ್ಯಕ್ರಮಕ್ಕೆ ಸಚಿವ ಶಿವಾನಂದ ಪಾಟೀಲ ಚಾಲನೆ

ವಿಜಯಪುರ :  ಬಸವನಬಾಗೇವಾಡಿ ಅಭಿವೃದ್ದಿ ಪ್ರಾಧಿಕಾರದಿಂದ ವಿಶ್ವಗುರು, ಸಾಂಸ್ಕøತಿಕ ನಾಯಕ ಶ್ರೀ ಬಸವೇಶ್ವರ ಜಯಂತಿ ಅಂಗವಾಗಿ ಏ.30 ರಂದು ಬಸವನಬಾಗೇವಾಡಿ ಪಟ್ಟಣದಲ್ಲಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ, ಕೃಷಿ ಮಾರುಕಟ್ಟೆ, ಸಚಿವರಾದ ಶಿವಾನಂದ ಪಾಟೀಲ ಅವರು ಚಾಲನೆ ನೀಡಲಿದ್ದಾರೆ.

ಅಂದು ಬೆಳಿಗ್ಗೆ 7 ಗಂಟೆಗೆ ಶ್ರೀ ವಿರಕ್ತಮಠದಿಂದ ಶ್ರೀ ಬಸವೇಶ್ವರ ದೇವಸ್ಥಾನದ ವರೆಗೆ  ಶ್ರೀ ಬಸವೇಶ್ವರ ಮೂರ್ತಿ ಮೆರವಣಿಗೆ, 7-30ಕ್ಕೆ ಬಸವನಬಾಗೇವಾಡಿಯ ವಿರಕ್ತಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳಿಂದ ಪಟಸ್ಥಳ ಧ್ವಜಾರೋಹಣ, ಬೆಳಿಗ್ಗೆ 9-30ಕ್ಕೆ ಶ್ರೀ ಬಸವೇಶ್ವರ ದೇವಸ್ಥಾನದಿಂದ ಬಸವ ಜನ್ಮ ಸ್ಮಾರಕದ ವರೆಗೆ ಮೆರವಣಿಗೆ, ಬೆಳಿಗ್ಗೆ 10-30ಕ್ಕೆ ಸಾಂಸ್ಕøತಿಕ ನಾಯಕ ವಿಶ್ವಗುರು ಶ್ರೀ ಬಾಲಬಸವೇಶ್ವರ ತೊಟ್ಟಿಲು ಹಾಗೂ ನಾಮಕರಣ ಸಮಾರಂಭ ನಡೆಯಲಿದೆ.

ಸಂಜೆ 5 ಗಂಟೆಗೆ ನೆಡಯಲಿರುವ ವಚನ ಚಿಂತನ ಕಾರ್ಯಕ್ರಮಕ್ಕೆ ಬಸವನಬಾಗೇವಾಡಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಸಚಿವರು ಚಾಲನೆ ನೀಡಲಿದ್ದಾರೆ.

ಬಸವನಬಾಗೇವಾಡಿ ವಿರಕ್ತ ಮಠದ ಶ್ರೀಸಿದ್ಧಲಿಂಗ ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆಯಲಿರುವ ವಚನ ಚಿಂತನ ಕಾರ್ಯಕ್ರಮದಲ್ಲಿ ದೇವರಹಿಪ್ಪರಗಿ ಶಾಸಕರಾದ ರಾಜುಗೌಡ ಪಾಟೀಲ, ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಶ್ರೀ ಬಸವೇಶ್ವರರ ಸೇವಾ ಸಮಿತಿ ಅಧ್ಯಕ್ಷರಾದ ಈರಣ್ಣ ಚ ಪಟ್ಟಣಶೆಟ್ಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಜಿಲ್ಲಾಧಿಕಾರಿ ಭೂಬಾಲನ್, ಜಿ.ಪಂ. ಸಿಇಒ ರಿಷಿ ಆನಂದ, ತಾಲೂಕ ದಂಡಾಧಿಕಾರಿ ವೈ.ಎಸ್.ಸೋಮನಕಟ್ಟಿ, ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.

ತಾಳಿಕೋಟೆಯ ಜೆ.ಎಸ್.ಜಿ. ಪೌಂಡೇಶನ್ ಕಾರ್ಯದರ್ಶಿ ಶ್ರೀಕಾಂತ ಪತ್ತಾರ ಉಪನ್ಯಾಸ ನೀಡಲಿದ್ದಾರೆ. ಕಲಾವಿದರಾದ ವಿರೇಶ ವಾಲಿ, ಸಾಕ್ಷಿ ಹಿರೇಮಠ ತಂಡದವರಿಂದ ವಚನ ಸಂಗೀತ ಕಾರ್ಯಕ್ರಮ ನಡೆಯಲಿದೆ. ಲಕ್ಷ್ಮೀ ತೇರದಾಳಮಠ ಇವರಿಂದ ವಚನ ನೃತ್ಯ ರೂಪಕ ಪ್ರದರ್ಶನ ನಡೆಯಲಿದೆ.

ರಾತ್ರಿ 9-30ಕ್ಕೆ ಶ್ರೀಬಸವೇಶ್ವರರ ಅಲಂಕೃತ ಪಲ್ಲಕ್ಕಿ, ಶ್ರೀಬಸವೇಶ್ವರರ ಭಾವಚಿತ್ರದ ಮೆರವಣಿಗೆ ನಡೆಯಲಿದೆ ಎಂದು ಬಸವನಬಾಗೇವಾಡಿ ಅಭಿವೃದ್ದಿ ಪ್ರಾಧಿಕಾರದ ಆಯುಕ್ತರಾದ ಮಹದೇವ ಮುರಗಿ ತಿಳಿಸಿದ್ದಾರೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

Monday, April 28, 2025

ಏ.29 ಹಾಗೂ 30 ರವರೆಗೆ ಹೊನಗನಹಳ್ಳಿಯಲ್ಲಿ ಜಾತ್ರೆ

ವಿಜಯಪುರ: ತಾಲೂಕಿನ ಹೊನಗನಹಳ್ಳಿ ಗ್ರಾಮದಲ್ಲಿ ಸಂಗಣ್ಣ ಅಜ್ಜನವರು ನಿರ್ಮಿಸಿದ ಬ್ರಹ್ಮಾನಂದ ಆಶ್ರಮದ ವೀರಭದ್ರೇಶ್ವರ, ಕಾಳಿಕಾದೇವಿ ಹಾಗೂ ಬಸವೇಶ್ವರ ದೇವಸ್ಥಾನದ ಜಾತ್ರೆ ಈಗಾಗಲೇ ಆರಂಭಗೊಂಡಿದ್ದು, ಎ. 30ರ ವರೆಗೆ ನಡೆಯಲಿದೆ. ನಿತ್ಯ ಸಂಜೆ 7ಕ್ಕೆ ಮಾದೇವ ಶಾಸ್ತ್ರಿಗಳಿಂದ ಶ್ರೀಗುರು ವಚನದಿಂದ ಅಧಿಕ ಸುಧೆಯುಂಟೆ ಪ್ರವಚನ ನಡೆಯಲಿದ್ದು, ನಂತರ ಪ್ರಸಾದ ವಿತರಣೆ ಜರುಗಲಿದೆ. ಏ. 29 ರಂದು ಸಂಗಣ್ಣಜ್ಜ ಮತ್ತು ಶಾರದಾ ಅವರ 50ನೇ ವರ್ಷದ ವಿವಾಹ ವಾರ್ಷಿಕೋತ್ಸವದಂಗವಾಗಿ ಮರು ವಿವಾಹ ಕಾರ್ಯಕ್ರಮ ನಡೆಯಲಿದೆ. ಹಿರೇಆಸಂಗಿಯ ಅಭಿನವ ಅಖಂಡೇಶ್ವರ ಮುತ್ಯಾನವರು ಅಧ್ಯಕ್ಷತೆ ವಹಿಸುವರು. ಬಾಡಗಿ ಹಿರೇಮಠದ ಬುಕ್ಕಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಬಾಡಗಿಯ ಶಿವಯ್ಯ ಹಿರೇಮಠ, ಸಂಗಯ್ಯ ಹಿರೇಮಠ, ಕಾಖಂಡಕಿಯ ಕಾಶಿನಾಥ ಗುರುಗಳು ಹಾಗೂ ಆಹೇರಿ-ಶಿವಣಗಿ ಯಲ್ಲಾಲಿಂಗ ಆಶ್ರಮದ ಸಂಜು ಮಹಾರಾಜರು ಉಪಸ್ಥಿತಿ ಮತ್ತು ಸ್ಥಳೀಯ ಚಂದ್ರಶೇಖರಯ್ಯ ಮಠಪತಿ ಹಾಗೂ ಎಸ್.ಡಿ. ಕುಮಾನಿ ಜ್ಯೋತಿ ಬೆಳಗಿಸಲಿದ್ದಾರೆ. ಏ. 30 ರಂದು ಬೆಳಗ್ಗೆ 6ಕ್ಕೆ ರುದ್ರಾಭಿಷೇಕ, 8ಕ್ಕೆ ಕುಂಭಮೇಳ, ಪಲ್ಲಕ್ಕಿ ಉತ್ಸವ, ಗೋ ಪೂಜೆ, ಎತ್ತುಗಳ ಮೆರವಣಿಗೆ ಪುರವಂತರ ಸೇವೆಯೊಂದಿಗೆ ಗಂಗಸ್ಥಳ ನೆರವೇರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮರಳಿ ಆಶ್ರಮಕ್ಕೆ ಬರಲಿದೆ. ಮಧ್ಯಾಹ್ನ 2ಕ್ಕೆ ಅನ್ನಸಂತರ್ಪಣೆ, ಸಂಜೆ 4ಕ್ಕೆ ಪ್ರವಚನ, ಆಶೀರ್ವಚನ ಹಾಗೂ ಮಹಾಮಂಗಳಾರತಿ ಮತ್ತು ರಾತ್ರಿ 10ಕ್ಕೆ ಭಜನೆ ನಡೆಯಲಿದೆ ಎಂದು ಆಶ್ರಮದ ಸಮಿತಿ ಪ್ರಕಟಣೆ ತಿಳಿಸಿದೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

ಯತ್ನಾಳ ವಿರುದ್ಧ ಒಮ್ಮೆ ಸ್ಪರ್ಧಿಸುವ ಇರಾದೆ ಇದೆ : ಸಚಿವ ಶಿವಾನಂದ ಪಾಟೀಲ

ವಿಜಯಪುರ : ಕೆಲ ದಿನಗಳ ಹಿಂದೆ ಅಣ್ಣ ಬಸವಣ್ಣನವರ ಕುರಿತು ಅಪಮಾನಕರ ರೀತಿ ಮಾತನಾಡಿದ್ದ ಹುಚ್ಚು ಮನಸ್ಥಿತಿಯ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಇದೀಗ ಇಸ್ಲಾಂ ಧರ್ಮೀಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತೆ ಪ್ರವಾದಿ ಮಹಮ್ಮದ್ ಪೈಗಂಭರ ಕುರಿತು  ಅವಮಾನಕರ ಮಾತನಾಡಿದ್ದಾರೆ ಎಂದು ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶ್ರೀ ಶಿವಾನಂದ ಪಾಟೀಲ ಅವರು ವಾಗ್ದಾಳಿ ನಡೆಸಿದರು.

ಸೋಮವಾರ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ  ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಜಂಟಿ ಆಕ್ಷನ್‌ ಕಮಿಟಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಬೃಹತ್‌ ಪ್ರತಿಭಟನಾ ವೇದಿಕೆಯಲ್ಲಿ ಮಾತನಾಡಿದ ಸಚಿವರು, ನಗರದ ಜನತೆ ನೀಡಿರುವ ಅಧಿಕಾರವನ್ನು ಸದ್ಬಳಕೆ ಮಾಡಿಕೊಳ್ಳದೆ ಸಮಾಜದಲ್ಲಿ ಜಾತಿ ಹೆಸರಿನಲ್ಲಿ ವಿಷಬೀಜ ಬಿತ್ತುವ ಕೆಲಸ ನಡೆಸಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.

ಜಿಲ್ಲೆಯ ಜನತೆ ಸಚಿವ : ಯತ್ನಾಳ ಅವರನ್ನು ಶಾಸಕ, ಸಂಸದ, ಕೇಂದ್ರ ಸಚಿವರನ್ನಾಗಿ ಮಾಡಿದೆ. ದೇವರು ಎಲ್ಲವನ್ನೂ ಕೊಟ್ಟರೂ ಇವರು ಹಾಳು ಮಾಡಿಕೊಂಡಿದ್ದಾರೆ. ಇಂಥ ವರ್ತನೆಯ ಕಾರಣಕ್ಕೆ ಅವರ ಪಕ್ಷದಿಂದಲೂ ಹೊರ ಹಾಕಿಸಿಕೊಂಡರೂ ಬುದ್ದ ಬಂದಿಲ್ಲ. ಸಮಾಜ ಒಡೆಯುವ ಮನಸ್ಥಿತಿಯ ಹೇಳಿಕೆ ನೀಡುತ್ತಿರುವ ಯತ್ನಾಳಗೆ ಈ ಬೃಹತ್ ಹೋರಾಟದ ಮ‌ೂಲಕ ಈ ವೇದಿಕೆ ಸ್ಪಷ್ಟ ಎಚ್ಚರಿಕೆ ನೀಡಿದೆ. ಇನ್ನಾದರೂ ಮನುಷ್ಯತ್ವ ಇರಿಸಿಕೊಂಡು ಬದಲಾವಣೆಗೆ ದೇವರು ಬುದ್ದಿ ಕೊಡಲಿ ಎಂದರು.

 ಆಕಾಶಕ್ಕೆ ಉಗಿದರೆ ಆತನ ಮುಖಕ್ಕೇ ಬೀಳುತ್ತದೆ ಎಂಬ ಪರಿಜ್ಞಾನ ಇಲ್ಲದ ವ್ಯಕ್ತಿ ಎಂದು ಶಾಸಕ ಯತ್ನಾಳ ವಿರುದ್ಧ ಟೀಕಾ ಪ್ರಹಾರ ನಡೆಸಿದ ಸಚಿವರು,ಒಮ್ಮೆ ಆತನ ವಿರುದ್ದ ಸ್ಪರ್ಧೆ ಮಾಡಿ ಬುದ್ಧಿ ಕಲಿಸುವ ಇಚ್ಛೆ ಇದೆ ಎಂದರು.

ಯತ್ನಾಳ ವರ್ತನೆ  ಸಹಿಸದೇ ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಿದೆ. ಇಡೀ ರಾಜ್ಯದ  ಜನರು ಯತ್ನಾಳಗೆ ಪಾಠ ಕಲಿಸಬೇಕಿದೆ. ಯಾವುದೇ ಪಕ್ಷದ ವ್ಯಕ್ತಿ ಇದ್ದತೂ ಯತ್ನಾಳ ರೀತಿ ಮಾತನಾಡಬಾರದು.

ಭಾರತ ನಮ್ಮ‌ ಮನೆ ನಮ್ಮನ್ನು ಕೆಡಿಸೋಕೆ ಜಾತಿ ವಿಷ ಬೀಜ ಬಿತ್ತುತ್ತಾರೆ, ಇಂಥ ವ್ಯಕ್ತಿಗಳ ಕುರಿತು ಎಚ್ಚತವಾಗಿರಬೇಕು. ಪೆಹೆಲ್ಗಾಮ್‌ ಘಟನೆಯನ್ನು ಖಂಡಿಸಿದ ಸಚಿವರು, ಜನರೆಲ್ಲರೂ ದೇಶದ ಪರವಾಗಿದ್ದಾರೆ. ಉಗ್ರರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ನಮ್ಮೆಲ್ಲರ ಬೆಂಬಲ ಇದೆ ಎಂದರು.

ಮುಸ್ಲಿಂ ಧರ್ಮಗುರು ತನ್ವೀರ ಪೀರಾ, ಮನಗೂಳಿ ವಿರಕ್ತ ಮಠದ ವಿರತೀಶಾನಂದ ಶ್ರೀಗಳು, ಜೈನಾಪುರದ ಸಿದ್ಧಲಿಂಗ ಶ್ರೀಗಳು, ಶಾಸಕರಾದ ಯಶವಂತರಾಯಗೌಡ ಪಾಟೀಲ, ವಿಠ್ಠಲ ಕಟಕಧೊಂಡ, ಅಶೋಕ ಮನಗೂಳಿ, ವಿಜಯಾನಂದ ಕಾಶಪ್ಪನವರ, ಸುನಿಲಗೌಡ ಪಾಟೀಲ, ಮಾಜಿ ಶಾಸಕ ರಾಜು ಆಲಗೂರ ಇತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

ಜ್ಞಾನೋತ್ಸವದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಶ್ರದ್ಧೆ, ಬದ್ಧತೆ ಇದ್ದರೆ ಸಾಧನೆ ಸಾಧ್ಯ : ಡಾ.ಕಾಪಸೆ

ವಿಜಯಪುರ : ಶೈಕ್ಷಣಿಕ ಹಂತದಲ್ಲಿ ವಿದ್ಯಾರ್ಥಿಗಳು ಬದ್ಧತೆ, ಶ್ರದ್ಧೆಯಿಂದ ಅಧ್ಯಯನ ಮಾಡಿದಲ್ಲಿ ಭವಿಷ್ಯದಲ್ಲಿ ನಿಶ್ಚಿತ ಗುರಿ ಈಡೇರಿಸಿಕೊಳ್ಳಲು, ನಿರೀಕ್ಷಿತ ಸಾಧನೆ ಮಾಡಲು ಸಾಧ್ಯ ಎಂದು ನಗರದ ಎಸ್.ಎಸ್.ಬಿ ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ. ಮಹೇಂದ್ರ ಕಾಪಸೆ ಅಭಿಪ್ರಾಯಪಟ್ಟರು.

ನಗರದ ಪ್ರತಿಷ್ಟಿತ ಶೈಕ್ಷಣಿಕ ಸಂಸ್ಥೆಯಾದ ಶ್ರೀಶರಣಬಸವೇಶ್ವರ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಜ್ಞಾನೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,  2024-25ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿರುವ 24 ವಿದ್ಯಾರ್ಥಿಗಳು  ಮತ್ತು ಎಇಇ ಪರೀಕ್ಷೆಯಲ್ಲಿ ನಾಲ್ವರು ಸಾಧಕ ವಿದ್ಯಾರ್ಥಿಗಳು, ಸಾಧಕ ಮಕ್ಕಳ ಪೋಷಕರು, ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದ ಅವರು, ಗುರಿ ಸಾಧಿಸುವ ಛಲ ಇದ್ದವರಿಗೆ ಅಂದುಕೊಂಡುದನ್ನು ಪಡೆಯುವುದು ಅಸಾಧ್ಯವೇನಲ್ಲ. ಆದರೆ ಇದಕ್ಕಾಗಿ ಸತತ ಪರಿಶ್ರಮ, ಬದ್ಧತೆ, ಶ್ರದ್ಧೆ ಬೇಕು ಎಂದು ಕಿವಿಮಾತು ಹೇಳಿದರು.
ಸಂಸ್ಥೆಯ ಕಾರ್ಯಕಾರಿ  ನಿರ್ದೇಶಕಿ ಸಂಪ್ರದಾ ಪಾಟೀಲ ಮಾತನಾಡಿ, ಬಲಿಷ್ಠ ಭಾರತ ನಿರ್ಮಾಣ ಮಾಡುವುದು ಪ್ರಸಕ್ತ ಸಂದರ್ಭದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿ ಇಬ್ಬರಿಂಧ ಮಾತ್ರ ಸಾಧ್ಯವಿದೆ. ಶ್ರದ್ಧೆಯ ಶಿಷ್ಯ, ಮಾದರಿ ಗುರು ಇದ್ದಲ್ಲಿ ನೈತಿಕ ಮೌಲ್ಯಗಳ, ಸುಶೀಕ್ಷಕ್ಷಿತ ಮಾನವೀಯ ಸಮಾಜ ನಿರ್ಮಾಣ ಸಾಧ್ಯ ಎಂದರು.
 ಸಂಸ್ಥೆಯ ಸಲಹಾ ಸಮಿತಿಯ ಅಧ್ಯಕ್ಷರಾದ ಎಸ್.ಕೆ.ಪಾಟೀಲ, ಫಾರ್ಮಸಿ ಕಾಲೇಜಿನ ಪ್ರಾಚಾರ್ಯರಾದ ಶಿವಕುಮಾರ ಹೂಗಾರ, ನರ್ಸಿಂಗ್ ಕಾಲೇಜಿನ ಪ್ರಾಚಾರ್ಯರಾದ ಈರಣ್ಣ ಶಿರಾಳಶೆಟ್ಟಿ ಮತ್ತು ಪಿ.ಯು.ಸಿ ಕಾಲೇಜಿ£ ಪ್ರಾಚಾರ್ಯರಾದ ಎಸ್.ಪ್ರಜ್ವಲ್ ವೇದಿಕೆ ಮೇಲೆ ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

ಬೇಸಿಗೆಗಾಲದ ಬಾಯಾರಿಕೆ ಕಡಿಮೆಗೊಳಿಸಿದ ತುಳಸಿಗಿರೀಶ ಫೌಂಡೇಶನ್ ಮತ್ತು ಶ್ರೀ ಅಸೋಸಿಯೇಷನ್

 ವಿಜಯಪುರ: ಈ ಬಿರು ಬೇಸಿಗೆಯಲ್ಲಿ ಸೂರ್ಯನ ತಾಪಮಾನಕ್ಕೆ ಬೆವರು ಹರಿಯುತ್ತಿದೆ‌. ಬಾಯಾರಿಕೆ ಕೂಡಾ ಸಾಮಾನ್ಯವಾಗಿದೆ. ವಿಜಯಪುರ ನಗರದಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಶ್ರೀ ತುಳಸಿಗಿರೀಶ ಫೌಂಡೇಶನ್ ಮತ್ತು  ಶ್ರೀ ಶಿವಾನಂದ ಕೇಲೂರ್ ಅಧ್ಯಕ್ಷರು ಶ್ರೀ ಅಸೋಸಿಯೇಷನ್ ಅವರ ಸಂಯುಕ್ತಾಶ್ರಯದಲ್ಲಿ ವಿಜಯಪುರ ನಗರದ ಪ್ರಮುಖ ಸ್ಥಳಗಳಾದ ಬಂಜಾರ ಕ್ರಾಸ್, ಗೋದಾವರಿ ಸರ್ಕಲ್, ಅಂಬೇಡ್ಕರ್ ಸರ್ಕಲ್ , ಜಡ್.ಪಿ. ಕ್ರಾಸ್ ಹಾಗೂ ಗೋಡಬೋಳೆ ಮಾಲಾದಲ್ಲಿ ಕುಡಿಯುವ ನೀರಿನ ಅರವಟಿಗೆಗಳನ್ನು ಅಳವಡಿಸಿದ್ದಾರೆ. 

ಅರವಟಿಗೆಗಳನ್ನು ಅಳವಡಿಸಿ ಸಾಂಕೇತಿಕವಾಗಿ ಚಾಲನೆ ನೀಡಿ ಮಾತನಾಡಿದ ಶ್ರೀ ತುಳಸಿಗಿರೀಶ ಫೌಂಡೇಶನ್ ಅಧ್ಯಕ್ಷರಾದ ಡಾ.ಬಾಬುರಾಜೇಂದ್ರ ನಾಯಿಕ ಮಾತನಾಡಿ ಬೇಸಿಗೆಗಾಲದಲ್ಲಿ ಆದಷ್ಟು ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಬೇಕು, ಹೆಚ್ಚು ನೀರಿನ ಅಂಶ ಇರುವ ತರಕಾರಿ ಹಣ್ಣು ತಿನ್ನಬೇಕು, ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಇವತ್ತು ಈ ನೀರಿನ ಅರವಟಿಗೆಗಳನ್ನು ಅಳವಡಿಸಿದ್ದೇವೆ ಮತ್ತು ಅವುಗಳನ್ನು ನಿರ್ವಹಿಸುತ್ತೇವೆ ಎಂದರು. 

ಈ ಸಂದರ್ಭದಲ್ಲಿ ಲೋಕಾಯುಕ್ತ ಸಿ.ಪಿ.ಐಗಳಾದ ಆನಂದ ಠಕ್ಕಣ್ಣವರ ಅರವಟಿ ಸ್ಥಾಪಿಸಿದ್ದನ್ನು ಶ್ಲಾಘಿಸಿ ಜನರು ನೀರಿನ ಮಹತ್ವ ಅರಿತು ಉಪಯೋಗಿಸಬೇಕು ಎಂದರು.ಇದೆ ಸಂದರ್ಭದಲ್ಲಿ ಫೌಂಡೇಶನ್ ಸದಸ್ಯರಾದ ಅಪ್ಪು ರಾಠೋಡ್, ಸಂಜು ಪವಾರ, ನಿವೃತ್ತ ಪಿ.ಡಬ್ಲೂ.ಡಿ ಇಂಜಿನಿಯರ್ ನಾಮದೇವ ರಾಠೋಡ್, ರವಿ ರಾಠೋಡ್, ರಾಕೇಶ ರಜಪೂತ, ಸುನೀಲ್ ರಾಠೋಡ್, ಅನಿಲ ಶಿಂಧೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

ರಾಷ್ಟ್ರ ಕವಿ ಕುವೆಂಪು ರಚಿಸಿದ ಸಾಹಿತ್ಯ ಸರ್ವಶ್ರೇಷ್ಠವಾಗಿದೆ : ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಚನ್ನಪ್ಪ ಕಟ್ಟಿ ಅಭಿಪ್ರಾಯ

ವಿಜಯಪುರ: ಸಮಾಜದಲ್ಲಿ ಅಂಚಿಗೆ ತಳ್ಳಲಾಗಿದ್ದ ಮಹಿಳೆಯರು ಮತ್ತು ರೈತರನ್ನು ಕೇಂದ್ರವನ್ನಾಗಿಟ್ಟುಕೊಂಡು ರಾಷ್ಟ್ರ ಕವಿ ಕುವೆಂಪು ರಚಿಸಿದ ಸಾಹಿತ್ಯ ಸರ್ವಶ್ರೇಷ್ಠವಾಗಿದೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಚನ್ನಪ್ಪ ಕಟ್ಟಿ ಅಭಿಪ್ರಾಯಪಟ್ಟರು.

ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ವತಿಯಿಂದ  ಹಮ್ಮಿಕೊಂಡಿರುವ ಎರಡು ದಿನಗಳ ‘ಕುವೆಂಪು ಓದು’  ಕಮ್ಮಟವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಪಠ್ಯವು  ಶ್ರೇಷ್ಠವಾಗಿದ್ದಲ್ಲಿ ಅದು ಮತ್ತೇ ಮತ್ತೇ ಓದಿಸಿಕೊಳ್ಳುತ್ತದೆ. ಕುವೆಂಪು ರಚಿಸಿದ ಸಾಹಿತ್ಯ ಮತ್ತೆ ಮತ್ತೆ  ಓದಿಸಿಕೊಳ್ಳುವುದರಿಂದ ಆ ಕವಿ ಜೀವಂತವಾಗಿರುತ್ತಾನೆ.  ರಾಷ್ಟ್ರಕವಿ ಜಿ. ಎಸ್ ಶಿವರುದ್ರಪ್ಪನವರ ಕವಿತೆಯ ಸಾಲುಗಳಂತೆ ಕವಿಗೆ ವಯಸ್ಸಾಗುತ್ತದೆ ಆದರೆ ಕಾವ್ಯಕ್ಕೆ ಅಲ್ಲಾ ಎಂದರು.

ಕುವೆಂಪು ಅವರು ಕನ್ನಡ ಕವಿಗಳಲ್ಲಿಯೇ  ಅಗ್ರಗಣ್ಯರು. ಅವರ ಸುದೀರ್ಘವಾದ ಸಾಹಿತ್ಯ ಮಾನವೀಯ ಮೌಲ್ಯವನ್ನು ಸಾರುತ್ತದೆ. ಮನುಷ್ಯ  ಮನುಷತ್ವವನ್ನು ಹೊಂದಲು ಕುವೆಂಪುರವರ ಸಾಹಿತ್ಯ ಓದಲೇಬೇಕು ಎಂದು ಅವರು ಸಲಹೆ ನೀಡಿದರು.

ಮುಖ್ಯ ಅತಿಥಿಗಳಾಗಿದ್ದ ಸಿಂಡಿಕೇಟ್ ಸದಸ್ಯ ಡಾ.ನಟರಾಜ ಬೂದಾಳು ಅವರು ಮಾತನಾಡಿ, ಕುವೆಂಪು ಅವರ ಸಾಹಿತ್ಯ  ಮಾನವೀಯ ಒಲುಮೆಯ ಆಗರ. ಈ ನಿಟ್ಟಿನಲ್ಲಿ ಮಹಿಳೆಯರನ್ನು ಕುವೆಂಪುರವರ ಓದಿಗೆ ಸ್ಪಂದಿಸುವುದು ಅತ್ಯಂತ ಅವಶ್ಯಕವಾಗಿದೆ. ಓದು ಸಹಜವಾದ ಓದಾಗಿರದೇ ವ್ಯಕ್ತಿತ್ವ ವಿಕಸನವನ್ನು ಮಾಡುವ ಓದಾಗಬೇಕು. ಅಂತಹ ಓದನ್ನು ಕುವೆಂಪುರವರ ಸಾಹಿತ್ಯದಿಂದ ಪಡೆಯಬಹುದಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಂಗಾಮಿ ಕುಲಪತಿ ಪ್ರೊ.ಶಾಂತಾದೇವಿ ಟಿ. ಅವರು, ಕುವೆಂಪುರವರು ಆತ್ಮವಿಶ್ವಾಸ ತುಂಬುವ ಕವಿಗಳು. ಯಾವ ವ್ಯಕ್ತಿಯ ಆತ್ಮ ವಿಕಾಸ ಬೆಳೆಸುತ್ತದೆಯೋ ಮೌಲ್ಯವನ್ನು ಪ್ರತಿಪಾದಿಸುತ್ತಿದೆಯೋ, ನಂಬಿಕೆಯನ್ನು ದೃಡಗೊಳಿಸುತ್ತದೆಯೋ, ಸಾಮಾಜಿಕ ಪ್ರಸ್ತುತತೆಯನ್ನು ಬಿಂಬಿಸುತ್ತದೆಯೋ ಅದು ನಿಜವಾದ ಸಾಹಿತ್ಯ. ಅಂತಹ ಸಾಹಿತ್ಯವನ್ನು ನೀಡಿದವರು ಕುವೆಂಪುರವರು. ಮಾನವನ ವೈಜ್ಞಾನಿಕ ಜ್ಞಾನ ಸಾರ್ವತ್ರಿಕ ಸತ್ಯವನ್ನು  ಪ್ರತಿಪಾದಿಸುವ ಸಾಹಿತ್ಯವೇ ಜಗತ್ತಿನ  ಶ್ರೇಷ್ಠ ಸಾಹಿತ್ಯ.  ಇಂತಹ ಸಾಹಿತ್ಯವನ್ನು ನೀಡಿದ ಕುವೆಂಪು ಅವರು ಕನ್ನಡದ ಜ್ಞಾನ ಬೆಳವಣಿಗೆಯ ಬೆಳಕಾಗಿ ನಿಂತವರು ಎಂದು ತಿಳಿಸಿದರು. 

ನಾಡಗೀತೆಯನ್ನು ನೀಡಿದ ವಿಶ್ವಕವಿಗಳಲ್ಲೇ ಶ್ರೇಷ್ಠವಾದ ಕುವೆಂಪುರವರ ಸಾಹಿತ್ಯ ‘ಮನುಜ ಮತ ವಿಶ್ವಪಥ’ ಎಂಬ ಸಂದೇಶವನ್ನು ಸಾರುತ್ತದೆ. ವೈಜ್ಞಾನಿಕತೆ ಮತ್ತು ವೈಚಾರಿಕತೆ ಕುವೆಂಪುರವರ ಮಹತ್ವದ ಸಂದೇಶಗಳು. ಮೊಬೈಲ್ ಸಂದೇಶಗಳನ್ನು ಬಿಟ್ಟು ಪುಸ್ತಕ ಓದುವ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು. ಆ ಮೂಲಕ ವಿದ್ಯಾರ್ಥಿಗಳು ಜ್ಞಾನದ ಬೆಳಕನ್ನು ಹೊಂದಬೇಕೆಂದು  ಕುಲಸಚಿವ ಶಂಕರಗೌಡ ಸೋಮನಾಳ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.  

ಪ್ರಾಧಿಕಾರದ ಸದಸ್ಯ ಸಂಚಾಲಕ ಎಸ್.ಗಂಗಾಧರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ  ಡಾ.ರಾಮಲಿಂಗಪ್ಪ ಟಿ.ಬೇಗೂರು ಕಮ್ಮಟದ ರೂಪರೇಷಗಳನ್ನು ವಿವರಿಸಿದರು. ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ  ಡಾ.ಎಂ.ನಾಗರಾಜ ಸ್ವಾಗತಿಸಿದರು. ಕುಮಾರಿ. ನಂದಿನಿ ಕಾರ್ಯಕ್ರಮ ನಿರೂಪಿಸಿದರು.  ವೆಂಕಟಲಕ್ಷ್ಮೀ ವಂದಿಸಿದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

Friday, April 18, 2025

ಸ್ಮಾರಕಗಳನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ

 ವಿಜಯಪುರ : ಜಿಲ್ಲೆಯು  ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಅತಿ ಹೆಚ್ಚು ಸ್ಮಾರಕಗಳನ್ನು ಹೊಂದಿರುವ ಜಿಲ್ಲೆ. ಈ ಐತಿಹಾಸಿಕ

ಸ್ಮಾರಕಗಳನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಭಾರತೀಯ ಪುರಾತತ್ವ ಇಲಾಖೆಯ ಸಮೀಕ್ಷೇ ಸಂರಕ್ಷಣಾ ಸಹಾಯಕ ವಿಜಯ್ ಕುಮಾರ್ ಹೇಳಿದರು. 

ಬಿ ಎಲ್ ಈ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆ ಸಿ ಪಿ ವಿಜ್ಞಾನ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕದ ಸಂಯುಕ್ತಾಶ್ರಯದಲ್ಲಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮೈಸೂರು ಇವರ ಸಹಯೋಗದಲ್ಲಿ ಎಸ್ ಬಿ ಕಲಾ ಮತ್ತು ಕೆಸಿಪೀ ವಿಜ್ಞಾನ ಎನ್ಎಸ್ಎಸ್ ವಿದ್ಯಾರ್ಥಿಗಳೊಂದಿಗೆ ವಿಜಯಪುರ ನಗರದ ತರವಿ ದೇವಸ್ಥಾನದಿಂದ ಸಂಗೀತ್ ಮಹಲ್ ವರೆಗೆ ಪಾರಂಪರಿಕ ನಡಿಗೆ ಸ್ಮಾರಕಗಳ ಸ್ವಚ್ಛತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 

ಈ ಪಾರಂಪರಿಕ ನಡಿಗೆಯಲ್ಲಿ ವಿದ್ಯಾರ್ಥಿಗಳು '"ಐತಿಹಾಸಿಕ ಸ್ಮಾರಕ ಉಳಿಸಿ ಸಂಸ್ಕೃತಿ ಬೆಳೆಸಿ " "ಪ್ರತಿ ಕಲ್ಲು ಒಂದೊಂದು ಕಥೆ ಹೇಳುತ್ತವೆ " ಎಂದು ಸ್ಲೋಗನ್ ಗಳನ್ನು ಹೇಳಿದರು. 

 ಮಹಾವಿದ್ಯಾಲಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ವಿಜಯಪುರ ಐತಿಹಾಸಿಕ ಸ್ಥಳಗಳಿಗೆ ಪ್ರಸಿದ್ಧ ತಾಣ. 

ವಿಜಯಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ಸ್ಮಾರಕಗಳು ಐತಿಹಾಸಿಕ ಸ್ಥಳಗಳು ಇವೆ. ಈ ಈ ಎಲ್ಲ ಐತಿಹಾಸಿಕ ಸ್ಥಳಗಳ ಮತ್ತು ಸ್ಮಾರಕಗಳ ರಕ್ಷಣೆ ನಮ್ಮೆಲ್ಲರ ಹೊಣೆ. ಪ್ರತಿಕಲ್ಲು ಒಂದೊಂದು ಕಥೆ ಹೇಳುತ್ತದೆ ಎಂದು ವಿಜಯ್ ಕುಮಾರ್ ಅವರು ಹೇಳಿದರು

ಈ ಸಂದರ್ಭದಲ್ಲಿ ಪುರಾತತ್ವ ಇಲಾಖೆ ವಾಸ್ತು ಸಂಗ್ರಹಾಲಯಗಳ ನಿರ್ದೇಶಕರಾದ ಸ್ಮೀತಾ ರೆಡ್ಡಿ ಅವರು ಎನ್ಎಸ್ಎಸ್ ವಿದ್ಯಾರ್ಥಿಗಳಿಗೆ ಐತಿಹಾಸಿಕ ಸ್ಮಾರಕಗಳ ರಕ್ಷಣೆಯ ಮಹತ್ವವನ್ನು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರವಾಸೋದ್ಯಮ ಸಲಹೆಗಾರರ ಅನಿಲ್ ಬಣಜಿಗೆ, ಮತ್ತು ಎಸ್ ಬೀ ಕಲಾ ಮತ್ತು ಕೆ ಸಿ ಪಿ  ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾಕ್ಟರ್ ಆರ್ ಎಂ ಮಿರ್ದೆ ಹಾಗೂ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕದ ಮುಖ್ಯಸ್ಥರಾದ ಡಾ. ತರುಣಮ ಜಬೀನ್ ಖಾನ್ ಮತ್ತು ಮಿಲನ್ ರಾಠೋಡ್ ಹಾಗೂ ಎಲ್ಲ ಎನ್ ಎಸ್ ಎಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

ಸಿಎಂ ಪದಕ ಪುರಸ್ಕೃತ ಶಿವಾನಂದ ಕಟ್ಟಿಮನಿಗೆ ಸನ್ಮಾನ

 ವಿಜಯಪುರ: ಮುಖ್ಯಮಂತ್ರಿ ಪದಕ ಪಡೆದು ವಿಜಯಪುರ ಜಿಲ್ಲೆಯ ಕೀರ್ತಿ ಹೆಚ್ಚಿಸಿದ ಸಂಚಾರಿ ಪೊಲೀಸ್ ಠಾಣೆಯ ಎಎಸ್‌ಐ ಶಿವಾನಂದ ಕಟ್ಟಿಮನಿ ಅವರಿಗೆ ಪರಿಸರ ಜಾಗೃತಿ ವೇದಿಕೆ ಹಾಗೂ ಶಿವಶರಣ ಶೈಕ್ಷಣಿಕ, ಗ್ರಾಮೀಣಾಭಿವೃದ್ಧಿ ಹಾಗೂ ವಿವಿಧೋದ್ಧೇಶಗಳ ಸಂಸ್ಥೆ ವತಿಯಿಂದ ಇಲ್ಲಿನ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷ ಅಂಬಾದಾಸ ಜೋಶಿ ಮಾತನಾಡಿ, ಸರ್ಕಾರಿ ಸೇವೆಯಲ್ಲಿದ್ದುಕೊಂಡು ಸಮಾಜಮುಖಿ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಜನಮಾನಸ ಪ್ರೀತಿಗೆ ಪಾತ್ರರಾದ ಶಿವಾನಂದ ಕಟ್ಟಿಮನಿ ಅವರು ಮುಖ್ಯಮಂತ್ರಿಗಳ ಪೊಲೀಸ್ ಪದಕ ಗೌರವಕ್ಕೆ ಭಾಜನರಾಗಿರುವುದು ನಮ್ಮ ವಿಜಯಪುರ ಜಿಲ್ಲೆಗೆ ಹೆಮ್ಮೆಯ ಸಂಗತಿ. ಕಟ್ಟಿಮನಿಯವರಿಗೆ ಇನ್ನಷ್ಟು ಹೆಚ್ಚಿನ ಗೌರವ ಆದರಗಳು ಸಿಗಲಿ ಎಂದು ಹಾರೈಸಿದರು.

ಎಎಸ್‌ಐ ವಾಗ್ಮೋರೆ, ಕಲಾವಿದ ಭೀಮಣ್ಣ ಭಜಂತ್ರಿ, ರಾಷ್ಟಿçÃಯ ಸಂಶೋಧನಾ ವೇದಿಕೆ ಅಧ್ಯಕ್ಷ ಲಾಯಪ್ಪ ಇಂಗಳೆ, ಶೈಕ್ಷಣಿಕ, ಗ್ರಾಮೀಣಾಭಿವೃದ್ಧಿ ಹಾಗೂ ವಿವಿಧೋದ್ಧೇಶಗಳ ಸಂಸ್ಥೆ ಅಧ್ಯಕ್ಷ ಕಲ್ಲಪ್ಪ ಶಿವಶರಣ, ಹೋರಾಟಗಾರ ಬಸವಕುಮಾರ ಕಾಂಬಳೆ, ಪತ್ರಕರ್ತರಾದ ಉಮೇಶ ಶಿವಶರಣ, ಭೀಮರಾಯ ಕುಂಟೋಜಿ, ಶ್ರೀಕಾಂತ ಮೆಂಡೇಗಾರ, ಸುಬ್ರಮಣ್ಯ ಭಜಂತ್ರಿ ಇದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

19-04-2025 EE DIVASA KANNADA DAILY NEWS PAPER

ಹುತಾತ್ಮ ಯೋಧನಿಗೆ ಸಚಿವ ಶಿವಾನಂದ ಪಾಟೀಲ ಅಂತಿಮ ನಮನ

ವಿಜಯಪುರ : ಕರ್ತವ್ಯದಲ್ಲಿ ಇದ್ದಾಗಲೇ ಹೃದಯಾಘಾತವಾಗಿ ನಿಧನರಾದ ಜಿಲ್ಲೆಯ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿ.ಆರ್.ಪಿ.ಎಫ್.) ಯೋಧ ಶ್ರೀಶೈಲ ಹಿರೋಡಗಿ ಅವರ ಪಾರ್ಥಿವ ಶರೀರಕ್ಕೆ ಜವಳಿ, ಕಬ್ಬು, ಸಕ್ಕರೆ, ಜವಳಿ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಅವರು ಅಂತಿಮ ನಮನ ಸಲ್ಲಿಸಿದ್ದಾರೆ.

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ 54 ವರ್ಷದ ಯೋಧ ಶ್ರೀಶೈಲ ಯಮನಪ್ಪ ಹಿರೋಡಗಿ ಇವರು ಡಿಸೆಂಬರ್ 1990 ರಿಂದ ಸಿ.ಆರ್.ಪಿ.ಎಫ್. ಯೋಧರಾಗಿ ಸೇವೆ ಸಲ್ಲಿಸುತ್ತಿದ್ದರು. ಇದೀಗ ಹವಾಲ್ದಾರ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಹೈದರಾಬಾದ್, ಪಂಜಾಬ್, ತ್ರಿಪುರ, ಜಮ್ಮು-ಕಾಶ್ಮೀರ, ಅಸ್ಸಾಂ, ಮಣಿಪುರ ಸೇರಿದಂತೆ ವಿವಿಧ ಕಡೆ ಸೇವೆ ಸಲ್ಲಿಸಿದ್ದರು. 

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕರ್ತವ್ಯದಲ್ಲಿ ಇದ್ದಾಗ ಯೋಧ ಶ್ರೀಶೈಲ ಅವರು ಗುರುವಾರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು.

ಶುಕ್ರವಾರ ಮಧ್ಯಾಹ್ನ ಹುತಾತ್ಮ ಯೋಧ ಶ್ರೀಶೈಲ ಅವರ ಪಾರ್ಥಿವ ಶರೀರ ಹುಟ್ಡೂರು ಉಕ್ಕಲಿ ಗ್ರಾಮಕ್ಕೆ ಆಗಮಿಸಿತು. ವಿಷಯ ತಿಳಿಯುತ್ತಲೇ ಪೂರ್ವನಿರ್ಧಾರಿತ ಕಾರ್ಯಕ್ರಮ ರದ್ದುಪಡಿಸಿ ಉಕ್ಕಲಿ ಗ್ರಾಮಕ್ಕೆ ಧಾವಿಸಿದ ಸಚಿವರಾದ ಶಿವಾನಂದ ಪಾಟೀಲ ಅವರು, ಹುತಾತ್ಮ ಯೋಧ ಶ್ರೀಶೈಲ ಅವರ ಅಂತಿಮ ದರ್ಶನ ಪಡೆದು, ಪುಷ್ಪ ಗುಚ್ಚ ಇರಿಸಿ ಗೌರವ ಸಲ್ಲಿಸಿದರು.

ಬಳಿಕ ಹುತಾತ್ಮ ಯೋಧನ ಕುಟುಂಬಕ್ಕೆ ಸಾಂತ್ವನ ಹೇಳಿದ ಸಚಿವರು, ನನ್ನ ಕ್ಷೇತ್ರ ವ್ಯಾಪ್ತಿಯ ಉಕ್ಕಲಿ ಗ್ರಾಮದ ವೀರಯೋಧ ಶ್ರೀಶೈಲ ಅವರ ಅಕಾಲಿಕ ಅಗಲಿಕೆ ತೀವ್ರ ನೋವು ತಂದಿದೆ ಎಂದು ಸಂತಾಪ ವ್ಯಕ್ತಪಡಿಸಿದರು.

ಹುತಾತ್ಮ ಯೋಧರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ. ಯೋಧರ ಅವಲಂಬಿತರು, ಕುಟುಂಬ  ಸದಸ್ಯರಿಗೆ ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ನೀಡಲಿ ಎಂದು ಸಂತಾಪ ವ್ಯಕ್ತಪಡಿಸಿದರು.

ಹುತಾತ್ಮ ಯೋಧ ಶ್ರೀಶೈಲ ಅವರು ತಂದೆ ಯಮನಪ್ಪ, ತಾಯಿ ಕಮಲಾಬಾಯಿ, ಪತ್ನಿ ಶ್ರೀದೇವಿ, ಒಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

Monday, April 14, 2025

ಮೆರವಣಿಗೆ: ಗಮನ ಸೆಳೆದ ಬೊಂಬೆಗಳು ಮತ್ತು ಸಂಸತ್ತಿನ ಸ್ತಬ್ದ ಚಿತ್ರ

ಸಿಂದಗಿ: ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಪಟ್ಟಣದಲ್ಲಿ ಸೋಮವಾರ ಭವ್ಯ ಮೆರವಣಿಗೆ ಜರುಗಿತು.  ಮೆರವಣಿಗೆಯಲ್ಲಿ ಮಹಾರಾಷ್ಟ್ರದ ನಾಶಿಕ್‌ನ ಡೋಲು ವಾದ್ಯಗಳು, ಗೊಂಬೆಗಳು, ಕಲಾ ತಂಡಗಳು ಮೆರವಣಿಗೆಯ ಕಳೆ ಹೆಚ್ಚಿಸಿತು. ನೀಲಿ ಧ್ವಜ, ಜಯಘೋಷ ಎಲ್ಲೆಡೆ ಮೊಳಗಿದ್ದು ವಿಶೇಷವಾಗಿದ್ದವು.

ಜನಾಕರ್ಷಿಸಿತ ಸ್ತಭ್ದ ಚಿತ್ರ: ಮೆರವಣಿಗೆಯಲ್ಲಿ ಸಂಸತ್ತ ರೂಪಕ ವಾಹನದಲ್ಲಿ ಡಾ.ಅಂಬೇಡ್ಕರ್ ಅವರ ಕುಳಿತ ಬಂಗಿಯ ಭಾವಚಿತ್ರವನ್ನು ಇಟ್ಟು ಅಲಂಕರಿಸಲಾಗಿತ್ತು. ನಾನಾ ಸಂಘಟನೆಗಳ ಪದಾಧಿಕಾರಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.       ಅಂಬೇಡ್ಕರ್ ಜಯಂತಿ ಅಂಗವಾಗಿ ಸಿಂದಗಿಯಲ್ಲಿ ನಡೆದ ಮೆರವಣಿಗೆಯಲ್ಲಿ ಮಹಿಳೆಯರು, ಯುವಕರು ಡಿ.ಜೆ ಸದ್ದಿಗೆ ಕುಣಿದು ಕುಪ್ಪಳಿಸಿದರು.

ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ, ದಲಿತ ಸಂಘಟನೆಗಳ ಪ್ರಮುಖರಾದ ಚಂದ್ರಕಾಂತ ಸಿಂಗೆ, ಶ್ರೀಕಾಂತ ಸೋಮಜಾಳ, ಪರುಶರಾಮ ಕಾಂಬಳೆ, ರವಿ ಹೋಳಿ, ಮಲ್ಲು ಕೂಚಬಾಳ, ದತ್ತು ನಾಲ್ಕಮಾನ, ರಮೇಶ ನಡುವಿನಕೇರಿ, ಶ್ರೀನಿವಾಸ ಓಲೇಕಾರ, ರಾವುತ ತಳಕೇರಿ, ಶ್ರೀಶೈಲ ಜಾಲವಾದಿ, ರಾಕೇಶ ಕಾಂಬಳೆ, ಶಿವಾನಂದ ಆಲಮೇಲ, ನಿಂಗರಾಜ, ಹರ್ಷವರ್ಧನ ಪೂಜಾರಿ ಸೇರಿದಂತೆ ಅಭಿಮಾನಿಗಳು ಇದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

ಇಂದಿನಿಂದ ಗರಗದ ಮಡಿವಾಳೇಶ್ವರ ಪುರಾಣ ಆರಂಭ

ಬ್ರಹ್ಮದೇವನಮಡು : ಸಿಂದಗಿ ತಾಲೂಕು ಸುಕ್ಷೇತ್ರ ಹೊನ್ನಳ್ಳಿ - ಬ್ರಹ್ಮದೇವನಮಡು ಗ್ರಾಮದಲ್ಲಿ ಕಲ್ಶಾಣದೇಶ್ವರ ಜಾತ್ರೆ ಅಂಗವಾಗಿ ಏ.15ರಿಂದ ಏ.29ರವರೆಗೆ ಪ್ರತಿದಿನ ಸಂಜೆ 7-30ರಿಂದ ಪವಾಡ ಪುರಷ ಗರಗದ ಶ್ರೀ ಮಡಿವಾಳೇಶ್ವರ ಮಹಾಪುರಾಣವನ್ನು ರಟಕಲ್ ದ ಮಾಣಿಕ್ಶ ಶ್ರೀ ಪ್ರಶಸ್ತಿ ಪುರಸ್ಕ್ರತ್ ಪ್ರವಚನಕಾರ ಶಂಭುಲಿಂಗ ಹಿರೇಮಠ ಶಾಸ್ತ್ರಿಗಳು ನಡೆಸಿಕೊಡುವರು. ಪಡದಳ್ಳಿಯ ಸಿದ್ದಯ್ಶಸ್ವಾಮಿ ಸಂಗೀತ ಸೇವೆ ನೀಡಲಿದ್ದಾರೆ.ಚಡಚಣದ ಮಹಾಂತೇಶ ಟಾಕಳಿ ತಬಲಾ ಸಾಥ್ ನೀಡುವರು. ಯಡ್ರಾಮಿ ತಾಲೂಕಿನ ಸುಕ್ಷೇತ್ರ ಮಾಗಣಗೇರಿಯ ಬೃಹನ್ಮಠದ ಶಿವಾಚಾಯ೯ ರತ್ನ ಪ್ರಶಸ್ತಿ ಪುರಸ್ಕ್ರತ ಡಾ.ವಿಶ್ವರಾಧ್ಶ ಶಿವಾಚಾಯ೯ರು, ಕಡಕೋಳ ಮಡಿವಾಳೇಶ್ವರ ಸಂಸ್ಥಾನ ಮಠದ ಡಾ.ರುದ್ರಮುನಿ ಶಿವಾಚಾಯ೯ರು,ಖಾನಾಪೂರ ಮಡಿವಾಳೇಶ್ವರ ಮಠದ ಮೌನಯೋಗಿ ಕಲ್ಶಾಣದಯ್ಶ ಸ್ವಾಮೀಜಿ,ಕುರಳಗೇರಾ ಸಜ್ಜಾದೆ ದಗಾ೯ದ ಹಜರತ್ ಸಯ್ಶದ್ ಹುಸೇನಪಾಷಾ ಮೋದಿನಪಾಷಾ ದಗಾ೯,ಚಾಮನಾಳದ ಬಸಯ್ಶ ಸ್ವಾಮೀಜಿ,ವಡಗೇರಿಯ ವೀರಯ್ಶ ಸ್ವಾಮೀಜಿ ಸಾನಿಧ್ಶವಹಿಸುವರು. ಶಾಸಕ ಅಶೋಕ ಮನಗೂಳಿ ಪುರಾಣ ಕಾಯ೯ಕ್ರಮ ಉದ್ಘಾಟಿಸಲಿದ್ದಾರೆ. ಖಾನಾಪುರದ ಸಂಗನಗೌಡ ಪಾಟೀಲ, ಜಿಪಂ ಮಾಜಿ ಉಪಾಧ್ಶಕ್ಷ ಎಂ.ಎನ್.ಸಾಲಿ ಜ್ಶೋತಿಬೆಳಗಿಸುವರು. ಗ್ರಾಪಂ ಅಧ್ಶಕ್ಷ ಉಮಾಜಿ ಚವ್ಹಾಣ ಅಧ್ಶಕ್ಷತೆ ವಹಿಸುವರು. ರಾಮರಾವ್ ದೇಶಮುಖ ಪೋಟು ಪೂಜೆ ಮಾಡಲಿದ್ದಾರೆ. ಯುವ ಮುಖಂಡ ಯಂಕನಗೌಡ ಪಾಟೀಲ, ಎಪಿಎಂಸಿ ಮಾಜಿ ಅಧ್ಶಕ್ಷ ಹಳ್ಳೆಪ್ಪಗೌಡ ಚೌಧರಿ ಪುರಾಣ ಪೂಜೆ ಮಾಡುವರು. ಕೆಇಬಿ ಎಇಇ ಚಂದ್ರಕಾಂತ ನಾಯಕ,ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ,ಕಲಕೇರಿ ಠಾಣೆಯ ಪಿಎಸ್ಐ ಸುರೇಶ ಮಂಟೂರ,ಬಾಪುಗೌಡ ದೇಶಮುಖ ಕಲಕೇರಿ,ಕಾಂಗ್ರೆಸ್ ಮುಖಂಡ ರವಿರಾಜ ದೇವರಮನಿ, ಮುಖಂಡ ಮುರಗೆಪ್ಪಗೌಡ ರದ್ದೇವಾಡಗಿ,ಶಿವು ಹತ್ತಿ,ವಿಜುಗೌಡ ಬಿರಾದಾರ,ಬಸವರಾಜ ಮಾರಲಭಾವಿ,ಮಾಜಿ ಗ್ರಾಪಂ ಅಧ್ಶಕ್ಷ ಸಂಗನಗೌಡ ಬಿರಾದಾರ ಕರವಿನಾಳ,ಬಸನಗೌಡ ಪಾಟೀಲ,ಬಸನಗೌಡ ಉಳ್ಳೆಸೂರ,ಸೋಮಶೇಖರ ಚಿರಲದಿನ್ನಿ,ಪತ್ರಕತ೯ ಮಲ್ಲಿಕಾಜು೯ನ ಕೆಂಭಾವಿ,ಗಾಪಂ ಉಪಾಧ್ಶಕ್ಷೆ ಯಾಸ್ಮಿನಬಾನು ನಾಯ್ಕೋಡಿ,ಗ್ರಾಪಂ ಪಿಡಿಒ ಎಸ್.ಸಿ.ನಾಯ್ಕೋಡಿ,ಸ್ಶಯದ್ ಮುಲ್ಲಾ,ಮೇಘರಾಜ ಚವ್ಹಾಣ,ಮುಖಂಡ ಶ್ರೀಶೈಲ್ ಜಾಲವಾದಿ ಮುಖ್ಶಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಶ್ರೀಮಠದ ಪೀಠಾಧ್ಶಕ್ಷ ಕಲ್ಶಾಣದಯ್ಶ ವೀರಘಂಟಯ್ಶ ಗದ್ದುಗೆಮಠ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

15-04-2025 EE DIVASA KANNADA DAILY NEWS PAPER

Sunday, April 13, 2025

"ಗೌಡರನ್ನು ಉಳಿಸಿದ ಬಾಬಾಸಾಹೇಬ್"

ಈ ದಿವಸ ಕನ್ನಡ‌ ದಿನ ಪತ್ರಿಕೆ ವರಿದಿ

 ಇನ್ನೂ ತಾಲೂಕು ಆಗಿರದ ಅವಿಭಜಿತ ಜಿಲ್ಲೆಯಾದ ವಿಜಯಪುರದ ಬೀಳಗಿಯಲ್ಲಿ ಜೋಡಿ ಕೊಲೆ ಸಂಭವಿಸಿದ್ದವು.! ತೋಳ ಹಳ್ಳಕ್ಕೆ ಬಿದ್ದಾಗ ಆಳಿಗೊಂದೊಂದು ಕಲ್ಲು ಎಂಬಂತೆ ಹೇಗಾದರೂ ಮಾಡಿ ಸೋಮನಗೌಡರನ್ನು ಮಖಾಡೆ ಮಲಗಿಸಲೇಬೇಕೆಂದು ಒಂದು ಗುಂಪು ತಯ್ಯಾರಾಗಿತ್ತು.!!  ಆ ಕಾಲದ ವಿಜಯಪುರದ ಕ್ರಿಮಿನಲ್ ನ್ಯಾಯವಾದಿ 

ಅಂದಾನೆಪ್ಪ  ಸಿ ಅಂಗಡಿಯವರುನ್ನೂ ಭೇಟಾಯಾದರೂ ಅವರು ಕೈ ಚೆಲ್ಲಿ ಕೂತುಬಿಟ್ಟರು! ಇಡೀ ಜಿಲ್ಲೆ ಆ ಡಬಲ್ ಮರ್ಡರ್ ಸುದ್ದಿ ಕೇಳಿ ಬೆಚ್ಚಿ ಬಿದ್ದಿತ್ತು..! ಪ್ರಖ್ಯಾತ ಬ್ಯಾರಿಸ್ಟರ್ ವಕೀಲರೊಬ್ಬರನ್ನು ತಂದು ವಾದಿಸಿ ಈ ಕೇಸ್ ನ ಗೆಲ್ಲಿಸಿಕೊಡಲೇಬೇಕೆಂದು ಪ್ರತಿಷ್ಟೆಯಿಂದ ಮತ್ತೊಂದು ಗುಂಪೂ ಸಹ ತಯ್ಯಾರಾಗಿ ವಿಜಯಪುರದ ಹೆಸರಾಂತ ಕ್ರಿಮಿನಲ್ ಲಾಯರ್ ಎ.ಸಿ ಅಂಗಡಿಯವರಿಗೆ ಒತ್ತಾಯ ಮಾಡಿದ್ದರು. ಆಗ ಇಡೀ ವಿಜಯಪುರ ಜಿಲ್ಲೆಯ ವಕೀಲರಿಗೆ ನೆನಪಾದದ್ದು ಭಾರತದ ಹಿರಿಯ ರಾಜನೀತಜ್ಞ , ಭಾರತದ ದಲಿತ ಜನಾಂಗದ ದಾಶ್ಯ ವಿಮೋಚನೆಯ ಹರಿಕಾರ, ಸ್ವ ಸಾಮರ್ಥ್ಯದಿಂದ ಪ್ರವರ್ಧಮಾನಕ್ಕೆ ಬಂದ ಮಹಾನುಭಾವ ಬಾಬಾ ಸಾಹೇಬ್ ಡಾ// ಬಿ.ಆರ್. ಅಂಬೇಡ್ಕರ್..! ವಿಜಯಪುರಕ್ಕೆ 1939 ರ ಸುಮಾರಿಗೆ ಬೀಳಗಿಯ ಜೋಡಿ ಕೊಲೆಯೊಂದರ ಕೇಸಿನ ನಿಮಿತ್ಯ ಸೋಮನಗೌಡ ಪಾಟೀಲರನ್ನು ತಮ್ಮ ಪ್ರಖಾಂಡ ಪಾಂಡಿತ್ಯದಿಂದ ರಕ್ಷಿಸಿ ಕೇಸು ಗೆಲ್ಲಿಸಿಕೊಟ್ಟಿರುವುದು ಐತಿಹಾಸಿಕ ದಾಖಲೆ ಎಂದೇ ಹೇಳಬೇಕಾಗುತ್ತದೆ. ಸ್ವತಹ ಎ.ಸಿ ಅಂಗಡಿಯವರೇ ಬಾಂಬೆಗೆ ಹೋಗಿ ಅಂಬೇಡ್ಕರ್ ರನ್ನು ಸಂಪರ್ಕಿಸಿ ವಿನಂತಿ ಮಾಡಿಕೊಂಡು ನೀವು ಬರಲೇಬೇಕು ಅದೆಷ್ಟು ಖರ್ಚಾದರೂ ಸರಿ ಎಂದು ಹೇಳಿ ನಿಗದಿತ ದಿನಾಂಕವನ್ನು ಬರೆದುಕೊಂಡು ವಿಜಯಪುರಕ್ಕೆ ಮರಳುತ್ತಾರೆ.

 ಅಂಗಡಿ ವಕೀಲರಿಗೆ ಬಾಬಾ ಸಾಹೇಬರು ಕರಾರು ಮಾಡಿದ್ದು ಒಂದೇ ..ನಾನು ಬರುತ್ತೇನೆ ಆದರೆ ಕೇಸು ಗೆಲ್ಲಿಸಿ ಕೊಟ್ಟ ಮೇಲೆ ನನ್ನ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಎಲ್ಲಾ ಜನರನ್ನು ನೀವು ಒಂದೆಡೆ ಸೇರಿಸಬೇಕು ನಾನು ಮಾತನಾಡಬೇಕಿದೆ ಎಂದು ಕರಾರು ಹಾಕುತ್ತಾರೆ ಇದಕ್ಕೆ ಅಂಗಡಿ ವಕೀಲರು ಯಾಕಾಗಲೊಲ್ಲದು ಸಾಹೇಬರೆ ಎಂದ್ಹೇಳಿ ತುಂಬಾ ಖುಷಿಯಿಂದಲೇ ಹಿಂದಿರುಗುತ್ತಾರೆ.

ವಿಜಯಪುರಕ್ಕೆ ಬಾಬಾ ಸಾಹೇಬ್ ಡಾ// ಬಿ ಆರ್ ಅಂಬೇಡ್ಕರರು ಆಗಮಿಸುತ್ತಾರೆ ಎಂದಾಗ... ಅಲ್ಲಿನ ಜನ ಸಂದಿಗೊಂದಿಗಳಿಂದ ದೂರದ ಊರುಗಳಿಂದ ಭಾವಾಪರವಶರಾಗಿ ಬಂದದ್ದನ್ನು ನೋಡಿದಾಗ ನನಗೆ ದಲಿತ ಕವಿ ಸಿದ್ದಲಿಂಗಯ್ಯನವರ ಕವಿತೆಯೊಂದು ನೆನಪಾಗುತ್ತದೆ.....

"ಕಪ್ಪು ಮುಖ ಬೆಳ್ಳಿ ಗಡ್ಡ ಉರಿಯುತಿರುವ ಕಣ್ಣುಗಳು 

ಹಗಲು ರಾತ್ರಿಗಳನು ಸೀಳಿ ನಿದ್ದೆಯನು ಒದ್ದರು

ಲಕ್ಷಾಂತರ ನಾಗರುಗಳು ಹುತ್ತ ಬಿಟ್ಟು ಬಂದಂತೆ ಊರ ತುಂಬ ಹರಿದರು 

ಪಾತಾಳಕೆ ಇಳಿದರು ಆಕಾಶಕೆ ನೆಗೆದರು 

ಬೀದಿಯಲ್ಲಿ ಗಲ್ಲಿಯಲ್ಲಿ ಬೇಲಿಮಳೆಯ ಮರೆಗಳಲ್ಲಿ ಯಜಮಾನರ ಹಟ್ಟೆಯಲ್ಲಿ ದನಿ ಕೂರುವ ಪಟ್ಟದಲ್ಲಿ

ಎಲ್ಲೆಲ್ಲೂ ನನ್ನ ಜನ ನೀರಿನಂತೆ ನಿಂತರು."

ಕವಿತೆಯ ಸಾಲುಗಳನ್ನು ಓದುತ್ತಿದ್ದರೆ ಮೈ ಜುಮ್ ಎನಿಸುತ್ತದೆ.! ಇದು ನಿಜವಾಗಲೂಬಹುದು ಎಂಬುದನ್ನು ಶ್ರೀಮಂತರು,ರಾಜಕಾರಣಿಗಳು,ಶೋಷಕರು,ಆಳುವ ವರ್ಗ ನೆನಪಿನಲ್ಲಿಟ್ಟುಕೊಂಡರೆ ಸಾಕು.! 

ದಿನಾಂಕ 12.02.1939 ಬಿಜಾಪುರದಲ್ಲಿ ಹರಿಜನರ ಬೃಹತ್ ಸಮ್ಮೇಳನ ಜರುಗಿದ್ದು ಚರಿತ್ರೆ ನಿರ್ಮಿಸಿದೆ. ಬಾಬಾಸಾಹೇಬರು ಬಂದ ದಿವಸದಿಂದ ಹಿಡಿದು ಮರುದಿನ ಕೋರ್ಟ್ ವ್ಯವಹಾರವು ಮುಗಿಯುವ ಪರ್ಯಂತ ಇಡೀ ಜಿಲ್ಲೆಯಿಂದ ಮೂಲೆ ಮೂಲೆಯಿಂದ ಗ್ರಾಮೀಣ ಪ್ರದೇಶದಿಂದ ಜನರು ಹರಿದು ಬಂದರು. ಹರಿದ ರುಮಾಲು ಹರಿದ ಅಂಗಿ, ದೋತರ 

ಉಟ್ಟುಕೊಂಡು, ಪ್ರತಿಯೊಬ್ಬರೂ ಬಗಲಲ್ಲಿ ಬುತ್ತಿಗಂಟು ಕಟ್ಟಿಕೊಂಡು ವಿಜಯಪುರದ ಐಬಿ ಸುತ ಮುತ್ತಲೂ ಊರ ತುಂಬೆಲ್ಲ ಜನ ನೆರೆದಿದ್ದನ್ನು ಕೇಳಿದರೂ ಸಾಕು ಪಾವನವಾದೆವೆಂದಿನಿಸುತ್ತದೆ.

ಮುಂದೆ ಅವರೆಲ್ಲರಿಗೂ ಸಮ್ಮೇಳನದ ಸ್ಥಳಕ್ಕೆ ಹೋಗುವ ನಿರ್ದೇಶನ ನೀಡಲಾಗುತ್ತದೆ ಡಾ// ಬಿ.ಆರ್. ಅಂಬೇಡ್ಕರ್ ಅವರು ವಿಜಯಪುರ ನಗರಕ್ಕೆ ಭೇಟಿ ನೀಡಿದ್ದು ಅವರು ಈ ನೆಲದಲ್ಲಿ ತಮ್ಮ ಹೆಜ್ಜೆ ಗುರುತು ಬಿಟ್ಟು ಹೋಗಿದ್ದನ್ನು ಕಂಡು, ಕೇಳಿ, ನೋಡಿದ ಹಿರಿಯರ ಮಾತು ಕೇಳಿ ಬಾಬಾ ಸಾಹೇಬರು ನಡೆದುಹೋದ ಪಾದದ ಕೆಳಗಿನ ಧೂಳನ್ನು ಜನ ಹಣೆಗೆ ಹಚ್ಚಿಕೊಳ್ಳಲು ದಲಿತ ಜನ ಈಗಲೂ ಸಿದ್ಧರಿದ್ದಾರೆ.!ಇದೇ ಮೊದಲು ಇದೇ ಕೊನೆಯ ಭೇಟಿ 1939 ರ ಕಾಲಘಟ್ಟದಲ್ಲಿ ಡಾಕ್ಟರ್ ಅಂಬೇಡ್ಕರ್ ರವರು ವಿಜಯಪುರಕ್ಕೆ ಸಹಜ ರೀತಿಯಲ್ಲಿ ಬಂದು ಹೋದದ್ದೇನಲ್ಲ ಅದೊಂದು ವಿಶೇಷ ಪ್ರಸಂಗವೆ ಎಂದು ಬಣ್ಣಿಸಬೇಕಾಗುತ್ತದೆ.ಆದರೆ ಅದು ಕೈಗೂಡಬೇಕಾದಲ್ಲಿ ಕನಿಷ್ಠ ಪಕ್ಷ 40 ರಿಂದ 50 ವರ್ಷ ಸಮಯ ಹಿಡಿಯಿತು. "ಬರುವದೇನುಂಟೊಮ್ಮೆ ಬರುವ ಕಾಲಕೆ ಬಹುದು, ಬಯಕೆ ಬರುವುದರ ಕಣ್ ಸನ್ನೆ ಕಾಣೋ" ಎಂಬ ಹಲಸಂಗಿ ಮಧುರಚೆನ್ನರ ಮಾತು ನೆನಪಿಗೆ ಬರುತ್ತದೆ. ಬೀಳಗಿ ಸೋಮನಗೌಡರ ಕೇಸಿನ ಸಲುವಾಗಿ ಖ್ಯಾತ ಅಂದಾನೆಪ್ಪ ಅಂಗಡಿಯಂತಹ ವಕೀಲರಂಥವರೆಲ್ಲರೂ ಕೈ ಚೆಲ್ಲಿ ಕೂತು ಅಂಬೇಡ್ಕರ್ ಅವರಿಗೆ ಸಂದರ್ಶಿಸಿದಾಗ 

ಬಾಬಾ ಸಾಹೇಬರು ತಮ್ಮ ಕಾರ್ಯಕ್ರಮ ಕುರಿತು ಕ್ಯಾಲೆಂಡರ್ ನೋಡಿ ಫೆಬ್ರವರಿ 12. 1939 ದಿನಾಂಕ ಬರೆದುಕೊಳ್ಳಿ . ನಾನು 11.2.1939 ರಂದು ಟ್ರೈನ್ ಮೂಲಕ ಸಂಜೆ ಅಲ್ಲಿಗೆ ಬರುವೆ ಮರುದಿನ ಪೂರ್ತಿ ಕೋರ್ಟನಲ್ಲಿ ವಾದ ಮಾಡುವುದು ಅಂದೇ ಸಾಯಂಕಾಲ ಹರಿಜನರ ಸಮ್ಮೇಳನದಲ್ಲಿ ಭಾಗವಹಿಸುವುದು.ಅಂದು ಬಾಬಾಸಾಹೇಬರು ನಿಂತು ಭಾಷಣ ಮಾಡಿದ ಸ್ಥಳವೆ.. ಇಂದಿನ ವಿಜಯಪುರದ ಅಂಬೇಡ್ಕರ್ ಮೂರ್ತಿ ಇದ್ದ ಸ್ಥಳ.!! 

ಹಾವಿನಾಳದ ಶಿವಪ್ಪ ಕಾಂಬಳೆ ಎಂಬ ಗಟ್ಟಿಗನಿಗೆ ಜನತಾವಾಣಿ ಪತ್ರಿಕೆಯನ್ನು ಅಂಬೇಡ್ಕರರು ತಪ್ಪದೇ ಕಳಿಸುತ್ತಿದ್ದರು ಎಂಬುದು ಉಲ್ಲೇಖನಾರ್ಹ ಒಂದು ಚಿಕ್ಕ ಘಟನೆಯಲ್ಲಾದ ಪರಿವರ್ತನೆ ಅದು ಎಂತಹ ಪರಿಣಾಮಕಾರಿ ಪ್ರಭಾವವನ್ನು ಬೀರುತ್ತದೆ ಎಂಬುದಕ್ಕೆ ಬಾಬಾ ಸಾಹೇಬರು ವಿಜಯಪುರಕ್ಕೆ ಭೇಟಿ ಕೊಟ್ಟ ಘಟನೆಯೇ ಸಾಕ್ಷಿ.ಡಾ// ಅಂಬೇಡ್ಕರ್ ಅವರಿಗೆ ಈ ಶಿವಪ್ಪ ಕಾಂಬಳೆಯವರ ಮೇಲೆ ಎಂತಹ ವಿಶ್ವಾಸ ಇತ್ತು ಎಂದರೆ ಅಂಬೇಡ್ಕರರು ಮುಂಬೈಯಿಂದ ಬರುವಾಗ ಅರಳಿಮರದ ಸಸಿಯನ್ನು ವಿಜಯಪುರಕ್ಕೆ ತಂದಿದ್ದರಂತೆ ಹೋಗುವಾಗ ಅಲ್ಲಪ್ಪ ಅವಧಿ ಮತ್ತು ಶಿವಪ್ಪ ಕಾಂಬಳೆ ಇವರಿಬ್ಬರನ್ನೇ ಕರೆದು ಅವರು ತಂದ ಸಸಿ ಇವರಿಗೆ ನೀಡಿ ಇದನ್ನು ಬೆಳೆಸಬೇಕೆಂದು ಹೇಳಿದ್ದರಂತೆ ಶಿವಪ್ಪ ಕಾಂಬಳೆ ಒಂದೆಡೆ ಹೀಗೆ ತಮ್ಮ ಅನುಭವ ಹಂಚಿಕೊಂಡಂತೆ ಅಂಬೇಡ್ಕರ್ ಅವರ ಪಿ.ಡಬ್ಲು.ಡಿ ಯ ಐ. ಬಿ ಯಲ್ಲಿ ಇಳಿದುಕೊಂಡಾಗ ಇಡೀ ರಾತ್ರಿ ಒಂದಿನಿತೂ ನಿದ್ದೆ ಮಾಡದೆ ಐಬಿ ಯ ಸುತ್ತಲೂ ಗಸ್ತು ತಿರುಗಿ ಅಂಬೇಡ್ಕರ್ ರನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿದ್ದು ಅದೆಂತಹ ಅಭಿಮಾನ ಎಂಬುದು ಸಾಬೀತಾಗುತ್ತದೆ.ಇನ್ನು ಎರಡನೆಯದಾಗಿ ಬರಡೋಲಕ್ಕೆ ಅವರನ್ನು ಕರೆ ತಂದಾಗ ಬರಡೋಲದ ಹಳ್ಳ ತುಂಬಿ ಬಂದು ಪ್ರವಾಹ ಉಂಟಾಗಿರುತ್ತದೆ ಅಂಬೇಡ್ಕರ್ ರನ್ನು ಸ್ವತಃ ತಮ್ಮ ಹೆಗಲ ಮೇಲೆ ಕೂಡಿಸಿಕೊಂಡು ಎದೆ ಮಟ್ಟಕ್ಕೆ ಹರಿಯುವ ಹಳ್ಳದ ನೀರಿನಲ್ಲೂ ಬಾಬಾ ಸಾಹೇಬರನ್ನು ಆ ಕಡೆಗೆ ದಾಟಿಸುತ್ತಾರೆಂಬ ಈ ಎರಡು ಪ್ರಸಂಗಗಳು ನಿಜವಾಗಲೂ ರೋಮಾಂಚನಕಾರಿ.

 ಅಂಬೇಡ್ಕರ್ ಅವರು ಒಂದೊಮ್ಮೆ ಇಂಡಿಗೂ ಬಂದು ಹರಿಜನರ ಕಾಲನೆಯ ಸಮೀಪದಲ್ಲಿ ನಿಂತು ಭಾಷಣ ಮಾಡಿದ್ದಾರೆಂದು ಕೆಲವರು ತಮ್ಮ ಅನುಭವವನ್ನು ನನ್ನ ಜೊತೆ ಹಂಚಿಕೊಂಡಿದ್ದಾರೆ.ಮುಂದೆ ಹಾವಿನಾಳಕ್ಕೆ ಹೋಗಬೇಕಾದರೂ ಕೂಡ ಅದು ಸಾಧ್ಯವಾಗುವುದಿಲ್ಲ ಏಕೆಂದರೆ ಗುಜರಾತಿಗೆ ಅರ್ಜಂಟಾಗಿ ಹೋಗಬೇಕಾದ ಪ್ರಸಂಗ ಉಂಟಾಗಿ ರೇವಪ್ಪ ಕಾಂಬಳೆ ಇವರ ಜೊತೆ ಮಾತಾಡಿ ಇಂಡಿಗೆ ಹೋಗಿ ರೈಲ್ವೆ ಮೂಲಕ ಅಂದೆ ಅಂದರೆ 13.2. 1939 ರಂದು ಮುಂಬೈಗೆ ಪ್ರಯಾಣ ಬೆಳೆಸುತ್ತಾರೆ.ಅಂಬೇಡ್ಕರ್ ಅವರು ಬಂದು ಹೋದ ಸಲವಾಗಿ ಅವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಅಂಬೇಡ್ಕರ್ ರನ್ನು ಹಾವಿನಾಳಕ್ಕೆ ಕರೆದುಕೊಂಡು ಹೋಗಲಾಗಲಿಲ್ಲವಲ್ಲ ಎಂಬ ನೋವು ಶಿವಪ್ಪ ಕಾಂಬಳೆ ಅವರಿಗೆ  ಉಂಟಾಗುತ್ತದೆ ಮುಂದೆ ಬಾಬಾ ಸಾಹೇಬರ ಹಿರಿಯ ಮಗ ಯಶವಂತರನ್ನು ಅಂಬೇಡ್ಕರ್ ಮಹಾಪರಿನಿರ್ವಾಣವಾದ ಎರಡು ವರ್ಷಗಳ ನಂತರ ಅಂದರೆ 1958 ರಲ್ಲಿ ಅವರನ್ನು ಕರೆತಂದು ತಮ್ಮ ಆಶಯ ಪೂರೈಸಿಕೊಂಡಿದ್ದಾರೆ ಎಂಬುದು ತಿಳಿದು ಬರುತ್ತದೆ.

ಇದೇ ಸಂದರ್ಭದಲ್ಲಿ ಅಂಬೇಡ್ಕರರು ಬೆಳಗಾವಿಯ ಕೆ. ಎಲ್. ಇ ಸೊಸೈಟಿಗೆ ಆಗಮಿಸಿದ ದಾಖಲೆಗಳಿವೆ , ಮುಂದೆ ದಿನಾಂಕ 8.8.1954 ರಂದು ಅಂಬೇಡ್ಕರರು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪ್ರಬಲವಾಗಿದ್ದ ಕೆ. ಜಿ.ಎಫ್. ಗೆ ಹೋದರು . ಅಲ್ಲಿ ಜನ ಅವರ ಕಾಲಿಗೆ ಬೀಳಲು ಸಾಲುಗಟ್ಟಿ ನಿಂತಿದ್ದರು.! ಗಟ್ಟಿಯಾಗಿ ಕಾಲು ಹಿಡಿದುಕೊಂಡರೂ ಕೂಡ. ಅದನ್ನು ಸಹಿಸದ ಅಂಬೇಡ್ಕರ್ ಅವರು ಯಾವ ಮೂಢನಂಬಿಕೆಯ ವಿರುದ್ಧ ನಾನು ಜೀವನಪೂರ್ತಿ  ಮಾತನಾಡಿಕೊಂಡು ಬಂದಿದ್ದೇನೆಯೋ ನೀವು ಅದನ್ನೇ ಮುಂದುವರಿಸುತ್ತಿದ್ದೀರಿ ಎಂಬ ಸಾತ್ವಿಕ ಕೋಪದೊಂದಿಗೆ ಕಾಲಿಗೆ ಬಿದ್ದವರನ್ನು ತರಾಟೆಗೆ ತೆಗೆದುಕೊಂಡು ಬೇಸರಗೊಂಡ ಬಾಬಾಸಾಹೇಬರು ಅಲ್ಲಿಂದ ಹೊರಟು ಬೆಂಗಳೂರಿಗೆ ಬಂದ ದಾಖಲೆಗಳು ಹೇಳುತ್ತವೆ.

ಲೇಖಕರು; ಪ್ರೊ.ಬಸವರಾಜ ಜಾಲವಾದಿ

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

Saturday, April 12, 2025

ಮನುಷ್ಯತ್ವ ಇರದ ಕಲೆ, ಸಾಹಿತ್ಯ, ಸಂಸ್ಕೃತಿ ಉತ್ಸವಗಳಿಗೆ ಅರ್ಥವಿಲ್ಲ: ಜಾಜಿ ಮಲ್ಲಿಗೆ ಕವಿ ಡಾ. ಸತ್ಯಾನಂದ ಪಾತ್ರೋಟ

ಈ ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ

 ವಿಜಯಪುರ: "ಮನುಷ್ಯ ಸಂಬಂಧಗಳ ಹುಡುಕಾಟವೇ ಸಾಂಸ್ಕೃತಿಕ ಆಂದೋಲನವಾಗಬೇಕು. ಮನುಷ್ಯತ್ವ ಇರದ ಕಲೆ, ಸಾಹಿತ್ಯ, ಸಂಸ್ಕೃತಿ ಉತ್ಸವಗಳಿಗೆ ಅರ್ಥವಿಲ್ಲ. ದೇಶವೆಂದರೆ ಬರಿ ಮಣ್ಣಲ್ಲ, ಕುರ್ಚಿಯಲ್ಲ ಮನುಷ್ಯರು. ನಾವು ಜಾತಿ-ಧರ್ಮಗಳ ಮಧ್ಯವರ್ತಿಗಳಾಗದೇ ಸತ್ಯದ ಮಧ್ಯವರ್ತಿಗಳಾಗಬೇಕು." ಎಂದು ಜಾಜಿ ಮಲ್ಲಿಗೆ ಕವಿ ಡಾ. ಸತ್ಯಾನಂದ ಪಾತ್ರೋಟ ಅಭಿಪ್ರಾಯಪಟ್ಟರು.

ಆವಿಷ್ಕಾರ, ಎಐಡಿಎಸ್‌ಓ, ಎಐಡಿವೈಓ ಹಾಗೂ ಎಐಎಮ್ಎಸ್‌ಎಸ್ ಸಂಘಟನೆಗಳ ನೇತೃತ್ವದಲ್ಲಿ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆದ 14ನೇ ವಿಜಯಪುರ ಸಾಂಸ್ಕೃತಿಕ ಜನೋತ್ಸವ'ದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.

ಮುಂದುವರೆದು ಹೇಳಿದ ಅವರು "ನಮ್ಮ ಮಧ್ಯ ಬರೆಯದ ಬರಹಗಾರರಿದ್ದಾರೆ. ಹಾಡದ ಹಾಡುಗಾರರಿದ್ದಾರೆ. ನರ್ತಿಸದ ನರ್ತಕಿಯರಿದ್ದಾರೆ. ಅಂತಹವರ ಬಗ್ಗೆ ನಾವು ಹಾಡಬೇಕು. ಬರೆಯಬೇಕು. ಇಂದು ಮುಖಂಡರು, ಅಧಿಕಾರಿಗಳು ಬ್ರಷ್ಟರಾಗುವ ಜೊತೆಗೆ ಲೇಖನ ಸಹ ಬ್ರಷ್ಟವಾಗಿದೆ. ಹೀಗಾದರೆ ರಕ್ಷಣೆ ಎಲ್ಲಿ. ನಮ್ಮನ್ನು ನಾವು ಕಂಡು ಕೊಳ್ಳುವುದೇ ಇದಕ್ಕೆ ಪರಿಹಾರ. ತನ್ನ ಸಮುದಾಯವನ್ನೂ ಮೀರಿ ಜನಸಾಮಾನ್ಯರಿಗೆ ನಾಯಕರಾದ ಜ್ಯೋತಿಬಾ ಫುಲೆಯವರಂತಹವರು ನಮಗೆ ಆದರ್ಶವಾಗಬೇಕು" ಎಂದು ಹೇಳಿದರು.

ಅತಿಥಿಗಳಾಗಿ ಆಗಮಿಸಿದ್ದ ಎಐಯುಟಿಯುಸಿ ಕಾರ್ಮಿಕ ಸಂಘಟನೆಯ ರಾಜ್ಯ ಅಧ್ಯಕ್ಷರಾದ ಕಾ. ಕೆ. ಸೋಮಶೇಖರ ಅವರು ಮಾತನಾಡಿ, "ಮೂಲ ಸೌಲಭ್ಯ, ವಿಜ್ಞಾನಗಳ ಅಭಿವೃದ್ಧಿಗಿಂತ ನೀತಿ, ಸಂಸ್ಕೃತಿ, ಮೌಲ್ಯಗಳ ಅಭಿವೃದ್ಧಿ ನಿಜವಾದ ಅಭಿವೃದ್ಧಿ, ಇಂದಿನ ಸಮಾಜದ ಪ್ರಗತಿಗೆ ಪೂರಕವಾದದನ್ನು ಮಾತ್ರ ನಾವು ಇತಿಹಾಸದಿಂದ ಅನುಸರಿಸಬೇಕು. ಹೊರತು ಜನರನ್ನು ಓಡೆದು ಆಳುವ ಇತಿಹಾಸ, ಸಂಸ್ಕೃತಿಯನ್ನು ಇತಿಹಾಸದಲ್ಲಿ ಇದ್ದರೂ ಅದನ್ನು ಅನುಸರಿಸಬಾರದು" ಎಂದು ಹೇಳಿದರು.

ರಂಗಮಂದಿರದ ಆವರಣದಲ್ಲಿಯ ಸೂಕ್ತಿ ಹಾಗೂ ಛಾಯಾಚಿತ್ರ ಪ್ರದರ್ಶನವನ್ನು ಸಾಹಿತಿಗಳಾದ ಶ್ರೀ ಮನು ಪತ್ತಾರ ಅವರು ಉದ್ಘಾಟಿಸಿದರು.

ಎಐಡಿಎಸ್‌ಓನ ಜಿಲ್ಲಾ ಕಾರ್ಯದರ್ಶಿಗಳಾದ ಕಾವೇರಿ ರಜಪೂತರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಎಐಎಮ್‌ಎಸ್‌ಎಸ್‌ನ ಜಿಲ್ಲಾಧ್ಯಕ್ಷರಾದ ಗೀತಾ ಎಚ್. ಹಾಗೂ ಆವಿಷ್ಕಾರದ ಮುಖಂಡರಾದ ಶ್ರೀ ಅಶೋಕ ದೇಸಾಯಿ ಅವರು ಉಪಸ್ಥಿತರಿದ್ದರು. ಹಾಗೂ ಎ.ಐ.ಡಿ.ವೈ.ಓ. ರಾಜ್ಯ ಕಾರ್ಯದರ್ಶಿಗಳಾದ ಶ್ರೀ ಸಿದ್ಧಲಿಂಗ ಬಾಗೇವಾಡಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ನಂತರ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮಗಳಾದ ವಿಜಯಪುರದ ವಿದೂಷಿ ಲಕ್ಷ್ಮೀ ತೇರದಾಳಮಠ ಅವರ ನಾಟ್ಯಕಲಾ ಡಾನ್ಸ್ ಕ್ಲಾಸ್‌ನವರ ನೃತ್ಯ ರೂಪಕ, ಧಾರವಾಡ ಆಕಾಶವಾಣಿಯ ಬಿ ಹೈಗ್ರೇಡ್ ಕಲಾವಿದೆ ಕುಮಾರಿ ಕೃತಿಕಾ ವಿ ಜಂಗಿನಮಠ ಅವರ ಕೊಳಲು ವಾದನ, ಹಾಗೂ ವಿಜಯಪುರದ ಸ್ವಯಂಭೋ ಆರ್ಟ್ ಫೌಂಡೇಶನ್ನ

ನಟಿ ಹಾಗೂ ಭರತನಾಟ್ಯ ಕಲಾವಿದೆ ವಿದೂಷಿ ದೀಕ್ಷಾ ಭೀಸೆ ಹಾಗೂ ದಿವ್ಯಾ ಭೀಸೆ ಮತ್ತು ತಂಡದವರ ನೃತ್ಯ ಪ್ರದರ್ಶನ ಗಳು ಜನರ ಮನ ಸೆಳೆದವು.

ಹಾಗೂ ಬಾದಲ್ ಸರ್ಕಾರರವರು ರಚಿಸಿದ. ರಾಜೇಂದ್ರ ಕಾರಂತ್ ಅವರು ಕನ್ನಡಕ್ಕೆ ರೂಪಾಂತರಿಸಿದ ನಾಟಕ 'ಮೋಜಿನ ಸೀಮೆಯಾಚೆ ಒಂದೂರು' ಒಂದು ಸುಂದರ ವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲಿತು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

ಸ್ತ್ರಿವಾದಿ ಹಾಗೂ ಪ್ರಗತಿಪರ ಚಿಂತಕಿ ಅಕ್ಕ ಮಹಾದೇವಿ: : ಹಂಗಾಮಿ ಕುಲಪತಿ ಪ್ರೊ. ಶಾಂತಾದೇವಿ ಟಿ

ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ  ಶನಿವಾರ ಆಯೋಜಿಸಿದ್ದ ಶಿವಶರಣೆ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ. ಶಾಂತಾದೇವಿ ಟಿ, ಮಹಿಳಾ ವಿವಿ ಕುಲಸಚಿವ ಶಂಕರಗೌಡ ಸೋಮನಾಳ, ಪ್ರೊ. ಎಂ.ಪಿ ಬಳಿಗಾರ ಹಾಗೂ ಮತ್ತಿತರು  ಅಕ್ಕಮಹಾದೇವಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಈ ದಿವಸ ಕನ್ನಡ ದಿನ ಪತ್ರಿಕೆ

 ವಿಜಯಪುರ: ಅಕ್ಕ ಮಹಾದೇವಿಯವರು ರಾಜಪ್ರಭುತ್ವ ಮತ್ತು ಪುರುಷಪ್ರಧಾನ ವ್ಯವಸ್ಥೆಯನ್ನು ತಿರಸ್ಕರಿಸಿ, ಮಹಿಳಾ ಹಕ್ಕುಗಳ ಪರವಾಗಿ ಧ್ವನಿಯೆತ್ತಿದ ಮೊದಲ ಸ್ತ್ರಿವಾದಿ ಹಾಗೂ ಪ್ರಗತಿಪರ ಚಿಂತಕಿ ಎಂದು ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ. ಶಾಂತಾದೇವಿ ಟಿ ಹೇಳಿದರು.

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ  ಶನಿವಾರ ಆಯೋಜಿಸಿದ್ದ ಶಿವಶರಣೆ ಅಕ್ಕಮಹಾದೇವಿ ಜಯಂತಿಯನ್ನು ಆಚರಿಸಿ ಅವರು ಮಾತನಾಡಿದರು.

ಅಕ್ಕಮಹಾದೇವಿಯವರು 12ನೇ ಶತಮಾನದ ಶರಣ ಚಿಂತಕಿಯಾಗಿ, ರಾಜಪ್ರಭುತ್ವ ಹಾಗೂ ಪುರುಷ ಪ್ರಧಾನ ವ್ಯವಸ್ಥೆಯನ್ನು ತಿರಸ್ಕರಿಸಿ, ಮಹಿಳಾ ಪರವಾಗಿ ಧ್ವನಿ ಎತ್ತಿದ ಪ್ರಥಮ ಸ್ತ್ರೀವಾದಿ ಹಾಗೂ ಪ್ರಗತಿಪರ ಚಿಂತಕಿ ಎನಿಸಿಕೊಂಡವರು. ತಮ್ಮ ವಚನಗಳ ಮೂಲಕ ಮಹಿಳೆಯ ಆತ್ಮಸ್ವಾತಂತ್ರ್ಯ, ವ್ಯಕ್ತಿತ್ವ, ಹಾಗೂ ಮಾನವೀಯ ಮೌಲ್ಯಗಳಿಗೆ ಪ್ರಾಮುಖ್ಯತೆ ನೀಡಿದರು ಎಂದರು.

ಇದೇ ಸಂದರ್ಭದಲ್ಲಿ ಮಹಿಳಾ ವಿವಿ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಅಕ್ಕಮಹಾದೇವಿಯವರು ಹಲವು ವಚನಗಳನ್ನು ರಚಿಸುವ ಮೂಲಕ ಸಮಾಜದಲ್ಲಿ ಪ್ರಮುಖ ಬದಲಾವಣೆಗಳಿಗೆ ಕಾರಣರಾಗಿದ್ದಾರೆ. ಅವರು ಸ್ತ್ರೀ-ಪುರುಷ ಭೇದವೆನ್ನುವ ಜಾತ್ಯತೀತ ಮನೋಭಾವನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು ಮತ್ತು ಅಂತಹ ಭೇದಭಾವನೆಗಳನ್ನು ಹೊಡೆದು ಹಾಕಲು ಶ್ರಮಿಸಿದರು. ಅವರ ವಚನಗಳು ಮಹಿಳೆಯರ ಆತ್ಮಬಲ, ಸ್ವಾತಂತ್ರ್ಯ ಹಾಗೂ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದಿವೆ. ಅಂತಹ ಮಹಾನ್ ವ್ಯಕ್ತಿತ್ವದ ಆದರ್ಶವನ್ನು ಎಲ್ಲ ವಿದ್ಯಾರ್ಥಿಯು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ  ವಿಶ್ವವಿದ್ಯಾನಿಲಯ ಆವರಣದ ಅಕ್ಕಮಹಾದೇವಿ ಮೂರ್ತಿಗೆ ಕುಲಪತಿ ಪ್ರೊ. ಶಾಂತಾದೇವಿ ಟಿ ರುದ್ರಾಕ್ಷಿ ಮಾಲೆ ಹಾಕಿ ಮತ್ತು ಉದ್ಯಾನದಲ್ಲಿ ಕದಳಿಯ ಸಸಿಗಳನ್ನು ನೆಡುವ ಮೂಲಕ ಗೌರವ ಸಲ್ಲಿಸಿದರು.

ಪ್ರೊ. ಎಂ.ಪಿ ಬಳಿಗಾರ ಪ್ರಾರ್ಥಿಸಿದರು. ನಾರಾಯಣ ಪವಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕಿ ಡಾ.ಸುಧಾರಾಣಿ ಮಣೂರ, ಪ್ರಾಧ್ಯಾಪಕರು, ವಿದ್ಯಾರ್ಥಿನಿಯರು ಹಾಗೂ ಮತ್ತಿತರು ಉಪಸ್ಥಿತರಿದ್ದರು.  ವಿಜಯಕುಮಾರ್ ಹಿರೇಮಠ ವಂದಿಸಿದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

Wednesday, April 9, 2025

10-04-2025 EE DIVASA KANNADA DAILY NEWS PAPER

ಹೊರ ಗುತ್ತಿಗೆ ಕಂಪ್ಯೂಟರ್ ಆಫರೇಟರ್ ಅವರನ್ನು ಕೂಡಾ ಕಾಯಂ ನೇಮಕಾತಿ ಮಾಡಲು ಗುರುರಾಜ ಲ. ಹಂದ್ರಾಳ ಆಗ್ರಹ

ವಿಜಯಪುರ : ಮುಖ್ಯಮಂತ್ರಿ ಸಿಎಂ ಸಿದ್ಧರಾಮಯ್ಯನವರು 2000 ಪೌರ ಕಾರ್ಮಿಕರನ್ನು ಕಾಯಂ ಮಾಡಿದಂತೆ ಮಾನವ ಸಂಪನ್ಮೂಲ ಪೂರೈಸುತ್ತಿರುವ ಏಜೆನ್ಸಿರವರುಗಳ ಹೊರ ಗುತ್ತಿಗೆ ಕಂಪ್ಯೂಟರ್ ಆಫರೇಟರ್ ನೌಕರರನ್ನು ಕೂಡಾ ಕಾಯಂ ಮಾಡಬೇಕೆಂದು ವಿಚಾರವಾದಿ ಗುರುರಾಜ ಲಕ್ಷö್ಮಣ ಹಂದ್ರಾಳ ಒತ್ತಾಯಿಸಿದ್ದಾರೆ. 

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಏಜೆನ್ಸಿಗಳಿಂದ ಹೊರ ಗುತ್ತಿಗೆ ನೌಕರರಿಗೆ ಮುಕ್ತಿಕೊಡಿಸಲು ಕಾಯಂ ಮಾಡಬೇಕು. ಸಿಎಂ ಸಿದ್ಧರಾಮಯ್ಯನವರು ಬಡವರ ಪರ ಬಹಳಷ್ಟು ಹೊಸ ಯೋಜನೆಗಳನ್ನು ರೂಪಿಸಿ ಬಡವರ ಬಾಳಿಗೆ ಬೆಳಕಾಗಿದ್ದಾರೆ. ಅವರು ಮಾನವೀಯ ಸಂವೇದೆನೆಯುಳ್ಳವರಾಗಿದ್ದಾರೆ. ಅವರಿಂದ ಕರ್ನಾಟಕದಲ್ಲಿ ಬಡವರು ನಿರಾಳರಾಗಿ ಸ್ವಾಭಿಮಾನದಿಂದ ಬದುಕು ನಡೆಸುತ್ತಿದ್ದಾರೆ. ಅದರಂತೆ ಎಲ್ಲ ವರ್ಗದವರ ಹಿತ ಕಾಯುವವರು ಯಾರಾದರೂ ಕರ್ನಾಟಕದಲ್ಲಿ ಇದ್ದರೆ ಅದು ಸಿಎಂ ಸಿದ್ಧರಾಮಯ್ಯನವರು! 

ಅದರಂತೆ ಮಾನವ ಸಂಪನ್ಮೂಲವನ್ನು ಪೂರೈಸುತ್ತಿರುವ ಏಜೆನ್ಸಿ ರವರುಗಳು 'ಸಿ' ಮತ್ತು 'ಡಿ' ದರ್ಜೆ ನೌಕರರುಗಳಿಗೆ 05 ರಿಂದ 06 ತಿಂಗಳು ವೇತನವನ್ನು ನೀಡುವಲ್ಲಿ ಏಜೆನ್ಸಿಯವರ ವಿಳಂಬ ದೋರಣೆ ಅನುಸರಿಸುತ್ತಿದ್ದಾರೆ. ವರ್ಷದವರೆಗೆ ಪಿ.ಎಫ್ ಹಣ ತುಂಬುತ್ತಿಲ್ಲ ಮತ್ತಿತರ ಭತ್ಯೆಗಳನ್ನು ದೊರಕಿಸುತಿಲ್ಲ ಇದರಿಂದ ಕಾರ್ಮಿಕರಿಗೆ ಬಹಳಷ್ಟು ಕಷ್ಟವಾಗುತ್ತಿದೆ. ಸರ್ಕಾರದ ವಿವಿಧ ಇಲಾಖೆ ಮತ್ತು ನಿಗಮಗಳಲ್ಲಿ ಹೊರಗುತ್ತಿಗೆ ಮಾನವ ಸಂಪನ್ಮೂಲ ಒದಗಿಸುವ ಏಜೆನ್ಸಿಗಳ ಮುಖಾಂತರ ಸೇವೆ ಸಲ್ಲಿಸುತ್ತಿರುವ ನೌಕರರುಗಳ ವೇತನವನ್ನು ಏಜೆನ್ಸಿ ಅವರುಗಳ ಮುಖಾಂತರ ನೌಕರರುಗಳಿಗೆ ವಿತರಿಸುತ್ತಿರುವುದನ್ನು ಸರ್ಕಾರ ಗಮನ ಹರಿಸಬೇಕು. ಮಾನವ ಸಂಪನ್ಮೂಲವನ್ನು ಪೂರೈಸುತ್ತಿರುವ ಏಜೆನ್ಸಿ ರವರುಗಳು 'ಸಿ' ಮತ್ತು 'ಡಿ' ದರ್ಜೆ ನೌಕರರುಗಳಿಗೆ ಏಕರೂಪದ ವೇತನವನ್ನು ನೀಡದೆ ಸರ್ಕಾರ ನಿಗದಿಪಡಿಸಿ ನೀಡುವ ವೇತನದಲ್ಲಿ ಏಜೆನ್ಸಿಯವರ ಕಮಿಷನ್ ಪಿ.ಎಫ್ ಮತ್ತಿತರ ಭತ್ಯೆಗಳನ್ನು ಕಡತ ಮಾಡಿಕೊಂಡು ಈ ನೌಕರರುಗಳಿಗೆ ಅಲ್ಪ ಪ್ರಮಾಣದ ವೇತನವನ್ನು ನೀಡುತ್ತಿದ್ದಾರೆ. ಏಜೆನ್ಸಿಗಳಿಂದ ಮಾನವ ಸಂಪನ್ಮೂಲ ಸೇವೆಯನ್ನು ಹೊರಗುತ್ತಿಗೆ ಮುಖಾಂತರ ಪಡೆಯುವ ಬದಲು ಸರ್ಕಾರವೇ ನೇರವಾಗಿ ಸಂಚಿತ ವೇತನದ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಸರ್ಕಾರ ಯಾವ ಕ್ರಮ ಕೈಗೊಂಡು ಕಾರ್ಮಿಕರಿಗೆ ಅನುಕೂಲ ಕಲ್ಪಿಸಬೇಕು.

ಮಾನವ ಸಂಪನ್ಮೂಲ ಸೇವೆಯನ್ನು ಒದಗಿಸುತ್ತಿರುವ ಏಜೆನ್ಸಿಯವರು ನೀಡುವ ಅಲ್ಪ ಪ್ರಮಾಣದ ವೇತನದಲ್ಲಿ ಈ ನೌಕರರುಗಳು ಸಂಸಾರ ನಿರ್ವಹಣೆ ಮಾಡುವುದು ಕಷ್ಟ ಸಾಧ್ಯವಾಗಿರುವುದರಿಂದ ಪ್ರಸ್ತುತ ನೀಡುತ್ತಿರುವ ವೇತನವನ್ನು ಪರಿಷ್ಕರಿಸಿ ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಂಡು ಕಾರ್ಮಿಕರಿಗೆ ನೆಲೆ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

Sunday, April 6, 2025

07-04-2025 EE DIVASA KANNADA DAILY NEWS PAPER

ಏ.7ರಂದು ಚಡಚಣದಲ್ಲಿ ಉದ್ಯೋಗ ಮೇಳ : ಕಾಂತಾ ನಾಯ್ಕ

ವಿಜಯಪುರ: ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಜಿಲ್ಲೆಯ ಚಡಚಣದಲ್ಲಿ ಇದೇ ಏ.7ರಂದು ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷರಾದ ಕಾಂತಾ ನಾಯ್ಕ ಹೇಳಿದರು.

ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ, ಕರ್ನಾಟಕ ಕೌಶಲ್ಯಾಭಿವೃದ್ದಿ ನಿಗಮ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಚಡಚಣದ ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಎಸ್. ಎಸ್. ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಇದೇ ಏಪ್ರಿಲ್ 7ರಂದು ಬೆಳಿಗ್ಗೆ, 9.30 ರಿಂದ ಸಾಯಂಕಾಲ 4.00 ಘಂಟೆಯವರೆಗೆ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ಉದ್ಯೋಗ ಮೇಳವನ್ನು ಆಯೋಜಿಸಲಾಗುತ್ತಿದೆ, ಈ ಮೇಳದಲ್ಲಿ 40 ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿದ್ದು, ಇಲ್ಲಿಯವರೆಗೆ ಪ್ರತಿಷ್ಠಿತ 38 ಕಂಪನಿಗಳು ನೋಂದಣಿ ಮಾಡಿಕೊಂಡಿವೆ ಎಂದು ಅವರತು ಹೇಳಿದರು. 

ಎಸ್.ಎಸ್.ಎಲ್.ಸಿ/ಪಿಯುಸಿ/ಐಟಿಐ/ಡಿಪ್ಲೊಮಾ/ವದವಿ/ ಸ್ನಾತಕೋತ್ತರ ಪದವಿ ಹಾಗೂ ವೃತ್ತಿಪರ ಪದವೀಧರರಿಗೆ ಉದ್ಯೋಗ ಮೇಳದಲ್ಲಿ ಅವಕಾಶವಿದ್ದು, ನೋಂದಣಿಯು ಉಚಿತವಾಗಿರುತ್ತದೆ. ಇಲ್ಲಿಯವರೆಗೆ 1881 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಇನ್ನು 3000 ಕ್ಕೂ ಹೆಚ್ಚು ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳುವ ನಿರೀಕ್ಷೆ ಇರುತ್ತದೆ ಎಂದು ಅವರು ತಿಳಿಸಿದರು. 

ನಿರುದ್ಯೋಗ ಸಮಸ್ಯೆ ನಿವಾರಣೆಗೆ ಶಾಲಾ ಮಟ್ಟದಲ್ಲಿಯೇ ಮಕ್ಕಳಿಗೆ ಕೌಶಲ್ಯಾಧಾರಿತ ಕಲಿಕೆಗೆ ಒತ್ತು ನೀಡುವ ಉದ್ದೇಶದೊಂದಿಗೆ 8 ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ “ನನ್ನ ವೃತ್ತಿ ನನ್ನ ಆಯ್ಕೆ” ಹಾಗೂ ಕಾಲೇಜು ಮಟ್ಟದಲ್ಲಿ ಕಲಿಕೆ ಜೊತೆ ಕೌಶಲ್ಯ ಯೋಜನೆ ರೂಪಿಸಲಾಗಿದೆ. ಈಗಾಗಲೇ ಕೌಶಲ್ಯಾಧಾರಿತ ಕಲಿಕೆಯನ್ನು ಝಳಕಿ, ನಿಡಗುಂದಿಯಲ್ಲಿ “ನನ್ನ ವೃತ್ತಿ ನನ್ನ ಆಯ್ಕೆ” ಹಾಗೂ ಅಕ್ಕಮಹಾದೇವಿ ವಿಶ್ವವಿದ್ಯಾಲಯದಲ್ಲಿ ಕಲಿಕೆ ಜೋತೆ ಕೌಶಲ್ಯ ಯೋಜನೆಯನ್ನು ಪ್ರ‍್ರಾಯೋಗಿಕವಾಗಿ ಅನುಷ್ಠಾನ ಗೊಳಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪಾರಂಪರಿಕ ಕೌಶಲ್ಯ ಹಾಗೂ ಪ್ರಾದೇಶಿಕ ಕೌಶಲ್ಯಗಳನ್ನು ಅನುಷ್ಠಾನ ಮಾಡಲಾಗುವುದು ಎಂದು ಅವರು ಹೇಳಿದರು. 

ಇದೇ ವೇಳೆ ಜಿಲ್ಲಾಧಿಕಾರಿಗಳಾದ ಟಿ. ಭೂಬಾಲನ್ ಅವರು ಮಾತನಾಡಿ ಚಡಚಣದಲ್ಲಿ ನಡೆಯುತ್ತಿರುವ ಈ ಉದ್ಯೋಗ ಮೇಳದಲ್ಲಿ ಜಿಲ್ಲೆಯ ಹೆಚ್ಚಿನ ನಿರುದ್ಯೋಗಿ ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಉದ್ಯೋಗ ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಉದ್ಯೋಗ ಮೇಳದ ಪೋಸ್ಟರ್‌ಗಳನ್ನು ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳಾದ ಸಿ.ಬಿ.ಕುಂಬಾರ, ಜಿಲ್ಲಾ ಉದ್ಯೋಗಾಧಿಕಾರಿ ಮಹೇಶ ಮಾಳವಾಡಕರ್ ಉಪಸ್ಥಿತರಿದ್ದರು.