ನಗರದಲ್ಲಿ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗೆ ಬರಗಾಲ ಪರಿಹಾರ ಸೇರಿದಂತೆ ವಿವಿಧ ಜ್ವಲಂತ ಸಮಸ್ಯೆಗಳನ್ನು ಬಗೆರಿಸಬೇಕು, ಈ ನಿಟ್ಟಿನಲ್ಲಿ ಬೆಳಗಾವಿ ಚಲೋ ಕರೆ ಕೊಡಲಾಗಿದೆ, ಕೂಡಲೇ ಸರಕಾರ ನೆಪ ಮಾತ್ರಕ್ಕೆ ಉತ್ತರ ಕರ್ನಾಟಕದಲ್ಲಿ 10 ದಿನಗಳ ಕಾಲ ಪ್ರವಾಸಕ್ಕೆ ಬಂದ ಹಾಗೆ ಬಂದು ಹೋಗುವ ನೆಪ ಮಾತ್ರದ ಅಧಿವೇಶನ ನಮಗೆ ಬೇಕಾಗಿಲ್ಲ, ಕೂಡಲೇ ರೈತರಿಗೆ ಅನುಕೂಲ ಆಗುವ ಯೋಜನೆಗಳನ್ನು ತರಬೇಕು ಎಮದು ಹೇಳಿದರು.
ಈ ಸಂದರ್ಭ ಜಿಲ್ಲಾಧ್ಯಕ್ಷರಾದ ಸಂಗಮೆಶ ಸಗರ ಮಾತನಾಡುತ್ತಾ ಬರಗಾಲದ ನಿಮಿತ್ಯ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಪ್ರತಿ ಎಕರೆಗೆ 50000 ಪರಿಹಾರ ನೀಡಬೇಕು, ರೈತರಿಗೆ ಕಂಟಕವಾಗಿರುವ ಕೃಷಿ ಕಾಯ್ದೆ, ಎ.ಪಿ.ಎಂ.ಸಿ ಕಾಯ್ದೆ, ಜಾನುವಾರು ಹತ್ಯ ಕಾಯ್ದೆಗಳನ್ನು ಹಿಂಪಡೆಯಬೇಕು, ವಿದ್ಯುತ್ ಇಲಾಖೆಯನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿರುವುದುನ್ನು ಬಿಟ್ಟು ಸರಕಾರದಿಂದಲೇ ಮುಂದುವರೆಸಬೇಕು, ಮೊದಲಿನಂತೆ ರೈತರ ಕೃಷಿ ಪಂಪಸೆಟ್‍ಗಳಿಗೆ ಹಗಲು 12 ಘಂಟೆ 3 ಫೆಸ್ ಹಾಗೂ ರಾತ್ರಿ ಸಿಂಗಲ್ ಫೆಸ್ ಉಚಿತ ವಿದ್ಯುತ್ ನೀಡಬೇಕು, ರೈತರಿಗೆ ಇಲ್ಲಿಯವರೆಗೆ 3-4 ವರ್ಷಗಳಿಂದ ಬಾಕಿ ಉಳಿದ ಬೆಳೆ ವಿಮೆಯನ್ನು ಕೂಡಲೇ ಕೊಡಬೇಕು, ಕೃಷ್ಣಾ ನದಿಯ ಆಲಿಮಟ್ಟಿ ಆಣೆಕಟ್ಟನ್ನು ಎತ್ತರಿಸಿ ಆದಕ್ಕೆ ನಷ್ಟಗೊಂಡ ರೈತರಿಗೆ ಪರಿಹಾರ ನೀಡಬೇಕು, ಕಬ್ಬಿಗೆ ಪ್ರತಿ ಟನ್ನಗೆ 5000 ರೂಪಾಯಿ ಘೋಷóಣೆ ಮಾಡಿ, ಕಬ್ಬಿಗೂ ವಿಮೆ ವ್ಯವಸ್ಥೆ ಮಾಡಬೇಕು, ಜಿಲ್ಲೆಯಲ್ಲಿ ಅತೀ ಹೆಚ್ಚು ಬೆಳೆಯುತ್ತಿರುವ ದ್ರಾಕ್ಷಿಗೆ, ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಅದರ ಉಪ ಉತ್ಪನ್ನಗಳನ್ನು ಮಾಡುವಂತೆ ಉತ್ತೆಜಿಸುವ ಯೋಜನೆ ಮಾಡಬೇಕು, ಜಿಲ್ಲೆಯಲ್ಲಿ ಮಾಡಲಾಗಿರುವ ಎಲ್ಲಾ ನೀರಾವರಿ ಯೋಜನೆಯ ಕಾಲುವೆ ಹಾಗೂ ಉಪ ಕಾಲುವೆಗಳಲ್ಲಿ ಮಣ್ಣು ಬಿದ್ದು, ಜಾಲಿಕಂಠಿಗಳು ಬೆಳೆದು ನೀರು ಸಾಗಲು ಆಗುತ್ತಿಲ್ಲ, ಸ್ವಚ್ಛತೆ ಮಾಡಬೇಕು, ರೈತರಿಗೆ ಸಂಭಂದಿಸಿದ ಕೃಷಿ, ಅರಣ್ಯ, ತೋಟಗಾರಿಕೆ, ಪಶು ಸಂಗೋಪನೆ ಇಲಾಖೆಯಲ್ಲಿ ಖಾಲಿ ಆಗಿರುವ ಹುದ್ದೆಗಳನ್ನು ತುಂಬಬೇಕು, ಹೊಸದಾಗಿ ತಾಲೂಕುಗಳನ್ನು ಘೋಷಣೆ ಮಾಡಿ ಸುಮಾರು 6-7 ವರ್ಷಗಳೇ ಕಳೆದರೂ ಇನ್ನೂ ಯಾವುದೇ ಇಲಾಖೆಯ ಕಚೇರಿ ಆಗಿಲಿ ಅಭಿವೃದ್ದಿಯಾಗಲಿ ಆಗಿಲ್ಲ, ಕೂಡಲೇ ಮಾಡಬೇಕು. ಈ ಮೇಲಿನ ಎಲ್ಲಾ ಬೇಡಿಕೆಗಳನ್ನು ಸರಕಾರ ನಡೆಯುತ್ತಿರುವ ಚಳಿಗಾಲದ ಅಧಿವೆಶನದಲ್ಲಿ ಬೇಷರತ್ತಾಗಿ ಮಾಡಬೆಕು ಎಂದು ಆಗ್ರಹಿಸಿದರು.
ಕೋಲಾರ ತಾಲೂಕಾ ಅಧ್ಯಕ್ಷರಾದ ಸೋಮು ಬಿರಾದಾರ ಮಾತನಾಡುತ್ತಾ ರೈತರ ತುಟಿಗೆ ಜೇನು ಸವರಿ, ತುತ್ತು ಅನ್ನಕ್ಕೆ ವಿಷ ಬೆರೆಸಿ ರೈತರ ಬಾಳಿಗೆ ಕೊಳ್ಳಿ ಇಟ್ಟು ದ್ರೋಹ ಬಗೆಯುತ್ತಿರುವ ಸರಕಾರ ರೈತರ ಮರಣ ಶಾಸನ ಬರೆಯಲು ಹೊರಟಿದೆ, 224 ಶಾಸಕರು ರೈತರ ಸಮಸ್ಯೆ ಬಗ್ಗೆ ತುಟ್ಟಿ ಬಿಚ್ಚುತ್ತಿಲ್ಲ, ಅಂತವರು ರೈತರ ಹೆಸರಲ್ಲಿ ಅಧಿಕಾರಕ್ಕೆ ಬಂದಿರುವುದಾದರು ಮರೆಯದೇ ರೈತರ ಧ್ವನಿಯಾಗಿ ಅಧಿವೇಶನದಲ್ಲಿ ಮಾತನಾಡಬೇಕು ಇಲ್ಲವಾದಲ್ಲಿ ಮುಂದಿನ ಚುನಾವಣೆಯಲ್ಲಿ ರೈತರೆಲ್ಲರೂ ಒಗ್ಗಟ್ಟಾಗಿ ಗಟ್ಟಿ ನಿರ್ಣಯ ಮಾಡುತ್ತೇವೆ ಎಂದರು.
ಪತ್ರಿಕಾ ಘೋಷ್ಠಿಯಲ್ಲಿ ಜಿಲ್ಲಾ ಗೌರವಾಧ್ಯಕ್ಷರಾದ ಕಲ್ಲಪ್ಪ ಪಾರಶೆಟ್ಟಿ, ಜಿಲ್ಲಾ ಸಂಚಾಲಕರಾದ ರಾಮನಗೌಡ ಪಾಟೀಲ, ಸಂಚಾಲಕರಾದ ಪ್ರತಾಪ ನಾಗರಗೋಜಿ, ಜಿಲ್ಲಾ ಸಂಚಾಲಕರಾದ ನಜೀರ ನಂದರಗಿ, ತಿಕೋಟಾ ಸಂಚಾಲಕರು ಶಾನುರ ನಂದರಗಿ, ಅಭಿಷೇಕ ಹೂಗಾರ, ಶಶಿಕಾಂತ ಬಿರಾದಾರ, ಖಾದರಸಾಬ ವಾಲಿಕಾರ, ಗುರುಲಿಂಗ ಕಾಳಿ, ಇಲಾಯೀ ವಾಲಿಕಾರ, ಆಕಾಶ ಜಾನವರ, ರಾಮು ಗೌರಗುಂಡ, ರಾಜಕುಮಾರ ಹಿರೇಕುರಬರ, ಸುಧಾಕರ ನಲವಡೆ, ರಿಯಾಜ್ ವಾಲಿಕಾರ, ಸೇರಿದಂತೆ ಅನೇಕರು ಇದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಪಡಿಸಲಾಗುವುದು.
No comments:
Post a Comment