Saturday, June 29, 2024

ಜಾಕ್ವೆಲ್‌ಗಳ ನಿರ್ವಹಣೆಗೆ ಸಕಾಲಕ್ಕೆ ಹಣ ಒದಗಿಸಲು ಆಗ್ರಹ

ವಿಜಯಪುರ : ಲಾಲಬಹಾದ್ದೂರ ಜಲಾಶಯದ ಬಳೂತಿ ಜಾಕ್ವೆಲ್ ಸೇರಿದಂತೆ ಉಳಿದ ಜಾಕ್ವೆಲ್‌ಗಳ ನಿರ್ವಹಣೆಗೆ ಸರಕಾರ ಸಕಾಲಕ್ಕೆ ಹಣ ಬಿಡುಗಡೆ ಗೊಳಿಸಬೇಕೆಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ಶನಿವಾರ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಇವರ ಮುಖಾಂತರ ಜಲಸಂಪನ್ಮೂಲ ಸಚಿವರಾದ ಡಿ.ಕೆ. ಶಿವಕುಮಾರ ಅವರಿಗೆ  ಮನವಿ ಸಲ್ಲಿಸಲಾಯಿತು. 

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಯಂತ್ರೋಪಕರಣ ಕಾರ್ಯನಿರ್ವಹಣೆ ರಿಪೇರಿ ಸೇರಿದಂತೆ ಇನ್ನೂಳಿದ ನಿರ್ವಹಣೆಗಾಗಿ ಸರಕಾರ ಪ್ರತಿವರ್ಷ ಹಣ ಒದಗಿಸಬೇಕು. ಆದರೆ ಈ ವರ್ಷ ಹಣ ಒದಗಿಸುವಲ್ಲಿ ವಿಳಂಬನೀತಿ ಅನುಸರಿಸುತ್ತದೆ. ಇದರಿಂದ ಯಂತ್ರೋಪಕರಣಗಳ ರಿಪೇರಿ ಹಾಗೂ ಇನ್ನೂಳಿದ ಕೆಲಸಗಳು ಕುಂಠಿತಗೊಳುತ್ತಿದೆ. ಒಂದು ವೇಳೆ ಸಕಾಲಕ್ಕೆ ಹಣ ಒದಗಿಸದಿದ್ದಲ್ಲಿ. ಯಂತ್ರೋಪಕರಣಗಳ ದುರಸ್ತಿ ಕಾರ್ಯ ಹಾಗೂ ಅದಕ್ಕೆ ಆಯಿಲಿಂಗ್ ಹಾಗೂ ಗ್ರಿಸ್ ಸೇರಿದಂತೆ ಉಳಿದ ರಿಪೇರಿಗಳು ಸಕಾಲಕ್ಕೆ ಮಾಡದಿದ್ದರೆ ಮೋಟರುಗಳು ಹಾಳಾಗುತ್ತವೆ. ಒಂದು ವೇಳೆ ಯಂತ್ರೋಪಕರಗಳು ಕೆಟ್ಟು ನಿಂತಲ್ಲಿ ಕಾಲುವೆಗಳಿಗೆ ನೀರು ಹರಿಸಲು ಕಷ್ಟವಾಗುತ್ತದೆ. ರೈತರಿಗೆ ಯಾವ ಸಂದರ್ಭದಲ್ಲಿ ನೀರು ಅಗತ್ಯವಿರುತ್ತದೆ ಎಂಬುದು ಹೇಳಲಾಗುವುದಿಲ್ಲ ಅಂತಹ ಸಂದರ್ಭದಲ್ಲಿ ಯಂತ್ರೋಪಕರಣಗಳು ಕೆಟ್ಟರೆ ರೈತರಿಗೆ ತೊಂದರೆಯಾಗುತ್ತದೆ. ಮತ್ತು ಹೊಸ ಮೋಟಾರಗಳ ಬೆಲೆ ಅಂದಾಜು ಒಂದುಕೋಟಿ ಹಣಕ್ಕಿಂತಲೂ ಮೇಲ್ಪಟ್ಟಿವೆ. ಒಂದೇ ಮೋಟಾರು ಕೆಟ್ಟರೂ ಕೋಟಿಗಿಂತಲೂ ಹೆಚ್ಚು ಹಣ ಹಾಳಾಗುತ್ತದೆ. ಈ ಮೊದಲು ಜಾಕ್ವೆಲ್‌ಗಳ ನಿರ್ಮಾಣ ಮಾಡಿದ ಮೆಗಾ ಕಂಪನಿಯವರ ನಿರ್ವಹಣಾ ಅವಧಿ ಮುಕ್ತಾಯಗೊಂಡಿದ್ದು, ಈಗ ಸರಕಾರವೇ ನಿರ್ವಾಹಣ ವೆಚ್ಚ ಭರಿಸಬೇಕಾಗಿದೆ. ಆದರಿಂದ ಪ್ರತಿ ವರ್ಷವೂ ಸಕಾಲಕ್ಕೆ ಅದಕ್ಕೆ ತಗುಲುವ ನಿರ್ವಹಣೆ ವೆಚ್ಚವನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ಮನವಿ ಮೂಲಕ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. 

ಈ ಸಂದರ್ಭದಲ್ಲಿ ಬ.ಬಾಗೇವಾಡಿ ಪ್ರ.ಕಾರ್ಯದರ್ಶಿ ಪ್ರಹ್ಲಾದ ನಾಗರಾಳ, ತಾ.ಉಪಾಧ್ಯಕ್ಷ ಹೊನ್ನಕೇರಪ್ಪ ತೆಲಗಿ, ಚನ್ನಬಸಪ್ಪ ಸಿಂದೂರ, ಶಿವಪ್ಪ ಸುಂಟ್ಯಾನ, ದಾವಲಸಾಬ ನಧಾಪ್, ರಾಜೇಸಾಬ ವಾಲೀಕಾರ, ಪ್ರಭು ದಸ್ತವಾಡ, ಸಿದ್ದಪ್ಪ ಕಲಬೀಳಗಿ, ರೇವಣಸಿದ್ದ ಕೊಂಡಗೂಳಿ, ರಮೇಶ ಕೆಂಪವಾಡ, ಶ್ರೀನಿವಾಸ ಭತಗುಣಕಿ, ಎಸ್.ಜಿ. ಸಂಗೋAದಿಮಠ, ಎನ್.ಕೆ. ಮನಗೊಂಡ, ಬಸವರಾಜ ಬಾಡಗಿ ಮತ್ತಿತರರು ಇದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.



No comments:

Post a Comment