ಖುಷಿ ಖುಷಿಯಾಗಿ ಬಾಲ್ಯವ ಕಳೆಯುವ ಆಸೆ ಕಂಗಳಲಿ......................
ಹೊಟ್ಟೆಪಾಡಿಗಾಗಿ ಬಳಲಿ ಬೆಂಡಾಗಿ ಒದ್ದಾಡಿದೆ ಜೀವಾ ನೋವಲಿ....................
ಆಸೆಯ ತೊರೆದು ಹಗಲಿರುಳು ದುಡಿಯುತ್ತಿದೆ ಎಳೆಮನಸು..
ಯಾರಾದೋ ತಪ್ಪಿಗೆ ಕುಟುಂಬವ ಸಲಹಲು ಬಾಡಿದೆ ತಿಳಿಗನಸು..
ಪುಸ್ತಕ ಹಿಡಿಯುವ ಕೈ ಬಂಧಿಯಾಗಿದೆ ಹಾರೆ ಪಿಕಾಸಿನ ಹಿಡಿತದಲಿ ..
ಶಾಯಿಯ ಹನಿಯಲಿ ಅರಳುವ ಕುಸುಮ ಬಾಡಿ ನಲುಗಿದೆ ಬೆವರ ಹನಿಯಲಿ..
ನೆನೆಯುತ ಮಳೆಯ ಹನಿಯಲಿ
ನಡುಗುತ ಕೊರೆವ ಚಳಿಯಲಿ
ಬೆಂದಿವೆ ಬಿಸಿಲ ಬೇಗೆಯಲಿ
ದುಡಿಯುತ ದಿನ ದೂಡುತಿದೆ ಎಳೆ ಮನಸು ಜೀವ ಸವೆಸುತಲಿ
ಮೊಗ್ಗು ಅರಳೋ ಮುನ್ನ ಬಾಡಿ ಹೋಗುತ್ತಿದೆ ಬಾಲಕಾರ್ಮಿಕ ಅನ್ನೋ ಹಣೆಬರಹದಲಿ..
ಕಪಿ ಮುಷ್ಟಿಯಲಿ ನರಳುತ್ತಿದೆ ಎಳೆ ಜೀವಾ..
ಬಾಲಕಾರ್ಮಿಕರ ಕಷ್ಟವ ಕಳೆದು ಕನಸ ಅರಳಿಸೋ ಓ ದೇವಾ..
ವಿದ್ಯೆಯ ಪಡೆದು ಉನ್ನತ ಹುದ್ದೆಯಲಿ...
ನವಸಮಾಜದ ಶಕ್ತಿಯಾಗಿ ಮೆರೆದಾಡಲಿ...
ಎಳೆ ಮನಸು ಕನಸ ಜೋಕಾಲಿಯಲಿ ತೇಲಾಡಲಿ..
ಕನಸ ನನಸಾಗಿಸಿ ಹೊಸಯುಗಕೆ ಮುನ್ನುಡಿಯಾಗಲಿ...
ಕನಸ ಹೊತ್ತ ಕುಸುಮಗಳು ಸೌಗಂಧವ ಬೀರಲಿ..
ಜಗದ ತುಂಬಾ ಕಾಂತಿ ಪಸರಲಿ....
ಬಣ್ಣದ ಚಿತ್ತಾರ ಮೂಡಲಿ ಚಿಣ್ಣರ ಬಾಳಲಿ...
️ಸಮಿತ ಶೆಟ್ಟಿ, ಸಿದ್ಧಕಟ್ಟೆ
No comments:
Post a Comment