Sunday, October 31, 2021
Tuesday, October 26, 2021
Monday, October 25, 2021
Sunday, October 24, 2021
Saturday, October 23, 2021
Friday, October 22, 2021
Thursday, October 21, 2021
Wednesday, October 20, 2021
Tuesday, October 19, 2021
Monday, October 18, 2021
ನಾಜೀಯಾ ಶಕೀಲ ಅಂಗಡಿ ಯವರು ಗೆಲವು ನಿಶ್ಚಿತ
ಈ ದಿವಸ ವಾರ್ತೆ
ವಿಜಯಪುರ : ನಗರದಲ್ಲಿರುವ ಜೆಡಿಎಸ್ ಕೇಂದ್ರ ಕಛೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಮುಖಂಡರ ಸಭೆಯಲ್ಲಿ ಮಾತನಾಡಿದ ಹೆಚ್ ಡಿ ದೇವೇಗೌಡರು ಮಾಜಿ ಪ್ರಧಾನಿಗಳು ಸಿಂದಗಿ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಾಜೀಯಾ ಶಕೀಲ ಅಂಗಡಿ ಯವರು ಗೆಲವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅದಕ್ಕಾಗಿ ಜಿಲ್ಲೆಯ ಹಾಗೂ ತಾಲ್ಲೂಕಿನ ಕಾರ್ಯಕರ್ತರೆಲ್ಲರು ಅಭ್ಯರ್ಥಿಯ ಗೆಲವಿಗಾಗಿ ಅಹರ್ನಿಶಿಯಾಗಿ ದುಡಿಯುವದಲ್ಲದೆ ಸಿಂದಗಿಕ್ಷೇತ್ರದ ಮನೆಮನೆಗೆ ಪಕ್ಷದ ಕೊಡುಗೆಗಳನು ತಲುಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಅತ್ಯಂತ ಒಗ್ಗಟ್ಟು ಪ್ರದರ್ಶನ ಮಾಡುವ ಮೂಲಕ ನಮ್ಮ ಗೆಲುವಿನ ಪತಾಕೆ ಹಾರಿಸುವರೊಂದಿಗೆ ಮುಂದಿನ 2023 ಚುನಾವಣೆಗೆ ಪ್ರೇರಣೆ ಯಾಗಲಿದೆ. ಎಂದು ಹೇಳಿದರು. ಸಭೆಯಲ್ಲಿ ಸಂಸದರಾ ಪ್ರಜ್ವಲ್ ರೇವಣ್ಣ ಮಾತನಾಡಿ,ಯುವಕರೆಲ್ಲರು ಪಕ್ಷದ ಸಿದ್ಧಾಂತ ಮೇಲೆ ದುಡಿಯಲು ನಾನು ಬೆನ್ನೆಲುಬಾಗಿ ನಿಲ್ಲುವೆ ಎಂದು ಕರೆ ನೀಡಿದರು.
ಮಲ್ಲಿಕಾರ್ಜುನ ಯಂಡಿಗೇರಿ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ನಾಗಠಾಣ ಶಾಸಕ ಡಾ. ದೇವಾನಂದ ಎಫ್ ಚವ್ಹಾಣ , ಡಾ. ಸುನೀತಾ ದೇವಾನಂದ ಚವ್ಹಾಣ, ಬಿ ಜಿ ಪಾಟೀಲ, ರಾಜಗೌಡ ಪಾಟೀಲ, ರಿಯಾಜ ಫಾರೂಕಿ, ಯಾಕೂಬ ಕೂಪರ, ಕೌಸರ ಶೇಖ, ಹುಸೇನ ಬಾಗಾಯತ, ಸುನಿಲ್ ರಾಠೋಡ, ಸಿದ್ದು ಕಾಮತ್, ಸ್ನೇಹಾ ಶೆಟ್ಟಿ, ಡಾ. ಶಮಶರಅಲಿ ಮುಲ್ಲಾ, ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
Sunday, October 17, 2021
ಕೆಆರ್ ಎಸ್ ಪರ ಮತ ಯಾಚನೆ
ಈ ದಿವಸ ವಾರ್ತೆ
ವಿಜಯಪುರ: ಸಿಂದಗಿ ವಿಧಾನಸಭಾ ವ್ಯಾಪ್ತಿಯ ಮಲಘಾಣ, ಸೋಮಜಾಳ ಆಸಂಗಿಹಾಳ ದೇವರ ನಾವದಗಿ ಕುಮಸಿ ಗ್ರಾಮಗಳಲ್ಲಿ KRS ಪಕ್ಷದ ಕಾರ್ಯಕರ್ತರು ಅಭ್ಯರ್ಥಿ ಪರ ಮತಯಾಚಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಭಟ್ರಹಳ್ಳಿ, ಸೋಮಸುಂದರ, ಜಿಲ್ಲಾಧ್ಯಕ್ಷರಾದ ಅಪ್ಪನಗೌಡ ಕೆ ಪಾಟೀಲ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಶಿವಕುಮಾರ್ ಯಡಹಳ್ಳಿ ಭಾಗವಹಿಸಿದ್ದರು.
ಲಂಚ ಮುಕ್ತ ಸಮಾಜಕ್ಕೆ ಕೆಆರ್ ಎಸ್ ಬೆಂಬಲಿಸಿ: ಡಾ. ಸುನೀಲಕುಮಾರ ಹೆಬ್ಬಿ
ಈ ದಿವಸ ವಾರ್ತೆ
ವಿಜಯಪುರ: ಉತ್ತಮ ಹಾಗೂ ಲಂಚ ಮುಕ್ತ ಸಮಾಜ ನಿರ್ಮಾಣಕ್ಕಾಗಿ ತಮ್ಮ ಅಮೂಲ್ಯ ಮತವನ್ನು ತಮಗೆ ನೀಡುವಂತೆ ಸಿಂದಗಿ ಉಪ ಚುನಾವಣೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿ ಡಾ.ಸುನೀಲಕುಮಾರ ಹೆಬ್ಬ ಸಿಂದಗಿ ಪಟ್ಟಣದಲ್ಲಿ ಮತಯಾಚನೆ ಮಾಡಿದರು.
ಇಲ್ಲಿನ ಬಸವೇಶ್ವರ ವೃತ್ತದಿಂದ ಚುನಾವಣೆ ಪ್ರಚಾರ ಆರಂಭಿಸಿ, ಮೋರಟಗಿ, ಮನ್ನಾಪುರ, ಯಂಕಂಚಿ, ಕೈನೂರ, ಕುಲೇಕುಮಟಗಿ, ಹಿರೇಸಾವಳಗಿ ಭಾಗದಲ್ಲಿ ಕೆಆರ್ ಎಸ್ ಪಕ್ಷದ ವತಿಯಿಂದ ಪ್ರಚಾರ ನಡೆಸಿದರು.
ಈ ಸಂದರ್ಭ ಸೋಮಸುಂದರ, ಕೆಆರ್ ಎಸ್ ಜಿಲ್ಲಾಧ್ಯಕ್ಷ ಅಪ್ಪನಗೌಡ ಪಾಟೀಲ ಮತ್ತಿತರರು ಇದ್ದರು.
ವರದಿ: ಕಲ್ಲಪ್ಪ ಶಿವಶರಣ
ಮೊ: 7204279187
Saturday, October 16, 2021
Friday, October 15, 2021
Wednesday, October 13, 2021
Tuesday, October 12, 2021
Monday, October 11, 2021
Sunday, October 10, 2021
Saturday, October 9, 2021
Friday, October 8, 2021
Thursday, October 7, 2021
Wednesday, October 6, 2021
Tuesday, October 5, 2021
Monday, October 4, 2021
ಸಿಂದಗಿಯ ಉಪ ಚುನಾವಣೆ :ಪ್ರಚಾರ ಸಾಮಗ್ರಿ ಮುದ್ರಿಸಲು ಘೋಷಣಾ ಪತ್ರ ಸಲ್ಲಿಕೆ ಕಡ್ಡಾಯ
ಈ ದಿವಸ ವಾರ್ತೆ
ವಿಜಯಪುರ :ಸಿಂದಗಿ ವಿಧಾನಸಭಾ ಮತಕ್ಷೇತ್ರದ ಉಪಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಪ್ರಚಾರಕ್ಕಾಗಿ ಮುದ್ರಿಸುವ ಪಾಂಪ್ಲೆಟ್ ಮತ್ತು ಪೋಸ್ಟರಗಳ ಬಗ್ಗೆ ಕಡ್ಡಾಯವಾಗಿ ಡಿಕ್ಲರೇಷನ್(ಘೋಷಣಾ ಪತ್ರ) ಸಲ್ಲಿಸುವಂತೆ ಮುದ್ರಕರಿಗೆ ಜಿಲ್ಲಾಧಿಕಾರಿ ಪಿ ಸುನಿಲ್ ಕುಮಾರ್ ಅವರು ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ವಿಜಯಪುರ ನಗರದ ವಿವಿಧ ಮುದ್ರಣಾಲಯದ ಮುದ್ರಕರೊಂದಿಗೆ ಸಭೆ ನಡೆಸಿದ ಅವರು ಪ್ರಜಾಪ್ರತಿನಿಧಿ ಕಾಯ್ದೆ 1951 ರ 127(A) ರನ್ವಯ ಪ್ರಚಾರಕ್ಕಾಗಿ ಮುದ್ರಿಸುವ ಪಾಂಪ್ಲೆಟ್ ಮತ್ತು ಪೋಸ್ಟರ ಮುದ್ರಣ ಸಂದರ್ಭದಲ್ಲಿ ಕೆಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮುದ್ರಕರಿಗೆ ಅವರು ಸೂಚಿಸಿದ್ದಾರೆ.
ಚುನಾವಣಾ ಪ್ರಚಾರಕ್ಕಾಗಿ ಮುದ್ರಿಸುವ ಪಾಂಪ್ಲೆಟ್ ಪೋಸ್ಟರ್ ಗಳಿಗೆ ಕಡ್ಡಾಯವಾಗಿ ಮುದ್ರಕರ ಹೆಸರು,ವಿಳಾಸ ಹಾಗೂ ಪ್ರಕಟಿಸುವ ಪಾಂಪ್ಲೆಟ್ ಹಾಗೂ ಪೋಸ್ಟರ್ ಗಳ ಸಂಖ್ಯೆಯನ್ನು ನಮೂದಿಸಬೇಕು.
ಅದರಂತೆ ಮುದ್ರಕರಿಗೆ ಮುದ್ರಣ ಮಾಡಲು ನೀಡುವಂತಹ ಪಾಂಪ್ಲೆಟ್ ಮತ್ತು ಪೋಸ್ಟರ್ ಗಳಿಗೆ ಸಂಬಂಧಪಟ್ಟ ವ್ಯಕ್ತಿಯು ಕಡ್ಡಾಯವಾಗಿ ಇಬ್ಬರು ವ್ಯಕ್ತಿಗಳಿಂದ ದೃಢೀಕರಿಸಿ ಮುದ್ರಕರಿಗೆ ಸಲ್ಲಿಸಬೇಕು ಮುದ್ರಕರು ಸಹ ಈ ಕುರಿತು ಘೋಷಣಾ ಪತ್ರ ಸಲ್ಲಿಸಬೇಕು.
ಅದರಂತೆ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಹಾಗೂ ಘೋಷಣಾ ಪ್ರಮಾಣ ಪತ್ರವನ್ನು ಚುನಾವಣಾ ಅಧಿಕಾರಿಗಳ ಕಾರ್ಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿದರು.
ಸಿಂದಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮುದ್ರಕರು ಜಿಲ್ಲೆಯ ವಿವಿಧ ತಾಲೂಕುಗಳ ಮುದ್ರಕರು ಮತ್ತು ಜಿಲ್ಲೆಗೆ ಹೊಂದಿಕೊಂಡಿರುವ ಮುದ್ರಣಾಲಯದ ಮುದ್ರಕರು ಸಹ ಚುನಾವಣಾ ಆಯೋಗದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದ ಹೇಳಿದರು.
ವಿಜಯಪುರ ನಗರದ ಮುದ್ರಣಾಲಯ ಸಂಘದ ಅಧ್ಯಕ್ಷರು ಕೂಡ ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲ ಮುದ್ರಣಾಲಯಗಳ ಮುದ್ರಕರಿಗೆ ಪತ್ರದ ಮೂಲಕ ಚುನಾವಣಾ ಆಯೋಗದ ನಿರ್ದೇಶನದ ಮಾಹಿತಿಯನ್ನು ವಿನಿಮಯ ಮಾಡಿಕೊಂಡು ಅವಶ್ಯಕ ಕ್ರಮಕೈಗೊಳ್ಳಲು ಅವರು ಸೂಚನೆ ನೀಡಿ ಒಟ್ಟಾರೆ ನೀತಿ ಸಂಹಿತೆ ಉಲ್ ಲಂಘನೆಯಾಗದಂತೆ ನೋಡಿಕೊಳ್ಳಲು ಸೂಚಿಸಿದರು.
ಸಿಂದಗಿ ವಿಧಾನಸಭಾ ಚುನಾವಣೆ ಅಧಿಕಾರಿಗಳ ಮೂಲಕವೂ ಆ ಕ್ಷೇತ್ರದ ವ್ಯಾಪ್ತಿಯ ಮುದ್ರಣಾಲಯದ ಮುದ್ರಕರೊಂದಿಗೆ ಸಭೆ ನಡೆಸಿ ಈ ಕುರಿತು ಸೂಕ್ತ ನಿರ್ದೇಶನ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಸಭೆಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದರೆಡ್ಡಿ, ಅಪರ ಜಿಲ್ಲಾಧಿಕಾರಿ ರಮೇಶ್ ಕಳಸದ,ಡಾ ಔದ್ರಾಮ ಸೇರಿದಂತೆ ವಿವಿಧ ಮುದ್ರಣಾಲಯಗಳ ಮುದ್ರಕರು ಉಪಸ್ಥಿತರಿದ್ದರು.
Saturday, October 2, 2021
ಅಸ್ಪೃಶ್ಯತೆ ಪದ್ಧತಿ ಸಮಾಜಕ್ಕೆ ಅಂಟಿದ ಶಾಪ
ಈ ದಿವಸ ವಾರ್ತೆ
ವಿಜಯಪುರ: ಭಾರತರತ್ನ ಡಾ|| ಬಿ.ಆರ್.ಅಂಬೇಡ್ಕರ್ ರವರ ಮಹತ್ತರವಾದ ಕನಸಿನಂತೆ, “ಎಲ್ಲರೂ ಸಮಾನರು, ಎಲ್ಲರಿಗೂ ಸಮಾನ ಹಕ್ಕು” ಎನ್ನುವ ಭಾರತದ ಸಂವಿಧಾನದ ಆಶಯದಂತೆ, ಸಾಮಾಜಿಕ ಹಾಗೂ ಆರ್ಥಿಕ ಸಮಾನತೆಯ ಭದ್ರ ಭಾರತ ದೇಶ ಆಗಬೇಕಾದರೆ ಜಾತಿಭೇದ, ಜಾತಿವೈಷಮ್ಯ ಇಲ್ಲದಂತಾಗಬೇಕು. ಅಸ್ಪೃಶ್ಯತೆ ಎನ್ನುವುದು ನಮ್ಮ ಸಮಾಜಕ್ಕೆ ಅಂಟಿದ ಶಾಪ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಶ್ರೀ.ರಾಮನಗೌಡ ಕನ್ನೊಳಿ ಅವರು ಹೇಳಿದರು.
ನಗರದ ತೋರವಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಿಲ್ಲಾ ಪಂಚಾಯತ ವಿಜಯಪುರ, ತಾಲೂಕ ಪಂಚಾಯತ, ತಿಕೋಟಾ ಗ್ರಾಮ ಪಂಚಾಯತ ಕಾರ್ಯಾಲಯ, ತೊರವಿ,
ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಅಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ “ಸ್ವಚ್ಛತಾ ಹಿ ಸೇವಾ” ಕಾರ್ಯಕ್ರಮದಲ್ಲಿ ಮಾತನಾಡಿದರು
“ಮಾನವ ಕುಲಂ ತಾನೊಂದೆ ವಲಂ' ಎನ್ನುವ ಆದಿಕವಿ ಪಂಪನ ಸಂದೇಶವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ, ಸಮಾಜ ಕಲ್ಯಾಣ ಇಲಾಖೆಯು ಹಲವಾರು ಕಾರ್ಯಕ್ರಮಗಳನ್ನು ಕೊಟ್ಯಂತರ ಅನುದಾನ ಭರಿಸಿ ಅನುಷ್ಟಾನಗೊಳಿಸುತ್ತಿದೆ. ಜಾತಿ ವೈಷಮ್ಯದ ಹಿನ್ನೆಲೆಯಲ್ಲಿ ಇನ್ನೂ ನಮ್ಮ ಸಮಾಜದಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಅಸ್ಪೃಶ್ಯತೆ ಆಚರಣೆಯಲ್ಲಿರುವುದು ದುರಂತಮಯ. ಜಾತಿ-ಜಾತಿಗಳ ಮಧ್ಯೆ, ಮೇಲ್ವಾತಿ-ಕೆಳಜಾತಿ ಎನ್ನುವ ಹೆಸರಿನಲ್ಲಿ, ಆಚರಣೆಗಳ ನೆಪದಲ್ಲಿ, ಅಸ್ಪೃಶ್ಯತೆ ಪಾಲಿಸುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಭಾರತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರ ಈ ನಿಟ್ಟಿನಲ್ಲಿ ಹಲವಾರು ಕಾನೂನುಗಳನ್ನು ತಂದಿವೆ ಎಂದು ಹೇಳಿದರು.
ದೌರ್ಜನ್ಯ ಪ್ರತಿಬಂಧ ಅಧಿನಿಯಮ-1989, 2015, ನಾಗರಿಕ ಹಕ್ಕು ಸಂರಕ್ಷಣಾ ಅಧಿನಿಯಮ-1955, ಮ್ಯಾನ್ಯುವಲ್ ಸ್ಕ್ಯಾವೆಂಜರ್ಸ ನೇಮಕಾತಿ ನಿಷೇಧ ಅಧಿನಿಯಮ-2013, ಈ ಕಾನೂನುಗಳ ಪ್ರಕಾರ ಜಾತಿ ಭೇಧ ಮಾಡುವುದು ಶಿಕ್ಷಾರ್ಹ ಅಪರಾಧವಾಗುತ್ತದೆ. ಕಾನೂನು ಪ್ರಕಾರ ಇಂತಹ ಅನಿಷ್ಟ ಆಚರಣೆ ಮಾಡುವವರಿಗೆ, ಪ್ರೋತ್ಸಾಹ ನೀಡುವವರಿಗೆ ಜೈಲುಶಿಕ್ಷೆ ಹಾಗೂ ದಂಡ ವಿಧಿಸಬಹುದಾಗಿದೆ ಎಂದು ಅವರು ಹೇಳಿದರು.
ಜಾತಿ ನಿಂದನೆ ಮಾಡುವುದು, ಧಾರ್ಮಿಕ ಕ್ಷೇತ್ರ, ಪೂಜಾ ಸ್ಥಳಗಳಲ್ಲಿ ಪ್ರವೇಶ ತಡೆಯುವುದು, ಯಾವುದೇ ಧಾರ್ಮಿಕ ಸೇವೆ ಮಾಡುವುದು, ಯಾವುದೇ ಕೆರೆ, ಬಾವಿ, ಕೊಳವೆಬಾವಿ, ಬಳಕೆ ಮಾಡುವುದು ಹಾಗೂ ಈ ಜಾಗಗಳಲ್ಲಿ ಸ್ನಾನ ಮಾಡುವುದು ಹಾಗೂ ನೀರನ್ನು ಉಪಯೋಗಿಸುವುದಕ್ಕೆ ಅಡ್ಡಿಯುಂಟು ಮಾಡುವುದು. ತರವಲ್ಲದ ಕೆಲಸಕ್ಕೆ ಜಾತಿ ಆಧಾರದ ಮೇಲೆ ಒತ್ತಾಯ ಮಾಡಿದಲ್ಲಿ ಹಾಗೂ ಒತ್ತಾಯದ ಮೇರೆಗೆ ಯಾವುದೇ ಕೆಲಸಕ್ಕೆ ತೊಡಗಿಸಿದಲ್ಲಿ. * ಯಾವುದೇ ಅಂಗಡಿ, ಸಾರ್ವಜನಿಕ ಉಪಹಾರ ಗೃಹ, ಹೊಟೇಲ, ಸಾರ್ವಜನಿಕ ಮನೋರಂಜನಾ ಸ್ಥಳ, ಸಲೂನ್ (ಹೇರ್ಕಟಿಂಗ್) ಪ್ರವೇಶಕ್ಕೆ/ಬಳಕೆಗೆ ಅಡ್ಡಿ ಮಾಡಬಾರದು ಎಂದು ಅವರು ಹೇಳಿದರು.
ಯಾವುದೇ ವೃತ್ತಿ, ಉದ್ಯೋಗ, ವ್ಯಾಪಾರ, ವ್ಯವಹಾರ ನಡೆಸುವುದರ ಬಗ್ಗೆ ಅಡ್ಡಿಯುಂಟು ಮಾಡುವುದು ಸ್ಮಶಾನ ಅಥವಾ ಸುಡುಗಾಡಿನ, ಯಾವುದೇ ಸಾರ್ವಜನಿಕ ಶೌಚಾಲಯದ, ಯಾವುದೇ ರಸ್ತೆಗೆ ಸಾರ್ವಜನಿಕರು ಉಪಯೋಗಿಸಲು ಅಥವಾ ಪ್ರವೇಶಿಸಲು ಹಕ್ಕನ್ನು ಹೊಂದಿರುವ ಇತರೆ ಯಾವುದೆ ಸ್ಥಳದ ಉಪಯೋಗದ ಬಗ್ಗೆ ಅಡ್ಡಿಯುಂಟು ಮಾಡುವುದು. ಯಾವುದೇ ಸಾರ್ವಜನಿಕ ಅಥವಾ ಧಾರ್ಮಿಕ ರೂಢಿ, ಪದ್ದತಿ ಅಥವಾ ಉತ್ಸವದ ಆಚರಣೆಯ ಬಗ್ಗೆ ಅಥವಾ ಯಾವುದೇ ಧಾರ್ಮಿಕ, ಸಾಮಾಜಿಕ ಅಥವಾ ಸಾಂಸ್ಕೃತಿಕ ಮೆರವಣಿಗೆಯಲ್ಲಿ ಭಾಗವಹಿಸುವುದು ಅಡ್ಡಿಯುಂಟು ಮಾಡುವುದು. ಈ ಮೇಲಿನ ಕಾನೂನು ಬಾಹಿರ ಕೃತ್ಯಗಳನ್ನು ಎಸಗಿದವರ ಮೇಲೆ ಕಾನೂನು ಪ್ರಕಾರ 6 ತಿಂಗಳವರೆಗೆ ಜೈಲುಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶವಿರುತ್ತದೆ. ಬುದ್ಧ, ಬಸವ, ಅಂಬೇಡ್ಕರ್ ರವರ ಕನಸಿನ ಸಮ ಸಮಾಜವನ್ನು ಕಟ್ಟೋಣ; ಸರ್ಕಾರದ ಪ್ರಯತ್ನಗಳಿಗೆ ಕೈಜೋಡಿಸೋಣ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಗಾಂಧಿಜಿಯವರು ಅಸ್ಪೃಶ್ಯತೆ ನಿವಾರಣೆ ಬಗ್ಗೆ ತಿಳಿಸಿರುವ ಸಂದೇಶದ ಬಗ್ಗೆ ಕರಪತ್ರಗಳನ್ನು ಸಾರ್ವಜನಿಕರಿಗೆ ಹಂಚಿ ಅಸ್ಪೃಶ್ಯತೆ ಆಚರಣೆ ವಿರೋಧದ ಕಾನೂನಿನ ಅರಿವು ಮೂಡಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆಯ ಎಲ್ಲಾ ವಸತಿ ನಿಲಯಗಳು ಹಾಗೂ ಶಾಲೆಗಳಲ್ಲಿ ಸ್ವಚ್ಛತಾ ಶ್ರಮದಾನ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಸುರೇಶ್ ಕಳ್ಳಿಮನಿ, ದಲಿತ ಮುಖಂಡ ಅಡಿವೆಪ್ಪ ಸಾಲಗಲ್,ದಾದಾಸಾಬ ಬಾಗಾಯತ್,ಲಾಲಪ್ಪ ಗುಡಿಮನಿ, ಹನುಮಂತ ಪಟ್ಟೇದ, ಶಾಂತಿನಗರದ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಸುರೇಶಗೌಡ ಬಿರಾದಾರ, ಸಿದ್ಧಾರ್ಥ ಪರಣಾಕರ, ಸುರೇಶ್ ಗಚ್ಚಿನಮನಿ ಹಾಗೂ ಇತರರು ಉಪಸ್ಥಿತರಿದ್ದರು.