Thursday, December 12, 2024

ಮಹಾನಗರ ಪಾಲಿಕೆ ವಾರ್ಡ ಸಮಿತಿ ರಚನೆ : ಅರ್ಜಿ ಆಹ್ವಾನ

 ವಿಜಯಪುರ, ಡಿಸೆಂಬರ್ 12 (ಕರ್ನಾಟಕ ವಾರ್ತೆ): ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯ ಚುನಾಯಿತ ವಾರ್ಡ ಸದಸ್ಯರುಗಳನ್ನು ಆಧರಿಸಿ ಷರತ್ತುಗಳನ್ನೊಳಗೊಂಡು ಪಾಲಿಕೆಯ 35 ವಾರ್ಡಗಳಿಗೆ ವಾರ್ಡ ಸಮಿತಿ ರಚಿಸಲಾಗುತ್ತಿದ್ದು, ಆಸಕ್ತ ಅರ್ಹ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ. ವಾರ್ಡ ಪ್ರತಿನಿಧಿಸುವಂತಹ ಮಹಾನಗರ ಪಾಲಿಕೆಯ ಸದಸ್ಯರು ವಾರ್ಡ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. 

 ಇತರ ಹತ್ತು ಸದಸ್ಯರು ಮಹಾನಗರ ಪಾಲಿಕೆಯಿಂದ ನಾಮ ನಿರ್ದೇಶಿತರಾಗಿರತಕ್ಕದುದ, ಅವರ ಪೈಕಿ ಕನಿಷ್ಠ ಇಬ್ಬರು ಸದಸ್ಯರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಸೇರಿದವರಾಗಿರಬೇಕು. 

 ಕನಿಷ್ಠ ಮೂರು ಜನ ಮಹಿಳಾ ಸದಸ್ಯರು ಹಾಗೂ ನಿವಾಸಿ ಕ್ಷೇಮಾಭಿವೃದ್ದಿ ಸಂಘಗಳನ್ನು ಪ್ರತಿನಿಧಿಸುವಂತಹ ಕನಿಷ್ಠ ಇಬ್ಬರು ಸದಸ್ಯರಿರುತ್ತಾರೆ. ವಾರ್ಡ ಸಮಿತಿ ಸದಸ್ಯನಾಗಿ ಅರ್ಜಿ ಸಲ್ಲಿಸುವವರು ಸಂಬAಧಪಟ್ಟ ವಾರ್ಡ ವ್ಯಾಪ್ತಿಯಲ್ಲಿ ಮತದಾರರಾಗಿರುವ ಮತದಾರ ಪಟ್ಟಿಯ ಪ್ರತಿ ಹಾಗೂ ಚುನಾವಣಾ ಗುರುತಿನ ಚೀಟಿ ನಕಲು ಪ್ರತಿಯೊಂದಿಗೆ ನಿಗದಿತ ಅರ್ಜಿ ನಮೂನೆಯನ್ನು ಮಹಾನಗರ ಪಾಲಿಕೆಯ ಪರಿಷತ್ ಶಾಖೆಯಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ : 24-12-2024ರೊಳಗಾಗಿ ಸಲ್ಲಿಸಬೇಕು. 

 ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಪಾಲಿಕೆಯ ಪರಿಷತ್ ಶಾಖೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.


No comments:

Post a Comment