Wednesday, January 1, 2025

ನಿರಂತರ ಪ್ರಯತ್ನದಿಂದ ಗುರಿ ಮುಟ್ಟಲು ಸಾಧ್ಯ: ಸೋಮನಾಥ ಶಿವಾಚಾರ್ಯ ಸ್ವಾಮಿಗಳು

ಈ ದಿವಸ ಕನ್ನಡ ದಿನ ಪತ್ರಿಕ ವಾರ್ತೆ

  ಕನ್ನೂರ: ವಿದ್ಯಾರ್ಥಿಗಳು ನಿರಂತರ ಓದುವ ಪ್ರಯತ್ನ ಮಾಡಿದರೆ ತಾವು ಜೀವನದಲ್ಲಿ ಗುರಿ ಮುಟ್ಟಲು ಸಾಧ್ಯ, ಪರೀಕ್ಷೆ ಬಂದಾಗ ಮಾತ್ರ ಓದುವುದಕ್ಕಿಂತ  ನಿರಂತರ ಅಭ್ಯಾಸವಿದ್ದರೆ  ಉತ್ತಮ ಅಂಕಗಳನ್ನು ಪಡೆದು  ತಂದೆ ತಾಯಿಗಳಿಗೆ ಹಾಗೂ ಶಿಕ್ಷಕರಿಗೆ ಉತ್ತಮ ಹೆಸರನ್ನು ತರಲು ಸಾದ್ಯ' ಎಂದು ಕನ್ನೂರು ಗುರುಮಠದ ಪರಮಪೂಜ್ಯ ಶ್ರೀ ಷ.ಬ್ರ.ಸೋಮನಾಥ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.

       ಅವರು ಕನ್ನೂರು ಸಮುದಾಯ ಭವನದಲ್ಲಿ ಶ್ರೀ  ಸಮರ್ಥ ಸದ್ಗುರು ಗಣಪತರಾವ ಮಹಾರಾಜರು ಶಾಂತಿಕುಟೀರ ಇವರಿಂದ ಸ್ಥಾಪಿಸಲ್ಪಟ್ಟ ಭಾರತೀಯ ಸುರಾಜ್ಯ ಸಂಸ್ಥೆಯ ಅಡಿಯಲ್ಲಿ ಎಸ್‌.ಎಸ್‌.ಎಲ್‌.ಸಿ. ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಒಂದು ದಿನದ ಕಾರ್ಯಗಾರದ ದಿವ್ಯಸಾನಿಧ್ಯ ವಹಿಸಿ, ಉದ್ಘಾಟಿಸಿ, ಆಶೀರ್ವಚನ ನೀಡುತ್ತಾ  ಮಾತಾಡಿದರು ಶ್ರೀಗಳು ಭಾರತೀಯ ಸುರಾಜ್ಯ ಸಂಸ್ಥೆಯು  ಸಾಮಾಜಿಕ ಕಳಕಳಿಯನ್ನು ಹೊಂದಿ  ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದು  ಶ್ಲಾಘನೀಯ, ದೇಶ ಸುಭದ್ರವಾಗಬೇಕಾದರೆ ನಾವೆಲ್ಲರೂ ಶಿಕ್ಷಣವಂತರಾಗಬೇಕು,  ಈ ನಿಟ್ಟಿನಲ್ಲಿ  ಗ್ರಾಮೀಣ ಭಾಗದ  ವಿದ್ಯಾರ್ಥಿಗಳಿಗೆ  ಅವರ ಕಲಿಕೆಗೆ  ಅನುಕೂಲವಾಗುವಂತೆ  ಹಾಗೂ ಅವರ ಭವಿಷ್ಯದಲ್ಲಿ  ಉನ್ನತ ಸ್ಥಾನ ಪಡೆಯಲಿ ಎನ್ನುವ  ಉದ್ದೇಶವನ್ನು ಇಟ್ಟುಕೊಂಡು ಈ ಪುಣ್ಯದ ಕೆಲಸವನ್ನು  ಮಾಡುತ್ತಿರುವುದು ಉತ್ತಮ ಬೆಳವಣಿಗೆ. ವಿದ್ಯಾರ್ಥಿಗಳು ತಾವೆಲ್ಲಾ  ಇದರ ಸದುಪಯೋಗ ಪಡೆದುಕೊಂಡು  ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಂತಾಗಲಿ  ಎಂದು ಶುಭ ಹಾರೈಸಿದರು. 



       ಕಾರ್ಯಕ್ರಮದಲ್ಲಿ ಶ್ರೀಶೈಲೇಶ್ವರ ವಿದ್ಯಾಕೇಂದ್ರ , ಸಂಡೂರು ಆಡಳಿತಾಧಿಕಾರಿಯಾದ ಕುಮಾರ್ ಎಸ್ . ನಾನಾವಟೆ ಅವರು ಪ್ರಸ್ತಾವಿಕ ನುಡಿಯಲ್ಲಿ ಭಾರತೀಯ ಸುರಾಜ್ಯ ಸಂಸ್ಥೆ ಮೂಲ ಉದ್ದೇಶ ಈ ಭಾಗದ ಗ್ರಾಮೀಣ ಮಕ್ಕಳು ಕೂಡ ಉತ್ತಮ ಶಿಕ್ಷಣವನ್ನು ಪಡೆದು,ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂಬ ದೃಷ್ಟಿಯಿಂದ ಶ್ರೀ ಸ.ಸ. ಗಣಪತರಾವ ಮಹಾರಾಜರು ಈ ಭಾಗದ ಕೆಲವು ಸರ್ಕಾರಿ ಶಾಲೆಗಳನ್ನೂ ದತ್ತು ಪಡೆದುಕೊಂಡಿದ್ದರು. ಅವರ ಹಾದಿಯಲ್ಲಿ ೧೦ನೇ ತರಗತಿಯ ವಿದ್ಯಾರ್ಥಿಗಳಿಗೆ ಕಾರ್ಯಗಾರ, ಆನ್ಲೈನ್ ತರಗತಿಯ ಮೂಲಕ ನಿರಂತರ ಸಂಪರ್ಕದಲ್ಲಿರುವುದು, ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಬೋಧನೆ, ಉತ್ತಮ ಅಂಕ ಪಡೆಯಲು ಪಾಸಿಂಗ್ ಪ್ಯಾಕೇಜ್ ಮತ್ತು ಸ್ಕೋರಿಂಗ್ ಪ್ಯಾಕೇಜ್‌ಗಳನ್ನು ಆರು ವಿಷಯಕ್ಕೆ ಸಂಬಂಧಪಟ್ಟಂತೆ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಸಹ ಉಚಿತವಾಗಿ ನೀಡಲಾಗುವುದು ಆದ್ದರಿಂದ ವಿದ್ಯಾರ್ಥಿಗಳಾದ ನೀವೆಲ್ಲರೂ ಈ ಸೌಲಭ್ಯಗಳನ್ನು ಪಡೆದುಕೊಂಡು ಉತ್ತಮ ಫಲಿತಾಂಶವನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ತಿಳಿಸಿದರು.

      ಈ ಸಂದರ್ಭದಲ್ಲಿ ಪ್ರಕಾಶ್ ಪತ್ತಾರ ಅವರು ಮಾತನಾಡಿ  ನಿಮ್ಮ ಜೀವನದಲ್ಲಿ ತಂದೆ,ತಾಯಿ ಮತ್ತು ಗುರುಗಳನ್ನು ಗೌರವಿಸಿ,ಖಂಡಿತ ಜಯಶಾಲಿಗಳಾಗುತ್ತೀರಿ   ಎಂದು ತಿಳಿಸಿದರು. ಹಾಗೂ ಭಾರತೀಯ ಸುರಾಜ್ಯ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಶ್ರೀನಿವಾಸ್ ಕುಲಕರ್ಣಿ ಅವರು  ಮಕ್ಕಳನ್ನು ಕುರಿತು ಮಾತನಾಡಿದರು.

    ಸಂಪನ್ಮೂಲ ವ್ಯಕ್ತಿಗಳಾಗಿದ್ದ  ಪ್ರತಿಭಾ ಪಾಟೀಲ್ ಅವರು  ಪರೀಕ್ಷೆಯಲ್ಲಿ  ನಕಲು ಮಾಡಬಾರದು ನಿರಂತರ  ಅಭ್ಯಾಸ ಇದ್ದರೆ  ನಕಲು ಮಾಡುವ ಪ್ರಶ್ನೆಯೇ ಬರುವುದಿಲ್ಲ  ತಾವೆಲ್ಲರೂ  ಪ್ರಾಮಾಣಿಕವಾಗಿ ಪರೀಕ್ಷೆಯನ್ನು ಬರೆಯಿರಿ  ಎಂದು ತಿಳಿಸಿದರು.

     ಶಾಂತಿಕುಟೀರದಲ್ಲಿ ನಡೆಯುವ ಉಚಿತ ಬೇಸಿಗೆ ಶಿಬಿರದಲ್ಲಿ  ಭಾಗವಹಿಸುತ್ತಿದ್ದ  ವಿದ್ಯಾರ್ಥಿನಿಯು  ಎಂ.ಬಿ.ಬಿ.ಎಸ್. ಮುಗಿಸಿಕೊಂಡು ಈಗ ಮುಂಬೈನ ಲೋಕಮಾನ್ಯ ತಿಲಕ್ ಮುನ್ಸಿಪಲ್ ಕಾಲೇಜಿನಲ್ಲಿ ಪಿಡಿಯಾಟ್ರಿಷನ್ ಅಭ್ಯಾಸ ಮಾಡುತ್ತಿದ್ದ  ಅಮೃತಾ ಬಿ. ಜಿ .ಅವರು- 'ನಾನು ವಿದ್ಯಾರ್ಥಿಯಾಗಿದ್ದಾಗ  ಪ್ರಥಮ ಸ್ಥಾನ ಪಡೆಯಬೇಕು ಎನ್ನುವ ಆಸೆ ನನ್ನದಾಗಿತ್ತು, ಅದರಂತೆ ಪೂರ್ವ ತಯಾರಿ ಮಾಡಿಕೊಂಡು  ಅಭ್ಯಾಸ ಮಾಡುತ್ತಿದೆ, ತಾವೆಲ್ಲರೂ ನಿರಂತರವಾಗಿ ಅಭ್ಯಾಸ ಮಾಡಿ  ಪೂರ್ವ ತಯಾರಿಯನ್ನು ಮಾಡಿಕೊಂಡು  ಪರೀಕ್ಷೆಯನ್ನು ಬರೆಯಿರಿ. ಪ್ರತಿಯೊಬ್ಬರು ಒಂದು ಗುರಿಯನ್ನು ಇಟ್ಟುಕೊಳ್ಳಿ ಅದಕ್ಕೆ ತಮ್ಮ ತಯಾರಿ ಇರಲಿ  ಎಂದು ತಿಳಿಸಿದರು.

      ಗಣಿತ ಮತ್ತು ಹಿಂದಿ ವಿಷಯಕ್ಕೆ ಸಂಬಂಧಿಸಿದಂತೆ  ಸಂಪನ್ಮೂಲ ವ್ಯಕ್ತಿಗಳಿಂದ ವಿದ್ಯಾರ್ಥಿಗಳಿಗೆ ವಿಶೇಷ ಮಾರ್ಗದರ್ಶನವನ್ನು  ನೀಡಲಾಯಿತು. ಕಾರ್ಯಗಾರದಲ್ಲಿ ಭಾಗವಹಿಸಿದ್ದ  ಕನ್ನೂರಿನ ವಿರಕ್ತೆಶ್ವರ ಪ್ರೌಢ ಶಾಲೆಯ ಬಾಲಕರು ಹಾಗೂ ಸರಕಾರಿ ಹೆಣ್ಣು ಮಕ್ಕಳ  ಪ್ರೌಢ ಶಾಲೆಯ ವಿದ್ಯಾರ್ಥಿನಿಯರು, ತಿಡಗುಂದಿ  ಬಂಜಾರಾ ಪ್ರೌಢಶಾಲೆಯ ವಿದ್ಯಾರ್ಥಿಗಳು, ಬೊಮ್ಮನಹಳ್ಳಿ ಎಸ್.ಬಿ. ವಿ ರಾಜಗುರು ಪ್ರೌಢಶಾಲೆಯ ಸುಮಾರು ೨೫೦ ವಿದ್ಯಾರ್ಥಿಗಳು  ಭಾಗವಹಿಸಿದ್ದರು .ಎಲ್ಲಾ ವಿದ್ಯಾರ್ಥಿಗಳಿಗೆ  ಪಾಸಿಂಗ್ ಪ್ಯಾಕೇಜ್ ಉಚಿತವಾಗಿ ವಿತರಿಸಲಾಯಿತು.

      ಈ ಕಾರ್ಯಕ್ರಮದಲ್ಲಿ ಮುಖ್ಯ ಗುರುಗಳು, ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು  ಮತ್ತು ಪೋಷಕರು ಉಪಸ್ಥಿತರಿದ್ದರು. ಬಂದವರಿಗೆಲ್ಲ ಸಂಸ್ಥೆ ವತಿಯಿಂದ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಎಲ್ಲ  ವಿದ್ಯಾರ್ಥಿಗಳಿಗೂ ಪಾಸಿಂಗ್ ಪ್ಯಾಕೇಜ್ ಅನ್ನು ಸುರಕ್ಷಿತವಾಗಿ ಇಟ್ಟುಕೊಂಡು ಅಭ್ಯಾಸ ಮಾಡಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸುವಂತೆ, ಹಾಗೂ ಯಾವುದಾದರೂ ವಿಷಯದಲ್ಲಿ ಡೌಟ್ ಬಂದರೆ ಕಾಲ್ ಮಾಡಿ ಪರಿಹರಿಸಿಕೊಳ್ಳಬಹುದು ಎಂದು ಸೂಚನೆ ಸಹ ನೀಡಿ, ಮುಂದಿನ ದಿನಗಳಲ್ಲಿ ಪ್ರೊಜೆಕ್ಟರ್ ಮೂಲಕ ಪಾಠ ಬೋಧನೆ ಮಾಡುವುದು, ಆನ್ ಲೈನ್ ಕ್ಲಾಸ್ ಮೂಲಕ ನಿರಂತರ ವಿದ್ಯಾರ್ಥಿಗಳ ಸಂಪರ್ಕದಲ್ಲಿರುವದು,ಶಿಕ್ಷಕರ ಕೊರತೆ ಇರುವ ಶಾಲೆಗಳಲ್ಲಿ ಶಿಕ್ಷಕರನ್ನು ಪೂರೈಸುವುದು ಮತ್ತು ಈ ರೀತಿಯ ಕಾರ್ಯಾಗಾರಗಳು ಪ್ರತಿ ತಿಂಗಳಿಗೆ ಒಂದು ಆಯೋಜಿಸಲು ಭಾರತೀಯ ಸುರಾಜ್ಯ ಸಂಸ್ಥೆ ನಿರ್ಧರಿಸಿದೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

No comments:

Post a Comment