Saturday, June 29, 2024

ಜಿಲ್ಲಾ ಮಟ್ಟದ ಡಿಸಿಸಿ ಮತ್ತು ಡಿಎಲ್‌ಆರ್‌ಸಿ ಸಭೆ ಕೃಷಿ-ಶಿಕ್ಷಣ-ವ್ಯವಹಾರ ಸಾಲಗಳಿಗೆ ಒತ್ತು ನೀಡಿ ಪ್ರಗತಿ ಸಾಧಿಸಲು ಸಿಇಓ ಸೂಚನೆ

ವಿಜಯಪುರ :  ಜಿಲ್ಲೆಯಲ್ಲಿ  ಪ್ರಸಕ್ತ ಸಾಲಿನಲ್ಲಿ ವಿವಿಧ ಬ್ಯಾಂಕುಗಳಿAದ ಒಟ್ಟು ೧೭೦೯೩ ಕೋಟಿ ರೂ. ಸಾಲ ಒದಗಿಸಿದ್ದು, ಕಳೆದ ವರ್ಷಕ್ಕಿಂತ ಶೇ.೩.೮೮ ಪ್ರಗತಿ ಸಾಧಿಸಲಾಗಿದೆ. ಕೃಷಿ, ಶಿಕ್ಷಣ, ವ್ಯವಹಾರ ಮನೆ ಸಾಲಗಳ ಮೇಲೆ ಒತ್ತು ನೀಡಿ ಇನ್ನಷ್ಟು ಹೆಚ್ಚಿನ  ಪ್ರಗತಿ ಸಾಧಿಸುವಂತೆ ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕರಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಸೂಚನೆ ನೀಡಿದರು. 

ಶನಿವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಅಗ್ರಣೀಯ ಬ್ಯಾಂಕ್ ವತಿಯಿಂದ ತ್ರೈಮಾಸಿಕ ಜಿಲ್ಲಾ ಸಲಹಾ ಸಮಿತಿ (ಡಿಎಲ್‌ಸಿ) ಸಭೆ ಹಾಗೂ ಜಿಲ್ಲಾ ಮಟ್ಟದ ಪರಿಶೀಲನಾ (ಡಿಎಲ್‌ಆರ್‌ಸಿ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಒಟ್ಟು ರೂ.೧೭೦೯೩ ಕೋಟಿ ರೂ. ಸಾಲ ಒದಗಿಸಿದ್ದು, ರೂ.೧೮೬೭೬ ಕೋಟಿ ಠೇವಣಿ ಇದೆ. ಕಳೆದ ವರ್ಷಕ್ಕಿಂತ ೩.೮೮% ಸಾಲದಲ್ಲಿ ಪ್ರಗತಿ ಸಾಧಿಸಿದ್ದು ಠೇವಣಿಯಲ್ಲಿ ೧೨.೦೨% ಪ್ರಗತಿ ಸಾಧಿಸಲಾಗಿದೆ. ಜೊತೆಗೆ ಪ್ರಸ್ತುತ ೨೦೨೪-೨೫ ಸಾಲಿನಲ್ಲಿ ೪.೮೧% ಹೆಚ್ಚುವರಿ ಗುರಿ ಹೊಂದಿದ್ದು, ಎಲ್ಲ ಬ್ಯಾಂಕ್‌ಗಳು  ತಮಗೆ ಕೊಟ್ಟ ಗುರಿಯನ್ನು ಸಾಧಿಸಲು ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ, ಶಿಕ್ಷಣ, ವ್ಯವಹಾರ ಮನೆ ಸಾಲಗಳ ಮೇಲೆ ಒತ್ತು ನೀಡಿ ಪ್ರಗತಿ ಸಾಧಿಸಬೇಕು.  ತೋಟಗಾರಿಕೆ ಇಲಾಖೆಗೆ ಜಿಲ್ಲೆಯ ಬೆಳೆ ವಿಮೆ ಬಗ್ಗೆ ಜಾಹೀರಾತು ನೀಡಲು ಎಲ್ಲಾ ಬೆಳೆ ವಿಮೆ ಪರಿಹಾರ ಅರ್ಜಿಗಳು ಮುಂದಿನ ಹದಿನೈದು ದಿನಗಳೊಳಗೆ ಪರಿಹರಿಸಬೇಕು ಮತ್ತು ಬ್ಯಾಂಕಿನವರಿಗೆ ಎಲ್ಲಾ ಸರಕಾರಿ ಸಾಲದ ಅರ್ಜಿಗಳನ್ನು ತುರ್ತಾಗಿ ವಿಲೇವಾರಿ ಮಾಡಬೇಕೆಂದು ಸೂಚನೆ ನೀಡಿದರು.

ಜಿಲ್ಲಾ ಉಪ ಪೊಲೀಸ್ ಅಧೀಕ್ಷಕರಾದ ಶಂಕರ ಮಾರಿಹಾಳ ಅವರು, ಮಾತನಾಡಿ, ಬ್ಯಾಂಕ್‌ಗಳಲ್ಲಿ ಹಾಗೂ ಎ.ಟಿ.ಎಮ್‌ಗಳಲ್ಲಿ ಸೈಬರ್ ಅಪರಾಧಗಳ ಕಡಿವಾಣಕ್ಕೆ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಿಬೇಕು ಹಾಗೂ ಸೈಬರ್ ವಂಚನೆಯಾಗದAತೆ ತಡೆಗಟ್ಟಲು ಸಾರ್ವಜನಿಕರಲ್ಲಿ ಸೂಕ್ತ ತಿಳುವಳಿಕೆ-ಜಾಗೃತಿ ಮೂಡಿಸಬೇಕು ಎಂದು ಅವರು ಹೇಳಿದರು. 

ಸಭೆಯಲ್ಲಿ ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕ ನೇತಾಜಿ ಗೌಡರ್ ಜಿಲ್ಲೆಯ ತ್ರೈಮಾಸಿಕ ವರದಿ ಮಾರ್ಚ್ ೨೦೨೪ ಪೂರ್ಣ ವಿವರಣೆಯನ್ನು ಪ್ರಸ್ತುತ ಪಡಿಸಿದರು. 

ಈ ಸಂದರ್ಭದಲ್ಲಿ ಭಾರತೀಯ ರಿಜರ್ವ್ ಬ್ಯಾಂಕ್ ನ ಲೀಡ್ ಡಿಸ್ಟ್ರಿಕ್ಟ್ ಆಫೀಸರ್ ಅಲೋಕ್ ಸಿನ್ಹಾ, ನಬಾರ್ಡ್ ಜಿಲ್ಲಾ ಅಭಿವೃದ್ದಿ ವ್ಯವಸ್ಥಾಪಕ ವಿಕಾಸ್ ರಾಠೋಡ, ಕೆನರಾ ಬ್ಯಾಂಕ್ ಕ್ಷೇತ್ರೀಯ ಕಾರ್ಯಾಲಯದ ರೇಣುಕಾ ಹಾಗೂ ಜಿಲ್ಲೆಯ ಎಲ್ಲ ಬ್ಯಾಂಕ್ ವ್ಯವಸ್ಥಾಪಕರು ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.


No comments:

Post a Comment