ವಿಜಯಪುರ : ಯುವಕರಲ್ಲಿ ಹೃದಯ ಸಂಬAಧಿ ಕಾಯಿಲೆಗಳು ಹೆಚ್ಚುತ್ತಿರುವುದರಿಂದ ಮುಂಜಾಗೃತ ಕ್ರಮವಾಗಿ ಮಕ್ಕಳ ಆರೋಗ್ಯ ಕಡೆ ಹೆಚ್ಚು ನಿಗಾ ವಹಿಸಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಕೆ. ನಾಗಣ್ಣಗೌಡ ಹೇಳಿದರು.
ಇಂದು ನಗರದ ಅಲ್ಪ ಸಂಖ್ಯಾತರ ವಸತಿ ಶಾಲೇಜು, ಎಸ್.ಎಸ್. ಪಿ.ಯು ಕಾಲೇಜು ಹಾಗೂ ಸೇಂಟ್ ಜೊಸೆಪ್ ಶಾಲೆಗಳಿಗೆ ಅನಿರೀಕ್ಷವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಠಕ್ಕೆ ಹತ್ತಿರ ವಿರುವ ಅಲ್ಪ ಸಂಖ್ಯಾತರ ವಸತಿ ಕಾಲೇಜಿಗೆ ಭೇಟಿ ನೀಡಿ ಆವರಣದಲ್ಲಿರುವ ಹೆಣ್ಣು ಮಕ್ಕಳ ವಾಸಿಸುವ ಕೊಠಡಿಯಲ್ಲಿ ಅವಶ್ಯಕ್ಕಿಂತ ಹೆಚ್ಚು ಮಕ್ಕಳ ವಾಸಿಸುತ್ತಿರುವುದನ್ನು ಕಂಡು ಹೆಚ್ಚುವರಿ ಮಕ್ಕಳಿಗೆ ಪರ್ಯಾಯ ವ್ಯವಸ್ಥ ಕಲ್ಪಿಸಬೇಕು, ಮೂಲಭೂತ ಸೌಕರ್ಯಗಳಾದ ಶೌಚಾಲಯ, ಕುಡಿಯುವ ನೀರು, ಉತ್ತಮ ಆಹಾರ ಹಾಗೂ ಸುವ್ಯವಸ್ಥಿತ ವಸತಿ ಕಲ್ಪಿಸುವಂತೆ ಹಾಗೂ ಸ್ವಚ್ಚತೆಗೆ ಹೆಚ್ಚು ಗಮನ ಹರಿಸಬೇಕು ಎಂದು ಅವರು ಹೇಳಿದರು.
ಯುವಕರಲ್ಲಿ ಹೆಚ್ಚು ಹೃದಯಕ್ಕೆ ಸಂಬAಧಿತ ಕಾಯಿಲೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ಶಿಕ್ಷಣದೊಂದಿಗೆ ಯೋಗ, ಪಿಜಿಕಲ್ ಎಜುಕೇಶನ್ ಮೇಲಿಂದ ಮೇಲೆ ನೀಡಬೇಕು, ಪ್ರತಿ ವಾರ ಮಕ್ಕಳ ಆರೋಗ್ಯ ತಪಾಸನೆ ಕೈಗೊಳ್ಳಬೇಕು, ಮಕ್ಕಳಿಗೆ ಕನ್ನಡ ಬಾಷೆಯೊಂದಿಗೆ ಇಂಗ್ಲೀಷ ಬಾಷೆಯನ್ನು ಕಲಿಸಿದಲ್ಲಿ ಮುಂದಿನ ದಿನಗಳಲ್ಲಿ ಸ್ಪರ್ದಾತ್ಮಕವಾಗಿ ಪರೀಕ್ಷೆಗಳನ್ನು ಬರೆಯಲು ಹೆಚ್ಚು ಅನುಕೂಲವಾಗಲಿದೆ. ವಸತಿ ನಿಲಯ, ಶಾಲಾ ಕಾಲೇಜುಗಳಲ್ಲಿ ಚೈಲ್ಡ್ ಪ್ರೊಟಕ್ಷನ್ ಪಾಲಸಿ ಕಾಯಿದೆ 2016 ಕುರಿತು ಜಾಗೃತಿ ಮೂಡಿಸಬೇಕು. ಮಕ್ಕಳ ಸಹಾಯವಾಣಿ, ಸಲಹಾ ಪೆಟ್ಟಿಗೆ ಕಡ್ಡಾಯ ಅಳವಡಿಸಿರಬೇಕು ಮಕ್ಕಳ ಸುರಕ್ಷತೆ ಕುರಿತು ಸಮಿತಿಗಳನ್ನು ರಚಿಸಿರಬೇಕು, ಮೇಲಿಂದ ಮೇಲೆ ಪಾಲಕರ ಸಭೆಗಳನ್ನು ಕರೆದು ಪಾಲಕರ ಹಾಗೂ ಮಕ್ಕಳ ಅಭಿಪ್ರಾಯ ತಿಳಿಯಬೇಕು. 500 ಶಾಲಾ ಮಕ್ಕಳಿರುವಲ್ಲಿ ಓರ್ವ ಕೌನ್ಸಿಲರಗಳನ್ನು ಹೊಂದಿರಬೇಕು ಎಂದು ಅವರು ಹೇಳಿದರು. ಅದರಂತೆ ನಗರದ ಎಸ್.ಎಸ್. ಪಿ.ಯು ಕಾಲೇಜು ಹಾಗೂ ಸೇಂಟ್ ಜೊಸೆಪ್ ಶಾಲೆಗಳಿಗೆ ಪರಿಶೀಲನೆ ನಡೆಸಿದ ಅವರು ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಯಾವುದೇ ತರಹದ ತೊಂದರೆಗಳಿದ್ದಲ್ಲಿ ಪತ್ರ ಮುಖಾಂತರ ತಿಳಿಸಿದಲ್ಲಿ ಆಯೋಗವು ಈ ಕುರಿತು ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಕೆ.ಕೆ ಚವ್ಹಾಣ, ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿಗಳಾದ ಆರ್.ವಿ. ಹೊಸುರ, ಎಸ್.ಎಸ್ ಕಾಲೇಜಿನ ಪ್ರಾಚಾರ್ಯರಾದ ಡಾ. ಡಿ.ಬಿ ಅಕಮಂಚಿ, ಸೇಂಟ್ ಜೊಸೆಪ್ ಕಾಲೇಜಿನ ಪ್ರಾಚಾರ್ಯರಾದ ಆನ್ವಿಸಾ ಬೋಸ್ಕೋ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹಾಗು ಸಿಬ್ಬಂದಿಗಳು ಉಪಸ್ಥಿತರಿದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

No comments:
Post a Comment