ವಿಜಯಪುರ: ಓದು ಒಂದು ತಪಸ್ಸು ಇದ್ದಂತೆ. ವಿದ್ಯಾರ್ಥಿಗಳು ನಿರಂತರವಾಗಿ ಅಭ್ಯಾಸದ ಕಡೆ ಗಮನಕೊಡಬೇಕು. ಇವತ್ತು ಕಷ್ಟಪಟ್ಟು ಓದಿದರೆ ಮುಂದೆ ತಮ್ಮ ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳಬಹುದಾಗಿದೆ. ಕೇವಲ ನೌಕರಿಗಾಗಿ ಓದದೆ. ಒಂದೊಳ್ಳೆ ಸುಂದರವಾದ ಜೀವನ ಕಟ್ಟಿಕೊಳ್ಳಲು ಹಾಗೂ ಮನಸ್ಸಿನ ಖುಷಿಗಾಗಿ ಓದಬೇಕು ಎಂದು ಮುಖ್ಯ ಗುರುಗಳಾದ ವಿಜಯಲಕ್ಷ್ಮೀ ಹುಡೇದ ಹೇಳಿದರು.
ವಿಜಯಪುರ ನಗರದ ಶಿಕಾರಖಾನೆಯಲ್ಲಿನ ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ನಂ.20ರಲ್ಲಿ ಹಮ್ಮಿಕೊಂಡ 7ನೇ ತರಗತಿ ವಿದ್ಯಾರ್ಥಿಗಳಿಗೆ ಅದ್ಧೂರಿ ಬೀಳ್ಕೋಡುವ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬರನ್ನು ವಿಶ್ವಮಾನವರನ್ನಾಗಿ ಮಾಡುವುದೇ ವಿದ್ಯೆಯ ನಿಜವಾದ ಕರ್ತವ್ಯ. ಸದಾ ಒಳ್ಳೆಯ ಮಾರ್ಗದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ನಡೆಯಬೇಕು. ಪಾಲಕ, ಪೋಷಕರ ಮಾತನ್ನು ಕೇಳಬೇಕು. ಪ್ರತಿಯೊಬ್ಬರನ್ನು ಗೌರವಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಆರ್.ಕೆ.ಗುಡ್ಡೇವಾಡಿ, ಆರ್.ಎಸ್.ತಿಮ್ಮಾಪೂರ, ಎಸ್.ಆರ್.ಪತ್ತಾರ, ಪಿ.ಎಂ.ಬೇವೂರ, ಎನ್.ಎಸ್.ಹಳ್ಳಿ, ಆರ್.ಬಿ. ಚವ್ಹಾಣ, ಎಂ.ಎಸ್. ಆರೆಶಂಕರ, ಅಚ್ಚುಮೆಚ್ಚಿನ ವಿದ್ಯಾರ್ಥಿ ಸುಶಾಂತ ಶಿವಶರಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

No comments:
Post a Comment