Saturday, May 18, 2024

ನಾವು ಮಾಡುವ ಕೆಲಸ ಸಮಾಜಕ್ಕೆ ದಾರಿ ದೀಪವಾಗಬೇಕು: ನ್ಯಾ. ಸಂತೋಷ ಕುಂದರ್

ವಿಜಯಪುರದಲ್ಲಿ ನ್ಯಾಯಾಧೀಶ ಸಂತೋಷ ಕುಂದರ್ ಅವರನ್ನು ಸನ್ಮಾನಿಸಲಾಯಿತು.

ವಿಜಯಪುರ : ಸೊನ್ನೆಯಿಂದಲೇ ಪರಿಶ್ರಮಿಸಿ ಆರಂಭಿಸಿದ ಕಾರ್ಯ ನೂರಕ್ಕೆ ನೂರು ಯಶಸ್ವಿ ಆಗಲು ಸಾಧ್ಯವಾಗುತ್ತದೆ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನುನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ಸಂತೋಷ  ಕುಂದರ್ ಹೇಳಿದರು.

ವಿಜಯಪುರದಿಂದ ವರ್ಗಾವಣೆಯಾಗಿರುವ ನಿಮಿತ್ತ ವಿಜಯಪುರದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಮಾಜದಲ್ಲಿರುವ ವಿವಿಧ ಕಾಯಕ ನಿರತರು ತಮ್ಮ ಕಾರ್ಯವನ್ನು ಪ್ರಮಾಣಿಕವಾಗಿ ನೂರಕ್ಕೆ ನೂರರಷ್ಟು ಅದರಲ್ಲೇ ತಲ್ಲೀನರಾಗಿ ಶ್ರಮಿಸಿದರೆ ಯಶಸ್ಸು ಹುಡುಕಿಕೊಂಡು ಬರುತ್ತದೆ, ನಾವು ಮಾಡುವ ಕೆಲಸ ಸಮಾಜಕ್ಕೆ ದಾರಿ ದೀಪವಾಗಬೇಕು ಎಂದ ಅವರು ವಿಜಯಪುರದ ಜನರ ಹೃದಯ ವಿಶಾಲತೆ ಮೆಚ್ಚುವಂತಹದ್ದು, ಇಲ್ಲಿಯ ಉತ್ತಮ ಸಂಸ್ಕಾರ ಶ್ಲಾಘನಿಯ ಎಂದರು. ವಿಜಯಪುರ ಜಿಲ್ಲಾ ಕಾನೂನು ಸೇವ ಪ್ರಾಧಿüಕಾರಕ್ಕೆ ಗೌರವ ಧನವಿಲ್ಲದೇ ಉಚಿತವಾಗಿ ಕಾನೂನು ಸೇವೆ ಮಾಡುವ ಜನಸ್ನೇಹಿ ವಕೀಲರನ್ನು ನನ್ನ ಕಾರ್ಯಾವಧಿಯಲ್ಲಿ ನೇಮಿಸಿದ್ದು ಮೊದಲಾದ ಕಾರ್ಯ ಕೈಗೊಂಡಿದ್ದು ಸಂತೋಷ ತಂದಿದೆ, ಜಿಲ್ಲೆಯಲ್ಲಿ ಕಾನೂನು ಸೇವಾ ಪ್ರಾಧಿಕಾರ ಜನಸ್ನೇಹಿ ಆಗಿ ಕಾರ್ಯ ನಿರ್ವಹಿಸಿದ್ದು ಜನರು ಸಹ ಉತ್ತಮ ಸಹಕಾರ ನೀಡಿದ್ದಾರೆ ಎಂದ ಅವರು ವಿಜಯಪುರ ಜಿಲ್ಲೆಯ ವಕೀಲರ ವಾದ ಮಂಡನೆ ಪ್ರಕರಣ ನಡೆಸುವ ಕಾರ್ಯ ವೈಖರಿ ಸಹ ಉತ್ತಮವಾಗಿತ್ತು ಎಂದರು.

ಹಿರಿಯ ಶ್ರೇಣಿ ನ್ಯಾಯಾಧೀಶೆ ಕೆ.ಉಮಾ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ವಿಜಯಪುರಕ್ಕೆ ಬರುವಾಗ ಇಲ್ಲಿನ ಭಾಷೆ ಮತ್ತು ಜನರ ಕುರಿತು ಸ್ವಲ್ಪ ಆತಂಕ ಮನದಲ್ಲಿತ್ತು ಆದರೆ ಇಲ್ಲಿ ಬಂದು ಮೂರು ವರ್ಷ ಸೇವೆ ಸಲ್ಲಿಸಿದ ನಂತರ ಇಲ್ಲಿನ ಜನರಲ್ಲಿ ನ್ಯಾಯದ ಬಗ್ಗೆ ನ್ಯಾಯಾಲಯದ ಬಗ್ಗೆ ಇರುವ ಗೌರವ ಹೆಮ್ಮೆ ಕಂಡು ನಮಗೆ ಇನ್ನು ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಯಿತು, ವಿಜಯಪುರದಲ್ಲಿ ಕ್ರಿಯಾಶೀಲ ಮತ್ತು ಪರಿಶ್ರಮ ಮಾಡುವ ವಕೀಲರಿದ್ದು, ಅವರ ಸೇವೆ ಜನರು ಪಡೆದುಕೊಂಡು ಶೀಘ್ರ ನ್ಯಾಯ ಪಡೆದುಕೊಳ್ಳುತ್ತಿರುವುದು ಸಂತೋಷಕರ ಸಂಗತಿ ಎಂದರು. ಕಾನೂನಿಗೆ ಯಾರು ಗೌರವಿಸುತ್ತಾರೋ ಅವರಿಗೆ ಕಾನೂನು ಗೌರವಿಸುತ್ತದೆ ಎಂದರು.

ಹಿರಿಯ ನ್ಯಾಂiÀiವಾದಿ ಮಲ್ಲಿಕಾರ್ಜುನಭೃಂಗಿಮಠ ಅವರು ಕಾವ್ಯಭಾಷೆಯಲ್ಲೇ ಮಾತನಾಡಿದರು. ಹಿರಿಯ ನ್ಯಾಯವಾದಿ ಆರ್.ಎಸ್. ನಂದಿ, ನ್ಯಾಯವಾದಿ ಲಾಹೋರಿ, ಬಸವರಾಜ ಮಠ, ಮಸೂತಿ, ಶ್ರೀ ಸಿದ್ದೇಶ್ವರ ಕಾನೂನು ಮಹಾವಿದ್ಯಾಯದ ಪ್ರಾಚಾರ್ಯರಾದ ಸುಷ್ಮಾ ದೇಸಾಯಿ, ಅಶೋಕ ಜೈನಾಪೂರ, ಕೆ.ಎಫ್. ಅಂಕಲಗಿ, ರಾಜು ಬಿದರಿ ಉಪಸ್ಥಿತರಿದ್ದರು. 

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.


No comments:

Post a Comment