ವಿಜಯಪುರ : ಕೇಂದ್ರ ಮತ್ತು ರಾಜ್ಯ ಸರ್ಕಾರದ ಗೆಜೆಟ್ ಅಧಿಸೂಚನೆಯ ಪ್ರಕಾರ ಕರ್ನಾಟಕ ರಾಜ್ಯ ಪರಿಶಿಷ್ಟ್ಟ ಪಂಗಡಗಳ ಪಟ್ಟಿಯ ಕ್ರಮಸಂಖ್ಯೆ: 38 ರಲ್ಲಿ ಬರುವ ನಾಯಕ, ವಾಲ್ಮೀಕಿ ಜನಾಂಗದ ಪರ್ಯಾಯ ಪದವಾದ ತಳವಾರ ಮತ್ತು ಪರಿವಾರ ಜನಾಂಗದವರಿಗೆ ಮಾತ್ರ ಎಸ್.ಟಿ.ಜಾತಿ ಪ್ರಮಾಣ ಪತ್ರ ನೀಡುವುದನ್ನು ಬಿಟ್ಟು ಪ್ರವರ್ಗ-1 ರ ಹಿಂದುಳಿದ ಜಾತಿಯಲ್ಲಿ ಬರುವ ಅಂಬಿಗ/ಕಬ್ಬಲಿಗ/ಕೋಳಿ/ತಳವಾರ/ಗAಗಾಮತ /ಡೋರ, ಟೋಕರೆಕೋಳಿ/ಗೊಂಡ/ ರಾಜಗೊಂಡ ನಾಯ್ಕಡ್ ಜಾತಿಯವರಿಗೆ ಎಸ್.ಟಿ. ಪ್ರಮಾಣ ಪತ್ರ ನೀಡುತ್ತಿರುವ ತಹಶೀಲ್ದಾರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವುದು ತಳವಾರ ಜಾತಿ ಗೋಂದಲದ ಬಗ್ಗೆ ಸೂಕ್ತ ನಿರ್ದೇಶನ ನೀಡಿ ವಾಲ್ಮೀಕಿ ಜನಾಂಗದವರಿಗೆ ನ್ಯಾಯ ಒದಗಿಸುವಂತೆ ಅಖಿಲ ಭಾರತೀಯ ವಾಲ್ಮಿಕಿ ಸಮಾಜ ಸೇವಾ ಸಂಘ (ರಿ) ವತಿಯಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಟಗಿ ಮಾತನಾಡಿ, ಪರಿಶಿಷ್ಟ್ಟ ಪಂಗಡದ ಪ್ರಕಾರ ಸಾಮಾಜಿಕವಾಗಿ, ರಾಜಕೀಯವಾಗಿ ಹಾಗೂ ಆರ್ಥಿಕವಾಗಿ, ಶೈಕ್ಷಣಿಕವಾಗಿ ತೀರಾ ಹಿಂದೂಳಿದ ಈ ಜನಾಂಗದವರಿಗೆ ಸಮಾನತೆ ಬರಬೇಕೆಂಬ ದೃಷ್ಟಿಯಿಂದ ಡಾ| ಬಿ.ಆರ್. ಅಂಬೇಡ್ಕರ ರವರು ಮೀಸಲಾತಿಯನ್ನು ನೀಡಿ ನ್ಯಾಯ ಒದಗಿಸಿಕೊಟ್ಟಿದ್ದಾರೆ. ಆದರೆ ದೇಶಕ್ಕೆ ಸ್ವಾತಂತ್ರ ಬಂದು 7 ದಶಕಗಳು ಕಳೆದರು ನಿರಂತರವಾಗಿ ಪರಿಶಿಷ್ಟ ಪಂಗಡದ ಶೋಷಣೆ, ದಬ್ಬಾಳಿಕೆ, ದೌರ್ಜನ್ಯ ಮತ್ತು ಮೀಸಲಾತಿಯಲ್ಲಿ ವಂಚನೆ ಪ್ರಕರಣಗಳು ದಿನನಿತ್ಯ ಹೆಚ್ಚಾಗುತ್ತಿರುವುದು ಖಂಡನೀಯ.
ನಾಯ್ಕಡ ಹೆಸರಿನಲ್ಲಿ ಹಿಂದುಳಿದ ಜಾತಿಯ ತಳವಾರ ಜಾತಿಯವರಿಗೆ ಎಸ್.ಟಿ. ಪ್ರಮಾಣ ಪತ್ರಗಳನ್ನು ನಿಡಿದ ತಹಶೀಲ್ದಾರರನ್ನು ಈ ಕೂಡಲೇ ಅಮಾನತ್ತು ಮಾಡಿ ಕ್ರಿಮಿನಲ್ ಕೇಸು ದಾಖಲಿಸಬೇಕು. ಹಿಂದುಳಿದ ಜಾತಿಗೆ ಸೇರಿರುವ ಅಂಬಿಗ/ಕಬ್ಬಲಿಗ/ಗAಗಾಮತ/ತಳವಾರರಿಗೆ/ಡೋರ, ಟೋಕರೆ ಕೋಳಿ/ಗೊಂಡ /ರಾಜಗೊಂಡ/ನಾಯ್ಕಡ ಜಾತಿಯವರಿಗೆ ಎಸ್.ಟಿ. ಪ್ರಮಾಣ ಪತ್ರಗಳನ್ನು ನೀಡಿರುವುದನ್ನು ಕೂಡಲೇ ರದ್ದು ಪಡಿಸಬೇಕು. ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ತೆಗೆದುಕೊಂಡವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕು.
ಪ್ರವರ್ಗ-1 ರಲ್ಲಿ ಬರುವ ಅಂಬಿಗ/ತಳವಾರರಿಗೆ ಎಸ್.ಟಿ. ಜಾತಿ ಪ್ರಮಣ ಪತ್ರಗಳು ನೀಡಿರುವ ಬಗ್ಗೆ ನಕಲು ಶಾಲಾ ದಾಖಲತಿಗಳನ್ನು ಸೃಷ್ಟಿಸಿರುವ ಬಗ್ಗೆ ಪರಿಶೀಲನೆಗಾಗಿ ಉನ್ನತ ಮಟ್ಟದ ತನಿಖಾ ತಂಡವನ್ನು ರಾಜ್ಯ ಸರ್ಕಾರದಿಂದ ರಚನೆ ಮಾಡಬೇಕು. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಆದ 187 ಕೋಟಿ ರೂಪಾಯಿಯನ್ನು ವಾಪಸ್ ವಾಲ್ಮೀಕಿ ನಿಗಮಕ್ಕೆ ನೀಡಬೇಕು. ವಿಜಯಪುರ ಜಿಲ್ಲೆಯ ಎಲ್ಲ ಹಳ್ಳಿಗಳಲ್ಲಿ ಪ್ರತ್ಯೇಕ ವಾಲ್ಮೀಕಿ ಸಮಾಜದವರಿಗೆ ಸ್ಮಶಾನ ಭೂಮಿಯನ್ನು ಮಂಜೂರು ಮಾಡಬೇಕು.
ಎಸ್.ಸಿ. ಎಸ್.ಟಿ. ಜನಾಂಗಕ್ಕೆ ಮೀಸಲಿಟ್ಟ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಬಾರದು. ಮಾನ್ಯ ಸುಪ್ರೀಮ್ ಕೋರ್ಟ ಆದೇಶ ಮಾಡಿದ ಒಳಮೀಸಲಾತಿ ಜಾರಿ ಮಾಡಬೇಕು. 7.5 ಶೆಡುಲ್ 9ಕ್ಕೆ ಸೇರಿಸಬೇಕು. 39 ಅನ್ಯ ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಶಿಪಾರಸ್ಸವನ್ನು ತಕ್ಷಣವೇ ವಾಪಸ್ ಪಡೆಯಬೇಕು. ವಿಜಯಪುರ ನಗರದ ಬಂಜಾರ ಕ್ರಾಸ್ ಹತ್ತಿರ ಮಂಜೂರಾದ 4ಕೋಟಿ ಹಣ 2-3 ವರ್ಷ ಆದರೂ ಇನ್ನೂ ಕಟ್ಟಡದ ಅಡಿಗಲ್ ಸಮಾರಂಭ ಆಗಿಲ್ಲ ಅದನ್ನು ವಾಲ್ಮೀ ಜಯಂತಿಯ ಒಳಗಾಗಿ 2 ತಿಂಗಲ್ಲಿ ವಾಲ್ಮೀಕಿ ಸಮುದಾಯ ಭವನ ಅಡಿಗಲ್ಲು ಸಮಾರಂಭ ಮಾಡಬೇಕು. ರಾಜ್ಯದಲ್ಲಿ ಈಗಾಗಲೇ ಲಕ್ಷಾಂತರ ನಕಲಿ ಜಾತಿ ಪ್ರಮಾಣ ಪತ್ರ ವಿತರಣೆ ಆಗಿದ್ದನ್ನು ಕೂಡಲೇ ರದ್ದುಪಡಿಸಬೇಕು. ವಿಜಯಪುರ ನಗರದ ಕಂದಗಲ್ ಹಣಮಂತರಾಯ ರಂಗ ಮಂದಿರ ಎದುರುಗಡೆ ವಾಲ್ಮೀಕಿ ಸರ್ಕಲ್ ಮತ್ತು ವೃತ್ತ ನಿರ್ಮಾಣ ಆಗಬೇಕು. ವಿಜಯಪುರ ನಗರದ ಯಾವುದಾದರು ಒಂದು ರಸ್ತೆಗೆ ಸ್ವಾತಂತ್ರ ಹೋರಾಟಗಾರ ವೀರ ಸಿಂಧೂರ ಲಕ್ಷ್ಮಣನ ಮಾರ್ಗ ಎಂದು ನಾಮಕರಣ ಮಾಡಬೇಕು.
ವಿಜಯಪುರ ತಾಲೂಕಿನ ಉತ್ನಾಳ ಗ್ರಾಮದಲ್ಲಿ ವಾಲ್ಮೀಕಿ ಸಮುದಾಯ ಭವನವನ್ನು ನಿರ್ಮಾಣ ಮಾಡಿದ್ದನ್ನು ವಾಲ್ಮೀಕಿ ಸಮಾಜದವರಿಗೆ ಹಸ್ತಾಂತರ ಮಾಡಬೇಕು. ಎಂ.ಎಚ್.ಎA. ಪ್ರೌಢ ಶಾಲೆ ಆಲಮಟ್ಟಿಯಲ್ಲಿ ಶ್ರೀಮತಿ ಗುರಿಕಾರ ಅವರಿಗೆ ಸಮಾಜ ಕಲ್ಯಾಣ ಇಲಾಖೆಯವರು ಸಿಂಧೂತ್ವ ಪ್ರಮಾಣ ಪತ್ರ ನೀಡಿರುತ್ತಾರೆ ಅದನ್ನು ರದ್ದುಪಡಿಸಬೇಕು. ಶ್ರೀ ಎಸ್.ಕೆ. ಪ್ರೌಢ ಶಾಲೆ ತಾಳಿಕೋಟಿಯಲ್ಲಿ ಶ್ರೀಮತಿ ಮಹಾದೇವಿ ಮಾಡಗಿ ಅವರಿಗೆ ಸಮಾಜ ಕಲ್ಯಾಣ ಇಲಾಖೆಯವರು ಸಿಂಧೂತ್ವ ಪ್ರಮಾಣ ಪತ್ರವನ್ನು ನೀಡಿದನ್ನು ರದ್ದುಪಡಿಸಬೇಕು. ಮಲ್ಲಪ್ಪ ಸಾಬು ಯಾಳವಾರ ಪೋಲಿಸ್ ಇಲಾಖೆ ಸಾ: ಹಿಟ್ನಳ್ಳಿ ತಾ: ಜಿ: ವಿಜಯಪುರ ಇವರು ಅಂಬಿಗ/ತಳವಾರ ಇದ್ದು, ಇವರ ಸಿಂಧೂತ್ವ ಪ್ರಮಾಣ ಪತ್ರವನ್ನು ರದ್ದುಗೊಳಿಸಬೇಕು. ಶಿವಪ್ಪ ಬಸಪ್ಪ ಕೆಂಗಲಗುತ್ತಿ ಪೋಲಿಸ್ ಇಲಾಖೆ ಸಾ: ಬಬಲೇಶ್ವರ ಇವರ ಸಿಂಧೂತ್ವ ಪ್ರಮಾಣ ಪತ್ರವನ್ನು ರದ್ದುಗೊಳಿಸಬೇಕು. ಈರಣ್ಣ ಧರ್ಮಣ್ಣ ವಾಲಿಕಾರ ಪೋಲಿಸ್ ಇಲಾಖೆ ಸಾ: ಚಿಕ್ಕಸಿಂದಗಿ ತಾ: ಸಿಂದಗಿ ಇವರ ಸಿಂಧೂತ್ವ ಪ್ರಮಾಣ ಪತ್ರವನ್ನು ರದ್ದುಗೊಳಿಸಬೇಕು. ವಿಜಯಪುರ ಜಿಲ್ಲಾ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಲ್ಲಿ 50 ಕುಟುಂಬದ ವಾಲ್ಮೀಕಿ ಜನಾಂಗದವರಿಗೆ ನಿವೇಶನ ಇರುವದಿಲ್ಲ. ಅವರಿಗೆ 2ಎಕರೆ ಜಮೀನು ರಿ.ಸ.ನಂ: 1 ರಲ್ಲಿ ಮಂಜುರು ಮಾಡಬೇಕು. ಮತ್ತು ಸ್ಮಶಾನ ಜಾಗ ಇರುವದಿಲ್ಲ ಸ್ಮಶಾನ ಭೂಮಿ ಮಂಜೂರು ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಈರಪ್ಪ ಯಡಳ್ಳಿ, ಅಡಿವೆಪ್ಪ ಕಸ್ತೂರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
No comments:
Post a Comment