ಈ ದಿವಸ ವಾರ್ತೆ
ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ :ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಂಟಪ, ಕುಮಾರ ಕಕ್ಕಯ್ಯ ಪೋಳ ವೇದಿಕೆ ಗೋಷ್ಠಿ -2: ಸಂವಿಧಾನವನ್ನು ನಾವು ಅಧ್ಯಯನದ ಮೂಲಕ ಅರ್ಥೈಸಿಕೊಳ್ಳಬೇಕಿದೆ ಪ್ರಬುದ್ಧತೆಯಿಂದ ಮಾತನಾಡುವ ನಾವು ಪ್ರತಿಯೊಂದರಲ್ಲಿ ಜಾತಿಯನ್ನು ಹುಡುಕುತ್ತೇವೆ ಎಂದು ಸಾಹಿತಿ ಡಾ ಸುಜಾತಾ ಚಲವಾದಿ ಅವರು ಕಳವಳ ವ್ಯಕ್ತಪಡಿಸಿದರು. ಅವರು ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಮತ್ತು 30 ರಂದು ಎರಡು ದಿನಗಳ ಕಾಲ ದಲಿತ ಸಾಹಿತ್ಯ ಪರಿಷತ್ತಿನ ಬೆಳ್ಳಿ ಸಂಭ್ರಮ ನಿಮಿತ್ಯ ನಡೆಯುತ್ತಿರುವ ಅಖಿಲ ಭಾರತ 10ನೇ ದಲಿತ ಸಾಹಿತ್ಯ ಸಮ್ಮೇಳನದ ಗೋಷ್ಠಿ ೨ರ ಸಂವಾದದಲ್ಲಿ ನಮ್ಮ ಸಂವಿಧಾನ ನಮ್ಮ ರಕ್ಷಣೆ ಕುರಿತು ವಿಷಯದ ಕುರಿತು ಹೊಸತು ಪತ್ರಿಕೆ ಸಂಪಾದಕ ಡಾ ಸಿದ್ದನಗೌಡ ಪಾಟೀಲ ಅವರು ಮಂಡಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಡಾ. ಸಿದ್ದನಗೌಡ ಪಾಟೀಲ ರಾಮಚಂದ್ರ ಗಾಣಾಪುರೆ, ಶ್ರೀದೇವಿ ಉತ್ಲಾಸರ, ಸಂದೀಪ ವಿಶ್ವನಾಥ, ಡಾ. ಗಾಂಧೀಜಿ ಮೊಳಕೇರಿ ಉಪಸ್ಥಿತರಿದ್ದರು.
ಆರತಿ ಸವ್ವಾಸೆ ಸ್ವಾಗತಿಸಿದರು. ಡಾ. ಕಪಿಲದೇವ ಚಕ್ರವರ್ತಿ ನಿರೂಪಿಸಿದರು. ಡಾ. ಗೀತಾ ಅಥರ್ಗಾ ವಂದಿಸಿದರು.
No comments:
Post a Comment