ಈ ದಿವಸ ವಾರ್ತೆ
ಕೊಪ್ಪಳ : ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಪಿಎಸ್.ಟಿ.ಇ ವಿಭಾಗ ಮುನಿರಾಬಾದ್, ಕೊಪ್ಪಳ ಇಲ್ಲಿನ 2022-23ನೇ ಸಾಲಿನ ಡಿ.ಇಎಲ್‌ಇಡಿ ಕಾಲೇಜಿನ ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಶೇ.100ರಷ್ಟು ಫಲಿತಾಂಶ ಬಂದಿದೆ ಎಂದು ಟಿ.ಬಿ.ಪಿ ಮುನಿರಾಬಾದನ ಪ್ರಾಚಾರ್ಯರು ಹಾಗೂ ಪದ ನಿಮಿತ್ಯ ಉಪನಿರ್ದೇಶಕರು (ಅಭಿವೃದ್ಧಿ) ತಿಳಿಸಿದ್ದಾರೆ.
ಡಿ.ಇ.ಎಲ್.ಇ.ಡಿ ದ್ವಿತೀಯ ವರ್ಷದ ಪರೀಕ್ಷೆಗೆ ಹಾಜರಾದ 11 ಪ್ರಶಿಕ್ಷಣಾರ್ಥಿಗಳಲ್ಲಿ ಉನ್ನತ ಶ್ರೇಣಿಯಲ್ಲಿ 10 ಪ್ರಶಿಕ್ಷಣಾರ್ಥಿಗಳು ಮತ್ತು ಪ್ರಥಮ ಶ್ರೇಣಿಯಲ್ಲಿ ಒಬ್ಬರು ಉತ್ತೀರ್ಣರಾಗಿ ಶೇ.100ರಷ್ಟು ಸಾಧನೆ ಮಾಡಿದ್ದಾರೆ. ವಿಜಯಲಕ್ಷ್ಮೀ ಹೆಚ್ ವೀರೇಶ ಅವರು ಶೇ.95 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿದ್ದಾರೆ. ಅಂಜಲಿ ಗೊರವಲೆಕ್ಕಪ್ಪ ಶೇ.94.37 ಹಾಗೂ ಆಸೀಯಾ ಹುಸೇನಸಾಬ ಶೇ.94.25 ರಷ್ಟು ಅಂಕ ಪಡೆದಿದ್ದಾರೆ. ಡಿ.ಇಎಲ್.ಇಡಿ ಪ್ರಥಮ ವರ್ಷದ ಪರೀಕ್ಷೆಯಲ್ಲಿ ಪೂಜಾ ಮಂಜುನಾಥ ಶೇ. 93.25 ಮತ್ತು ಅಜ್ಮೀರ ಹುಸೇನಸಾಬ ನದಾಫ್ ಶೇ. 92ರಷ್ಟು ಅಂಕ ಗಳಿಸಿದ್ದಾರೆ.
ಪ್ರಶಿಕ್ಷಣಾರ್ಥಿಗಳ ಸಾಧನೆಗೆ ಡಯಟ್ ಸಂಸ್ಥೆಯ ಪ್ರಾಚಾರ್ಯರು, ಹಿರಿಯ ಉಪನ್ಯಾಸಕರು ಮತ್ತು ಪಿ.ಎಸ್.ಟಿ.ಇಯ ಮುಖ್ಯಸ್ಥರು ಮತ್ತು ಎಲ್ಲಾ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
No comments:
Post a Comment