Thursday, June 12, 2025

ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ವಿಜಯಪುರ ಜಿಲ್ಲೆ ಬಹುದೊಡ್ಡ ಕೊಡುಗೆ ನೀಡಿದೆ : ವಿಶ್ರಾಂತ ಪ್ರಾಚಾರ್ಯ ಸಂಗಮೇಶ ಗುಜಗೊಂಡ

ಸಿಂದಗಿ ಪಟ್ಟಣದ ಸಾರಂಗಮಠದಲ್ಲಿ ಚೆನ್ನವೀರಸ್ವಾಮೀಜಿ ಪ್ರತಿಷ್ಠಾನ ಹಾಗೂ ವಿದ್ಯಾಚೇತನ ಪ್ರಕಾಶನ ಸಹಯೋಗದಲ್ಲಿ ಹಮ್ಮಿಕೊಂಡ 344ನೆಯ ಸದ್ವಿಚಾರಗೋಷ್ಠಿ ಹಾಗೂ ಪ.ಗು.ಸಿದ್ದಾಪುರ ಅವರ ಜೀವನ ಮತ್ತು ಸಾಹಿತ್ಯ ಸಂಶೋಧನಾ ಮಹಾಪ್ರಬಂಧ, ಮಕ್ಕಳ ಸಾಹಿತ್ಯ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಳವಾಡದ ಮಕ್ಕಳ ಹಿರಿಯ ಸಾಹಿತಿ ಪ.ಗು.ಸಿದ್ದಾಪುರ ಅವರಿಗೆ ಮಕ್ಕಳ ಸಾಹಿತ್ಯ ಭೂಷಣ ಪ್ರಶಸ್ತಿಯನ್ನು ಸಾರಂಗಮಠದ ಪೀಠಾಧಿಪತಿ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಪ್ರದಾನ ಮಾಡಿದರು.

 ಸಿಂದಗಿ: ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ವಿಜಯಪುರ ಜಿಲ್ಲೆ ಬಹು ದೊಡ್ಡ ಕೊಡುಗೆಯನ್ನೇ ನೀಡಿದೆ. ವಿಜಯಪುರ ಜಿಲ್ಲೆಯನ್ನು ಮಕ್ಕಳ ಸಾಹಿತ್ಯದ ತವರು ಎಂದು ಕರೆಯಲಾಗುತ್ತದೆ ಎಂದು ಮಕ್ಕಳ ಸಾಹಿತಿ, ಮೂಡಲಗಿ ಎಂ.ಇ.ಎಸ್ ಪದವಿ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ ಸಂಗಮೇಶ ಗುಜಗೊಂಡ ಹೇಳಿದರು.

 ಸಿಂದಗಿ ಪಟ್ಟಣದ ಸಾರಂಗಮಠದಲ್ಲಿ ಚೆನ್ನವೀರಸ್ವಾಮೀಜಿ ಪ್ರತಿಷ್ಠಾನ ಹಾಗೂ ವಿದ್ಯಾಚೇತನ ಪ್ರಕಾಶನ ಸಹಯೋಗದಲ್ಲಿ ಹಮ್ಮಿಕೊಂಡ 344ನೆಯ ಸದ್ವಿಚಾರಗೋಷ್ಠಿ ಹಾಗೂ ಪ.ಗು.ಸಿದ್ದಾಪುರ ಅವರ ಜೀವನ ಮತ್ತು ಸಾಹಿತ್ಯ ಸಂಶೋಧನಾ ಮಹಾಪ್ರಬಂಧ, ಮಕ್ಕಳ ಸಾಹಿತ್ಯ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಏಕೆಂದರೆ ಕಂಚ್ಯಾಣಿ ಶರಣಪ್ಪ, ಸಿಸು ಸಂಗಮೇಶ, ಹ.ಮ.ಪೂಜಾರಿ, ಪ.ಗು. ಸಿದ್ದಾಪೂರ, ಶಂಗು ಬಿರಾದಾರ್ ಸಹಿತ ಶಿಶು ಸಾಹಿತಿಗಳು ಬೃಹತ ಮಟ್ಟದಲ್ಲೇ ಬೆಳೆದಿದ್ದಾರೆ. ಜಿಲ್ಲೆಯ ಹೆಸರನ್ನೂ ಬೆಳಗಿಸಿದವರಿದ್ದಾರೆ. ಮಕ್ಕಳ ಸಾಹಿತ್ಯದ ಗಾರುಡಿಗ ಎಂತಲೂ ಪ.ಗು.ಸಿದ್ದಾಪುರ ಅವರನ್ನು ಕರೆಯುತ್ತಾರೆ. ವಿಜಯಪುರದಲ್ಲಿ ಮಕ್ಕಳ ಸಾಹಿತ್ಯ ಬೆಳೆಯಲು ಹಲವು ಕಾರಣಗಳಿವೆ. ಮುಖ್ಯವಾಗಿ ಮಕ್ಕಳ ಸಾಹಿತ್ಯಕ್ಕೆ ಸಂಬAಧಿಸಿ ಇಲ್ಲಿ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತವೆ. ಸಾಹಿತ್ಯದಲ್ಲಿ ಪ್ರಮುಖ ಪ್ರಾಕಾರವಾಗಿ ಹೊರ ಹೊಮ್ಮಿರುವ ಮಕ್ಕಳ ಸಾಹಿತ್ಯದಲ್ಲಿ ವಿಜಯಪುರ ದೊಡ್ಡ ಹೆಸರು ಮಾಡಿದೆ. ವಿಜಯಪುರ ಜಿಲ್ಲೆ ಮಕ್ಕಳ ಸಾಹಿತ್ಯದ ಬಿಡು. ಅನೇಕ ಶಿಕ್ಷಣ ಸಂಸ್ಥೆಗಳು ಮೊದಲು ಹುಟ್ಟಿಕೊಂಡಿದ್ದು ವಿಜಯಪುರ ಜಿಲ್ಲೆ. ಮಕ್ಕಳ ಸಾಹಿತ್ಯವನ್ನು ಮಠ ಮಾನ್ಯಗಳು, ಸಂಸ್ಥೆಗಳು ಉಳಿಸಿ ಬೆಳೆಸಿಕೊಂಡು ಹೋಗುತ್ತಿವೆ ಎಂದರು.

 ಈ ವೇಳೆ ಕಾರ್ಯಕ್ರಮದ ಪಾವನ ಸಾನಿಧ್ಯ ಸಾರಂಗಮಠದ ಪೀಠಾಧಿಪತಿ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಹಾಗೂ ಸಮ್ಮುಖ ವಹಿಸಿದ ಶ್ರೀಮಠದ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಆಶೀರ್ವಚನ ನೀಡಿದರು. ಮಕ್ಕಳ ಸಾಹಿತಿ, ವಿದ್ಯಾಚೇತನ ಪ್ರಕಾಶನ ಸಂಚಾಲಕ ಹ.ಮ.ಪೂಜಾರ ಪ್ರಾಸ್ತಾವಿಕ ಮಾತನಾಡಿದರು. ಸಾಹಿತಿ ಶಿಕ್ಷಕ ಎಸ್.ಎಸ್.ಸಾತಿಹಾಳ ಕವಿ ಪರಿಚಯ ನೆರವೇಸಿರಿದರು.

 ಈ ವೇಳೆ ಶ್ರೀಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಅಂಗಸAಸ್ಥೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದ ಜಿ.ಪಿ.ಪೋರವಾಲ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಎಂ.ಎಚ್.ಲೋಣಿ, ಚೆನ್ನವೀರಸ್ವಾಮೀಜಿ ಪ್ರೌಢಶಾಲೆಯ ವಿಶ್ರಾಂತ ಮುಖ್ಯಗುರು ಜಿ.ಜಿ.ಬಿರಾದಾರ ಅವರಿಗೆ ಶ್ರೀಮಠದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿ ಉಪನ್ಯಾಸಕಿ, ಡಾ.ಸುಧಾರಾಣಿ ಮಣೂರ ರಚಿಸಿದ ಪ.ಗು.ಸಿದ್ದಾಪುರ ಅವರ ಜೀವನ ಮತ್ತು ಸಾಹಿತ್ಯ ಸಂಶೋಧನಾ ಮಹಾಪ್ರಬಂಧವನ್ನು ಸಮ್ಮುಖ ವಹಿಸಿದ ಶ್ರೀಮಠದ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಲೋಕಾರ್ಪಣೆ ಮಾಡಿದರು. 

ಇದೇ ಸಂದರ್ಭದಲ್ಲಿ ಡಾ.ಎಂ.ಎA.ಪಡಶೆಟ್ಟಿ, ಶಿವಪ್ಪ ಗವಸಾನಿ, ಹೆಚ್.ಟಿ.ಕುಲಕರ್ಣಿ, ಎ.ಆರ್.ಹೆಗ್ಗಣದೊಡ್ಡಿ, ಎಂ.ಎಸ್.ಹೈಯಾಳಕರ, ವಿ.ಡಿ.ವಸ್ತ್ರದ, ಶಕುಂತಲಾ ಹಿರೇಮಠ, ಡಾ.ಶರಣಬಸವ ಜೋಗುರ, ಪೂಜಾ ಹಿರೇಮಠ, ರಾಚು ಕೊಪ್ಪ, ಜಿ.ಎಸ್.ಭೂಸಗೊಂಡ, ವಿಶ್ವಾನಾಥ ಜೋಗುರ, ಬಿ.ಎಸ್.ಹಣಮಶೆಟ್ಟಿ, ಬಸಯ್ಯ ಹಿರೇಮಠ, ಗವಿಸಿದ್ದಪ್ಪ ಆನೆಗುಂದಿ, ಡಿ.ಎಂ.ಪಾಟೀಲ, ರಾಜಶೇಖರ ಪೂಜಾರ, ಅಶೋಕ ಅಲ್ಲಾಪುರ, ಬಸಮ್ಮ ಧರಿ, ವಿರೇಶ ಜೋಗುರ, ಶಿವಕುಮಾರ ಜೋಗುರ, ಶ್ರೀದೇವಿ ದುದ್ದಗಿ ಸೇರಿದಂತೆ ಶ್ರೀಮಠ ಭಕ್ತರು, ಸಾಹಿತ್ಯಾಸಕ್ತರು ಹಾಗೂ ವಿದ್ಯಾರ್ಥಿಗಳು ಇದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

No comments:

Post a Comment