Monday, November 25, 2024

ನೇರ ನಿಷ್ಠುರ ವರದಿ ಮೂಲಕ ಸಮಸ್ಯೆಗಳ ಮೇಲೆ ಬೆಳಕು ಚಲ್ಲಿದವರು ಆಸಂಗಿ : ಅಂಬಾದಾಸ ಜೋಶಿ


ವಿಜಯಪುರ : ವಿಜಯಪುರ ಜಿಲ್ಲೆಯ ಬಡವರು ದೀನ ದುರ್ಬಲರು, ರೈತರ ಸಮಸ್ಯೆಗಳು ಸೇರಿದಂತೆ ಜ್ವಲಂತ ಸಮಸ್ಯೆಗಳ ಕುರಿತು ನೇರ ನಿಷ್ಠುರ ವರದಿ ಮಾಡುವ ಮೂಲಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ ಸರ್ಕಾರದಿಂದ ಸಾರ್ವಜನಿಕರಿಗೆ ಆಗಬೇಕಾದ ಕೆಲಸ ಕಾರ್ಯಗಳು ತಲುಪುವಂತೆ ಮಾಡಲು ಶ್ರಮಿಸಿದ ಜಿಲ್ಲೆಯ ಹಿರಿಯ ಪತ್ರಕರ್ತ ರುದ್ರಪ್ಪ ಆಸಂಗಿಯವರಿಗೆ ಈ ಸಲ ಕರ್ನಾಟಕ ಸರ್ಕಾರ ಸುವರ್ಣ ಕರ್ನಾಟಕ 50 ಸಂಭ್ರಮ ಪ್ರಶಸ್ತಿ ನೀಡಿ ಗೌರವಿಸಿರುವುದು ಹೆಮ್ಮೆಯ ಸಂಗತಿ ಎಂದು ಪರಿಸರ ವೇದಿಕೆ ಅಧ್ಯಕ್ಷ ಅಂಬಾದಾಸ ಜೋಶಿ ಹೇಳಿದರು. 


ಅವರು ನಗರದ ಅಷ್ಟಪೈಲ ಬಂಗ್ಲೆ ಹತ್ತಿರ ಪರಿಸರ ವೇದಿಕೆ ಹಾಗೂ ಶಿವಶರಣ ಶೈಕ್ಷಣಿಕ ಗ್ರಾಮೀಣಾಭಿವೃದ್ಧಿ ಹಾಗೂ ವಿವಿದೋದ್ಧೇಶಗಳ ಸಂಸ್ಥೆಯಿAದ ಪ್ರಶಸ್ತಿ ಪುರಸ್ಕೃತ ರುದ್ರಪ್ಪ ಆಸಂಗಿಯವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಕರ್ನಾಟಕ ಸರ್ಕಾರವು ಸಮಾಜಮುಖಿ ಹಿರಿಯ ಪತ್ರಕರ್ತ ರುದ್ರಪ್ಪ ಆಸಂಗಿಯವರಿಗೆ ಪ್ರಶಸ್ತಿ ನೀಡುವ ಮೂಲಕ ತನ್ನನ್ನೇ ತಾನು ಗೌರವಿಸಿಕೊಂಡಿದೆ ಎಂದು ಅವರು ಹೇಳಿದರು. 

ಡಾ. ಸುಭಾಸ ಕನ್ನೂರ ಅವರು ಮಾತನಾಡಿ, ರುದ್ರಪ್ಪ ಆಸಂಗಿಯವರು ಜಿಲ್ಲೆಯಲ್ಲಿ ಪಾದರಸದಂತೆ ಸಂಚರಿಸಿ ಜನಪರ ವರದಿಗಳನ್ನು ಮಾಡುವ ಮೂಲಕ ಹೆಸರಾದವರು. ಇಂತಹವರಿಗೆ ಈ ಸಲದ ರಾಜ್ಯ ಪ್ರಶಸ್ತಿ ಸಂದಿರುವುದು, ಸಂತಸದ ವಿಷಯ ಎಂದರು. 

ಈ ಸಂದರ್ಭದಲ್ಲಿ ಪತ್ರಕರ್ತ ಪರಶುರಾಮ ಶಿವಶರಣ, ಪರಿಸರ ವೇದಿಕೆಯ ಸದಸ್ಯರಾದ ಆನಂದ ಕುಲಕರ್ಣಿ, ಉದಯ ಬೆಳ್ಳೆಣ್ಣವರ, ಶಿವಶರಣ ಶೈಕ್ಷಣಿಕ ಗ್ರಾಮೀಣಾಭಿವೃದ್ಧಿ ಹಾಗೂ ವಿವಿದೋದ್ಧೇಶಗಳ ಸಂಸ್ಥೆಯ ಅಧ್ಯಕ್ಷ ಕಲ್ಲಪ್ಪ ಶಿವಶರಣ, ಪತ್ರಕರ್ತ ಶಂಕರ ಜಲ್ಲಿ, ಸಂಶೋಧಕ ಲಾಯಪ್ಪ ಇಂಗಳೆ ಸೇರಿದಂತೆ ಇತರರು ಇದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

No comments:

Post a Comment