ಈ ದಿವಸ ವಾರ್ತೆ
ವಿಜಯಪುರ: ಉತ್ತರ ಕರ್ನಾಟಕ ಅಂತಾರಾಷ್ಟ್ರೀಯ ಕಿರು ಚಲನಚಿತ್ರೋತ್ಸವ- 2022 ರ ಸ್ಪರ್ಧೆಯಲ್ಲಿ ಸಿಂದಗಿ ಹಿರಿಯ ಸಾಹಿತಿ ಡಾ.ಚನ್ನಪ್ಪ ಕಟ್ಟಿ ಅವರ ಊರ್ಧ್ವರೇತ ಕಥೆ ಆಧಾರಿತ ಟೆಲಿ ಫಿಲ್ಮಿಂಗೆ ಅತ್ಯುತ್ತಮ ಕಥೆ ಹಾಗೂ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿವೆ.
ಧಾರವಾಡದಲ್ಲಿ ಡಿ.15, 16 ಮತ್ತು 17 ರಂದು ಉತ್ತರ ಕರ್ನಾಟಕ ಚಲನಚಿತ್ರ ವಾಣ ಜ್ಯ ಮಂಡಳಿ ಹಮ್ಮಿಕೊಂಡ ಉತ್ತರ ಕರ್ನಾಟಕ ಅಂತಾರಾಷ್ಟ್ರೀಯ ಕಿರು ಚಲನಚಿತೋತ್ಸವದಲ್ಲಿ ಪ್ರದರ್ಶನ ಕಂಡು, ಉರ್ಧ್ವರೇತ ಟೆಲಿ ಫಿಲ್ಮಿಂ ಪ್ರಶಸ್ತಿಗೆ ಭಾಜನವಾಗಿದ್ದು, ಶೇಷಾಚಲ ಹವಾಲ್ದಾರ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ (ನಾಮಿನಿ) ಲಭಿಸಿದೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಖ್ಯಾತ ನಿರ್ದೇಶಕ ಜಯತೀರ್ಥ, ಚಲನಚಿತ್ರ ಕಲಾವಿದೆ ರೂಪಿಕಾ, ದೂರದರ್ಶನ ನಿರ್ದೇಶಕಿ ಡಾ.ನಿರ್ಮಲಾ ಯಲಿಗಾರ, ನಿರ್ಮಾಪಕ ಮಾರುತಿ ಜಡಿ, ಜಾರ್ಜ್ ಸೊಲೊಮನ್, ಉತ್ತರ ಕರ್ನಾಟಕ ಚಲನಚಿತ್ರ ವಾಣ ಜ್ಯ ಮಂಡಳಿಯ ಅಧ್ಯಕ್ಷ ಶಂಕರ ಸುಗತೆ, ಮಂಜುನಾಥ ಹಗೆದಾರ, ರಾಹುಲ್ ದತ್ತಪ್ರಸಾದ ಇದ್ದರು.
ಊರ್ಧ್ವರೇತ ಟೆಲಿ ಫಿಲ್ಮಂ ಅನ್ನು ನೆಲೆ ಸಿನಿಕ್ರಿಯೆಷನ್ಸ್ ಅಡಿಯಲ್ಲಿ ಡಾ.ಎಂ.ಎಂ. ಪಡಶೆಟ್ಟಿ ನಿರ್ಮಿಸಿದ್ದಾರೆ. ಡಾ.ಚನ್ನಪ್ಪ ಕಟ್ಟಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ನೀಡಿದ್ದಾರೆ. ಸುನೀಲಕುಮಾರ ಸುಧಾಕರ ನಿರ್ದೇಶನ, ಛಾಯಾಗ್ರಹಣ ಮತ್ತು ಸಂಕಲನ ಮಾಡಿದ್ದಾರೆ. ಡಾ. ಹರೀಶ ಹೆಗಡೆ ಸಂಗೀತ ನೀಡಿದ್ದಾರೆ. ಗ್ರಾಮೀಣ ಪ್ರದೇಶದ ಬಾಲಕ ಶಿಲ್ಪಕಲೆ ಬಗ್ಗೆ ಸಂಶೋಧನೆ ಆಸಕ್ತಿ ಬೆಳೆಸಿಕೊಂಡು, ಸಂಶೋಧನೆಯ ಜೊತೆಗೆ ಯೋಗಸಾಧಕನಾಗುವುದು ಕಥೆಯ ತಿರುಳಾಗಿದೆ. ಚಿತ್ರದಲ್ಲಿ ಶೇಷಾಚಲ ಹವಾಲ್ದಾರ, ಲಕ್ಷ್ಮೀ ಬಾಗಲಕೋಟಿ, ಪಲ್ಲವಿ ಪಾಟೀಲ, ಪೊನ್ನಪ್ಪ ಕಡೆಮನಿ, ಅಂಬಾದಾಸ ಜೋಶಿ, ಚಂದ್ರಶೇಖರ ಅಂಬಲಿ, ಕಾರ್ತಿಕ, ಸೃಜನ, ಕಾಶಿನಾಥ, ಕಲ್ಲಪ್ಪ ಶಿವಶರಣ , ಗೌಡಪ್ಪ ಶಹಾಪುರ, ವಿನೋದ ರಾಠೋಡ, ಮಂಜು ಕಟ್ಟಿಮನಿ, ಅಮೋಘ ಸೇರಿದಂತೆ ಮುಂತಾದವರು ನಟಿಸಿದ್ದಾರೆ.
ಚಿತ್ರ ವೀಕ್ಷಿಸಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿರಿ.
https://youtu.be/AXms-M-09W4
No comments:
Post a Comment