ಈ ದಿವಸ ವಾರ್ತೆ
ವಿಜಯಪುರ : ಡಾ ಎಂ ಎಂ ಕಲಬುರಗಿ ಅವರ ಹತ್ಯೆ ಯನ್ನು ಖಂಡಿಸುತ್ತೇವೆ ಎಂದು ಖ್ಯಾತ ವಿಚಾರವಾದಿ ಮುಂಬಯಿಯ ತೀಸ್ತಾ ಸೆಟಲ್ವಾಡ್ ಅವರು ಹೇಳಿದರು.ಅವರು ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡಿರುವ ಮೇ 9 ನೇ ಸಮ್ಮೇಳನದಲ್ಲಿ ಮಾತನಾಡಿದರು. ಭಾರತದ ಸಂತ ಪರಂಪರೆ ಪ್ರಮುಖರಾದ ಬಸವಣ್ಣ ಅಲ್ಲಮ ಸೇರಿದಂತೆ ಎಲ್ಲರ ತತ್ವಗಳು ಇಂದು ಬಹಳ ಪ್ರಸ್ತುತವಾಗಿವೆ. ದುಸ್ಕಾಲ ಸಮಯದಲ್ಲಿ ಬೆಳೆದು ಬಂದ ಈ ಪರಂಪರೆಗಳು ನಮಗೆ ಉತ್ತಮ ಚಿಂತನೆಗಳನ್ನು ಕೊಟ್ಟಿವೆ. ಮುಸ್ಲಿಂ ಸಮುದಾಯದ ಝಾಕೀರ ಹುಸೇನ್ ಮೌಲನಾ ಅಬುಲ್ ಕಲಾಂರು ಈ ದೇಶಕ್ಕೆ ಸಲ್ಲಿಸಿದ ಸೇವೆಯನ್ನು ಯಾರು ಮರೆಯುವಂತಿಲ್ಲ. ಕೆಲವು ದೃಶ್ಯ ಮಾಧ್ಯಮಗಳು ಜಾತಿ ಧರ್ಮಗಳ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿವೆ.ಇದರ ವಿರುದ್ಧ ಒಗ್ಗಟ್ಟಿನ ಹೋರಾಟ ಇಂದು ಅನಿವಾರ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ
ಹಿರಿಯ ಹೋರಾಟಗಾರರಾದ ಪ್ರಕಾಶ ಹಿಟ್ನಳ್ಳಿ, ನಜ್ಮಾ ಬಾಂಗಿ , ಭೀಮಶಿ ಕಲಾದಗಿ ತುಕಾರಾಂ ಚಂಚಲಕರ ವಿಹಾನ್ ಪ್ರಕಾಶ ಅಂಬೇಡ್ಕರ್ ಬಸವರಾಜ ಸೂಳಿಭಾವಿ ರಿಯಾಜ್ ಫಾರುಕಿ ಮಲ್ಲಮ್ಮ ಯಾಳವಾರ ಭಗವಾನ ರೆಡ್ಡಿ ಕೋಣೇಶ್ವರ ಸ್ವಾಮೀಜಿ ಅಬ್ದುಲ್ ರೆಹಮಾನ್ ಬಿದರಕುಂದಿ ಅನಿಲ ಹೊಸಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
No comments:
Post a Comment