Thursday, January 4, 2024

ನೂತನ ಶಾಲಾ ಸುದಾರಣ ಸಮಿತಿ ರಚನೆ


ಈ ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ 

ವಿಜಯಪುರ:

ಮೋರಟಗಿ ಸ್ಥಳಿಯ ಗ್ರಾಮದ ಜನತಾ ಕಾಲೂನಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನೂತನ ಶಾಲಾ ಸುದಾರಣ ಸಮಿತಿ ರಚನೆ ಮಾಡಲಾಯಿತು.
ಸರಕಾರ ಮಕ್ಕಳ ಶಿಕ್ಷಣಕ್ಕಾಗಿ ಹತ್ತು ಹಲವು ವಿಧಗಳಲ್ಲಿ ಅನುದಾನ ಒದಗಿಸಿ ಮಕ್ಕಳ ಕಲಿಕಾ ವೃತ್ತಿಗೆ ಸಹಕಾರ ನೀಡುತ್ತಿದ್ದು ಇದನ್ನು ಸದ್ಭಳಕೆ ಮಾಡಲು ಸರಕಾರಿ ಶಾಲೆಯಲ್ಲಿ ವಿದ್ಯ ಕಲಿಯುವಂತ ಮಕ್ಕಳ ಪಾಲಕರು ಉಸ್ತುವಾರಿ ವಹಿಸಿದರೆ ಸರಕಾರದ ಕನಸು ನನಸಾಗುವುದು ಎಂದು ಮಕ್ಕಳ ಪಾಲಕರಿಗೆ ಅಧೀಕಾರ ಕೊಡುವಂತ ದಿಟ್ಟ ನಿರ್ಧಾರ ಕೈಗೊಂಡಿತು.ಅದರಂತೆ ಜನತಾ ಕಾಲೂನಿ ಸರಕಾರಿ ಪ್ರಾಥಮಿಕ ಶಾಲೆಯ ಎಸ್.ಡಿ.ಎಮ್.ಸಿ.ಅಧ್ಯಕ್ಷರಾಗಿ ಬಸವರಾಜ ಸುಂಟ್ಯಾಣ (ಮ್ಯಾಗೇರಿ) ಅಧ್ಯಕ್ಷರಾಗಿ ಉಪಾಧ್ಯಕ್ಷರಾಗಿ ಸಂತೋಷ ಕೆರಿಗೊಂಡ ಅವಿರೋಧವಾಗಿ ಆಯ್ಕೆಯಾದರು.
ಶಿಕ್ಷಣ ಸಂಯೋಜಕರಾದ ರವಿ ಬಿರಾದಾರ ಮುಖ್ಯಗುರುಗಳಾದ ವೈಜನಾಥ ಅಂಕಲಗಿ ಅರುಣಕುಮಾರ ಸಿಂಗೆ ರವಿಕಾಂತ ನಡುವಿನಕೆರಿ ಸಹ ಶಿಕ್ಷಕರಾದ ಶ್ರೀಶೈಲ ನಾಟೀಕಾರ ಸೇರಿದಂತೆ ಹಲವರು ಇದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

No comments:

Post a Comment