ಈ ದಿವಸ ವಾರ್ತೆ
ವಿಜಯಪುರ: ನಂಬಿಕೆ, ವಿಶ್ವಾಸ ಮತ್ತು ಪ್ರಾಮಾಣಿಕತೆಯಿಂದ ಮಾತ್ರ ಸಹಕಾರಿ ವಲಯ ಉಳಿಯಲು ಸಾಧ್ಯವಿದೆ. ಪರಸ್ಪರ ಸಹಕಾರ ಮನೋಭಾವನೆ ಮೂಡಿದರೆ ಸಂತೋಷ, ಸಮಾನತೆ ಕಾಣಬಹುದು ಎಂದು ಸೊಸೈಟಿ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಹೇಳಿದರು.
ಅವರು ನಗರದ ವನಶ್ರೀ ಭವನದಲ್ಲಿ ದಿ ಕರ್ನಾಟಕ ಕೋ-ಆಪ್ ಕ್ರೆಡಿಟ್ ಸೊಸೈಟಿ ಲಿ. ಬ್ಯಾಂಕಿನ 23 ನೇ ವಾರ್ಷಿಕ ಸರ್ವಸಾಧರಣ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಹಕಾರ ಮನೋಭಾವ,ಪ್ರಾಮಾಣಿಕತೆ, ನಿಷ್ಠೆ,
ಸಹಕಾರಿ ತತ್ವದಡಿ ಹಲವು ಯೋಜನೆಗಳ ಮೂಲಕ ಜನರನ್ನು ಆರ್ಥಿಕವಾಗಿ ಸದೃಢಗೊಳಿಸುತ್ತಿದ್ದು, ಇಂದಿನ ಆಧುನಿಕ ಯುಗದಲ್ಲಿ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ರಾಷ್ಟ್ರೀಕೃತ ಬ್ಯಾಂಕುಗಳ ಹಾಗೆಯೇ ಸೌಲಭ್ಯ ಕಲ್ಪಿಸುತ್ತಿರುವುದು ಶ್ಲಾಘನೀಯ ಎಂದರು.
ಒಂದು ಮುಖ್ಯ ಕಚೇರಿ, ಐದು ಶಾಖೆಗಳುಳ್ಳ ಬ್ಯಾಂಕು 1816 ಜನ ಸದಸ್ಯರನ್ನು ಹೊಂದಿದೆ.ಪ್ರಸಕ್ತ ವರ್ಷದ ಆದಾಯ ತೆರಿಗೆ ಮುಂಗಡ ಪಾವತಿಸಿದ ನಂತರದಲ್ಲಿ ಒಟ್ಟು ರೂ.23,06,464 ಲಕ್ಷ ಲಾಭ ಗಳಿಸಿದೆ. ಪ್ರತಿವರ್ಷ 15 ℅ ಡಿವಿಡೆಂಡ್ ಕೊಡಲಾಗುತ್ತಿದೆ. ಮುಂದಿನ ವರ್ಷಗಳಲ್ಲಿಯೂ ಇದನ್ನು ಮುಂದುವರೆಸಲಾಗುವುದು.ರಾಜ್ಯದ ವಿವಿಧ ಸ್ಥಳಗಳಲ್ಲಿ 25 ಶಾಖೆಗಳನ್ನು ಆರಂಭಿಸಲು ನಿರ್ಣಯಿಸಲಾಯಿತು. ವೈಯಕ್ತಿಕ ಸಾಲದ ಮಿತಿಯನ್ನು 10 ಲಕ್ಷ ರೂ.ಗಳಿಂದ 25 ಲಕ್ಷ ರೂ. ಗಳಿಗೆ ಹೆಚ್ಚಿಸಲಾಯಿತು. ಈ ವರ್ಷದಿಂದ ಬಂಗಾರದ ಮೇಲಿನ ಸಾಲ ನೀಡಲು ತೀರ್ಮಾನ ಕೈಗೊಳ್ಳಲಾಯಿತು. ಸಾಲಗಾರರು ನಿಯಮಗಳಂತೆ ಸಕಾಲಕ್ಕೆ ಬಡ್ಡಿ, ಸಾಲ ಮರುಪಾವತಿಸಬೇಕು ಎಂದು ಹೇಳಿದರು.
ಸೊಸೈಟಿಯ ಉಪಾಧ್ಯಕ್ಷ ಎ ಆರ್ ಉಕ್ಕಲಿ,
ನಿರ್ದೇಶಕರಾದ ಬಿ ಜಿ ಪಾಟೀಲ, ಎಸ್ ಎಸ್ ಶಿರಾಡೋಣ, ಜಿ ಟಿ ಪಾಟೀಲ,ಎಸ್ ಎಸ್ ಅರಕೇರಿ,ಆರ್ ಎಲ್ ಇಂಗಳೇಶ್ವರ,ಎ ಎಸ್ ಹೊಸಮನಿ, ಎಸ್ ಜಿ ಗಡಗಿ,ಎಸ್ ಜಿ ಹಿಟ್ನಳ್ಳಿ ಹಾಗೂ ಮಹಿಳಾ ನಿರ್ದೇಶಕರಾದ ಎಸ್ ಎಂ ಕಡಿ,ಶೋಭಾ ಕತ್ನಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವ್ಯವಸ್ಥಾಪಕರಾದ ಮೇಘಾ ಅರ್ಜುಣಗಿ ವರದಿ ವಾಚಿಸಿದರು.ಸೊಸೈಟಿ ಸಿಬ್ಬಂದಿ ವರ್ಗ ಹಾಜರಿದ್ದರು.
ಶಿಕ್ಷಕ ಸಂತೋಷ ಬಂಡೆ ಕಾರ್ಯಕ್ರಮ ನಿರ್ವಹಿಸಿದರು.ಇದೇ ಸಂದರ್ಭದಲ್ಲಿ ಉತ್ತಮ ಗ್ರಾಹಕರನ್ನು ,ಪಿಗ್ಮಿ ಸದಸ್ಯರನ್ನು, ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು.
No comments:
Post a Comment