Monday, June 30, 2025

ಅಂಗನವಾಡಿ ಕಾರ್ಯಕರ್ತೆಯರು ಬಿ.ಎಲ್.ಓ. ಕೆಲಸ ಮಾಡುವದಿಲ್ಲ : ಉಪನಿರ್ದೇಶಕ ಕೆ.ಕೆ. ಚವ್ಹಾಣ ಅವರಿಗೆ ಮನವಿ


 ವಿಜಯಪುರ : ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ವತಿಯಿಂದ ಇಂಡಿ ತಾಲೂಕಾ ಸಮಿತಿ ಚಡಚಣ ಅಂಗನವಾಡಿ ಕಾರ್ಯಕರ್ತೆಯರು ಬಿ.ಎಲ್.ಓ. ಕೆಲಸ ಮಾಡುವದಿಲ್ಲ ಎನ್ನುವ ಕುರಿತು ಅಪರ ಜಿಲ್ಲಾಧಿಕಾರಿಗಳಾದ ಸೋಮಲಿಂಗ ಗೆಣ್ಣೂರ ಮತ್ತು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಕೆ.ಕೆ. ಚವ್ಹಾಣ ಅವರಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಇಂಡಿ ತಾಲೂಕಾಧ್ಯಕ್ಷರು ಭಾರತಿ ವಾಲಿ ಮಾತನಾಡಿ ನಮ್ಮ ಅಂಗನವಾಡಿ ಕೆಲಸದ ಒತ್ತಡ ಹೆಚ್ಚಾಗಿರುತ್ತದೆ. ಆದ ಕಾರಣ ಎಫ್.ಆರ್.ಎಸ್. ಪೋಟೊ ಕ್ಯಾಪ್ಟರ ಮಾಡುವದಕ್ಕೆ ಕಷ್ಟ ಆಗುತ್ತದೆ. ಅಂಗನವಾಡಿ ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಕ ಕೊಡುವದು ಆಗುವದಿಲ್ಲ. ಅಂಗನವಾಡಿ ಹೇಗೆ ನಡೇಯುತ್ತದೆ. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ನೇಮಕಾತಿ ಬಿಡುಗಡೆ ಆಗಿರುವದಿಲ್ಲ. ಆದ ಕಾರಣ ಬಿ.ಎಲ್.ಒ. ಕೆಲಸ ಮಾಡಲು ಆಗುವದಿಲ್ಲ ಎಂದು ಅಂಗನವಾಡಿ ಕಾರ್ಯಕತೆಯರು ಬರೆದುಕೊಟ್ಟಿರುತ್ತಾರೆ. ತಾವುನಮ್ಮ ಮಹಿಳೆಯರ ಪರವಾಗಿ ಕುಟುಂಬ ಮತ್ತು ಮಕ್ಕಳು ಅಂಗವಿಕಲ ತಂದೆ+ತಾಯಿ ವಯಸ್ಸಾದವರೆ ಇದ್ದಾರೆ ಅಂಗನವಾಡಿ ಕಾರ್ಯಕತ್ರೆ ಯೋಗಕ್ಷೇಮ ಕೇಳುವವರು ಯಾರೂ ಅಂಗನವಾಡಿ ಕಾರ್ಯಕತ್ರೆಯರ ಮನೆಯಲ್ಲಿ ತೀರಿಕೊಂಡರೂ ಕೇಂದ್ರ ಸರ್ಕಾರದ ಆದೇಶ ಇರುತ್ತದೆ ಇಲ್ಲವಾದರೆ ಕೆಲಸ ಕಳೆದುಕೊಳ್ಳುತ್ತೀರಿ ಅಂತಾ ಮೇಲ್ವಿಚಾರಕರು ಹೇಳುತ್ತಾರೆ.

ಅಂಗನವಾಡಿ ಬೆಳಿಗ್ಗೆ 8 ರಿಂದಾ 10 ರ ವರೆಗೆ ಆನ್‌ಲೈನದಲ್ಲಿ ಕೆಲಸ ಮಾಡಬೇಕಗಿದೆ. ನಮ್ಮ ಅಂಗನವಾಡಿ ಕೆಲಸ ಬಿಟ್ಟು ಬಿ.ಎಲ್.ಒ. ಕೆಲಸ ಯಾವ ಸಮಯದಲ್ಲಿ ಮಾಡಬೇಕೆಂದು ಅಧಿಕಾರಿಗಳು ವಿಚಾರ ಮಾಡಬೇಕು ಇನ್ನು ಮುಂದೆ ರಾತ್ರಿ ಕೆಲಸ ಮಾಡಬೇಕಾಗುತ್ತದೆ ಮಹಿಳೆಯರು ಮನೆಯಲ್ಲಿ ಯಾವಾಗ ಕೆಲಸ ಮಾಡಬೇಕು ಸರಿಯಾಗಿ ಗೌರವಧನ ತೆಗೆಯುವದಿಲ್ಲ ಬಾಡಿಗೆ ತಗೆಯುವದಿಲ್ಲ. ಹೆಚ್ಚುವರಿ ಗೌರವಧನ ತಗೆಯುವದಿಲ್ಲ. ಎಲ್ಲಾ ತಾಲೂಕುಗಳಲ್ಲಿ ಹೆಚ್ಚಿನ ಗೌರವಧನ ತಗೆದಿರುತ್ತಾರೆ. ಗೌರವಧನದಲ್ಲಿ ಬಿ.ಲ್.ಒ. ಕೆಲಸ ನಿರ್ವಹಿಸಲು ಆಗುವದಿಲ್ಲ. ಕಡಿಮೆ ಕಾರ ಕಾರಣ ಸಿ.ಡಿ.ಪಿ.ಒ. ಆಫೀಸಿನಿಂದ ಕೈ ಬಿಡಬೇಕು ಸರಕಾರಿ ಶಾಲಾ ಪುರುಷ ಶಿಕ್ಷಕರಿಗೆ ಹಾಕಬೇಕು ಎಂದರು

ಈ ಸಂದರ್ಭದಲ್ಲಿ ಶೋಭಾ ಕಬಾಡೆ, ಅಶ್ವಿನಿ ತಳವಾರ ಪ್ರಧಾನ ಕಾರ್ಯದರ್ಶಿ, ಫರಜಾನ ಬೇಗಂ, ಬಿ. ಶೇಖ, ಸುಜಾತಾ ಬಿರಾದಾರ, ಸುಮಿತ್ರಾ ನಾಯ್ಕೋಡಿ, ಕಲಾವತಿ ಕೂಡಿಗನೂರ, ಶೋಭಾ ಕುದರಿ, ಶಾರದಾ ತಾಂಬೆ, ಸರೋಜನಿ ದೋಷಿ, ಬುದ್ದವ ಬ್ಯಾಕೋಡ, ಸಾವಿತ್ರಿ ಬಿರಾದಾರ, ಹಸೀನಾಬಾನು ಮುಲ್ಲಾ, ಶೋಭಾ ಹೊಟಕೋರ, ಭಾಗಿರಥಿ ತಳವಾರ, ರಾಜೇಶ್ವರಿ ಪೂಜಾರಿ, ಪಾರ್ವತಿ ದಾರೆಕರ, ಸುನಂದ ಸುg, ರೇಣುಕಾ ಕನಸೆ, ಗಿರಿಜಾ ಸಕ್ಕರಿ, ಶಂಕ್ರವ್ವ ಪುಠಾಣಿ ಬಿ.ಎಚ್. ಮಂಜಗೊAಡ, ನೀಲಮ್ಮ ಬಿಜಾಪುರ, ಎಸ್.ಎಸ್. ಪಾಟೀಲ, ಶೀಲಾ ಸಾವಳಗಿಮಠ, ರಾಜೇಶ್ವರಿ ಕಂಬಾ, ಜ್ಯೋತಿ ವಗ್ಗಿ, ಪದ್ಮಾವತಿ ಬಿರಾದಾರ, ಸುನಂದಾ ವಾಲಿ, ದಾನಮ್ಮ ಮಸೂತಿ ಭಾಗ್ಯಶ್ರೀ ಕಟಕದೊಂಡ, ಆರತಿ ಭಾವಿಕಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

No comments:

Post a Comment