ಈ ದಿವಸ ವಾರ್ತೆ
ವಿಜಯಪುರ: ಆಮ್ ಆದ್ಮ ಪಕ್ಷದ ರಾಜ್ಯಾಧ್ಯಕ್ಷರಾದ ಡಾ. ಮುಖ್ಯಮಂತ್ರಿ ಚಂದ್ರು ಅವರು ಇದೇ ರವಿವಾರ ಅ. 15ರಂದು ವಿಜಯಪುರ ಜಿಲ್ಲೆಗೆ ಆಗಮಿಸಲಿದ್ದು, ದೇವರಹಿಷ್ಕರಗಿ ತಾಲೂಕಿನ ಸುಕ್ಷೇತ್ರ ಕೊಂಡಗುಳಿ ಗ್ರಾಮದಲ್ಲಿ ಶ್ರೀ ದೇವಿ ಪುರಾಣ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿಜಯಪುರ ಜಿಲ್ಲಾ ಆಪ್ ಜಿಲ್ಲಾಧ್ಯಕ್ಷರಾದ ಭೋಗೇಶ್ ಸೋಲಾಪುರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಚಂದ್ರು ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಆಮ್ ಆದಿ ಪಾರ್ಟಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಉತ್ತರ ಕರ್ನಾಟಕ ವಲಯದ ಉಸ್ತುವಾರಿ ಅರ್ಜುನ್ ಹಲಗಿಗೌಡರ್, ರಾಜ್ಯ, ಉಪಾಧ್ಯಕ್ಷರು ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿಗಳಾದ ರೋಹನ್ ಐನಾಪುರ್ ಮತ್ತಿತರೇ ಮುಖಂಡರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಅ. 15ರ ರವಿವಾರದಂದು ಮುಖ್ಯ ಮಂತ್ರಿ ಚಂದ್ರು ಅವರು, ವಿಜಯಪುರ ನಗರಕ್ಕೆ ಆಗಮಿಸಿ, ಬೆಳ್ಳಿಗೆ 11:00 ಘಂಟೆಗೆ ಪಕ್ಷದ ಕಚೇರಿ ಜಲನಗರದಲ್ಲಿ ಪತ್ರಿಕಾ ಗೊಷ್ಠಿಯನ್ನು ನಡೆಸಲಿದ್ದಾರೆ. ತದನಂತರ ಜಿಲ್ಲೆಯ ಆಪ್ ಪಕ್ಷದ ನೂತನ ಪದಾಧಿಕಾರಿಗಳನ್ನ ಉದ್ದೇಶಿಸಿ ಸಭೆಯನ್ನು ನಡೆಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಜು ಶೆಟಗಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಆಸಕ್ತರಿಗೆ ವಿಶೇಷ ಸೂಚನೆ:
No comments:
Post a Comment