Wednesday, January 31, 2024

ರೇಷ್ಮಾ, ಇಂದಿರಾಬಾಯಿಗೆ ಪಿಎಚ್.ಡಿ ಪದವಿ

ರೇಷ್ಮಾ ಚೀರಲದಿನ್ನಿ

ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ರೇಷ್ಮಾ ಚೀರಲದಿನ್ನಿ ಅವರು ಸಲ್ಲಿಸಿದ್ದ “ಎಜ್ಯುಕೇಶನ್ ಕಾಂಟ್ರಿಬ್ಯೂಶನ್ಸ್ ಆಫ್ ಮೌಲಾನಾ ಅಬ್ದುಲ್ ಕಲಾಮ ಆಜಾದ ಆಂಡ್ ಇಟ್ಸ್ ರೆಲೆವನ್ಸ್ ಟು ಪ್ರಸೆಂಟ್ ಸಿನಾರಿಯೋ” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್ಡಿ ಪದವಿ ನೀಡಿದೆ.

ರೇಷ್ಮಾ ಚೀರಲದಿನ್ನಿ ಅವರು ಶಿಕ್ಷಣ ವಿಭಾಗದ ಪ್ರೊ.ಬಿ.ಎಲ್.ಲಕ್ಕಣ್ಣವರ್ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಡಾಕ್ಟರೇಟ್ ಪದವಿ ಪಡೆದಿರುವ ರೇಷ್ಮಾ ಚೀರಲದಿನ್ನಿ ಅವರನ್ನು ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ, ಕುಲಸಚಿವ ಪ್ರೊ.ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ. ಚಂದ್ರಶೇಕರ ಅಭಿನಂದಿಸಿದ್ದಾರೆ.




ಇಂದಿರಾಬಾಯಿ ಬೀರಲದಿನ್ನಿ 

 ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಇಂದಿರಾಬಾಯಿ ಬೀರಲದಿನ್ನಿ ಅವರು ಸಲ್ಲಿಸಿದ್ದ “ಇನ್-ಸಿಲಿಕೊ ಡ್ರಗ್ ಡಿಸೈನಿಂಗ್ ಸ್ಟಡೀಸ್ ಆಫ್ ಪೈಟೋಕೆಮಿಕಲ್ಸ್ ಐಸೋಲೇಟೆಡ್ ಫ್ರಮ್ ಲೂನಿಯಾ ಪ್ರೊಕುಂಬೆನ್ಸ್ ಅಗೆನೆಸ್ಟ್ ಡೈಯಬಿಟೀಸ್ ಮೆಲಿಟಸ್” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ. 

ಇಂದಿರಾಬಾಯಿ ಬೀರಲದಿನ್ನಿ ಅವರು ಜೈವಿಕ ಮಾಹಿತಿ ವಿಭಾಗದ ಪ್ರೊ.ಜಾಯ್.ಹೆಚ್.ಹೊಸ್ಕೇರಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಡಾಕ್ಟರೇಟ್ ಪದವಿ ಪಡೆದಿರುವ ಇಂದಿರಾಬಾಯಿ ಬೀರಲದಿನ್ನಿ ಅವರನ್ನು ಕುಲಪತಿ 

ಪ್ರೊ.ಬಿ.ಕೆ.ತುಳಸಿಮಾಲ, ಕುಲಸಚಿವ ಪ್ರೊ.ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್.ಎಂ. ಚಂದ್ರಶೇಕರ ಅಭಿನಂದಿಸಿದ್ದಾರೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು

No comments:

Post a Comment