ಈ ದಿವಸ ವಾರ್ತೆ
ವಿಜಯಪುರ: ಮೀಸಲಾತಿಯ ಒಳ ಹೊಡೆತಗಳು ದಲಿತ ರಾಜಕೀಯ ಅಸ್ಮಿತೆ ತೊಡೆದು ಹಾಕಿದವು. ಅಖಂಡ ಭಾರತದ ಉದ್ದಗಳಕ್ಕೂ ದಲಿತರಿಗೆ ಆರ್ಥಿಕ ಸ್ವಾತಂತ್ರ್ಯ ಸಿಕ್ಕಿಲ್ಲ. ದಲಿತರಲ್ಲಿ ರಾಜಕೀಯ ಸಬಲೀಕರಣದ ಅವಶ್ಯಕತೆ ಇಂದು ಅನಿವಾರ್ಯ ವಾಗಿದೆ ಎಂದು ಪ್ರಗತಿಪರ ವಿಚಾರವಾದಿ ಕೃಷ್ಣಮೂರ್ತಿ ಚಮರಂ ಅವರು ಹೇಳಿದರು. ಅವರು ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಲಡಾಯಿ ಪ್ರಕಾಶನ ಗದಗ ಕವಿ ಪ್ರಕಾಶನ ಕವಲಕ್ಕಿ ಚಿತ್ತಾರ ಕಲಾ ಬಳಗ ಧಾರವಾಡ ಹಾಗೂ ಮೇ ಸಾಹಿತ್ಯ ಮೇಳ ಬಳಗ ವಿಜಯಪುರ ಇವರ ಸಹಯೋಗದಲ್ಲಿ ಹಮಿಕೊಂಡಿದ್ದ 9ನೇ ಸಾಹಿತ್ಯ ಮೇಳದ ಕುಮಾರ ಕಕ್ಕಯ್ಯ ಪೋಳ ಹಾಗೂ ಜಿ ಗಂಗಾಧರ ಮೂರ್ತಿ ವೇದಿಕೆಯಲ್ಲಿ ಪ್ರಜಾತಂತ್ರ ಸಾಗಿದ ದಾರಿ ಅಸ್ಮಿತೆ ರಾಜಕಾರಣ ಎಂಬ ಮೂರನೇ ಗೋಷ್ಠಿ ಯ ಆದಿವಾಸಿ ಮತ್ತು ಅಲೆಮಾರಿ ನೆಲೆ ಎಂಬ ವಿಷಯ ಮಂಡಿಸಿ ಮಾತನಾಡಿದರು.ವೇದಿಕೆಯಲ್ಲಿ ಬಿ ಎಂ ಹನೀಫ್ ರಂಗನಾಥ ಕಂಟನಕುಂಟೆ ಶೈಲಜಾ ಹಿರೇಮಠ ಶಾಂತೇಶ ದುರ್ಗಿ ನಾಗರಾಜ ಲಂಬು ಸಿದ್ರಾಮ ಬಿರಾದಾರ ಇದ್ದರು.ನಾರಾಯಣ ಪವಾರ ಕಾರ್ಯಕ್ರಮ ಸಂಯೋಜಿಸಿದರು. ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಸಂಘಟಕರಾದ ಪ್ರಕಾಶಕ ವಿಚಾರವಾದಿ ಬಸವರಾಜ ಸೂಳಿಭಾವಿ ಅನಿಲ ಹೊಸಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
No comments:
Post a Comment