ಈ ದಿವಸ ವಾರ್ತೆ
ನಿಡಗುಂದಿ:
ಭಾರತ ಸ್ವಾತಂತ್ರ್ಯ ಸಂಗ್ರಾಮದ ಮುಂಚೂಣಿ ನೇತಾರ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಪಶ್ಚಿಮ ಭಾರತದ ಗುಜರಾತ್ ನಲ್ಲಿ ಜನಿಸಿರಬಹುದು ಆದರೆ ಅವರು ಪ್ರತಿಪಾದಿಸಿದ ತತ್ವ - ಸಿದ್ದಾಂತಗಳಿಂದ ಮಾನವ ಪ್ರಪಂಚಕ್ಕೆ ಮಾರ್ಗದರ್ಶಿಯಾಗಿದ್ದಾರೆ,
ಎಂದು ನಿಡಗುಂದಿ ಸಿಪಿಐ ಅಶೋಕ್ ಚವ್ಹಾಣ್ ಅಭಿಪ್ರಾಯ ಪಟ್ಟರು.
ಪಟ್ಟಣದ ನ್ಯೂ ಇಂಗ್ಲೀಷ್ ಪದವಿ ಪೂರ್ವ ಕಾಲೇಜಿನಲ್ಲಿ ಬೇನಾಳದ ರಾಷ್ಟ್ರಪಿತ ಮಹಾತ್ಮ ಗಾಂಧಿ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ' ಬಾಪೂ ಎಂಬ ಜಗದ ಬೆಳಕು' ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಟಾಟಿಸಿ ಮಾತನಾಡಿದರು.
ಆಂಗ್ಲ ಸೂರ್ಯನನ್ನು ಅಸ್ತಂಗತ ಗೊಳಿಸಿ ಸತ್ಯ- ಅಹಿಂಸೆಗಳೆಂಬ ಅಸ್ತ್ರಗಳನ್ನು ಹಿಡಿದು ಶಾಂತಿಯ ಪಥದಲ್ಲಿ ಸಾಗಿ ಭರತ ವರ್ಷದ ಬಾನಂಗಳದಲ್ಲಿ ಸ್ವತಂತ್ರ ಸೂರ್ಯ ನನ್ನು ಉದಯಿಸುವಂತೆ ಮಾಡಿದ ಸ್ವಾತಂತ್ರ್ಯ ಶಿಲ್ಪಿ ಮಹಾತ್ಮ ಗಾಂಧೀಜಿಯವರು ಎಂದರು.
ಆರ್.ಎಂ.ಜಿ.ಎಫ್.ಸಂಸ್ಥಾಪಕ ಅಧ್ಯಕ್ಷ ನೇತಾಜಿ ಗಾಂಧಿ ಮಾತನಾಡಿ, ಬ್ರಿಟಿಷ್ ರೂಲ್ಡ್ ಭಾರತದಲ್ಲಿ ಜರ್ನಲಿಸ್ಟ್ ಗಾಂಧಿ ಆಂಗ್ಲರ ಯಾವುದೇ ಬೆದರಿಕೆಗಳಿಗೆ ಬಗ್ಗದೆ, ಯಾವುದೇ ಎಚ್ಚರಿಕೆಗಳಿಗೆ ಜಗ್ಗದೆ 52 ವರುಷ ಪತ್ರಕರ್ತನಾಗಿ ಇಂಡಿಯನ್ ಒಪಿನಿಯನ್, ಯಂಗ್ ಇಂಡಿಯಾ, ನವ ಜೀವನ, ಹರಿಜನ, ಹರಿಜನ ಸೇವಕ, ಹರಿಜನ ಬಂಧು ಹೀಗೆ 6 ಪತ್ರಿಕೆಗಳನ್ನು ಪ್ರಕಟಿಸಿ 10 ದಶಲಕ್ಷ ಪದಗಳನ್ನು ಬರೆದರು.
ಯಂಗ್ ಇಂಡಿಯಾ ಜರ್ನಲ್ ನಲ್ಲಿ ಬ್ರಿಟಿಷ್ ಪ್ರಭುತ್ವದ ವಿರುದ್ಧ ಕಠಿಣವಾಗಿ ಬರೆದ ಕಾರಣಕ್ಕಾಗಿ 1922 ಮಾರ್ಚ್ 10ರಂದು ರಾಷ್ಟ್ರದ್ರೋಹದ ಕೇಸ್ ಆಗಿ 6 ವರುಷ ಜೈಲು ಶಿಕ್ಷೆಗೂ ಗುರಿಯಾಗಿದ್ದರು ಎಂದು ನೆನಪಿಸಿದರು.
ಉಪನ್ಯಾಸಕ ಎಂ.ಬಿ.ಮುಲ್ಲಾ ತಮ್ಮ ಉಪನ್ಯಾಸದಲ್ಲಿ
ನಡೆ - ನುಡಿಗೆ ವ್ಯತ್ಯಾಸ ಇಲ್ಲದಂತೆ ಬದುಕಿದ ಮಹಾನ್ ನಾಯಕ ಮಹಾತ್ಮ ಗಾಂಧೀಜಿ ಎಂದರು.
ಪ್ರಿನ್ಸಿಪಾಲ್ಸಿ.ಎಸ್.ರಾಥೋಡ್
ಅಧ್ಯಕ್ಷೀಯ ನುಡಿಗಳ ನ್ನಾಡಿದರು.
ಎಸ್.ಎಲ್.ಚಿಂತಾಮಣಿ, ಎಂ.ಎಲ್.ಹೊಸಮನಿ, ಕೆ.ವಿ.ಪಾರಶೆಟ್ಟಿ, ರಾಜು ಗುಂಡಿನಮನಿ, ಸಿ.ಬಿ.ಮುಲ್ಲಾ
ಸೇರಿದಂತೆ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.
ಆರ್.ಪಿ.ಲಮಾಣಿ ಸ್ವಾಗತಿಸಿದರು,
ಶಿವು ಬೀಳಗಿ ನಿರೂಪಿಸಿದರು,
ಪಿ.ಎಂ. ನಡಕಟ್ಟಿವಂದಿಸಿದರು.
ಗಾಂಧಿ ಕ್ವಿಜ್ :
ಬಾಪೂ ಕುರಿತು ಜರುಗಿದ ರಸ ಪ್ರಶ್ನೆಯಲ್ಲಿ ವಿಜೇತರಾದ ವಿದ್ಯಾರ್ಥಿ/ನಿಯರಿಗೆ ಗಾಂಧಿ ಪುಸ್ತಕ ಹಾಗೂ ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಯಿತು.
ಛಾಯಾಚಿತ್ರಗಳ ಪ್ರದರ್ಶನ :
ಮಹಾತ್ಮ ಗಾಂಧೀಜಿಯವರ ಬಾಲ್ಯ ಜೀವನ, ಶಿಕ್ಷಣ, ಅವರು ಭಾಗವಹಿಸಿದ ಸ್ವಾತಂತ್ರ್ಯ ಸಂಗ್ರಾಮದ ಘಟನಾವಳಿಗಳ ಕುರಿತು 50 ಛಾಯಾಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
No comments:
Post a Comment