ಈ ದಿವಸ ವಾರ್ತೆ
ವಿಜಯಪುರ: ಪ್ರಬುದ್ಧ ಭಾರತ ಮುನ್ನೊಟದೊಂದಿಗೆ ನಡೆಯುತ್ತಿರುವ ದಲಿತ ಸಾಹಿತ್ಯ ಸಮ್ಮೇಳನ ಸಮಾಜದಲ್ಲಿ ಬೆರೂರಿರುವ ಅಸಮಾನತೆಯನ್ನು ತೊಡೆದು ಹಾಕುವ ಕಾರ್ಯವನ್ನು ಮಾಡುತ್ತಿರುವ ದಲಿತ ಸಾಹಿತ್ಯ ಪರಿಷತ್ತು ಸಮ್ಮೇಳನದಲ್ಲಿ ಸಾಮಾಜಿಕ ಸಮಾನತೆಯ ಬಗ್ಗೆ ಚಿಂತನೆ ಮಾಡುವ ಮೂಲಕ ಪ್ರಬುದ್ಧ ಭಾರತ ಕಟ್ಟಲಿಕ್ಕೆ ಶ್ರಮಿಸುತ್ತಿದೆ. ದಲಿತರ ನೋವಿನ ಕಥೆಗಳು ಹೇಳುವ ದಲಿತ ಸಾಹಿತ್ಯ ಸಮಾಜದಲ್ಲಿ ಒಂದು ಹೊಸ ಚಳುವಳಿ ಕಟ್ಟುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಿ ಜಿ ಸಾಗರ ಅವರು ಹೇಳಿದರು. ಅವರು ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದ ಕುಮಾರ ಕಕ್ಕಯ್ಯ ಪೋಳ ವೇದಿಕೆಯಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿರುವ ದಲಿತ ಸಾಹಿತ್ಯ ಪರಿಷತ್ತು ರಾಜ್ಯ ಘಟಕ ಗದಗ ಇದರ ಬೆಳ್ಳಿ ಸಂಭ್ರಮ ನಿಮಿತ್ಯ ಹಮ್ಮಿಕೊಂಡಿರುವ10ನೇ ಅಖಿಲ ಭಾರತ ದಲಿತ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಸಮ್ಮೇಳನ ಸರ್ವಾಧ್ಯಕ್ಷರ ಪುಸ್ತಕ ಮಳಿಗೆ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸರ್ವಾಧ್ಯಕ್ಷರಾದ ಪ್ರೊ.ಎಚ್.ಟಿ.ಪೋತೆ,
ರಾಜ್ಯಾಧ್ಯಕ್ಷ ಡಾ. ಅರ್ಜುನಗೊಳಸಂಗಿ , ಖಜಾಂಚಿ ಡಾ.ಎಚ್.ಬಿ. ಕೋಲ್ಕಾರ, ಕಾರ್ಯದರ್ಶಿ ಸುಭಾಸ ಹೊದ್ಲೂರ, ಉಪಾಧ್ಯಕ್ಚ ಡಾ. ವೈ.ಎಂ.ಭಜಂತ್ರಿ, ದಸಾಪ ವಿಜಯಪುರ ಜಿಲ್ಲಾಧ್ಯಕ್ಷ ಸಂಯೋಜಕ ಬಸವರಾಜ ಜಾಲವಾದಿ,ಪ್ರಧಾನ ಸಂಯೋಜಕ ಶ್ರೀನಾಥ ಪೂಜಾರಿ, ಸಹ ಸಂಯೋಜಕ ಉಮೇಶ ಶಿವಶರಣ, ಸುಜಾತಾ ಚಲವಾದಿ, ಡಾ.ಗಾಂಧೀಜಿ ಮೊಳಕೇರಿ ಇದ್ದರು.
No comments:
Post a Comment