ಈ ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ
ವಿಜಯಪುರ: ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ರ ಸ್ವೀಪ್ ಕಾರ್ಯಕ್ರಮದ ಅಂಗವಾಗಿ ಮತದಾನದ ಜಾಗೃತಿ ಮೂಡಿಸಲು ಮಹಾನಗರ ಪಾಲಿಕೆ ವತಿಯಿಂದ ನಗರದ ವಿವಿಧ ಸ್ತ್ರೀ ಶಕ್ತಿ ಮತ್ತು ಸ್ವ-ಸಹಾಯ ಸಂಘದ ಗುಂಪುಗಳ ಪ್ರತಿನಿಧಿಗಳಿಗೆ ಸಭೆ ನಡೆಸಿ ತಮ್ಮ ಗುಂಪಿನ ಸದಸ್ಯರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬರುವ ಮತದಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಕುರಿತು ಅರಿವು ಮೂಡಿಸಲು ಆಯೋಜಿಸಿರುವ ಸ್ವೀಪ್ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನೇರವೆರಿಸಲು ಮಹಾನಗರ ಪಾಲಿಕೆ ಸಭಾ ಭವನದಲ್ಲಿ ಸಭೆ ಜರುಗಿತು.
ಸಹಾಯಕ ಚುನಾವಣಾ ಅಧಿಕಾರಿಗಳು ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ವಿಜಯಪುರ ನಗರ ಹಾಗೂ ಮಹಾನಗರ ಪಾಲಿಕೆಯ ಆಯುಕ್ತರಾದ ಶ್ರೀ ಅಶಾದ್ ಉರ್ ರೆಹಮಾನ್ ಷರೀಫ್ ಇವರು ಮಾತನಾಡುತ್ತ ನಮ್ಮ ಭಾರತಿಯರಿಗೆ ರಾಷ್ಟ್ರ ಪ್ರೇಮ ಮತ್ತು ಪ್ರಜಾಪ್ರಭುತ್ವದ ಮೇಲೆ ತುಂಬಾ ಹೆಮ್ಮೆ, ನ್ಯಾಯ ಸಮ್ಮತ ಚುನಾವಣೆ ಪ್ರಜಾಪ್ರಭುತ್ವದ ಆಧಾರ ಸ್ತಂಭ, ಏಕೆಂದರೆ ಜನರ ಸರ್ಕಾರವು, ಜನರಿಂದ ಮತ್ತು ಜನರಗೊಸ್ಕರ ಎಂದು ಚುನಾವಣೆಗಳು ಖಚಿತ ಪಡಿಸುತ್ತವೆ, ಚುನಾವಣೆ ಎಂದರೆ ಜನರು ತಮ್ಮ ರಾಜಕೀಯ ನಾಯಕನನ್ನು ಆಯ್ಕೆ ಮಾಡುವ ಅಭಿಪ್ರಾಯವನ್ನು ವ್ಯಕ್ತಪಡಿಸುವ ಪ್ರಕ್ರಿಯೆ, ಸಮರ್ಥ ರಾಜಕೀಯ ನಾಯಕನನ್ನು ಆಯ್ಕೆ ಮಾಡಲು ಸಾರ್ವಜನಿಕ ಮತದಾನದ ಮೂಲಕ ಈ ಅಭಿಪ್ರಾಯವನ್ನು ವ್ಯಕ್ತಪಡಿಲಾಗುತ್ತದೆ. ಆಯ್ಕೆಯಾದ ಜನಪ್ರತಿನಿಧಿಯು ಶಾಸನಗಳನ್ನು ರೂಪಿಸಿ ದೇಶದ ಸವಾರ್ಂಗಿಣ ಅಭಿವೃದ್ಧಿಯ ಜೊತೆಗೆ ಸಾರ್ವಜನಿಕರ ಅಭಿವೃದ್ಧಿಯ ಚಿಂತನೆ ಸಹ ಮಾಡಬೇಕಾಗುತ್ತದೆ. ಹೀಗಾಗಿ ರಾಜಕೀಯ ನಾಯಕರನ್ನು ಆಯ್ಕೆ ಮಾಡಲು ಚುನಾವಣೆಗಳನ್ನು ನ್ಯಾಯ ಸಮೃತ, ಶಾಂತಿಯುತ ಮತ್ತು ಪರಿಣಾಮಕಾರಿಯಾಗಿ ಮಾಡಬೇಕಾದ ನೈತಿಕ ಹೊಣೆಗಾರಿಕೆ ಎಲ್ಲಾ ಮತದಾರರ ಮೇಲಿದೆ ಹಾಗೂ ಸ್ವೀಪ್ ಕಾರ್ಯಕ್ರಮದ ಅಂಗವಾಗಿ ಸ್ತ್ರೀ ಶಕ್ತಿ ಮತ್ತು ಸ್ವ-ಸಹಾಯ ಸಂಘದ ಗುಂಪುಗಳು ಈ ಅರಿವನ್ನು ಸಮಾಜದ ಸರ್ವರಿಗೂ ಮುಟ್ಟುವಂತೆ ಮಾಡುವ ಜವಾಬ್ದಾರಿ ವಹಿಸಿಕೊಳ್ಳಬೇಕಾಗಿದೆ ಎಂದು ತಿಳಿಸುತ್ತ ತಮ್ಮ ಗುಂಪಿನ ಸದಸ್ಯರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಸ್ವೀಪ್ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನೇರವೆರಿಸಬೇಕು ಹಾಗೂ ಎಲ್ಲರೂ ನೈತಿಕ ಹಾಗೂ ಕಡ್ಡಾಯವಾಗಿ ಮತದಾನದಲ್ಲಿ ಭಾಗವಹಿಸುವಂತೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡುವ ಕುರಿತು ಅರಿವು ಮೂಡಿಸಲು ಕೋರಿದರು.
ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಶ್ರೀ ಮಹಾವೀರ ಬೊರಣ್ಣವರ ಇವರು ಸ್ತ್ರೀ ಶಕ್ತಿ ಮತ್ತು ಸ್ವ-ಸಹಾಯ ಗುಂಪುಗಳು ನೆರೆವೇರಿಸುವ ಸ್ವೀಪ್ ಕಾರ್ಯಕ್ರಮದ ವೇಳಾಪಟ್ಟಿಯಂತೆ ಕ್ಯಾಂಡಲ್ ಮಾರ್ಚ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಗಾಂಧಿ ಚೌಕ ವರಗೆ, ಮತಗಟ್ಟೆಗಳಲ್ಲಿ ಕುಂಭ ಮೇಳ ಕಾರ್ಯಕ್ರಮ, ದಿನಾಂಕ: ಅರಿಶನ ಕುಂಕುಮ ನೀಡಿ ಕಡಿಮೆ ಮತದಾನಯಾಗಿರುವ ಮತಗಟ್ಟೆಗಳಲ್ಲಿ ಅರಿವು ಮೂಡಿಸುವುದು, ಮತಗಟ್ಟೆಗಳಲ್ಲಿ ದ್ವಜಾರೋಹಣ, ಮತಗಟ್ಟೆಗಳಲ್ಲಿ ರಂಗೋಲಿ ಕಾರ್ಯಕ್ರಮಗಳನ್ನು ಹಮ್ಮಿಕೊಲು ವಿನಂತಿಸಿದರು ಹಾಗೂ ಮತದಾರರ ಪ್ರತಿಜ್ಞಾ ವಿಧಿಯನ್ನು ಭೋಧಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಯೋಜನಾಧಿಕಾರಿಗಳು ಶ್ರೀ ಬಸವರಾಜ ಜಗಳೂರ ಮಾತನಾಡುತ್ತ ಎಲ್ಲ ಸ್ತ್ರೀ ಶಕ್ತಿ ಸಂಘ ಹಾಗೂ ಸ್ವ-ಸಹಾಯ ಸಂಘದ ಮಹಿಳೆಯರು ಸಮನ್ವಯತೆಯನ್ನು ಸಾಧಿಸಿ ಸ್ವೀಪ್ ಕಾರ್ಯಕ್ರಮವನ್ನು ಯಶಸ್ವೀ ಗೋಳಿಸಲು ವಿನಂತಿದರು. ಇದೇ ಕಾಲಕ್ಕೆ ಮಹಾನಗರ ಪಾಲಿಕೆಯ ಶ್ರೀಮತಿ ಸಾವಿತ್ರಿ ತಿಪ್ಪನ್ನವರ ಶ್ರೀಮತಿ ಕೌಲಗೆ ಸಿಆರ್‌ಪಿಗಳಾದ ಪ್ರಗತಿ, ಮಮತಾ, ಪ್ರೀಯಾ ಮುಂತಾದವರು ಮಹಾನಗರ ಪಾಲಿಕೆಯ, ವೈದ್ಯಕಿಯ ಇಲಾಖೆಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಭೆಯಲ್ಲಿ 150ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.


No comments:
Post a Comment