ವಿಜಯಪುರ: ಕವಿಗಳು ನಾಡು, ನುಡಿ ಮೇಲೆ ಬೆಳಕು ಚೆಲ್ಲುವ ಸಾಹಿತ್ಯದ ಮೂಲಕ ಸಾಂಸ್ಕೃತಿಕ ಪರಂಪರೆಯನ್ನು ಕಟ್ಟಿ ಬೆಳೆಸಿದ್ದಾರೆ ಎಂದು ಕೇರಳದ ಕಾಸರಗೋಡಿನ ಹಿರಿಯ ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ್ ಹೇಳಿದರು.
ನಗರದ ಶಿವಶರಣ ಶೈಕ್ಷಣಿಕ ಗ್ರಾಮೀಣಾಭಿವೃದ್ಧಿ ವಿವಿದ್ಧೋದ್ದೇಶಗಳ ಸಂಸ್ಥೆಯ ನೂತನ ಕಚೇರಿಯಲ್ಲಿ ಶಿವಶರಣ ಶೈಕ್ಷಣಿಕ ಗ್ರಾಮೀಣಾಭಿವೃದ್ಧಿ ವಿವಿದ್ಧೋದ್ದೇಶಗಳ ಸಂಸ್ಥೆ ವತಿಯಿಂದ ಹಮ್ಮಿಕೊಂಡ ಯುವ ಕವಿ ಕಲ್ಲಪ್ಪ ಶಿವಶರಣ ಅವರ ಚೊಚ್ಚಲ ಕವನ ಸಂಕಲನ ಕಲ್ಲು ಮನಸು ಕೃತಿಯ ವಿಮರ್ಶೆ ಹಾಗೂ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡದ ಕವಿಗಳು ಸೂಕ್ಷö್ಮ ಸಂವೇದನಾ ಶೀಲತ್ವದಿಂದ ಕನ್ನಡ ನಾಡಿನ ಪರಿಸರದ ಪ್ರಭಾವಕ್ಕೆ ಒಳಪಟ್ಟು, ಅಮೂಲ್ಯವಾದ ಕೃತಿಗಳನ್ನು ರಚಿಸಿದ್ದಾರೆ. ಈ ಪರಂಪರೆಯನ್ನು ಯುವಕವಿಗಳು ಮುಂದುವರೆಸಿಕೊAಡು ಹೋಗಬೇಕು ಎಂದರು.
ಯುವ ಕವಿ ಕಲ್ಲಪ್ಪ ಶಿವಶರಣ ಅವರು ನಮ್ಮ ಹಿರಿಯ ತಲೆಮಾರಿನ ಕವಿಗಳು ಹಾಕಿಕೊಟ್ಟ ಮಾರ್ಗದಲ್ಲಿ ನವ ಕವಿತೆಗಳನ್ನು ಬರೆಯುವ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸತನ ಸೃಷ್ಟಿಸುವ ಭರವಸೆಯ ಕವಿಯಾಗಿ ಹೊರಹೊಮುತ್ತಿರುವುದು ಸಂತೋಷದ ಸಂಗತಿ ಎಂದರು.
ಸಾಹಿತಿ ಸೋಮನಿಂಗ ಹಿಪ್ಪರಗಿ ಕೃತಿ ವಿಮರ್ಶಿಷಿ ಮಾತನಾಡಿ, ವಿಜಯಪುರ ಜಿಲ್ಲೆಯು ರನ್ನ, ಅಭಿನವ, ಪಂಪ ನಾಗಚಂದ್ರ ಬಸವಾದಿ ಶರಣರು ಸೇರಿದಂತೆ ಅನೇಕಾನೇಕ ಸಾಂಸ್ಕೃತಿಕ ದಿಗ್ಗಜ್ಜರನ್ನು ಕನ್ನಡ ನಾಡಿಗೆಕೊಟ್ಟಿದೆ. ಜಿಲ್ಲೆಯಲ್ಲಿ ಹೊಸ ತಲೆಮಾರಿನ ಅನೇಕರು ಕೂಡ ಸಾಹಿತ್ಯಿಕ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ಇಂತವರ ಸಾಲಿನಲ್ಲಿ ಕಲ್ಲು ಮನಸ್ಸು ಕೃತಿ ವಿಶಿಷ್ಟವಾಗಿ ಹೊರ ಬಂದಿದೆ ಎಂದರು.
ಸಾಹಿತಿ, ಪತ್ರಕರ್ತ ಪರಶುರಾಮ ಶಿವಶರಣ ಮಾತನಾಡಿ, ಕವಿತೆ ಅಂತರಾಳದ ಅಭಿವ್ಯಕ್ತಿಯನ್ನು ವ್ಯಕ್ತಪಡಿಸುವ ಸಾಧನ, ಸಾಹಿತ್ಯದಿಂದ ಮನಸ್ಸು ಅರಳುವುದರ ಜೊತೆಗೆ ಸಮಾಜ ತಿದ್ದಲು ಸಾಧ್ಯ. ಪ್ರತಿಯೊಬ್ಬರು ಸಾಹಿತ್ಯದ ಅಭಿರುಚಿಯನ್ನು ಹೊಂದಬೇಕು. ಸಾಹಿತ್ಯ ಅಧ್ಯಯನಶೀಲರಾಗಿ ಉತ್ತಮ ವ್ಯಕ್ತಿತ್ವ ಪಡೆಯಬೇಕು ಎಂದರು.
ಸಾಹಿತಿ ಲಾಯಪ್ಪ ಇಂಗಳೆ, ಭೀಮರಾಯ ಕುಂಟೋಜಿ, ಪ್ರತಾಪ ಚಿಕ್ಕಲಕಿ ಕವನ ವಾಚಿಸಿದರು.
ಸಿಂದಗಿ ತಾಲೂಕು ಕಸಾಪ ಅಧ್ಯಕ್ಷ ಶಿವಾನಂದ ಬಡಾನೂರು, ಚಲನಚಿತ್ರ ನಿರ್ದೇಶಕ ಸುನೀಲಕುಮಾರ ಸುಧಾಕರ, ಅಖಿಲ ಭಾರತೀಯ ವಾಲ್ಮೀಕಿ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಟಗಿ, ಹೋರಾಟಗಾರ ಬಸವರಾಜ ಕುಬಕಡ್ಡಿ, ಬಸವಕುಮಾರ ಕಾಂಬಳೆ, ಕಲ್ಲಪ್ಪ ಬಬಲಾದ, ಚೀಮಾಜಿ ರಾಠೋಡ, ಅರ್ಜುನ ಬಂಡಿ, ಸಂಜೀವ ರಾಠೋಡ, ಕಾಶೀನಾಥ ಪವಾರ, ರವೀಂದ್ರ ಮಡಿವಾಳರ, ಪತ್ರಕರ್ತ ಉಮೇಶ ಶಿವಶರಣ, ಮಹಾಂತೇಶ ನೂಲಾನವರ ಇದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
No comments:
Post a Comment