ವಿಜಯಪುರ : ಶ್ರೀ ಗುರು ಕುಮಾರೇಶ್ವರ ಪ್ರತಿಷ್ಠಾನ (ರಿ) ಶ್ರೀ ಗಾನಯೋಗಿ ಪಂಚಾಕ್ಷರ ಪ್ರತಿಷ್ಠಾನ (ರಿ) ವಿಜಯಪುರ ಪ. ಪೂ. ಶ್ರೀ ಮನ.ನಿ. ಪ್ರ. ಕುಮಾರ ಶಿವಯೋಗಿಗಳ 94ನೇ ಪುಣ್ಯಸ್ಮರಣೋತ್ಸವ ಹಾಗೂ ಶ್ರೀ ಗಾನಯೋಗಿ ಶಿವಯೋಗಿ ಪಂ. ಪಂಚಾಕ್ಷರ ಗವಾಯಿಗಳವರ 132ನೇ ಜಯಂತ್ಯೋತ್ಸವವನ್ನು ದಿನಾಂಕ: 02-02-2024 ರಂದು ಬೆಳಿಗ್ಗೆ 11 ಗಂಟೆಗೆ ವಿಜಯಪುರ ನಗರದ ಗಾನಬನದ ಆವರಣ, ಎನ್.ಸಿ.ಸಿ. ಕಾರ್ಯಾಲಯದ ಹಿಂದುಗಡೆ ಶ್ರೀ ಗಾನಯೋಗಿ ಪಂಚಾಕ್ಷರ ಗವಾಯಿಗಳ ಮಾರ್ಗದಲ್ಲಿ ಹಮ್ಮಿಕೊಳ್ಳಲಾಗಿದೆ
ಶ್ರೀ ಸಿದ್ದಯ್ಯ ಪುರಾಣಿಕರ ವಿರಚಿತ ಶರಣ ಪರಿತಾಮೃತ ಪ್ರವಚನ ಕಾರ್ಯಕ್ರಮ ದಿನಾಂಕ 24-01-2024 ರಿಂದ ದಿನಾಂಕ 31-01-2024 ರವೆಗೆ ಡಾ. ಶಿವರಾಜ ಶಾಸ್ತಿçÃಗಳು ಹೆರೂರ ಇವರಿಂದ ಸಾಗಿ ಬಂದ ಪ್ರವಚನ ಮಂಗಲಗೊAಡಿತು.
ದಿನಾAಕ: 01-02-2024 ಗುರುವಾರ ಸಂಜೆ 6 ಗಂಟೆಗೆ ಸಂಗೀತ ಸಮಾರಂಭ ಜರುಗಲಿದೆ. ವಿರಕ್ತಮಠದ ಶ್ರೀ ಮ.ನಿ.ಪ್ರ. ಮುರಘೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿಕೊಳ್ಳಲಿದ್ದಾರೆ. ಸಂಗಮೇಶ್ವರ ಸಂಸ್ಥಾನ ಹಿರೇಮಠ, ಮುದ್ದಡಗಾ ಬಲಗುಂದಿ ಶ್ರೀ ಷ. ಬ್ರ. ವೈಧ್ಯಶ್ರೀ ಸದ್ಯೋಜಾತ ರೇಣುಕ ಶಿವಾಚಾರ್ಯರು ನೇತೃತ್ವ ವಹಿಸಿಕೊಳ್ಳಲಿದ್ದಾರೆ. ಧರ್ಮ ಸುಧಾಕರ ಹಾಗೂ ಜಮಖಂಡಿಯ ಜನಪ್ರೀಯ ಶಾಸಕರಾದ ನಾಡೋಜ ಜಗದೀಶ ಗುಡಗುಂಟಿ ಉದ್ಘಾಟನೆಮಾಡಲಿದ್ದಾರೆ.
ಶ್ರೀ ಗಾನಯೋಗಿ ಪಂಚಾಕ್ಷರ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಬಸವರಾಜ ಪಿ. ಕೆಂಗನಾಳ ಅಧ್ಯಕ್ಷತೆ ವಹಿಸಲಿದ್ದಾರೆ. ಬಾಗಲಕೋಟ ವಿಧಾನ ಪರಿಷತ್ ಸದಸ್ಯರಾದ ಪಿ.ಎಚ್.ಪೂಜಾರ, ಉಪನೋಂದಣಾಧಿಕಾರಿಗಳು ಹಾಗೂ ಮಹಾಪೋಷಕರು, ಶ್ರೀ ಗಾನಯೋಗಿ ಪಂಚಾಕ್ಷರ ಪ್ರತಿಷ್ಠಾನ ಬಿ.ಎಸ್. ಬಿರಾದಾರ, ಮಹಾನಗರ ಪಾಲಿಕೆ ಸದಸ್ಯರಾದ ಎಂ.ಎಸ್. ಕರಡಿ, ಜ್ಞಾನಜ್ಯೋತಿ ಸ್ಕೂಲ್‌ನ ಮಲ್ಲಿಕಾರ್ಜುನ ಲೋನಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸುಭಾಸಚಂದ್ರ ಕನ್ನೂರ ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ.
ದಿನಾಂಕ: 02-02-2024 ಶುಕ್ರವಾರ ಬೆಳಿಗ್ಗೆ 5 ರಿಂದ 7 ಗಂಟೆಯವರೆಗೆ ಗುರುತ್ರಯರ ಶಿಲಾಮೂರ್ತಿಗಳಿಗೆ ವೇದೋಕ್ತ ಪೂಜಾ ಕೈಂಕರ್ಯ ನೆರವೇರುವುದು. ಬೆಳಿಗ್ಗೆ 9 ಗಂಟೆಗೆ ಗುರುವರ್ಯರ ಭಾವಚಿತ್ರದ ಮೆರವಣಿಗೆ ಜರುಗಲಿದೆ.
ತದನಂತರ ಧರ್ಮ ಸಭೆ ಜರುಗಲಿದೆ. ಜಮಖಂಡಿಯ ಓಲೆಮಠದ ಡಾ. ಶ್ರೀ ಮ.ನಿ.ಪ್ರ. ಅಭಿನವ ಕುಮಾರ ಚನ್ನಬಸವ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿಕೊಳ್ಳಲಿದ್ದಾರೆ. ವಿರಕ್ತಮಠ, ನಿಢೋಣಿ ಎರಡೆತ್ತಿನಮಠ, ಹುಬ್ಬಳ್ಳಿಯ ಶ್ರೀ ಮ.ನಿ.ಪ್ರ. ಸಿದ್ಧಲಿಂಗೇಶ್ವರ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಗವಿಮಠ, ಬೊಮ್ಮನಹಳ್ಳಿಯ ಶ್ರೀ ಷ.ಬ್ರ. ಗುರುಶಾಂತ ಶಿವಾಚಾರ್ಯ ಮಹಾಸ್ವಾಮಿಗಳು ನೇತೃತ್ವ ವಹಿಸಿಕೊಳ್ಳಲಿದ್ದಾರೆ. ಸಂಗಮೇಶ್ವರ ಸಂಸ್ಥಾನ ಹಿರೇಮಠ, ಮುದ್ದಡಗಾ, ಬಿಲಗುಂದಿಯ ಶ್ರೀ ಷ.ಬ್ರ.ವೈಧ್ಯಶ್ರೀ ಸದ್ಯೋಜಾತ ರೇಣುಕ ಶಿವಾಚಾರ್ಯರ ಸಮ್ಮುಖ ವಹಿಸಿಕೊಳ್ಳಲಿದ್ದಾರೆ. ಆಯುಕ್ತರು ನಗರಾಭಿವೃದ್ಧಿ ಪ್ರಾಧಿಖಾರದ ವಿಜಯಪುರದ ರಾಜಶೇಖರ ಡಂಬಳ ಉದ್ಘಾಟಿಸಲಿದ್ದಾರೆ. ಶ್ರೀ ಪ್ರವಚನ ಕೇಸರಿ ವೇ.ಮೂ. ವಿರೂಪಾಕ್ಷಯ್ಯ ಶಾಸ್ತಿçಗಳು, ಅಧ್ಯಕ್ಷರು ಶ್ರೀ ಕುಮಾರೇಶ್ವರ ಪತ್ತಿನ ಸಹಕಾರಿ ಸಂಘದ ಎಂ.ಬಿ. ಹಂಗರಗಿ, ಕರ್ನಾಟಕ ಅಂಧರ ವಿಮೋಚನ ವೇದಿಕೆಯ ಮುದಿಗೆರೆ ರಮೇಶಕುಮಾರ, ನಾಗಯ್ಯ ಜಿ. ಹಿರೇಮಠ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಗಾನಯೋಗಿ ಪಂಚಾಕ್ಷರ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಬಸವರಾಜ ಪಿ. ಕೆಂಗನಾಳ, ಗಾನಬನ ಗವಾಯಿಗಳಾದ ಪಂ.ತೋAಟದಾರ್ಯ ಕವಿ ಉಪಸ್ಥಿತರಿರಲಿದ್ದಾರೆ.
ಖ್ಯಾತ ಯುವ ಗಾಯಕರಾದ ಶ್ರೀ ವೆಂಕಟೇಶ ಅಲಕೋಡ ಅವರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ.
ಸುಭಾಸಚಂದ್ರ ಕನ್ನೂರ, ಕೈಲಾಸನಾಥ ಮದಭಾವಿ ನಿರೂಪಿಸಲಿದ್ದಾರೆ. ಶ್ರೀ ಪಂ. ತೋಂಟಯರ್ದಾರ್ಯ ಕವಿ ಗವಾಯಿಗಳವರ ಸಂಗೀತದೊAದಿಗೆ ಕಾರ್ಯಕ್ರಮ ಸಂಪನ್ನಗೊಳ್ಳುವುದು ಎಂದು ಪ್ರಕಟಣೆಯಲ್ಲಿ ಪಂಚಾಕ್ಷರಿ ಶಾಸ್ತಿç ತಿಳಿಸಿದ್ದಾರೆ.
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
No comments:
Post a Comment