ವಿಜಯಪುರ : ಸೊಂಬೆರಿ, ಕರ್ತವ್ಯ ಪ್ರಜ್ಞೆ ಮರೆತ ಭ್ರಷ್ಟ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವವಂತೆ ಒತ್ತಾಯಿಸಿ ಜಯ ಕರ್ನಾಟಕ ರಕ್ಷಣಾ ಸೇನೆ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷ ಕೃಷ್ಣಾ ಭೋಸಲೆ ಮಾತನಾಡಿ, ಸಾರ್ವಜನಿಕರ ಕಚೇರಿಗಳನ್ನು ತಮ್ಮ ಅಪ್ಪನ ಮನೆಯಂತೆ ತಿಳಿದುಕೊಂಡಿರುವ ಸೊಂಬೆರಿ, ಕರ್ತವ್ಯ ಪ್ರಜ್ಞೆ ಮರೆತ ಭ್ರಷ್ಟ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕು. ರೈತರು, ಸಾರ್ವಜನಿಕರು, ದಲಿತರು, ಮಹಿಳೆಯರು, ಪುರುಷರು, ಹಿಂದುಳಿದವರು, ಪ್ರತಿಯೊಬ್ಬ ಫಲಾನುಭವಿಗಳು ತಮ್ಮ ತಮ್ಮ ಹಕ್ಕನ್ನು ಸಂವಿಧಾನ ಬದ್ಧ ಹಕ್ಕನ್ನು ಪಡೆದುಕೊಳ್ಳಲು ಸರ್ಕಾರಿ ಕಚೇರಿಗಳಿಗೆ ತೆರಳಿದರೆ ಅಲ್ಲಿನ ಅಧಿಕಾರಿಗಳ ಖುರ್ಚಿ ಖಾಲಿ ಇರುತ್ತದೆ. ಇಲ್ಲವಾದಲ್ಲಿ ಸಾರ್ವಜನಿಕರೊಂದಿಗೆ ಸರಿಯಾಗಿ ಸ್ಪಂದಿಸದೆ ಫೋನಿನಲ್ಲಿಯೇ ಮಾತನಾಡುತ್ತಾ ಫೋಜುಕೊಡುತ್ತಾ, ಮೀಟಿಂಗ್ ಇಟಿಂಗ್ ಎನ್ನುತ್ತಾ ಕಾಲ ಹರಣ ಮಾಡಿ ಸಾರ್ವಜನಿಕರ ತೆರಿಗೆಯಿಂದ ಸರ್ಕಾರದ ಸಂಬಳದ ಪಡೆಯುತ್ತಾರೆ. ಆದರೆ ರೈತರು, ಸಾರ್ವಜನಿಕರು ತಮ್ಮ ತಮ್ಮ ಕೆಲಸ ಮಾಡಿಕೊಡುವಂತೆ ಕಚೇರಿಗೆ ಪದೇ ಪದೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ದುರಂತ. ಪ್ರತಿಯೊಂದು ಸರ್ಕಾರಿ ಕಚೇರಿಗಳಲ್ಲಿ ಸರಿಯಾದ ಮಾಹಿತಿಯನ್ನು ಬಂದತಹ ಸಾರ್ವಜನಿಕರಿಗೆ ತಿಳಿ ಹೇಳದೆ ತಮ್ಮ ಕರ್ತವ್ಯ ಪ್ರಜ್ಞೆಯಿಂದ ಜಾರಿಗೊಳ್ಳುತ್ತಿದ್ದಾರೆ.
ಸರ್ಕಾರಿ ಕಚೇರಿಗಳಲ್ಲಿ ಏಜಂಟರ್ ಹಾವಳಿಯೇ ಜಾಸ್ತಿಯಾಗಿದೆ. ತಿಂಗಳಿಗೆ ಒಂದು ಬಾರಿಯಾದರೂ ಸರ್ಕಾರಿ ಕಚೇರಿಗಳಿಗೆ ತಾವು ಅಧಿಕಾರಿಗಳಿಗೆ ಮಾಹಿತಿ ನೀಡದೆ ಖುದ್ದಾಗಿ ಕಚೇರಿಗೆ ತೆರಳಿ ಅಲ್ಲಿನ ವಾಸ್ತು ಪರಿಸ್ಥಿತಿಯನ್ನು ಗಮನಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಗಳವೆ ಮಾತನಾಡಿ, ಸರ್ಕಾರಿ ಕಚೇರಿಗೆ ಸಾರ್ವಜನಿಕರು ಹೋದಾಗ ಅಧಿಕಾರಿಗಳ ವಿವರ ಗೊತ್ತಾಗುವುದಿಲ್ಲ. ಅವರ ಹೆಸರು ಅವರ ಹುದ್ದೆ ಗೊತ್ತಾಗುವುದಿಲ್ಲ. ಅವರ ಕಾರ್ಯಗಳ ವಿವರ ಸರ್ಕಾರದ ಪ್ರಕಾರ ಅವರು ಗುರುತಿನ ಚೀಟಿ ಹಾಕಿಕೊಳ್ಳುವಂತೆ ಖಡಕ್ ಆದೇಶ ಹೊರಡಿಸಬೇಕು. ಪ್ರತಿಯೊಂದು ಇಲಾಖೆಯ ಸೊಂಬೆರೆ ಕರ್ತವ್ಯ ಪ್ರಜ್ಞೆ ಮರೆತ ಭ್ರಷ್ಟ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು. ಪ್ರತಿಯೊಂದು ಇಲಾಖೆಯ ಸಭೆಯನ್ನು ತಿಂಗಳಲ್ಲಿ ನಡೆಸಿ ಸಾರ್ವಜನಿಕರಿಂದ ಬಂದ ಪ್ರತ್ಯೇಕ ಅರ್ಜಿಗಳು ಹಾಗೂ ವಿಲೇವಾರಿಗಳ ಸಂಪೂರ್ಣ ವಿವರಗಳನ್ನು ತಿಳಿದುಕೊಂಡು ಪಾರದರ್ಶಕವಾಗಿ ಅದಕ್ಕೆ ಸ್ಪಂದಿಸಬೇಕು ಎಂದು ಜಯ ಕರ್ನಾಟಕ ರಕ್ಷಣಾ ಸೇನೆ ಒತ್ತಾಯಿಸುತ್ತದೆ ಎಂದರು.
ಈ ಸಂದರ್ಭ ರಾಜ್ಯ ಉಪಾಧ್ಯಕ್ಷೆ ಮಂಜುಳಾ ವಾಲಿ, ಜಿಲ್ಲಾಧ್ಯಕ್ಷ ವಾಣಿಶ್ರೀ ಪಟ್ಟಣಶೆಟ್ಟಿ, ಎಸ್ಸಿ ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ಯಮನಪ್ಪ ಬೂದಿಹಾಳ, ಜಿಲ್ಲಾ ಮುಖಂಡರಾದ ರಾಜು ಕೋಟ್ಯಾಳ, ಸಕಾರಾಂ ಪವಾರ, ಮಾದೇವ ಢಗೆ, ರಾಜು ಬಿಸೆ, ಆನಂದ ಪೂಜಾರಿ ಇದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

No comments:
Post a Comment