ಜಾತಿ ಯಾವುದಾದರೇನು ರಕುತದ ಬಣ್ಣ ಒಂದು ..
ರಕುತ ದಾನದಿ ಉಳಿಯಬಲ್ಲದು ಜೀವವೊಂದು..
ರಕ್ತದಾನ ಮಹಾದಾನ...
ರಕ್ತದಾನ ಜೀವದಾನ...
ರಕ್ತದಾನದಿ ಬೆಳಗೋದು ಜೀವನ...
ಹದಿನೆಂಟರ ಭಂಟ ..
ನಲ್ವತ್ತೈದರ ತೂಕವ ಹೊಂದಿದ್ದರೆ ನೀನೆ ನೆಂಟ..
ಇರಬೇಕು ಹಿಮೋಗ್ಲೋಬಿನ್ 12.5gm% ಕನಿಷ್ಟ...
ನೀನಾಗಿರಬೇಕು ಆರೋಗ್ಯ ದೇಹದ ಪಂಟ...
ನಿನಗಿರಬಾರದು ಮಾರಕ ಖಾಯಿಲೆಗಳ ನಂಟು...
ರಕ್ತದಾನ ಮಾಡಿ ನೀನಾಗುವೆ ನೆಂಟ...
ರಕ್ತ ದಾನದಿ ಮೊದಲು ನೀ ಅರಿಯಬೇಕು
ರಕ್ತ ದಾನಕೆ ನೀ ಯೋಗ್ಯನಾಗಿರಬೇಕು..
ನಿನ್ನ ರಕ್ತದ ಗುಂಪ ಪರೀಕ್ಷಿಸಬೇಕು..
ರಕ್ತವ ಪಡೆಯುವ ಜೀವದ ಹನಿಗೆ ನಿನ್ನ ರಕ್ತದ ಹನಿ ಹೊಂದಿಕೆಯಾಗಬೇಕು..
ನಿನ್ನ ರಕ್ತದಲಿ ಇರಬಾರದು ಆಲ್ಕೋಹಾಲ್ ನ ಗುಟುಕು..
ರಕ್ತದಾನದಿ ಮೊದಲು ನೀ ಸೇವಿಸು ಉತ್ತಮ ಆಹಾರ..
ಉಪವಾಸದಿ ನೀ ರಕ್ತ ದಾನಿಯಾದರೆ ರೋಗದ ಪ್ರಹಾರ..
ರಕ್ತದಾನದಿ ನಂತರ ನೀ ಸೇವಿಸು ಪೌಷ್ಟಿಕ ಆಹಾರ...
ನಿನ್ನ ಅಲಂಕರಿಸುವುದು ಆರೋಗ್ಯದ ಹಾರ..
ರಕ್ತದಾನದಿ ನೀ ಪಡೆವೆ ಸದೃಢ ಕಾಯ...
ರಕ್ತದಾನದಿ ಹಲವು ರೋಗಗಳು ಮಾಯಾ...
ರಕ್ತದಾನ ಶ್ರೇಷ್ಠ ದಾನ...
ಜೀವವ ಉಳಿಸಲು ಇರುವ ದಾನ..
ಜಾತಿ ಭೇದವಿಲ್ಲದೆ ಮಾಡುವ ದಾನ...
ಬಡವ - ಬಲ್ಲಿದ ಅನ್ನೋ ಹಂಗಿಲ್ಲದ ದಾನ..
ಇದನ ಅರಿತು ಮಾನವರೆಲ್ಲ ಒಂದಾಗೋಣ...
ಸಮಿತ ಶೆಟ್ಟಿ
ಸಿದ್ಧಕಟ್ಟೆ, ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
Spr
ReplyDeleteThank you
ReplyDeleteವಾವ್ ಸೂಪರ್ ತುಂಬಾ ಚೆನ್ನಾಗಿದೆ
ReplyDelete