ಈ ದಿವಸ ವಾರ್ತೆ ವಿಜಯಪುರ : ಸಾಂಪ್ರದಾಯಿಕ ಕುಟುಂಬ ವ್ಯವಸ್ಥೆಯಲ್ಲಿ ಹೆಣ್ಣು ಮತ್ತು ಗಂಡಿನ ಮಧ್ಯ ಸಮಾನತೆ ತರಲು ಪ್ರತಿ ಮನೆಯ ಗೃಹಿಣಿ ಪ್ರಯತ್ನಿಸಬೇಕು. ಕುಟುಂಬದಿಂದಲೇ ಸಮಾನತೆ ಅರಿವು ಪ್ರಾರಂಭವಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಸಂತೋಷ ಕುಂದರ್ ಹೇಳಿದರು.
ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಜಯಪುರ ನಗರ ಶಿಶು ಅಭಿವೃದ್ಧಿ ಯೋಜನಾ ಇಲಾಖೆ ಇವರ ಸಹಯೋಗದಲ್ಲಿ ನಗರದ ಕಕ್ಕಯ್ಯ ಕಾಲೋನಿಯಲ್ಲಿ ಬುಧವಾರ ಹಮ್ಮಿಕೊಂಡ ಹೆಣ್ಣನ್ನು ರಕ್ಷಿಸಿ ಹೆಣ್ಣು ಮಕ್ಕಳಿಗೆ ಕಲಿಸಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಉಮೇಶ ವಂದಾಲ ಅವರು ಮಾತನಾಡಿ, ಸಮಾಜದಲ್ಲಿನ ಲಿಂಗಾನುಪಾತ ವೃದ್ಧಿ, ಮಹಿಳಾ ಮತ್ತು ಮಕ್ಕಳ ಹಕ್ಕು, ಸುರಕ್ಷತೆ ಹಾಗೂ ಸಮಾನತೆ ನಿಟ್ಟಿನಲ್ಲಿ ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ ಪ್ರತಿಯೊಬ್ಬರು ಹೆಣ್ಣು ಮಕ್ಕಳನ್ನು ಗೌರವದಿಂದ ಕಾಣಬೇಕು ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಕೆ.ಚವ್ಹಾಣ “ಬೇಟಿ ಬಚಾವೋ, ಬೇಟಿ ಪಡಾವೋ” ಕಾರ್ಯಕ್ರಮದ ಗುರಿ ಮತ್ತು ಉದ್ದೇಶ, ವಕೀಲರಾದ ಎಂ.ಸಿ.ಲೋಗಾಂವ್ ಬಡತನದಲ್ಲಿರುವಂತಹ ಹೆಣ್ಣು ಮಕ್ಕಳಿಗೆ ಉಚಿತ ಕಾನೂನಿನ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ತಾಯಂದಿಯರಿಗೆ ಸನ್ಮಾನ ಹಾಗೂ ಮಕ್ಕಳಿಂದ ವೇಷಭೂಷಣ ಧರಿಸಿ ಅಭಿನಯ ಗೀತೆಗಳ ಪ್ರದರ್ಶನ ಜರುಗಿತು. ಮಕ್ಕಳಿಗೆ ಕಿರು ಕಾಣಿಕೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ್ರೀಮತಿ ದೀಪಾಕ್ಷಿ ಜಾನಕಿ, ಪಾಲಿಕೆ ಸದಸ್ಯರಾದ ಶ್ರೀಮತಿ ಸುನೀತಾ ಮಹೇಶ ಒಡೆಯರ್, ಆರೋಗ್ಯ ಇಲಾಖೆಯ ಶ್ರೀಮತಿ ಮರಿಯಮ್ಮ ಹಾಗೂ ಮೇಲ್ವಿಚಾರಕಿಯರು, ತಾಯಂದಿರು, ಮಕ್ಕಳು ಗರ್ಭಿಣಿ/ಬಾಣಂತಿಯರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಮೇಲ್ವಿಚಾರಕಿಯರಾದ ಶ್ರೀಮತಿ ಅಶ್ವಿನಿ ಸನದಿ ನಿರೂಪಿಸಿದರು ಶ್ರೀಮತಿ ಸಿ.ಎಚ್. ಆಲಗೂರ ಸ್ವಾಗತಿಸಿ ವಂದಿಸಿದರು.
ಆಸಕ್ತರಿಗೆ ವಿಶೇಷ ಸೂಚನೆ:
No comments:
Post a Comment